(John Keats, Pic Source: Web ಚಿತ್ರ : ಅಂತರ್ಜಾಲದ ಕೃಪೆ)
ಕವಿಗೋಳ್
ಕವಿಗಳು ಬಯ್ತಾರೆ ನ್ಯೂಟನನ್ನ
ಕಾಮನ್ಬಿಲ್ಲಂದಾನೇ ಕೆಡಿಸ್ಬಿಟ್ನಣ್ಣ
ಗುಂಡ ಅಂದ, ಏನ್ಬಣ್ಣ ಬಳುದ್ನಾ ಅವ್ನು?
ಕಲ್ಪ್ನೆ ಮಾಡಾಕಾಗ್ದೋವ್ನು ಇಂಗೆ
ಗೂಬೆ ಕೂಡ್ಸಿದ್ರೆ ಇಜ್ಞಾನಿಗಳ್ಮೇಲೆ ಎಂಗೆ?
ಇನ್ನೊಬ್ಬ ಅಂತಾನೆ ರುದ್ಯಾ ಪಂಪಂತೆ
ರಕ್ತಾನ ಪುಟ್ಬಾಲಿಲ್ದೇನೆ ಎತ್ತಾದಂತೆ
ಕವಿ ಯಾಕೋ ಒಸಿ ಅಚ್ಕಂಡವ್ನೆ ಮನ್ಸಿಗೆ
ರುದ್ಯದ್ ಮಾತ್ ಎಂಗ್ತರ್ಲಿ ನಾ ಕನ್ಸಿಗೆ?
ನಮ್ರಾಮಣ್ಣ ಅಂದ ಬೆಳಕ್ನಾಗೆ ಏಳ್ಬಣ್ಣ
ನೋಡ್ಬೇಕಂದ್ರೆ ಕೊಡ್ತೀನಿ ಪ್ರಿಜ಼ಂ ಕಣ್ಣ
ಕವಿ ಕೂತ ತಲೆಮ್ಯಾಲೆ ಕೈ ಒತ್ಕೊಂಡು
ಗುಲಾಬಿನಾ ಎಂಗಪ್ಪಾ ಕೊಡ್ಲಿ ಕಿತ್ಕಂಡು?
ನಮ್ ಜಲ್ನಯ್ನಾ ಯೋಳ್ತಾರೆ ಇನ್ನೊಂದಿಸ್ಯಾ
ಸ್ವಾತಿ ಅನಿ ಅಲ್ಲೋ ಮಾಡೋದ್ಮುತ್ತು ಬಸ್ಯಾ
ಮಳ್ಕಣ ಸೇರ್ಕಂಡ್ರೆ ಚಿಪ್ನಾಗೆ, ಆಗೋದು ಮುತ್ತು
ಕವಿಗೋಳ್, ಎಂಗ್ಮುಗ್ಸೋದು ಈ ಕವ್ನದ್ ಸುತ್ತು
Jalanayana,
ReplyDeleteI love to call you as a new Rajaratnam.
Super poem!
ಈ ಥರ ಕನ್ನಡ ನಂಗೆ ಗೊತ್ತಿಲ್ದೆ ಇರೋದ್ರಿಂದ ಪೂರ್ತಿ ಕವನ ಅರ್ಥ ಮಾಡಿಕ್ಕೊಳಲು ಸಾಧ್ಯವಾಗದೆ ಹೋಯಿತು ಸರ್... :(
ReplyDeleteಆ ಬಾಸೆ..ಪದ್ಗೊಳ್ನ ಕಟ್ಟಿದ್ದ್ ರೀತಿ..ಸಾನೆ ಇಷ್ಟಾ ಆಯ್ತು..ಬೊ ಪಸಂದಾಗೈತೆ!!!
ReplyDeleteಮುಂದೆ ಯಾವುದೇ ಕವಿತೆ ಬರೀ ಬೇಕಾದ್ರೆ, ನಿಮ್ಮನ್ನ ಅಭಿಪ್ರಾಯ ಕೇಳೋ ಹಾಗಾಯ್ತಲ್ಲ ಸಾರ್? ನಮ್ಮ ಬುಡಕ್ಕೆ ಪಟಾಕಿ ಇಟ್ರೆ ಹೇಗೆ ಅಂತ?
ReplyDeleteಸ್ವಾತಿ ಹನಿಯಿಂದ ಮುತ್ತೇ?
ಕೇಳಿದಳು ಪಾರು,
ಅವನೆಂದ
ಸ್ವಾತಿ ಮಾತೇಕೆ ಚಿನ್ನ
ಬಾ ಈಗಲೇ
ಇಕ್ಕೋಣ ಮುತ್ತಾ!
:) :) nice one...
ReplyDeleteಕವಿಯಲ್ಲಿ ವಿಜ್ಞಾನಿಯೋ ?
ReplyDeleteವಿಜ್ಞಾನಿಯಲ್ಲಿ ಕವಿಯೋ ?
ನಿಮ್ಮಲ್ಲಿ ಇಬ್ಬರೋ ?
Super
ಸ್ವರ್ಣಾ
ತು೦ಬಾ ಸು೦ದರವಾಗಿ ವಿಜ್ಣಾನ ತಿಳಿಸಿದ್ದೀರಿ.. ವಾವ್..:))
ReplyDeleteಅಜಾದ್,
ReplyDeleteಕವಿ ಮತ್ತು ವಿಜ್ಞಾನಿಗಳ ತಾಕಲಾಟಗಳನ್ನು ಹಳ್ಳಿಬಾಷೆಯಲ್ಲಿ ಚೆನ್ನಾಗಿ ಹಿಡಿದಿಟ್ಟಿದ್ದೀರಿ..
very nice sir
ReplyDelete