Friday, June 5, 2009

ಎಚ್ಚೆತ್ಕೋಳಿ ಮುಂಚೇಯ


ಗೆಳೆಯರೇ ಇದು ಚಿತ್ರ ಕವನ ಬ್ಲಾಗ್ ನಲ್ಲಿನ ಚಿತ್ರಕ್ಕೆ ಬರೆದ ಕವಿತೆ

ಎಚ್ಚೆತ್ಕೋಳಿ ಮುಂಚೇಯ
ಇಳಿವಯಸ್ನಾಗ್ ಇವ್ನಿ
ದುಡ್ಯಾಕಾಯ್ತದಾ ನಿಮ್ಮಂಗೆ ?
ನಾನಲ್ಲೇಯವ್ವಾ ಜವ್ನಿ
ಒಟ್ಟೆ-ಬಟ್ಟೆ ಕಟ್ಟೀ ಸಾಕ್ದೆ
ದುಡ್ದು ಮದ್ವಿ ಆಗೋಗಂಟ
ಅಗ್ಲು-ರಾತ್ರೆ ಅನ್ದೇ ತಂದಾಕ್ದೆ
ಸಾಲನೋವಾಲನೋ ಮಾಡಿ
ನೂರ್ ಸುಳ್ಳೇಳಿ ನಿನ್ಮದ್ವೆ ಮಾಡ್ದೆ
ಗಂಡ ಓದ್ಮ್ಯಾಲೆ ನಿನ್ನಣ್ಣನ್ ಓದ್ಗೆ
ಅಡ ಇಟ್ಟ ಬೂಮಿ ಬುಡ್ಸ್ಕಳ್ಳಾಕಾಗ್ದೆ
ಅವನ್ಮದ್ವೇಗೆ ಅಂತ ಮಾರಾಕ್ದೆ
ಅವ್ನೋ ಇದ್ ಮನೆ ಬರ್ಸ್ಕಂಡ
ಇದ್ಬದ್ದ ವಡ್ವೆ ಹೆಂಡ್ತಿಗಂತ ಕಸ್ಕೊಂಡ
ಇಳೀವಯಸ್ನಾಗೆ ಕಲ್ಲೊರ್ತೀನಿ
ಮರ ಚೆಕ್ಕೆ ಮಾರಿ ಒಟ್ಟೆ ಒರ್ಕೋತಿವ್ನಿ
ಕಡೀತಾ ಇಲ್ವೇ ನೀವೂ
ಅಣ್ಣೂ ಅಂಪ್ಲೂ ಕೊಡೋ ಮರಾವ
ಬಗೀತಾ ಇಲ್ವಾ ಅನ್ನಾಕೊಡೋ
ತಾಯಿ ಒಟ್ಟೇಯ....
ಜ್ವಾಕೆ ಕಣ್ರಪ್ಪಾ ಜ್ವಾಕೆ..!!
ಉರಿಸ್ಬ್ಯಾಡಿ ಅಡ್ದ್ ಒಟ್ಟೇಯಾ
ಏನ್ ಆಕ್ಕಂಡೀರಿ ಕಡ್ದ್ ಕಟ್ಟೇಯಾ?
ಅದ್ಕೇ ಏಳ್ತಿವ್ನಿ ಎಚ್ಚೆತ್ಕೊಳ್ಳಿ
ನೀವು ಎತ್ತೋರ್ಗೆ ಬೂತಾಯ್ಗೆ
ಮಾಡ್ದಂಗೆ ನಿಮ್ಮಕ್ಕ್ಳೂ ನಿಮಗೆ
ಮಾಡೋದಕ್ಕೆ ಮುಂಚೇಯಾ

5 comments:

  1. ಬಹಳ ಚೆನ್ನಾಗಿದೆ ಕವನದ ಭಾವಾರ್ಥ. ದೇಸಿ ಸೊಗಡಿನ ಭಾಷೆಯಲ್ಲಿ ಹೇಳಬೇಕಾದ್ದನ್ನು ಹಿತಮಿತ ಶಬ್ದಬಳಕೆಯಲ್ಲಿ ಹೇಳಿದ್ದಿರಿ.

    ReplyDelete
  2. ಈ ಚಿತ್ರಕ್ಕೆ ತುಂಬಾ ಒಪ್ಪಿಗೆಯಾಗುವ ಕವನ. ಹಳ್ಳಿಯ ಮುದುಕಿಯ ಬವಣೆಗೆ ತಕ್ಕ ಭಾಷೆ ಇಲ್ಲಿದೆ.

    ReplyDelete
  3. ಪರಾಂಜಪೆಯವರೇ, ವಯಸ್ಸಾದ ತಂದೆ-ತಾಯಿ ನನ್ನ ಅನಿಸಿಕೆ ಪ್ರಕಾರ ದುರದೃಷ್ಟ ವಶಾತ್ ಮಕ್ಕಳಿಂದ ಅದೇ ಪ್ರೀತಿಗೆ ಪಾತ್ರರಾಗಿರುವುದಿಲ್ಲ.
    ಅವರ ತಳಮಳವನ್ನು ಬಿಂಬಿಸುವ ಪ್ರಯತ್ನ. ಧನ್ಯವಾದ..ಪ್ರತಿಕ್ರಿಯೆಗೆ.

    ಸುನಾಥ್ ಸರ್..ನಿಮ್ಮಂತಹವರು ನವಿರಾಗಿಯಾದರೂ ಟೀಕೆ ಮಾಡಿದರೆ ನಮ್ಮ ಬರವಣಿಗೆಯನ್ನು ಸುಧಾರಿಸಿಕೊಳ್ಳಬಹುದು...thanks ನಿಮ್ಮ ಪ್ರೋತ್ಸಾಹಕ್ಕೆ.

    ReplyDelete
  4. ದೇಸಿ, ಅದರಲ್ಲೂ ಹಳ್ಳಿ ಸೊಗಡಿನ ಭಾಷೆ ನಿಮಗೆ ಚೆನ್ನಾಗಿ ಬರುತ್ತೆ... ಆ ಸೊಗಡಿನ ಸುಂದರ ಕವನ ಬಹಳ ಚೆನ್ನಾಗಿದೆ..

    ReplyDelete
  5. ಪ್ರಭು..ಎನ್ಬುದ್ದಿ ಈ ಪಾಟಿ ದೊಡ್ಮಾತು..ಸಣ್ಮಸ್ಯಾ ನಾನು..ಬುದ್ಯೋರ್ ಆಸೀರ್ವಾದ ಇದ್ರೆ..ಮುಂದ್ಕೂ ಇಂಗೇ ಏನಾರಾ ವಸಿ ಬರೀಮಾ ಅಂತ ಬುದ್ದಿ..ಬೊರ್ತಾ ಇರೀ ಬುದ್ದಿ ನಮ್ಮನೀಕಡೀಕೆ...ನಿಮ್ಮಷ್ಟ್ ಇಲ್ಬುಡ್ರಿ ನಮ್ ಬರ್ವಣ್ಗೇ...ಬೋ ಪಸಂದಾಗಿ ಬರೀತೀರ್ ಬುದ್ದೀ...

    ReplyDelete