Wednesday, April 2, 2014

ರಾಧಾಲಾಪ

ಚಿತ್ರ ಕೃಪೆ: ಅಂತರ್ಜಾಲ

ರಾಧಾಲಾಪ
*********
ನಿಲ್ಲಿಸು ಕೊಳಲ ನಾ
ತಾಳಲಾರೆ ನಿನ್ನ ತುಟಿಯ
ತಾಕ ತಾಪವಿದೆ ಈ
ತುಟಿಗೆ, ನುಡಿಸು
ನಡೆಸು-ಬೆರಳಾಟದಿ
ಬಿರಿಯರಿವೆ ಸಡಲಿಸು
ತಣಿಸೆನ್ನ ಮನದಣಿಯೆ
ಸವತಿಯ ನಾ ಸಹಿಸೆ
ಕಣ್ಮುಚ್ಚಿ ಕನಸಲೂ..

ಪನಘಟದಿ ಕಾದೆ
ನಿನ ಹಟದಿ ನೊಂದೆ
ಕರೆ ಕೊರಳೆತ್ತಿ ಒಮ್ಮೆ
ಕೊಳಲೆತ್ತಿದೆ ಬರಿದೆ,
ದೂರುವುದಿಲ್ಲ ಎಂದೂ
ಕದ್ದೆಯೆಂದು, ಮೆದ್ದೆಯೆಂದು
ಅರಿವಿದೆ ನಿನ್ನಾಟ ಕಾಟ
ನನ್ನುರಿಗೆ ಹಚ್ಚುವೆ
ಕೊಳಲದನಿಗೆ ಬೆಚ್ಚುವೆ
ಬಿಡು ಕಣ್ಣ ಮುಚ್ಚಾಲೆ
ಬಂದರೆ ಘನಶ್ಯಾಮ

ದಿಟ ನನಗೆ ಸೋಲೇ.

13 comments:

  1. ವಾವ್.
    ಕೊಳಲು ಸವತಿ!
    ಈ ತಾಪದ ಹುಯಿಲು ಅಕ್ಷರ ಅಕ್ಷರಗಳಲೂ ಮಿಳಿತವಾಗಿದೆ.

    ReplyDelete
  2. ಧನ್ಯವಾದ ಬದರಿ,,,,ನಿಮ್ಮಿಂದ ಕಲಿತದ್ದೇ ಪದಕಟ್ಟುವುದು... ಇನ್ನೂ ಕಲಿಯಬೇಕಿದೆ..

    ReplyDelete
  3. ರಾಧೆಯ ಆ ಸ್ವಾರ್ಥವ ಕಡಿಮೆ ಪದಗಳಲಿ ಹೆಚ್ಚು ಜೇವವ ಕೊಟ್ಟು ಅದನ್ನು ಪಾಠಕನ ಮನಕ್ಕೆ ಇಳಿಸಿದ ಬಗೆ ತುಂಬಾ ಖುಷಿಯಾಯ್ತು ಸರ್.
    "ಕದ್ದೆಯೆಂದು, ಮೆದ್ದೆಯೆಂದು
    ಅರಿವಿದೆ ನಿನ್ನಾಟ ಕಾಟ
    ನನ್ನುರಿಗೆ ಹಚ್ಚುವೆ
    ಕೊಳಲದನಿಗೆ ಬೆಚ್ಚುವೆ"
    ಈ ಸಾಲುಗಳು ತುಂಬಾ ಇಷ್ಟವಾದವು ಸರ್
    ನಿಮ್ಮಿಂದ ಬಂದ ಒಂದು ಒಳ್ಳೆಯ ಕವಿಥೆಗೆ ಧನ್ಯವಾದಗಳು ಸರ್

    ReplyDelete
  4. ಪೃಥ್ವಿರಾಜ್ ಧನ್ಯವಾದ ನನ್ನ ಬ್ಲಾಗಿಗೆ ಸ್ವಾಗತ...

    ReplyDelete
  5. ಜಲನಯನ,
    ಈ ಗೀತೆಯು ಜಯದೇವನ ‘ಗೀತಗೋವಿಂದ’ವನ್ನು ನೆನಪಿಗೆ ತರುತ್ತದೆ.

    ReplyDelete
    Replies
    1. This comment has been removed by the author.

      Delete
    2. ಧನ್ಯವಾದ ಸುನಾಥಣ್ಣ ನಿಮ್ಮ ಆತ್ಮೀಯತೆ ಪ್ರೋತ್ಸಾಹಗಳಿಗೆ

      Delete
  6. ರಾಧಾಳ ಮನದಾಳದ ಮಾತು ಎಷ್ಟು ಸುಂದರವಾಗಿ ಭಾವಾತ್ಮಕವಾಗಿ ಬಿಚ್ಚಿಟ್ಟಿದ್ದೀರಿ ಆ ಚಿಕ್ಕ ಚೊಕ್ಕ ಸಾಲುಗಳಲ್ಲಿ... ತುಂಬಾ ಇಷ್ಟವಾಯ್ತು ಆಜ಼ಾದಣ್ಣಾ.

    ReplyDelete
    Replies
    1. ಪ್ರದೀಪ್ ಧನ್ಯವಾದ... ಹೀಗೇ ಹಾಗೊಮ್ಮೆ...

      Delete
  7. Sundara rachane azad bhai!..... raadhalaapave sari idu :).... ishtavaaythu

    ReplyDelete