ಸ್ನೇಹಿತರೇ, ನಲ್ಮೆಯ ಬ್ಲಾಗ್ ಗೆಳೆಯ ಮತ್ತು ಮುಖಪುಸ್ತಕ ಸಹ ಓದುಗ ಶ್ರೀಕಾಂತ್ ಮಂಜುನಾಥ್ ಎಸೆದ ಒಂದು ಸವಾಲನ್ನು ಸ್ವೀಕರಿಸಿ "ಅಖಿಯೋಂಕೆ ಝರೋಕೋಂಸೆ" ಗೀತೆಯೊಂದರ ಭಾವಾನುವಾದ (ಲಯಕ್ಕೆ ತಕ್ಕಹಾಗೆ) ಪ್ರಯತ್ನಿಸಿದ್ದೇನೆ. ದಯವಿಟ್ಟು ನಿಮ್ಮ ಅನಿಸಿಕೆಯನ್ನು ಹಂಚಿಕೊಳ್ಳಿ.
ಕಣ್ಣ ಕುಡಿನೋಟದಿ....
ಕಣ್ಣ ಕುಡಿ ನೋಟದಿ ನಿನ್ನ, ಕಂಡೆನಲ್ಲಾ ನಾ ಹೀಗೆಯೇ
ಬಲು ದೂರ ನೀ ಕಂಡೆ, ಬಲು ದೂರಾ ನಾನಿನ ಕಂಡೆ [೨]
ಕಣ್ಣ ಮುಚ್ಚಿದೆ ಕ್ಷಣ ಹೀಗೇ, ಒಮ್ಮೆ ಮನದಲೇ ನಿನ
ನೆನೆದೇ
ನೀನು ಮನಸಲೇ ನಗುತಿದ್ದೆ, ಮನ ಮುದಗೊಂಡು ನಗುತಿದ್ದೆ [೨]
ಕಣ್ಣ
ಕುಡಿ ನೋಟದಿ ನಿನ್ನ, ಕಂಡೆನಲ್ಲಾ ನಾ ಹೀಗೆಯೇ {ಪ}
ಒಂದು ಮನವಿತ್ತು ನನ್ನಾ ಬಳಿಯಲಿ, ಈಗ ಕಾಣದೇ ಹೋಗುತಿದೆ
ಪಡೆದೇ ನಿನ್ನ ಹಾಯೇ ನನ್ನ , ಈ ಮನವೂ ಸೋಲುತಿದೆ [೨]
ನಿನ್ನ ಭರವಸೆ ಆಸೆಯಲಿ, ಕುಂತೆ ನನ್ನನೇ ನಾ ಮರೆತು
ಹೀಗೇ ಕಳೆದು ಹೋಗಲಿ, ನಮ್ಮ ಆಯಸ್ಸು ಜತೆ ಜತೆಗೆ.. [೨]
ಕಣ್ಣ ಕುಡಿ ನೋಟದಿ ನಿನ್ನ, ಕಂಡೆನಲ್ಲಾ ನಾ
ಹೀಗೆಯೇ {ಪ}
ಬದುಕಿರುವೆ ನಿನ್ನಾ ನೋಡಿಯೇ, ಸತ್ತರೂ ನಿನ್ನಿದುರೇ
ನೀನೆಲ್ಲಿಯೋ ನಾನಲ್ಲಿಯೇ ಜಗವನೇ ಕಂಡಿರುವೆ [೨]
ಹಗಲಿರುಳೂ ಪೂಜಿಸುವೇ, ನಿನ್ನ ಒಳಿತನೇ ನಾ ಬಯಸಿ
ಎಂದೂ ನಮ್ಮ ಈ ನಂಬಿಕೆಯಾ, ಸುಮ ಬಾಡದೇ ಅರಳಲಿ [೨]
ಕಣ್ಣ
ಕುಡಿ ನೋಟದಿ ನಿನ್ನ, ಕಂಡೆನಲ್ಲಾ ನಾ ಹೀಗೆಯೇ {ಪ}
ಎಂದಿನಿಂದ ನಿನ್ನ ಒಲವಿನ ಬಣ್ಣದೀ ಮಿಂದಿರುವೆ
ಎದ್ದೇ ಇದ್ದು ಮಲಗೇ ಇದ್ದೆ ನಿದ್ದೆಯಲೂ ಎಚ್ಚರದಿ [೨]
ನನ್ನ ಪ್ರೀತಿಯ ಕನಸುಗಳ, ಯಾರಾದರೂ ಕದಿಯುವರೇ
ಮನ ಯೋಚಿಸಿ ಭಯವಾಯ್ತು, ಹೀಗೇ ಯೋಚಿಸಿ ದಿಗಿಲಾಯ್ತು[೨]
ಕಣ್ಣ
ಕುಡಿ ನೋಟದಿ ನಿನ್ನ, ಕಂಡೆನಲ್ಲಾ ನಾ ಹೀಗೆಯೇ {ಪ}