ಸ್ನೇಹಿತರೇ, ನಲ್ಮೆಯ ಬ್ಲಾಗ್ ಗೆಳೆಯ ಮತ್ತು ಮುಖಪುಸ್ತಕ ಸಹ ಓದುಗ ಶ್ರೀಕಾಂತ್ ಮಂಜುನಾಥ್ ಎಸೆದ ಒಂದು ಸವಾಲನ್ನು ಸ್ವೀಕರಿಸಿ "ಅಖಿಯೋಂಕೆ ಝರೋಕೋಂಸೆ" ಗೀತೆಯೊಂದರ ಭಾವಾನುವಾದ (ಲಯಕ್ಕೆ ತಕ್ಕಹಾಗೆ) ಪ್ರಯತ್ನಿಸಿದ್ದೇನೆ. ದಯವಿಟ್ಟು ನಿಮ್ಮ ಅನಿಸಿಕೆಯನ್ನು ಹಂಚಿಕೊಳ್ಳಿ.
ಕಣ್ಣ ಕುಡಿನೋಟದಿ....
ಕಣ್ಣ ಕುಡಿ ನೋಟದಿ ನಿನ್ನ, ಕಂಡೆನಲ್ಲಾ ನಾ ಹೀಗೆಯೇ
ಬಲು ದೂರ ನೀ ಕಂಡೆ, ಬಲು ದೂರಾ ನಾನಿನ ಕಂಡೆ [೨]
ಕಣ್ಣ ಮುಚ್ಚಿದೆ ಕ್ಷಣ ಹೀಗೇ, ಒಮ್ಮೆ ಮನದಲೇ ನಿನ
ನೆನೆದೇ
ನೀನು ಮನಸಲೇ ನಗುತಿದ್ದೆ, ಮನ ಮುದಗೊಂಡು ನಗುತಿದ್ದೆ [೨]
ಕಣ್ಣ
ಕುಡಿ ನೋಟದಿ ನಿನ್ನ, ಕಂಡೆನಲ್ಲಾ ನಾ ಹೀಗೆಯೇ {ಪ}
ಒಂದು ಮನವಿತ್ತು ನನ್ನಾ ಬಳಿಯಲಿ, ಈಗ ಕಾಣದೇ ಹೋಗುತಿದೆ
ಪಡೆದೇ ನಿನ್ನ ಹಾಯೇ ನನ್ನ , ಈ ಮನವೂ ಸೋಲುತಿದೆ [೨]
ನಿನ್ನ ಭರವಸೆ ಆಸೆಯಲಿ, ಕುಂತೆ ನನ್ನನೇ ನಾ ಮರೆತು
ಹೀಗೇ ಕಳೆದು ಹೋಗಲಿ, ನಮ್ಮ ಆಯಸ್ಸು ಜತೆ ಜತೆಗೆ.. [೨]
ಕಣ್ಣ ಕುಡಿ ನೋಟದಿ ನಿನ್ನ, ಕಂಡೆನಲ್ಲಾ ನಾ
ಹೀಗೆಯೇ {ಪ}
ಬದುಕಿರುವೆ ನಿನ್ನಾ ನೋಡಿಯೇ, ಸತ್ತರೂ ನಿನ್ನಿದುರೇ
ನೀನೆಲ್ಲಿಯೋ ನಾನಲ್ಲಿಯೇ ಜಗವನೇ ಕಂಡಿರುವೆ [೨]
ಹಗಲಿರುಳೂ ಪೂಜಿಸುವೇ, ನಿನ್ನ ಒಳಿತನೇ ನಾ ಬಯಸಿ
ಎಂದೂ ನಮ್ಮ ಈ ನಂಬಿಕೆಯಾ, ಸುಮ ಬಾಡದೇ ಅರಳಲಿ [೨]
ಕಣ್ಣ
ಕುಡಿ ನೋಟದಿ ನಿನ್ನ, ಕಂಡೆನಲ್ಲಾ ನಾ ಹೀಗೆಯೇ {ಪ}
ಎಂದಿನಿಂದ ನಿನ್ನ ಒಲವಿನ ಬಣ್ಣದೀ ಮಿಂದಿರುವೆ
ಎದ್ದೇ ಇದ್ದು ಮಲಗೇ ಇದ್ದೆ ನಿದ್ದೆಯಲೂ ಎಚ್ಚರದಿ [೨]
ನನ್ನ ಪ್ರೀತಿಯ ಕನಸುಗಳ, ಯಾರಾದರೂ ಕದಿಯುವರೇ
ಮನ ಯೋಚಿಸಿ ಭಯವಾಯ್ತು, ಹೀಗೇ ಯೋಚಿಸಿ ದಿಗಿಲಾಯ್ತು[೨]
ಕಣ್ಣ
ಕುಡಿ ನೋಟದಿ ನಿನ್ನ, ಕಂಡೆನಲ್ಲಾ ನಾ ಹೀಗೆಯೇ {ಪ}
ಮೊದಲು ಹಾಡು ಕೇಳಿದೆ. ಆ ಮೇಲೆ ನಿಮ್ಮ ಅನುವಾದ ಹಾಡಿಕೊಂಡೇ. ಪಕ್ಕಾ ಕೂತು ಕೊಳ್ತು. ನೀವ್ ಬಿಡಿ ಸಾರ್ ಕೈ ಹಾಕ್ದಾ ಅಂದ್ರೇ ಅದು hitಏ...
ReplyDeleteಈ ಚಿತ್ರಕ್ಕೆ ಅನಿಲ್ ಮೇಹತಾ ಛಾಯಾಗ್ರಹಣವಿತ್ತು.
ಧನ್ಯವಾದ ಬದರಿ... ಆದ್ರೆ ಎಲ್ಲಾದರೂ ಪದ ಕೂರ್ತಿಲ್ಲ ಅಂದ್ರೆ ತಿಳ್ಕೊಬೇಕು... ನಾನೂ ಹಾಡಿಕೊಂಡೇ ಪ್ರಯತ್ನ ಮಾಡಿದ್ದು...ನಿಮ್ಮ ಸಲಹೆ ತಿಳಿಸಿ..ಬದಲಾವಣೆ ಏನಾದರೂ...
Deleteಶ್ರೀಕಾಂತ ಮಂಜುನಾಥರಿಗೆ ನನ್ನ ಧನ್ಯವಾದಗಳು ಸಲ್ಲಬೇಕು. ಅವರು ನಿಮ್ಮನ್ನು ಹೀಗೆಯೇ challenge ಮಾಡುತ್ತ ಇರಲಿ ಎಂದು ಹಾರೈಸುತ್ತೇನೆ.
ReplyDeleteಸುನಾಥಣ್ಣ...ಧನ್ಯವಾದ ..ಹೌದು ಶ್ರೀಕಾಂತ್ ಮಂಜುನಾಥ್ ಗೆ ನಮನ, ನಿಮ್ಮ ಪ್ರೋತ್ಸಾಹ ತಪ್ಪದೇ ಸಿಗುತ್ತದೆ ಎನ್ನುವುದು ನನಗಿರುವ ಸದಾಶಯ.
Deleteಇದನ್ನ ಯಾರಿಂದಲಾದರೂ ಹಾಡಿಸಬೇಕು .....................
ReplyDeleteಚೆನ್ನಾಗಿದೆ
ಧನ್ಯವಾದ ವಂದ್ಶಿ.... ನೀವೇ ಹಾಡಿಬಿಡಿ...ಮತ್ತೆ ನನಗೆ ಕಳುಹಿಸಿ ರೆಕಾರ್ಡ್ ಮಾಡಿ...
Deleteಹಳೇ ಈಸ್ಟ್ ಮನ್ ಕಲರ್ ಕನ್ನಡ ಪಿಚ್ಚರ್ ನಲ್ಲಿ, ಆರ್.ಎನ್. ಜಯಗೋಪಾಲ್ ಅವ್ರು ಬರೆದ ಹಾಗಿದೆ ಸರ್ :)
ReplyDeleteತುಂಬಾ ಇಷ್ಟಾ ಆಯ್ತು :d ಮುಗ್ಯಾಂಬೋ ಕುಶ್ ಹುವಾ :)
ಮೊಗ್ಯಾಂಬೊ ಮಹರಾಜ್ ಕಿ ಜೈ ಹೋ....ಧನ್ಯವಾದ ರಾಘವ್
Deleteಸರ್ ಸುಪರ್ ಆಗಿದೆ .
ReplyDeleteತುಂಭಾ ಮೇಚ್ಚುಗೆಯಾಗಿದೆ, ಧನ್ಯವಾದಗಳು
ತಡವಾದ ಪ್ರತಿಕ್ರಿಯೆ ಕ್ಷಮೆ ಇರಲಿ..
ReplyDeleteಈ ಹಾಡು ವರ್ಷಗಳಿಂದ ಕಾಡುತಿತ್ತು. ಸುಂದರವಾಗಿ ಭಾಷಾಂತರಗೊಳಿಸಿದ್ದೀರ. ಹೇಮಲತಾ ಹಾಡಿರುವ ಪ್ರತಿ ಪದವೂ ಕಿವಿಯಲ್ಲಿ ಗುಯ್ ಗುಡುತ್ತದೆ. ಅದರಲ್ಲೂ ಅವರು "ಸಾಜನ್" ಎನ್ನುವ ಪದವನ್ನು ಅನುಭವಿಸಿ ಹೇಳುವ ಪರಿ ಸೂಪರ್.. ನಿಮಗೆ ನಾನೂ ಎಷ್ಟು ಕೃತಜ್ಞತೆ ತಿಳಿಸಿದರು ಸಲ್ಲಿಸಿದರು ಕಡಿಮೆಯೇ. ಧನ್ಯೋಸ್ಮಿ ಸರ್ಜಿ...
Azad sir, am very happy to see this song beautifully got translated here... This song s very spl for me.. cheers.. :) https://www.facebook.com/veena.badiger.7/posts/743115879032672?stream_ref=10
ReplyDelete