ನನಗೆ ಖುಷಿ ತಂದ ಪ್ರತಿಕ್ರಿಯೆ ಎಸ್ಸೆಸ್ಕೇಯವರದು
.....ನಾನು ಬರೆದುದು ಬಹುಷಃ ಸ್ಪಷ್ಠವಾಗಿಲ್ಲ ಎನ್ನುವುದು ಇದರಿಂದ ಅರ್ಥವಾಯಿತು...ಅದಕ್ಕಾಗಿ ಈ ಪೂರಕ ಬ್ಲಾಗ್ ಪೋಸ್ಟ್ ಮಾಡುತ್ತಿದ್ದೇನೆ
ಭೇತಾಳ ಒಂದು ಮನೋಧರ್ಮದ ಸಂಕೇತವಾಗಿ..ಇಲ್ಲಿ ಪ್ರಯೋಗವಾಗಿದೆ...ಇದು ಒಂದು ನಕಾರಾತ್ಮಕ ಮನೋಧರ್ಮ, ವಿನಾಶಕಾರೀ ಮನೋಧರ್ಮ ಎನ್ನಬಹುದು. ಅಂದರೆ ಅದಕ್ಕೆ ಯಾವುದೇ ಗೊತ್ತಾದ ಪಂಗಡ, ಜಾತಿ, ಧರ್ಮ, ದೇಶ ಇತ್ಯಾದಿಗಳ ಬೇಧ ಭಾವವಿರುವುದಿಲ್ಲ, ಈ ಭೇತಾಳವನ್ನು ನಿಗ್ರಹಿಸುವುದು ವ್ಯಕ್ತಿಗೆ ಎಷ್ಟು ಅಗತ್ಯವೋ ಅಷ್ಟೇ ಅನಿವಾರ್ಯ ಜನಾಂಗಕ್ಕೆ, ಪಂಗಡಕ್ಕೆ, ಜಾತಿಗೆ, ಧರ್ಮಕ್ಕೆ, ನಾಡಿಗೆ, ದೇಶಕ್ಕೆ...ಇದೆಲ್ಲ ಮಾನವ ಧರ್ಮದ ಉಳಿವಿಗೆ...
ಈ ರೀತಿಯ ವಿಶ್ಲೇಷಣಾ ಪ್ರತಿಕ್ರಿಯೆಗಳು ನಮ್ಮ ಬ್ಲಾಗನ್ನು ಮತ್ತು ನಮ್ಮ ಪ್ರಸ್ತಾವನಾ ಶೈಲಿಯನ್ನೂ ಸುಧಾರಣೆ ಮಾಡುತ್ತೆ...,
ಧನ್ಯವಾದಗಳು ಎಸ್ಸೆಸ್ಕೇ...
ಜಲನಯನ....
ReplyDeleteಮನುಷ್ಯ, ಮನುಷ್ಯ ನಡುವಿನ...
ಕಂದರ...
ಬೇತಾಳ ಸಾಂಕೇತಿಕ...
ಪರಸ್ಪರ ಅಪನಂಬಿಗೆ...
ಧರ್ಮ ಸಹಿಷ್ಣುತೆ ಇಲ್ಲದಿರುವದು..
ಎಲ್ಲವನ್ನೂ ಬೇತಾಳನ ಮೂಲಕ
ಹೇಳಿಸಿ ಮನೋಜ್ಞವಾಗಿ ಚಿತ್ರಿಸಿದ್ದೀರಿ...
ಇಷ್ಟವಾಯಿತು...
ಸರ್ ಈ ಕಥೆ ತುಂಬಾ ಚೆನ್ನಾಗಿತ್ತು ಕಥೆ ಮತ್ತು ಪೂರಕ ಪ್ರತಿಕ್ರಿಯೆ ಎರಡೂ ಓದಿದಾಗ ಅನಿಸಿದ್ದು, ಸರಿ ಮತ್ತು ತಪ್ಪು ಗಳ ಒಂದೊಂದು ಮನಸುಗಳ ಸಂಕೆತದಂತೆ ಈ ಪಾತ್ರಗಳು... ಒಂಥರಾ ಈ Dark knight ಫಿಲಂ ಹಾಗೇ... ಅಲ್ಲಿ ಬ್ಯಾಟಮ್ಯಾನ್, ಜೋಕರ ಇದ್ರೆ ಇಲ್ಲಿ ವಿಕ್ರಮ್ ಬೇತಾಳ್...ಮಗು ಸೀರೀಸ್ ನಂತರ ಈ ಹೊಸ ಥೀಮ್ ಚೆನ್ನಾಗಿದೆ...
ReplyDeleteಪ್ರಭು, ನಿಮ್ಮ ಪ್ರತಿಕ್ರಿಯೆ ಮತ್ತು ವಿಶ್ಲೇಷಣೆಗೆ ಧನ್ಯವಾದಗಳು..
ReplyDeleteಭೇತಾಳ ಮತ್ತು ಮಗು ನನ್ನ ಎರಡು ಮಾಧ್ಯಮಗಳು...ಮನದ ಮಾತನ್ನು ನನಗೆ ತಿಳಿದ ಮಟ್ಟಿಗೆ ವ್ಯಕ್ತಪಡಿಸಲು, ನನ್ನ ಮನದ ಮಾತು ಅಥವಾ ಅದರ ತಾತ್ಪರ್ಯವಾದರೂ ಓದುಗರಿಗೆ ಸಿಕ್ಕರೆ ಅವರ ಅನಿಸಿಕೆಗಳೊಂದಿಗೆ ಸ್ಪಂದಿಸಿದರೆ ನನ್ನ ಪ್ರಯತ್ನ ಸಾರ್ಥಕ. ಇನ್ನು ನೀವು, ಸುನಾಥ್, ಪ್ರಕಾಶ್, ಧರಿತ್ರಿ, ಎಸ್ಸೆಸ್ಕೆ, ಶಿವು,..ಮತ್ತೂ ಹಲವು ಸ್ನೇಹಿತರು ನನ್ನ ಪದಗಳಿಗೆ ಆಯಾಮಗಳನ್ನು ಕೊಟ್ಟು ಹೊಸ ಕಲ್ಪನೆಗೆ ಕಾರಣವಾದರೆ ಧನ್ಯವಲ್ಲವೇ ಪ್ರಯತ್ನ..?? ತುಂಬಾ ವಂದನೆಗಳು.