(Pic Source: http://www.vawnet.org/global/IWDSeries.php)
ನಿನ್ನಿಂದಲೇ
ಜೀವ ತಂತುಗಳಿವು ವರ್ಣವೆಲ್ಲಿಯದು
ಅಂಕುರದಲ್ಲೂ ಭೇದ
ಸೃಷ್ಟಿಗೆನ್ನಲೇ ಜೈ
ಒಂದಕ್ಕೆ ಎಕ್ಸ್ ಎಂಬ ಹೆಣ್ಣು
ಹೆಸರು
ಮತ್ತೊಂದಕ್ಕೆ ಬೀಗುವುದಕ್ಕೆಂದೇ
ವೈ?
ಹುಟ್ಟುವುದಕ್ಕೆ ಮುಂಚೆಯೇ
ತಲೆಬರಹ
ಮುಟ್ಟುವುದಕ್ಕೆ ಮೊದಲೇ ಕೋಮಲತೆ
ಯಾವುದೀ ನಿಯಮ ಏಕೆ ತಾರತಮ್ಯ
ಹೀಗೇ ಕೊರಗಬೇಕೇ ಪ್ರತಿ ತರುಲತೆ?
ಜೀವಾಂಕುರ ಸಾಧ್ಯವೇ ತಾಯಿ
ಇಲ್ಲದೇ?
ಮಡಿಲ ಮೆತ್ತೆ, ಅಮೃತ ಪಾನ, ಮಮತೆ
ಬೆಳೆದು ಬಲಗೊಳ್ಳಲು ಆ ಹಾಯಿ
ಇಲ್ಲದೇ?
ಅಮ್ಮ, ಸೋದರಿ, ಸತಿಯ ಆ
ಕಕ್ಕುಲತೆ
ಮರು ಹುಟ್ಟು ಅಮ್ಮನದು ಮಗಳಾಗಿ
ತಾಯಿ ತಂದೆಗೆ ತಾಯಿಯಾಗುವ ಪರಿ
ಸಂಸಾರ ನೌಕೆಗವಳು ಕುಶಲ ನಾವಿಕ
ಕುಗ್ಗದ ಕೊರಗದ ಕರಗದ ಚೈತನ್ಯ
ಸಿರಿ
ಹೆಣ್ಣೆಂದು ಛೀಮಾರಿ ಹುಟ್ಟಿಗೇ ಕೊಡಲಿ
ಸೊಸೆ-ಮಗಳಲಿ ತಾರತಮ್ಯ
ಹೆಣ್ಣಿಂದಲೇ
ಹೆಣ್ಣೇ ಹೆಣ್ಣಿಗೆ ವೈರಿ
ಹುಳುಕಿರೆ ಮನೆಯಲಿ
ಆಗಲಿ ಎಲ್ಲ ಶುಭಕೂ ಪ್ರಾರಂಭ ನಿನ್ನಿಂದಲೇ
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ದಿನದ ಶುಭಾಶಯಗಳು.
ReplyDeleteಹೆಣ್ಣೀನ ಔನತ್ಯ ಮತ್ತು ಆಕೆಯ ನೋವುಗಳ ಅತ್ಯುತ್ತಮ ವೈಜ್ಞಾನಿಕ ಚಿತ್ರಣ ಈ ಕವನ.
ಬದರಿ, ಧನ್ಯವಾದ
DeleteThis comment has been removed by the author.
ReplyDeleteಈ ಸುಂದರ ಮಾತುಗಳಿಗೆ ಧನ್ಯವಾದಗಳು ಆಜಾದ್ ಸರ್, ಯಾವಾಗಲೂ ಹೊಗಳಿಕೆಗೆ ಉಬ್ಬುವ ಮನಸು, ನಿಮ್ಮ ಈ ಸಾಲುಗಳಲ್ಲಿನ ಹೊಗಳಿಕೆ ಅನ್ನೋದಕ್ಕಿಂತಲೂ ಸೂಕ್ತ ಗುರುತಿಸುವಿಕೆ ಅಂದರೆ ಸರಿಯಾದೀತು, ಅದಕ್ಕೆ ನೀರಾಗಿಬಿಟ್ಟಿತು
ReplyDeleteನೀರೆಯ ನೀರಾಗುವಿಕೆಯಿಂದಲ್ಲವೇ ಹಸಿರುಸಿರು? ಧನ್ಯವಾದ
Deleteಹೆಣ್ಣೆಂದು ಛೀಮಾರಿ ಹುಟ್ಟಿಗೇ ಕೊಡಲಿ
ReplyDeleteಸೊಸೆ-ಮಗಳಲಿ ತಾರತಮ್ಯ ಹೆಣ್ಣಿಂದಲೇ
ಹೆಣ್ಣೇ ಹೆಣ್ಣಿಗೆ ವೈರಿ ಹುಳುಕಿರೆ ಮನೆಯಲಿ
ಆಗಲಿ ಎಲ್ಲ ಶುಭಕೂ ಪ್ರಾರಂಭ ನಿನ್ನಂದಲೇ
Super lines.... science nu mix maadi barediruvudu tumbaa chennagide...
ಕೊನೆಯಲ್ಲಿ ನಿನ್ನಿಂದಲೇ. ಸ್ವಲ್ಪ ತಪ್ಪಾಗಿದೆ. ಧನ್ಯವಾದ ಪುಟ್ಟಿ
Deleteವಿಜ್ಞಾನದ ಜೊತೆಜೊತೆಯಲಿ ಹೆಣ್ಣಿನೊಂದಿಗಿನ ಭಾವನಾತ್ಮಕ ಸಂಬಂಧವನ್ನು ತುಂಬಾ ಸುಂದರವಾಗಿ ಕವನದಲ್ಲಿ ಚಿತ್ರಿಸಿದ್ದಿರಿ ಸರ್...
ReplyDeleteಧನ್ಯವಾದಗಳು ವಿಶ್ವ ಮಹಿಳಾ ದಿನಾಚರಣೆಯ ಸಮಯದಲ್ಲಿ ಈ ಚಂದದ ಕವನಕ್ಕೆ..
ಮೌನರಾಗದಲ್ಲೇ ಮೆಚ್ಚಿದಕ್ಕೆ ಧನ್ಯವಾದ
Deleteಹೆಣ್ಣು ಎನ್ನುವ ಒಂದು ಶಕ್ತಿಯನ್ನು ಪರಿಪೂರ್ಣವಾಗಿ ಬಿಂಬಿಸಿದ್ದೀರಿ. ಪ್ರತಿಯೊಂದರ ಯಶಸ್ಸಿನ ಹಿಂದೆ ಕಾಣದ ಈ ಶಕ್ತಿ ನಿಂತಿರುತ್ತದೆ. ಇಲ್ಲಿ ಬದಲಾಗಬೇಕಾದ ನೋಟ ಒಂದು ಸರಿಯಾಗಿ ಬಿಟ್ಟರೆ ಹೆಣ್ಣಿಗೆ ಹೆಣ್ಣು ಸೇರಿ ಒಂದು ದೊಡ್ಡ ಶಕ್ತಿಯ ಸಮಾಗಮವಾಗಿಬಿಡುತ್ತದೆ. ನಮ್ಮ ವಸುಂಧರೆ ಸಂತಸದ ನಿಟ್ಟುಸಿರು ಬಿಡುತ್ತಾಳೆ. ಅಂತಹ ಶುಭ ಘಳಿಗೆ ಬರಲಿ ಎಂದು ಆಶಿಸುವ. ಸುಂದರ ಕವನ ಸರ್ ಹೆಣ್ಣಿನ ಪ್ರತಿಯೊಂದು ಹಂತವನ್ನು ಇಂಚು ಇಂಚಾಗಿ ದಾಖಲಿಸಿರುವ ಪದಗಳ ಜೋಡಣೆ ಬಲು ಸೊಗಸಾಗಿ ಒಂದು ಮಾಲೆಯಾಗಿ ಈ ಮಹಿಳಾಮಣಿಗಳ ಆಚರಣೆಗೆ ಸಾಕ್ಷಿಯಾಗಿ ನಿಂತಿದೆ
ReplyDeleteಶ್ರೀಮನ್ ಧನ್ಯವಾದ
Deleteಹೆಣ್ಣನ್ನು ಹೆಣ್ಣೇ ಪೂರ್ಣ ನಂಬಿ ಪ್ರೋತ್ಸಾಹಿಸದ ಹೊರತು
ಮೂರನೇ ನಂಬಿಕೆ ನಿಜವಾಗದು
ಅದ್ಭುತ ಸಾಲುಗಳು....
ReplyDeleteಜೀವಾಂಕುರ ಸಾಧ್ಯವೇ ತಾಯಿ ಇಲ್ಲದೇ?
ಮಡಿಲ ಮೆತ್ತೆ, ಅಮೃತ ಪಾನ, ಮಮತೆ
ಬೆಳೆದು ಬಲಗೊಳ್ಳಲು ಆ ಹಾಯಿ ಇಲ್ಲದೇ?
ಅಮ್ಮ, ಸೋದರಿ, ಸತಿಯ ಆ ಕಕ್ಕುಲತೆ
ಈ ಸಾಲುಗಳಂತು ವಾಹ್... ಜೈ ಹೊ ಆಜಾದಣ್ಣ... :)
ಧನ್ಯವಾದ ಕಾವ್ಯಾ ಶುಭವಾಗಲಿ ಹೆಣ್ಣು ಸಮುದಾಯಕ್ಕೆಲ್ಲಾ
Deleteಹುಟ್ಟುವುದಕ್ಕೆ ಮೊದಲೇ ತಾರತಮ್ಯ ..... ಮುಟ್ಟುವುದಕ್ಕೂ ಮೊದಲೇ ಕೋಮಲತೆ
ReplyDeleteನಿಜ ಸರ್ .... ತುಂಬಾ ಸೊಗಸಾಗಿ ಮನ ಮುಟ್ಟೋ ತರ ಬಿಂಬಿಸಿದ್ದೀರಿ ಮನದ ಭಾವಗಳನ್ನ :)
ಇಷ್ಟವಾಯ್ತು
ಭಾಗ್ಯ ಶುಭಾಶಯಗಳು ನಿಮಗೂ. ಧನ್ಯವಾದ
Deleteವಾಹ್ ವಾಹ್ ಅಜಾದ್ ಸರ್, ಬ್ಲಾಗ್ ಲೋಕದ ದಿಗ್ಗಜರೆಲ್ಲ ಇವತ್ತು ಹೆಣ್ಣಿನ ಬಗ್ಗೆ ಬರೆದು ನಮ್ಮನ್ನ ಇನ್ನೂ ಮೇಲಕ್ಕೇರಿಸಿ ಬಿಟ್ರಿ ಧನ್ಯವಾದಗಳು
ReplyDeleteಶುಭಾಶಯ ಮತ್ತೊಮ್ಮೆ
Deleteಸ್ವರ್ಣ ಧನ್ಯವಾದ
Beautiful write up sir. Hope that all women understand their God given gift and respect each other and men would also realize each woman's value in their lives. The world would be a much more beautiful place then! :)
ReplyDeleteThanks Kusum
DeleteMany many wishes for the Women: s day
ಹೆಣ್ಣು ಗಂಡೆಂಬ ಬೇಧಭಾವ ಸಲ್ಲದೆಂಬುದನ್ನ
ReplyDeleteಮೊದಲ ಸಾಲಲ್ಲೇ ಚೆನ್ನಾಗಿ ತಿಳಿಸಿದ್ದೀರ ಸರ್
>>
ಜೀವ ತಂತುಗಳಿವು ವರ್ಣವೆಲ್ಲಿಯದು
ಅಂಕುರದಲ್ಲೂ ಭೇದ ಸೃಷ್ಟಿಗೆನ್ನಲೇ ಜೈ
ಒಂದಕ್ಕೆ ಎಕ್ಸ್ ಎಂಬ ಹೆಣ್ಣು ಹೆಸರು
ಮತ್ತೊಂದಕ್ಕೆ ಬೀಗುವುದಕ್ಕೆಂದೇ ವೈ?
<<
ಸಖತ್ತಾದ ಕವನ
ಪ್ರಶ್ ಧನ್ಯವಾದ ಎಲ್ಲಾ ಹೆಣ್ಣಿನ ಕುಲಕ್ಕೆ ಶುಭವಾಗಲಿ
Deleteಮಹಿಳಾದಿನದಂದು ಮಹಿಳೆಯರಿಗೆ ಉತ್ತಮ ಕೊಡುಗೆ. ನಿಮ್ಮ ಜೊತೆಗೆ ನನ್ನ ಶುಭಾಶಯಗಳನ್ನೂ ಸೇರಿಸುತ್ತೇನೆ.
ReplyDeleteಖಂಡಿತಾ ಸುನಾಥಣ್ಣ. ಧನ್ಯವಾದ
Deleteಖಂಡಿತ ಸುನಾಥಣ್ಣ. ಧನ್ಯವಾದ
Deleteಮರು ಹುಟ್ಟು ಅಮ್ಮನದು ಮಗಳಾಗಿ
ReplyDeleteತಾಯಿ ತಂದೆಗೆ ತಾಯಿಯಾಗುವ ಪರಿ
ಸಂಸಾರ ನೌಕೆಗವಳು ಕುಶಲ ನಾವಿಕ
ಕುಗ್ಗದ ಕೊರಗದ ಕರಗದ ಚೈತನ್ಯ ಸಿರಿ
ಹೆಣ್ಣಿಗೆ ಇದಕ್ಕಿಂತ ಗೌರವ ಬೇಕೇ....ಚಂದದ ಸಾಲುಗಳು ಅಜಾದ್ ಭಾಯ್...
ಧನ್ಯವಾದ ದೀಪಾ....ನಿಮ್ಮಪ್ರೋತ್ಸಾಹದ ಎರಡು ಮಾತಿಗೆ
Deleteತುಂಬಾ ಇಷ್ಟವಾಯಿತು ಪುಟ್ಟಣ್ಣ...
ReplyDeleteಕಡಿಮೆ ಶಬ್ದಗಳಲಿ.. ಅರ್ಥಗರ್ಭಿತ ಕವನ...
ಶಭಾಸ್ !!
ಪ್ರಕಾಶೂ... ಈ ಬ್ಲಾಗಲ್ಲಿ ಇನ್ನೊಂದು ಕವನ ಹಾಕಲಿದ್ದೆ ಅಷ್ಟರಲ್ಲಿ ನಿನ್ನ ಈ ಬೆನ್ತಟ್ಟುವ ಪ್ರೋತ್ಸಾಹ ಧನ್ಯವಾದ...
Deleteಧನ್ಯವಾದಗಳು ಸರ್... ಈ ಕವನ ನಮ್ಮೆದುರು ನಿಮ್ಮ ಧ್ವನಿಯಲ್ಲಿ ಸಹ ಕೇಳುವಂತಾಯಿತು. ಬದಲಾವಣೆಗಳ ಅವಶ್ಯಕತೆ ಖಂಡಿತಾ ಇದೆ... ಹೆಣ್ಣಿನಲ್ಲಿರುವ ಕೀಳರಿಮೆ, ದ್ವೇಷ ಇಂತಹವು ತೊಲಗಬೇಕು... ಹೆಣ್ಣು-ಗಂಡೆಂಬ ಭೇದ ದೂರವಾಗಬೇಕು.
ReplyDeleteಕ್ಷಮೆಯಿರಲಿ ತಡವಾಗಿ ಕಾಮೆಂಟಿಸುತ್ತಿದ್ದೇನೆ
ವೈಜ್ಞಾನಿಕ ಚಿಂತನೆಯ , ವಿಜ್ಞಾನ ಕವಿಗೆ, ಜೈ ಹೊ. ಸರಳವಾಗಿ ವಿಚಾರವನ್ನು ಕವಿತೆಯ ಮೂಲಕ ಹೇಳಿದ್ದೀರಿ. ಜೈ ಜೈ ಹೊ .
ReplyDelete