Friday, November 22, 2013

ಕನ(ನ)ಸಾದೀತು

Source: deviantART

ಕನ(ನ)ಸಾದೀತು
ನನ್ನ ಕನಸ ನೀ ಹಾಡಬೇಡ
ನಾ ಹಾಡುವುದು ಕನಸಾದೀತು
ನನ್ನ ನಿದ್ದೆಯಲಿ ನೀ ಬರಬೇಡ
ರೆಪ್ಪೆ ಮುಚ್ಚುವುದೂ ಕನಸಾದೀತು

ನನ್ನ ನೆನಪಿನಲಿ ನೀನಿರಬೇಡ
ಸ್ಮೃತಿ ಮಿದುಳಿನ ಕನಸಾದೀತು
ನಾಲಿಗೆ ಅಂಚಲಿ ನಲಿಯಬೇಡ
ಮಾತು ಗಂಟಲಿಗೆ ಕನಸಾದೀತು

ನನ್ನ ಲೇಖನಿ ಅಂಚಿಗೆ ಬರಬೇಡ
ಶಾಯಿಗೆ ಅಕ್ಷರವೇ ಕನಸಾದೀತು
ಕಾಮನಬಿಲ್ಲ ಬಣ್ಣ ನೀನಾಗಬೇಡ
ಮಳೆಯ ಹನಿಯೂ ಕನಸಾದೀತು

ಆಶ್ವಾಸನೆಗೆ ನೆಪ ನೀನಾಗಬೇಡ
ಶ್ವಾನಕೂ ನಿಯ್ಯತ್ತೇ ಕನಸಾದೀತು
ಐದು ವರ್ಷಕ್ಕೊಮ್ಮೆ ನೀ ಬರಬೇಡ
ನನ್ನಾಯ್ಕೆ ನನಗೇ ಕನಸಾದೀತು

ದೇವರಾಗಿ ನನ್ನಲಿ ನೀನಾಗಬೇಡ
ಧರ್ಮದ ಅಸ್ತಿತ್ವವೇ ಕನಸಾದೀತು
ಭೂಮಿಲೇ ಸ್ವರ್ಗ ನೀಹುಟ್ಟಿಸಬೇಡ
ನರಕದ ಕಲ್ಪನೆಯೂ ಕನಸಾದೀತು

ನನ್ನನು ನಾನಾಗಲು ಬಿಡುವೆಯಾ?
ನನ್ನಲಿ ನನಗೇ ನಂಬಿಕೆ ಬರಲು
ಉಸಿರಾಡುವ ತನಕ ಹಸಿರಾಗಿರುವೆ
ಸಾರ್ಥಕ ಮನುಜನ್ಮ ನನಸಾದೀತು

19 comments:

  1. ನನ್ನನು ನಾನಾಗಲು ಬಿಡುವೆಯಾ..? - ನಾವು ನಾವಾಗಿರಲು ಬಿಟ್ಟರೆ ಜೀವನ ಸಾರ್ಥಕ.
    ಕವನ ತುಂಬ ತುಂಬಾ ಇಷ್ಟವಾಯಿತು ಸರ್

    ReplyDelete
  2. ಸಕಾರಾತ್ಮಕ ಕನಸುಗಳು ಎನಿತೋ ಬಾರೀ ನಕಾರಾತ್ಮಕ ನನಸಾಗುವ ಅಪಾಯವಿದೆ.
    ಒಂದು ಸಂಗ್ರಹ ಯೋಗ್ಯ ಕವನ.

    ReplyDelete
    Replies
    1. ಬದರಿಯ ಸದರಿ ಕಾಮೆಂಟಿಗೆ ಹೆದರದೇ ವಾಹ್ ಎನ್ನುವೆ.

      Delete
  3. ನನ್ನ ಬ್ಲಾಗ್ ಗೆ ಭೇಟಿ ಕೊಟ್ಟಿದ್ದಕ್ಕೆ ಧನ್ಯವಾದ. ಮನಸ್ಸಿನ ತುಂಬಾ ತುಂಬಿಕೊಂಡು ನೀನಿರ ಬೇಡ, ಬರಬೇಡ ಎನ್ನುವ ನಿಮ್ಮ ಕವನದ ಪರಿ ತುಂಬಾ ಇಷ್ಟವಾಯಿತು.

    ReplyDelete
  4. A clean and nicely articulated poem seeking self identity. Alas! how we all think that some one else controls us all the time....either by love or hatred!...actually we have created such restrictions in our mind just by feeling the bond. There is true freedom and super solitude that makes us the exclusive owners of our own dreams and life. But the question is .......how do we reach that state of mind?!!! A very well written soliloquy sir. :)

    ReplyDelete
    Replies
    1. Thanks a lot Kusum..nice view expressed even more nicely...

      Delete
  5. ಕನಸೂ ಕುಲಗೆಟ್ಟು ಹೋಗುವ ಸ್ಥಿತಿಯನ್ನು ಉದ್ವೇಗವಿಲ್ಲದೆ ಚಿತ್ರಿಸಿದ್ದೀರಿ!

    ReplyDelete
    Replies
    1. ಧನ್ಯವಾದ ಸುನಾಥಣ್ಣ,,,,

      Delete
  6. >> ನನ್ನ ಲೇಖನಿ ಅಂಚಿಗೆ ಬರಬೇಡ
    ಶಾಯಿಗೆ ಅಕ್ಷರವೇ ಕನಸಾದೀತು << Chennadide sir

    ReplyDelete
  7. ಪ್ರಶಾಂತ್ ಧನ್ಯವಾದ....

    ReplyDelete
  8. ಧನ್ಯವಾದ ಸಂಧ್ಯಾ ಪುಟ್ಟಾ...ಹಾಗೇ ಒಂದು ಶೇರ್ ಓದುತ್ತಿದ್ದಾಗ ಹೊಳೆದ ಸಾಲುಗಳು...ನಮಗೆ ಯಾರೂ ಸ್ಫೂರ್ತಿ ಅಲ್ಲ ಅಂದರೆ ತಪ್ಪಾದೀತು,,,ಆದರೆ ಆ ಶೇರ್ ನ ಪದ ಮತ್ತು ಭಾವ ಬೇರೆಯಿತ್ತು... ನನ್ನ ಭಾವ ಸಮುದ್ರದ ಈ ಅಲೆಯೇ ಬೇರೆ ಅಷ್ಟೆ...

    ReplyDelete
  9. kanasu nanasooo ... nanasagabaarada kanasugaLu... kanasaagalarada nanasugaLu... Azad kanasu nanasugaLa manaina bhavanegaLu Super

    ReplyDelete
  10. ಸುಂದರ ಕವನ ಆಜ಼ಾದಣ್ಣಾ... ಇಷ್ಟವಾದ ಸಾಲುಗಳು - "ಆಶ್ವಾಸನೆಗೆ ನೆಪ ನೀನಾಗಬೇಡ
    ಶ್ವಾನಕೂ ನಿಯ್ಯತ್ತೇ ಕನಸಾದೀತು"

    ReplyDelete
  11. ಸುಂದರ ಕವನ ಎಂದರೆ ಕನಸಾಗುವದೆ ? ಎಂದು ಹೇಳುವಿರಾ.

    ReplyDelete