Monday, January 28, 2013

ಭೂಮಿ - ಬಾನಂಗಳ

.....ಆಶಯ.........

ಮೇಲೊಂದು ನೀಲಾಕಾಶ

ಹೇಳಬೇಡಿರಯ್ಯಾ ಶುದ್ಧ ಸುಳ್ಳು!

ಕೆಳಗೋ ಹರಡಿವೆ ಸಹಸ್ರಾರು

ಜೀವಗಳು, ಏಕೆ ಮತ್ತೊಂದು ಸುಳ್ಳು?

ರವಿ ಚಂದ್ರರು ಕೊಡಲು ಬೆಳಕು

ಹೆಸರು ಕೊಡಬೇಡಿ, ಏಕೆ ಮತ್ತೆ ಸುಳ್ಳು?


ಆಕಾಶವೆಲ್ಲಿಹುದು, ನೀಲಿ ಮೊದಲೇ ಅಲ್ಲ


ಕೆಳಗಡೆ ಗಾಳಿ, ನೀರು ಬೆಟ್ಟ ಮಣ್ಣು


ಜೀವ..?? ಯಾವುದು ..?? ಸತ್ತರೆ!!


ರವಿ ಚಂದ್ರ ಲಾಂದ್ರ ಬೆಳಕು..???


ಕಣ್ಣಿಗೆ ಕಾಣದಿರೆ..ಎಲ್ಲಾ ಥಳುಕು


ಬಂದ ನಿಮ್ಮ ಜೀವ ಕೊಲುವುದು ಹೀಗೇ


ಸಹಸ್ರಾರು ಜೀವ, ಭಾವ –ಎಲ್ಲಾ ಸೋಗೇ


ಸಾಲದ್ದಕ್ಕೆಲ್ಲೆಡೆ ಮತ, ಧರ್ಮ, ಜಾತಿ


ತಮ್ಮಲ್ಲೇ ಹೊಡೆದಾಟ, ಅಲ್ಲವೇ ಭ್ರಾಂತಿ?


ಮೀರಿ ಬಾಳಿ ಎಲ್ಲ ಮೇರೆಗಳ, ಅಹಂ ಗಳ


ಮತ್ತೆ ಹಸಿರುಡಲಿ ಭೂಮಿ, ನೀಲಿ ಬಾನಂಗಳ


ಆ ಸಹಬಾಳ್ವೆ ಈದ್ ನವಮಿ ಜೊತೆಜೊತೆಗೆ


ರಹೀಮನು ಬಯಸಲಿ ರಾಮನ ತೋಳ್ತೆಕ್ಕೆಗೆ

20 comments:

  1. ಸುಂದರ ಆಶಯ ಸರ್ಜಿ..
    ದೇವನೊಬ್ಬ ನಾಮ ಹಲವು...ಆ ನಾಮಗಳಿಗೆ ಬಣ್ಣ ಹಲವು..ಕೆಲವಕ್ಕೆ ಬಟ್ಟೆಯೇ ಲಾಂಛನ, ಕೆಲವಕ್ಕೆ ಗುರುತೇ ಲಾಂಛನ...ಹರಿವ ನೀರೆಲ್ಲವೂ ಆವಿಯಾಗುತ್ತೆ, ಇಲ್ಲ ಸಮುದ್ರ ಸೇರುತ್ತದೆ...ಅದು ಮತ್ತೆ ಭುವಿಗೆ ಇಳಿಯುತ್ತದೆ..ಮನುಜ ಧರ್ಮ ಎಂದು ಮಾಡಿ ಕಡೆಗೆ ಅದರಲ್ಲಿ ಸತ್ತರೆ ಸೃಷ್ಟಿ ಮಾಡಿದ ಭಗವಂತ ಕೂಡ ಹಣೆ ಹಣೆ ಚಚ್ಚಿಕೊಳ್ಳುತ್ತಾನೆ...
    .ಅರಿವಿಗೆ ಬಂದ ಮನುಜ ಮಾನವನಾಗುತ್ತಾನೆ...ಮರೆತರೆ ದಾನವನಾಗಿ ಕಾಡುತ್ತಾನೆ...ಸುಂದರ ಆಶಯ ತುಂಬಿದ ಕವನಗಳ ಸಾಲು ಮನಕ್ಕೆ ತಾಟುತ್ತದೆ !

    ReplyDelete
    Replies
    1. ಧನ್ಯವಾದ ಶ್ರೀಮನ್, ದಾನವ ಸಂಖ್ಯೆ ಹೆಚ್ಚಾಗ್ತಿದೆ... ಮನಸ್ಥಿತಿಯೂ ಬದಲಾಗ್ತಿದೆ...

      Delete
  2. "ಸಹಬಾಳ್ವೆ ಈದ್ ನವಮಿ ಜೊತೆಜೊತೆಗೆ" ಎನ್ನುವ ಕವಿಯ ಆಶಯವು ಜಗದ ಸಹಬಾಳ್ವೆ ಮತ್ತು ಶಾಂತಿಗೆ ನಿಜವಾದ ಸದುಪಾಯಗಳು.

    ರಹೀಮನು, ರಾಮನೂ ಮತ್ತು ರೋಮಿಯೋ ಸಹ ಹೆಗಲಿಗೆ ಹೆಗಲು ಕೊಟ್ಟು ಲಭ್ಯ ಭೂ ವರವನ್ನು ಹಸನಾಗಿಸಿದಾಗಲೇ ನಿಜ ಸ್ವರ್ಗ.

    ನಿಜವಾಗಲೂ ನಾಲ್ಕು ಕಾಲ ನಿಲ್ಲುವಂತ ಕಾವ್ಯ.

    ReplyDelete
    Replies
    1. ಬದರಿಯ ಬೆಂಬಲ ಇದ್ದರೆ ರಾಮ ರಹೀಮ ರಾಬರ್ಟ ಎಲ್ಲಾ ಮಡುಸ್ತೀನಿ ಬುದ್ದಿ...ಧನ್ಯವಾದ ನಿಮ್ಮ ಬೆನ್ತಟ್ಟುವಿಕೆಗೆ.

      Delete
  3. ಒಳ್ಳೆಯ ಕವಿತೆ, ಕವಿಯ ಆಶಯಕ್ಕೆ ಹೃದಯ ಪೂರ್ವಕ ನಮನಗಳು. ಜೈ ಹೊ ಅಜಾದ್ ಸರ್.

    ReplyDelete
    Replies
    1. ಬಾಲೂ ಜೈ ಹೋ, ಆಶಯ ಕಾಪಾಡ್ಕೊಂಡು ಹೋಗೋ ದೂ ಮುಖ್ಯನೇ....ಧನ್ಯವಾದ

      Delete
  4. ಈ ರೀತಿಯ ಸದಾಶಯಗಳೆಲ್ಲ ಮನುಕುಲಕ್ಕೆ ಉಂಟಾದರೆ... ಇಡೀ ಭೂಮಿಯೇ ನಂದಗೋಕುಲ... ನಟ್ಟಿರುಳಲ್ಲೂ ಬಾನಂಗಳದಲ್ಲೆಲ್ಲ ಬೆಳದಿಂಗಳು... ಬೆಳಗಾದರೆ ಬೆಳ್ಳಕ್ಕಿಗಳ ಹಿಂಡು... ಹಸಿರುಟ್ಟ ವನಸಿರಿ... ಎಲ್ಲೆಲ್ಲೂ ಕದನಗಳ ಸುಳುವಿಲ್ಲದ ನೆಮ್ಮದಿಯ ಬಾಳ್ವೆ! ರಕ್ಷಣೆಯ ದುಂದಿನ ಹಣ... ಬಡಬಗ್ಗರ ಬೆಚ್ಚನೆಯ ನೊಚ್ಚನೆಯ ಜೀವನದ ವೆಚ್ಚಕ್ಕೆ! ಇಂತಹ ಸದಭಿಪ್ರಾಯಗಳ ಕನಸಿನ ಮೂಟೆಗಳ ಸರದಾರ ಡಾ. ಅಜ್ಹಾದ್ ರವರ ಆಶಯ ಸಾಕಾರವಾಗಲೆಂದು ನಮ್ಮ ಒಮ್ಮತದ ದನಿಗೂಡಿಸೋಣ! :)

    ReplyDelete
    Replies
    1. ಸ್ವಾಗತ ಸುರೇಶ್ ನನ್ನ ಬ್ಲಾಗಿಗೆ, ನಿಮ್ಮ ಬ್ಲಾಗಿಗೂ ಇದೋ ಬಂದೆ...

      Delete
  5. ನಿಮ್ಮ ಆಶಯವೇ ನಮ್ಮದೂ
    ಇದಕಿರಲಿ ಅಸ್ತು ಎಲ್ಲ ದೈವಗಳದೂ

    ReplyDelete
    Replies
    1. ಧನ್ಯವಾದ ಸ್ವರ್ಣ... ಹೌದು ಆಶಯಗಳು ಸೇರಲಿ...

      Delete
  6. nimma aashayada kavana super...
    idu deshada adaashaya aagali ennuvudu nanna aashaya...

    kavana tumbaa chennaagide sir...

    ReplyDelete
    Replies
    1. ನಮ್ಮ ನಿಮ್ಮ ಎಲ್ಲರ ಆಶಯಕ್ಕೂ ಶುಭಾರಂಭವಾಗಲಿ.

      Delete
  7. ಎಲ್ಲರೊಳಗೊಂದಾಗು ಮಂಕುತಿಮ್ಮ......
    ಸುಂದರ ಆಶಯ ಸಾ...

    ReplyDelete
    Replies
    1. ಹೌದಾ ಚಿನ್ಮಯ...ಎಲ್ಲರೊಳಗೊಂದಾಗೋಣ...

      Delete
  8. ಎಷ್ಟು ಚಂದ ಬರದೀಯೋ ಗೆಳೆಯಾ.... !

    ಆಶಯ ತುಂಬಾ ಇಷ್ಟವಾಯ್ತು...

    ಅಭಿನಂದನೆಗಳು ಚಂದದ ಕವನಕ್ಕೆ...

    ReplyDelete
    Replies
    1. ಚಂದ ನಿನಗನ್ನಿಸಿದೆ...ಅದಕ್ಕಾದರೂ ನನ್ನ ಧನ್ಯವಾದ..

      Delete
  9. Sir..Bahala dinagala mele blog open maadide...ondu olleya kavana odi khushiyaaytu....

    ReplyDelete
  10. ಧನ್ಯವಾದ ಕವಿತಾ...ನಿಮ್ಮ ಬ್ಲಾಗ್ ಗೂ ನಾನು ಬಂದು ಬಹಳ ದಿನ ಆಯ್ತು...ಈಗ ಒಂದು ಸುತ್ತು ಹಾಕಿ ಬರುವೆ.

    ReplyDelete
  11. ಧರ್ಮ ಜಾತಿಗಳ ವಿಚಾರದಲ್ಲಿ ಕಿತ್ತಾಟ ಜಾಸ್ತಿಯಾಗುತ್ತಿರುವ ಈ ದಿನಗಳಲ್ಲಿ ಇಂಥಾ ಸದಾಶಯಗಳು ಹೆಚ್ಚು ಬೇಕಾಗಿವೆ

    ReplyDelete
  12. ಹೌದು...ದೀಪಸ್ಮಿತಾ...ಧನ್ಯವಾದ ನಿಮ್ಮ ಪ್ರೋತ್ಸಾಹಕ್ಕೆ.

    ReplyDelete