Friday, July 10, 2009

ಭೇತಾಳನೊಂದಿಗೆ ಒಂದು ಸಂಭಾಷಣೆ



ಶತವಿಕ್ರಮ- ಭೇತಾಳರ ನನ್ನ ಅಸಂಬದ್ಧ ಪ್ರಲಾಪಗಳನ್ನು...ಸದ್ಯಕ್ಕೆ ನಿಲ್ಲಿಸುವ ಯೋಜನೆಯಂತೂ ಇಲ್ಲ, ಹಾಂ...!!! ಬೋರ್..ಆದ್ರೂ..ನನ್ನ ಸಹವಾಸ ಮಾಡಿದ್ದಕ್ಕೆ ಸಹಿಸ್ಕೋಬೇಕು ನೀವು...ಯಾಕೆ..?? ಸಹಿಸ್ಕೊಂಡು..ನಿಮ್ಮ ಕವನಗಳು, ಕಥೆಗಳು, ವ್ಯಥೆಗಳಿಗೆ ಬ್ಲಾಗುಗಳಿಗೆ ಸ್ಪಂದಿಸೊಲ್ಲವೇ..?? ನಾನೂ..????!!!
ತಲಹಟೆ ಸಾಕು....ಮುಂದಕ್ಕೆ ಬರಿ ಅಂತೀರಾ..?? ಏನು?...ಏನೋ ಬಹಳ ಬರಿಯೋನ ತರಹ ಬೊಗಳೆ ಬಿಟ್ಕೋತೀಯಲ್ಲಾ..?? ವಿಕ್ರಮನ ಸಂತತಿ ಶತ ಆದ್ರೂ...ಭೇತಾಳ ಹ್ಯಾಗೇ..ಬರೀ ಭೇತಾಳ, ಶತಭೇತಾಳ, ಸಹಸ್ರ ಭೇತಾಳ, ಇತ್ಯಾದಿ ಯಾಕಲ್ಲ..?? .. ಅಂತಿದ್ದೀರಾ..?? ..ರೀ ಸ್ವಾಮಿ...ಬೊಗಳೆ ಈವಾಗ ನಿಮ್ಮದೋ...ನನ್ನದೋ..ಹೇಳಿ..???
ಅಲ್ರೀ...ಪಾಪಿ ಚಿರಾಯು ...ಅಂತ ಪುರಾಣಗಳ ಕಾಲದಿಂದಲೇ ಹೇಳಿದ್ದಾರಲ್ಲವೇ...??!! ಓಕೆ..ಓಕೆ... ಕಾಲೆಳೆಯೋದು ಸಾಕು ಅಂದ್ರಾ..??? ಸರಿ ವಿಷಯಕ್ಕೆ ಬರೋಣ...

ನಮ್ಮ ಶತ ವಿಕ್ರಮ ಮುಳ್ಳಿನಜಾಲಿ ಮರಕ್ಕೆ..ಮುಳ್ಳು ಚುಚ್ಚುತಾಯಿದ್ರೂ ಚುಚ್ಚಿಸ್ಕೊಂಡೇ ನೇತಾಡ್ತ ಜೋತು ಬಿದ್ದಿದ್ದ ಭೇತಾಳನ್ನ ಇಳಿಸಿ ಹೆಗಲಿಗೇರಿಸಿ ಶವದವ್ಯಾನಿನ ಕಡೆ ಹೊರಟಾಗ..ಐದು ವರ್ಷ ಸಂಸದನಾಗಿ, ವಿಧಾನ ಸಭಾ ಸದಸ್ಯನಾಗಿ..ಸದನದಲ್ಲಿ ತನ್ನ ಕೆಲಸ ಏನೂ ಇಲ್ಲ ಅನ್ನೋ ತರಹ ಗಡದ್ದಾಗಿ ನಿದ್ದೆ ಮಾಡಿ..ಚುನಾವಣೆ ಹತ್ರ ಬಂದಹಾಗೆ...ತಲೆ ಬುಡ ಇಲ್ಲದ ತನಗೇ ತಿಳಿಯದ ವಿಷಯಗಳ ಮೇಲೆ ಪ್ರಶ್ನೆ ಕೇಳೋ ಸದಸ್ಯನಂತೆ...ಸುಮ್ಮನೆ ಹೆಣದಂತಿದ್ದ ಭೇತಾಳ ಮಾತನಾಡತೊಡಗಿದಾಗ...
ಲೋ...ನಿನ್ನ..ಕಥೆ ಕೇಳೀ..ಕೇಳೀ..ತಲೆ ಶೂಲ ಆಗಿ ನನ್ನ ದೇಹಾನೆಲ್ಲ ಚುಚ್ಚುತ್ತೆ...ಅದನ್ನ ಬಿಡು...ನಿನ್ನ ಜೊತೆ..ಸ್ವಲ್ಪ ಲೋಕಾಭಿರಾಮ ಮಾತಾಡ್ತೇನೆ...ಆಯ್ತಾ..?? ಎಂದ ಶತ ವಿಕ್ರಮ ಎಂದಿನಂತೆ ಕಥೆ-ಗಿಥೆ ಎನ್ನುವ ಭೇತಾಳನನ್ನು ತಡಿಯುತ್ತಾ...
ಸರಿ ಹೇಳು ಅದೇನು ಹೇಳೀಯೋ...
ಎಂದಿತು ಭೇತಾಳ
ಅಲ್ಲ..ನಿಮ್ಮ ಭೇತಾಳ ಲೋಕದಲ್ಲಿ...ಮಳೆ ಇಲ್ಲ್ದಿದ್ರೆ ಏನ್ಮಾಡ್ತೀರಿ...??
ತಲೆಇಲ್ದೇ ಹರಟ್ತಿರೋನು..ನೀನು ಈಗ..!!. ಅಲ್ಲ, ಶತವಿಕ್ರಮ...ಮಳೆಇಲ್ದಿದ್ರೆ..ನೀವು..ಮಾನವರು ತಲೆಕೆಡಿಸಿಕೊಳ್ಳೋದು...ನಮ್ಗೆ ಯಾಕೆ ಬೇಕು...ಮಳೆ? ಸತ್ತ ಮನುಜ, ಪ್ರಾಣಿಗಳನ್ನು ತಿನ್ನುತ್ತಾ...ರಕ್ತ ಕುಡಿಯೋ ನಮ್ಮ ಜನಕ್ಕೆ ನಿಮ್ಮಂಥ ತಾಪತ್ರಯ ಇಲ್ಲ. ನಿಮ್ಮ ಒಂದು ಜನಾಂಗದವರ ಮೇಲೆ ಮತ್ತೊಂದು ಜನಾಂಗದವರನ್ನ ಎತ್ತಿ ಕಟ್ತೀವಿ...ಒಬ್ಬರೊನ್ನಬ್ಬರು ಹೊಡ್ದು ಸಾಯ್ಸೋ ಹಾಗೆ ಮಾಡ್ತೀವಿ...ಮಕ್ಕಳು ಮರಿ ಅಂತ ಭೇದ ಇಲ್ಲ ನಮಗೆ...ಒಟ್ಟಿನಲ್ಲಿ ಮಾನವ ನಾಶ ಆಗ್ಬೇಕು...ಮಾನವೀಯತೆ ನಾಶ ಆಗ್ಬೇಕು...
ಮತ್ತೆ...ನಿಮಗೆ ನಮ್ಮ ಹಾಗೆ ನಿಮಗೆ ಸಾವು..ಅಥವಾ ಆ ತರಹ ಏನೂ ಇರಲ್ವಾ...?
ನೋಡಿದ್ಯಾ ಮತ್ತೆ..??!! ನಿಮ್ಮ ಪೂರ್ವಜರ ಬುದ್ಧಿವಂತಿಕೆಯಲ್ಲಿ...ಹತ್ತನೇ ಒಂದು ಪಾಲೂ ನಿನ್ನಲ್ಲಿಲ್ಲ ನೋಡು...ಅದ್ಕೇ ಅಲ್ವೇ ನಮ್ಮಂಥ ಭೇತಾಳಗಳು ನಿಮ್ಮಲ್ಲೇ ಇದ್ದು ನಿಮ್ಮ-ನಿಮ್ಮಲ್ಲೇ ಜಗಳ ತಂದಿಟ್ಟು ನಿಮ್ಮ ಸಂತತೀನೇ ನಾಶ ಮಾಡ್ತಿದ್ದರೂ ಅರ್ಥ ಆಗ್ತಾ ಇಲ್ಲ ನಿಮಗೆ.....ಹೂಂ...ಸರಿ ಬಿಡು..., ನಮಗೆ ಸಾವು ಇಲ್ಲ...!!! ನಿಮ್ಮ ಸಾವು ನಮಗೆ ಇನ್ನಷ್ಟು ಆಯಸ್ಸನ್ನ ಕೊಡುತ್ತೆ...ನಾವೆಲ್ಲಿರ್ತೇವೆ ಅಂತ ನಿಮಗೆ ತಿಳಿಯೊಲ್ಲ...ಆ ತರಹ ತಿಳ್ಕೋಂಡೋರಿದ್ರೆ...ಅವರ ಬಗ್ಗೆ ನಿಮ್ಮಲ್ಲಿ ಅನುಮಾನಗಳು ಬರೋಹಾಗೇ ನಿಮ್ಮ ಬುದ್ಧಿಯನ್ನ ಆವರಿಸ್ಕೋತೀವಿ...ಹೀಗೆ..ನಮಗೆ ಸಾವು ಅನ್ನೋದೇ ಇರೋಲ್ಲ... ಇನ್ನು ಒಂದು ಜನಾಂಗ ಬುದ್ಧಿವಂತರಾಗಿದ್ರೆ ಅವ್ರಲ್ಲೇ ಕೆಲವರ ತಲೆ ಕೆಡೋ ಹಾಗೆ ಮಾಡಿ ಇನ್ನೊಂದು ಜನಾಂಗದ ವಿರುದ್ಧ ಎತ್ತಿ ಕಟ್ತೀವಿ...ಆ ಜನಾಂಗಲ್ಲೇ ಕ್ಯಾನ್ಸರ್ ಉದ್ಭವ ಮಾಡ್ತೀವಿ...ಮೊದಲೇ ಎಚ್ಚೆತ್ಕೊಂಡ್ರೆ ಸರಿ...ಇಲ್ಲ ಅಂದ್ರೆ ಅದನ್ನ ಇನ್ನೂ ಹರಡ್ತೀವಿ...ಇಡೀ ಜನಾಂಗ ಮಾನವ ಕುಲದ ಶತೃ ಅನ್ನೋ ತರಹ ಎಲ್ಲವನ್ನ ಬದಲಾಯಿಸ್ತೀವಿ... ಹಾಗೂ ಒಂದ್ವೇಳೆ ಎರಡೂ ಜನಾಂಗ ಚೇತರ್ಸಿಕೊಂಡ್ರೆ ಮೂರನೇದಕ್ಕೆ ಹೋಗ್ತೀವಿ...ನಮಗೆ ಸೀಮೆಗಳು.,,ಎಲ್ಲೆಗಳು, ಮೇರೆಗಳು ಇರೊಲ್ಲ..
ಎಲ್ಲ ಜನಾಂಗಗಳೂ ಸರಿಯಾದರೆ...ಆ ದೇಶ ಬಿಟ್ಟು ಇನ್ನೊಂದಕ್ಕೆ ಹೋಗಿ ಅದನ್ನ ಚನ್ನಾಗಿರೋ ದೇಶದ ವಿರುದ್ಧ ಮಸಲತ್ತು ಮಾಡೋ ಹಾಗೆ ಮಾಡ್ತೀವಿ...ಒಂದು ಕಾಲದಲ್ಲಿ...ಶಕ್ತಿ ಆಗಿದ್ದ ರಷ್ಯಾ ಈಗೇನಾಗಿದೆ..?? ತಾನೇ ಅಂತ ಬೀಗ್ತಾ ಇದ್ದ ಸದ್ದಾಮ್ ಕಥೆ ಏನಾಯ್ತು?? ಎತ್ತರಕ್ಕೆ..ಇನ್ನೂ ಎತ್ತರಕ್ಕೆ ಅಂತಾ ಇದ್ದ ಅಮೇರಿಕ್ಕನ್ನರ ಗರ್ವ ಮುರಿಯೋಕೆ ಉನ್ನತ ಕಟ್ಟಡಗಳೆರಡನ್ನೂ ಕ್ಷಣಮಾತ್ರದಲ್ಲಿ ಧ್ವಂಸಮಾಡಲಿಲ್ವೇ..??? ಹಹಹ....
ತುಂಬಾ ವಿಕಾರವಾಗಿ ನಕ್ಕಿತು..ಭೇತಾಳ
ಏ..ನಿಲ್ಸೋ..ನಿನ್ನ ಸ್ವಯಂ ಶಂಖ....ಏನಾಯ್ತು..ಕಟ್ಟಡ ಉರುಳ್ಸಿದ್ರಿ...ಆದ್ರೆ ನೀವು ನಾಶ ಆದ್ರಾ...ನಿಮ್ಮ ಕುಲದವರನ್ನ ಪ್ರಪಂಚ ಗುರ್ತಿಸ್ತಾ..???
ನಿನ್ನ ತಲೆ...ಅದೇ..ತಪ್ಪು ನಿನ್ನದು...ನಾವೆಲ್ಲಿ ನಾಶ ಆದ್ವಿ..ನಿಮ್ಮ ಮನುಷ್ಯಾನೇ ನಾಶ ಆಗಿದ್ದು...ನಾವು ನಮ್ಮ ಕೆಲಸ ಮುಗಿದ ತಕ್ಷಣ..ಆ ದೇಹ ಬಿಟ್ವಿ ಇನ್ನೊಂದಕ್ಕೆ ಸೇರ್ಕೊಂಡ್ವಿ...ಪ್ರಭಾಕರ, ವೀರಪ್ಪನ್, ಕಸಬ್ ಸ್ನೇಹಿತರು..ಎಲ್ಲ ಸತ್ತರು...ಆದ್ರೆ ನಾವು...!!! ಪೆದ್ದ...ಬದ್ಕೇ ಇದ್ದೀವಿ...ನಿಮ್ಮ ಮಧ್ಯದಲ್ಲೇ ಇದ್ದೀವಿ....ಹಹಹ...ಹಹಹ...ಹಿ..ಹಿ..ಹಿ..
ಎನ್ನುತ್ತಾ,,,ಕರ್ಕಷವಾಗಿ ಕೂಗುತ್ತಾ ...ಇನ್ನು ಇವನ ಮಾತು ಕೇಳಿದ್ರೆ..ನಮ್ಮ ಬುಡಕ್ಕೇ ತರ್ತಾನೆ ನೀರು...ಅದರಲ್ಲೂ ಈ ವಿಕ್ರಮ ವಂಶದಿಂದ ಸ್ವಲ್ಪ ದೂರಾನೇ ಇರ್ಬೇಕು...ಎಂದುಕೊಳ್ಳುತ್ತಾ ...ಶತವಿಕ್ರಮನ ಭುಜಬಿಟ್ಟು...ಹಾರಿ...ಜಾಲಿಮರದಕಡೆಗೆ ಹೊರಟಿತು.
ಈ ಭೇತಾಳಕ್ಕೆ ಇದರ ವಂಶಕ್ಕೆ ಒಂದು ಗತಿ ಕಾಣಿಸ್ಲೇ ಬೇಕು..ಇಲ್ಲ ಅಂದ್ರೆ ನಮ್ಮ ಮನುವಂಶಕ್ಕೆ ಉಳಿಗಾಲ ಇಲ್ಲ ..ಎಂದುಕೊಂಡ ಶತ ವಿಕ್ರಮ ಮತ್ತೆ ಜಾಲಿ ಮರದೆಡೆಗೆ ಹೆಜ್ಜೆ ಹಾಕಿದ.

13 comments:

  1. ಆಧುನಿಕ ಭೇತಾಳಗಳ ವಿಶ್ಲೇಷಣೆ ತುಂಬಾ ಚೆನ್ನಾಗಿ ಬಂದಿದೆ. ಇದಕ್ಕೇ ತಕ್ಕಂತೆಯೇ
    ಶತವಿಕ್ರಮರೂ ಬೇಕಲ್ಲ!

    ReplyDelete
  2. ಜಲನಯನ ಅವರೇ,
    ವಿಕ್ರಮ ಮತ್ತು ಬೇತಾಳರ ಕಥೆ ಒಂದು ರೀತಿಯಲ್ಲಿ ಅರ್ಥವಾಯಿತು, ಮತ್ತೊಂದು ರೀತಿಯಲ್ಲಿ ಅರ್ಥವಾಗಲಿಲ್ಲ!
    ಇದರ ಅರ್ಥ ನೀವು ಈ ಲೇಖನದ ಮೂಲಕ ಏನು ಹೇಳ ಬಯಸಿದ್ದೀರೆಂದು ಸ್ಪಷ್ಟವಾಗಿ ತಿಳಿಯಲಿಲ್ಲ!!

    ಹಿಂದಿನ ಪೋಸ್ಟಿಂಗ್ ನ ಕವಿತೆ ಚೆನ್ನಾಗಿದೆ ಮತ್ತು ತುಂಬಾ ಇಷ್ಟವಾಯಿತು. ಪರಿಪೂರ್ಣ ಸಂಸಾರದ ಸದಸ್ಯರನ್ನು ಕವಿತೆಯ ಮೂಲಕ ವಿಶ್ಲೇಷಿಸಿದ್ದೀರಿ! ಚೆಂದದ ಕವಿತೆಗೆ ಧನ್ಯವಾದಗಳು!

    ReplyDelete
  3. ಸುನಾಥ್ ಸರ್,
    ನನ್ನ, ನಿಮ್ಮ, ಎಲ್ಲರ ಭೇತಾಳ ಒಂದೇ...ಅದೇ ಎಲ್ಲರ ಬೆನ್ನುಹತ್ತಿ ಎಲ್ಲ ಸಮಸ್ಯೆಗೆ ಮೂಲಕಾರಣ...!!!
    ಶತವಿಕ್ರಮರೇನೋ ಬರಬಹುದು..ಆದರೆ ಇತರರು ತಮ್ಮನ್ನು ಮೆಟ್ಟಿಕೊಂಡ ಭೇತಾಳಗಳ ನಿಜ ಉದ್ದೇಶವನ್ನು ಅರಿತುಕೊಂಡರೆ...ಭೇತಾಳನ ಉಪಟಳವನ್ನು ಬಹಳವಾಗಿ ನಿಗ್ರಹಿಸಬಹುದು...ಅಲ್ಲವೇ...ನಿಮ್ಮ ಎಂದಿನಂತಹ ಮೊದಲ ಪ್ರತಿಕ್ರಿಯೆಗೆ ಧನ್ಯವಾದಗಳು...

    ReplyDelete
  4. ಎಸ್ಸೆಸ್ಕೇಯವರೇ,
    ನನಗೆ ನಿಜಕ್ಕೂ ಖುಷಿ ತಂದ ಪ್ರತಿಕ್ರಿಯೆ ನಿಮ್ಮದು.....ನಾನು ಬರೆದುದು ಬಹುಷಃ ಸ್ಪಷ್ಠವಾಗಿಲ್ಲ ಎನ್ನುವುದು ಇದರಿಂದ ಅರ್ಥವಾಯಿತು...ಒಂದು ಪೂರಕ ಬ್ಲಾಗ್ ಪೋಸ್ಟ್ ಮಾಡಲೇ..??
    ಆದರೂ ನಿಮ್ಮ doubtಗೆ ...
    ಭೇತಾಳ ಒಂದು ಮನೋಧರ್ಮದ ಸಂಕೇತವಾಗಿ..ಇಲ್ಲಿ ಪ್ರಯೋಗವಾಗಿದೆ...ಇದು ಒಂದು ನಕಾರಾತ್ಮಕ ಮನೋಧರ್ಮ, ವಿನಾಶಕಾರೀ ಮನೋಧರ್ಮ ಎನ್ನಬಹುದು. ಅಂದರೆ ಅದಕ್ಕೆ ಯಾವುದೇ ಗೊತ್ತಾದ ಪಂಗಡ, ಜಾತಿ, ಧರ್ಮ, ದೇಶ ಇತ್ಯಾದಿಗಳ ಬೇಧ ಭಾವವಿರುವುದಿಲ್ಲ, ಈ ಭೇತಾಳವನ್ನು ನಿಗ್ರಹಿಸುವುದು ವ್ಯಕ್ತಿಗೆ ಎಷ್ಟು ಅಗತ್ಯವೋ ಅಷ್ಟೇ ಅನಿವಾರ್ಯ ಜನಾಂಗಕ್ಕೆ, ಪಂಗಡಕ್ಕೆ, ಜಾತಿಗೆ, ಧರ್ಮಕ್ಕೆ, ನಾಡಿಗೆ, ದೇಶಕ್ಕೆ...ಇದೆಲ್ಲ ಮಾನವ ಧರ್ಮದ ಉಳಿವಿಗೆ...
    ನನ್ನ ವಿವರದಿಂದ ನಿಮ್ಮ doubt clear ಆಯ್ತು ಅಂದ್ಕೋತೇನೆ...
    Thanks..ಈ ರೀತಿಯ ವಿಶ್ಲೇಷಣಾ ಪ್ರತಿಕ್ರಿಯೆಗೆ...ಇದು ನಮ್ಮ ಪ್ರಸ್ತಾವನಾ ಶೈಲಿಯನ್ನೂ ಸುಧಾರಣೆ ಮಾಡುತ್ತೆ..., ಧನ್ಯವಾದಗಳು.

    ReplyDelete
  5. ಜಲನಯನ ಅವರೇ,
    ನನ್ನನ್ನು ಕ್ಷಮಿಸಿ! ನನ್ನ ಪ್ರತಿಕ್ರಿಯೆಗೆ ನಿಮ್ಮ ಪ್ರತ್ಯುತ್ತರ ನೋಡಿ ಸಂತೋಷವಾಯಿತು, ಆದರೂ ನಿಮಗೆ ತೊಂದರೆ ಕೊಟ್ಟೆ ನೆಂದು (ಬೇಸರ ನೀಡಿದೆ ಎಂದು) ಮುಜುಗರವಾಗುತ್ತಿದೆ.
    ನನ್ನ ಡೌಟ್ ಕ್ಲಿಯರ್ ಮಾಡಿದ್ದಕ್ಕೆ ಧನ್ಯವಾದಗಳು!

    ReplyDelete
  6. ಜಲನಯನ ಸರ್...
    ಹ್ಲೂಂ ಬಂದುಬಿಟ್ಟೆ. ಕೆಲಸದೊತ್ತಡದಿಂದ ಬ್ಲಾಗ ಕಡೆ ತಲೆಹಾಕಿನೂ ಮಲಗಿಲ್ಲ ಅಂದ್ರೆ ನಂಬ್ತೀರಾ. ನನ್ನ 'ಅದ್ಯಾಕೋ ಖಾಲಿ ಕಾಗದಲ್ಲಿ ಅಕ್ಷರಗಳು ಓಡುತ್ತಿಲ್ಲ' ಬರಹಕ್ಕೆ ನೀವು ಬರೆದ ಪ್ರತಿಕ್ರಿಯೆ ಓದಿದ್ದೆ. ತುಂಬಾ ಖುಷಿಯಾಗಿದ್ದೆ. ನಿಮ್ಮ ಪ್ರೋತ್ಸಾಹ ನನಗೆ ಟಾನಿಕ್. ಈ ಬೇತಾಳ ಕಥೆ ಮೊದಲ ನನಗೂ ಸ್ವಲ್ಪ ಕನ್ ಫ್ಯೂಸ್ ತರಿಸಿತ್ತು..ಆಮೇಲೆ ಅರ್ಥವಾಯಿತು. ಆಧುನಿಕ ಬೇತಾಳ..ಹಹಹ ಸಕತ್ತಾಗಿದೆ. ಮತ್ತೆ ಬರ್ತೀನಿ..ನಂಗೆ ಬೈಬೇಡಿ.

    -ಧರಿತ್ರಿ

    ReplyDelete
  7. ಜಲನಯನ....

    ಮನುಷ್ಯ, ಮನುಷ್ಯ ನಡುವಿನ...
    ಕಂದರ...
    ಬೇತಾಳ ಸಾಂಕೇತಿಕ...

    ಪರಸ್ಪರ ಅಪನಂಬಿಗೆ...
    ಧರ್ಮ ಸಹಿಷ್ಣುತೆ ಇಲ್ಲದಿರುವದು..
    ಎಲ್ಲವನ್ನೂ ಬೇತಾಳನ ಮೂಲಕ
    ಹೇಳಿಸಿ ಮನೋಜ್ಞವಾಗಿ ಚಿತ್ರಿಸಿದ್ದೀರಿ...

    ಇಷ್ಟವಾಯಿತು...

    ReplyDelete
  8. ಎಸ್ಸೆಸ್ಕೇ, ದಯವಿಟ್ಟು..ದಯವಿಟ್ಟು...ನೀವು ಹಾಗೆ ಭಾವಿಸಲೇಬಾರದು...ನಿಜಕ್ಕೂ ನಮಗೆ..ನಮ್ಮ ಬೆನ್ನುಕಾಣದು..ಅಂತಹುದರಲ್ಲಿ ನಮ್ಮ ಹಿಂಗೈಯನ್ನು ತೋರಿಸಿದವರಿಗೆ ನಾನು ಆಭಾರಿಯಾಗಿರುತ್ತೇನೆ..ಸದಾ... ಇನ್ನು ಬ್ಲಾಗ್ ಪೂರ್ತಿ ಅಲ್ಲದಿದ್ದರೂ ಸ್ಪಷ್ಠತೆ ಇರಬೇಕಲ್ಲವೇ...ನಿಮ್ಮಂತೆ ಧರಿತ್ರಿಯವರಿಗೂ ಕ್ಷಣಕ್ಕೆ...ಸ್ವಲ್ಪ confusion ಆಯ್ತಂತೆ...so... ಇಂತಹ ಪ್ರತಿಕ್ರಿಯೆ ಆರೋಗ್ಯಕರ.... ನಿಮ್ಮ ಮನದ ಮಾತಿಗೂ ಧನ್ಯವಾದಗಳು.

    ReplyDelete
  9. ಧರಿತ್ರಿ, ಮೊಗ್ಯಾಂಬೋ..ಖುಷ್ ಹುವಾ....
    ಮನದ ದುಗುಡವನ್ನು ಬದಿಗೊತ್ತಿ..ಮನರಂಜನೆ, ಮನದಮಾತಿನ ವಿನಿಮಯಕ್ಕೆ ಬಂದಿರಿ...ತುಂಬಾ..ತುಂಬಾ ಸಂತೋಷ..., ಭೇತಾಳ ಯಾಕೋ ಈ ಸರ್ತಿ ಗೊಂದಲ... ಬಹುಶಃ ವಿಷಯವನ್ನು ನೇರವಾಗಿ ಹೇಳಿದ್ದರೆ ಸರಿಯಿತ್ತಾ...?, ನಿಮ್ಮ ಮೂಡ್ ಸದಾ ಚೀಯರ್ಫುಲ್ ಇರಲಿ ಅಂತ ಹಾರೈಸಿ...ಪ್ರತಿಕ್ರಿಯೆಗೆ...ಧನ್ಯವಾದ...
    ಸಿಗುವಾ ಮತ್ತೆ...ಓಕೆ...???

    ReplyDelete
  10. ಪ್ರಕಾಶ್, ನಿಮ್ಮ ಪ್ರೋತ್ಸಾಹದ ಮಾತಿಗೆ ವಂದನೆ, ನನಗೆ ಬಹಳ ಕಾಡುವ ವಿಷಯ ಇಂದಿನ ಮತಾಂಧ ನಡವಳಿಕೆ...ಅದೇಕೋ ಮನಸುಗಳು ಕದಮುಚ್ಚಿಕೊಂಡಿವೆ ಅನಿಸುತ್ತೆ, ಒಮ್ಮೆ ಆತ್ಮೀಯ ಗೆಳೆಯರಿಬ್ಬರು ಬೇರೆ ಬೇರೆ ಜಾತಿಗೆ ಸೇರಿದವರು, ಕೆಲಸನಿಮಿತ್ತ ಬೇರೆ-ಬೇರೆ ಆದರು, ಕೆಲವು ದಿನ ಪತ್ರ ವ್ಯವಹಾರ ಇತ್ತು..ನಂತರ ಒಬ್ಬ ವಿದೇಶಕ್ಕೆ ಹೋದ ಅವನ/ಳ ಗೆಳೆಯ ಮತ್ತೆಲ್ಲಿಯೋ ದೇಶದಲ್ಲೇ.... ಪತ್ರವ್ಯವಹಾರ ಸಾಧ್ಯವಾಗಲಿಲ್ಲ...ಸುಮಾರು ಆರೇಳು ವರ್ಷ ನಂತರ -ಆ- ಗೆ -ನಾ- ಆಕ್ಸ್ಮಿಕವೆಂಬಂತೆ ಸಿಕ್ಕು...ಖ್ಹುಷಿಯೋ ಹೇಳತೀರದು, ಇಬ್ಬರೂ ಆಲಂಗಿಸಿಕೊಂಡರು, ಮತ್ತೆ ಯಾಕೋ -ನಾ- ಒಂದು ರೀತಿ ಬೇಸಗೆಯ ಸೆಖೆಯಲ್ಲಿ ಅರ್ಧ ಮುಚ್ಚಿದ ಕಿಟಕಿಯಲ್ಲಿ ಗಾಳಿಬಿಡುವಂತೆ...ಮುಂಚಿನಂತೆ ವರ್ತಿಸದೇ...ಓಕೆ..ಗುರು..ಕೆಲಸಯಿದೆ...ಸಿಗೋಣ ಮತ್ತೆ..ಅಂತ ಹೇಳಿ --ಏಲ್ಲಿದ್ದೀಯ..ಏನು..? ಎಂದು ಕೇಳುವುದಕ್ಕೆ ಮುಂಚೆಯೇ..ಕಾರಲ್ಲಿ ಕೂತು ಹೊರಟೇ ಬಿಟ್ಟಿದ್ದ...
    ಈ ನನ್ನ ತುಮುಲಗಳನ್ನು ಭೇತಾಳನ ಮೂಲಕ ತಿಳಿಸುವ ಪ್ರಯತ್ನ ಮಾಡಿದೆ...ಸ್ವಲ್ಪ ಮಟ್ಟಿಗೆ ಯಶಸ್ವಿಯಾಯ್ತು ನನ್ನ ಪ್ರಯತ್ನ ಅನ್ನಿಸಿದೆ ನಿಮ್ಮ ಪ್ರತಿಕ್ರಿಯೆ ನೋಡಿ...thanks

    ReplyDelete
  11. ಶಂಕ್ರಣ್ಣ ಬಲ್ ಎಡ್ವಟ್ ಕಣ್ಬಿಡ್ ನಿನ್ ಬ್ಲಾಗು...ಅಲ್ಲಾ..ಅವ್ರು ಇಂಗೇಳುದ್ರು, ಇವ್ರು ಅಂಗೇಳಿದ್ರು ಅಂತ ಬರೇ ಉದುರ್ಸ್ಕೊಂಡು ಬರ್ದಿದ್ದೀಯ...ನಾನ್ ಕಾಮೆಂಟ್ಮಾಡಿದ್ದು ಕಾಣ್ಲೇ ಒಲ್ಲದು...
    ಬೋ ಸಂತೋಸ ಆಯ್ತ್ ಕಣ್ ಬಿಡು ನೀನು ನನ್ನ ಬ್ಲಾಗ್ ನೋಡಿದ್ದು, ಅಂಗೇ ಎಲ್ಡು ಪದ ಬೆನ್ತಟ್ತಿ ಒಗ್ದದ್ದು...

    ReplyDelete
  12. jalanayana sir,

    mathe bethala kathe bathala...odidi adhunikavagiddaru hasya sialiyalli chennagide..munduvarisi...

    mathe nanna internet sariyilavaddarinda tadavagi baruthidhene...sorry....

    ReplyDelete
  13. ಮತ್ತೆ, ಸ್ವಾಗತ..ಶಿವು,
    ಅದೇ..ಎಲ್ಲಾ ಬ್ಲಾಗಿಗೂ ಭೇಟಿ ನೀಡಿ ಪ್ರೋತ್ಸಾಹದ ಎರಡು ಸಲು ಬರೆಯೋ ಶಿವು ಎಲ್ಲಿ ಈ ಮಧ್ಯೆ ಕಂಡೂ ಕಾಣಧಾಂಗೆ ಇದ್ದಾರೆ? ಅಂದ್ಕೊಂಡೆ...ಬಂದೇ ಬಿಟ್ರಿ..
    ಥ್ಯಾಂಕ್ಸ್, ಮತ್ತೆ ಏನಾದರೂ ಚಿತ್ರಗ್ರಹಣ..??

    ReplyDelete