ನುಡಿಯಡಿಗೆ ನಡೆ
ನುಡಿಯಲಿದು ನಡೆ
ಎಡೆಬಿಡದೆ ನಡೆ
ಬಿಡದೇ ಕನ್ನಡ
ದಡಸೇರಲಿದೆ ಗಡ
ಉಲಿಯಲಿದು ಸಿರಿ ಅಕ್ಕರ
ಸುಲಿದಂತೆ ಬಾಳೆ ಜೊತೆ
ತಿಂದಂತೆ ಶರ್ಕರ
ಬಿಗುಮಾನವ ಬಿಡೆ
ನುಡಿಯಡಿಗೆ ನಡೆ
ಸಕ್ಕಕೂ ಮೊದಲಂತೆ
ನುಡಿಯಾಗಿ ಮೆರೆದಂತೆ
ದ್ರಾವಿಡದ ದಡದಲ್ಲಿ
ಆದಿ ಮರ ಬುಡದಲ್ಲಿ
ಆಸಕ್ತಿಯ ಕೊಡೆ
ನುಡಿಯಡಿಗೆ ನಡೆ
ಆದಿಕವಿ -ರವಿ
ಕಾಣದ ಕಂಡ ಕವಿ
ಹಳಗನ್ನಡ, ನಡು
ಕನ್ನಡ, ನವಗನ್ನಡ
ಈಗೇಕೆ ಬಿಡುಗನ್ನಡ?
ಅಂಧಾಭಿಮಾನ ತೊಡೆ
ನುಡಿಯೆಡೆಗೆ ನಡೆ
ಕನ್ನಡಕೆ ಎಂಟು
ಜ್ಞಾನಪೀಠದ ಗಂಟು
ಆದರೂ ಕನ್ನಡಕೆ ಕುಂಟು
ನೆಪಗಳದ್ದೇ ಸದಾ ನಂಟು
ನವಂಬರಿಗೇ ಮೀಸಲೇಕೆ?
ಅಡ್ಡಿ ಸದಾ ಬಳಸಲೇಕೆ?
ಗಮನವಿರಲಿ ಈ ಕಡೆ
ನುಡಿಯಡಿಗೆ ನಡೆ
ಸ್ಫೂರ್ತಿದಾಯಕ ಸಂದೇಶ, ಚೆಲುವಾದ ಕವನ. ಸರಿ ಜಲನಯನ, ಇಗೊ ನುಡಿಯಡಿಗೆ ನಡೆಯುವೆ, ನಡೆಯೋಣ!
ReplyDeleteನನ್ನೊಳಗಿನ ಕನ್ನಡಿಗನು ಸದಾ ಹಾಡಿಕೊಳ್ಳಬಲ್ಲ ಹೆಮ್ಮೆಯ ಗೀತೆ.
ReplyDelete