Sunday, May 19, 2013

ಇತ್ನಾ ನಾ ಮುಝ್ ಸೆ ತೂ ಪ್ಯಾರ್ - ಈ ಪರಿ ಪ್ರೇಮ.

ಸ್ನೇಹಿತರೇ ಬಹಳ ದಿನಗಳ ನಂತರ ಹಿಂದಿಯ ಎರಡು ಹಳೆ ಮಾಧುರ್ಯಭರಿತ ಹಾಡುಗಳಿಗೆ (ಒಂದನ್ನು ಭಾವ ಮಂಥನದಲ್ಲಿ ಹಾಕಿದ್ದೇನೆ)..... ಕನ್ನಡ ಭಾವಾನುವಾದ ಮಾಡಿದ್ದೇನೆ ನಿಮ್ಮ ಅನಿಸಿಕೆಗೆ ಸ್ವಾಗತ..ತಿದ್ದುಪಡಿ ತಿಳಿಸಿ..ಧನ್ಯವಾದ.
(ಈ ಹಾಡು ವಿಶೇಷವಾಗಿ ನಿವೇದಿತಾ ಚಿರಂತನ್ ಹಾಕಿದ್ದ ಫೇಸ್ ಬುಕ್ ಪೋಸ್ಟಿನ ಪ್ರೇರಿತ)




ಚಿತ್ರ: ಛಾಯಾ (1961) ಗಾಯಕರು: ಲತಾ ಮಂಗೇಶ್ಕರ್, ತಲತ್ ಮಹಮೂದ್; ಸಂಗೀತ ಸಲೀಲ್ ಚೌಧುರಿ.
ಹಾಡು: ಇತನಾ ನ ಮುಝ್ ಸೆ ತೂ ಪ್ಯಾರ್ ಬಢಾ.....
ಕನ್ನಡ ಭಾವಾಂತರ : ಡಾ. ಆಜಾದ್ ಐ.ಎಸ್.

ಈ ಪರಿ ಪ್ರೇಮ

(ಹುಡುಗ)
ಈ ಪರಿ ನನಜೊತೆ ಪ್ರೇಮವೇ
ನಾ ನಿನ ಒಲವಿನ ಹರಿಕಾರ
ಕನಸಲೂ ಬಂದು ನೀ ಕಾಡದಿರು
ಕಣ್ಣಲೂ ನಿನ್ನದೇ ಚಿತ್ತಾರ ....II ಈ ಪರಿ ನನಜೊತೆ ಪ್ರೇಮವೇII
(ಹುಡುಗಿ)
ನಿನ ಜೊತೆ ನನಗೂ ಪ್ರೇಮವೇ
ಬರುವೆನು ಜತೆಯಲಿ ಜತೆಗಾರ
ಕನಸಲಿ ನೀನೂ ಕಾಡದಿರು
ಹೂಮನ ಹೊತ್ತ ಹೂಗಾರ ...
(ಹುಡುಗ) II ಈ ಪರಿ ನನಜೊತೆ ಪ್ರೇಮವೇII
ನನಗೊಂದೂ ಮನಸಿಗೆ ತೋಚದು
ನೀನಿಲ್ಲದೇ ಯಾವುದೂ ಕಾಣದು II2II
ನನಗೆಲ್ಲವೂ ನೀನೇ ಆಗಿರುವೆ
ನೀನಲ್ಲವೇ ಎನ ಮನ ಸಿಂಗಾರ
          II ಈ ಪರಿ ನನಜೊತೆ ಪ್ರೇಮವೇII ....ಪ.
ನೋವಲ್ಲೂ ನಲಿವಿದೆ ಕಣ್ಣಿನಲಿ
ಈ ಕಣ್ಣಿನ ಜಾದುವೇ ಸುಂದರ II2II
ಇನ್ನು ಏನೇ ಬರಲಿ ಜೀವನದಿ
ನನ ಹಣೆಯಲಿ ಮಿನುಗಲಿ ಸಿಂಧೂರ..
II ಈ ಪರಿ ನನಜೊತೆ ಪ್ರೇಮವೇII...ಪ.

12 comments:

  1. ಭಾವಾನುವಾದ ಭಾವರಂಜಿತವಾಗಿದೆ..

    ReplyDelete
  2. ಧನ್ಯವಾದ ದಿಲೀಪ್

    ReplyDelete
  3. ಓಪನಿಂಗ್ "ಈ ಪರಿ ನನಜೊತೆ ಪ್ರೇಮವೇ" ತುಂಬಾ ಚೆನ್ನಾಗಿ ಹೊಂದಿಕೊಂಡಿದೆ ಸಾರ್. ಖುಷಿಯಾಯಿತು ಭಾವಾನುವಾದಕ್ಕೆ.

    ReplyDelete
  4. ಚೆನಾಗಿದೆ ಸರ್....
    "ಹೂ ಮನ ಹೊತ್ತ ಹೂಗಾರ" ಇಷ್ಟವಾಯ್ತು..
    ಬರೆಯುತ್ತಿರಿ..ನಮಸ್ತೆ :)

    ReplyDelete
  5. Very finely inspired Sir, and turns out that this writing intern creates some more inspiration!

    Nimma padagala hoogalu seri aagide illi bhaavagala hoo haara!

    keep up the great work Sir. You simply rock.

    :) Kusuma

    ReplyDelete
  6. ಕುಸುಮ್...ಧನ್ಯವಾದ..ನಿನ್ನ ಪ್ರೋತ್ಸಾಹದ ಮಾತುಗಳಲ್ಲೂ ಭಾವಗಳ ಹೂಹಾರ ....

    ReplyDelete