Friday, May 15, 2009

ನಂಗೊತ್ತಿಲ್ಲ ಮಗು

ಅಪ್ಪಾ
ಏನು ಮಗು?
ಕಾಂಗ್ರೇಸ್ ಇತ್ತು
ಈಗಲೂ ಇದೆ ಅನ್ನು..
ಹೌದು ಮಗು,
ಜನತಾ ಅಂತ ಇತ್ತು
ಈಗ, ಆ ಜಪಾ, ಇಜಪಾ, ಉಜಪಾ
ಲೆಫ್ಟು, ರೈಟು, ಫಾರ್ವರ್ಡು ಬ್ಯಾಕ್ ವರ್ಡು
ಪ್ರಥಮ, ದ್ವಿತೀಯ, ತೃತೀಯ ಮತ್ತೆ ಈಗ
ಚತುರ್ಥ ರಂಗ ಅಂತೆ..
ಯಾಕಪ್ಪಾ?
ನಂಗೊತ್ತಿಲ್ಲ ಮಗು

ಅಪ್ಪಾ
ಒಡೆದು ಆಳೋಕೆ
ಸಂಚು ಮಾಡ್ತಾರಂತೆ ಅಲ್ವೇ ಅಪ್ಪಾ..
ಹೌದು ಮಗು..
ಮತ್ತೆ... ಬದ್ಧ ವೈರಿಗಳ ತರಹ ಇದ್ದೋರು
ಯಾರೂ ಶಾಶ್ವತ ಶತೃಗಳಲ್ಲ
ಹಾಗೇ ಶಾಶ್ವತ ಮಿತ್ರರೂ ಅಲ್ಲ ಅಂತಾರಲ್ಲ
ಹೌದು ಮಗು..
ಹಾಗಾದ್ರೆ ಅವರಿಗೋಸ್ಕರ
ಪ್ರಾಣಗಳನ್ನೇ ಕಳಕೊಳ್ಳೋ ನಾವು ಮೂರ್ಖರಲ್ಲವೇ..
ನಂಗೊತ್ತಿಲ್ಲ ಮಗು

ಅಪ್ಪಾ
ಹೇಳು ಮಗು
ನೂರಕ್ಕಿಂತ ಹೆಚ್ಚಿಂದು ದೊಡ್ಡದೋ
ಐವತ್ತಕ್ಕಿಂತ ಕಡಿಮೇದು ದೊಡ್ಡದೋ?
ಸಾರ್ಥಕ ಆಯ್ತು ನಿನ್ಗೆ ಗಣಿತ ಕಲಿಸಿದ್ದಕ್ಕೆ
ನೂರು- ಐವತ್ತಕ್ಕಿಂತ ದೊಡ್ಡದಲ್ಲವೇನೋ..???
ಮತ್ತೆ.. 30-40 ಸೀಟಿರೋ ಪಕ್ಷ
ನೂರಕ್ಕಿಂತ ಹೆಚ್ಚಿರೋ ಪಕ್ಷಾನ ಆಟ ಆಡ್ಸುತ್ತಲ್ಲಾ?
ಅವರಿಗೆ ಗಣಿತ ಗೊತ್ತಿಲ್ವಾ ಅಪ್ಪ??
ನಂಗೊತ್ತಿಲ್ಲ ಮಗು

6 comments:

  1. ಅಪ್ಪ-ಮಗು ನಡುವಿನ ಕಾವ್ಯಮಯ ಸ೦ಭಾಷಣೆ ಚೆನ್ನಾಗಿದೆ. ಈ ದಿನದ ಸ್ಥಿತಿಗೆ ಹೊ೦ದಿಕೆಯಾಗುತ್ತದೆ.

    ReplyDelete
  2. ಸರ್.

    ತುಂಬಾ ಚೆನ್ನಾಗಿದೆ. ಇಂದಿನ ಪರಿಸ್ಥಿತಿಗೆ ಕನ್ನಡಿ ಹಿಡಿದಂತಿದೆ. ಜೊತೆಯಲ್ಲಿಯೇ ಮಗುವಿನ ಮುಗ್ಧತೆಯೂ ಪ್ರತಿಬಿಂಬಿತವಾಗಿದೆ.

    ReplyDelete
  3. super!!!!!! ivatu java japa no gotilla... result bandamele gotagute hahaha

    ReplyDelete
  4. ಮೇಲ್ನೋಟಕ್ಕೆ ಅಪ್ಪ ಮಗುವಿನ ಸಂಭಾಷಣೆ ತರ ಕಂಡರೂ ಆಳದಲ್ಲಿ ಅಗಾಧ ಅರ್ಥವನ್ನು ಅಡಗಿಸಿಕೊಂಡಿರುವ ಕವನ. ಚನ್ನಾಗಿದೆ.

    ReplyDelete
  5. ಪರಾಂಜಪೆ, ಶಿವು, ಮನಸು ಮತ್ತು ಬಿಸಿಲಹನಿ..ಎಲ್ಲರಿಗೆ...ಧನ್ಯವಾದಗಳು...
    ಮಗು-ತಂದೆಯ ಸಂವಾದ ನನಗೆ ಬಹಳ ವರ್ಷಗಳ ಹಿಂದೆ ಇಂಗ್ಲೀಷಿನಲ್ಲಿ (ಬಹುಶಃ...Indeian Express ನಲ್ಲಿ) ಬರುತ್ತಿದ್ದ
    I dont know son ಪ್ರೇರಣೆಮಾಡಿದ್ದು...ಇದರಲ್ಲಿ ನನಗೆ ಇಷ್ಟವಾದದ್ದು ಮಗುವಿನ ಮುಗ್ಧತೆ ಎಂಥ ಪ್ರಶ್ನೆಯನ್ನೂ ಕೇಳುವಂತೆ ಮಾಡುತ್ತದೆ ಎನ್ನುವುದು ಹಾಗೇ...ಆ ಎಲ್ಲ ಪ್ರಶ್ನೆಗಳನ್ನೂ
    ಉತ್ತರಿಸಲು ಪ್ರಬುದ್ಧರಿಗೂ ಸಾಧ್ಯವಾಗದು ಎನ್ನುವುದು ಮತ್ತು ಹಲವು ಇಕ್ಕಟ್ಟಿಗೆ ಸಿಕ್ಕಿಸುವ ಪ್ರಶ್ನೆಗಳನ್ನು ಮಕ್ಕಳು ಕೇಳಬಹುದು..ಅವರ ಯೋಚನೆಗಳನ್ನು ಹತ್ತಿಕ್ಕುವುದೂ ಸರಿಯಲ್ಲ ಎನ್ನುವುದು.
    Thanks for the response

    ReplyDelete
  6. very nice....ನಂಗೊತ್ತಿಲ್ಲ ಮಗು ವಿನ ಎಲ್ಲ ಕವನಗಳು ಅದ್ಬುತ ವಾಗಿ ಮೂಡಿಬಂದಿದೆ......ರಾಜಕಾರಣದ ಹೊಳ ಹೊರಗನ್ನು ಚೆನ್ನಾಗಿ ನವಿರಾಗಿ ಕವನದ ಮೂಲಕ ವರ್ಣಿಸಿದ್ದಿರ.....
    ಮುಂದುವರಿಸಿ.....
    ಗುರು

    ReplyDelete