ದಿಲ್ ಕಾ ಭವರ್ ಕರೆ ಪುಕಾರ್
ತೆರೆ ದಿಲ್ ಕೆ ಸಾಮ್ನೆ ಚಿತ್ರ೧೯೬೩ ಮೊಹಮದ್ ರಫಿಯವರ ಹಾಡು
ಮನದ ವೀಣೆ ಮಿಡಿಯುತಿದೆ
ಮನದ ವೀಣೆ
ಮಿಡಿಯುತಿದೆ
ಮನ ತುಂಬಿ ಹಾಡುತಿದೆ
ಹೃದಯದ ರಾಗ
ಕೇಳಿರಿ.....II ಹೃದಯದ ರಾಗ ಕೇಳಿರಿ II
ನೋಡು ನಿನ್ನ ಮನಸಿನ
ಅಂತರಾಳ ಅರಿತೆ ನಾ
ಗೆಳತಿಯಾಗಿ ನಿನ್ನ ಮೆಚ್ಚಿದೇ
ನನ್ನ ನೋಡಿ ನಿನ್ನಲೂ
ಹೀಗೇ ಭಾವ ಬೆಳೆದಿದೆ
ಎಂದೇ ನಾನು ಗೀತೆ ಬರೆದೆನೂ..
ಹಾಡ ಹೀಗೇ ನಾ ಹಾಡಿದೇ...
ಹೃದಯದ ರಾಗ ಕೇಳಿರಿ....II ಮನದ ವೀಣೆ
ಮಿಡಿಯುತಿದೆ II
ಹಾಡು ನನ್ನ ಜೊತೆಯಲಿ
ನೀಡು ಪಾಲು ಕಥೆಯಲಿ
ನಮ್ಮದಾಗಿ ಕಾಲ ಉಳಿಯಲೀ...
ಕೈಯ ಹಿಡಿದು ಕೈಯಲಿ
ಭರವಸೆಯ ಸುಖದಲಿ
ಜೀವನವೂ ಹೀಗೇ ಸಾಗಲೀ...
ದಿನ ಹೀಗೇ ಕಳೆಯಲೀ....
ಹೃದಯದ ರಾಗ ಕೇಳಿರಿ....II ಮನದ ವೀಣೆ
ಮಿಡಿಯುತಿದೆ II