Saturday, October 13, 2012

ಕಿತ್ತೂರು ಚನ್ನಮ್ಮನ ಪುನರ್ಜನ್ಮ..???





























ಕಿತ್ತೂರು ಚನ್ನಮ್ಮನ ಪುನರ್ಜನ್ಮ..???

ಆ ದಿನ ಬೆಳಿಗ್ಗೆ ಎಂದಿನಂತೆ ೫.೩೦ ಎದ್ದು ಸ್ಕೂಲಿಗೆ ಹೋಗಬೇಕಾಗಿದ್ದ ನನ್ನ ಮಗಳು ಸುರಯ್ಯಾನನ್ನು ಮೂರನೇ ಬಾರಿ..ಹತ್ತು ನಿಮಿಷದೊಳಗೆ ಎಚ್ಚರಿಸಿದ್ದೆ..  ಆಗ್ಲೇ ೬.೦ ಆಗುತ್ತಾ ಇತ್ತು.
“ಬೇಟೂ..ಉಠೋ..ಟೈಮ್ ಹುವಾ ಮಾ...ರೆಡಿ ನೈ ಹೋನಾ ಕ್ಯಾ ಸ್ಕೂಲ್ಕು ಜಾನೇ..?” ಸ್ವಲ್ಪ ಎತ್ತರದ ದನಿಯಲ್ಲೇ ಹೇಳಿ -
ನಾನೂ ಬ್ರಶ್ ಮಾಡಿ ಬಂದೆ, ಅರೆ..!! ಇನ್ನೂ ಎದ್ದಿಲ್ಲ... ಈಗ ಕೋಪ ಬಂತು...
“ಸುರೂ...” ಕೂಗಿದೆ ಒತ್ತು ಕೊಟ್ಟು ’ರೂ’ ಅಕ್ಷರಕ್ಕೆ..
ತಡಬಡಾಯಿಸಿ ಎದ್ದಳು ಸುರು, ಎಂದಿನಂತೆ ಮೊದಲು ಅವಳೇ ಅಲಾರ್ಮ್ ತೆಗೆದು, ಅದನ್ನು ಆಫ್ ಮಾಡಿ ಎದ್ದು ನನ್ನ ಎಬ್ಬಿಸ್ತಾ ಇದ್ದವಳು ಈ ದಿನ ಯಾಕೆ..?? ನನಗೂ ಯೋಚನೆ ಆಗೋದು ಸಹಜ ಅಲ್ವೇ..??
ಯಾಕೋ ಲವಲವಿಕೆ ಕಡಿಮೆ ಇತ್ತು... ಅವಳಮ್ಮನೂ ಎದ್ದಿರಲಿಲ್ಲ... ಅರೆ ಇದೇನು..?? ನಾನೇ ಏನಾದರೂ ತಪ್ಪು ಮಾಡ್ತಿದ್ದೀನಾ..???
“ರೀ ..ಈ ದಿನ ಶುಕ್ರವಾರ ಅಲ್ವಾ !! ರಜಾ ಮಲಗ್ಲಿ ಬಿಡಿ...ಇಷ್ಟು ಬೇಗ ಯಾಕೆ ಎಚ್ಚರಿಸ್ತೀರಾ” ಅನ್ನೋ ಥರ ನನ್ನ ನೋಡಿದ್ಲು ಮಲಗಿದ್ದಲ್ಲಿಂದಲೇ ನನ್ನವಳು...
ಎದ್ದು ಕುಂತ ನನ್ನ ಮಗಳು.. ಮಂಕು ಮಂಕಾಗೇ ಇದ್ದದ್ದು ನೋಡಿ... ಸ್ವಲ್ಪ ಆತಂಕ ಆಯ್ತು, ಹಣೆ ಮುಟ್ಟಿ ನೋಡಿದೆ, ತಣ್ಣಗಿತ್ತು. ಸಮಾಧಾನ ಆಯ್ತು.
“ಓಕೆ ಬೇಟೂ ..ಮಲಗು.. ಹಾಲಿಡೇ ಅಲ್ವಾ..ಓಕೆ...ಮಲಗು” ಎಂದೆ..
ಸುರು ನನ್ನ ಕೈಹಿಡಿದು ಕುಳ್ಳರಿಸಿಕೊಂಡಳು ಹಾಸಿಗೆ ಮೇಲೆ..
“ಅಬ್ಬೂ ನಾನು ಬ್ರಿಟೀಶರ್ಸನ್ನ ನೋಡಿದ್ದೀನಿ.., ಬಹಳ ಕೆಟ್ಟವರು ಅವರು, ನಮ್ಮ ನಮ್ಮಲ್ಲೇ ಜಗಳ ತಂದಿಟ್ಟು ತಮ್ಮ ವಸಾಹತು ಸಾಮ್ರಾಜ್ಯ ಮಾಡಿದ್ದೇ ಅಲ್ಲದೇ..ನಮ್ಮ ರಾಜ್ಯದಲ್ಲೂ ನಮ್ಮವರನ್ನೇ ನನ್ನ ವಿರುದ್ಧ ಎತ್ತಿ ಕಟ್ಟಿದರು”.... !!!!!!!!!!!!!! ??????
ತಕ್ಷಣ ಮತ್ತೆ ಅವಳ ಹಣೆ ಮುಟ್ಟಿದೆ..ಗಾಬರಿಯಾಯ್ತು... ತಣ್ಣಗಿತ್ತು ಹಣೆ!!
“ಏನಾಯ್ತು ಬೇಟೂ...ಯಾಕೆ?? ಕನಸು ಕಂಡ್ಯಾ??”
“ಇಲ್ಲ ಅಬ್ಬು, ನನಗೆ ನನ್ನ ಹಿಂದಿನ ಜನ್ಮದ ನೆನಪಾಗ್ತಿದೆ,...”
ನನ್ನ ಗಾಬರಿ ಜಾಸ್ತಿ ಆಯ್ತು, ನನ್ನವಳು ಪುಣ್ಯಕ್ಕೆ ರಜೆ ಆದ್ದರಿಂದ ಮತ್ತೆ ನಿದ್ರಿಸಿದ್ದಳು, ಇಲ್ಲವಾಗಿದ್ದರೆ ಅತ್ತೇ ಬಿಡ್ತಾ ಇದ್ದಳು.
“ಇಲ್ಲ ಪುಟ್ಟಾ, ಕನಸು ಕಂಡಿರಬೇಕು...!!” ಅಂದೆ.
“ಇಲ್ಲ ಅಬ್ಬೂ ನನಗೆ ಪೂರ್ತಿ ನೆನಪಾಗ್ತಿದೆ,... ಸಂಗೊಳ್ಳಿಯನ್ನ ಹಿಡಿದು ಗಲ್ಲಿಗೆ ಹಾಕಿದ್ರು.. ಎಂಥ ಕ್ರೂರಿಗಳು... ನಾನು ಹೇಗೋ ತಪ್ಪಿಸ್ಕೊಂಡು ಕಾಡಿಗೆ ಹೋಗಿದ್ದೆ, ಅಲ್ಲೂ ಬಿಡಲಿಲ್ಲ ನನ್ನ ಬೆನ್ನಹಿಂದೆ ಬಿದ್ದರು.. ನನ್ನ ಹಾಗೇ ಇದ್ದ ಸುಂದರಮ್ಮನನ್ನ ಕೊಂದು ನಾನೇ ಸತ್ತೆ ಅಂತ ಗುಲ್ಲೆಬ್ಬಿಸಿ...ನನ್ನ ರಾಜ್ಯಾನೂ ಕಬಳಿಸಿದ್ದರು.........
ನಾನೂ ಇನ್ನೂ ಶಾಕ್ ನಿಂದ ಹೊರಬಂದಿರ್ಲಿಲ್ಲ... ನನ್ನ ಮಗಳಿಗೆ ಇದೇನಾಗಿದೆ...? ನಿಜಕ್ಕೂ ಪುನರ್ಜನ್ಮದ ನೆನಪಾಯ್ತಾ?? ಅಂದರೆ ಇವಳು ಕಿತ್ತೂರು ಚನ್ನಮ್ಮ ಆಗಿದ್ದಳಾ...???
ತಲೆ ಕೊಡವಿಕೊಂಡೆ... ಆದರೆ ಅವಳು ಎಂದಿನಂತೆ ಶಾಂತವಾಗೇ ಇದ್ದಳು, ಸ್ವಲ್ಪ ಸಮಯ ನಿದ್ದೆ ಮಂಪರು ಇದ್ದಿದ್ದು ಬಿಟ್ಟರೆ ...!! ನನಗೆ ಟೆನ್ಶನ್...!!!
“ಅಲ್ಲಮ್ಮಾ ..ಕನಸು ಕಂಡಿರಬೇಕು ನೀನು...” ಎಂದೆ...
ಇಲ್ಲಾ ಅಬ್ಬೂ...ನನಗೆ ಸುಮಾರು ವಿಷಯಗಳು ನೆನಪಾಗ್ತಿವೆ... ಎನ್ನುತ್ತಾ ಚನ್ನಮ್ಮ ಕಾರಾಗೃಹದಿಂದ ತಪ್ಪಿಸಿಕೊಂಡದ್ದು ತನ್ನಂತೇ ಇದ್ದ ಸುಂದರಮ್ಮ ಮತ್ತಿತರ ಬಂಟರ ಜೊತೆ ಕಾಡಿಗೆ ಹೋಗಿದ್ದು..ಹೀಗೆ ಹತ್ತು ಹಲವು ಚರಿತ್ರಕಾರರು ಅರಿತಿರದ ವಿಷಯ ಹೇಳತೊದಗಿದಳು... ಅವಳ ಮುಖದಲ್ಲಿ ವಿಶೇಷ ಕಾಂತಿ ಕಾಣುತ್ತಿತ್ತು... ನನಗಿಂತಾ ನೂರು ಪಾಲು ಹೆಚ್ಚು ಮನೋ ಸ್ಥೈರ್ಯ, ಗಾಂಭೀರ್ಯ ಅವಳ ಮಾತುಗಳಲ್ಲಿ ನೋಡಿ ..ನನಗೆ ನಿಜಕ್ಕೂ ಗಾಬರಿ, ಆಶ್ಚರ್ಯ, ಸಂತಸ ಎಲ್ಲಾ ಒಟ್ಟಿಗೆ ಆಗಲಾರಂಭ್ಸಿಸಿತು... !!!, ಅವಳು ತಿಳಿಸಿದ ಕೆಲವು ವಿಷಯಗಳು ಚರಿತ್ರೆಯ ಗೊತ್ತಿರುವ ವಿಷಯಗಳಿಗೆ ಹಲವು ಆಯಾಮ ಕೊಡುವಂತಿದ್ದವು.
“ಸುರು ಬೇಟಾ...ನೀನು..ನನ್ನ ಮಗಳು..ನಿನ್ನ ಹೆಸರು ಸುರಯಾ, ನೀನೀಗ ಕುವೈತಲ್ಲಿದ್ದೀಯಾ ...ಅನ್ನೋದು ಗೊತ್ತಲ್ಲ..??” ಎಂದೆ ಅವಳ ಮುಖವನ್ನೇ ಆತಂಕ ಭಯದಿಂದ ನೋಡ್ತಾ...
“ಹೌದು ಅಬ್ಬೂ, ನಾನು ಸುರಯ್ಯ ನಿನ್ನ ಮಗಳು, ಗೊತ್ತು..., ಆದ್ರೂ ಹಳೆಯದು ಬಹಳ ಸ್ಪಷ್ಟವಾಗಿ ನೆನಪಾಗ್ತಿದೆ....”
ಸ್ವಲ್ಪ ಸಮಾಧಾನವಾದರೂ ಗಾಬರಿ ಹೋಗಲಿಲ್ಲ...
“ಓಕೆ ಬೇಟಾ... ಓಕೆ..ಓಕೆ.. ಎಲ್ಲೂ ಈ ವಿಷಯ ಹೇಳಬೇಡ..ಅದರಲ್ಲೂ ನಿನ್ನ ಕನ್ನಡ ಕೂಟದ ಕನ್ನಡ ಕ್ಲಾಸಲ್ಲಿ ಯಾರಿಗೂ ಹೇಳಬೇಡ...ಅಯ್ತಾ...!! ಓಕೆ..ಬೇಟೂ...” ಎಂದೆ. ನನ್ನ ಆತಂಕ ಕಡಿಮೆ ಆಗಿರ್ಲಿಲ್ಲ, ಎಸಿ ಇದ್ರೂ ಮೈ ಬೆವರುತಿತ್ತು......
ಏನು ಮಾಡುವುದು?? ಇವಳು ತುಂಬಾ ಸ್ಪಷ್ಟವಾಗಿ ಪುನರ್ಜನ್ಮ ಪಡೆದ ಹಾಗೆ ಕಾಣುತ್ತಿದೆ... ಎಲ್ಲೂ ಓದಿರದ ಇವಳಿಗೆ ಚನ್ನಮ್ಮನ ವಿಷಯ ನಾನೂ ಹೇಳಿಲ್ಲ, ಅವಳ ಸ್ಕೂಲಲ್ಲೂ ಯಾವ ಪಠ್ಯವಿಷಯದಲ್ಲೂ ಬಂದಿಲ್ಲ....!!!!! ಎಷ್ಟೊಂದು ವಿಷಯ ಹೇಳ್ತಿದ್ದಾಳಲ್ಲಾ... ಈ ಸುಂದರಮ್ಮ ಯಾರು??? ನಾನೂ ಓದಿದ್ದು ನೆನಪಿಲ್ಲ.....!!! ಹೇಗೆ?? ಏನು??? ತಲೆ ಸುತ್ತತೊಡಗಿತು ಎಲ್ಲಾ ಯೋಚನೆ ಮನಸಿಗೆ ಬಂದು................
..................................................
“ಅಬ್ಬೂ...ಅಬ್ಬೂ....!!! ಅಬ್ಬೂ....” ನನ್ನ ತೋಳನ್ನು ಜೋರಾಗಿ ಅಲುಗಾಡಿಸಿದಳು ಸುರು,
“ಅಬ್ಬೂ ಇನ್ನೂ ಏಳಲ್ವಾ..?? ನನ್ನ ಕನ್ನಡ ಕ್ಲಾಸಿದೆ ಅಲ್ವಾ ೯.೩೦ ಗೆ... ಮರೆತ್ರಾ..???
ಹಾಂ..ಆಂ...ಎಸ್ ಬೇಟೂ... !! ವಾಸ್ತವಕ್ಕೆ ತಂದಿದ್ದು ನನ್ನ ಮಡದಿ ಕಾಫಿ ರೆಡಿ ಇದೆ ಬನ್ನಿ ಎನ್ನುವ ಮಾತು.... !!!!
ಅಯ್ಯೋ... !!! ಅಲಾರ್ಮ್ ಹೊಡೆದಾಗ ಎದ್ದು ಮತ್ತೆ ಮಲಗಿದವನಿಗೆ ಈ ಕನಸು ಬಿತ್ತಾ....???
ಕಣ್ಣುಜ್ಜಿದೆ, ಸುರು ತನ್ನ ಕನ್ನಡ ಕ್ಲಾಸಿನ ಪುಸ್ತಕ ಕೈಲಿ ಹಿಡಿದಿದ್ದು ಹೊರಡೋಕೆ ರೆಡಿ ಆಗಿದ್ದಳು...
“ಬೇಟೂ...ಚನ್ನಮ್ಮನ ವಿಷಯ ಮರೆತೆಯಾ...??” ಎಂದೆ
“ಯಾವ ಚನ್ನಮ್ಮ ??? ಅಬ್ಬೂ...!!! ಆಶ್ಚರ್ಯದಿಂದ ಅವಳು ನನ್ನತ್ತ ಪ್ರಶ್ನೆ ಎಸೆದಾಗಲೇ
“ಅಬ್ಬಾ..!!!” ನಿರಾಳ... ಈ ವರೆಗೂ ಕನಸು ಕಂಡಿದ್ದೆ ನಾನು...
ನಗುತ್ತಾ ಎದ್ದು ಹೋದೆ ಮುಖ ತೊಳೆದು ಕಾಫಿ ಕುಡಿದು ಸುರುನ ಕನ್ನಡ ಕ್ಲಾಸಿಗೆ ಕರೆದುಕೊಂಡು ಹೋಗಲು.
ಹಲ್ಲುಜ್ಜುತ್ತಾ ನೆನಪು ಮಾಡ್ಕೊಂಡೆ ಸುರು ಹೋದ ಸಲ ರಾಜ್ಯೋತ್ಸವ ಕಾರ್ಯಕ್ರಮಗಳಲ್ಲಿ ಕಿತ್ತೂರು ಚನ್ನಮ್ಮನ ಪಾತ್ರ ಮಾಡಿದ್ದು.

34 comments:

  1. ಇಂಟೆರೆಸ್ಟಿಂಗ್ ಕಥೆ :-)

    ReplyDelete
    Replies
    1. ಹಾಗೇ ನನ್ನ ಮನಸಿಗೆ ಬಂದದ್ದು...ವಾಸ್ತವತೆ ಏನೂ ಇಲ್ಲ...ಮಂಜುಳಾ...

      Delete
  2. Replies
    1. ಹಹಹ ನನಗೂ ಹಾಗೇ ಅನ್ನಿಸ್ತು ಅಂದ್ಕೊಂಡ್ಯಾ ಸುಧೀ...ಹಹಹ ನನ್ನದು ಕಲ್ಪನ..

      Delete
  3. ಆಜಾದೂ...
    ಬೆಸ್ತು ಬೀಳಿಸಿ ಬಿಟ್ಯಲ್ಲೊ.... !
    ಹ್ಹಾ ಹ್ಹಾ... !

    ಸುರು ಪುಟ್ಟು "ಕಿತ್ತೂರು ಚೆನ್ನಮ್ಮನಂತೆ" ಆಗಲಿ...
    ಅಪ್ರತಿಮ ದೇಶ ಭಕ್ತೆಯಾಗಲಿ..

    ನಮ್ಮೆಲ್ಲರ ಶುಭ ಹಾರೈಕೆಗಳು..

    ಆಶೀರ್ವಾದಗಳು...

    ReplyDelete
    Replies
    1. ಅದು ಚಿಕ್ಕಪ್ಪನ ಕಡೆಯಿಂದ ಗ್ಯಾರಂಟಿ ಅವಳಿಗೆ...ಆದರೂ ಹಾರೈಕೆಗೆ ಜೈ ಹೋ..

      Delete
  4. Olle bestuu .....rani channammana nenapinalli...
    Channagide....

    ReplyDelete
  5. ಆಜಾದ್ ಅವರೇ,
    ಚೆನ್ನಾಗಿದೆ :)
    ಅಭಿನವ ಕಿತ್ತೂರಿನ ರಾಣಿ ಸುರಯ್ಯಾಗೆ ಜಯವಾಗಲಿ :)

    ReplyDelete
    Replies
    1. ಅಪ್ಪ-ಅಮ್ಮಗೆ ನಮನ, ಪ್ರತಿಕ್ರಿಯೆಗೆ ಧನ್ಯವಾದ

      Delete
  6. ಅಬ್ಬಾ! ಸುರೂ ನಿಜವಾಗಿಯೂ ಚೆನ್ನಮ್ಮನಾಗಿದ್ದಳೇ ಎಂದು ಬೇಸ್ತು ಬಿದ್ದಿದ್ದೆ. ಚೆನ್ನಮ್ಮನಂತೆಯೇ ಅವಳು ಪ್ರತಿಭಾಶಾಲಿಯಾಗಲಿ, ಧೀರಳಾಗಲಿ ಎಂದು ಹಾರೈಸುತ್ತೇನೆ.

    ReplyDelete
  7. ಸುನಾಥಣ್ಣ ಧನ್ಯವಾದ, ಅವಳು ಚನ್ನಮ್ಮನ ಪಾತ್ರಮಾಡುವಾಗ ... ಪಿರಂಗಿಯವನಿಗೆ "ಮುಚ್ಚು ಬಾಯಿ ಚಾಂಡಾಲ..ಕಿತ್ತೂರು ನಿಮ್ಮಪ್ಪನ ಸೊತ್ತೇ" ಎನ್ನುವುದಿತ್ತು... ಅವಳಿಗೆ ಚಾಂಡಾಲ ಶಬ್ದ ಏನೋ ಒಂಥರಾ ಪವರ್ ಫುಲ್ ಅನ್ನಿಸ್ತಂತೆ ಮರ್ಯಾದೆಯಿಂದ ಬಯ್ಯೋಕೆ..ಹಹಹಹ

    ReplyDelete
  8. ಅಬ್ಬಾ..ಇದೇನು ಸಾರ್ ಈ ತರಹದ ಚಮಕ್ಕು!!...
    ಕಣ್ಣೆದುರಲ್ಲೇ ಕಿತ್ತೂರು ಚೆನ್ನಮ್ಮನ ಕಹಾನಿ ಹೇಳಿಬಿಟ್ಟಿರಿ..ಕಥೆಯ ಅಂತ್ಯದಲ್ಲಿ ನಾನೂ ಒಂದು ಸಲ ಅವಾಕ್ಕಾದೆ..ಪುನರ್ಜನ್ಮ ಅದು ಇದು ಇವೆಲ್ಲಾ ವಿಜ್ನಾನಿಗಳೂ ಸಂಬುತ್ತಾರಾ!! ಏನಿರಬಹುದು ಅಂದುಕೊಂಡು ಓದುತ್ತಿದ್ದೆ..ಕೊನೆಯಲ್ಲಿ ಒಳ್ಳೆಯ ಅಂತ್ಯವಿಟ್ಟಿರಿ..ಚೆನಾಗಿತ್ತು....
    ನೀವು ಬರೆದಿರುವ ಸಾಲುಗಳ ಜೊತೆಗೇ ನನ್ನ ಮನಸ್ಸು
    "ಚೆನ್ನಮ್ಮ ಹೋಗಿ ೩೦೦ ವರ್ಷದ ಮೇಲಾಯೊತೇನೋ,ಈಗ ಇಲ್ಲಿದೆ ಅಂದರೆ ನಡುವಿನ ನೂರಾರು ವರ್ಷ ಏನು ಮಾಡುತ್ತಿದ್ದರು??? ಬ್ರಿಟೀಷರೇ ಹಿಡಿದಿಟ್ಟಿದ್ದರೋ,ಕೆಳಗಿಂದ ಮೇಲೆ ಹೋಗಿ ವಾಪಸ್ಸು ಬರಲು ಅಷ್ಟು ಸಮಯ ಬೇಕೋ? ಅಥವಾ ಈ ಬ್ರಷ್ಟರಾಜಕಾರಣವನ್ನು ನೋಡಲಾರದೇ ಮತ್ತೊಮ್ಮೆ ಹುಟ್ಟಿಬಂದಳೋ ?? " ಹೀಗೇ ಏನೇನೋ ಯೋಚಿಸುತ್ತಿತ್ತು...
    ಅಷ್ಟರಲ್ಲಿ ಅದಕ್ಕೊಂದು ಬ್ರೇಕು ಹಾಕಿದ್ದು ನಿಮ್ಮ "“ಅಬ್ಬೂ...ಅಬ್ಬೂ....!!! ಅಬ್ಬೂ....” ನನ್ನ ತೋಳನ್ನು ಜೋರಾಗಿ ಅಲುಗಾಡಿಸಿದಳು ಸುರು,
    “ಅಬ್ಬೂ ಇನ್ನೂ ಏಳಲ್ವಾ..?? ನನ್ನ ಕನ್ನಡ ಕ್ಲಾಸಿದೆ ಅಲ್ವಾ ೯.೩೦ ಗೆ... ಮರೆತ್ರಾ..???
    ಹಾಂ..ಆಂ...ಎಸ್ ಬೇಟೂ... !! ವಾಸ್ತವಕ್ಕೆ ತಂದಿದ್ದು ನನ್ನ ಮಡದಿ ಕಾಫಿ ರೆಡಿ ಇದೆ ಬನ್ನಿ ಎನ್ನುವ ಮಾತು.... !!!!" ಎನ್ನುವ ಸಾಲುಗಳು...


    ಚೆನಾಗಿದೆ ಸಾರ್..ಬರಿತಾ ಇರಿ..ಓದ್ತಾ ಇರ್ತಿವಿ..
    ಹಾಂ,ಕೊನೆಗೊಂದು ಪ್ರಶ್ನೆ " ಆ ಸುಂದರಮ್ಮ ಯಾರು??"
    ನಮಸ್ತೆ..

    ReplyDelete
    Replies
    1. ಚಿನ್ಮಯ ನಮಸ್ಕಾರ ಮತ್ತು ಸ್ವಾಗತ ಜಲನಯನಕ್ಕೆ...
      ಧನ್ಯವಾದ ನಿಮ್ಮ ಪ್ರೋತ್ಸಾಹಕ್ಕೆ. ..ಸುಂದರಮ್ಮ ....!!! ನನಗೂ ಗೊತ್ತಿಲ್ಲ...ಚರಿತ್ರಕಾರರೂ ಅರಿತಿರದ ವಿಷಯ..??? ಹಹಹ ಹಾಗೆಯೇ ನನ್ನದೊಂದು ಊಹೆ ಹಾಗೂ ಆಗಿರಬಹುದಾ ಅಂತ ಅಷ್ಟೇ,,,ಇದಕ್ಕೆ ಆಧಾರ ಇಲ್ಲ.

      Delete
  9. ಈ ಟೀವಿ ಪ್ರೋಗ್ರಾಮ್ ಗಳಲ್ಲಿ ಪುನರ್ಜನ್ಮದ ಕಾರ್ಯಕ್ರಮಗಳನ್ನು ನೋಡಿ ಅವೆಲ್ಲ ಸುಳ್ಳು , ಬೋಗಸ್ ಎಂದು ಯಾವಾಗಲೂ ಹೇಳುವ ನಾನೇ ಒಂದು ಸಲಕ್ಕೆ ಅಣ್ಣ ಹೇಳುತ್ತಿದ್ದಾರೆಂದರೆ ನಿಜ ಇರಬಹುದೇ ಎಂಬ ತೀರ್ಮಾನಕ್ಕೆ ಬಂದು ಬಿಟ್ಟಿದ್ದೆ ..!!! ಅಬ್ಬಾ ನಿಮ್ಮ ಕನಸೇ.....

    ಏನೇ ಅಗಲಿ.. ಸುರು ಗೆ ಒಳ್ಳೆಯ ಭವಿಷ್ಯ ಅರಳಲಿ..
    ಸುರು ಬಗೆಗಿನ ನಿಮ್ಮ ಕನಸುಗಳೆಲ್ಲ ನನಸಾಗಲಿ ...(ಈ ತರಹದ್ದು ಬೇಡಾ ..)

    ReplyDelete
    Replies
    1. ಹಹಹ ಧನ್ಯವಾದ ಸಂಧ್ಯಾ... ಅವಳ ಕನಸು ಏನಿದೆಯೋ ಅದೇ ಆಗಲಿ... ಅಪ್ಪನಾಗಿ ಅವಳು ಸದಾ ನಗುತ್ತಾ ಸಂತೋಷದಿಂದಿರುವುದು ನನ್ನ ಆಶಯ ಹಾರೈಕೆ ಕನಸು...

      Delete
  10. ಒಳ್ಳೆಯ ಜನ್ಮಾಂತರ ಕಾರ್ಯಕ್ರಮ ನೋಡ್ದಂಗಾಯ್ತು.

    ಬಲೇ ಯಾಮಾರಿಸ್ತೀರಪ್ಪಾ ನೀವು.

    ಕಡೇ ಸಾಲಿನವರೆಗೂ ಗುಟ್ಟು ಬಿಟ್ಟುಕೊಡದೆ ಪುನರ್ಜನ್ಮ ಪ್ರಸ್ತಾವನೆ ಮಾಡಿದ್ದೀರಪ್ಪ.

    ಸುರಯ್ಯಾ ದೇದೀಪ್ಯಮಾನವಾಗಿ ಬೆಳಗಲಿ.

    ReplyDelete
    Replies
    1. ಬದರಿ, ಯಾಕೋ ಹೀಗೇ ಒಂದು ಕ್ರೇಸಿ ಐಡಿಯಾ ಬಂತು... ವಿಜ್ಞಾನಿಗಳಿಗೆ ಕ್ರೇಜಿ ಐಡಿಯಾ ಬರದಿದ್ದರೆ ಅವರು ಆ ಫೀಲ್ಡ್ ಗೇ ನಾಲಾಯಕ್ಕು ಎನ್ನುತ್ತಿದ್ದರು ನಮ್ಮ ಪ್ರೊಫೆಸರ್ ಅದು ನೆನಪಾಯ್ತು...ಧನ್ಯವಾದ

      Delete
  11. Replies
    1. ಧನ್ಯವಾದ ಅನಿತಾವ್ರೆ... ಅಂತೂ ಕಾಮೆಂಟ್ ಬಿತ್ತಲ್ಲಾ...ಹಾಗೆಯೇ ಸ್ವಾಗತ ನಿಮಗೆ ನನ್ನ ಬ್ಲಾಗಿಗೆ

      Delete
  12. ಅಜಾದ್,
    ಜನ್ಮಾಂತರ ಕಾರ್ಯಕ್ರಮವನ್ನು ಮತ್ತೆ ನೋಡಿದಂತೆ ಆಯ್ತು...
    ಕೊನೆಯವರೆಗೂ ಸಸ್ಪೆನ್ಸ್ ಚೆನ್ನಾಗಿತ್ತು...

    ReplyDelete
    Replies
    1. ಶಿವು ಧನ್ಯವಾದ...ಕ್ರೇಜಿ ಐಡಿಯಾಗೊಂದು ನಿರ್ಗಮನ ಹಾದಿ ಈ ಲೇಖನ ಅಷ್ಟೇ...

      Delete
  13. ಭಲೇ..ಭಲೇ.. ಕನ್ನಡ ತರಗತಿ ಬಂದ ಕಿತ್ತೂರು ಚೆನ್ನಮ್ಮ... ಆಹಾ..!! ಯಾರಲ್ಲಿ ಈ ಕನಸು ಕಾಣುತ್ತಿರುವ ವ್ಯಕ್ತಿಯನ್ನು ಕರೆತನ್ನಿ :))) ಚೆನ್ನಾಗಿದೆ ಸರ್ ಕನಸು

    ReplyDelete
    Replies
    1. ಕನಸು ಕಾಣುವ ಕನಸಿನ ಗುಂಗಿನಲ್ಲಿ ಬರೆದದ್ದಂತೂ ನಾನೇ...ಹಹಹ ಧನ್ಯವಾದ ಸುಗುಣ.

      Delete
  14. hha hha...
    nijakkU hedaridde...

    chennaagide sir nammannu emaarisisda riti....

    ReplyDelete
  15. ಧನ್ಯವಾದ ದಿನಕರ್... Random thoghts ಅಂತಾರಲ್ಲಾ ಹಾಗೆ...ಬಂದದ್ದು...

    ReplyDelete
  16. ಕುವೈತ್ ನ ಬಿರು ಬೇಸಿಗೆಯಲ್ಲೂ ಬೆನ್ನಿನ ಹುರಿಗೆ ಚಳಿ ಕೊಡುವ..ಸಣ್ಣ ಕಂಪನ ಕೊಡುವ ಲೇಖನ..ಕ್ಲೈಮಾಕ್ಸ್ ಓದದಿದ್ದರೆ ನಿಜವೇ ಎಂದು ನಂಬುವ ರೀತಿಯಲ್ಲಿದೆ ನಿಮ್ಮ ಲೇಖನ..ಸೂಪರ್ ಸರ್ಜೇ .ಅದ್ಭುತ...ಮಾಧ್ಯಮಗಳ ಹೊರೆ ಹೊರಿಸುವ ತಾಕತ್ ಎಷ್ಟರಮಟ್ಟಿಗೆ ನಮ್ಮೊಳಗೇ ನುಗ್ಗಿ ಬಿಟ್ಟಿದೆ..

    ReplyDelete
  17. ಚೆನ್ನಾಗಿದೆ.. ಅಂದಂಗೆ ಈ ಸುಂದ್ರಮ್ಮ ಯಾರು ? :P :D

    ReplyDelete
  18. :)ಎಷ್ಟು ಚೆನ್ನಾಗಿ ಬರೆಯುವ ಕಲೆ.ಬರೆಯುತ್ತಾ ಇರಿ ಸರ್.ಕ್ಲೈಮಾಕ್ಸ್ ನ ತಿರುವು ನಗು ಬರಿಸುತ್ತದೆ.

    ReplyDelete
  19. ಒಮ್ಮೆ ತಬ್ಬಿಬ್ಬಾಗಿಸಿಬಿಟ್ರಿ ನೀವು ... :).... ಬಹಳ ಚೆನ್ನಾಗಿದೆ... ಇನ್ನು ಸ್ವಲ್ಪ ಪೊಟ್ಸೋ ಹಾಕಬೇಕಿತ್ತು..

    ReplyDelete