Thursday, July 23, 2009

ಬ್ಲಾಗಾಯಣ

ಈ- ಮೈಲು, ವೆಬ್ಬು, ಗಬ್ಬು..ಅಂತೆಲ್ಲಾ ಅನ್ನೋರಿಗೆ..ಬ್ಲಾಗು ಅನ್ನೋ ಇನ್ನೊಂದು ವ್ಯವಸ್ಥೆ ಇದೆ ಅನ್ಸಿದ್ದು..ಅಥ್ವಾ ನೋಡಿದ್ದು..ಆ ನಂತರ ಅದರ ದಾಸರಾಗಿದ್ದು ..ಈಗ ಚರಿತ್ರೆ ಆಗ್ತಾ ಇದೆ.
ಪಿ.ಬಿ.ಎಸ್ ರಿಗೆ ಈಗ ಹಳೇ ಹಾಡು ಹಾಡೋಕೆ ಹೇಳಿದ್ರೆ...
"ಬ್ಲಾಗೊಂದ ತೋರ್ಸುವೇ
ಪುಟಾಣಿ ಮಕ್ಕಳೇ..ಬ್ಲಾಗಿದ್ದು ತನಗೆ
ಬ್ಲಾಗಾಗದ್ದು ಪರರಿಗೆ" ಅಂತಿದ್ರೋ..ಏನೋ..!!
ಬ್ಲಾಗಿದ್ದಿದ್ರೆ..ಸೀತೆ ಸ್ವಯಂವರದ ಅನೌನ್ಸ್ ಮೆಂಟು ಪ್ರೆಸಿಡೆಂಟ್ ಜನಕ್ಸ್ ಬ್ಲಾಗಿಸ್ತಿದ್ದ್ರೋ ಏನೋ..??
ಬ್ಲಾಗುಗಳ ಇಂಟರಾಕ್ಷನ್ ಫಾಲೋಗಳ ಮೂಲಕ ದುರ್ಯೋಧನ್ಸ್ ಪಾಂಡವ್ಸ್ ನ ಫ್ಯಾಂನ್ಸಿಡ್ರೆಸ್ನಲ್ಲೇ ಪರ್ಮನೆಂಟಾಗಿ ಇರೋ ಹಂಗೆ ಮಾಡ್ತಿದ್ದನೋ ಏನೋ..?
ಬ್ಲಾಗು ಅನ್ನೋದು..ಈಗ್ಗೂ ನನ್ ತಲೇಗೆ ಸರಿಯಾಗಿ ಹೋಗಿಲ್ಲ, ಯಾರ್ಯಾರೋ ಬ್ಲಾಗ್ ಮಾಡ್ತಾರೆ ಅಂತ ನಾನೂ ಬ್ಲಾಗನ್ನ ಕೂಡಿ, ಕಳೆದು, ಗುಣಿಸಿ ಈಗ ಬ್ಲಾಗಿಸ್ತಿದ್ದೀನಿ.
ಅಜ್ಜಿ ಮಕ್ಕಳಿಗೆ ಕಥೆ ಹೇಳೋವಾಗ..."ಒಂದಾನೊಂದು ಬ್ಲಾಗ್ ರಾಜ್ಯದಲ್ಲಿ ಒಬ್ಬ ಬ್ಲಾಗ್ ರಾಜ, ಇಬ್ಬರು ಬ್ಲಾಗ್ ರಾಣಿಯರಿದ್ದರು. ಅವರಿಗೆ ..." ಅಂತೆಲ್ಲಾ ಹೇಳೋ ಕಾಲ ದೂರಾ ಏನಿಲ್ಲ.
ನಮ್ಮ ಹಳ್ಳಿ ಗಮಾರ ದೋಸ್ತು (ಪಿ.ಯು.ಸಿ ಲೇ ಸುಸ್ತಾಗಿದ್ದಾನೆ) ಮೊನ್ನೆ ವರೆಗೂ ಕಂಪ್ಯೂಟರು, ಇ-ಮೈಲ್ ಏನೂ ಗೊತ್ತಿಲ್ಲದೇ ಇದ್ದವನು...ಮೊನ್ನೆ ಬ್ಲಾಗಿನ ಬಗ್ಗೆ ಏನು ಹೇಳ್ದ ಗೊತ್ತೇ..?
“ಈವಾಗ ಈ ಬ್ಲಾಗು ಎಷ್ಟೊಂದು ಪಾಪುಲರ್ ಆಗ್ತಾ ಐತೆ ಅಂದ್ರೆ...ರಾಜಕಾರಣಿಗಳು..ತಮ್ಮ ಚುನಾವಣಾ ಪ್ರಚಾರಾನ ಬ್ಲಾಗಿಸೋಕೆ ಶುರು ಹಚ್ಚೌವ್ರೆ, ನಮ್ಮ ಚುನಾವಣಾಧಿಕಾರಿ ತಾನೂ ಏನ್ ಕಡಿಮೆ ಇಲ್ಲ ಅನ್ನೋ ಹಂಗೆ ರಾಜ್ಕಾರ್ಣಿಗಳ
ಬ್ಲಾಗನ್ನ ಬ್ಯಾನ್ ಮಾಡಿ ತಿಳಿಸೋಕೆ ಅಂತ್ಲೇ ಇನ್ನೊಂದು ಬ್ಲಾಗು ಸುರು ಹಚ್ಚೇಬಿಟ್ಟವ್ರೆ”.
ನಮ್ಮ ಪೂರ್ವ ರಾಷ್ಟ್ರಪತಿಗಳು (ಕಲಾಂ ಸಾಹೇಬ್ರು) ಬ್ಲಾಗ್ ಮಾಡಿಯೇ ಸ್ಕೂಲ್ ಮಕ್ಕಳಲ್ಲಿ ದೇಶಾಭಿಮಾನ, ದೇಶದ ಬಗ್ಗೆ ಸಾಮಾನ್ಯ ಅರಿವಳಿಕೆ (general awareness) ತರೋದಕ್ಕೆ ಪ್ರಯತ್ನಿಸಿದ್ದು ಎಲ್ಲಾ ತಿಳಿದಿರೋದೇ..
ಅಮಿತಾಬ್ ಬಚ್ಚನ್ ತನ್ನ ಬ್ಲಾಗ್ ಮೂಲಕ ಮತ್ತೊಬ್ಬರ ಕೆಂಗಣ್ಣಿಗೆ ಗುರಿಯಾದದ್ದು ನೋಡಿದ್ರೆ ಬೆಳೀತಿರೋ ಬ್ಲಾಗಾಭಿಮಾನ, ಬ್ಲಾಗಪಾರಂಗತಿ, ಇತ್ಯಾದಿ ಬಗ್ಗೆ ಯೋಚಿಸ್ಬೇಕಾಗುತ್ತೆ.
ಕೆಲಸದ application ನಲ್ಲಿ ಈಗ ಇ-ಮೈಲ್ ಅಡ್ರೆಸ್ ಜೊತೆಗೆ ಬ್ಲಾಗ್ ಅಡ್ರೆಸ್ ಸಹಾ ಕೇಳುವ ಸಮಯಾನೂ ಬಂದಿದೆ. Interview ನಲ್ಲಿ can you show your blog posting items on your laptop...?? ಅಂತ ಕೇಳ್ಬಾರ್ದಲ್ಲವೇ..?? ಅದಕ್ಕೇ..ಈವರೆಗೂ ಯಾವುದೇ ಬ್ಲಾಗ್ open ಮಾಡ್ದೇ ಇದ್ರೆ ತಕ್ಷಣ ಮಾಡೀ ಈ ಕೆಲಸ...ಅದ್ರಲ್ಲೂ ನೌಕರಿ ಹುಡುಕೋ ಭಾವೀ ನೌಕರರು.
ಮತ್ತೆ ಮದ್ವೆ ಹುಡ್ಗೀರನ್ನ ನೋಡೋಕೆ ಹೋಗೋ ಗಂಡುಗಳು ನಿಮ್ಮದು ಅಂತ ಯಾವುದಾದರೂ ಬ್ಲಾಗ್ ಇದೆಯಾ..?? ಅಂತ ಕೇಳಿಬಿಟ್ಟರೆ,,..?? ಅಪ್ಪ ಕೊಡೋ ಕಾರು, ಹತ್ತು ಲಕ್ಷ ರಕಂ ಎಲ್ಲ ಹೋಗಿ ಅಪ್ಪ-ಅಮ್ಮನ ಮರ್ಯಾದೆ ಜಖಂ ಆಗೋದಿಲ್ಲವೇ..??

ಟ್ಯೂಶನ್ ಪರಿಪಾಠ ಬೆಳೆಸಿಕೊಳ್ತಾ ಇರೋ ಟೀಚರ್ಗಳಿಗೆ ಬ್ಲಾಗಿನ ಮೂಲಕ ಸರ್ಕಾರದ, ಆಡಳಿತ ಮಂಡಳಿಯ ಕಣ್ಣಿಗೆ ಮಣ್ಣೆರೆಚೋದು ಸುಲಭ ಆಗ್ತಾ ಇದೆ. ಜೋಡಿಗಳು ಮೈಲ್ ಗಳ ಮೂಲಕ ಪರಸ್ಪರ ವಿಷಯ ವಿನಿಮಯ ಮಾಡ್ಕೋತಾ ಇದ್ದದ್ದು ಹೋಗಿ ಈವಾಗ...ಬ್ಲಾಗುಗಳನ್ನ ಸೃಷ್ಠಿಸಿಕೊಂಡು ತಮ್ಮ ಕೆಲಸಾನ ಇನ್ನೂ ಪರಿಣಾಮಕಾರಿ ಮಾಡ್ಕೋತಾ ಇದ್ದಾರೆ. ಹಾಂ..ಹಾಂ..ಖಾಸಗಿ ವಿಷಯಕ್ಕೆ.. ಇ-ಮೈಲ್ ಇದ್ದದ್ದೇ..?? ಬ್ಲಾಗು ಪಬ್ಲಿಕ್ ಅಲ್ವೇ...!!!!

ಸಾಹಿತ್ಯ ಕ್ಷೇತ್ರದಲ್ಲಿ ಬ್ಲಾಗಾಯಣದ ಪರಿಣಾಮ ಬಹಳವಾಗಿಯೇ ಆಗಿದೆ ಎಂದರೆ ತಪ್ಪಿಲ್ಲ. ಕವಿಗಳು ತಮ್ಮ ಕವನಗಳನ್ನ, ಲೇಖನಗಳನ್ನ ಬ್ಲಾಗಿನ ಮೂಲಕ ಪರಿಚಯಿಸುತ್ತಿದ್ದಾರೆ. ಕನ್ನಡದವರು ತಮ್ಮ ಇ-ಸಿರಿವಂತಿಕೆಯನ್ನು ಇಲ್ಲೂ ಮೆರೆದಿದ್ದಾರೆ...ಯುವಕವಿ ಬ್ಲಾಗ್ ಸ್ಪಾಟ್ ಡಾಟ್ ಕಾಂ, ಚುಟುಕು ಬ್ಲಾಗ್ ಸ್ಪಾಟ್ ಡಾಟ್ ಕಾಂ, ವ್ಯಂಗ್ಯ ಬ್ಲಾಗ್ ಸ್ಪಾಟ್ ಡಾಟ್ ಕಾಂ, ಹೀಗೆ..ಹಲವಾರು..ಬ್ಲಾಗುಗಳು....
ಇದು ಒಂದು ಹಿತಕರ ಬೆಳವಣಿಗೆಯೇ ಸರಿ. ಇದೇ ತರಹ ವಿಷಯ ವಿನಿಮಯಕ್ಕೂ ತಮ್ಮಲ್ಲಿನ ಶೇಖರಿತ ಮಾಹಿತಿಗಳನ್ನು ವಿನಿಮಯಿಸಿಕೊಳ್ಳಲು ಬ್ಲಾಗ್ ಬಹಳ ಸಹಕಾರಿಯಾಗುತ್ತಿದೆ.
ಬ್ಲಾಗೆಂಬ ಮಹತ್ವಪೂರ್ಣ ಮಾಧ್ಯಮವನ್ನು ಸಮರ್ಪಕವಾಗಿ, ಪರಿಣಾಮಕಾರಿಯಾಗಿ ಮತ್ತು ಅರೋಗ್ಯಕರ ಸಮಾಜದ ಬೆಳವಣಿಗೆಗೆ ಪ್ರಯೋಗಿಸಬೇಕು.

17 comments:

  1. ಜಲನಯನ ಅವರೇ,
    ಚೆನ್ನಾಗಿದೆ ನಿಮ್ಮ ಬ್ಲಾಗಾಯಣ!
    ಬ್ಲಾಗಿಂದ, ಬ್ಲಾಗಿಗಾಗಿ, ಬ್ಲೋಗಿಗೊಸ್ಕರ ನಾವೆಲ್ಲಾ ಹೋರಾಡೋಣ ಅಲ್ಲವೇ......?!
    ಇದೆ ನಮ್ಮ ಬ್ಲಾಗ್ ಪ್ರಭುತ್ವ........!?!?!!!!

    ಇದೆ ಖುಷಿಯಲ್ಲಿ ಒಂದು ಹಾಡು....
    ಬ್ಲಾಗ್ ಬ್ಲಾಗ್ ಬ್ಲಾಗ್ ಬ್ಲಾಗ್ ಎಲ್ನೋಡಿ ಬ್ಲಾಗ್.......!
    ಬ್ಲಾಗೇ ಕಾರ್ಬಾರು, ಬ್ಲಾಗ್ ಇಂದಲೇ ದರ್ಬಾರು.....,
    ಬ್ಲಾಗೇ ಇಂದಿನ ಜನರ ಜೀವ ಕಾಣಿರೋ........
    (ಕಾರ್ ಕಾರ್ ಕಾರ್ ಕಾರ್ ಎಲ್ನೋಡಿ ಕಾರ್.....!!)

    ReplyDelete
  2. ನಿಮ್ಮ ಬ್ಲಗಿಕ್ರಿಯೆಗೆ ಬ್ಲನ್ಯವಾದ..ನನ್ನ ಬ್ಲಾಗಿನ ಬ್ಲೇಖನದ ಬ್ಲಗ್ಗೆ ಬ್ಲರೆದಿರಿ ಹಾಗೇ ಬ್ಲಹಳ ಬ್ಲಾಗ್ ಕವನ ಬ್ಲರೆದಿರಿ.....ಹಹಹಹಹ....ನಿಜಕ್ಕೂ ತುಂಬಾ cheerful response ನಿಮ್ಮದು...
    thanks, ಎಸ್ಸೆಸ್ಕೆಯವರೇ.

    ReplyDelete
  3. ಆಝಾದ್ ಸರ್....

    ಇಟ್ಟಿಗೆ ಸಿಮೆಂಟಿನಲ್ಲಿ ನಾನು ನನ್ನಪಾಡಿಗಿದ್ದೆ...
    ನನ್ನ ಗೆಳೆಯರಾದ ಶಿವು , ಮಲ್ಲಿಕರ್ಜುನ್..
    ನನ್ನನ್ನು ಇಲ್ಲಿಗೆ ಕರೆತಂದದ್ದು...

    ಸರ್...

    ಈ ಬ್ಲಾಗ್ ಲೋಕಕ್ಕೆ ನಾನು ಚಿರ ಋಣಿ...
    ನನ್ನ ಒತ್ತಡಗಳನ್ನೆಲ್ಲ ಇಲ್ಲಿ ಬಂದು ಮರೆಯುತ್ತೇನೆ...

    ಸುಮ್ಮನೆ ವೇಸ್ಟ್ ಆಗುತ್ತಿದ್ದ ನನ್ನ ಸಮಯವನ್ನು...
    ಇಲ್ಲಿ ಬರೆಯಲಿಕ್ಕೆ, ಅದರ ತಯಾರಿಗೆ ಉಪಯೋಗಿಸುತ್ತಿದ್ದೇನೆ...

    "ಎದೆ ತುಂಬಿ ಹಾಡಿದೆನು ಅಂದು ನಾನು.." ಹಾಡಿದೆಯಲ್ಲ ಅದರಂತೆ....

    " ಇಂದು ನಾ ಬ್ಲಾಗಿಸಿದರೂ
    ಅಂದಿನಂತೆಯೆ ಕುಳಿತು..
    ನೋಡುವಿರಿ
    ಸಾಕೆನಗೆ ಅದುವೆ ಬಹುಮಾನ..."

    ಚಂದದ ಬರಹ... ಆಝಾದ್ ಸರ್....

    ಅಭಿನಂದನೆಗಳು....

    ReplyDelete
  4. ಜಲನಯನ,
    ನಿಮ್ಮ ಲೇಖನ ಓದಿ, ಒ೦ದೆರಡು ನುಡಿಗಟ್ಟುಗಳು ಹೊಳೆದವು,
    "ಬ್ಲಾಗಿಸು ಕನ್ನಡ ಡಿ೦ಡಿಮವ, "
    "ಬ್ಲಾಗಾಯ ತಸ್ಮೈ ನಮಃ"
    "ಎಲ್ಲಾದರು ಇರು ಎ೦ತಾದರು ಇರು, ಎ೦ದೆ೦ದಿಗೂ ನೀ ಬ್ಲಾಗಿಗನಾಗಿರು"

    ReplyDelete
  5. ಜಲನಯನ ಸಾರ್....

    ತು೦ಬಾ ಚೆನ್ನಾಗಿ ಮೂಡಿ ಬ೦ದಿದೆ ನಿಮ್ಮ ಚಿ೦ತನೆ.

    "ಬ್ಲಾಗೆ೦ದರೆ ನನ್ನೋಳಗೆ...
    ಏನೋ ಒ೦ದು ಸ೦ಚಲನ..."

    ಅ೦ತ ಹಾಡೋಣವೇ....?

    [ಕಪ್ಪು ಹಿನ್ನೆಲೆಯಲ್ಲಿ ಹಳದಿ ಅಕ್ಷರಗಳ ಬರಹ ಕಣ್ಣಿಗೆ ಹಿತಕರವೆನಿಸಲಿಲ್ಲ.... :(]

    ReplyDelete
  6. ಪ್ರಕಾಶ್, ನಿಮ್ಮ ಪೋಸ್ಟ್ ಮತ್ತು ಬರಹಗಳು, ಶಿವು ಮುಂತಾದವರ ಫೋಟೋಗಳು, ಪ್ರಭು ರವರ ಲಘು ಹಾಸ್ಯ ಲೇಪಿತ someಭಾಷಣೆಗಳು, ನನ್ನ ಹಲವಾರು ಸ್ನೇಹಿತ, ಸ್ನೇಹಿತೆಯರ ಕವನಗಳು, ಸುನಾಥ್, ಚಂದ್ರಕಾಂತ ಮೇಡಂ ಮುಂತಾದವರ ಕನ್ನಡ ಮತ್ತು ಕೃತಿ ಕುರಿತ ಪೋಸ್ಟುಗಳು, ಹೀಗೆ ಹಲವಾರು......ಅಗಣಿತ...ಮುಖಾಮುಖಿಗಳು ಆಗುತ್ತಿರಲಿಲ್ಲ....ಬ್ಲಾಗಿಲ್ಲದಿದ್ದರೆ...ಅಲ್ವೇ.? ಇದರ ಬಗ್ಗೆ ಏನು ಬರೆದರೂ, ಎಷ್ಟು ಬರೆದರೂ ಕಡಿಮೆಯೇ.....thank you

    ReplyDelete
  7. ಈಗಷ್ಟೇ ಬರೆದೆ...ನಿಮ್ಮ ಪೋಸ್ಟ್ -ರೆಸ್ಪಾನ್ಸ್ ಹಾಜರ್, ಪರಾಂಜಪೆಯವರೇ...ನಿಮ್ಮ ಮಾತು ನಿಜ...ಹಲವಾರು ಹೀಗೇ ಮುಂದುವರೆಯಬಹುದು...ಈಗೀಗ..ಏನನ್ಸಿತ್ತೆ ಗೊತ್ತೆ? ಏಕೆ ಈ ಮಧ್ಯೆ..‘ಅ‘ ಏನೂ ಬರೀತಿಲ್ಲ...‘ಬ‘ ಪೋಸ್ಟ್ ಮಾಡಿ ಬಹಳ ದಿನ ಆಯ್ತು..? ಏಕೆ..?? ಆರೋಗ್ಯ ..ಹುಷಾರಿದ್ದಾರೋ ಇಲ್ಲವೋ..? ಹೀಗೆಲ್ಲಾ. ನಮ್ಮ ಹತ್ತಿರದವರನ್ನು ಕಾಣದಾದಾಗ ಆಗುವ ಚಡಪಡಿಕೆ ಆಗುತ್ತೆ. ಅಲ್ಲವೇ..? ನಿಮಗೂ ‘ಬ್ಲಾಗೀಮಿಯಾ‘ ದ ಸೋಂಕು ತಗಲಿದ್ದು ಉಂಟೇ..?

    ReplyDelete
  8. ಸುಧೇಶ್ ಥ್ಯಾಂಕ್ಸ್ ರೀ...ಈಗ ಕಲರ್ ಬದಲಾಯಿಸಿದ್ದೀನಿ...ನೋಡಿ..ನಿಮ್ಮ ಅನಿಸಿಕೆ ಸರಿಯಾದದ್ದೇ..ನಿಮ್ಮ ಪ್ರತಿಕ್ರಿಯೆನೋಡಿ ನನ್ನ ಬ್ಲಾಗ್ ಮತ್ತೆ ನೋಡ್ದೆ...ಹಹಹ..!!! ನನ್ನ ಬ್ಲಾಗ್ ನಾನೇ ನೋಡೋದೇ..?? ಹೌದುರೀ..ನೀವುಹೇಳಿದ್ದು ಸರಿ...!!! ತಕ್ಷಣ ಪೋಸ್ಟ್ ಫಾನ್ಟ್ ನ ಬಣ್ಣ ಬದಲಾಯಿಸಿದೆ... ಇಂಥ ಪರ್ತಿಕ್ರಿಯೆ ಬಂದರೆ ನಿಜಕ್ಕೂ ಖುಷಿ ಅನ್ನಿಸುತ್ತೆ.....Thanks u ನಿಮ್ಮ ಪ್ರತಿಕ್ರಿಯೆಗೆ.

    ReplyDelete
  9. ಜಲನಯನ ಸರ್,

    ಒಂದು ವರ್ಷಕ್ಕೆ ಮೊದಲು ಈ ಬ್ಲಾಗ್ ಲೋಕವೆನ್ನುವುದು ನನಗೆ ಒಂದು ರೀತಿಯ ಕೈಗೆಟುಕದ ಮಾಯಾ ಲೋಕವೆನಿಸಿತ್ತು ನನ್ನ ಗೆಳೆಯರೆಲ್ಲಾ ಇದೇ ವಿಚಾರವನ್ನು ಮಾತಾಡುವಾಗ ನನಗೇನು ಗೊತ್ತಿಲ್ಲದೇ ನಾನವರ ಮುಖವನ್ನು ನೋಡುತ್ತಿದ್ದೆ. ಈ ವಿಚಾರದಲ್ಲಿ ಅವರೆಷ್ಟು ಮುಂದುವರಿದಿದ್ದಾರೆನೆಸಿತ್ತು. ನಾನು ಒಮ್ಮೆ ಪ್ರಯತ್ನಿಸಿದರೂ ಇ ಲೋಕ ಕೈಗೆಟುಕದ ಗಗನಕುಸುಮವೆನಿಸಿತ್ತು. ನಂತರ ಮೇಪ್ಲವರ್ ಮೀಡಿಯಾದ ಮೋಹನ್‌ರವರ ಒಡನಾಟದಿಂದಾಗಿ ಅವರೇ ತೆರೆದುಕೊಟ್ಟ ಬ್ಲಾಗ್ ಲೋಕಕ್ಕೆ ಬಂದೆ. ಈಗ ಸರ್ವಂ ಬ್ಲಾಗ್ ಮಯ. ಹೊಸ ಆಡುಗೆ ಏನಾದ್ರು ಮಾಡಬೇಕಾದ್ರೆ ನನ್ನಾಕೆ ಕೃಷ್ಣವಾಣಿ ಅಥವ ವನಿತಾ ಬ್ಲಾಗಿಗೆ ಹೋಗಿ ನೋಡಿ ಅಂತಾಳೆ. ಆಷ್ಟರ ಮಟ್ಟಿಗೆ ಇದು ಆವರಿಸಿಕೊಂಡು ಬಿಟ್ಟಿದೆ. ಕೆಲವೊಮ್ಮೆ ಇದು ನನ್ನ ಫೋಟೋಗ್ರಫಿಯನ್ನು ಓವರ್ ಟೇಕ್ ಮಾಡಿಬಿಟ್ಟು ಅದರ ಸಾಧನೆಗೆ ಎಲ್ಲಿ ಪೆಟ್ಟು ಬೀಳುತ್ತೋ ಅನ್ನೋ ಭಯವೂ ಕಾಡಿದ್ದುಂಟು. ನಂತರ ಪೋಟೋಗ್ರಫಿಗೆ ಫೂರಕವಾಗಿ ಬ್ಲಾಗ್ ಬಳಸಿಕೊಳ್ಳಲು ಪ್ರಾರಂಭಿಸಿದಾಗ ಎಲ್ಲಾ ಸರಾಗವಾಯಿತು..

    ಬ್ಲಾಗ್ ಬಗ್ಗೆ ನೀವು ಬರೆದ ಲೇಖನ ಸೊಗಸಾಗಿದೆ. ಧನ್ಯವಾದಗಳು.

    ReplyDelete
  10. ಹಾ ಹಾ.. ನಿಮ್ಮ ಬ್ಲಾಗಾಯಣ ತುಂಬ ಚೆನ್ನಾಗಿ ಇದೆ... ಅಸ್ಟೆ ಚೆನ್ನಾಗಿ ವಿವರಿಸಿದ್ದಿರ ಕೂಡ.....ಎಸ್ಟೋ ಮಂದಿ,,, ತಮ್ಮ ಬೇರೆ ಕೆಟ್ಟ ಹವ್ಯಾಸಗಳನ್ನು ಬಿಟ್ಟು... ಬ್ಲಾಗ್, ಬರಹ.. ಅದರ ಬಗ್ಗೆ ತಯಾರಿಗಾಗಿ....ಸಮಯ ಮೀಸಲಿಡುತ್ತ ಇದ್ದಾರೆ.......
    ನನಗೆ ಮೊದಲಿನಿಂದಲೂ ಇದರ ಬಗ್ಗೆ ವ್ಯಾಮೋಹ ಇತ್ತು... ಆದರೆ express ಮಾಡೋಕೆ ಅಗಿರೈಲ್ಲ... ಈಗ್ಗೆ ಒಂದು ವರ್ಷ ದಿಂದ ನಾನು ಇದರಲ್ಲಿ ಸಂಪೂರ್ಣ ತೊಡಗಿಸಿಕೊಂಡು ಬಿಟು ಇದ್ದೇನೆ.....
    ಒಂದ್ ಅಂತು ನಿಜ... ನಮ್ಮ ಈ ಕನ್ನಡ ಬ್ಲಾಗಿನಿಂದ... ನಮ್ಮ MNC ನಂಥ ಆಫೀಸ್ ನಲ್ಲೂ ಕೂಡ... ಕನ್ನಡದ ಕಂಪು ಪಸರುತ್ತಲಿದೆ..... ಇದೆ ಕಾರಣಕ್ಕೆ ನನಗೆ ತುಂಬ ಖುಷಿ ಆಗ್ತಾ ಇದೆ....ಮೊದಲು ಚಾಟಿಂಗ್ ಅದು ಇದು ಅಂತ ಟೈಮ್ ವೇಸ್ಟ್ ಮಾಡ್ತಾ ಇದ್ದ ಟೆಕ್ಕಿ ಗಳು... ಇವಾಗ ಸಂಪದ, ಕೆಂಡಸಂಪಿಗೆ.. ಹಾಗೆ ಕೆಲವು ಒಳ್ಳೆಯ ಬ್ಲಾಗಿನ ದಾಸರಾಗಿ.. ಅದರ ಚೆರ್ಚೆನಲ್ಲೇ ಮುಳುಗಿರುತ್ತಾರೆ......ಇದಂತು ಸಂತೋಷ ತರುವ ವಿಷಯ.....

    ReplyDelete
  11. ಶಿವು ನಿಮ್ಮ ಮಾತು ನಿಜ. ನನ್ನ ಮಟ್ಟಿಗೆ ಹೇಳೋದಾದರೆ..ಹೆಚ್ಚು ಮೈಲ್ ಗಳು ನಂತರ ಸ್ವಲ್ಪ ಮಟ್ಟಿಗೆ ಗ್ರೂಪ್ ಗಳು..
    ಮನಸು ಅವರ ಕಾರಣ ಬ್ಲಾಗಿಗೆ ಕಾಲಿಟ್ಟೆ..ಕಾಲಿಟ್ಟೆ ..!! ಎನ್ನುವುದಕ್ಕಿಂತ ಧುಮುಕಿದೆ ಎನ್ನಬೇಕು. ಈಗ ನನ್ನ ಗ್ರೂ ಪೊಂದನ್ನು ಮುಚ್ಚಿ ಅದನ್ನು ಬ್ಲಾಗ್ ಗೆ ಪರಿವರ್ತಿಸಿದ್ದೀನಿ, ನಿಮ್ಮ ಚಿತ್ರಗಳ ಪರಿಚಯ ಆದದ್ದೂ ಇದರಿಂದಲೇ...ಇದು ಬ್ಲಾಗಿನ ಪ್ರಯೋಜನ ಅಲ್ಲವೇ ನಿಮಗೂ..?? ಒಂದು ರೀತಿಯ ಬಾಂಧವ್ಯವೂ ಬೆಳೆಯುತ್ತೆ ನಮ್ಮಲ್ಲಿ ಅನ್ನೋದೂ ನನ್ನ ಮನಸ್ಸಿಗೆ ಬರುತ್ತಿದೆ.
    ಧನ್ಯವಾದ ನಿಮ್ಮ ಅನಿಸಿಕೆಗೆ

    ReplyDelete
  12. ಭಲೇ ಗುರು, ಮನದಾಳದ ಮಾತಿದು...ನನಗೂ ಬರೀ ಆಂಗ್ಲ ಬಳಕೆಯಿಂದ ಬಳಲಿದ್ದ ನನ್ನ ಹರಕು-ಮುರುಕು ಕನ್ನಡವೂ ಬಡವಾಗ್ತಾ ಇತ್ತು..ಹಾಗೇ...ಎಷ್ಟೋ ಪತ್ರಿಕೆಗಳಲ್ಲಿ ಪ್ರಯತ್ನಿಸಿ ಪ್ರಕಟವಾಗದ ನನ್ನ ಕವನಗಳು..ನನ್ನ ಕ.ಬು.ತೂಕವನ್ನು ಹೆಚ್ಚಿಸ್ತಾ ಇದ್ದದ್ದು..ಈ ಗ ಅವುಗಳಿಗೆ ಒಂದು ದಿಶೆ ಸಿಕ್ಕಿದೆ. ಹಾಗೇ ..ನನ್ನ ಕನ್ನಡದ ಸುಧಾರಣೆಯ್ಯ್ ಆಗಿದೆ...ನಿಜ ಅಲ್ಲವೇ ಪರಾಂಜಪೆ ಹೇಳಿದ್ದು ....
    "ಬ್ಲಾಗಿಸು ಕನ್ನಡ ಡಿ೦ಡಿಮವ, "
    "ಬ್ಲಾಗಾಯ ತಸ್ಮೈ ನಮಃ"
    "ಎಲ್ಲಾದರು ಇರು ಎ೦ತಾದರು ಇರು, ಎ೦ದೆ೦ದಿಗೂ ನೀ ಬ್ಲಾಗಿಗನಾಗಿರು"

    ReplyDelete
  13. ಆಝಾದ್ ಸರ್....
    ಮೊದಲು ನನ್ನ ಪತ್ನಿಗೆ ಹೇಳ್ತಾ ಇದ್ದೆ ಎನು ಎಲ್ಲ ಬ್ಲಾಗ್ ನಲ್ಲಿ ಹಾಕುತ್ತೀಯಾ ಅಂತ...ಆಮೇಲೆ ನಿಮ್ಮ ಮತ್ತು ಪ್ರಕಾಶಣ್ಣನ ಬ್ಲಾಗ್ ಎಲ್ಲ ನೋಡಿ ನಾನು ಈ ಬ್ಲಾಗ್ ಸಮುದ್ರಕ್ಕೆ ಕಾಲಿಟ್ಟೆ...ಇನ್ನು ಆಳ ನೋಡಿಲ್ಲ..... ಮೊನ್ನೆ ನನ್ನ ಪತ್ನಿ ಕೇಳಿದಳು "ನನಗೆ ಹೇಳ್ತಾ ಇದ್ದೆ ಈಗ ನೀನು ಎಲ್ಲ ಬ್ಲಾಗ್ ನಲ್ಲಿ ಹಾಕಿದ್ದೀಯಾ" ಅಂತ. ಸಮಯ ಸಿಕ್ಕಾಗ ಈಗ ಎಲ್ಲಾ ಬ್ಲಾಗ್ ಗಳನ್ನು ನೋಡ್ತೀನಿ...ನೀವು ಹೇಳಿದ ಹಾಗೆ ಎಲ್ಲರೂ ಬ್ಲಾಗ್ ಇಟ್ಟು ಕೊಳ್ಳಲೆಬೇಕು...

    ಚೆನ್ನಾಗಿ ಬ್ಲಾಗಿಸಿದ್ದೀರಾ......ಹೀಗೆ ಬ್ಲಾಗ್ತಾ ಬೆಳಗ್ತಾ ಇರಿ

    ReplyDelete
  14. ಮಹೇಶ್, ನಿಮ್ಮ ಬ್ಲಯಕೆ ನಮಗೆ ಬ್ಲಾಶೀರ್ವಾದ, ತುಂಬ ಸಂತೋಷ ನಿಮ್ಮ ಬ್ಲಾಗು-ಬ್ಲಾಗಲಿ ಬ್ಲಾಗು ಕಾಣಲಿ ಎಂದು ಬ್ಲೆಸ್ಸಿಸುತ್ತೇನೆ.

    ReplyDelete
  15. ಜಲನಯನ ಸರ್,
    ಬ್ಲಾಗ ಬಗ್ಗೆ ಬ್ಲಾಗ ಬರೆದಿದ್ದೀರಾ, ಬ್ಲಾಗ ಹೆಸರು ಮೊಟ್ಟಮೊದಲಿಗೆ ಒಂದು ಪ್ರೊಜೆಕ್ಟ ಮಾಡುವಾಗ ಕೇಳಿದ್ದು, web log... blog ಅಗಿದ್ದಂತೆ... ಒಬ್ಬರಿಗೆ ಪರ್ಸನಲ ಬ್ಲಾಗ್ ಪ್ರೊಜೆಕ್ಟ ಮಾಡಿಕೊಟ್ಟಾದ ಮೇಲೆ ಏನು ತಮ್ಮ ಬಗ್ಗೆ ಬರೆದುಕೊಳ್ಳೊಕೆ ಬ್ಲಾಗ್ ಮಾಡ್ತಾರಾ ಅನಿಸಿತ್ತು... ಆಮೇಲೆ ಬ್ಲಾಗ ಏನು ಅಂತ ಗೊತ್ತಾದ ಮೇಲೆ ನಾನೂ ಶುರುವಿಟ್ಟುಕೊಂಡೆ :)

    ReplyDelete
  16. ಜಲನಯನ ಅವರೇ,
    ಈ ನಿಮ್ಮ ಲೇಖನ ಇಷ್ಟ ಆಯ್ತು ...
    ಇಂಟರ್‌ನೆಟ್ ನಲ್ಲಿ ಬ್ಲೋಗ್ ಗಳಿನ ಪ್ರೊಯೋಜನಗಳನೆಲ್ಲ ತುಂಬಾ ಚೆನ್ನಾಗಿ ವಿವರಿಸಿದ್ದೀರಿ...
    ನೀನು ಹೇಳಿದಂತೆ ಇಂಟರ್‌ವ್ಯೂ ಗಳಲ್ಲಿ ಬ್ಲೋಗ್ ಪೋಸ್ಟಿಂಗ್ಸ್ ತೋರ್ಸಿ ಅನ್ನುವ ಕಾಲ ಬಂದರು ಬರಬಹುದು...
    ಧನ್ಯವಾದ

    ReplyDelete
  17. ಪ್ರಭು, ಮತ್ತು ದಿವ್ಯಾ ಇಬ್ಬರಿಗೂ ನನ್ನ ಧನ್ಯವಾದಗಳು...
    ನಿಮ್ಮ ಮಾತು ನಿಜ...ಕೆಲವು ಬ್ಲಾಗ್ ಗಳಂತೂ ನನ್ನ ಸಂಶೋಧನಾ ಕ್ಷೇತ್ರದಲ್ಲಿ ಬಹಳ ಉಪಯೋಗಿ ಆಗಿವೆ...
    ಬರುತ್ತಿರಿ..ಈ ಮಧ್ಯೆ ಹೆಚ್ಚಾಗಿ ಬ್ಲಾಗುಗಳನ್ನು ನೋಡಲಾಗಲಿಲ್ಲ ಹಾಗೂ ನಿಮ್ಮೆಲ್ಲರ ಪೋಸ್ಟ್ ಗಳಿಗೂ ಸ್ಪಂದಿಸಲಾಗಲಿಲ್ಲ...ರಜಕ್ಕೆ ಮರಳುನಾಡಿಂದ ಬೆಂದಕಾಳೂರಿಗೆ ಬಂದಿದ್ದೆ...ಇನ್ನು ಮುಂದೆ ನಿಯಮಿತವಾಗಿ ಸಂಧಿಸೋಣ ಅಲ್ಲವೇ..??

    ReplyDelete