Saturday, August 29, 2009

ಕ್ಲಿಪ್ಪಿಂಗ್ ಪೂರಕ ಪೋಸ್ಟ್

ಸುನಾಥ್ ಸರ್ ರವರ ಕ್ಲಿಪ್ ಗೆ ಪ್ರತಿಕ್ರಿಯೆ ನನ್ನ ಈ ಪೂರಕ ಪೋಸ್ಟ್ ಗೆ ಕಾರಣ.
ಮನಸ್ಸಿನ, ಮಿದುಳಿನ ಮತ್ತು ಆರೋಗ್ಯದ ಅಗೋಚರ ಸಂಬಂಧಗಳನ್ನು ಹಲವರು ನಂಬುವುದಿಲ್ಲ. ಅಂತಹವರಿಗೆ ನನ್ನ ನೇರ ಪ್ರಶ್ನೆ...ಹುಚ್ಚು ಏಕೆ ಹಿಡಿಯುತ್ತೆ?? ಇದು ಕೇವಲ ಮನಸ್ಸು, ಮಿದುಳಿಗೆ ಸಂಬಂಧಿಸಿದ್ದು ಅದೇ ರೋಗ ಎನ್ನುತ್ತೇವೆ ನಾವು...ಈ ಕ್ಲಿಪ್ಪಿಂಗ್ ನಲ್ಲಿ ಹೇಳಿದಂತಹ ಪ್ರೋಟಿನ್ ಪೆಪ್ಟೈಡುಗಳು ನೇರ ಪ್ರಭಾವ ಬೀರುವ ಖಾಯಿಲೆ ಇದು. ದುಃಖವಾದಾಗ ಕಣ್ಣೀರೇಕೆ? ಇನ್ನೊಂದು ಪ್ರಶ್ನೆ? ಇಲ್ಲಿಯೂ ಭಾವನೆ (ಮನಸು) ಸ್ರಾವಕ ಪ್ರೋಟಿನುಗಳ ಮೂಲಕ ಮಿದುಳಿಗೆ ಸಂದೇಶ ತಲುಪಿಸಿ ಕಣ್ಣಿರನ್ನು ಸುರಿಸುವಂತೆ ಮಾಡುತ್ತದೆ. ಆದ್ದರಿಂದ ಸುಖೀ ಮನಸು, ಆಹ್ಲಾದಕತೆ ಲಾಭಕರ ಪ್ರೋಟೀನುಗಳನ್ನು ಉತ್ಪಾದಿಸಬಹುದಲ್ಲ .? ಇವು ರೋಗ ಕಾರಕಗಳನ್ನು ತಡೆಯಬಹುದಲ್ಲ...?? ಇದೇ ವಿಷಯವನ್ನು ಈ ವೀಡಿಯೋದಲ್ಲಿ ಪ್ರತಿಪಾದಿಸಲಾಗಿದೆ. ಎಲ್ಲದಕ್ಕೂ ಸಮತೋಲನಾಸ್ಥಿತಿ ಎಂಬುದು ನಿರ್ಣಾಯಕ. ಅತೀ ಮಾರಕಗಳು ಈ ಸಮತೋಲನಾಸ್ಥಿತಿಯ ರೇಖೆಗಿಂತ ಮೀರಿ ಪ್ರಭಾವ ಬೀರುವುದರಿಂದ ಶಿಘ್ರ ನಷ್ಟಕ್ಕೆ ಕಾರಣವಾಗುತ್ತವೆ. ರೋಗಕಾರಕಗಳ ಪ್ರಭಾವ ಈ ದೇಹ ಸಮತೋಲನಾಸ್ಥಿತಿ ರೇಖೆಯನ್ನು ದಾಟಿದಾಗಲೇ ರೋಗ ತಲೆದೋರುವುದು. ಆರೋಗ್ಯ ಸಮತೋಲನಾ ಮಟ್ಟ ಪ್ರತಿಜೀವಿಯಲ್ಲೂ ಒಂದೊಂದು ಮಟ್ಟದ್ದಾಗಿರುತ್ತೆ, ಇದಕ್ಕೆ ಕೆಲವು ವಿಷಯಗಳು ಪೂರಕ ಶಕ್ತಿ ಕೊಟ್ಟರೆ ಮತ್ತೆ ಕೆಲವು ವಿರುದ್ಧವಾಗಿ ಆ ಮಟ್ಟವನ್ನು ಕ್ಷೀಣಗೊಳಿಸಿ ದೇಹ ರೋಗಕ್ಕೆ ಸುಲಭದ ತುತ್ತಾಗುವಂತೆ ಮಾಡುತ್ತವೆ. ಪ್ರತಿ ರೋಗದ ನಿರ್ವಹಣೆಯಲ್ಲಿ ಇದೇ ಅಂಶಗಳನ್ನು ಪರಿಗಣಿಸಲಾಗುತ್ತದೆ. ಉತ್ತಮ ಆಹಾರ, ಶುದ್ಧ ಪರಿಸರ, ಉತ್ತಮ ಆಚಾರ ಮತ್ತು ಆಹ್ಲಾದಕರ ಮನಸ್ಥಿತಿ ಎಲ್ಲವೂ ದೇಹಾರೋಗ್ಯ ಸಮತೋಲನಾ ಸ್ಥಿತಿಯನ್ನು ಉನ್ನತ ಮಟ್ಟಕೇರಿಸಿ ರೋಗಕಾರಕಗಳು ಬಹುಶ್ರಮ ಪಡುವಂತೆ ಮಾಡುವುದಲ್ಲದೇ ರೋಗತಲೆದೋರುವಿಕೆಗೆ ವಿಳಂಬವನ್ನುಂಟು ಮಾಡುತ್ತವೆ. ಈ ಹೆಚ್ಚಿದ ಸಮಯಾವಕಾಶದಲ್ಲಿ ದೇಹ ತನ್ನ ನಿರ್ದಿಷ್ಟ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುತ್ತದೆ ಹೀಗಾಗಿ ರೋಗವನ್ನು ತಡೆಯಲಾಗುತ್ತದೆ.

8 comments:

  1. ಜಲನಯನ ಸರ್,

    ಒಂದು ಸೊಗಸಾದ ವಿಶ್ಲೇಷಣೆ. ದೇಹವನ್ನು ಸಮತೋಲನವಾಗಿ ಕಾಯ್ದುಕೊಂಡರೆ ರೋಗಗಳು ಬರುವುದು ವಿಳಂಬವಾಗುತ್ತದೆ....ತುಂಬಾ ಸತ್ಯವಾದ ವಿವರವನ್ನು ಕೊಟ್ಟಿದ್ದೀರಿ...ಧನ್ಯವಾದಗಳು.

    ReplyDelete
  2. ಜಲನಯನ,
    ಶಿವುರವರ ಸ್ಪಂದನಕ್ಕೆ ನೀವು ನೀಡಿದ ಪ್ರತಿಕ್ರಿಯೆಯಲ್ಲಿ Charle Chaplinನ
    ಕೆಲವು ಸಿನೆಮಾಗಳು ನಿಮ್ಮ ಮನಸ್ಸನ್ನು ಆಹ್ಲಾದಗೊಳಿಸುವ ಬಗೆಗೆ ಬರೆದಿದ್ದೀರಿ. ನಾನೂ ಸಹ Chaplin fan. ಆತನ Modern Times, The Kid, The Little Dictator ಮೊದಲಾದ ಚಿತ್ರಗಳು ನಗು ಹಾಗೂ ಅಳುವನ್ನು ಒಟ್ಟಿಗೆ ಬರಿಸುತ್ತವೆ!

    ReplyDelete
  3. ಮನಸ್ಸಿಗೂ ದೇಹಕ್ಕೂ ಬಹಳ ನಿಕಟ ಸಂಬಂಧವಿದೆ, ಈ ಮೆದುಳಿನ ಕೆಮಿಕಲ ಬ್ಯಾಲನ್ಸ ದೇಹದ ಸಮತೋಲನ ನಿಯಂತ್ರಿಸುತ್ತದೆ ಅನ್ನೊದು ಎಲ್ಲೋ ಓದಿದ ನೆನಪು, ಮನಸ್ಸು ಉಲ್ಲಸಿತವಾಗಿ ಲವಲಲಿಕೆಯಿಂದಿರುವ ಕೆಲವು ವೃದ್ಧರನ್ನು ನೋಡಿದಾಗ, ಎಲ್ಲ ಮನಸ್ಸಿಗೆ ಸಂಬಂಧಿಸಿದ್ದು ಅನಿಸುತ್ತದೆ, ಒಳ್ಳೇ ಲೇಖನ, ಕ್ಲಿಪ್ಪಿಂಗ್ ಪೂರ್ತಿ ನೋಡಲಾಗಲಿಲ್ಲ, ನನ್ನ ಇಂಟರನೆಟ ಕನೆಕ್ಷನ ಪದೇ ಪಡೆ ಕಟ ಆಗಿ, ನಿಂತು ಬಿಡುತ್ತಿದೆ, ಮತ್ತೆ ಯಾವಾಗಲಾದರೂ ನೋಡುತ್ತೇನೆ.

    ReplyDelete
  4. ಶಿವು, ನಿಜ ನಿಮ್ಮ ಮಾತು. ಮನಸ್ಸು ವಯಸ್ಸನ್ನು ನಿರ್ಧರಿಸುತ್ತೆ ಎನ್ನಲಾಗುತ್ತದೆ. ಬಹುಶಃ ಹಲವು ವೈದ್ಯಕೀಯ ವಿಸ್ಮಯಗಳಿಗೆ ಇದೇ ಕಾರಣ ಇರಬಹುದು

    ReplyDelete
  5. ಸುನಾಥ್ ಸರ್ ನಿಜ. ಚಾಪ್ಲಿನ್ ಕಾಮೆಡಿಗೆ ಎಷ್ಟು ಹೆಸರೋ ಅಷ್ಟೇ ವೈಚಾರಿಕತೆಗೂ ಹೆಸರು. ನನಗೆ ನನ್ನ ಸ್ನಾತಕ ವಿದ್ಯಾಭ್ಯಾಸದ ಸಮಯದಲ್ಲಿ ನೋಡಿದ ಮಾಡ್ರನ್ ಟೈಮ್ಸ್ ಈಗಲೂ ಹಸಿರಾಗಿದೆ. ಯಾಂತ್ರೀಕತೆಯನ್ನು ಹಾಸ್ಯ ವ್ಯಂಗ್ಯಗಳ ಮೂಲಕ ಪ್ರಸ್ತುತಪಡಿಸಲಾಗಿದೆ.

    ReplyDelete
  6. ಪ್ರಭು, ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ. ನಿಮ್ಮ ಬ್ಲಾಗ್ ಗಳಂತೂ ಮಸ್ತ್-ಮಜ ಕೊಡ್ತವೆ ನನಗೆ...ಮುಂದುವರೆಸಿ.

    ReplyDelete
  7. ಆಝಾದ್ ಸರ್...

    ಮನಸ್ಸು ಉಲ್ಲಾಸಿತವಾಗಿದ್ದರೆ ದೇಹದ ಆರೋಗ್ಯವೂ ಚೆನ್ನಾಗಿರುತ್ತದೆ...
    ನಿಮ್ಮ ವಿಶ್ಲೇಶಣೆ ಇಷ್ಟವಾಯಿತು....

    ಕ್ಲಿಪ್ಪಿಂಗ್ಸ್ ಚೆನ್ನಾಗಿದೆ....

    ಚಾಪ್ಲಿನ್ ಹಾಸ್ಯ ನನಗೂ ಇಷ್ಟ....

    ReplyDelete
  8. ಪ್ರಕಾಶ್ ಎಲ್ಲಿದ್ರಪ್ಪಾ ...?!! ಆರೋಗ್ಯ ಹೇಗಿದೆ ಈಗ?? ಗಣೇಶನ ಹಬ್ಬ ತುಂಬಾ ಉದ್ದಾನೇ ಆಯ್ತು ಅಂತ ಕಾಣುತ್ತೆ. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದ.

    ReplyDelete