ಚಿತ್ರ: ವಖ್ತ್ (೧೯೬೫) ಗಾಯಕಿ:
ಆಶಾ ಭೋಂಸಲೆ
ಸಂಗೀತ – ರವಿ
ಕೌನ್ ಆಯಾ ಕೆ ನಿಗಾಹೋಂ ಮೆ.....
ಯಾರೋ ಬಂದಂತೆ...
ಯಾರೋ ಬಂದಂತೆ ಮನಸು ಹಿಡಿತ
ತಪ್ಪಿ ಜಾರುತಿದೆ
ತನು ಮನ ಬಳಸಿ ನನ್ನ ಬರ ಸೆಳೆದು
ಹಾಡುತಿದೆ...II2II
ಯಾರೋ ಬಂದಂತೆ....
ನನ್ನವನ ಬರುವ ಸುದ್ದಿ ತರುತಲಿದೆ
ತಂಗಾಳಿ..II2II
ಮೈ ನವಿರೇಳಿಸೋ ನೆನಪು ತರುವ
ತಂಗಾಳಿ .II2II
……………………………ಆ ಆ ಆ ಆ ಆ...
ತನುವೂ ತೂಗಿದೇ...
ತನುವೂ ತೂಗಿದೆ ಮನ ಮುದದಿಂದ
ಹಾಡುತಿದೆ
ಇನಿಯನ ಸನಿಹ ಬಯಸಿ ನನ್ನನು ಇದು ಕಾಡುತಿದೆ
ಯಾರೋ ಬಂದಂತೆ IIಪII
ಯಾರ ಕೈ ಸ್ಪರ್ಶಕೆ ಈ ಬಾಹುಗಳು
ಬಾಗುತಿವೆ II2II
ಯಾರ ಕಾಣಲು ಕಣ್ಣು ಕನಸುಗಳು
ಸಾಗುತಿವೆ II2II
…………………….ಓಓಓಓ....
ಯಾರೋ ಎಳೆದಂತೇ...
ಯಾರೋ ಎಳೆದಂತೆ ನನ್ನ ಸೆರಗಲ್ಲೂ
ತುಡಿತವಿದೆ
ತನು ಮನ ಬಳಸಿ ನನ್ನ ಬರ ಸೆಳೆದು
ಹಾಡುತಿದೆ..
ಯಾರೋ ಬಂದಂತೆ
IIಪII
beautifully written lyrics.. amazing :D
ReplyDeleteThank you Nivi...
ReplyDeleteದೂಸರಾ ಬಾತಿಚ್ ನೈ ಆಜಾದ್ ಭೈ, ಮೂಲಕ್ಕಿಂತಲೂ ಭಾವಾರ್ಥ ಮನಸೆಳೆಯುತ್ತಿದೆ. ಉದಾ : "ಮೈ ನವಿರೇಳಿಸೋ ನೆನಪು ತರುವ ತಂಗಾಳಿ"
ReplyDeleteಅಂದಹಾಗೆ ಈ ಚಿತ್ರದ ಛಾಯಾಗ್ರಾಹಕರು ಧರಂ ಚೋಪ್ರಾ.
ಛಾಯಾ ನ ಬಿಡೊಲ್ಲ ನೀವು ಇನ್ನು ಗ್ರಾಹಕರು...ವಾಹ್ ವಾಹ್...ಬದರಿ..ಆಪ್ಕಾ ಜಬಾಬ್ ನಹೀಂ//ಕೋಳೀ ಕಬಾಬ್ ನಹೀ...
Deleteಬಹಳ ದಿನಗಳಿಂದ ಕಾಯುತ್ತಿದ್ದೆ. ಕೊನೆಗೂ ಸುಂದರವಾದ ಅನುವಾದವನ್ನು ಹಾಗು ಮೂಲಚಿತ್ರಣವನ್ನು ಕೊಟ್ಟಿರುವಿರಿ. ಖುಶಿಯಾಗಿದೆ..
ReplyDeleteಧನ್ಯವಾದ ಸುನಾಥಣ್ಣ...ನಿಮ್ಮ ಆಶೀರ್ವಾದಕ್ಕೆ...
Delete
ReplyDeleteನಮಗೆಲ್ಲಾ ಹಳೇ ಹಿಂದಿ ಹಾಡುಗಳ ಅನುವಾದ ಹೇಳಿಕೊಡುತ್ತಿರುವುದಕ್ಕೆ ತುಂಬಾ ಧನ್ಯವಾದ ಸರ್.... ನಿಮ್ಮ ಅನುವಾದ ಸಹ ಹಾಡಿಕೊಳ್ಳಬಹುದು... ತುಂಬಾ ಚೆನ್ನಾಗಿದೆ ಸರ್...
ಕವಿತೆ ಹಾಡುಗಳನ್ನು ಅನುವಾದ ಮಾಡುವುದು ಅಷ್ಟು ಸುಲಭವಲ್ಲ. ಒಳ್ಳೆ ಸಾಹಸ ಮಾಡಿದ್ದೀರಿ
ReplyDelete