Monday, November 26, 2012

ಇಳಿದುಬಿಡು ಇಳೆಗೆ(Photo: Indian Express, web)

ಇಳಿದುಬಿಡು ಇಳೆಗೆ

ನೀರಹೊತ್ತು ನಿಲ್ಲಬೇಡ ಬಹಳ ಹೊತ್ತು
ನೀ ಇಳಿದು ಬಿಡು ಕಾಯಿಸದೇ ಇಳೆಗೆ.
ಜಲದ ಬಸಿರ ಬಿಸಿಯುಗಿಯ ನೀ ಬಸಿದು,
ಹೊಲದ ಹಸಿರ ಕದಿವಂತೆ ಹೀಗೆ ಕಸಿದು,
ನೆಟ್ಟನೋಟದಿ ರೈತ ನಿಟ್ಟಿಸುವಂತೇಕೆ ನೀ
ನುಟ್ಟು ಶುಭ್ರ ಬಿಳಿಯುಡುಪು- ಬಾ ವಾಹಿನೀ
ಹರಿಸಿ ಹನಿಯ ರಾಶಿಯ ಬಾಯ್ಬಿಟ್ಟ ನೆಲಕೆ
ಗೇಯ್ಮೆಗಾತುರಿತ ನೆಲ, ಕೆರೆಯ ಜಲಕೆ
ಮೊಟ್ಟೆತುಂಬಿ ಬಸಿರಾಗಿದೆ ಬಾಳೆಮೀನು
ಕಾದಿದೆ ಆ ಹನಿಗೆ ವಟಗುಟ್ಟೊ ಕಪ್ಪೆ ತಾನು
ಜೀವ-ಜಲ-ಜೀವನ ಚಕ್ರ ಮನುವಿನದಲ್ಲ
ಇದ್ದು ಸದ್ದು ಮಾಡುವ ಆ ಋತುವಿನದಲ್ಲ
ನಿಸರ್ಗ ನಿಯಮ, ನೀನಿಳಿಯಲೇ ಬೇಕು
ಇಂದಿರಬಹುದು ಬರ ನಾಳೆ ಹನಿಯಲೇಬೇಕು
ನೀರಹೊತ್ತು ನಿಲ್ಲಬೇಡ ಬಹಳ ಹೊತ್ತು
ನೀ ಇಳಿದು ಬಿಡು ಕಾಯಿಸದೇ ಇಳೆಗೆ.

25 comments:

 1. ಸೊಗಸಾಗಿದೆ ಸರ್ಜಿ...ಬಹಳ ಸುಂದರ.
  ಮಳೆಯಿಲ್ಲದೆ ಇಳೆಗೆ ಕಳೆಯಿಲ್ಲ..ಇಳಿದು ಬಾ ತಾಯಿ ಇಳಿದು ಬಂದೆ ಬಿಡು...
  ಸುಂದರ ಸಾಲುಗಳು...

  ReplyDelete
  Replies
  1. ಶ್ರೀಮನ್...ಈ ಕವಿತೆಯ ಏನೇ ಒಳಿತಿದ್ದರೂ...ಅದಕ್ಕೆ ಅರ್ಧ ಶ್ರೇಯ ನಿಮಗೆ ಸಲ್ಲಬೇಕು...ನಿಮ್ಮ ಕವನ ಫೇಸ್ಬುಕ್ಕಲ್ಲಿ (3K) ನೋಡಿ ಬರೆದದ್ದು...ಧನ್ಯವಾದ

   Delete
 2. ಜಗದ ಸಮಸ್ತ ಚರಾ ಚರಗಳು ಮಳೆ ಹನಿಗೆ ಕಾದ ದಾಹಿಗಳೇ. ಅದನ್ನು ಎಷ್ಟು ಆರ್ಧವಾಗಿ ಚಿತ್ರಿಸಿದ್ದೀರ. ಬಹಳ ಖುಷಿಕೊಟ್ಟ ರಚನೆ.

  ReplyDelete
  Replies
  1. ಬದರಿ ಹನಿಯ ತನನ ನಿಮ್ಮ ಮನ ತುಂಬಿದ್ದರೆ ಅದು ನಿಮ್ಮಭಿಮಾನ...ಧನ್ಯವಾದ

   Delete
 3. ಹನಿಯ ಕರೆದ ಪರಿಗೆ ಹನಿ ಹನಿಯಲಿ. ಚೆನ್ನಾಗಿದೆ

  ReplyDelete
 4. Replies
  1. ತುಂಬಾ ತುಂಬಾ ತುಂಬಾ ಚನ್ನಾಗಿದೆ... ಬಹಳ ಬಹಳ ಖುಷಿ ಕೊಟ್ಟಿತು.. ಅದೇ ಖುಷಿಯಲ್ಲಿ ನಾಲ್ಕು ಸಾಲು..

   'Cynical' ಈ ಮನುಷ್ಯ ಅಂತ ಮಾತ್ರ ಕರೆಯಬೇಡಿ ನನ್ನ :-)

   ಬೇಸರ ಗೊಂಡಿಹಳು ಆ ತಾಯಿ
   ಇಳೆಯ ಈ ಹುಲು ಮಾನವರಿಂದ
   ನಿಟ್ಟುಸಿರು ಬಿಟ್ಟು ಕಣ್ಣೀರಿಟ್ಟು
   ಭೋರ್ಗರೆದು ಬಂದಾಳು ಜೋಕೆ

   Delete
  2. ಸಂಧ್ಯಾ ತುಂಬಾ ಥ್ಯಾಂಕ್ಸ್ ...

   Delete
 5. ಅಸೀಮ ತೃಪ್ತಿ ನೀಡಿತು ಈ ಕವಿತೆ....ಸುಂದರ ಅತ್ಯಂತ ಸುಂದರ ....

  ReplyDelete
  Replies
  1. ಧನ್ಯವಾದ ಹರೀಶ್..ನನಗೂ ನಿಮ್ಮ ಪ್ರೋತ್ಸಾಹ ಅಸೀಮ ಖುಷಿ ನೀಡಿತು

   Delete
 6. ತುಂಬಾ ತುಂಬಾ ತುಂಬಾ ಚನ್ನಾಗಿದೆ... ಬಹಳ ಬಹಳ ಖುಷಿ ಕೊಟ್ಟಿತು.. ಅದೇ ಖುಷಿಯಲ್ಲಿ ನಾಲ್ಕು ಸಾಲು..

  'Cynical' ಈ ಮನುಷ್ಯ ಅಂತ ಮಾತ್ರ ಕರೆಯಬೇಡಿ ನನ್ನ :-)

  ಬೇಸರ ಗೊಂಡಿಹಳು ಆ ತಾಯಿ
  ಇಳೆಯ ಈ ಹುಲು ಮಾನವರಿಂದ
  ನಿಟ್ಟುಸಿರು ಬಿಟ್ಟು ಕಣ್ಣೀರಿಟ್ಟು
  ಭೋರ್ಗರೆದು ಬಂದಾಳು ಜೋಕೆ

  ReplyDelete
  Replies
  1. ದೀಪ್..ಸಿ-ನಿಕಾಲ್...ಅಂದ್ರೆ ಸಿಹಿ ತೆಗೆದಿದ್ದೀರಿ ಕವನದಿಂದ ..ಕವನವಾಗಿಸಿ..ಧನ್ಯವಾದ

   Delete
 7. ಆಜಾದ್ ಸರ್....
  ನೀರು ಓಡುವ ಬಗ್ಗೆ ಹಂಗೆ ಹಿಂಗೆ ಅಂತೆಲ್ಲಾ ಸುಮಾರು ಓದಿದ್ದೆ..ಇದು "ಜರಾ ಹಟ್ ಕೇ " ಅನಿಸಿತು...

  ಮೊಟ್ಟೆತುಂಬಿ ಬಸಿರಾಗಿದೆ ಬಾಳೆಮೀನು
  ಕಾದಿದೆ ಆ ಹನಿಗೆ ವಟಗುಟ್ಟೊ ಕಪ್ಪೆ ತಾನು

  ಈ ಸಾಲುಗಳು ಮತ್ತೆ ಮತ್ತೆ ಓದಿಸಿಕೊಳ್ಳುತ್ತಿವೆ..
  ಹಾಂ ಕವನದ ನಿರೂಪಣೆ ಇಷ್ಟವಾಯ್ತು..ಬರೆಯುತ್ತಿರಿ...ಓದುತ್ತಿರುತ್ತೇವೆ...

  ReplyDelete
  Replies
  1. dhanyavaada Chinmaya...ತುಂಬಾ ಸಂತೋಷ.. ಬಸಿರಾದ ಮೀನು ಮರಿ ಮಾಡುತ್ತೆ ಖಂಡಿತಾ

   Delete
 8. ಅಜಾದ್ ಸರ್;ಜಲದ ನೆಲಯ ಬಗ್ಗೆ ಇಂತಹ ಸುಂದರ ಕವಿತೆಯನ್ನು ಜಲನಯನರೇ ಬರೆಯಬಹುದು!!!

  ReplyDelete
  Replies
  1. ಡಾಕ್ಟರ್...ಧನ್ಯವಾದ ಅದು ನಿಮ್ಮ ಅಭಿಮಾನ...

   Delete
 9. ಕವಿಯ ಕರೆಗೆ ಮೇಘ ಕಣ್ಬಿಟ್ಟೀತೆ? ಅದು ಸಾಧ್ಯ! ೧೬ ಸಾಲುಗಳ ಸುನೀತವನ್ನೂ ಸಹ ಕನ್ನಡ ಕವಿಗಳು ಈ ಮೊದಲು ಬರೆದಿದ್ದಾರೆ. ನಿಮ್ಮದು ಹೆಮ್ಮೆಯ addition. ಅಭಿನಂದನೆಗಳು.

  ReplyDelete
 10. ಧನ್ಯವಾದ ಸುನಾಥಣ್ಣ ನಿಮ್ಮ ಹಾರೈಕೆಯ ಹನಿ ಬೀಳದಿದ್ದರೆ ಚಿಗುರು ಕವಿಗಳಿಗೆ ಚೇತನ ಸಿಗೋದು ಕಷ್ಟ,,, ೧೬ ಸಾಲುಗಳದ್ದು ಸುನೀತ ಎನ್ನುವ ಮಾತನ್ನು ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದ ಮತ್ತೊಮ್ಮೆ

  ReplyDelete
 11. 1st 2 lines tumba ishta aytu Sir.... :) raitara bhavane abhivyakti...

  ReplyDelete
  Replies
  1. ಇಳೆಯನು ತಣಿಸಲು, ಗಂಗೆಯನು ಆಮಂತ್ರಿಸಿದ ರೀತಿ ತುಂಬಾ ಚೆನ್ನಾಗಿತ್ತು ಸರ್.:-)

   Delete
  2. ಆವಾರಾ ಕಹಾಂ ಸೆ ಆಯಾ ಇನ್ ಬೇಮಾರೋಂಕಿ ದುನಿಯಾಂ ಮೆಂ...ವಾವ್ ಧನ್ಯವಾದ ರಾಘವ್

   Delete
 12. ಕಾವ್ಯಾ ಧನ್ಯವಾದ ನಿಮ್ಮ ಮೇಲುಕೋರಿಕೆಗೆ...

  ReplyDelete
 13. thumba chennagide.makkalige kalisalu padya sangraha pustakadalli barediduttene.dhanyavadagalu

  ReplyDelete