Sunday, February 26, 2012

ವಾಹ್ - ವೈರಾಣು


ವಾಹ್-ವೈರಾಣು
ಏನು ಹೇಳಲಿ ಇದೊಂದು ಜೀವಿ
ಅತಿಸೂಕ್ಷ್ಮ ಇದುವೇ ವೈರಾಣು
ಬೇಕು ಇದರ ಬದುಕಿಗೆ ಜೀವಕೋಶ
ಇಲ್ಲವೇ ಬೇಕು ಕಡೇ ಪಕ್ಷ ಜೀವಾಣು

ಡಿ ಅಥವಾ ಆರ್ ಎನ್ ಎ ಇದರ ಜೀವಾಳ
ಜೀವಕೋಶದ ಒಳಗೆ ಸಿಗುತ್ತದೆ ಬಂಡವಾಳ
ತನ್ನ ಡಿ ಅಥವಾ ಆರ್ ಎನ್ ಎ ಹೊರ ಕವಚ
ಅದಕೇ ಒಳಹೋಗಲು ಹಾಕುವುದು ಹೊಂಚ


ಬಂಡವಾಳ ಅತಿಥೇಯ ಜೀವಿಯಿಂದ ಕದ್ದು
ಸಂಕೇತ ತನ್ನದು ಕೆಲಸ ಜೀವಕೋಶದ್ದು
ಹೊದಿಸುತ್ತೆ ತಯಾರಾದ ಪ್ರೋಟೀನ್ ಪದರ
ಮರಿ ವೈರಾಣು ಹೊರಬರುತ್ತೆ ಕೊಟ್ಟು ಗುದ್ದು
ಇಲ್ಲವಾದರೆ ಉಡೆದು ಜೀವಕೋಶದ ಉದರ

ಮರಿ ವೈರಾಣು ಮುಂದುವರೆಸುತ್ತೆ ಸತತ ಕ್ರಿಯೆ
ಪಕ್ಕದ ಜೀವ ಕೋಶಕ್ಕೆ ಹೊಕ್ಕು ಮತ್ತದೇ ಮಾಯೆ
ಸಾವಿರಾರು ಮರಿ ವೈರಾಣುಗಳು ಹುಟ್ಟುವುದು ದಿಟ
ಜೀವಕೋಶ ತೋರದಿದ್ದರೆ ಅದನು ತಡೆಯುವ ಹಟ

ಜೀವಕೋಶ ಕ್ರಿಯೆಗೆ ಅಡಚಣೆ, ಆಗುವುದು ಭಂಗ
ರೋಗ ಹಿಡಿದು ಜಡಗಟ್ಟು ಕೋಶ, ಅಂಗ ಪ್ರತಿ ಅಂಗ
ರೋಗನಿರೋಧಕ ಉತ್ತೇಜಿತಗೊಳ್ಳಲೇ ಬೇಕು ಆಗ
ಇಲ್ಲವಾದರೆ ವೈರಾಣು ತಿಂದುಬಿಡುತ್ತೆ ಜೀವಿಯ ಬೇಗ 


Tuesday, February 14, 2012

ಪ್ರೇಮಿಗಳ ದಿನ- ಮತ್ಸ್ಯ ಪ್ರೇಮವೇ..???

ಚಿತ್ರ ಕೃಪೆ: ಅಂತರ್ಜಾಲ

ಮಿತ್ರರೇ... ಪ್ರೇಮಿಗಳ ದಿನ ಒಂದು ಸೂಚಕವಾಗಿ ರೋಚಕವಾಗುತ್ತಿರುವುದು ಕೆಲವರಿಗೆ ಅತಿರೇಕವೆನಿಸಬಹುದು ಆದರೆ ಪಡ್ಡೆ ಯುವಕ ಮತ್ತು ಗರಿಗೆದರಿದ ಯುವತಿಯರಿಗೆ ಅಲ್ಲ.... ಇದೊಂದು ಮೋಜಿನ ದಿನ.. ಬೆರೆಯುವ ದಿನ ಮತ್ತು ಉಳ್ಳ-ಸಿರಿಮದ-ಅಮಲಿನವರಿಗೆ ಅತಿರೇಕದ ದಿನವೆನ್ನುವುದೂ ಅಸತ್ಯವೇನಲ್ಲ. ಅಲ್ಲವೇ? 
ಆದರೆ ನಾನು ಹೇಳ ಹೊರಟಿರುವುದು ರೋಚಕ ಮತ್ಸ್ಯ ಜಗತ್ತಿನ ಒಂದು ಸ್ವಾಭಾವಿಕ ಕ್ರಿಯೆಯ (ಹಲವು ಅಕ್ವೇರಿಯಂ ಆಸಕ್ತರು ಹವ್ಯಾಸಿಗಳು ನೋಡಿರುವ) ಬಗ್ಗೆ!!!

ಅದೇ ಕಿಸ್ಸಿಂಗ್ (ಮುತ್ತಿಡುವ, ಚುಂಬಿಸುವ) ಗೌರಾಮಿಗಳ  ಬಗ್ಗೆ.... ಏನು ?? ನಿಜ ಕಣ್ರೀ....

ಇದು ಮೀನಿನ ಒಂದು ಸ್ವಾಭಾವಿಕ ಸ್ವಭಾವದ ವಿವರ ಅಷ್ಟೇ.... ಛೇ!!! ಆಂಟಿ ಕ್ಲೈಮ್ಯಾಕ್ಸ್ ಅಂದ್ರಾ...?? ಅಲ್ಲ ಬಿಡಿ ಕಲಿಯುವವರಿಗೆ... ಇದು ...ಇಂಟರೆಸ್ಟಿಂಗ್... ಏನಂತೀರಾ..???

ಹಾಂ... ಈಗ ವಿಷಯಕ್ಕೆ ಬರೋಣ.
ಈ ಚಿತ್ರ ಮತ್ತು..ಈ ವೀಡಿಯೋ ನೋಡಿ...ಆನಂದಿಸಿ... ಆ ಮೇಲೆ ..ಹಾಂ..ಹಾಂ..
ನಿಜಾಂಶ ತಿಳಿಸ್ತೀನಿ...ಓಕೆ... ಸಿಟ್ ಬ್ಯಾಕ್ ರಿಲ್ಯಾಕ್ಸ್ ಅಂಡ್ ವಾಚ್...



ನೋಡಿದ್ರಾ..? ಹ್ಯಾಗನ್ನಿಸ್ತು... ಸೋ ಕ್ಯೂಟ್ (ಏನು ಸೊಗಸು )ಅನ್ನಿಸ್ತಾ..??  ತಡೀರಿ ತಡೀರಿ..... ಮುಂದಕ್ಕೆ ಓದಿ....

ಇದು ಮೊದಲೇ ಹೇಳಿದ ಹಾಗೆ ಗೌರಾಮಿ ಜಾತಿಯ ಮೀನು. ಇದನ್ನು ನೈಜಎಲುಬಿನ ಮೀನಿನ ಗುಂಪಿಗೆ ಸೇರಿಸಲಾಗಿದೆ... ಏನು..?? ಹೂಂ..ರೀ... ಮಿಥ್ಯ ಎಲುಬು ಇರೋ ಮೀನೂ ಇದೆ... ಅಂದರೆ ಮೆತ್ತನೆಯ ಅಥವಾ ಗಡುಸಲ್ಲದ ಎಲುಬಿನ ಮೀನು ಸಹಾ ಇವೆ... ಯಾವುದು ಅಂದ್ರಾ...??? ಶಾರ್ಕ್ ಕಣ್ರೀ... ಹೂಂ..ಶಾಕ್ ಜಾತಿ ಮೀನಲ್ಲಿ ಕ್ಯಾಲ್ಶೀಕೃತ (ಗಡಸಾಗೋಕೆ) ಎಲುಬಿರುವುದಿಲ್ಲ. ಇವನ್ನು ಮೃದ್ವಸ್ಥಿ ಮೀನು ಅಂತಲೂ ಹೇಳ್ತಾರೆ.... ಓಕೆ..ಓಕೆ... ಕೋಪ ಮಾಡ್ಕೋಬೇಡಿ ಬಂದೆ ವಿಷಯಕ್ಕೆ.
ಗೌರಾಮಿ ಜೀವ ವರ್ಗೀಕರಣ ಹೀಗಿದೆ...

Kingdom:Animalia       
Phylum:Chordata
Class:Actinopterygii
Order:Perciformes
Suborder:Anabantoidei
Family:Helostomatidae
Genus:Helostoma
Cuvier, 1829
Species:H. temminckii



ಈ ಕಿಸ್ಸಿಂಗ್ ಗೌರಾಮಿ ಮೀನಿನ ತವರು ಪೂರ್ವೋತ್ತರ ದೇಶಗಳಾದ ಥಾಯ್ಲ್ಯಾಂಡ್ ಮತ್ತು ಇಂಡೋನೇಶಿಯಾ. ಗೌರಾಮಿಯಲ್ಲಿ ಹಲವಾರು ಉಪ ಜಾತಿಗಳಿವೆ. ಗೌರಾಮಿ ಮೀನುಗಳು ಹೆಚ್ಚಾಗಿ ಅಲಂಕಾರದ ಮೀನುಗಳು. ಈ ಮೀನುಗಳು ವೇಗವಾಗಿ ಬೆಳೆಯಬಲ್ಲವು. ಸುಮಾರು ೩೦ ಸೆಂ.ಮೀ. ವರೆಗೂ ಬೆಳೆಯಬಹುದು. ಈ ಮೀನು ಸಿಹಿನೀರಿನಲ್ಲಿ ವಾಸಿಸುತ್ತವೆ, ಸಾಮಾನ್ಯವಾಗಿ ಇವಕ್ಕೆ ೨೨ ರಿಂದ ೨೮ ಡಿಗ್ರಿ ಸೆಂ.ಗ್ರೇ. ತಾಪಮಾನದ ನೀರು ಇಷ್ಟವಾಗುತ್ತದೆ.

ಓಕೆ..ಓಕೆ... ಇದರ "ಕಿಸ್ಸಿಂಗ್" ಬಗ್ಗೆ ಹೇಳ್ಬೇಕಲ್ವಾ...???
ಸ್ವಾಮಿ... ಇವು ಕಿಸ್ ಮಾಡೋದ್ರಿಂದಲೇ ಪ್ರಪಂಚದಾದ್ಯಂತ ಅಕ್ವೇರಿಯಂ ಪ್ರೇಮಿಗಳು ಇಷ್ಟ ಪಡೋದು..ಮಕ್ಕಳು ನೋಡಿ..ಚಪ್ಪಾಳೆ ತಟ್ಟಿ ಆನಂದಿಸುವುದು!!!
ಹೂಂ... 
ಆದ್ರೆ... ಇವು ಕಿಸ್ ಮಾಡಿದ್ವು ಅಂದಾಕ್ಷಣ ಗಂಡು-ಹೆಣ್ಣು ಬೇರೆ ಬೇರೆ ಲಿಂಗದ ಮೀನು ಅಂದ್ಕೋಬೇಡಿ...!!! ಎರಡು ಗಂಡುಗಳೂ...!!! ಏನು..?? ಗೇ..ನಾ?? ಅಯ್ಯೋ ಅಲ್ಲಾರೀ ..ಇದು ನಾವು ಅಂದ್ಕೊಳ್ಳೋ ಕಿಸ್ ಅಲ್ವೇ ಅಲ್ಲ.....!!!!!
ಅಹಹಹ .. ನೋಡಿದ್ರಾ... ಇದು ಆಂಟಿ ಕ್ಲೈಮ್ಯಾಕ್ಸು...
ಹೌದು ಇವು ಕಿಸ್ ಅಲ್ಲ ಒಂದಕ್ಕೊಂದು  ಸವಾಲ್ ಹಾಕುವುದು ಈ ರೀತಿ... ಇವುಗಳ ತುಟಿಯಂಚಿನಲ್ಲಿ ಬಹಳ ಚಿಕ್ಕ ಹಲ್ಲು ಸಹಾ ಇರುತ್ತವೆ... ಹಾಗಾಗಿ ಗಾಯ ಆಗೋ ಹಾಗೆ ಚುಂಬಿಸದೇ ಇದ್ರೂ... ಅವುಗಳ ತುಟಿಯ ಲೋಳೆಯನ್ನು ಕಸಿದುಕೊಂಡು ಸೋಂಕು ಹರಡಿ ರೋಗ ಉಂಟುಮಾಡಲೂ ಬಹುದು. 
ಇದನ್ನು ತಡೆಗಟ್ಟಲ್ಲು (ಅಂದರೆ..ಕಡಿಮೆ ಕಿಸ್ ಮಾಡಲು) ಕೆಲ ಗಡಸು ಜಲಸಸ್ಯ ಅಥವಾ ಪ್ಲಾಸ್ಟಿಕ್ ಸಸಿ ಅಕ್ವೇರಿಯಂ ನಲ್ಲಿ ನೆಡಬಹುದು. ಹಾಗೆಯೇ ಗಾಜಿನ ತೊಟ್ಟಿಯ ಹಿಂಗೋಡೆಯ ಪಾಚಿಯನ್ನು ತೆಗೆಯಬೇಡಿ...ಅದೇ ಅವುಗಳಿಗೆ ಆಹಾರವಾಗಿ..ಚುಂಬನ ತೀಕ್ಷ್ಣತೆ ಕಡಿಮೆಯಾಗುತ್ತದೆ....
ಈಗ ಗೊತ್ತಾಯ್ತಲ್ಲ....
ವ್ಯಾಲೆಂಟೈನ್ಸ್ ಚುಂಬನ ಅಲ್ಲ....ಇದು ಅಂತ....??!!!



Wednesday, February 1, 2012

ಸಹಾಯ ಮಾಡೋದು ಕೆಲವೊಮ್ಮೆ..???!! ಆದ್ರೂ ಪರ್ವಾಗಿಲ್ಲ.. ಲೇಖನದ ಮುಂದುವರೆದ ಭಾಗ........................(ಈ ಹಿಂದೆ)....

http://bhava-manthana.blogspot.com/



ಲೇಖನದ ಮುಂದುವರೆದ ಭಾಗ........................(ಈ ಹಿಂದೆ)......
ಮತ್ತೆ ಆತ ಪರ್ಸ್ ಚೆಕ್ ಮಾಡಿದ... “no no U only have taken….U gave me back the empty purse… return my tickets…” (ಇಲ್ಲ ಇಲ್ಲ ನೀನೇ ತೆಗೆದುಕೊಂಡಿದ್ದೀಯಾ!! ಕೊಡು ನನ್ನ ಟಿಕೆಟ್, ನನಗೆ ಖಾಲಿ ಪರ್ಸ್ ಕೊಟ್ಟಿದ್ದೀಯಾ).ನನಗೆ ಏನು ಹೇಳಬೇಕೋ ತೋಚದಾಯಿತು... ಅವನು, ಅವನ ಹೆಂಡತಿ ..ನಾನೇ ಟಿಕೆಟ್ ಕದ್ದಿದ್ದೀನಿ ಅನ್ನೋ ತರಹ ವರ್ತಿಸೋಕೆ ಪ್ರಾರಂಭಿಸಿ.. ನೀನು ಇಲ್ಲೇ ಕೂತ್ಕೋ ಅಂತ ಅಲ್ಲೇ ಕೂರುಸ್ಕೊಂಡ್ರು.. ಅವರ ಮಕ್ಕಳಿಬ್ಬರೂ ಅಮ್ಮನ ಹತ್ತಿರ ಪಿಸುಗುಡ್ತಾ ಇದ್ರು... “ಅಮ್ಮಾ ಪಾಪ ಅವರು ನಮ್ಮ ಪರ್ಸ್ ತಗೊಂಡ್ ಬಂದು ಕೊಟ್ಟಿದ್ದಾರೆ..ಅಂತಹುದರಲ್ಲಿ ಅವರು ಏಕೆ ಕದಿಯುತ್ತಾರೆ..?” ಎನ್ನುವಂತೆ ಹೇಳಿರಬೇಕು...ಅವರಮ್ಮ ’ನೀವು ಸುಮ್ಮನಿರಿ ಯಾರು ಎಂಥವರು ಹೇಳೋಕೆ ಆಗೊಲ್ಲ...’ ಎಂದವಳು ಗಂಡನ ಕಿವಿಯಲ್ಲಿ ಏನೋ ಕಿವಿಯಲ್ಲಿ ಪಿಸುಗುಟ್ಟಿದಳು...
............................................................................................

ಮುಂದುವರೆದ ಭಾಗ ...........

ಬಂಗಾಲಿ ಮಹಾಶಯ ನನ್ನ ಬಳಿ ಬಂದು ಕೂತ...” mister, If U want I will give you 50 rupess, please give my tickets back…” (ನಿನಗೆ ಬೇಕಾದ್ರೆ ಐವತ್ತು ರೂಪಾಯಿ ಕೊಡ್ತೇನೆ..ನನ್ನ ಟಿಕೆಟ್ ಕೊಟ್ಟುಬಿಡು) ನನಗೆ ಪಿತ್ತ ನೆತ್ತಿಗೇರಿತ್ತು.. “ what..? !! see, I gave you the purse, I didn’t open even, what was there, and what was not there, I don’t know…, do what ever U want.. one should not help any body these days” (ಏನು? ನೋಡ್ರಿ, ನಿಮ್ಮ ಪರ್ಸಲ್ಲಿ ಏನಿತ್ತೋ ಏನಿಲ್ವೋ ನಾನು ನೋಡಿಲ್ಲ ನಿಮಗೆ ತಂದು ಕೊಟ್ಟಿದ್ದೇನೆ, ನಿಮಗೆ ಬೇಕಾದ್ದು ಮಾಡಿಕೊಳ್ಳಿ... ಈ ಕಾಲದಲ್ಲಿ ಒಬ್ಬರಿಗೆ ಸಹಾಯ ಮಾಡೋದೂ ತಪ್ಪೇ..??!!) ಎಂದು ಹೊರಡಲು ಹೋದರೆ... ಆತ ಮತ್ತು ಆಕೆ ನನ್ನ ಕೈ ಹಿಡಿದು ಅಲ್ಲೇ ಕುಳ್ಳಿರಿಸಿದರು... ಆತ.. ಕೋಪ, ಬೆವರು.. ಉದ್ವಿಗ್ನತೆಯಿಂದ... “No, U cant go,,, let the TTE come, I report to the next station police…, yes..yes…”  ಎಂದವನೇ ನನ್ನ ಕೈ ಹಿಡಿದುಕೊಂಡ... ಅಷ್ಟರಲ್ಲಿ ಅಕ್ಕ ಪಕ್ಕದವರು...

“ಅಲ್ಲ ಸ್ವಾಮಿ ಅವರು ಪರ್ಸ್ ತಂದುಕೊಟ್ಟಿದ್ದಾರೆ ಅಂದರೆ ಅದ್ರಲ್ಲಿಂದ ಬರೀ ಟಿಕೆಟ್ ತಗೊಂಡು ಏನು ಮಾಡ್ತಾರೆ? ಅಲ್ಲದೇ ಅವರೂ ನಮ್ಮ ತರಹ ಕಲ್ಕತ್ತಾಗೆ ಬರ್ತಿರೋರು..., ಹಾಗೆ ಮಾಡ್ಬೇಕಾಗಿದ್ರೆ ನಿಮ್ಮ ಪರ್ಸ್ ಯಾಕೆ ವಾಪಸ್ ಕೊಡ್ತಿದ್ರು...??” ಎಂದರು ಹಿಂದಿಯಲ್ಲಿ.

ಅದಕ್ಕೆ ಆ ಬಂಗಾಲಿ ತನ್ನ ಅರ್ಧಂಬರ್ಧ ಹಿಂದಿಯಲ್ಲಿ “ ಇಲ್ಲ ಭೈ ಸಾಬ್ ಇವ್ರದ್ದೆಲ್ಲಾ ಒಂದು ರಾಕೆಟ್ ಇರುತ್ತೆ... ಟಿಕೆಟ್ ಎತ್ತಿ ತನ್ನ ಗುಂಪಿನವರಿಗೆ ಕೊಟ್ಟಿರ್ತಾನೆ... ಆಮೇಲೆ ಹಣ ಹಂಚ್ಕೋತಾರೆ ಕ್ಯಾನ್ಸಲ್ ಮಾಡ್ಸಿ...” ಅಂತೆಲ್ಲಾ ಅರ್ಥವಿಲ್ಲದೇ ಬಡಬಡಾಯಿಸುತ್ತ ಕುಳಿತ. ನಾನು ಕೇಳಿದೆ...”ಅಲ್ಲಾರೀ ನಿಮ್ಮ ಹಣ ಸರಿಯಿದೆ ತಾನೇ..?? ಮುಟ್ಟಿದ್ದೀನಾ..? ಟಿಕೆಟ್ ತಗೊಂಡು ನಾನೇನ್ಮಾಡ್ಲಿ??” ಎಂದೆ. ಕೋಪದಿಂದ..ಅವ.. “ಇದ್ರಲ್ಲಿ ಕೇವಲ ೧೦೦ ರೂಪಾಯಿ ಇದ್ದಿದ್ದು..ಅದು ಇದೆ... ಆದ್ರೆ ನಾಲ್ಕು ಟಿಕೆಟ್ ನೀನು ಬ್ಲಾಕಲ್ಲಿ ಮಾರಿದ್ರೆ ೨೫೦-೩೦೦ ಆದ್ರೂ ಸಿಗುತ್ತೆ...” ಎಂದ....
ಜಿಗುಪ್ಸೆ..ಎನಿಸಿತು..“ಸರಿ TTE ಬರ್ಲಿ...,  ಅಲ್ಲಾರೀ ನಿಮ್ಮ ರಿಸರ್ವೇಶನ್ ಟಿಕೆಟ್ ನಾನು ಹೇಗೆ ಮಾರೋಕಾಗುತ್ತೆ...?” ಎಂದೆ ಅಸಹನೆಯಿಂದ. 
ಅದಕ್ಕವನು.. "ನನ್ನದು ಲೋಕಲ್ ಸ್ಟೇಶನ್ ಟಿಕೆಟ್..(Quota) ಕೋಟಾದು.. ಅದನ್ನ ಮಾರೋದು ಸುಲಭ ನಿಮಗೆ.... ನನಗೆ ಗೊತ್ತಾಗೊಲ್ವಾ..?? ಎಂದ ಕೋಪದಿಂದ...
ಆ ವೇಳೆಗಾಗಲೇ ಸುಮಾರು ಒಂದು ಘಂಟೆ ಸಮಯ ಕಳೆದಿತ್ತು..., ನನ್ನ ಆರ್ ಎ.ಸಿ ಕನ್ನಡಿಗ ದೋಸ್ತಿಂದು ಆ ವೇಳೆಗೆ ಬರ್ತ್ ಕಂಫರ್ಮ್ ಆಗಿತ್ತು.. ನನ್ನ ಸೂಟ್ ಕೇಸ್ ಜೊತೆ ತನ್ನದನ್ನೂ ಎತ್ತಿಕೊಂಡು ಬಂದವರೇ..
"ಏನ್ಸಾರ್ ನೀವು ಇಲ್ಲಿ ಆರಾಮಗಿ ಕೂತಿದ್ದೀರಿ... ಇಲ್ಲೇನಾ ಸೀಟು ನಿಮ್ಮದು..?" ಎನ್ನುತ್ತಾ.. ನನ್ನ ಬಳಿ ಜಾಗ ಮಾಡಿಕೊಂಡು ಕುಳಿತುಕೊಳ್ಳುವ ವೇಳೆಗೆ ಪರಿಸ್ಥಿತಿ ಟೆನ್ಸ್ ಅನ್ನಿಸಿರಬೇಕು..
“ಏನ್ಸಾರ್..? ಏನಾಯ್ತು...??” ಎಂದರು... ನಾನು ಎಲ್ಲಾ ವಿವರಿಸಿದೆ.... ಅವರ ಪಿತ್ತ ನೆತ್ತಿಗೇರಿತು..
Oh!! mister… leave his hand…,  he gave you the purse…that is his mistake!!… but now I am telling you l… he did not give you the purse…  infact he doesn’t know who you are…, got it..!!” ಎಂದವರೇ ನನ್ನ ಕೈ ಬಿಡಿಸಿಕೊಂಡು 
"ಬನ್ನಿ ಸರ್ ನೀವು ಏನ್ಮಾಡ್ತಾನೋ ಮಾಡ್ಕೊಳ್ಳಲಿ.." ಎನ್ನುತ್ತ ನನ್ನ ಎಬ್ಬಿಸಿದರು. ನೋಡಲು ಕಟ್ಟುಮಸ್ತಾಗಿದ್ದರು ನನ್ನ ಮಿತ್ರ.. ಅವರ ಜೋರಿಗೆ ಬಂಗಾಲಿ ಥಂಡಾ..!!! ನಾವಿಬ್ಬರೂ ಹೋಗುವಾಗ  ಬಂಗಾಲಿ ಅವನ ಹೆಂಡತಿ ಬೈಯ್ಯೋಕೆ ಶುರು ಹಚ್ಕೊಂಡಿದ್ರು...  ಟ್ರೈನ್ ಮಿತ್ರನಿಗೂ ನನ್ನ ಕೂಪೆಯಲ್ಲಿಯೇ ಬರ್ತ್ ಸಿಕ್ಕುತ್ತು. ಅಲ್ಲಿಂದ ಎರಡನೇ ಕೂಪೆ ನಮ್ಮದಾಗಿದ್ದರಿಂದ ಅವರ ಬೈಗುಳ ಕೇಳಿಸುತ್ತಿತ್ತು.
“ಬಿಡಿ ಸರ್ ನೀವು ತಲೆ ಕೆಡಿಸ್ಕೋಬೇಡಿ..ಎಲ್ಲೋ ಮಿಸ್ ಪ್ಲೇಸ್ ಮಾಡಿರ್ತಾನೆ...ಬಡ್ಡಿ ಮಗ.. ಈಗ ನೀವು ಸಿಕ್ರಿ ತಪ್ಪು ಹೊರಸ್ತಾ ಇದ್ದಾನೆ... ಏನಿದೆ ಪ್ರೂಫು ನೀವು ಪರ್ಸು ಕೊಟ್ರಿ ಅವನಿಗೆ ಅಂತ...ಹೇಳ್ಲಿ...” ಅಲ್ಲಿದ್ದ ಸುಮಾರು ಸಹ ಪ್ರಯಾಣಿಕರೂ ನಮ್ಮ ಬೆಂಬಲಕ್ಕೆ ನಿಂತರು...  "ಹೌದು ಸರ್ ಬಿಡಿ, ನೀವೇ ಕೊಟ್ರಿ ಅಂತ ಯಾರೂ ಹೇಳೊಲ್ಲ..ಅವ್ರೇ ಹೇಳ್ಕೊಳ್ಲಲಿ.." ಎಂದರು.. ಆಗ್ಲೇ ಗೊತ್ತಾಗಿದ್ದು ಸುಮಾರು ಐದಾರು ಕನ್ನಡಿಗರು ಕಲ್ಕತ್ತಾಗೆ ಹೊರಟಿದ್ದ ಸಹಪ್ರಯಾಣಿಕರು ಅಂತ. ನನಗೆ ಧೈರ್ಯ ಬಂದಿತ್ತು. ....
ನಾವೂ ಮರೆತಂತೆ..ಇದ್ವಿ.. ಮಾತು ಕತೆಗೆ ಶುರುಮಾಡ್ಕೊಂಡು ಉಭಯ ಪರಿಚಯಕ್ಕೆ ಪ್ರಾರಂಭಿಸಿದೆವು. ಒಂದರ್ಧ ಘಂಟೆ ಅಲ್ಲಿಂದ ಬಡಬಡಿಕೆ ಕೇಳಿ ಬರ್ತಿತ್ತು... ನಂತರ ಶಾಂತವಾಯ್ತು...
“ಸುಸ್ತಾಯ್ತು ಅಂತ ಕಾಣುತ್ತೆ ಬಯ್ಕೊಂಡು... ಬಿಡಿ... ಸರ್” ಎಂದರು ನನ್ನ ಸ್ನೇಹಿತ..ನನ್ನ ಗಮನ ಇನ್ನೂ ಆ ಕಡೆಯಿಂದ ಹೊರಬಂದಿಲ್ಲವೆಂದು ತಿಳಿದು.
೧೦-೧೫ ನಿಮಿಷದ ನಂತರ TTE ಬಂದರು. ನಮ್ಮ ಟಿಕೆಟ್ ನೋಡಿ ಬರ್ತ್ ಕಂಫರ್ಮ್ ಸ್ಲಿಪ್ ಗೆ ಸೈನ್ ಹಾಕಿದ್ರು. ನನಗೆ ಕುತೂಹಲ...  ’ಸರ್.. ಅಲ್ಲಿ ಎರಡು ಮೂರು ಕೂಪೆ ಆಚೆ ಬಂಗಾಲಿ ಫ್ಯಾಮಿಲಿ ಇದೆಯಲ್ಲಾ.. ಅವರದ್ದು ಟಿಕೆಟ್ ಕಳೆದು ಹೋಗಿದೆ ಅಂತಿದ್ರು... !!??’ ಎಂದು ಇಂಗ್ಲೀಷಲ್ಲಿ ನಾನು ಕೇಳುವಾಗ ನನ್ನ ಆ ಮಿತ್ರ ಮೆತ್ತಗೆ 
“ಬಿಡಿ ಸರ್ ನೀವು, ಅವರ ಪಾಡು ಅವ್ರದ್ದು.. ಸೌಜನ್ಯ ಇಲ್ಲದವರ ಬಗ್ಗೆ ನಮಗ್ಯಾಕೆ ಕಾಳಜಿ?” ಎಂದರು.
“ಅಯ್ಯೋ ಅವರಾ... ?? “ ಎಂದರು TTE… “ಅರೆ.. ನೀವು ಕನ್ನಡದವರಾ?”
ನನಗೆ ಆಶ್ಚರ್ಯ ಮತ್ತು ಸಂತೋಷ ಎರಡೂ....ಸದ್ಯ ನನಗೆ ಗಂಡಾಂತರ ಬರೊಲ್ಲ ...ಅಂತ ಸಮಾಧಾನ ..!! ನನ್ನ ಸ್ನೇಹಿತನ ಮುಖ ನೋಡಿದ..ಅವರೂ ಮುಗುಳ್ನಕ್ಕರು...
TTE ಹೇಳಿದರು “ಹೌದು ಸರ್ ನಾನು ಮೈಸೂರಿನವನು..ನೀವು ಕಲ್ಕತ್ತಾಗಾ...?? ಹಾಂ..ಅದಹಾಗೆ..ಅವರ ಬಗ್ಗೆ ಕೇಳಿದ್ರಲ್ಲಾ...ಅವರೊಂದು ಗಡಿಬಿಡಿ ಮನುಷ್ಯ..... ಇಲ್ಲೇ ವಿಜಯವಾಡದ ಹತ್ತಿರದ ಲೋಕಲ್ ಸ್ಟೇಶನ್ ಬುಕ್ಕಿಂಗ್ ಅವ್ರದ್ದು... ಕೊರಮಂಡಲ್ ಅಲ್ಲಿ ಸ್ಟಾಪಿಲ್ಲ...ಅದಕ್ಕೆ ಕೋಟಾ ಮೇಲೆ ಟಿಕೆಟ್ ಅಲ್ಲೇ ಮಾಡ್ಸಿ ವಿಜವಾಡದಲ್ಲಿ ಬೋರ್ಡ್ ಮಾಡಿದ್ದಾರೆ... ಅವರ ಜೊತೆ ಬಂದಿದ್ದ ಸ್ನೇಹಿತರಿಗೆ ಪ್ಲಾಟ್ ಫಾರ್ಮ್ ಟಿಕೆಟ್ ಕೊಡೋ ಬದ್ಲು...ಇವರ ಟಿಕೆಟ್ ಕೊಟ್ಟಿದ್ದಾರೆ... ಆಮೇಲೆ.. ಗೇಟ್ ಕೀಪರ್ ನನ್ನ ಕರೆದು ಅವರ ಟಿಕೆಟ್ ಕೊಟ್ಟ...ಕೇಳಿದ್ದಕ್ಕೆ... ಮಂಕಾಗಿ ಕೂತ..ನಾನೇ ವಿಷಯ ತಿಳ್ಸಿ ಚಕ್ ಮಾಡಿ ಬಂದೆ...” ಎಂದರು... ನನಗೆ ತಲೆಮೇಲಿನ ಭಾರ ಇಳಿದಷ್ಟೇ ನಿರಾಳ ಆಯ್ತು.. ಅಷ್ಟರಲ್ಲಿ ಅಲ್ಲಿಗೆ ಬಂದ ಬಂಗಾಲಿ ಮಹಾಶಯ ಬಂದವನೇ ನನ್ನ ಕೈ ಹಿಡಿದು... ಭೈ ಸಾಬ್... “I am very very sorry… the mistake was mine… I troubled U…” (ನನ್ನ ಕ್ಷಮಿಸಿ..ತಪ್ಪು ನನ್ನದೇ..ನಿಮಗೆ ತೊಂದರೆ ಕೊಟ್ಟೆ) ಎನ್ನುತ್ತಾ ಸಾರಿ ಸಾರಿ ಅಂತ ಸಾರಿ ಸಾರಿ ಹೇಳುವಾಗ ನನಗೆ ಮುಜುಗರ ಅನ್ನಿಸ್ತು...  “Its Ok…its OK “ ಎಂದೆ.
ಆನಂತರ ಸರದಿಯ ಮೇಲೆ ಬಂಗಾಲಿಯ ಹೆಂಡತಿ, ಮಕ್ಕಳು ಬಂದು ಕ್ಷಮೆ ಕೇಳಿದ್ದು... ವಿಶಾಖಪಟ್ನಂ ನಲ್ಲಿ ’ರೊಸೊಗೊಲಾ’ ತಂದುಕೊಟ್ಟಿದ್ದು ಅಗ್ಗಾಗೆ ಚಹಾ ಕಳುಹಿಸಿದ್ದು ಬೇರೆ ವಿಷಯ...!!!