Saturday, July 20, 2019

ಕೆಲವು ಹಾಯ್ಕುಗಳು...ಒಂದು ಕವನ

ಸ್ನೇಹ


ಎರಡು ಎಳೆ
ಮಧ್ಯದಲಿ ಇಹುದು
ಅದುವೇ ಸ್ನೇಹ

ಕಮಟು ನಾತ
ಹೆಚ್ಚಾಯಿತಂದ್ರೆ ಗೋತ
ರೋಗಕ್ಕೆ ಸ್ನೇಹ

ಸಂಪದ ಪದ
ಸಂಪನ್ನರಿರುವೆಡೆ
ಒಂಥರಾ ಸ್ನೇಹ

ನಾನು ಕಬ್ಬಿಣ
ಅವಳೋ ಆಯಸ್ಕಾಂತ
ನಮ್ಮದೂ ಸ್ನೇಹ

ಅಪ್ಪ ಮಗಳು
ತಂದೆ ತಾಯಿ ಮಕ್ಕಳು
ಹೀಗಿದೆ ಸ್ನೇಹ

ಬಿಸಿಲ ಬಸಿರು

ಬೇಸಿಗೆಯಲಿದೆ ಬೇಗೆ
ಅದು ಹೇಳಿ ಹೇಗೆ?
ಹೊತ್ತಿಸಿ ನೋಡು
ಒಣ ತೆಂಗಿನ ಸೋಗೆ.

ಬಿಸಿಲ ಬಸಿರೊಳಗೆ
ಉಸುರಿನಲಿದೆ ಬೇಗೆ
ಹಸಿರೆಲೆಯ ಹಾದಿ
ತಂಪು ಇಂಪಾದ ಗಾದಿ.

ಕಣ ಕಣಜಕೆ ಕಾಳು
ಧಣಿ ದಣಿದವನ ಬಾಳು
ಎಸರೆಸರಲಿ ಕನಸು
ಹನಿ ಹನಿದರೆ ನನಸು.

ಮಣ್ಣಲಿ ಅಡಕವಾಗಿದೆ
ಕಣ್ಣರಳಿಸುವ ಮಣ
ಹಣವೆನೆ ಬಾಯ್ಬಿಡುವುದು
ಹೂತಿಟ್ಟ ಸುಟ್ಟ ಹೆಣ.

ಬಾಯ್ಬಿಟ್ಟಿದೆ ಬಿರಿದ ನೆಲ
ಜಲಬಿಂದುವಿನಾಸೆಯಲಿ
ಬಿರಿದ ಒಡಲು ಬಾಳೆ ಮೀನು
ಮೋಡ ಕರಗಿ ಹನಿಯಲಿ.

ಕತ್ತೆ ಮೆರವಣಿಗೆಯಲಿ
ಕಪ್ಪೆರಾಯನು ದಿಬ್ಬಣ
ಮಳೆರಾಯನನು ಕೂಗಿ
ಕರೆಯುತಿದೆ ಓಣಿ ಬಣ.

4 comments:

  1. ಮಣ ಮತ್ತು ಹೆಣ ಬಹಳ ಉತ್ತಮವಾಗಿ ಇಲ್ಲಿ ಅರ್ಥೈಸಿವೆ.

    ಕತ್ತೆ ಮೆರವಣಿಗೆ ನಮಗೆ ದಿನವೂ ವಾಹಿನಿಗಳಲ್ಲಿ, ನಿಮ್ಮ ಗಮನಕ್ಕೂ ಬಂದಿರಬಹುದು! 😁 ಪಾಪಿಗಳ ಲೋಕದಲಿ ಮಳೆಯ ಸುಳಿವೆಲ್ಲಿ ಪ್ರಭುವೇ!

    ಹಾಯ್ಕುಗಳು ಬಹಳ ಚೆನ್ನಾಗಿ ಬಂದಿವೆ. Especially ಕಬ್ಬಿಣ ಮತ್ತು ಅಯಸ್ಕಾಂತದ್ದು.

    ಒಟ್ಟಾರೆ ಭಾನುವಾರ ಬಾಡುಟ!

    ReplyDelete
  2. ಕತ್ತೆ ಮೆರವಣಿಗೆ...,
    ಮಣ್ಣಲ್ಲಿ...,
    ಕಣಕಣದಲಿ....
    ನಾನು ಕಬ್ಬಿಣ...
    ಇವೆಲ್ಲ ತಕ್ಷಣ ಮನಸೆಳೆಯುವಂತೆ ,
    ಉಳಿದ ಎಲ್ಲ ಕವನಗಳು ಸಹ ಇಷ್ಟವಾದವು.

    ReplyDelete
  3. ಹಾಯ್ಕುಪ್ರಭುವಿಗೆ ವಂದನೆಗಳು!

    ReplyDelete
  4. We are urgently in need of Kidney donors with the sum of $500,000.00,
    Email: customercareunitplc@gmail.com

    ReplyDelete