Saturday, July 27, 2013

ಕೂಗಿ ಕರೆದರೇ..ಓ ಎನ್ನುವ ಸಹೃದಯಿಗಳಿಗೆ ನಮನ.......

ಕೂಗಿ ಕರೆದರೇ..ಓ ಎನ್ನುವ ಸಹೃದಯಿಗಳಿಗೆ ನಮನ.......
ಇಲ್ಲಿ ಒಂದು ಮಾತು ಹೇಳಲೇ ಬೇಕು.
ನನ್ನ ಬ್ಯಾಗ್ ಎತ್ತಿಹೋದ ಮಹರಾಯನ ಕೃಶಕಾಯ ಮನಸಿನಿಂದ ಸ್ವಲ್ಪ ಮಾಸಿಹೋಗಲು ಕಾರಣವಾದದ್ದು... ಎಲ್ಲ ಕಡೆಯಿಂದ ಓ-ಗೊಟ್ಟ ಮಿತ್ರ ವೃಂದ, ಹೋಟೆಲ್ ರಿಸಪ್ಶನಿಸ್ಟ್, ಕುವೈತಿನಿಂದಲೇ ನಮ್ಮ ಆಫೀಸಿನಲ್ಲಿ ಎಲ್ಲಾ ಸಾಧ್ಯ ಸಹಾಯಕ್ಕೆ ದಾವಂತ ನೆಡೆಸಿದ ಮಿತ್ರ ಡಾ.ವಿನೋದ್. ಇನ್ನೊಂದು ಸ್ವಾರಸ್ಯ ಸಂಗತಿ ಈ ನನ್ನ ನಲ್ಮೆಯ ಡಾ.ವಿನೋದ್, ಡಾ. ಮಿಸಸ್ ವನಿತಾ ವಿನೋದ್ ನಡುವೆ ನನ್ನ ವಿಷಯವಾಗಿ...ನಡೆದದ್ದು.
ಆಂಟ್ವೆರ್ಪ್ ಪೋಲೀಸ್ ದೂರು ನೀಡಿ, ಅಲ್ಲಿಂದ ಹೋಟೆಲಿಗೆ ಬಂದು ಸ್ವಲ್ಪ ಸುಧಾರಿಸಿಕೊಂಡಾಗ ನೆನಪಾದದ್ದು ಕುವೈತ್ ಗೆ ಹೇಗೆ ಹೋಗುವುದು?? ಎನ್ನುವ ವಿಷಯ. ವಿಷಯ ತಿಳಿದಿರಲಿ ಎಂದು ನನ್ನ ಗ್ಯಾಲಕ್ಸಿ ತೆರೆದೆ. ಹೋಟಲ್ ನ ವೈ ಫೈ ಉಪಯೋಗಕ್ಕೆ ಬಂತು, ಫೇಸ್ಬುಕ್ ಓಪನ್ ಮಾಡಿದೆ, ವನಿತಾ ಆನ್ ಲೈನ್..!!! ಮುಳುಗುವನಿಗೆ ಹುಲ್ಲುಕಡ್ಡಿ ಸಾಕಂತೆ...!!! ಸರಿ ಒಂದು ಮೆಸೇಜ್ ಹಾಕಿದೆ ಚಾಟಲ್ಲಿ...
”ವನಿತಾ ನನ್ನ ಲ್ಯಾಪ್ ಟಾಪ್ ಮತ್ತು ಪಾಸ್ಫೋರ್ಟ್ ಇದ್ದ ಬ್ಯಾಗ್ ಕಳುವಾಗಿದೆ” ಅಂತ...
ನಂಬಲಿಲ್ಲ ಮೊದಲಿಗೆ ವನಿತಾ... ಹೌದಾ ಸರ್..!! ನಿಜವಾ..??  ಸದ್ಯಕ್ಕೆ ಆಗ್ಲೇ ಕೇಳಿದ್ದರಿಂದ..
“ಹೌದಮ್ಮಾ ತಾಯಿ, ಕಳುವಾಗಿದೆ...ನಾನೇ.. ಇದು ಹ್ಯಾಕ್ಡ್ ಮೆಸೇಜ್ ಅಲ್ಲ...ವಿನೋದ್ ಗೆ ಒಂದು ಫೋನ್ ಮಾಡಿ ಹೇಳು, ನಮ್ಮ ಹೈಯರ್ ಆಫೀಸರ್ಸ್ ಗೆ ಏನಾದರೂ ಹೆಲ್ಪ್ ಮಾಡೋಕೆ ಆಗುತ್ತಾ ಅನ್ನೋದನ್ನ ವಿಚಾರಿಸಲಿ”
FACEBOOK ಜಿಂದಾಬಾದ್

ಕಾಡ್ಗಿಚ್ಚಿನ ಹಾಗೆ ಸುದ್ದಿ ಕುವೈತಲ್ಲಿ...ನಮ್ಮ ಮಿತ್ರ ವೃಂದದಲ್ಲಿ ಸಂಚಲನ...
ಮಹೇಶ್ ಮತ್ತು ಸುಗುಣಾ...ಫೋನೇ ಮಾಡ್ಬಿಟ್ರು....
“ಸರ್ ನಮ್ಮಿಂದ ಏನಾದರೂ ಸಹಾಯ ಬೇಕಾದ್ರೆ...ಮರೀಬೇಡಿ...”
ವಿನೋದ ಸಹಾ ಮೊದಲಿಗೆ ನಂಬಲಿಲ್ಲವಂತೆ...
ಅಯ್ಯೋ ಇದು ಹ್ಯಾಕ್ ಆದ ಅಕೌಂಟ್ ಮೂಲಕ ಹಣ ಕೀಳೋಕೆ ಮಾಡೋ ತಂತ್ರ..
ಅಂತ..ಆದರೆ ವನಿತಾ..”ಇಲ್ಲಾ ಮುನ್ನಾ...ಆಜಾದ್ ಸರ್ ಮತ್ತೆ ಆನ್ ಲೈನ್ ಕಂಫರ್ಮ್ ಮಾಡಿದ್ದಾರೆ...(ಇಷ್ಟಕ್ಕೂ ಅವರು ಹಣ ಕೇಳ್ಲಿಲ್ಲ ಅಲ್ವಾ...ಅಂದಿರಬೇಕು) ವಿನೋದ್ ಕನ್ವಿನ್ಸ್ ಆಗಿ...ಅಲ್ಲಿ ಆಫೀಸಲ್ಲಿ ಎಲ್ಲರ ಸಂಪರ್ಕ ಶುರು ಮಾಡಿ ಆಗಿತ್ತು...ಆಗಾಗ್ಗೆ ನನಗೆ ಅಪ್ಡೇಟ್ ಮೆಸೇಜ್ ಸಹಾ...
ಇತ್ತ 11 ನೇ ತಾರೀಖು (10ಕ್ಕೆ ಸಂಜೆ ಅರ್ಜಿ ಗುಜ್ರಾಯಿಸಿ ಆಗಿತ್ತು) ಬೆಳಿಗ್ಗೆ ನನಗೆ ಮೊದಲ ಆದ್ಯತೆ ಕೊಟ್ಟ ಸೌಜನ್ಯ ಅಜಯ್ ಅಗರ್ವಾಲ್ ದು. ಸುಮಾರು ೪-೫ ಸಲ ಕುವೈತ್ ಭಾರತೀಯ ದೂತಾವಾಸಕ್ಕೆಫೋನಾಯಿಸಿದ್ದರು ನನ್ನ ಇತ್ತೀಚಿನ ಕುವೈತ್ ನಲ್ಲಿ ಇಶ್ಯೂ ಆದ ಪಾಸ್ಪೋರ್ಟ್ ಬಗ್ಗೆ ನಿಗದಿ ಪಡಿಸಿಕೊಳ್ಳಲು....ಊಂಹೂಂ... ಅಗಲೇ 11.00 ಗಂಟೆ..ಆಗಿತ್ತು..ಆದರೆ ನನಗೆ ಅಜಯ್ ರ ಆತ್ಮ ವಿಶ್ವಾಸ ಕಂಡು ಆತಂಕ ಮೂಡಲಿಲ್ಲ.
ಹೊರ ಬಂದು ಅಜಯ್ ರವರು ಆಜಾದ್ ಜೀ ನೋ ರೆಸ್ಪಾನ್ಸ್... ಫ್ರಂ ಕುವೈತ್ ಬಟ್ ಐ ವಿಲ್ ಕಾಲ್ ಎಗೈನ್ ಅಂಡ್ ಎಗೈನ್,,, ಅಂತ ಮುಖ್ಯ ಕಚೇರಿ ಕಡೆ ಹೊರಟರು...ಅಷ್ಟರಲ್ಲಿ ಕುವೈತಿಂದ ವಿನೋದ್ ಫೋನ್...
“ನಾನು ಇಲ್ಲಿ ಯಾರಿಗಾದರೂ ಕೇಳ್ತೇನೆ ಎಂಬಾಸಿಯಿಂದ ಅಲ್ಲಿಗೆ ಮೆಸೇಜ್ ಕಳ್ಸೋಕೆ ಟ್ರೈ ಮಾಡ್ತೀನಿ” ಅಂತ.
“ನೋಡು, ಟ್ರೈ ಮಾಡು.. ಆದರೆ ಅಜಯವ್ರು ಎರಡು ಗಂಟೆಯೊಳಗೆ ನನಗೆ ಪಾಸ್ಪೋರ್ಟ್ ಕೊಡ್ತೇನೆ ಅಂದಿದ್ದಾರೆ... ನೀನು ಅಲ್ಲಿಂದ ನನ್ನ ಪಾಸ್ಪೋರ್ಟ್ ಕಾಪಿ ಫ್ಯಾಕ್ಸ್ ಮಾಡಿದ್ದು ಅವರಿಗೆ ತಲುಪಿದೆ.” ಎಂದೆ
15 ನಿಮಿಷದ ನಂತರ ಒಳಬಂದ ಅಜಯ್
“ಡಾ. ಆಜಾದ್ ಒಂದು ನಿಮಿಷ ಕಣ್ಮುಚ್ಚಿ ಅಲ್ಲಾಹ್ ನ ಸ್ಮರಿಸಿ...ಈ ನನ್ನ ಕೈಲಿರೋ ಲಕೋಟೆಯಲ್ಲಿರೋ ದಾಖಲೆ ನಿಮಗೆ ಅನುಕೂಲ ಮಾಡಲಿ” ಎಂದು ಆಗ ತಾನೇ ಆಂಟ್ವೆರ್ಪ್ ಸೆಂಟ್ರಲ್ ಸ್ಟೇಶನ್ ನಿಂದ ಬಂದಿದ್ದ ಲಕೋಟೆ ಒಡೆದು ಹೊರತೆಗೆದದ್ದು
’ಪಾಸ್ಪೋರ್ಟ್..!!!!!”
ಓಪನ್ ಮಾಡಿದ್ರೆ....”ಛೇ... ಯಾರೋ ಲೀಸಾ ಜಾರ್ಜ್ ಅಂತೆ...”
ನನ್ನ ಹಾಗೇ ಆಂಟ್ವೆರ್ಪ್ ನಲ್ಲಿ ಕಳೆದು ಕೊಂಡಿದ್ದ ಲೀಸಾ ಜಾರ್ಜ್ ರ ಪಾಸ್ಪೋರ್ಟ್..!!!
“ಲಕ್ ನಿಮ್ಮದಾಗ್ಲಿಲ್ಲ... .. ಬಟ್ ಡೋಂಟ್ ವರಿ ಆಪ್ಕೆ ದೋಸ್ತ್ ಕೆ ಫ್ಯಾಕ್ಸ್ ಕೆ ಬೇಸಿಸ್ ಪರ್ ಮೆರೆ ಡಿಸ್ಕ್ರೀಶನ್ ಪರ್ ಆಪ್ಕೋ ದೋಪಹರ್ ದೋ ಕೆ ಅಂದರ್ ಪಾಸ್ಪೋರ್ಟ್ ದೂಂಗಾ...” ಎಂದರು ಖಚಿತವಾಗಿ..ತಮ್ಮ ಕೋಣೆಗೆ ಹೋಗುತ್ತಾ.
ಹತ್ತು ನಿಮಿಷದ ನಂತರ ಹೊರ ಬಂದು..
“ಕುವೈತ್ ನಿಂದ ಕಂಫ್ಹರ್ಮೇಶನ್ ಬಂತು ಆಜಾದ್..ಈಗ ೧೨.೩೦, ನಿಮಗೆ ಆದಷ್ಟು ಬೇಗ ಪಾಸ್ಪೋರ್ಟ್ ಕೊಡ್ತೇನೆ...ನಿಮ್ಮ ಡೀಟೈಲ್ಸ್ ಎಲ್ಲಾ ಸರಿಯಾಗಿದೆಯಾ ಮತ್ತೊಮ್ಮೆ ಚೆಕ್ ಮಾಡಿ... ಎಂಟ್ರಿ ಆದಮೇಲೆ ಕರೆಕ್ಟ್ ಮಾಡೋಕೆ ಕಷ್ಟ ಆಗುತ್ತೆ” ಎಂದರು.
ಅಷ್ಟರಲ್ಲಿ ಕುವೈತಿಂದ ವಿನೋದ್ ಫೋನು..!!
“ಸರ್ ಮಹೇಶ್ ಈಗ ಎಂಬಾಸಿಗೆ ಹೊರಟಿದ್ದಾರೆ ಅವರ ಸ್ನೇಹಿತನಿಗೆ ತಿಳಿದವರು ಅಲ್ಲಿದ್ದಾರಂತೆ ಅವರು ಫೋನ್ ಮಾಡಿಸ್ತಾರಂತೆ” ಎಂದಾಗ... “ಆಹಾ ಏನಿದು ? ಕೆಲವೊಮ್ಮೆ ಏನೂ ಆಗೊಲ್ಲ ಎನಿಸುವ ಹತಾಶೆ!! ಮರುಕ್ಷಣ ಎಲ್ಲೆಡೆಯಿಂದ ಎಲ್ಲಾ ಆಗುತ್ತೆ ಎನ್ನುವ ಸಾಂತ್ವನ.. ಭರವಸೆ...!!!!” ಬದುಕು ಇದೇ ಅಲ್ಲವೇ.. ಅನಿಸಿತು.
ಸರಿಯಾಗಿ ಮದ್ಯಾನ್ಹ ಒಂದು ಗಂಟೆಗೆ ಅಜಯ್ ರವರು ಹೊರಬಂದು ನನ್ನ ಕೈ ಕುಲುಕಿ
“ ಹಿಯರ್ ಈಸ್ ಯುವರ್ ಪಾಸ್ಪೋರ್ಟ್ ಡಾ.ಆಜಾದ್, ಐ ಹ್ಯಾವ್ ಡನ್ ವಾಟ್ ಐ ಪ್ರಾಮಿಸ್ಡ್ ಯೂ..., ಗುಡ್ ಲಕ್..ನೌ ಯು ಕ್ಯಾನ್ ಟ್ರಾವೆಲ್..ಐ ಡೋಂಟ್ ನೋ ಇಫ್ ಯು ಕೆನ್ ಗೋ ಟು ಕುವೈತ್...ಬಟ್ ಕೆನ್ ಶ್ಯೂರ್ಲಿ ಗೋ ಟು ಇಂಡಿಯಾ..ಅವರ್ ಮದರ್ ಲ್ಯಾಂಡ್..., ಬಟ್ ಐ ಥಿಂಕ್ ಅಂಡ್ ಫೀಲ್ ಯು ವಿಲ್ ಕ್ಯಾಚ್ ಕುವೈತ್ ಫ್ಲೈಟ್” ಎಂದರು.
ನನ್ನ ಕಣ್ಣಂಚಲಿ ನೀರು ತುಳುಕಿಯೂ ತುಳಿಕದಂತೆಆಯಿತು... ಅಜಯ್ ರ ಎರಡೂ ಕೈ ಹಿಡಿದು ಧನ್ಯವಾದ ಅರ್ಪಿಸಿದೆ... ಎಲ್ಲಾ ಸಿಬ್ಬಂದಿಗೆ ನನ್ನ ಧನ್ಯವಾದ ಹೇಳಿ..ಕುವೈತ್ ಎಂಬಾಸಿ ಗೆ ಹೋಗಿ ನನ್ನ ಅದೃಷ್ಟ ಪರೀಕ್ಷೆ ಮಾಡಲು ನಿರ್ಧರಿಸಿದೆ.
ಟ್ಯಾಕ್ಸಿ ಹಿಡಿದು ಅಲ್ಲಿಂದ ೭-೮ ಕಿ ಮೀ ದೂರದಲ್ಲಿದ್ದ ಕುವೈತ್ ಎಂಬಾಸಿ ಇನ್ ಬೆಲ್ಜಿಯಂ ಕಚೇರಿಗೆ ಹೊರಟೆ.. ಮತ್ತೆ ವಿನೋದ್ ಫೋನ್...ನಮ್ಮ ಜೊತೆ ಕೆಲಸ ಮಾಡುತ್ತಿದ್ದ ಸಲ್ವಾ ಎಂಬ ವಿಜ್ಞಾನಿ(ನಿ) (ನಗಬೇಡಿ ಈ ಪದ ಪ್ರಯೋಗ ಪದಾರ್ಥ ಚಿಂತಾಮಣಿಗೆ ಹಾಕಿ ಚಿಂತೆಯಾಗಲಿ...ಹೆಣ್ಣು ವಿಜ್ಞಾನಿಗೆ ಏನಂತಾರೆ..?? ಅಂತ) ಕುವೈತ್ ಎಂಬಾಸಿಗೆ ಒಂದು ಪತ್ರ ಫ್ಯಾಕ್ಸ್ ರವಾನಿಸಿದ್ದೇನೆ ಅಂತ.
ಅಲ್ಲಿ, ಎಂಬಾಸಿ ಬಳಿ... ಜನವೇ ಇಲ್ಲ...ಬೋರ್ಡ್ ನೋಡಿದೆ...1.0 ಕ್ಕೆ ಕ್ಲೋಸ್..!!! ಸರಿ ಧೈರ್ಯಗೆಡಲಿಲ್ಲ ಫೋನ್ ಮಾಡಿದೆ. ಪುಣ್ಯಕ್ಕೆ ನಮ್ಮ ಸಂಸ್ಥೆಯ ಹಿರಿಯ ಅಧಿಕಾರಿ ಈ ಮೊದಲೇ ಮಾತನಾಡಿದ್ದ ಎಂಬಾಸಿ ಅಧಿಕಾರಿ ಫೋನ್ ಎತ್ತಿಕೊಂಡರು..
“ಹೌದು, ಡಾ ಸಮೀರ್ ಮಾತನಾಡಿದ್ದಾರೆ, ಆದರೆ ಈಗ ನಾವೇನೂ ಮಾಡಲಾಗದು, ಕುವೈತ್ ರೆಸಿಡೆನ್ಸಿ ಸ್ಟಾಂಪ್ ಮಾಡಲು ಅಲ್ಲಿಂದ ಮಂತ್ರಾಲಯದ ಪತ್ರ ಬೇಕು, ಅದಕ್ಕೆ ಈ ದಿನ ಸಮಯ ಮೀರಿದೆ, ನಾಳೆ (ಶುಕ್ರವಾರ) ನಾಡಿದ್ದು ಅಲ್ಲಿ ರಜೆ ಹಾಗಾಗಿ ಕಡೇ ಪಕ್ಷ ಮೂರು ದಿನ ನೀವು ಇಲ್ಲಿ ಉಳಿಯಬೇಕಾಗುತ್ತೆ.” ಎಂದರು.
“ಸರ್ ನಾನು ಕುವೈತ್ ಹೋಗಲು ಸಾಧ್ಯವೇ ಇಲ್ಲವೇ ?” ಎಂದೆ.
“ನಿಮ್ಮ ಹತ್ರ ಯಾವ ಯಾವ ದಾಖಲೆ ಇದೆ? “ ಎಂದು ಕೇಳಿದರು
“ನನ್ನ ಬಳಿ ಕುವೈತ್ ಸಿವಿಲ್ ಐಡಿ ಮತ್ತು ಡ್ರೈವಿಂಗ್ ಲೈಸೆನ್ಸ್ ಇದೆ” ಎಂದೆ.
“ಓಹ್...ದೆನ್ ನಥಿಂಗ್ ಟು ವರಿ, ಟೇಕ್ ಇಟ್ ಫ್ರಂ ಮಿ, ಯು ಕೆನ್ ಟ್ರಾವೆಲ್ ಟು ಕುವೈತ್,..ಜಸ್ಟ್ ಗೋ ಅಂಡ್ ಬೋರ್ಡ್ ದಿ ಪ್ಲೇನ್” ಎಂದರು
ಮನಸು ನಿರಾಳ ಆಯ್ತು.. ಈ ದಿಶೆಯಲ್ಲಿ ನಾನೂ ಯೋಚಿಸಿದ್ದೆ, ಸಿವಿಲ್ ಐಡಿ ಬಹಳ ಶಕ್ತಿಯುತ ದಾಖಲೆ.. ಬಹುಶಃ ನನಗೆ ಸಾಧ್ಯವಾಗಬಹುದು ಎಂದು, ಅಧಿಕಾರಿಯ ಮಾತಿನಿಂದ ನಿಶ್ಚಿಂತನಾಗಿ ಹೋಟೆಲಿಂದ ಲಗೇಜ್ ತೆಗೆದುಕೊಂಡು ಏರ್ ಪೋರ್ಟ್ ಗೆ ಹೊರಟೆ. ಏರ್ ಪೋರ್ಟ್ ನಲ್ಲಿ ತುಕಿಶ್ ಏರ್ ನ ಚೆಕ್ ಇನ್ ನಲ್ಲಿ ನನ್ನ ಟಿಕೆಟ್ ಮತ್ತು ಪಾಸ್ಪೋರ್ಟ್ ಕಳೆದು ಹೋಗಿದೆ, ಆದರೆ ಹೊಸ ಪಾಸ್ಪೋರ್ಟ್ ಇಶ್ಯೂ ಆಗಿದೆ ಎಂದು ಅದನ್ನು ತೋರಿಸಿದೆ. ನಿಮ್ಮ ರೆಸಿಡೆನ್ಸಿಗೆ ಪ್ರೂಫ್ ಏನು ಎಂದರು..ಸಿವಿಲ್ ಐಡಿ ಇದೆ ಎಂದು ತೋರಿಸಿದೆ..ಓಕೆ ಎಂದು ಟಿಕೆಟ್ ಮತ್ತು ಬೋರ್ಡಿಂಗ್ ಪಾಸ್ ಕೊಟ್ಟರು ಚೆಕ್ ಇನ್ ಮಾಡಿ. ಇಮಿಗ್ರೇಶನ್ ನಲ್ಲಿ ಕೌಂಟರ್ ಆಫೀಸರ್ ಗೆ ಸ್ವಲ್ಪ ಗೊಂದಲ ಆಯ್ತು, ಹಿರಿಯ ಅಧಿಕಾರಿ ಬಂದು ನನ್ನ ತಮ್ಮ ದಾಖಲೆ ಕೊಠಡಿಗೆ ಕರೆದೊಯ್ದು ಅಲ್ಲಿ ಪರಿಶೀಲನೆ ಮಾಡಿ ನಿಮ್ಮನ್ನು ಡಿಪಾರ್ಚರ್ ಗೇಟ್ ಗೆ ನಾನೇ ಬಿಡ್ತೇನೆ ಎಕೆಂದರೆ ಇನ್ನು ಹದಿನೈದು ನಿಮಿಷ ಮಾತ್ರ ಇದೆ ಡಿಪಾರ್ಚರ್ ಗೆ, ಗೇಟ್ ಕ್ಲೋಸ್ ಆಗ್ಬಾರ್ದು ಎಂದರು...ಇಲ್ಲೂ ಸಮಾಧಾನದ ಭರವಸೆಯ ಸಾಂತ್ವನ...!!!
ಎರಡೇ ನಿಮಿಷದಲ್ಲಿ ಪರೀಶೀಲನೆ ಮಾಡಿ, ನೇರ ಗೇಟ್ ಗೆ ಕರೆದೊಯ್ದು ಬಿಟ್ಟರು, ಇನ್ನೇನು ಗೇಟ್ ಕ್ಲೋಸ್ ಆಗುವುದರಲ್ಲಿತ್ತು.
ನಿರಾಳವಾಗಿ, ಆಫೋಸರ್ ಗೆ ಧನ್ಯವಾದ ಹೇಳಿ ವಿಮಾನ ಏರಿ..ನನ್ನ ಸೀಟ್ ನ ಮೇಲಿನ ಲಗೇಜ್ ಬಾಕ್ಸಲ್ಲಿ ಲಗೇಜ್ ಇಟ್ಟು ಕೂತೆ.. ಟರ್ಕಿಶ್ ವಿಮಾನ ಹೊರಡಲು ೧೫ ನಿಮಿಷ ಇತ್ತು.
(ಚಿತ್ರ: ಅಂತರ್ಜಾಲ ಕೃಪೆ)
“ಎಕ್ಸ್ ಕ್ಯೂಸ್ ಮಿ” ಮಧುರ ಹೆಣ್ಣಿನ ದನಿ...!! ತಲೆಯೆತ್ತಿ ನೋಡಿದೆ.. ಬಿಳಿಯ ಹೆಣ್ಣು ಸುಮಾರು ೩೦-೩೫ ರ ಆಸುಪಾಸಿನ ಆಕೆ ಕಿಟಕಿ ಬಳಿಯ ಸೀಟ್ ತೋರಿಸಿ ಅದು ನನ್ನ ಸೀಟ್ ಎನ್ನುವಂತೆ ಕಣ್ಸನ್ನೆ ಮಾಡಿದಾಗ ಎದ್ದು ಆಕೆಗೆ ಕುಳಿತುಕೊಳ್ಲಲು ಅನುವು ಮಾಡಿಕೊಟ್ಟೆ. ಪರಂಗಿಯರು ಸೋಶಿಯಲ್ ಎನ್ನುವುದು..ಕುಳಿತ ಎರಡೇ ನಿಮಿಷದಲ್ಲಿ ಆಕೆ ಮಾತು ಕತೆಗೆ ಪ್ರಾರಂಭಿಸಿದ್ದರಿಂದ ಖಚಿತವಾಯ್ತು....
“ಸೀಮ್ಸ್, ಯೂ ಆಲ್ಸೋ ಕೇಮ್ ಅಟ್ ದಿ ಲಾಸ್ಟ್ ಮೊಮೆಂಟ್” ಎಂದಳು...
“ಯೆಸ್...ಮೀನ್ಸ್..ಯೂ ಟೂ...??”  ಐ ಹ್ಯಾಡ್ ಲಿಟ್ಲ್ ಪ್ರಾಬ್ಲಂ ವಿಥ್ ಮೈ ಪಾಸ್ಪೋರ್ಟ್..”ಎಂದೆ.
ಓಹ್...ಈಸ್ ಇಟ್....?? ಫಾರ್ ಮೀ ಟೂ..., ಐಯಾಮ್ ಬೇಸಿಕಲಿ ಫ್ರಂ ಕಜಾಕಿಸ್ತಾನ್ (ಫಾರ್ಮರ್ ರಶ್ಯನ್ ಸ್ಟೇಟ್), ಬಟ್ ಹ್ಯಾವಿಂಗ್ ಎ ಸ್ಮಾಲ್ ಬ್ಯುಸಿನೆಸ್ ಇನ್ ಬ್ರುಸೆಲ್ಸ್..., ಮೈ ವ್ಯಾಲೆಟ್ ವಿಥ್ ಪಾಸ್ಪೋರ್ಟ್, ಕ್ಯಾಶ್ ಅಂಡ್ ಮೈ ಕ್ರೆಡಿಟ್ ಕಾರ್ಡ್ಸ್ ವಾಸ್ ಸ್ನ್ಯಾಚ್ಡ್ ಇನ್ ಎ ಬಸ್ ಸ್ಟಾಪ್ ಇನ್ ಬ್ರಸಲ್ಸ್” ಎಂದಳು..

ವಾಟ್..!!!?? ಯೂ ಟೂ ಲಾಸ್ಟ್ ಯುವರ್ ಪಾಸ್ಪೋರ್ಟ್...!!!!!!??? ಎಂದೆ....

21 comments:

  1. :-)
    I can understand your situation sir. seriously it is very tough to manage if we lose our passport in other countries.

    But good that you have managed it.

    ReplyDelete
    Replies
    1. Thanks Santosh...because of Good at Heart
      people around me...

      Delete
  2. Really glad that you managed it sir.

    ReplyDelete
    Replies
    1. Thank you Prashant... it was a result of help from all around...

      Delete
  3. This comment has been removed by the author.

    ReplyDelete
  4. Azad IS ಅವರ, ತಮ್ಮ ಬೆಲ್ಜಿಯಂ ಮಾಲಿಕೆಯ 3ನೇಯ ಭಾಗ:
    http://jalanayana.blogspot.in/2013/07/blog-post_27.html

    ಫೇಸ್ ಬುಕ್ಕಿನಿಂದ ಅವಾಂತರಗಳೆಂದು ವಾದಿಸುವ ಪ್ರಭುತಿಗಳು ಈ ಮಾಲಿಕೆ ಒದ ಬೇಕು. ಯಾವುದೇ ವಿಚಾರದಲ್ಲೂ ಕೆಡುಕು ಮತ್ತು ಒಳಿತುಗಳ ಸಮಪಾತವಿರುತ್ತದೆ. ಶ್ರೀಮತಿ. ವನಿತಾ ಅವಾರು ವೈಫೈಯಲ್ಲಿ ಸಿಕ್ಕಿದ್ದು ಹುಲ್ಲು ಕಡ್ಡಿ ಸಿಕ್ಕಂತಾಗಿರುತ್ತದೆ ತಮಗೆ ಕೊಚ್ಚಿ ಹೋಗುವಾಗ ಪ್ರವಾಹದಲ್ಲಿ!

    ನಮ್ಮ ದೇಶದಲ್ಲೂ ಸಿವಿಲ್ ಐಡಿ ಯಾವಾಗ ಪವರ್ಫುಲ್ ಆಗುತ್ತದೋ?

    ಅಂತೂ ಸುಖಾಂತವಾಯ್ತಲ್ಲ ಗುರುಗಳೇ, ಅದೇ ನೆಮ್ಮದಿ.

    ಪಾಪ ಆ ಕಜಾಕಿಸ್ತಾನದ ಹೆಣ್ಣು ಮಗಳದೂ ಅದೇ ಕಥೆಯೇ? ಅಯ್ಯೋ?

    ReplyDelete
    Replies
    1. ಹೌದು ಬದರಿ...ನನ್ನಂತೆಯೇ ಇನ್ನೊಬ್ಬ ದೆಹಲಿಯವನ ಕಥೆ...ಆದ್ರೆ ಕಜಾಕ್ ಹೆಣ್ಣುಮಗಳ ಕಥೆ ಬೇರೆನೇ...ಆಕೆಯ ಹೆಗಲಲ್ಲಿದ್ದ ಬ್ಯಾಗನ್ನು ಕಿತ್ಕೊಂಡು ಓಡಿ ಹೋದ ಕಳ್ಳ....!!! ಅದರಲ್ಲಿತ್ತು ಪಾಸ್ಪೋರ್ಟ್...ಹಣ ಕ್ರೆಡಿಟ್ ಕಾರ್ಡ್ ಟಿಕೆಟ್ ಇತ್ಯಾದಿ...

      Delete
  5. sukhantya...ade santosha...nimma taLme ge ondu salaamu....

    ReplyDelete
    Replies
    1. ಸುಖಾಂತ್ಯ ಆಗಿದ್ದು ಕುವೈತಿಗೆ ಬಂದದ್ದು,,,ಎಲ್ಲಾ ಒಂಥರಾ ಕನಸಿನ ಹಾಗಿದೆ ಈಗ

      Delete
  6. abbhaa.... tumbaa khushiyaaytu.... sukhaantya aadudakke mattu snehitaru sahaaya maaDiddakke...

    ReplyDelete
    Replies
    1. ಧನ್ಯವಾದ ದಿನಕರ್...ಸ್ನೇಹಿತರಿಗೆ ಮತ್ತೊಮ್ಮೆ ನಮೋ ನಮಃ

      Delete
  7. ಇಲ್ಲಿ ತೋರಿಸಿದಂತಹ ಸಹಕಾರ ಮನೋಭಾವನೆ ಭಾರತದಲ್ಲಿ ಸಿಕ್ಕೀತೆ?

    ReplyDelete
    Replies
    1. ಸುನಾಥಣ್ಣ...ನಮ್ಮಲ್ಲಿ ಸಿಗಲಿಕ್ಕಿಲ್ಲ,,, ಸಿಕ್ಕರೂ ತಕ್ಕ "ಬಕ್ಶೀಸು" ಕೊಡದೇ ಆಗೊಲ್ಲ ಕೆಲ್ಸ.

      Delete
  8. ಹೂ ಮೊದಲು ವನಿತಾ... ಹ್ಯಾಕ್ ಆಗಿದೆ ಅಂದುಕೊಂಡಿದ್ದರು ಹಹಹ ನಂತರ ನಿಜವೆಂದ ಮೇಲೆ ನಮಗೆ ಕರೆ ಮಾಡಿದ್ದು. ನಾವು ನಿಮ್ಮ ಪಾಸ್ ಪೋರ್ಟ್ ಕಾಪಿ ಏನಾದ್ರು ನಮ್ಮಲಿದೆಯಾ ಇಲ್ಲವಾ ಅಂತಾ ಹುಡುಕಿದ್ದೇ ಹುಡುಕಿದ್ದು... :) ಮತ್ತೆ ಬರಿರಿ ರಷ್ಯಾ ಸುಂದರಿಯ ಕಥೆ ಪಾಪ ಅವಳು ಅವರ ಊರು ತಲುಪಿರುತ್ತಾಳೆ ಎಂದುಕೊಂಡಿದ್ದೇನೆ.

    ReplyDelete
    Replies
    1. ನಿಮ್ಮೆಲ್ಲರ ಆತ್ಮೀಯತೆಗೆ ಮತ್ತು ಸಹಾಯಕ್ಕೆ ನಾನು ಋಣಿ ಸುಗುಣ-ಮಹೇಶ್-ವಿನೋದ್... ಕಜಾಕ್ ಹೆಣ್ಣಿನ ಕಥೆ ಹಾಕ್ತೇನೆ,,,

      Delete
  9. ಸುಂದರ ಹೂವು ಸುಂದರ ವನದಲ್ಲಿ ಅರಳುತ್ತದೆ
    ಸುಂದರ ಮನಸ್ಸು ಸುಂದರ ಮನಸ್ಸಿನ ಅಂಗಣದಲ್ಲಿ ಸಿಗುತ್ತದೆ..
    ಈ ಮಾತಿನಂತೆ ನಗುಮೊಗದ, ಉತ್ಸಾಹದ ಚಿಲುಮೆಯಾದ ನಿಮಗೆ ಈ ರೀತಿಯ ಸಹಕಾರ, ಸಹಾಯ ಸಿಗುವುದು ಸುಲಭ. ಆದರೂ ಆ ದುರ್ಗಮ ಪರಿಸ್ಥಿತಿಯಲ್ಲಿ ಹೆಜ್ಜೆ ಹೆಜ್ಜೆಗೂ ಮಾರ್ಗದರ್ಶನ, ಸಾಂತ್ವನ, ಮನಸನ್ನು ಬೆರಗುಗೊಳಿಸುವ ಸಹಾಯ ಹಸ್ತ ಅಪರಿಚಿತ ನಾಡಿನಲ್ಲಿ ಸಿಗುವುದು ಸಂತಸನೀಡುತ್ತದೆ. ಯದ್ಭಾವಂ ತದ್ಭವತಿ. ನಿಮ್ಮ ಒಳ್ಳೆಯ ಮನಸ್ಸು ಒಳ್ಳೆಯದನ್ನೇ ನೀಡಿತು.

    ReplyDelete
  10. ಹೂಮನದಲ್ಲಿ ಹೂಬನ..ಶ್ರೀಮನ್...ನಿಮ್ಮ ಸಹೃದಯತೆ ಇಂತಹ ಪ್ರತಿಕ್ರಿಯೆಗೆ ಕಾರಣ...ಧನ್ಯವಾದ.

    ReplyDelete
  11. abba...odta odta enaagutto anta bhaya ...antu sukhaantya aaytallaa..jeevanadalli olleya snehitariddare entaha samasye bandaroo edurisabahudu allave?..

    ReplyDelete
  12. ಧನ್ಯವಾದ ವಸುಧಾರವರೇ... ಉಷೋದಯಕ್ಕೆ ಜಲನಯನದ ಸ್ವಾಗತ.... ನಿಮ್ಮ ಪ್ರೋತ್ಸಾಹದ ಮಾತಿಗೆ ನಮನ

    ReplyDelete
  13. ನಿಮ್ಮ ಲೇಖನ ಓದಿದ ನನಗೆ ಫೇಸ್ ಬುಕ್ ನಿಂದ ನಿಮ್ಮ ಪಾಸ್ ಪೋರ್ಟ್ ಇದ್ದ ಬ್ಯಾಗ್ ಕಳುವಾದದ್ದನ್ನು ತಿಳಿಸಲು ಸಾಧ್ಯವಾದದ್ದು, ಪರಿಸ್ಥಿತಿಯನ್ನು ನೀವು ನಿಭಾಯಿಸಿದ ರೀತಿ, ಕೊನೇಗೆ ಸುಖಾಂತ್ಯಗವಾದುದು ಇಷ್ಟವಾಯಿತು.
    ನನ್ನ ಬ್ಲಾಗಿಗೂ ಭೇಟಿ ಕೊಡಿ ಅಲ್ಲೂ ನನ್ನ ಕಥೆಯಲ್ಲಿ ಫೇಸ್ ಬುಕ್ನಿಂದ ಒಬ್ಬರನ್ನು ತುಂಬಾ ವರ್ಷಗಳ ನಂತರ ಹುಡುಕಲು ಹೇಗೆ ಸಹಾಯಕವಾಯಿತು ಎಂದು ಓದಿ.

    ReplyDelete