ಪ್ರೇಮ
ಇಳೆಗೂ, ಮಳೆಗೂ
ಆಯ್ತು ಪ್ರೇಮ
ನದಿಗೆ, ಬದಿಯ
ತುಂಬಾ ಪ್ರೇಮ
ಮಾತು ಮೂಕ
ನಿಂತ ಪ್ರೇಮ
ನೋಟ ಕಣ್ಣು
ಕುರುಡು ಪ್ರೇಮ
ತುಟಿಗೆ ತುಟಿಯ
ಅಂಟೋ ಪ್ರೇಮ
ನೆಂಟ ಇಷ್ಟ
ಗಂಟು ಪ್ರೇಮ
ಅಕ್ಕ ಪಕ್ಕ
ಲೆಕ್ಕ ಪ್ರೇಮ
ಅಮ್ಮ- ಮಗುವ
ಚೊಕ್ಕ ಪ್ರೇಮ
ಇನಿಯ ಸನಿಯ
ದನಿಯ ಪ್ರೇಮ
ಮುನಿಯೋ ಮುನಿಸೋ
ನಲ್ಲೆ ಪ್ರೇಮ
ಕೊಟ್ಟ ಕೋಡಂಗಿ
ಈಸ್ಕೊಂಡ ಪ್ರೇಮ
ದಟ್ಟ ದರಿದ್ರಂಗೂ
ಹೊಟ್ಟೇದೇ ಪ್ರೇಮ
ಸುಡುವ ಹೆಣಕ್ಕೆ
ಚಟ್ಟದ್ದೇ ಪ್ರೇಮ.
ನೋಟ ಕಣ್ಣು
ಕುರುಡು ಪ್ರೇಮ
ತುಟಿಗೆ ತುಟಿಯ
ಅಂಟೋ ಪ್ರೇಮ
ನೆಂಟ ಇಷ್ಟ
ಗಂಟು ಪ್ರೇಮ
ಅಕ್ಕ ಪಕ್ಕ
ಲೆಕ್ಕ ಪ್ರೇಮ
ಅಮ್ಮ- ಮಗುವ
ಚೊಕ್ಕ ಪ್ರೇಮ
ಇನಿಯ ಸನಿಯ
ದನಿಯ ಪ್ರೇಮ
ಮುನಿಯೋ ಮುನಿಸೋ
ನಲ್ಲೆ ಪ್ರೇಮ
ಕೊಟ್ಟ ಕೋಡಂಗಿ
ಈಸ್ಕೊಂಡ ಪ್ರೇಮ
ದಟ್ಟ ದರಿದ್ರಂಗೂ
ಹೊಟ್ಟೇದೇ ಪ್ರೇಮ
ಸುಡುವ ಹೆಣಕ್ಕೆ
ಚಟ್ಟದ್ದೇ ಪ್ರೇಮ.
ಪ್ರೇಮವೆಂದರೆ ಅದು ಇಡೀ ನಿಘಂಟನ್ನೇ ವ್ಯಾಪಿಸುವುದು.
ReplyDeleteಪ್ರೇಮದಿಂದಲೇ ಜಗದಿ inಉ outಗಳ ಪ್ರಕ್ರಿಯೆಗಳು.
ಪ್ರೇಮದ ಬೃಹತ್ ವ್ಯಾಪ್ತಿಯ ಸಾರ ಸಂಗ್ರಹ ಈ ನಿಮ್ಮ ಕವಿತೆ.
ಬದರಿ ಧನ್ಯವಾದ... ಬ್ಲಾಗ್ ಯಾಕೋ ಈ ಮಧ್ಯೆ ಬರಲಾಗುತ್ತಿಲ್ಲ..ಮೊದಲಿಗೆ ಬ್ಲಾಗ್ ಸೆಟ್ಟಿಂಗ್ ತೊಂದರೆಗಳು..ಟೈಪಿಸಿ ಇನ್ನೇನು ಪೋಸ್ಟ್ ಮಾಡಬೇಕೆನುವಾಗ ಎಲ್ಲಾ ಹೋಗುತ್ತಿತ್ತು... ಕೆಲವು ದಿನ ಹೊಸ ಪೋಸ್ಟ್ ಡೈಲಾಗ್ ಬಾಕ್ಸೇ ತೆರೆದುಕೊಳ್ಳುತ್ತಿರಲಿಲ್ಲ...ಬೇಸರ ಆಗಿಬಿಟ್ಟಿತ್ತು... ನಿಮ್ಮ ಕಾಳಜಿ ಬ್ಲಾಗ್ ಲೇಖನಗಳ ಬಗ್ಗೆ ಸ್ತುತ್ಯಾರ್ಹ...ಇನ್ನು ಹೆಚ್ಚು ಹೆಚ್ಚು ಬರೆಯಲು ಪ್ರಯತ್ನಿಸುತ್ತೇನೆ...
Deleteತರಾವರಿ ಪ್ರೇಮಗಳು.. ಚೆನ್ನಾಗಿದೆ ಸರ್
ReplyDeleteಜಲನಯನರಿಗೆ ಕವನ ಪ್ರೇಮ!
ReplyDeleteಅವರ ಕವನ ನಮಗೆ ಪ್ರೇಮ!
ಸಾಲು ಸಾಲು ಖುಶಿಯ ಪ್ರೇಮ!
ಅವರ ಸಂಗ ಮಧುರ ಪ್ರೇಮ!
ಸುನಾಥಣ್ಣ...ಕಾರಣಾಂತರಗಳಿಂದ ಬ್ಲಾಗ್ ನೋಡಲಾಗುತ್ತಿಲ್ಲ...ನಿಮ್ಮ ನಿಲ್ಲದ ಈ ಪ್ರೋತ್ಸಾಹ ಪ್ರೀತಿಗೆ ನನ್ನ ಹೃದಯಪೂರ್ವಕ ಧನ್ಯವಾದ
Deleteಹನಿ ಹನಿ ಪ್ರೇಮ ಕಹಾನಿ :D...
ReplyDeleteಚೆನಾಗಿದೆ :)
ಧನ್ಯವಾದ ಚಿನ್ನು...
Deleteಎರಡೆರಡೇ ಅಕ್ಷರಗಳ ಚಿಕ್ಕ ಚೊಕ್ಕ ಸಾಲುಗಳಲ್ಲಿ ಪ್ರೇಮದ ವರ್ಣನೆ ಚೆನ್ನಾಗಿದೆ!
ReplyDeleteಫ್ರದೀಪಾ...ಸೋ ನೈಸ್ ಅಫ್ ಯೂ...ಅಂದರೆ ನಿನ್ನ ಆತ್ಮೀಯತೆಗೆ ಧನ್ಯವಾದ.
Deleteಚಿಕ್ಕದಾಗಿ ಚೊಕ್ಕವಾಗಿದೆ... ಪ್ರೇಮದ ಎಲ್ಲಾ ಪರಿಗಳನ್ನು ಪುಟ್ಟದಾಗಿ ವರ್ಣಿಸಿದ್ದೀರಿ .. ತುಂಬಾ ಹಿಡಿಸಿತು. :)
ReplyDeleteನಿವಿ ಧನ್ಯವಾದ...ಬ್ಲಾಗ್ ಬಡವಾಗದಿರಲೆಂದು ಆಶಯ ನನ್ನದು...ಆದರೆ ತಾಂತ್ರಿಕ ಕಾರಣಗಳಿಂದ ಬಹಳ ದಿನ ಬ್ಲಾಗ್ ನವೀಕರಿಸಲಾಗಲಿಲ್ಲ.
ReplyDelete