Friday, September 18, 2009

ಸೋರುತಿಹುದು ಮನೆಯ ಮಾಳಿಗೆ.....ದಾರುಗಟ್ಟಿ ಮಾಳ್ಪರಿಲ್ಲ














All hopes lost, search for drowned Bangalore boy called off

1 post - 1 author - Last post: 17 hours agoThe entire episode has brought to light the callous attitude of Bangalore's civic authorities in failing to fence the open storm water ...www.thaindian.com/.../all-hopes-lost-search-for-drowned-bangalore-boy-called-off_100249261.html - 17 hours ago - Similar -
All hopes lost, search for drowned Bangalore boy called off ...

18 Sep 2009 ... Bangalore, Sep 18 (IANS) The search operation to find the body of ... Vijay is the second boy to die in the last few months after falling in a drain. ... in failing to fence the open storm water drains that dot the city. ...www.sindhtoday.net/news/1/51635.htm - 17 hours ago - Similar -
All hopes lost, search for drowned Bangalore boy called off
ಸೋರುತಿಹುದು ಮನೆಯ ಮಾಳಿಗೆ.....ದಾರುಗಟ್ಟಿ ಮಾಳ್ಪರಿಲ್ಲ
ಎಲ್ಲಿದೆ ವ್ಯವಸ್ಥೆ? ಯಾರು ಹೊಣೆ? ಮತ ಹಾಕಿ ಮತು ಕೆಡಿಸಿಕೊಳ್ಳಬೇಕೆ? ಯಾಕಂದ್ರೆ ಮತ ಹಾಕದವರಿಗೆ ಇದು ಅರಿವಾಗದು..ಎತ್ತರದ ಮಹಡಿಗಳಲ್ಲೋ..ವಿಪತ್ತುಗಳೆಂದರೇನೆಂಬ ಅರಿವೇ ಇಲ್ಲದೆ ಬೆಳೆವಲ್ಲೋ ಇರುತ್ತಾರೆ..ಬಡವ ಮತವನ್ನು ತನ್ನ ಹೊಟ್ತೆಗೆ ಹಾಕುವ ಅನ್ನವೆನ್ನುವಷ್ಟರ ಮಟ್ಟಿಗೆ ನಿಯ್ಯತ್ತಿನಿಂದ ಹಾಕಿ --ಈ ಪಾಡು ಪಡುತ್ತಾನೆ......
ಹೌದು ಸ್ವಾಮಿ...ಮನಸ್ಸು ಅತ್ತು ಅತ್ತು ಹರಿದು ಹಂಚಿಹೋಗಿರುವ ದುಃಖ ತಪ್ತ ಲಕ್ಷ್ಮಮ್ಮ ಮತ್ತು ವರದರಾಜು ದಂಪತಿಗಳನ್ನು ಕೇಳಿ...ಕೇವಲ ಹದಿನೆಂಟು ತಿಂಗಳ ಕರುಳ ಕುಡಿ ನೀರಿನಲ್ಲಿ ಕೊಚ್ಚಿಹೋಗಿ ಇಂದಿಗೆ ಮೂರು ದಿನ...ಬದುಕಿರುತ್ತಾನೆಂಬ ಭ್ರಮೆಯೂ ಈಗ ಬತ್ತಿಹೋಗಿದೆ...ಇನ್ನು ದೇಹ ಸಿಕ್ಕರೂ..ಅದನ್ನು ನೋಡುವ ಮನೋಸ್ಥೈರ್ಯ ಅವರಿಗಿರಲಾರದು..ತಾಯಿ ಕರಳು ಇಂಚಿಂಚೂ ಕತ್ತರಿಗೆ ಸಿಕ್ಕಂತೆ..ರಕ್ತ ಸಿಕ್ತವಾಗಿದ್ದರೂ ಅತಿಶ್ಯೋಕ್ತಿ ಅಲ್ಲ...(ಈ ಬ್ಲಾಗ್ ಬರಿಯುವಾಗ ದೂರದ ಕುವೈತಿನಲ್ಲಿರುವ ನನ್ನ ಕಣ್ಣಲ್ಲಿ ನೀರು ಹನಿಯಾಗುವುದನ್ನು ನಾನು ತಡೆಯಲಾಗಲಿಲ್ಲ..ಇನ್ನು ಆ ತಂದೆ ತಾಯಿಯ ಪಾಡೇನು..?? ದೇವರೇ..ಆ ದಂಪತಿಗಳಿಗೆ..ದುಃಖ ತಡೆಯುವ ಶಕ್ತಿ ಕೊಡು...).
ನಮ್ಮ ಸರ್ಕಾರ ನಿದ್ರಿಸುತ್ತಿದೆಯೇ?? ನಮ್ಮ ಬೊಬ್ಬಿರಿಸಿ ಬೊಬ್ಬಿಡುವ (ಬಾಡೂಟದ ಬೊಂಬಾಯಿಗಳು) ಮಹಾನಗರ ಪಾಲಿಕೆಯ ಮಹಾ ವೈಫಲ್ಯಗಳಿಗೆ...ಏನು ಹೇಳ ಬೇಕು. ಪ್ರತಿಷ್ಟೆಯನ್ನೇ ಬಂಡವಾಳವೆನ್ನುವ ಸರ್ಕಾರ ಅತಂತ್ರದ ಆಡಳಿತವಿರುವ ಬಿ.ಬಿ.ಎಂ.ಪಿ. ಚುನಾವಣೆಗಳನ್ನು ಮುಂದೂಡುತ್ತಲೇ ಇದೆ...ಗೊತ್ತು ಗುರಿಯಿಲ್ಲದ ಮ.ನ.ಪಾ. ಕೆಯ ಅಧಿಕಾರಿಗಳು ತಮ್ಮನ್ನಾಳುವ ಭಾವೀ ಕಾರ್ಪೊರೇಟರುಗಳ ಜೀ-ಹುಜೂರಿಯಲ್ಲಿರುವಾಗ ಎಳೆ ಕಂದಮ್ಮಗಳ ಆರ್ತ ನಾದ ಎಲ್ಲಿ ಕೇಳಿಸುತ್ತೆ???
ಹೋಗಲಿ..ಬಿಡಿ..ಏನೋ ಆಯಿತು ಎನ್ನಲು ಹೊಸದಲ್ಲವಲ್ಲಾ..ಇದು.. ಈಗ ೧೯ ತಿಂಗಳ ಹಸುಗೂಸು ವಿಜಯ ಯಮಕೂಪದಂತೆ ಬಾಯ್ದೆರೆದು ಗುಮ್ಮನಂತಿರುವ ಚರಂಡೀ ಡ್ರೌನ್ ಮ್ಯಾನ್ ಹೋಲುಗಳ ಬಲಿಯಾದ ಮೂರೇ ತಿಂಗಳಿಗೆ ಮುಂಚೆ ಆರು ವರ್ಷದ ಅವಿನಾಶ್ ಎಂಬ ಇನ್ನೊಂದು ಕಂದಮ್ಮ ಬಲಿಯಾಗಿದ್ದು ನೆನಪಿಂದ ಮಾಸೇ ಇಲ್ಲ ಅಷ್ಟರಲ್ಲೇ ಈ ಅವಘಡ. ಪ್ರಕಾಶ್ ಮತ್ತು ಭಾರತೀದೇವಿಯರ ಏಕಮಾತ್ರ ಪುತ್ರನನ್ನು ನುಂಗಿ ನೀರ್ಕುಡಿದ ಈ ವ್ಯವಸ್ಥೆಯನ್ನು ಸರಿಪಡಿಸುವ ಆಶ್ವಾಸನೆಗಳ ಸುರಿಮಳೆಯೇ ಆಯಿತು. ಅಷ್ಟೇ ಏಕೆ ಇದಕ್ಕೆ ಐದು ದಿನ ಮುಂಚೆ ಅರವತ್ತರ ಇಳಿವಯಸ್ಸಿನ ಹಿರಿಯರೊಬ್ಬರು ತಮ್ಮ ಸ್ಕೂಟರ್ ಸಮೇತ ಇಂತಹುದೇ ಕೂಪದೊಳಕ್ಕೆ ಬಿದ್ದು ಸತ್ತದ್ದು ನೆನೆಪಿಲ್ಲವೇ? ಇನ್ನು ನೀರಾವರಿ ಬೋರ್-ಬಾವಿಗಳ ಕಥೆಯೂ ಒಂದು ದುರಂತವೇ..ಆಟವಾಡುವ ಕಂದಮ್ಮಗಳು ಬಲಿಯಾಗಿವೆ. ಏಕೆ ಈ ಪರಿ ನೀರವ ಮೌನ ಅಧಿಕಾರಿಗಳಿಂದ..?? ನಮ್ಮ ಶ್ರೇಯೋಭಿಲಾಷೆಯೇ ತನ್ನ ಜೀವಾಳ ಎನ್ನುವ ಸರ್ಕಾರದಿಂದ...???!! ಇನ್ನೂ ಎಷ್ಟು ಬಲಿ ಬೇಕು ಇವರಿಗೆ??
ಅಲ್ಲಿ ನಾಡಿನಲ್ಲಿರುವ ನಮ್ಮವರು ಎಚ್ಚೆತ್ತುಕೊಳ್ಳಬೇಕು...ಬಡಿದೆಬ್ಬಿಸಬೇಕು..ವ್ಯವಸ್ಥೆಯನ್ನು...ಆದರೆ ಕಣ್ತೆರೆದು ನಿದ್ರಿಸುವವರನ್ನು ಹೇಗೆ ತಾನೆ ಎಚ್ಚರಿಸುವುದು..ಹೇಗೆ..ಹೇಗೆ..ಹೇಗೆ..ತಿಳಿಸುವುದು ಇವರಿಗೆ...ನಮ್ಮ ಮಗುವೂ ಮಗುವೇ..ನಮ್ಮ ಕನಸುಗಳೂ ನಿಮ್ಮ ಕನಸುಗಳಂತೆಯೇ..ಎಂದು.????

24 comments:

  1. ಅಝಾದಣ್ಣ,
    ಸರಿಯಾಗಿ ಹೇಳಿದ್ರಿ...ಬಡವರ ಮಕ್ಕಳು ಅಂದ್ರೆ ಅವರಿಗೆ ಹಾಗೆ...ಅವರ ಕರುಳು ಚುರುಕ್ ಅನೋದಿಲ್ವ....ಯಾಕೆ ಹೀಗೆ ನಮ್ಮ ವ್ಯವಸ್ಥೆ ಅಂತ ನನಗೂ ಎಷ್ಟೊ ಭಾರಿ ಅನ್ನಿಸಿದೆ...
    ಇದನ್ನೆಲ್ಲಾ ಸರಿ ಪಡಿಸಲು ದೇವರೆ ಅವರಿಗೆ ಬುದ್ದಿ ಕೊಡಬೇಕು...
    ನಿಮ್ಮ ಲೇಖನದಿಂದ ಅವರ ಕಣ್ಣು ತರೆಯಲಿ....

    ReplyDelete
  2. ಜಲನಯನ ಸರ್,

    ಇತ್ತೀಚಿನ ಮಳೆಯಿಂದಾಗಿ ಬೆಂಗಳೂರಿನಲ್ಲಿ ಚರಂಡಿ ಮೋರಿಯಲ್ಲಿ ಮಕ್ಕಳು ಕೊಚ್ಚಿಹೋಗುತ್ತಿರುವ ಘಟನೆಯನ್ನು ನೋಡುತ್ತಿದ್ದೇನೆ. ಮನಸ್ಸಿಗೆ ಬೇಸರವಾಯಿತು. ನಮ್ಮ ದರಿದ್ರ ಸರ್ಕಾರಕ್ಕೆ ಯಾವಾಗ ಬುದ್ಧಿ ಬರುತ್ತೋ ಗೊತ್ತಿಲ್ಲ. ಮಕ್ಕಳನ್ನು ಕಳೆದುಕೊಂಡ ತಂದೆ ತಾಯಿಗಳಿಗೆ ದುಃಖ ಬರಿಸುವ ಶಕ್ತಿ ಕೊಡಲಿ....

    ReplyDelete
  3. ಮಹೇಶ್
    ನನಗೆ ಆ ತಂದೆ ತಾಯಿಯನ್ನು ನೆನೆಸಿಕೊಂಡ್ರೆ ಹೆಚ್ಚು ದುಃಖ ಆಗುತ್ತೆ..ಅವರ ಮನಸ್ಸಿನಮೇಲೆ ಎಮ್ತಹ ಪರಿಣಾಮ ಬೀರಿರಬಾರದು ೧೯ ತಿಂಗಳು ಹಸು ಗೂಸು ಎಷ್ಟು ವಿಲ-ವಿಲ ಒದ್ದಾಡಿರಬೇಡ ಆ ನೀರಿನಲ್ಲಿ...ಛೇ..ಮನುಷ್ಯತ್ವದ ಗಮ್ಧವೇ ಇಲ್ಲದ ಜನಾರಿ ಇವರು..ಸತ್ತಮೇಲೆ ಒಂದು ಲಕ್ಷ ಎರಡು ಲಕ್ಷ ಹೆಣದಮೇಲೆ ಬಿಸಾಡುವವರಿಂದ ಏನು ತಾನೆ ಅಪೇಕ್ಷಿಸಲುಸಾಧ್ಯ...

    ReplyDelete
  4. ಶಿವು, ಯಾವ್ಯಾವುದಕ್ಕೋ ರಸ್ತೆಗಿಳಿಯುವ ನಮ್ಮಮಾನವತಾ ವಾದಿಗಳು ಇದಕ್ಯಾಕೆ ರಸ್ತೆಗಿಳಿಯುವುದಿಲ್ಲ...??
    ರಾಜಕಾರಣ ಬರೀ ಚುನಾವಣೆ..ಅದರ ಸುತ್ತಲ ಹೊಲಸು ಹೆಣೆದ ಜಾಲ ಅಷ್ಟೇ ಎಂದುಕೊಂಡಿದ್ದಾರೆ ..ನಮ್ಮ ಪುಢಾರಿಗಳು..
    ನಿಜಕ್ಕೂ ಶೋಚನೀಯ...ಉದ್ಯಾನ ನಗರಿಯ ಅಧ್ವಾನದ ಕಥೆ..

    ReplyDelete
  5. ಜಲನಯನ ಅವರೇ,
    ಅಂಗೈ ಹುಣ್ಣಿಗೆ ಕನ್ನಡಿ ಯಾಕೆ....? ಎಂಬ ನಾಣ್ಣುಡಿಯಂತೆ, ಅವರ ಹುಣ್ಣಿಗೆ (ವ್ಯವಸ್ಥೆಗೆ) ಜನರು ನೂರಾರು....ಸಾವಿರಾರು ಕನ್ನಡಿಗಳನ್ನು ಹಿಡಿದು ತೋರಿಸುತ್ತಿದ್ದರೂ, ಅವರ ಒಳಗಣ್ಣು ಮುಚ್ಚಿಹೊಗಿದೆಯಲ್ಲಾ.....!
    ಅದಕ್ಕೆ ನಮ್ಮಲ್ಲಿ ಯಾರಾದರೂ ಒಬ್ಬರಾದರೂ ಅವರ ಹುಣ್ಣಿಗೆ (ವ್ಯವಸ್ಥೆಗೆ) ಕನ್ನಡಿ ಹಿಡಿಯುವ ಬದಲು ಆ ಹುಣ್ಣಿನ ಮೇಲೆ ಖಾರ ಚೆಲ್ಲಿದರೆ ಆಗಲಾದರೂ ಎಚ್ಚೆತ್ತುಕೊಳ್ಳುತ್ತಾರಲ್ಲವೇ? ಆದರೆ ಆ ಒಬ್ಬರಾದರೂ ಯಾರು? ಯಾರಿಂದ ಈ ವ್ಯವಸ್ಥೆ ಬದಲಿಸಲು ಸಾಧ್ಯ? ಉತ್ತರ ಒಗಟಾಗೆ ಉಳಿದಿದೆ.....!!!

    ReplyDelete
  6. ಎಸ್ಸೆಸ್ಕೆ ಯವರೇ, ನಿಮ್ಮ ಮಾತು ಒಪ್ಪುವಂತಹುದೇ..ಗೋರ್ಕಲ್ಲಮೇಲೆ ಮಳೆಗರೆದರೆ ...ಏನು ಪ್ರಯೋಜನ?
    ಸರ್ಕಾರ ಸರ್ಕಸ್ ಮಾಡುತ್ತಿದೆ..ಅಧಿಕಾರಿಗಳು ಅಧಿಕಾರದ ಡೊಂಬರಾಟದ್ಲ್ಲಿದ್ದಾರೆ....ಹೇಗೆ ಇವರು ಅರಿತುಕೊಳ್ಳುತ್ತಾರೋ ತಿಳಿಯದು

    ReplyDelete
  7. ಜಲನಯನ,
    ಆಡುತ್ತಿರುವ ಹುಡುಗರು ಮೋರಿಯಲ್ಲಿ ಬಿದ್ದು ಅಥವಾ ತೆರೆದ ಕೊಳವೆ ಬಾವಿಯಲ್ಲಿ ಬಿದ್ದು ಸಾಯುವದು ನಮ್ಮಲ್ಲಿ ಈಗ common ಆಗಿಬಿಟ್ಟಿರುವದು ನಮ್ಮ ದುರ್ದೈವ. ಇಂತಹ ಪರಿಸ್ಥಿತಿಗೆ ಕಾರಣರಾದವರ ಮೇಲೆ ಕೊಲೆ ಆರೋಪ ಹೊರಿಸಿ ಜೇಲಿಗೆ ತಳ್ಳಬೇಕು. ಆಗಷ್ಟೇ ಇವರಿಗೆ ಪ್ರಜ್ಞೆ ಬಂದೀತು.

    ReplyDelete
  8. ಜಲನಯನ ಅವರೆ,

    ನನಗಂತೂ ಇಂತಹ ಘಟನೆಗಳನ್ನು ವೈಭವೀಕರಿಸಿ ಅದಕ್ಕೆ "ಆಪರೇಷನ್ ವಿಜಯ್" ಎಂತಲೋ ಇಲ್ಲಾ ಇನ್ನೆಂತದೋ ಹೆಸರನ್ನಿಟ್ಟೋ ಸುದ್ದಿ ಬಿತ್ತರಿಸಿ ತಮ್ಮ ಟಿ.ಆರ್.ಪಿ ಎತ್ತರಿಸಲು ಪರದಾಡುವ ಟಿ.ವಿ. ಗಳನ್ನು ಕಂಡರೆ ಮೈಯುರಿಯುತ್ತದೆ. ಹಸು ಕಂದಮ್ಮಗಳು ಈ ರೀತಿ ದುರ್ವಿಧಿಗೆ, ಬೇಜವಾಬ್ದಾರಿ ಆಡಳಿತಕ್ಕೆ ಬಲಿಯಾಗುತ್ತಿರುವುದನ್ನು ನೋಡಲೇ ಆಗದು. ಆ ಹೆತ್ತವರ ದುಃಖ ದೇವರಿಗೇ ಪ್ರೀತಿ. ಅಂತಹದರಲ್ಲಿ ಮಾಡಿದ ತಪ್ಪಿಗೆ, ಆದ ಅನಾಹುತಕ್ಕೆ, ಪ್ರಾಯಶ್ಚಿತ್ತ ಎಂಬಂತೆ ಒಂದು ಲಕ್ಷ ಚೆಕ್ ಅನ್ನು ಮನೆಯವರಿಗೆ ಕೊಟ್ಟು ಕೈತೊಳೆದುಕೊಳ್ಳುವ ಸರಕಾರಕ್ಕೆ ಏನೆನ್ನೋಣ?! ಇಂತಹ ಹಣವನ್ನು ಅವರು ಸ್ವೀಕರಿಸಬೇಕೆ? ಈ ಹಣದಿಂದ ಏನು ಪರಿಹಾರ ಸಿಗಬಹುದು ಹೇಳಿ? ಹಣದಿಂದ ಸತ್ತ ಕಂದಮ್ಮನ ದುಃಖ ಮರೆಯಾಗಬಹುದೇ? ಹೆತ್ತ ತಂದೆಯಾದರೂ ಕೆಲಸಮಯದಲ್ಲೇ ಮರೆಯಬಹುದೇನೋ(ಕೆಲವರು) ಆದರೆ ಹೆತ್ತೊಡಲು ಹೇಗೆ ತಾನೆ ಸಹಿಸೀತು? ಇಂತಹ ಹಣ ಕೊಡಲು ಬಂದಾಗ ಮೊದಲು ಹೆತ್ತವರು ಆ ಅಧಿಕಾರಿಗಳನ್ನು ಹೊರ ಹಾಕಬೇಕು. ಆಳುವ ಸರಕಾರವೇ ನಿದ್ರಿಸಿದ್ದರೆ ಜನರೇ ಜಾಗ್ರತರಾಗಬೇಕು. ತಮ್ಮ ಸುತ್ತಮುತ್ತಲಿನಲ್ಲಿ ಇಂತಹ ಚರಂಡಿಗಳಿದ್ದರೆ, ಮೋರಿಗಳು ತುಂಬಿದ್ದರೆ ಅದನ್ನು ಮುಚ್ಚುವ, ಇಲ್ಲಾ ಬೇರೇನಾದರೂ ವ್ಯವಸ್ಥೆಯ ಕುರಿತು ಯೋಚಿಸುವಂತಾಗಬೇಕು. ಆಗ ಮಾತ್ರ ಇಂತಹ ಅಮಾನುಷ ಸಾವಿಗೆ ಕೊನೆ ಬಂದೀತೇನೋ!!!

    ReplyDelete
  9. ಸುನಾಥ್ ಸರ್, ಹೇಗೆ ಎಚ್ಚರಿಸಬೇಕು ಸರ್ಕಾರವನ್ನು? ಮಲಗಿರುವವರನ್ನು ಎಚ್ಚರಿಸಬಹುದು...ಇಲ್ಲಿ ಮಲಗಿಸುತ್ತಿರುವವರನ್ನು ಹೇಗೆ ಎಚ್ಚರಿಸುವುದು?
    ಬೆಂಗಳೂರ ಜನತೆ ಏನಾದರೂ ಮಾಡಬೇಕು..? ಹಳ್ಳಿಗರು ತಮ್ಮ ನೀರಾವರಿ ಸಮಸ್ಯೆಗೆ ಸಣ್ಣ ಅಣೆಕಟ್ಟನ್ನು ಕಟ್ಟಿದ ಛಲವಂತ ಕನ್ನಡಿಗರಿರುವ ರಾಜಧಾನಿಯಲ್ಲಿ..ಆ ಮೋಟಿವೇಶನ್ ಏಕೋ ಬರುತ್ತಿಲ್ಲ, ಯಾಂತ್ರಿಕ ಬದುಕಿಗೆ ಒಗ್ಗಿಹೋಗಿ..ಮಕ್ಕಳನ್ನು ಕಳೆದುಕೊಂಡ ದುಃಖವೂ ಆ ಸದ್ದಿನಲ್ಲೇ ಆಡಗಿಹೋಗುತ್ತಿದೆಯೇ...??
    ನಮ್ಮಲ್ಲಿರುವ ಜರ್ನಲಿಸ್ಟ್, ಟಿ.ವಿ. ಯವರು ಈನಿಟ್ಟಿನಲ್ಲಿ ಯಾಕಾಗಿ ಕೆಲಸ ಮಾಡ್ತಿಲ್ಲವೋ ತಿಳಿಯುತ್ತಿಲ್ಲ.

    ReplyDelete
  10. ತೇಜಸ್ವಿನಿ...ಹೆತ್ತಕರುಳ ರೋದನ ಕಿವುಡು ಸರ್ಕಾರಕ್ಕೆ, ದಿಕ್ಕುತಿಳಿಯದ ಅಧಿಕಾರಿಗಳಿಗೆ ಹೇಗೆ ತಾನೇ ಕೇಳಿಸೀತು?
    ತಂದೆಯಾಗಲಿ ತಾಯಿಯಾಗಲಿ...ಹೆತ್ತವರು ಅವರು ಅವರ ನೋವನ್ನು ನಮ್ಮ ಸರ್ಕಾರದ ಮಂತ್ರಿಗಳೋ ಹಿರಿ ಅಧಿಕಾರಿಗಳೋ ಅನುಭವಿಸಿದರೆ...ತಿಳಿಯುತ್ತೆ...
    ಜನ ಜಾಗೃತಿ ಆಗಬೇಕು...ಹೇಗೆ...ಹೇಗೆ..ಹೇಗೆ...????????

    ReplyDelete
  11. ಸರ್ ಬೆಂಗಳೂರು ಬೇಕಾಬಿಟ್ಟಿ ಬೆಳೆಯುತ್ತಿದೆ, ಕೊಳಚೆ ಕೊಚ್ಚೆ ಜಾಸ್ತಿ ಆಗುತ್ತಿದೆ, ಪ್ರಗತಿ ಕಮ್ಮಿ, ಹೀಗೆ ಮುಂದುವರೆದರೆ ಒಂದು ದಿನ ಬೆಂಗಳೂರಿನಲ್ಲಿ ವಾಸಿಸಲು ಅನುಮತಿ ಕೊಡುವ ಸಿಸ್ಟೆಮ ಬಂದರೂ ಬರಬಹುದು. ಮೊದಲ ಆದ್ಯತೆ ಈ ದಟ್ಟನೆ ನಿಯಂತ್ರಣಕ್ಕೆ ಕೊಡಬೇಕು ಅನಿಸುತ್ತದೆ... ಇನ್ನು ಟಿವಿಯವರು ಇದನ್ನು ವೈಭವೀಕರಿಸುವುದರ ಮೇಲೆ ಧಿಕ್ಕಾರವಿರಲಿ.

    ReplyDelete
  12. ಪ್ರಭು, ಕೊಳವೆ ಬಾವಿ ಮತ್ತು ಕೊಳಚೆ ಕೂಪ ಬಹುಶಃ ಕನಿಷ್ಟ ೧೦ ಜೀವವನ್ನಾದರೂ ಬಲಿತೆಗೆದುಕೊಂಡಿರಬೇಕು...
    ಯಾವುದಾದರೂ ವಿ.ವಿ.ಐ.ಪಿ ಮಗೂನೋ ಅಥ್ವಾ ಮಿನಿಸ್ಟರ್ ಮಕ್ಕಳಿಗೋ ಹೀಗಾಗಿದ್ದರೆ..ಇಡೀ ಬೆಂಗಳೂರನ್ನೇ ತಮ್ಮ ಮನೆಯೇನೋ ಅನ್ನೋ ತರಹ ರಿಪೇರಿ ಮಾಡಿಟ್ಟಿರ್ತಿದ್ದರು ನಮ್ಮ ಪುಡಾರಿಗಳು...ನಾಚಿಕೆಯಿಲ್ಲದ ಜೀವಗಳಿವು..ಬಿಡಿ..ಇವರ ಬಗ್ಗೆ ಹೇಳುವುದಕ್ಕಿಂತ..ಜನಜಾಗೃತಗೊಳ್ಳುವುದು ಒಳಿತು.

    ReplyDelete
  13. ಜಲಾನಯನ..
    ಕರೆಕ್ಟ್ ಆಗಿ ಹೇಳಿದ್ದಿರ... ಪ್ರತಿ ಸಾರಿ ಇಂಥ ಒಂದು ಅವಘಡ ಆದಾಗ.. ಎಲ್ಲರೂ ಬಂದು ಹೇಳುತ್ತಾರೆ...ಒತ್ತುವರಿ ಮಾಡಿಕೊಂಡ ಇರುವ ಜಾಗವನ್ನು ತೆರವು ಗೊಲಿಸುತ್ತೇವೆ, ಅದು ಮಾಡುತ್ತವೆ, ಇದು ಮಾಡುತ್ತವೆ ಅಂತ... ಆದರೆ ಇದೆಲ್ಲ ಅಂದಿನ ಸಮಯಕ್ಕೆ ಆಡುವ ಬಯಿಮಾತು ಅಸ್ಟೇ...ಆಮೇಲೆ..ಅದರ ಬಗ್ಗೆ ಎಲ್ಲರೂ ಮರೆತು ಹೋಗಿ.. ಮತ್ತದೇ ಅವಾಂತರ ....
    ಯಾವಾಗ ಈ ನಮ್ಮ ರಾಜಕಾರಣಿಗಳಲ್ಲಿ ಬುದ್ದಿಬರುತ್ತೋ... ಈ ಟಿವಿ ಅಥವಾ ಮೀಡಿಯ ನವರು ಅಸ್ಟೇ, ಒಂದೆರಡು ದಿನ ಸುದ್ದಿ ಮಾಡಿ ತಮ್ಮ ತ್ರ್ಪ್ರ ರತಿನ್ಗ್ಸ್ ಬಗ್ಗೆ ನೋಡ್ಕೋತಾರೆ ವರ್ತು,, ರಾಜಕಾರಣಿಗಳು, ಅಧಿಕಾರಿಗಳು ಕೊಟ್ಟ ಹೇಳಿಕೆ , ಆಶ್ವಾಸನೆ ನೆದೆದಿದ್ದಿಯ ಇಲ್ಲವ ಅಂತ ಯಾಕೆ ತಿಲಿಸಿಕೊದುವುದಕ್ಕೆ ಪ್ರಯತ್ನಿಸುವುದಿಲ್ಲ? ಅಟ್ ಲೀಸ್ಟ್ ಫಾಲ್ಲೋವುಪ್ ಅಂತು ಮಾಡಬಹ್ಬುದಲ್ವ.. ಅವಗಲಾದರು ಬೇಜವಾಬ್ದಾರಿ ಅಧಿಕಾರಿಗಳು ಎಚ್ಚೆತ್ತು ಕೊಳ್ಳೋದು....
    ಒಟ್ಟಿನಲ್ಲಿ ನಮ್ಮ ಅವಸ್ತೆ ಬಗ್ಗೆ ನಾವೇ maatadi, oddada ಬೇಕು ಅಸ್ಟೇ

    ReplyDelete
  14. Guru
    What you say is perfectly matching the ground realities in our Silicon city and we boast of our software so much and our HARDWARE of water supply, electricity and Sewage have gone to DOGS...
    Our politicians aim only at BBMP election not at BBMP corrections.
    Thank you

    ReplyDelete
  15. nimma maatu noorakke nooru satya, aadare ee vyavastegaLu badalaguvudu yavaaga gotilla.

    ReplyDelete
  16. ಮನಸು ಮೇಡಂ...ನಿಮ್ಮ ಐಕಾನ್ ಬದಲಾಯಿಸಿ..ನಿಮ್ಮ ಮತ್ತೆ ಮಹೇಶ್ ಐಕಾನ್ ಎರಡೂ ಒಂದೇ ಕನ್ಪ್ಯೂಜ್ ಆಗುತ್ತೆ...
    ಬದಲಾಗೋ ವ್ಯವಸ್ಥೆ ತರಬೇಕು ಅಂದ್ರೆ ಅತಿ ಚುರುಕಾದ ಸರ್ಕಾರ ಬರಬೇಕು...ಆದ್ರೆ ಸದ್ಯಕ್ಕೆ ಇದು ಕನಸಷ್ಟೆ.. ಎನೋ ಹೇಳ್ತಾರಲ್ಲ...ಎಲ್ಲ ಒಂದೇ ಬುಟ್ಟಿಯ ಕೊಳೆತ ಮೊಟ್ಟೆಗಳು...ಅಂತ...

    ReplyDelete
  17. ಜಲಾನಯನ ಅವರೇ, ನೀವೆಂದಂತೆ ಈ ಅವ್ಯವಸ್ಥೆಯ ಅರಾಜಕತೆಯಲ್ಲಿ ಯಾರಿಗೆ ಯಾರು ಹೇಳಬೇಕೋ ಗೊತ್ತಾಗಲ್ಲ. ಈ ತರಹದ ಅಚಾತುರ್ಯಗಳು ಮುಂದೆಂದೂ ಘಟಿಸದಿರಲಿ ಎಂದು ಬೇಡಿಕೊಳ್ಳುವುದಷ್ಟೇ ನಮ್ಮ ಕಳಕಳಿ ..........

    ReplyDelete
  18. ಜಲನಯನ ಅವರೇ,
    ನೀವು ಹೇಳಿದ್ದು ನಿಜ. ಇದರಲ್ಲಿ ಅಧಿಕಾರಿಗಳ ತಪ್ಪು ಇದೆ.
    ಇದು ಅವರ ತಪ್ಪೊಂದೇ ಅಲ್ಲ. ಸಾರ್ವಜನಿಕರ ತಪ್ಪು ಕೂಡ.
    ಪ್ರತಿಯೊಂದು ವಿಷಯಕ್ಕೂ ನಾವು ಸರ್ಕಾರದ ಮೇಲೆ ಅವಲಂಬಿತರಗಿರುವುದು ನಮ್ಮ ಬೇಜವಾಬ್ದಾರಿಯನ್ನು ತೋರಿಸುತ್ತದೆ.

    ReplyDelete
  19. ಜಲನಯನ ಅವರೇ,
    ವ್ಯವಸ್ಥೆ ಸರಿ ಮಾಡೋದು ಅಂದ್ರೆ ನಾವೇ ಸರಿ ಆಗೋದು ಅಂತ ಅರ್ತ ಆಲ್ವಾ.....ಈಗ ಪರಿಸ್ತಿತಿ ಹೇಗೆ ಇದೆ ಅಂದ್ರೆ ಯಾರಾದ್ರು ಸತ್ರೆ ಮೊದಲಿಗೆ ಕೇಳೋದು, ಎಷ್ಟು ಪರಿಹಾರ ಕೊಡ್ತಾರೆ ಅಂತ.....ನಮ್ಮ ಮನೆಯ ಮುಂದಿನ ಚರಂಡಿ, ತೆರೆದ ಬಾವಿಗಳನ್ನ ನಾವೇ ನೋಡಿ ಸರಿಪಡಿಸದೆ ಇದ್ರೆ, ಈ ಘಟನೆ ಪದೇ ಪದೇ ನಡೆಯುತ್ತಾ ಇರತ್ತೆ.... ಸರಕಾರ ಯಾವಾಗಲು ನಿದ್ದೆ ಮಾಡತ್ತಾ ಇರತ್ತೆ..... ಎಬ್ಬಿಸಬೇಕಾದವರು ನಾವೇ ಅಲ್ಲವೇ.... ನನಗಂತೂ ಈ ವ್ಯವಸ್ಥೆ ಸುದಾರಿಸುತ್ತದೆ ಎಂಬ ನಂಬಿಕೆಯೇ ಹೊರಟುಹೋಗಿದೆ.......

    ReplyDelete
  20. ದಿನಕರ್ ಸರ್,
    ಧನ್ಯವಾದ ನನ್ನ ಬ್ಲಾಗ್ ಗೆ ಬಂದು ಪ್ರತಿಕ್ರಿಯೆ ನೀಡಿ ಪ್ರೋತ್ಸಾಹಿಸಿದಿರಿ..
    ನಮ್ಮ ವ್ಯವಸ್ಥೆ ಸರಿಹೋಗಲು ಕಾಯಿತ್ತಾ ಕೂತ್ರೆ..ವಿಜಯ್, ಅವಿನಾಶ್ ಹೀಗೆ ಹಲವರನ್ನು ಕಳೆದುಕೊಳ್ಳಬೇಕಾಗಬಹುದು..ಅಲ್ಲವೇ..?

    ReplyDelete
  21. ಹೌದು ನೀವು ಹೇಳುವದು ಸರಿ. ನಾನು ಅಭಿಷೇಕ್ Incident ಆದ ಮೇಲೆ ಈ http://haalusakkare.blogspot.com/2009/08/blog-post_369.html (ಮೂರುಲೋಕದೊಳಗಿನ ಮುಂಗಾರುಮಳೆ... ) article ಬರೆದಿದ್ದೆ.

    ReplyDelete
  22. ಗೋಪಾಲ್ ಸರ್
    ಧನ್ಯವಾದ ನನ್ನ ಬ್ಲಾಗಿಗೆ ಬಂದಿರಿ, ನಿಮ್ಮ ಅನಿಸಿಕೆಯನ್ನು ಪ್ರಚುರಪಡಿಸಿದಿರಿ..
    ಪುರಸೊತ್ತಿನಲ್ಲಿ ನಿಮ್ಮ ಗೂಡಿಗೂ ಬರುವೆ..

    ReplyDelete
  23. vyavastheya jaddugattoda vatavarana yaavaga kalivudu adara niriksheyali namma prayatanavirali sada

    ReplyDelete
  24. ಈಶ್, ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ...ನಮ್ಮ (ಅ)ವ್ಯವಸ್ಥೆಯ ತೂತುಗಳನ್ನು ಮುಚ್ಚುವವರು ಯಾರೋ?? ಯಕ್ಷ ಪ್ರಶ್ನೆ..

    ReplyDelete