Thursday, April 9, 2009

ಛೀ..ಛೀ..ಥೂ..ಥೂ..

ಛೀ..ಛೀ..ಥೂ..ಥೂ..
ವಾಂತಿ ಬರುತ್ತೆ ರೀ ಈಹೊತ್ತಿನ
ರಾಜಕೀಯ ನೋಡಿದ್ರೆ...ಛೀ..ಛೀ..
ದೇವರಾಣೆ ಇಟ್ಟು ದೇವರ್ಗೇ
ಮಹದೇವನಾಣೆ ಇಡಿಸ್ಬಿಡ್ತಾರೆ..ಛೀ..ಛೀ..
ಜರೀತಾರೆ, ಬೈತಾರೆ
ಆಮೇಲೆ ಅವರ್ಹೆಂಡ್ತಿಗೆ
ಜರತಾರೀ ಪ್ರೆಸೆಂಟ್ ಮಾಡ್ತಾರೆ
ಉಗುಳಿದ್ದು ನೆಲಬೀಳೋಕ್ಮುಂಚೆ
ಜರೀ ಪಂಚೇಲೇ ಒರಸ್ತಾರೆ..ಛೀ..ಛೀ..
ಹೆಂಡ ಕುಡುಸ್ತಾರೆ
ಸೀರೆ ತೊಡುಸ್ತಾರೆ
ಕಿಸೆಕೊಂದಷ್ಟು ರೊಕ್ಕ ತುರುಕ್ತಾರೆ
ಗೆದ್ದು ಬಂದರೆ..
ಸೀರೆ ಸೆಳೀತಾರೆ, ಉಂಡಿದ್ದು
ಕಕ್ಕೋಹಾಗೆ ಎದೇಗೊದೀತಾರೆ
ಮಕ್ಕಳು-ಮರಿ ಅನ್ನ್ದೇ
ಕೈಲಿದ್ದ ಕಾಸೂ ಕಿತ್ಕೋತಾರೆ
ಏಳೇಳು ಜನ್ಮಕ್ಕೂ ಬ್ಯಾಡಪ್ಪ
ರಾಜ್ಯ ಕೊಟ್ಟ್ರೂ ರಾಜಕಾರಣಿ
ಸವಾಸ..ಛೀ..ಛೀ..ಥೂ..ಥೂ..

7 comments:

 1. ಚೆನ್ನಾಗೇ ಹೇಳಿದ್ದೀರಿ ಸರ್.
  -ಧರಿತ್ರಿ

  ReplyDelete
 2. ಧರಿತ್ರಿಗೆ ಜಲನಯನಕ್ಕೆ ಸ್ವಾಗತ...
  ನಮ್ಮ ರಾಜಕಾರಣಿಗಳು ಇತ್ತ ಜನನಾಯಕರಾಗಿ ಉಳಿದಿಲ್ಲ ಅತ್ತ ರಾಜಕಾರಣದ ಗಂಧವೂ ಗೊತ್ತಿಲ್ಲ. ಹಿಂದಿನ ಮೌಲ್ಯಗಳು ಏನಾದವು...ಮತದಾರ fool ಅಲ್ಲ ಇವರನ್ನೇ fool ಮಾಡುವ ಚಾಣಾಕ್ಷ ಅನ್ನೋದನ್ನು ತೋರಿಸ್ಬೇಕು...
  responseಗೆ thanks.

  ReplyDelete
 3. ಅಸಹ್ಯವಾದದ ರಾಜಕೀಯ ಯಾರು ಸಾಚರಲ್ಲ ಸರ್ ಎಲ್ಲರು ದುಡ್ಡಿಗಾಗಿ ಮುಗ್ಧ ಜನರು ಆಮಿಷಕ್ಕೆ ಮರುಳಗುತ್ತಲಿದ್ದರೆ ....

  ReplyDelete
 4. ಏನು ಛೀ ಥೂ ಅಂದ್ರೂ ಅಷ್ಟೇ, ಕೊಚ್ಚೆ ಕೊಚ್ಚೇನೇ... ಸುಧಾರಿಸಲ್ಲ ಬಿಡಿ.

  ReplyDelete
 5. ತುಂಬಾ ಚೆನ್ನಾಗಿದೆ ಕವಿತೆ. ತಪ್ಪು ನಮ್ಮದು ಇದೆ ಅನ್ಸಲ್ವಾ ನಿಮಗೆ? ಪ್ರಜಾಪ್ರಭುತ್ವದಲ್ಲಿ ಒಳ್ಳೆಯದಾಗಲಿ ಕೆಟ್ಟದಾಗಲಿ ಏನೇ ಆದರೂ ಅದೆಲ್ಲ ಜನಗಳಿಂದ, ಜನಗಳಿಗಾಗಿ, ಜನಗಳಿಗೋಸ್ಕರ ಅಲ್ಲವೇ?

  -Basavaraju

  ReplyDelete
 6. ಚೆನ್ನಾಗಿ ಇದೆ... ...ಛೀ..ಛೀ..ಥೂ ಥೂ... ಕವನ,,,,
  ಇವರಿಗೆ ಎಷ್ಟು ಅಂದ್ರು ಅಸ್ತೇನೆ......... ಏನೋ ಅಂತಾರಲ್ಲ... ಕೆಸರಿಗೆ ಕಲ್ಲು ಎಸೆದರೆ ನಮಗೆ ಸಿಡಿಯೋದು... ಈ ಅವ್ಯವಸ್ಥೆಗೆ ನಾವೇ ಕಾರಣರು...ಏನು ಮಾಡೋಕೆ ಆಗೋಲ್ಲ... ಅನುಭವಿಸಬೇಕು ಅಸ್ಟ್ಟೆ ಯಾವಾಗ ಬದಲಾವಣೆಯ ಗಾಳಿ ಬೀಸುತ್ತೋ ಗೊತ್ತಿಲ್ಲ.....
  ನಿಜ ಹೇಳ್ಬೇಕಂದ್ರೆ,,, ಇತ್ತೀಚಿಗೆ ನಾನು ಪೇಪರ್ ನೋಡೋದೇ ಕಮ್ಮಿ ಮಾಡಿದೇನೆ.... ಇದೆ ಕಾರಣಕ್ಕೆ .....

  ಗುರು

  ReplyDelete
 7. ಮನಸು ರವರೇ
  ಇದು ಮೌಲ್ಯಗಳ ಅದಃಪತನ ಎಂದರೆ ತಪ್ಪಲ್ಲ, ಅದು ಪ್ರಜೆಗಳಾಗಿ ನಮ್ಮದೇ ಇರಬಹುದು, ಜನ ಮತ್ತು ದೇಶ ಸೇವೆಯ ಗುರುತರ ಹೊಣೆಗಾಗಿ ಆಯ್ಕೆಯಾಗುವ ರಾಜಕಾರಣಿಗಳದ್ದಾಗಿರಬಹುದು. ಈಗಾಗಲೇ ಎಷ್ಟು ಕೋಟಿ ನಗದು, ಎಷ್ಟು ಕೋಟಿ ರೂಪಾಯಿ ಮೌಲ್ಯದ ಸೀರೆ, ಮದ್ಯ ಇತ್ಯಾದಿ ಜಪ್ತಿಯಾಗಿದೆ,,!!??
  ಬಸವರಾಜು ಹೇಳಿದಂತೆ ಜನ ಇದನ್ನು ಅರ್ಥೈಸಿಕೊಳ್ಳಬೇಕು.
  ಪ್ರಭುರವರ ಹೇಳಿಕೆಯೂ ಮಹತ್ವದ್ದು, ಕೊಚ್ಚೆ..ಇದು..ಬಹು ಅನ್ವರ್ಥ ನಾಮ ಇಂದಿನ ರಾಜಕಾರಣಿಗೆ...ಆದರೆ..ಈ ಕೊಚ್ಚೆಯನ್ನ ಬಸಿ ಚರಂಡಿ ಮೂಲಕ ಶುದ್ಧಿಮಾಡೋದೇ ಸೂಕ್ತ ಮಾರ್ಗ..ಕಾಯೋದರಿಂದ ಇವರು ಸುಧಾರಿಸೊಲ್ಲ

  ReplyDelete