Sunday, March 18, 2012

ಮನದ ವೀಣೆ....



ದಿಲ್ ಕಾ ಭವರ್ ಕರೆ ಪುಕಾರ್  
ತೆರೆ ದಿಲ್ ಕೆ ಸಾಮ್ನೆ ಚಿತ್ರ೧೯೬೩ ಮೊಹಮದ್ ರಫಿಯವರ   ಹಾಡು


ಮನದ ವೀಣೆ ಮಿಡಿಯುತಿದೆ

ಮನದ ವೀಣೆ ಮಿಡಿಯುತಿದೆ
ಮನ ತುಂಬಿ ಹಾಡುತಿದೆ
ಹೃದಯದ ರಾಗ ಕೇಳಿರಿ.....II ಹೃದಯದ ರಾಗ ಕೇಳಿರಿ II
            ನೋಡು ನಿನ್ನ ಮನಸಿನ
          ಅಂತರಾಳ ಅರಿತೆ ನಾ
          ಗೆಳತಿಯಾಗಿ ನಿನ್ನ ಮೆಚ್ಚಿದೇ
ನನ್ನ ನೋಡಿ ನಿನ್ನಲೂ
ಹೀಗೇ ಭಾವ ಬೆಳೆದಿದೆ
ಎಂದೇ ನಾನು ಗೀತೆ ಬರೆದೆನೂ..
ಹಾಡ ಹೀಗೇ ನಾ ಹಾಡಿದೇ...
ಹೃದಯದ ರಾಗ ಕೇಳಿರಿ....II ಮನದ ವೀಣೆ ಮಿಡಿಯುತಿದೆ II
            ಹಾಡು ನನ್ನ ಜೊತೆಯಲಿ
          ನೀಡು ಪಾಲು ಕಥೆಯಲಿ
          ನಮ್ಮದಾಗಿ ಕಾಲ ಉಳಿಯಲೀ...
ಕೈಯ ಹಿಡಿದು ಕೈಯಲಿ
ಭರವಸೆಯ ಸುಖದಲಿ
ಜೀವನವೂ ಹೀಗೇ ಸಾಗಲೀ...
ದಿನ ಹೀಗೇ ಕಳೆಯಲೀ....
ಹೃದಯದ ರಾಗ ಕೇಳಿರಿ....II ಮನದ ವೀಣೆ ಮಿಡಿಯುತಿದೆ II


17 comments:

  1. ಅಜಾದ್,
    ಮರೆತು ಹೋಗಿರುವ ಇಂಥ ಹಳೆಯ ಹಾಡುಗಳನ್ನು ಪರಿಶುದ್ಧ ಬೆಳಗಿನ ಸಮಯದಲ್ಲಿ ಕೇಳಿಸಿ ಮನಸ್ಸು ಉಲ್ಲಾಸ ಗೊಳಿಸುತ್ತಿದ್ದೀರಿ. ಜೊತೆಗೆ ಲಯಬದ್ಧವಾದ ಅನುವಾದ. ಧನ್ಯವಾದಗಳು.

    ReplyDelete
  2. ಧನ್ಯವಾದ ಡಾಕ್ಟ್ರೇ..ನಿಮ್ಮ ಪೋಸ್ಟ್ ನೋಡಿ ಅರ್ಧಕ್ಕೆ ನಿಲ್ಲಿಸಿದ್ದ ಈ ಹಾಡನ್ನು ಪೂರ್ತಿ ಮಾಡಿದೆ..

    ReplyDelete
  3. ಶಿವು ಧನ್ಯವಾದ...ನಿಜವಾಗಿಯೂ ಎಂತಹ ಅರ್ಥ ಗರ್ಭಿತ ಹಾಡುಗಳು....ಆ ಧ್ವನಿಗಳು..ಆ ಸಂಗೀತ,,,ಎಲ್ಲಾ ಮಿಸ್ಸಿಂಗೂ....

    ReplyDelete
  4. ಹಳೆ ಕಾಲಕ್ಕೆ ಕರೆದುಕೊಂಡು ಹೋಗ್ತಾ ಇದ್ದೀರಿ... ಧನ್ಯವಾದಗಳು ಒಳ್ಳೆಯ ಹಾಡಿನ ಅನುವಾದ ಚೆನ್ನಾಗಿದೆ ಅದೇ ರಾಗದಲ್ಲೇ ಹಾಡಿಕೊಂಡೆ

    ReplyDelete
  5. ಧನ್ಯವಾದ ಸುಗುಣ....ಮನಸು-ಇದ್ದರೆ ಮಾರ್ಗ...ರಾಗ ಎಲ್ಲಾ...ಹಹ್ಹಹ ಅಲ್ವಾ?

    ReplyDelete
  6. ಸಂಧ್ಯಾ ಧನ್ಯವಾದ....

    ReplyDelete
  7. ಭಯ್ಯಾ,ಎಡೀ ಹಾಡನ್ನು ಹಾಡಿಕೊಂಡೆ. ನೈಸು ಫೀಲಿಂಗು.. :))) ಮೊದಲನೆಯ ನುಡಿಯ "ಹಾಡ ಹೀಗೇ ನಾನು ಹಾಡಿದೇ..." ಹಾಗೂ ಎರಡನೆಯ ನುಡಿಯ "ದಿನ ರಾತ್ರಿ ಯೇ ಕಳೆಯಲೀ...." ಈ ಎರಡೂ ಸಾಲುಗಳು ಮೀಟರ‍್ಗೆ ಸರಿ ಹೊಂದುತ್ತಿಲ್ಲ, ಸರಿಪಡಿಸಲು ಸಾಧ್ಯವೇ ನೋಡಿ. ಉಳಿದಂತೆ ಸೂಪರ್ರೋ ಸೂಪ್ಪರ್ರು ಸಾಂಗು. :)))

    ReplyDelete
  8. ಆಯ್ತು ಮೀಟರ್ ಇಟ್ಟು..ಸರಿ ಮಾಡ್ತೀನಿ ಹಹಹಹ ಧನ್ಯವಾದ ನಿಮ್ಮ ಪ್ರೋತ್ಸಾಹಕ್ಕೆ..ಜಯಕ್ಕ.

    ReplyDelete
  9. ತುಂಬ ಚೆನ್ನಾಗಿ ಬರೆದಿದ್ದೀರಿ ಸರ್. ಇದು ನನ್ನ ಮೆಚ್ಚಿನ ಹಾಡುಗಳಲ್ಲೊಂದು, ಈಗ ನಿಮ್ಮ ಕನ್ನಡ ಅವತರಣಿಕೆಯೂ ಕೂಡ..!

    ReplyDelete
  10. ಸುಬ್ರಮಣ್ಯ ಧನ್ಯವಾದ ರೀ ನಿಮ್ಮ ಪ್ರೋತ್ಸಾಹಕ್ಕೆ...

    ReplyDelete
  11. tumbaa sundara anuvaada sir..... saralavaagi haaDikoLLabahudu.... super....

    ReplyDelete
  12. ಆಜಾದು..
    ತುಂಬಾ ಸೊಗಸಾಗಿದೆ..
    ಈ ಹಾಡು ನನ್ನ ಇಷ್ಟದ ಹಾಡು..

    ಸೂಪರ್ರೂ !!

    ReplyDelete
  13. ಜಲನಯನ,
    ಸಿನಿಮಾ ಗೀತೆಗಳನ್ನು ಸೊಗಸಾಗಿ, ರಾಗಬದ್ಧವಾಗಿ ಅನುವಾದಿಸುತ್ತೀರಿ. ಸ್ವತಃ ನೀವೇ ಚಿತ್ರಗೀತೆಗಳನ್ನು ಬರೆಯಬಹುದು. ಸಾಹಿತ್ಯಕವಾಗಿ ಅವು ಉತ್ತಮವಾಗಿ ಇರುವದರಲ್ಲಿ ಸಂದೇಹವಿಲ್ಲ.

    ReplyDelete
  14. ಹಾಡು ಕೇಳಲಾಗುತ್ತಿಲ್ಲ....ಸ್ವಲ್ಪ ಸಿಸ್ಟಮ್ ಪ್ರಾಬ್ಲಮ್ ಇದೇ..
    ಆದರೆ ಮನದ ವೀಣೆಯನ್ನು ನೀವು ಮೀಡಿಸಿದ ಪರಿ ಸೂಪರ್....ಬಾಳಾ ಇಷ್ಟ ಆಯಿತು....

    ReplyDelete