ಬೆಲ್ಜಿಯಂ –
ಯೂರೋಪಿಗೆ ನನ್ನ ಎರಡನೇ ಭೇಟಿ ಈ ದೇಶಕ್ಕೆ ಎನ್ನುವ ಅಂಶ ಒಂದೆಡೆಯಾದರೆ “ಜೈವಿಕ ತಂತ್ರಜ್ಞಾನದ
ಅಂತರ ರಾಷ್ಟ್ರೀಯ ವಿಚಾರ ಸಂಕಿರಣ -೨೦೧೩” ಕ್ಕೆ ಹೋಗಿ ಅಲ್ಲಿ ಶೋಧ ಪತ್ರ ಮಂಡಿಸುವ ಖುಷಿ
ಇನ್ನೊಂದೆಡೆ. ಆದರೆ ಯಾತ್ರೆಯ ಕಡೆಯ ದಿನಗಳು ನನ್ನ ಒಳಗನ್ನು ಪರೀಕ್ಷಿಸುವ ದಿನಗಳಾಗಿದ್ದು
ಐರೋಪ್ಯ ದೇಶಗಳಲ್ಲಿ ನಮಗಿರುವ “ಶುದ್ಧ ಸಂಭಾವಿತರು” ಎನ್ನುವ ಭಾವನೆಗೆ ಧಕ್ಕೆ ಎನ್ನುವಂತಹ ಘಟನೆ ನಡೆದದ್ದು
ಮತ್ತು ನಂತರದ ಅನುಭವಗಳು...ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ....ಎಷ್ಟು ನಿಜ ಅಲ್ಲವೇ
? ಎನ್ನುವಂತೆ ಮಾಡಿದೆ.
ಬೆಲ್ಜಿಯಂ ನ
ರಾಜಧಾನಿ ಬ್ರಸಲ್ಸ್ ನಿಂದ ವಿಚಾರ ಸಂಕಿರಣ ನಡೆಯಬೇಕಿದ್ದ ಆಂಟ್ವೆರ್ಪ್ ವಿಶ್ವವಿದ್ಯಾಲಯ ಕ್ಕೆ ಬ್ರಸಲ್ಸ್
ವಿಮಾನ ನಿಲ್ದಾಣದಿಂದ ಮತ್ತು ವಾಪಸಿನಲ್ಲಿ ವಿಶ್ವವಿದ್ಯಾಲಯದಿಂದ ಬ್ರಸಲ್ಸ್ ವಿಮಾಣಕ್ಕೆ
ಕುವೈತಿನಲ್ಲಿದ್ದಾಗಲೇ ಟ್ಯಾಕ್ಸಿಗಾಗಿ ಮುಂಗಡ
ಬುಕಿಂಗ್ ಮಾಡಿದ್ದೆ ಹಾಗಾಗಿ ವಿಮಾನ ನಿಲ್ದಾಣದಲ್ಲಿ ನನ್ನ ಹೆಸರಿನ ಪ್ಲಕಾರ್ಡ್ ಹಿಡಿದಿದ್ದ
ಟ್ಯಾಕ್ಸಿ ಚಾಲಕನನ್ನು ನೋಡಿ “ಈ ಜನ ಎಷ್ಟು ಸಮಯ
ಪ್ರಜ್ಞೆ ಉಳ್ಳವರು ಎನಿಸಿದ್ದು ನಿಜ.
ಮೂರು ದಿನದ
ಕಾರ್ಯಕ್ರಮದ ಪ್ರಬಂಧ ಮಂಡನೆಗಳನ್ನು ಎರಡು ದಿನಕ್ಕೆ ಪೂರೈಸಿ ಮೂರನೇ ದಿನ ಬೆಲ್ಜಿಯಂ ನಗರ
ದರ್ಶನಕ್ಕೆ ಎಂದೇ ಮೀಸಲಿಡಿಸಿದ್ದು ಜುಲೈ ೧೦ಕ್ಕೆ ಗೆಂಟ್ ಪ್ರದೇಶದ ಗೆಂಟ್ ವಿಶ್ವವಿದ್ಯಾಲಯದಲ್ಲಿದ್ದ
ಮೀನುಗಾರಿಕಾ ಪದವೀಧರ ಸ್ನೇಹಿತರಿಬ್ಬರನ್ನು ನೋಡಿಬರುವ ನಿಶ್ಚಯ ಮಾಡಿ ಹೋಟಲ್ ರೂಮನ್ನು ಖಾಲಿ
ಮಾಡಿ ಹತ್ತಿರದ ಆಂಟ್ವರ್ಪ್ ಸೆಂಟ್ರಲ್ ರೈಲ್ವೇ ನಿಲ್ದಾಣಕ್ಕೆ ಹೊರಟೆ. ಲ್ಯಾಪ್ ಟಾಪಿನ
ಬ್ಯಾಗಲ್ಲಿ ಪಾಸ್ ಪೋರ್ಟ್, ಟಿಕೆಟ್ , ವಿಮಾ ಪತ್ರಗಳು ಮತ್ತು ಲ್ಯಾಪ್ ಟಾಪ್ ಇದ್ದಿದ್ದರಿಂದ
ಹೆಗಲಿಗೆ ಕತ್ತಿನ ತೂಗು ಹಾಕಿಕೊಂಡೆ, ಕತ್ತಿಗೆ ಕ್ಯಾಮರಾ ತೂಗುಹಾಕಿಕೊಂಡು ದೃಶ್ಯ ಸೆರೆಹಿಡಿಯಲು
ಅನುವಾಗುವಂತೆ ಮಾಡಿಕೊಂಡೆ. ಹೊರಬರುವಾಗ ಹೋಟೆಲ್ ನ ಚಿತ್ರಗಳು, ಸ್ಟೇಶನ್ ನ ಹೊರ ನೋಟ
ಸೆರೆಹಿಡಿದೆ.
ಟಿಕೆಟ್ ಕೊಂಡು ಮೊದಲ ಮಹಡಿಯಿಂದ ಹೊರಡಬೇಕಿದ್ದ ರೈಲನ್ನು ಹುಡುಕಿ ಹೊರಟೆ. ಅಲ್ಲೇ ಇದ್ದ ಕೆಲವರನ್ನು ಕೇಳಿದೆ... ಇಂಗ್ಲೀಷ್ ಸರಿಯಾಗಿ ಅರ್ಥವಾಗದ ಕೆಲವರು ಹೇಳಿದ್ದು ನನಗೆ ಅರ್ಥವಾಗಲಿಲ್ಲ. ಅಲ್ಲಿಯೇ ಇದ್ದ ಒಬ್ಬ ಅರೆಬರೆ ಇಂಗ್ಲೀಷಲ್ಲಿ ಈ ಎರಡನೇ ಸಾಲಿನಲ್ಲಿರುವ ರೈಲು ಹೋಗುತ್ತೆ ಎಂದ. ಇನ್ನೂ ಹತ್ತು ಹದಿನೈದು ನಿಮಿಷ ಬಾಕಿ ಇತ್ತು, ಬೆಳಗಿನ ತಿಂಡಿ ಸರಿಯಾಗಿ ಸಿಗದ ಕಾರಣ ಹೊರಡಲು ತಯಾರಾಗಿದ್ದೆ. ಅಲ್ಲಿಯೇ ಇದ್ದ ಬರ್ಗರ್ ಕಾರ್ನರ್ ಅದುಮಿಟ್ಟ ನನ್ನ ಹಸಿವನ್ನು ಜಾಗೃತಗೊಳಿಸಿತ್ತು.
ಸೂಟ್ ಕೇಸ್, ಲ್ಯಾಪ್ ಟಾಪ್, ಕ್ಯಾಮರಾ ಬ್ಯಾಗು, ಬಟ್ಟೆಯ ಕಾನ್ಫರೆನ್ಸ್ ಬ್ಯಾಗ್ ಎಲ್ಲವನ್ನೂ ಎತ್ತಿಕೊಂಡು ಅಲ್ಲೇ ಇದ್ದ ಚೇರಿನಲ್ಲಿ ಕುಳಿತು ಬರ್ಗರ್ ಗೆ ಆರ್ಡರ್ ಕೊಟ್ಟೆ.., ಹಾಗೆಯೇ ಸ್ಟೇಶನ್ನಿನ ವಿವಿಧ ಕಟ್ಟಡ ಸುಂದರ ದೃಶ್ಯಗಳನ್ನು ಸೆರೆ ಹಿಡಿದೆ. ಇನ್ನೇನು ೪-೫ ನಿಮಿಷ ಉಳಿದಿದೆ ನನ್ನ ಗೆಂಟ್ ಗೆ ಹೊರಡುವ ರೈಲಿನ ನಿರ್ಗಮನಕ್ಕೆ ಎನ್ನುವಾಗ ಹಣ ಕೊಟ್ಟು, ಹೆಗಲಿಗೆ ಲ್ಯಾಪ್ ಟಾಪ್ ಬಾಗ್, ಕುತ್ತಿಗೆಗೆ ಕ್ಯಾಮರಾ, ಒಂದು ಕೈಯಲ್ಲಿ ಕ್ಯಾಮರಾ ಬ್ಯಾಗ್ ಮತ್ತು ಕಾನ್ಫರೆನ್ಸ್ ಬ್ಯಾಗ್ ಇನ್ನೊಂದು ಕೈಯಲ್ಲಿ ಸೂಟ್ ಕೇಸಿನ ಟ್ರಾಲಿ ಹ್ಯಾಂಡಲ್ ತಗೊಂಡು ರೈಲಿನತ್ತ ಹೊರಟೆ. ಮುಂಚೆ ಅರ್ಧಂಬರ್ಧ ಇಂಗ್ಲೀಷಲ್ಲಿ ರೈಲಿನ ಬಗ್ಗೆ ಹೇಳಿದವನೂ ನನ್ನದೇ ರೈಲಿನತ್ತ ಬಂದ, ನೀವೂ ಇದೇ ರೈಲಿಗಾ ಎಂದಾಗ ಹೌದು ಎಂದ. ನಾನು ಹತ್ತಿದ ಬೋಗಿಗೇ ಅವನೂ ಹತ್ತಿದ. ಒಳ ಹತ್ತುವಾಗ ಟ್ರಾಲಿ ಹ್ಯಾಂಡಲ್ ಮಡಚಿ ಹಿಡಿಯನ್ನು ಹಿಡಿದು ಮೇಲೆ ಎತ್ತಿದಾಗ ಹಿಡಿ ಕೈಗೆ ಬಂದು ಬಾಗಿಲಬಳಿಯೇ ಆ ಸೂಟ್ ಕೇಸ್ ಕುಸಿದು ಬಿತ್ತು. ಮೂರನೇ ಸಾಲಿನಲ್ಲಿದ್ದ ಸೀಟಿನಲ್ಲಿ ಲ್ಯಾಪ್ ಟಾಪ್ ಬ್ಯಾಗ್, ಕಾನ್ಫರೆನ್ಸ್ ಬ್ಯಾಗ್, ಕ್ಯಾಮರಾ ಬ್ಯಾಗನ್ನು ಇಟ್ಟು ಸೂಟ್ ಕೇಸನ್ನು ತರಲು ಬಂದೆ. ಹಿಡಿ ಸರಿಮಾಡಲಾಗುವುದೇ ನೋಡಿದೆ, ಆಗಲಿಲ್ಲ.. ಹಾಗೇ ರೈಲ್ ಹೊರಡಲು 3 ನಿಮಿಷ ಇದೆ ಎಂದು ಸ್ಟೇಷನ್ ಗಡಿಯಾರದ ಮೂಲಕ ಖಚಿತ ಪಡಿಸಿಕೊಂಡು ಡಿಪಾರ್ಚರ್ ಗೇಟ್ ನ ಒಂದು ಚಿತ್ರ ತೆಗೆಯುವ ಉದ್ದೇಶದಿಂದ ಬಾಗಿಲಿಂದಲೇ ಕತ್ತು ಹೊರಚಾಚಿ ಫೋಟೋ ತೆಗೆದೆ.
ನಂತರ ಸೂಟ್ ಕೇಸ್ ತೆಗೆದುಕೊಂಡು ಸೀಟಿಗೆ ಬಂದು ಸೂಟ್ ಕೇಸನ್ನು ಮೇಲೆ ಲಗೇಜ್ ಸ್ಟಾಂಡಲ್ಲಿಟ್ಟೆ ಆಗಲೇ ಗೊತ್ತಾಗಿದ್ದು ನನ್ನ ಲ್ಯಾಪ್ ಟಾಪ್ ಅಲ್ಲಿಲ್ಲ ಎಂದು..!!!! ತಕ್ಷಣ ಆಚೀಚೆ ನೋಡಿದೆ..ನನ್ನ ಸೀಟಿನಿಂದ ಎರಡು ಸೀಟ್ ಮುಂದಕ್ಕೆ ಕುಳಿತಿದ್ದ ಆ ವ್ಯಕ್ತಿ ..ಅಗೋ ಅಗೋ...ಅಲ್ಲಿ ಅವನು ತಗೊಂಡು ಹೋಗ್ತಿದ್ದಾನೆ...!!! ಎಂದ,,ನನ್ನ ಕೋಪ ನೆತ್ತಿಗೇರಿತ್ತು..ಯೂ ಬ್ಲಡಿ...ಹಿಡಿಯೋಕೆ ಆಗ್ತಿರ್ಲಿಲ್ವಾ ಅವನ್ನ... ನೋಡ್ಕೊಂಡು ಕೂತಿದ್ದೀಯಾ..?? ಅಂತ ಕೂಗಾಡ್ತಾ (ನಾನು ಕೂಗಾಡಿದ್ದು ಕನ್ನಡದಲ್ಲೇ..ಯಾಕಂದ್ರೆ ಅವನಿಗೆ ನನ್ನ ಭಾಷೆ ಅರ್ಥವಾಗುವ ಹಾಗಿರಲಿಲ್ಲ ಅಥವಾ ನಾನು ಹೇಳುವುದನ್ನು ಕೇಳುವ ಆಸಕ್ತಿಯೂ ಅವನಿಗಿರಲಿಲ್ಲ)...ತಕ್ಷಣ..ಥೀಫ್ ಥೀಫ್.. ಕ್ಯಾಚ್ ಹಿಮ್ ಎನ್ನುತ್ತಾ ಓಡಿದೆ... ಮುಂದಿನ ಬಾಗಿಲಿಂದ ಓಡಿದ ನನಗೆ ಸುಮಾರು 50-60 ಮೀಟರ್ ದೂರದಲ್ಲಿ ಕಂಕುಳಲ್ಲಿ ಲ್ಯಾಪ್ಟಾಪ್ ಬ್ಯಾಗ್ ಅದುಮಿ ಓಡುತ್ತಿದ್ದ ಸಣಕಲು ದೇಹದ ಕಪ್ಪು ಕೋಟಿನ ವ್ಯಕ್ತಿ ಸ್ಪಷ್ಟವಾಗಿ ಕಂಡ. ನನ್ನ ಕೂಗಾಟ ಕೇಳಿದ ಮುಮ್ದಿನ ಬೋಗಿಯ ಹತ್ತಿರವಿದ್ಧ ಗಾರ್ಡ್..ಯೂ ಕಮ್ ದಟ್ ಸೈಡ್ ಐ ವಿಲ್ ಚೇಸ್ ಹಿಮ್ ಫ್ರಂ ದಿಸ್ ಸೈಡ್ (ನೀನು ಆ ಕಡೆಯಿಂದ ಬಾ ನಾನು ಈ ಕಡೆಯಿಂದ ಅವನ್ನ ಅಟ್ಟಿಸಿ ಬರ್ತೇನೆ) ಎಂದ. ಕೆಳಗಿಳಿಯುವ ಮೆಟ್ಟಿನ ಗೊಂದಲ ಮೀರಿ ಸಾವರಿಸಿಕೊಂಡು ಓಡಿದೆ... ಥೀಫ್ ಥೀಫ್ಹ್ ಎನ್ನುತ್ತಾ... ಕೆಳಗಿಳಿದು ನೋಡಿದರೆ ಹೊರ ಹೋಗುವ ಸುಮಾರು ಎಂಟು ಗೇಟುಗಳು...!!! ಎಲ್ಲೂ ಕಾಣಲಿಲ್ಲ ಅವನು...!! ಅಷ್ಟರಲ್ಲಿ ಗಾರ್ಡ್ ಸಹಾ ಬಂದ...ಎಲ್ಲಿ ಸಿಕ್ಕನಾ..?? ಎಂದ... ಕೆಳಗಿಳಿದ ಮೇಲೆ ಅವನನ್ನು ಹುಡುಕುವುದು ಕಷ್ಟ..ಎಂದ. ಅಷ್ಟರಲ್ಲಿ ರೈಲ್ ಬಿಡುವ ಸಮಯ ಹತ್ತಿರವಾಯಿತೆಂದು ಜಾಗೃತಗೊಂಡ ನನ್ನ ಮನಸು ಹೇಳಿತು... ಓ!! ದೇವರೇ..ನನ್ನ ಸೂಟ್ ಕೇಸ್ ಮತ್ತು ಕ್ಯಾಮರಾ ಬ್ಯಾಗ್...ಎಂದುಕೊಂಡು ಕೊರಳು ನೋಡಿಕೊಂಡೆ..ನನ್ನ ಕ್ಯಾಮರಾ ಕತ್ತಿನಲ್ಲಿ ನೇತಾಡ್ತಾ ನನ್ನ ನೋಡಿ ನಕ್ಕಂತಾಯಿತು. ತಕ್ಷಣ ನನ್ನ ಸೂಟ್ ಕೇಸನ್ನು ತೆಗೆದುಕೊಳ್ಳಲು ಮೇಲಕ್ಕೆ ಮತ್ತೆ ಧಾವಿಸಿದೆ. ತಿಂದಿದ್ದ ಬರ್ಗರ್ ಖಾಲಿ ಆಗಿತ್ತೇನೋ...ಬಾಯಿ ಒಣಗಿತ್ತು. ಬೋಗಿಗೆ ಹೋಗಿ ಲಗೇಜ್ ಸ್ಟಾಂಡ್ ನಿಂದ ಸೂಟ್ ಕೇಸ್ ಇಳಿಸಿ ಕ್ಯಾಮರಾ ಬ್ಯಾಗ್ ಮತ್ತು ಬಟ್ಟೆಯ ಕಾನ್ಫರೆನ್ಸ್ ಬ್ಯಾಗ್ ತಗೊಂಡು ಕೆಳಗಿಳಿದೆ. ನೀವು ತಕ್ಷಣ ರೈಲ್ವೇ ಪೋಲೀಸ್ ಸ್ಟೇಶನ್ ಗೆ ಹೋಗಿ ಕಂಪ್ಲೇಂಟ್ ಕೊಡಿ ಅದು ನಿಮಗೆ ಪಾಸ್ ಪೋರ್ಟ್ ಸಿಗಲು ಸಹಾಯವಾಗುತ್ತದೆ ಮತ್ತು ನಿಮ್ಮ ಅದೃಷ್ಟ ನಿಮ್ಮ ಜೊತೆಗಿದ್ದರೆ ಕದ್ದ ಮಾಲು ಸಿಗಬಹುದು ಎಂದು ಸಲಹೆ ನೀಡಿದ ರೈಲ್ವೇ ಗಾರ್ಡ್.
ಉಳಿದುಕೊಂಡ ಹೋಟೆಲ್: ಇಬಿಸ್ ಆಂಟ್ವೆರ್ಪ್
ಅಂಟ್ವೆರ್ಪ್ ಸ್ಟೇಶನ್....
ಟಿಕೆಟ್ ಕೊಂಡು ಮೊದಲ ಮಹಡಿಯಿಂದ ಹೊರಡಬೇಕಿದ್ದ ರೈಲನ್ನು ಹುಡುಕಿ ಹೊರಟೆ. ಅಲ್ಲೇ ಇದ್ದ ಕೆಲವರನ್ನು ಕೇಳಿದೆ... ಇಂಗ್ಲೀಷ್ ಸರಿಯಾಗಿ ಅರ್ಥವಾಗದ ಕೆಲವರು ಹೇಳಿದ್ದು ನನಗೆ ಅರ್ಥವಾಗಲಿಲ್ಲ. ಅಲ್ಲಿಯೇ ಇದ್ದ ಒಬ್ಬ ಅರೆಬರೆ ಇಂಗ್ಲೀಷಲ್ಲಿ ಈ ಎರಡನೇ ಸಾಲಿನಲ್ಲಿರುವ ರೈಲು ಹೋಗುತ್ತೆ ಎಂದ. ಇನ್ನೂ ಹತ್ತು ಹದಿನೈದು ನಿಮಿಷ ಬಾಕಿ ಇತ್ತು, ಬೆಳಗಿನ ತಿಂಡಿ ಸರಿಯಾಗಿ ಸಿಗದ ಕಾರಣ ಹೊರಡಲು ತಯಾರಾಗಿದ್ದೆ. ಅಲ್ಲಿಯೇ ಇದ್ದ ಬರ್ಗರ್ ಕಾರ್ನರ್ ಅದುಮಿಟ್ಟ ನನ್ನ ಹಸಿವನ್ನು ಜಾಗೃತಗೊಳಿಸಿತ್ತು.
ಬರ್ಗರ್ ತಿಂದ ಜಾಗ
ಸೂಟ್ ಕೇಸ್, ಲ್ಯಾಪ್ ಟಾಪ್, ಕ್ಯಾಮರಾ ಬ್ಯಾಗು, ಬಟ್ಟೆಯ ಕಾನ್ಫರೆನ್ಸ್ ಬ್ಯಾಗ್ ಎಲ್ಲವನ್ನೂ ಎತ್ತಿಕೊಂಡು ಅಲ್ಲೇ ಇದ್ದ ಚೇರಿನಲ್ಲಿ ಕುಳಿತು ಬರ್ಗರ್ ಗೆ ಆರ್ಡರ್ ಕೊಟ್ಟೆ.., ಹಾಗೆಯೇ ಸ್ಟೇಶನ್ನಿನ ವಿವಿಧ ಕಟ್ಟಡ ಸುಂದರ ದೃಶ್ಯಗಳನ್ನು ಸೆರೆ ಹಿಡಿದೆ. ಇನ್ನೇನು ೪-೫ ನಿಮಿಷ ಉಳಿದಿದೆ ನನ್ನ ಗೆಂಟ್ ಗೆ ಹೊರಡುವ ರೈಲಿನ ನಿರ್ಗಮನಕ್ಕೆ ಎನ್ನುವಾಗ ಹಣ ಕೊಟ್ಟು, ಹೆಗಲಿಗೆ ಲ್ಯಾಪ್ ಟಾಪ್ ಬಾಗ್, ಕುತ್ತಿಗೆಗೆ ಕ್ಯಾಮರಾ, ಒಂದು ಕೈಯಲ್ಲಿ ಕ್ಯಾಮರಾ ಬ್ಯಾಗ್ ಮತ್ತು ಕಾನ್ಫರೆನ್ಸ್ ಬ್ಯಾಗ್ ಇನ್ನೊಂದು ಕೈಯಲ್ಲಿ ಸೂಟ್ ಕೇಸಿನ ಟ್ರಾಲಿ ಹ್ಯಾಂಡಲ್ ತಗೊಂಡು ರೈಲಿನತ್ತ ಹೊರಟೆ. ಮುಂಚೆ ಅರ್ಧಂಬರ್ಧ ಇಂಗ್ಲೀಷಲ್ಲಿ ರೈಲಿನ ಬಗ್ಗೆ ಹೇಳಿದವನೂ ನನ್ನದೇ ರೈಲಿನತ್ತ ಬಂದ, ನೀವೂ ಇದೇ ರೈಲಿಗಾ ಎಂದಾಗ ಹೌದು ಎಂದ. ನಾನು ಹತ್ತಿದ ಬೋಗಿಗೇ ಅವನೂ ಹತ್ತಿದ. ಒಳ ಹತ್ತುವಾಗ ಟ್ರಾಲಿ ಹ್ಯಾಂಡಲ್ ಮಡಚಿ ಹಿಡಿಯನ್ನು ಹಿಡಿದು ಮೇಲೆ ಎತ್ತಿದಾಗ ಹಿಡಿ ಕೈಗೆ ಬಂದು ಬಾಗಿಲಬಳಿಯೇ ಆ ಸೂಟ್ ಕೇಸ್ ಕುಸಿದು ಬಿತ್ತು. ಮೂರನೇ ಸಾಲಿನಲ್ಲಿದ್ದ ಸೀಟಿನಲ್ಲಿ ಲ್ಯಾಪ್ ಟಾಪ್ ಬ್ಯಾಗ್, ಕಾನ್ಫರೆನ್ಸ್ ಬ್ಯಾಗ್, ಕ್ಯಾಮರಾ ಬ್ಯಾಗನ್ನು ಇಟ್ಟು ಸೂಟ್ ಕೇಸನ್ನು ತರಲು ಬಂದೆ. ಹಿಡಿ ಸರಿಮಾಡಲಾಗುವುದೇ ನೋಡಿದೆ, ಆಗಲಿಲ್ಲ.. ಹಾಗೇ ರೈಲ್ ಹೊರಡಲು 3 ನಿಮಿಷ ಇದೆ ಎಂದು ಸ್ಟೇಷನ್ ಗಡಿಯಾರದ ಮೂಲಕ ಖಚಿತ ಪಡಿಸಿಕೊಂಡು ಡಿಪಾರ್ಚರ್ ಗೇಟ್ ನ ಒಂದು ಚಿತ್ರ ತೆಗೆಯುವ ಉದ್ದೇಶದಿಂದ ಬಾಗಿಲಿಂದಲೇ ಕತ್ತು ಹೊರಚಾಚಿ ಫೋಟೋ ತೆಗೆದೆ.
ಬಾಗಿಲಿಂದ ಹೊರಚಾಚಿದ ನನ್ನ ಕ್ಯಾಮರಾ ತೆಗೆದ ಚಿತ್ರ: ಲ್ಯಾಪ್ ಟಾಪ್ ಕಳುವಿಗೆ ಇದು ಅನುವಾಯ್ತಾ..???
ನಂತರ ಸೂಟ್ ಕೇಸ್ ತೆಗೆದುಕೊಂಡು ಸೀಟಿಗೆ ಬಂದು ಸೂಟ್ ಕೇಸನ್ನು ಮೇಲೆ ಲಗೇಜ್ ಸ್ಟಾಂಡಲ್ಲಿಟ್ಟೆ ಆಗಲೇ ಗೊತ್ತಾಗಿದ್ದು ನನ್ನ ಲ್ಯಾಪ್ ಟಾಪ್ ಅಲ್ಲಿಲ್ಲ ಎಂದು..!!!! ತಕ್ಷಣ ಆಚೀಚೆ ನೋಡಿದೆ..ನನ್ನ ಸೀಟಿನಿಂದ ಎರಡು ಸೀಟ್ ಮುಂದಕ್ಕೆ ಕುಳಿತಿದ್ದ ಆ ವ್ಯಕ್ತಿ ..ಅಗೋ ಅಗೋ...ಅಲ್ಲಿ ಅವನು ತಗೊಂಡು ಹೋಗ್ತಿದ್ದಾನೆ...!!! ಎಂದ,,ನನ್ನ ಕೋಪ ನೆತ್ತಿಗೇರಿತ್ತು..ಯೂ ಬ್ಲಡಿ...ಹಿಡಿಯೋಕೆ ಆಗ್ತಿರ್ಲಿಲ್ವಾ ಅವನ್ನ... ನೋಡ್ಕೊಂಡು ಕೂತಿದ್ದೀಯಾ..?? ಅಂತ ಕೂಗಾಡ್ತಾ (ನಾನು ಕೂಗಾಡಿದ್ದು ಕನ್ನಡದಲ್ಲೇ..ಯಾಕಂದ್ರೆ ಅವನಿಗೆ ನನ್ನ ಭಾಷೆ ಅರ್ಥವಾಗುವ ಹಾಗಿರಲಿಲ್ಲ ಅಥವಾ ನಾನು ಹೇಳುವುದನ್ನು ಕೇಳುವ ಆಸಕ್ತಿಯೂ ಅವನಿಗಿರಲಿಲ್ಲ)...ತಕ್ಷಣ..ಥೀಫ್ ಥೀಫ್.. ಕ್ಯಾಚ್ ಹಿಮ್ ಎನ್ನುತ್ತಾ ಓಡಿದೆ... ಮುಂದಿನ ಬಾಗಿಲಿಂದ ಓಡಿದ ನನಗೆ ಸುಮಾರು 50-60 ಮೀಟರ್ ದೂರದಲ್ಲಿ ಕಂಕುಳಲ್ಲಿ ಲ್ಯಾಪ್ಟಾಪ್ ಬ್ಯಾಗ್ ಅದುಮಿ ಓಡುತ್ತಿದ್ದ ಸಣಕಲು ದೇಹದ ಕಪ್ಪು ಕೋಟಿನ ವ್ಯಕ್ತಿ ಸ್ಪಷ್ಟವಾಗಿ ಕಂಡ. ನನ್ನ ಕೂಗಾಟ ಕೇಳಿದ ಮುಮ್ದಿನ ಬೋಗಿಯ ಹತ್ತಿರವಿದ್ಧ ಗಾರ್ಡ್..ಯೂ ಕಮ್ ದಟ್ ಸೈಡ್ ಐ ವಿಲ್ ಚೇಸ್ ಹಿಮ್ ಫ್ರಂ ದಿಸ್ ಸೈಡ್ (ನೀನು ಆ ಕಡೆಯಿಂದ ಬಾ ನಾನು ಈ ಕಡೆಯಿಂದ ಅವನ್ನ ಅಟ್ಟಿಸಿ ಬರ್ತೇನೆ) ಎಂದ. ಕೆಳಗಿಳಿಯುವ ಮೆಟ್ಟಿನ ಗೊಂದಲ ಮೀರಿ ಸಾವರಿಸಿಕೊಂಡು ಓಡಿದೆ... ಥೀಫ್ ಥೀಫ್ಹ್ ಎನ್ನುತ್ತಾ... ಕೆಳಗಿಳಿದು ನೋಡಿದರೆ ಹೊರ ಹೋಗುವ ಸುಮಾರು ಎಂಟು ಗೇಟುಗಳು...!!! ಎಲ್ಲೂ ಕಾಣಲಿಲ್ಲ ಅವನು...!! ಅಷ್ಟರಲ್ಲಿ ಗಾರ್ಡ್ ಸಹಾ ಬಂದ...ಎಲ್ಲಿ ಸಿಕ್ಕನಾ..?? ಎಂದ... ಕೆಳಗಿಳಿದ ಮೇಲೆ ಅವನನ್ನು ಹುಡುಕುವುದು ಕಷ್ಟ..ಎಂದ. ಅಷ್ಟರಲ್ಲಿ ರೈಲ್ ಬಿಡುವ ಸಮಯ ಹತ್ತಿರವಾಯಿತೆಂದು ಜಾಗೃತಗೊಂಡ ನನ್ನ ಮನಸು ಹೇಳಿತು... ಓ!! ದೇವರೇ..ನನ್ನ ಸೂಟ್ ಕೇಸ್ ಮತ್ತು ಕ್ಯಾಮರಾ ಬ್ಯಾಗ್...ಎಂದುಕೊಂಡು ಕೊರಳು ನೋಡಿಕೊಂಡೆ..ನನ್ನ ಕ್ಯಾಮರಾ ಕತ್ತಿನಲ್ಲಿ ನೇತಾಡ್ತಾ ನನ್ನ ನೋಡಿ ನಕ್ಕಂತಾಯಿತು. ತಕ್ಷಣ ನನ್ನ ಸೂಟ್ ಕೇಸನ್ನು ತೆಗೆದುಕೊಳ್ಳಲು ಮೇಲಕ್ಕೆ ಮತ್ತೆ ಧಾವಿಸಿದೆ. ತಿಂದಿದ್ದ ಬರ್ಗರ್ ಖಾಲಿ ಆಗಿತ್ತೇನೋ...ಬಾಯಿ ಒಣಗಿತ್ತು. ಬೋಗಿಗೆ ಹೋಗಿ ಲಗೇಜ್ ಸ್ಟಾಂಡ್ ನಿಂದ ಸೂಟ್ ಕೇಸ್ ಇಳಿಸಿ ಕ್ಯಾಮರಾ ಬ್ಯಾಗ್ ಮತ್ತು ಬಟ್ಟೆಯ ಕಾನ್ಫರೆನ್ಸ್ ಬ್ಯಾಗ್ ತಗೊಂಡು ಕೆಳಗಿಳಿದೆ. ನೀವು ತಕ್ಷಣ ರೈಲ್ವೇ ಪೋಲೀಸ್ ಸ್ಟೇಶನ್ ಗೆ ಹೋಗಿ ಕಂಪ್ಲೇಂಟ್ ಕೊಡಿ ಅದು ನಿಮಗೆ ಪಾಸ್ ಪೋರ್ಟ್ ಸಿಗಲು ಸಹಾಯವಾಗುತ್ತದೆ ಮತ್ತು ನಿಮ್ಮ ಅದೃಷ್ಟ ನಿಮ್ಮ ಜೊತೆಗಿದ್ದರೆ ಕದ್ದ ಮಾಲು ಸಿಗಬಹುದು ಎಂದು ಸಲಹೆ ನೀಡಿದ ರೈಲ್ವೇ ಗಾರ್ಡ್.
ಅಲ್ಲೇ ಬೆಂಚಿನ ಮೇಲೆ ಐದು ನಿಮಿಷ ಕೂತಿದ್ದು, ಬಟ್ಟೆ
ಬ್ಯಾಗಿನಲ್ಲಿದ್ದ ನೀರಿನ ಬಾಟಲಿಂದ ನೀರು ಕುಡಿದೆ, ಕಳ್ಳನನ್ನು ಹಿಂಬಾಲಿಸಿ ಹಿಡಿಯಲಾಗದೇ
ವಾಪಸ್ಸಾದ ಒಂದರ್ಧ ನಿಮಿಷ ದಿಕ್ಕೆಟ್ಟು ಕೂತಿದ್ದ ನನಗೆ ನೀರು ಕುಡಿದ ಮೇಲೆ ಮುಂದಾಗಬೇಕಾದ
ಕಾರ್ಯಗಳತ್ತ ಗಮನ ಹರಿಯಿತು. ಕೆಳಗಿಳಿದು ಬಂದು ಅಲ್ಲಿಯೇ ಇದ್ದ ಪೋಲೀಸ್ ಸ್ಟೇಶನ್ನಿಗೆ ಹೋದೆ.
ಅಲ್ಲಿದ್ದ ಡ್ಯೂಟಿ ಆಫೀಸರ್ ಗೆ ನನ್ನ ಲ್ಯಾಪ್ ಟಾಪ್ ಮತ್ತು ಡಾಕ್ಯುಮೆಂಟ್ಸ್ ಕಳ್ಲತನ ಆಗಿದೆ
ಎಂದೆ ಇಂಗ್ಲೀಷಲ್ಲಿ... ಸದ್ಯ ಆತನಿಗೆ ಇಂಗ್ಲೀಷ ಅರಿವಿತ್ತು. ದಯವಿಟ್ಟು ಕೂತಿರಿ, ಆಫೀಸರ್ ಬರ್ತಾರೆ
ಎಂದು ಅಲ್ಲಿಯೇ ಕುಳಿತುಕೊಳ್ಳಲು ಚೇರ್ ತೋರಿಸಿ ಹೋದ. ನಂತರ ಬಂದ ಆಫೀಸರ್...ಎಸ್ ಮಿಸ್ಟರ್
..ಫ್ರೆಂಚ್..?? ಡೋಯೆಶ್..?? ಎಂದು ನಿನಗೆ ಫ್ರೆಂಚ್ ಬರುತ್ತಾ ಡಚ್ ಭಾಷೆ ಬರುತ್ತಾ? ಎಂದು
ಕೇಳಿ.. ನಾನು ಇಂಗ್ಲೀಷ್ ಎಂದೆ..ಓಕೆ...ಕಮ್ ಎಂದು ಒಳಗಡೆಗೆ ಕರೆದೊಯ್ದ. ಕುಳಿತುಕೊಳ್ಳಲು ಚೇರ್
ಕೊಟ್ಟು...ಹೇಳಿ, ಏನಾಯ್ತು ಎಂದು ವಿವರಗಳನ್ನು ಬರೆದುಕೊಳ್ಳಲ್ಲು ಪ್ರಾರಂಭಿಸಿದ....
(ಮುಂದುವರೆಯುತ್ತದೆ)
(ಮುಂದುವರೆಯುತ್ತದೆ)
so sad annaya
ReplyDeleteThanks Maheshooo, DOM
Deleteಅಯ್ಯೋ ಸಾರ್ ಕಾಣದ ಊರಲ್ಲಿ, ಕುತ್ತಿಗೆ ಹಿಚುಕಿಕೋಳ್ಳುವಂತಹ ಘಟನೆ ವಿವರಿಸಿದ್ದೀರಾ.
ReplyDeleteಮೊದಲಿಂದ ಓದುತ್ತಾ ಬಂದ ಹಾಗೆ ಆಂಟ್ವರ್ಪ್ ಮತ್ತು ಸುತ್ತ ಮುತ್ತಲಿನ ಚಿತ್ರಗಳು ತುಂಬಾ ಚೆನ್ನಾಗಿ ಬಂದಿವೆ. ಕಡೆಕಡೆಗೆ ಮುಳ್ಳಿನ ಮೇಲೆ ಕುಳಿತಂತಾಯಿತು.
ಧಾಯಮಾಡಿ ಮುಂದುವರೆಸಿರಿ, ತಡೆದುಕೊಳ್ಳಲು ಆಗುತ್ತಿಲ್ಲ.
ಬದರಿ ಮುಂದುವರೆಸುವೆ.... ನಿಜಕ್ಕೂ ಆ ಎರಡೇ ದಿನದಲ್ಲಿ ಹಲವಾರು ಇಂತಹ ಘಟನೆಗಳ ಬಗ್ಗೆ ಕೇಳಿದೆ..
Deleteಬೆಲ್ಜಿಯಂ ದೇಶ ಅಂದ್ರೆ ಅಗಾಥಾ ಕ್ರಿಸ್ತಿ ನಿರ್ಮಿಸಿದ "ಹರ್ಕ್ಯೂಲ್ ಪೊರೋ"ನ ದೇಶ
ReplyDeleteನೆರೆಯ ಹಾಲೆಂಡ್ ಜೊತೆ ಜಿದ್ದಿನಿಂದ ಫುಟ್ಬಾಲ್ ಆಡೋ ದೇಶ ಎಂದು ತಿಳಿದಿದ್ದೆ..
ಇಂಥಾ ಜನಾನೂ ಇದ್ದಾರಾ ಅಲ್ಲಿ..ಮುಂದಿನ ಭಾಗಕ್ಕೆ ಕಾಯುತ್ತಿರುವೆ...!!
ಅಲ್ಲಿನ ಹಳೆಯ ಕಟ್ಟಡಗಳು ನಿಜಕ್ಕೂ ಅಗಾಥ(ಧ) ಉಮೇಶ್ ಭೈ...ಧನ್ಯವಾದ. ಬೇಗ ಮುಂದುವರೆಸ್ತೇನೆ...
Deleteಅಜಾದ್,
ReplyDeleteಬೆಲ್ಜಿಯಂನಲ್ಲಿ ನಿಮಗಾದ ಕೆಟ್ಟ ಅನುಭವವನ್ನು ನಾವೇ ಅಲ್ಲಿದ್ದ ಸ್ಥಿತಿಯಲ್ಲಿ ಕಲ್ಪಿಸಿಕೊಂಡರೆ ಭಯವಾಗುತ್ತೆ..ನೀರಿನಿಂದ ಹೊರತೆಗೆದ ಮೀನಿನಂತ ಪರಿಸ್ಥಿತಿಯಲ್ಲಿ ನೀವಿದ್ದಿರೆಂದುಕೊಳ್ಳುತ್ತೇನೆ. ಪಾಶ್ಚಿಮಾತ್ಯ ದೇಶಗಳ ಸಂಭಾವ್ಯತನದ ಕಲ್ಪನೆಯಲ್ಲಿದ್ದ ನಮಗೆ ನಿಮ್ಮ ಅನುಭವ ನಮ್ಮ ಭಾವನೆಗಳನ್ನು ಬದಲಾಯಿಸಿಕೊಳ್ಳುವಂತೆ ಮಾಡಿದೆ...ಸದ್ಯ ನೀವು ಎಲ್ಲಾ ವಿಧದಲ್ಲೂ ಕ್ಷೇಮವಾಗಿದ್ದೀರಿ ಅಂದುಕೊಳ್ಳುತ್ತೇನೆ...
ಶಿವು ಧನ್ಯವಾದ. ನಿಜ ನಿಮ್ಮ ಮಾತು ಅಲ್ಲಿಯೇ ಸಂಭಾವಿತ ಸಮಾಜ ಮತ್ತದರ ವಿರುಧ್ಹ ಮುಖ ಎರಡನ್ನೂ ಅನುಭವಿಸಿದೆ...ಧನ್ಯವಾದ. ನಾನು ಕ್ಷೇಮವಾಗಿ ಕುವೈತ್ ಸಕಾಲಕ್ಕೆ ತಲುಪಿದೆ.
Deletewhat an exciting journey but like a sour grape in the bunch, a bad experience... glad you had the strength of mind to overcome the tension, panic and think logically,.... waiting for the next part
ReplyDeleteThanks you Nivi..yes, I dont know I was unusually cool, I could feel it and the Police inspector expressed it too.
ReplyDeleteNo words...ಮುಂದಿನ ಭಾಗಕ್ಕೆ ಕಾಯುವೆವು.
ReplyDeleteThat was it....and follow the story...soon..
Deleteಸಕ್ಕತ್ ಅನುಭವವಾಗಿದೆ ... ಆ ಒಂದು ಪೋಟೋ ತೆಗೆಯೋಕ್ಕೆ ಹೋಗಿ ಲ್ಯಾಪ್ ಟಾಪ್ ಕಳೆದುಕೊಂಡಿರಿ. ಆದರೆ ಆ ಪೋಟೋ ಲೈಫ್ ಟೈಮ್ ಪೋಟೋ ಹಹಹ...
ReplyDeleteಹೇಗೋ ಎಲ್ಲ ತೊಂದರೆಗಳಿಂದ ಪಾರಾಗಿ ಕುವೈತಿಗೆ ಮರಳಿಬಂದಿರಲ್ಲಾ ಅದೇ ಖುಷಿ... ನಿಮಗೆ ಇದೊಂದು ಮರೆಯಲಾರದ ಅನುಭವಗಳ ಲಿಸ್ಟ್ ನಲ್ಲಿ ಎರಡನೆಯದು... :)
ನಿಜ ಸುಗುಣ.. ಒಂದೆರಡು ನಿಮಿಷದ ನಂತರ ಮನಸು ಸ್ಥಿಮಿತಕ್ಕೆ ಬಂತು. ಸದ್ಯ ಮುಂದಿನ ಹಾದಿಗೆ ಶಾಂತವಾಗಿ ಯೋಚಿಸೋ ಹಾಗಾಯ್ತು...
Delete‘ಇಸ್ ದುನಿಯಾ ಮೆ ಸಬ್ ಚೋರ್ ಚೋರ್ ಹೈಂ!’ ದೇವರೇ ಕಾಪಾಡಾಬೇಕು.
ReplyDeleteಸುನಾಥಣ್ಣ ನಿಜಕ್ಕೂ ನಾನು ಸ್ವಲ್ಪ ಸಡಿಲವಾಗಿದ್ದು ಯೂರೋಪ್ ಎಂದರೆ ಸಂಭಾವಿತರ ಪ್ರದೇಶ ಎನ್ನುವ ತಪ್ಪು ಕಲ್ಪನೆಯಿಂದ.
Deleteಚಿಕ್ಕ ವಯಸ್ಸಲ್ಲಿ ಕನ್ನಡಿ ಕೊಳ್ಳುವಾಗ ಬೆಲ್ಜಿಯಂ ಗ್ಲಾಸ್ ಕನ್ನಡಿ ಕೊಡಿ ಎಂದು ಕೇಳುತ್ತಿದ್ದೆವು. ಅದರಲ್ಲಿ ಪ್ರತಿಬಿಂಬ ಚೆನ್ನಾಗಿ ಕಾಣುತ್ತದೆ ಎಂದು ಅಮ್ಮ ಅಪ್ಪ ಹೇಳಿದ್ದರು. ಕೆಲವೊಮ್ಮೆ ಪ್ರತಿಬಿಂಬ ತೋರುವ ಕನ್ನಡಿಯು ವಿರೂಪಗೊಳ್ಳುತ್ತದೆ. ಆತನ ಅವಶ್ಯಕತೆ ಏನಿತ್ತೋ ಏನೋ.. ಆದರೆ ಪರಕೀಯ ದೇಶದಲ್ಲಿ ಇಂತಹ ಪ್ರಸಂಗಗಳು ನಮ್ಮ ಶಕ್ತಿಯನ್ನೇ ಉಡುಗಿಸಿಬಿಡುತ್ತೆ. ಬೇಸರದ ವಿಷಯ.. ಆದ್ರೆ ನೀವು ಆ ಪರಿಸ್ಥಿತಿಯಲ್ಲಿ ಧೃತಿಗೆಡದೇ ಸಮಯ ಪ್ರಜ್ಞೆ ತೋರಿದ ಪರಿಗೆ ಸಂತಸವಾಗುತ್ತದೆ. ಯಾರಿಗೂ ಈ ರೀತಿ ಆಗದಿರಲಿ
ReplyDeleteಬೆಲ್ಜಿಯಂ ಕನ್ನಡಿ ಬಿಡಿ ಶ್ರೀಕಾಂತ್ ಡೈಮಂಡೂ.... ಆದರೆ ಈ ಅನುಭವದ ನಂತರ ಏನು ಕೊಳ್ಳೋಕೂ ಯೋಚಿಸುವಹಾಗಾಯ್ತು... ಧನ್ಯವಾದ
Deleteಭಾಷೆ ಬರದ ನಾಡಿನಲ್ಲಿ ನಿನ್ನ ಅನುಭವ..
ReplyDeleteಬೇಸರ ಆಯ್ತು...ಪುಟ್ಟಣ್ಣಾ..ಮತ್ತೇನೂ ತೊಂದರೆ ಆಗಲಿಲ್ಲ ತಾನೆ ?
ಮುಂದಿನದು ಜಲ್ದಿ ಹಾಕು...
ಭಾಷೆ ಡಚ್ ಮತ್ತು ಫ್ರೆಂಚ್ ಎರಡೂ ಇವೆ... ಪ್ರಕಾಶೂ ಇಲ್ಲಿ ಇಂಗ್ಲೀಷ್ ಕಡಿಮೆಯೇ ಎನ್ನಬಹುದು...
Deleteಹಾಕ್ತೇನೆ ಬೇಗ ಉಳಿದ ಭಾಗ.
nenesikondare bhaya aguttappa...!!!
ReplyDeleteಹೌದು ಶಿವಪ್ರಕಾಶ್... ಆದರೆ ಈ ಥರದ ಹಲವು ಘಟನೆಗಳ ಬಗ್ಗೆ ಆಮೇಲೆ ತಿಳಿಯಿತು.
DeleteIdanna keli bejaaraaythu Azaadanna. Adroo intha experiencegalinda naavu estu kaleebahudu alwa? Aa kallanigo baree Laptop mari hotte horakollo chinthe......nimage nimma atyamoolya vastugala kalakonda chinte....aadre anubhavanaa kannige kattuva reeti vivarisiddeera.........mundina episodu odoke kutooohala....detective story tara. :P But nimma kathe rochakavaagide endashtey heluttene sadhyakke!
ReplyDeleteಅನುಭವ ಯಾವತ್ತೂ ಪಾಠ ಕಲಿಸುತ್ತವೆ..
DeleteAbbhaa.. gaabari aagatte odudare... nijakku kai kaalu naDuguva sannivesha...
ReplyDeleteMunduna bhaagakkaagi kaayuttene...
ದಿನಕರ್ ಧನ್ಯವಾದ
Deleteಅಯ್ಯಪ್ಪ ! ಎಂಥಾ ಅನುಭವ . ನಿಜಕ್ಕೂ ನಿಮ್ಮ ಸಮಯ ಸ್ಪೂರ್ತಿ ದೊಡ್ಡದು.
ReplyDeleteನಮ್ಮಲ್ಲಿ ಬಹುತೇಕ ಮಂದಿ ಇಂಥಾದೊಂದು ಘಟನೆ ಜರುಗಿದರೆ ಕುಸಿದು ಕುಳಿತು ಬಿಡುತ್ತೇವೆ.
ನಿಮ್ಮ ಶೋಧ ಪತ್ರಿಕೆಯ ಮಂಡನೆಗಾಗಿ ಅಭಿನಂದನೆಗಳು. ಅದರ ಬಗ್ಗೆ ಸ್ವಲ್ಪ ಬರೀಬಹುದಾ ?
ಮುಂದಿನ ಕಾಂತಿನಲ್ಲಿ ಸುಖಾಂತವಾಗುವುದೆಂದು ನಂಬಿದ್ದೇನೆ :)
ಸ್ವರ್ಣ..ಧನ್ಯವಾದ ಚಿಂತಿಸಿ ಫಲವಿಲ್ಲ ಎನ್ನುವುದು ಬಹುಬೇಗ ಮನದಟ್ಟಾಗುವುದು ಒಳ್ಳೆಯದು...ಇಲ್ಲವಾದರೆ ದಿಕ್ಕುತೋಚದು
ReplyDeleteazaad Sir,
ReplyDeletewhat next? ಮು೦ದೇನಾಯ್ತು ಹೇಳಿ......
ಇದೊ೦ದು suspense ಆಗಿದೆ........
sheeghradalle....Roopa....
Deleteಭಾಷೆ ಬರದ ಪರದೇಶದಲ್ಲಿ ಹೀಗೊಂದು ಪರದಾಟ.. ಫಾರಿನ್ ಗಳಲ್ಲೂ ಹೀಗೆ ಇಂಥಾ ಅನ್ಯಾಯ ಅಕ್ರಮಗಳು ನಡೆಯುತ್ತವೆ ಅಂತ ಕೇಳಿದಾಗ ಭಾರತದ ಬಗ್ಗೆ ಇಂಥಾ ವಿಚಾರಗಳ ಕುರಿತಾಗಿ ಕೀಳಾಗಿ ಮಾತಾಡುವವರ ಮುಂದೆ ಎದೆ ಸೆಟೆಸಿ ನಡೆಯುವಷ್ಟು ಸಮಾಧಾನ ಆಗತ್ತೆ ನೋಡಿ ಆಜಾದಣ್ಣ. ಎಂಥಾ ಪರದಾಟ ನಿಮ್ಮದು..!! ಮುಂದೇನಾಯ್ತು..??
ReplyDeleteಇಷ್ಟರಲ್ಲೇ ಮುಂದಿನ ಭಾಗ... ಭಾರತೀಯನೆಂಬ ಹೆಮ್ಮೆಯೆನಿಸುವ ಅನುಭವದೊಂದಿಗೆ...ಸತೀಶ್...
Delete