Wednesday, October 28, 2009

ಭೂಮಿಯ ಅಂತ್ಯ..!! 2012 ಡಿಸೆಂಬರ್ 21 ಕ್ಕೆ !!! ..ಕಿವೀಗೆ ಹೂವಾ??!!
ಮನುಯುಗ-ಪ್ರಳಯ ವೇದಗಳು
(www.bhavamanthana.blogspot.com
)
‘ರೀ ಗೋಪಾಲ್ ನಿಮ್ಮ ಮಗಳ ಮದುವೆ 2011 ಕ್ಕೆ ಮಾಡ್ಬೇಕು ಅಂದ್ಕೊಂಡಿದ್ದರಲ್ಲವಾ? ಈ ವರ್ಷನೇ ಮಾಡ್ಬಿಡಿ...ಪ್ರಳಯ ಆಗುತ್ತಂತ್ರೀ...2012 ಡಿಸೆಂಬರ್ 21ಕ್ಕೆ...!!?? ಮೊಮ್ಮಗೂನಾದರೂ ನೋಡ್ಕೊಂಡು ಹೋಗಬಹುದು ನೀವು..‘ ಎಲ್ಲೋ ಊರಿಗೆ ಹೋಗೋರಿಗೆ..ಮಧ್ಯಾನ್ಹದ ಊಟ ಮಾಡ್ಕೊಂಡು ಹೋಗಿ ಅನ್ನೋರೀತಿ... ಹೇಳ್ದ ನಿಂಗಣ್ಣ ..ತನ್ನ ಎದುರು ಮನೆ ಗೋಪಾಲ್..ಗೆ ಇದ್ದ ಬದ್ದ ಎರಡು ಕೂದಲನ್ನ ಕೆರೀತಾ ....
‘ರೆಡ್ಡಿ ರಂಪಾಟ - ಎಡ್ಡಿ ಎಗರಾಟ‘ ಅನ್ನೋ ಸ್ವಾರಸ್ಯಕರ ತಲೆಬರಹ ನೋಡಿ ಆ ದಿನದ ದಿನಪತ್ರಿಕೆ ಹಿಡಿದು ತನ್ನ ಪೋರ್ಟಿಕೋದಲ್ಲಿ ಈಸೀ ಛೇರಿನಲ್ಲಿ ಆಸೀನನಾಗಿ..ಬೆಳಗಿನ ಹಬೆಯಾಡುವ ಕಾಫಿಯನ್ನು ಗುಟುಕಿಸುತ್ತಾ ಕೂತಿದ್ದ ಗೋಪಾಲ್ ಗೆ ಒಂದು ಬಾಂಬೆಸೆದ....
ಎಡ್ಡಿ-ರೆಡ್ಡಿ ವಿಷಯ ಹಾರೇ ಹೋಯ್ತು..ಗೋಪಾಲ್ ತಲೆಯಿಂದ ನಿಂಗಣ್ಣ ಸಿಡಿಸಿದ ಬಾಂಬು ಕೇಳಿ...ಏನು..?? ಏನು ನಿಂಗಣ್ಣ ನೀನು ಹೇಳಿದ್ದು?..ಪ್ರಳಯ ಆಗುತ್ತಂತಾ?? ಯಾವ ನ್ಯೂಸ್ನಲ್ಲೂ ಬರ್ಲಿಲ್ಲವೇ?? ನಿನಗ್ಯಾರು ಹೇಳಿದ್ದು..?? ಇದೇನಪ್ಪ ಇದ್ದಕ್ಕಿದ್ದಂಗೆ ಪ್ರಳಯ ಗಿಳಯ ಅಂತೀಯ?? ಆಗೋಂದ್ಸಾರಿ..ಸ್ಕೈಲ್ಯಾಬ್ ಬೆಂಗಳೂರ್ ಮೇಲೆ ಬೀಳ್ಸೋಕೆ ಅಮೇರಿಕಾದವ್ರು ಪ್ಲಾನ್ ಮಾಡವ್ರಂತೆ ಅಂತ ನೀನೇ ಅಲ್ವಾ ಗುಲ್ಲೆಬ್ಬಿಸಿದ್ದು..!!?? ಹಂಗೇನಾ ಇದೂನೂ..??
ಯೇ..ಬಿಡ್ರಪ್ಪಾ ನೀವು..ಉಪಕಾರ ಮಾಡೊರ ಬುಡಕ್ಕೇ ಈಡ್ತೀರ ನೀವು ಬತ್ತೀನಾ..!! ಇದು ನಿಜ ಕಣಪ್ಪಾ..ವಿಜ್ಜಾನಿಗಳೂ ಹೇಳವರಂತೆ..ಅದೇನೋ ಆಕಾಶ ಕಾಯ ಅನ್ನೋದು ಭೂಮಿಗೆ ಬಡಿತದಂತೆ.. ಯಾರೂ ಉಳಿಯಲ್ಲವಂತೆ..ಅದನ್ನೇ ಮಾಯಾ ಜನಾಂಗದ ಕ್ಯಾಲಂಡರೂ ಹೇಳೋದಂತೆ..ಆ ಕ್ಯಾಲಂಡರ್ ನಲ್ಲಿ ೨೦೧೨, ಡಿ. ೨೧ ನಂತರ ಯಾವುದೇ ದಿನ ಇಲ್ಲಂತೆ..ಅಲ್ಲೀಗೇ ಮುಗೀತದಂತೆ ಎಲ್ಲಾ??....
ಒಂದೇ ಉಸಿರಿಗೆ ತನಗೆ ಗೊತ್ತಿದ್ದನ್ನ ಒದರಿದ ನಿಂಗಣ್ಣ.
ಈಗ ನಿಜವಾಗೂ ಯೋಚನೆಗೆ ಬಿದ್ದ ಗೋಪಾಲ...ತಕ್ಷಣ ಅವನಿಗೆ ssಛಿieಟಿಣisಣ ರಾಮಣ್ಣ ನೆನಪಿಗೆ ಬಂದ. ತನ್ನ ಬಾಲ್ಯದ ಗೆಳೆಯ, ಮೊನ್ನೆ ಮೊನ್ನೆವರೆಗೂ ಅಮೇರಿಕಾದಲ್ಲಿದ್ದು ಈಗ ಕರ್ನಾಟಕ ಸರ್ಕಾರದ ವಿಶೇಷ ಆಹ್ವಾನದ ಮೇರೆಗೆ ವಾತಾವರಣ ಶಾಸ್ತ್ರದ ಎಕ್ಸ್ಪರ್ಟ್ ಆಗಿ ಬೆಂಗಳೂರಿಗೆ ಬಂದಿದ್ದ. ಪಕ್ಕದ ಬೀದೀಲೇ ಅವನ ಮನೆ, ಭಾನುವಾರ ಆಗಿದ್ದರಿಂದ ಮನೇಲೇ ಇರ್ತಾನೆ ಅಂತ ರಾಮಣ್ಣನ ಮನೆಕಡೆ ಹೆಜ್ಜೆ ಹಾಕ್ದ.
ಗಾಬರಿ ಗಾಬರಿಯಾಗೇ ಮನೆಗೆ ಬಂದ ಗೋಪಾಲನ್ನ ನೋಡಿ ರಾಮಣ್ಣ..ಏನೋ ಗೋಪಾಲ ಗಾಬರಿ...ಎಲ್ಲಾ ಆರಾಮ ಹೌದಲ್ಲೋ? ಎನ್ನುತ್ತ ಗೆಳೆಯನನ್ನ ಬರಮಾಡಿಕೊಂಡ.
ಏ..ಏನಿಲ್ಲೋ ರಾಮು...ಎನ್ನುತ್ತಾ ತನ್ನ ಗಾಬರಿಯನ್ನು ಇಲ್ಲವೆನ್ನುವಂತೆ...ಅದೇ..ನಿಂಗಣ್ಣ ...ಏನೋ ೨೦೧೨......
ಓ ಅದಾ..ನಿನ್ಗೂ ಬಿಟ್ಟವನೆ ಭೂತಾನ..?? ಹಹಹ..ಎಂದ ರಾಮಣ್ಣ ಎಲ್ಲ ಗೊತ್ತಿರುವಂತೆ.
ನಿನಗೆ ಗೊತ್ತಾ.. ರಾಮು..? ಕೇಳಿದ ಗೆಳೆಯನ್ನ ಆಶ್ಚರ್ಯದಿಂದ ಗೋಪಾಲ.
ಊಂ ನಪ್ಪಾ..ಎಲ್ಲ ಕಡೆ ಇದೇ ಡಿಸ್ಕಶನ್ನು...ಮಾಡೋಕೆ ಕೇಮೆಯಿಲ್ಲ...ಎಂದ ಉದಾಸೀನತೆಯಿಂದ..
ಅಲ್ಲೋ ಏನೂ ಇಲ್ಲ ಅನ್ನೋ ತರಹ ಹೇಳ್ತಿದ್ದೀಯಾ ನೀನು..ಎಂದ ಗೋಪಾಲ ಈಗ ಸ್ವಲ್ಪ ಸಮಾಧಾನ ಮಾಡಿಕೊಳ್ಳುತ್ತಾ
ಗೆಳೆಯನ್ನ ತನ್ನ ಪಕ್ಕದ ಸೋಫಾದಲ್ಲಿ ಕೂರಿಸಿಕೊಳ್ಳುತ್ತಾ...ಕೂತ್ಕೋ ಹೇಳ್ತೀನಿ ನಾನು..ಎಂದ ರಾಮಣ್ಣ. ನೋಡು ಗೋಪಾಲ..ಎಲ್ಲಾ ಪ್ರಾರಂಭ ಆಗಿದ್ದು ಮಾಯನ್ ಪಂಚಾಂಗ ಅಥವಾ ಕ್ಯಾಲಂಡರ್ ನಿಂದ.
ಮಾಯಾನ್ ಜನಾಂಗ ಆಕಾಶಕಾಯ, ಸೂರ್ಯ ಚಂದ್ರ ಹೀಗೆ ಹಲವು ವಿಷಯ ಅರಿತ ಹಗೂ ಗಣಿತವನ್ನೂ ಅರಿತ ನಾಗರಿಕ ಜನಾಂಗ..ಅದು ಈಗಲೂ ಮಾಯನ್ ಕ್ಯಾಲಂಡರ್ ಅನ್ನು ಬಳಸುತ್ತೆ. ಅದರ ಪ್ರಕಾರ ೨೧ ದಿಸೆಂಬರ್ ೨೦೧೨ ರ ನಂತರ ದಿನವಿಲ್ಲ, ದಿನಾಂಕವಿಲ್ಲ..ನಿನ್ನ ಕಾರಿನ ಸ್ಪೀಡಾ ಮೀಟರ್ ೯೯,೯೯೯ಕ್ಕೆ ಬಂದ ನಂತರ ಓಡೋದನ್ನ ನಿಲ್ಲುಸುತ್ತಾ ಹೇಳು??..
ಏನೋ ರಾಮು ಹೀಗ್ ಕೇಳ್ತೀಯಾ..ಮತ್ತೆ ೦೦೦೦೧ಕ್ಕೆ ಬರುತ್ತೆ...ಅಲ್ಲವಾ...ಅದರಲ್ಲಿ ನಿಲ್ಲೋದು ಏನು?
ನೋಡಿದ್ಯಾ..ಇಲ್ಲೇ ಇದೆ ಉತ್ತರ..ಮಾಯನ್ ಕ್ಯಾಲಂಡರ್ ತನ್ನ ಮೂಲ ಸಂಖ್ಯೆಗಳಾದ ೧೩ ಮತ್ತು ೧೯ ನು ಉಪಯೋಗಿಸಿ ೦.೦.೦.೦.೦. ಉದ್ದ ಎಣಿಕೆ- ಎಂದು‌, ಕರೆಯುತ್ತೆ, ಅಂದರೆ ಅವರ ೦.೦.೦.೦.೦ ರೂಪದ ಕಡೆಯ ಸಂಖ್ಯೆ ೧೩.೦.೦.೦.೦. ಹಾಗಾದ್ರೆ ಈ ಸಂಖ್ಯೆ ಬಂದ ನಂತರ ನಿಂತರೆ ಭೂಮಿ ನಾಶ ಆದಂತೆ ಆಗುತ್ತಾ..?
ಇಲ್ಲಿ ಮಾಯನ್ ಕ್ಯಾಲಂಡರ್ ಬಗ್ಗೆ ತಿಳಿಯೋಣ. ಅವರ ಕ್ಯಾಲಂಡರ್ ನಲ್ಲಿ.. ೦.೦.೦.೦.೦ ..ಹೀಗೆ ಐದು ಸೊನ್ನೆಗಳು..ಪ್ರತಿಸೊನ್ನೆ (ಮೂಲದ ಮೊದಲ ಸೊನ್ನೆ ೧೩ಕ್ಕೆ ನಿಲ್ಲುತ್ತೆ) ೧ರಿಂದ ೧೯ ರವರೆಗೆ ಹೋಗುತ್ತೆ...ಅಂದರೆ ಮೊದಲದಿನ ೦.೦.೦.೦.೧ ಹಾಗೇ ೧೯ನೇ ದಿನ ೦.೦.೦.೦.೧೯, ಅದೇ ೨೦ನೇ ದಿನ ೦.೦.೦.೧.೦ ಆಗುತ್ತೆ ...ಹಾಗೆಯೇ..ಒಂದು ವರ್ಷಕ್ಕೆ -೦.೦.೧.೦.೦, ಇಪ್ಪತ್ತು ವರ್ಷಕ್ಕೆ ೦.೧.೦.೦.೦. ಇದನ್ನೇ ಮುಂದುವರೆಸಿದರೆ .. ೧.೦.೦.೦.೦ ಅಂದರೆ ೪೦೦ ವರ್ಷ (೨೦ *೨೦). ಇದೇ ರೀತಿ ಕ್ಯಾಲಂಡರಿನ ಕೊನೆಯ ಸಂಖ್ಯೆ...೧೩.೦.೦.೦.೦ ಇದನ್ನು ನಮ್ಮ
ಸೌರ್ಯ ಮಾನದಲ್ಲಿ ಹೇಳಿದರೆ ೫೧೨೬ ವರ್ಷ. ಮಾಯನ್ ಕ್ಯಾಲಂಡರ್ ನ ೦.೦.೦.೦.೧ ರ ನಮ್ಮ ಲೆಕ್ಕದ ದಿನಾಂಕ ಕ್ರಿ,ಪೂ. ೩೧೧೪ರ ಆಗಸ್ಟ್ ೧೧. ಅಲ್ಲಿಂದ ೫೧೨೬ ವರ್ಷ ಅಂದರೆ ೨೦೧೨ ಡಿಸೆಂಬರ್ ೨೧..!!!! ಅಂದ್ರೆ ನಿನ್ನ ಕಾರು ನಿಲ್ಲುತ್ತಾ..? ಹೇಳು..?
ಓ... ಅದ್ಕಾ ಇವರು ಹೇಳೋದು ಡಿ.೨೧ ೨೦೧೨ ಕ್ಕೆ ಪ್ರಳಯ ಅಂತಾ..??!! ..ಅಲ್ಲಪ್ಪ ನಮ್ಮ ಕ್ಯಾಲಂಡರ್ ಡಿ.೩೧ಕ್ಕೆ ಪ್ರತಿವರ್ಷ ನಿಲ್ಲುತ್ತಲ್ಲಾ..ಮತ್ತೆ ಜನವರಿ ೧ಕ್ಕೆ ಹೊಸವರ್ಷ ಆಚರಿಸೊಲ್ಲವೇ ನಾವು?...!!! ಸರಿ..ಸರಿ..ಬಿಡು ಅರ್ಥ ಆಯ್ತು..
ನೋಡು ಗೋಪಾಲ..ಇನ್ನೊಂದೆರಡು ವಿಷಯಾನೂ ಇದೆ..ಅವ್ರು ಹೇಳೋದು...
ಆ ದಿನಕ್ಕೆ ಭೂಮಿಯ ಗುರುತ್ವ ಮತ್ತು ಕಾಂತಗುಣ ಅದಲು ಬದಲಾಗುತ್ತೆ ಅಂತ...ಅಂದರೆ..ಉತ್ತರ ದೃವ ದಕ್ಷಿಣ ದೃವಗಳಲ್ಲಿ ವ್ಯತ್ಯಯ ಆಗುತ್ತೆ ಅಂತ...ಇದರಿಂದ ಸಮುದ್ರ ಅಲ್ಲೋಲಕಲ್ಲೋಲ ಆಗುತ್ತೆ, ಜೀವಿಗಳ ಮೇಲೆ ಅಪಾರ ಪ್ರಭಾವ ಬೀಳುತ್ತೆ ಅಂತ... ಇದೂ..ಅಸಾಧ್ಯ ಅಂತ ನಾನು ಹೇಳ್ತೀನಿ...
ಯಾಕೆ ಗೊತ್ತಾ? ಕಾಂತಗುಣ ಬದಲಾವಣೆ ಹೊಸದೇನಲ್ಲ. ಇದು ನಿಯಮಿತವಲ್ಲ ಹಾಗೂ ಇದ್ದಕ್ಕಿದ್ದಂತೆ..ನೀನು ಮಲಗಿದ್ದು ಬೆಳಿಗ್ಗೆ ಏಳುವಾಗ ಬದಲಾಗುವಂತಹುದೂ ಅಲ್ಲ... ಕ್ರಮೇಣ ಆಗುವುದು.. ಲೆಕ್ಕದ ಪ್ರಕಾರ ೩೦೦,೦೦೦ ವರ್ಷಕ್ಕೆ ಒಮ್ಮೆ ಆಗುತ್ತದಂತೆ. ಹೀಗೆ ಆಗಿ ೭೮೦,೦೦೦ ವರ್ಷ ಆಗಿದೆಯಂತೆ..ಅಂದರೆ ಆಗಬೇಕಿತ್ತು ಆಗಿಲ್ಲ..ಯಾವಾಗ ಬೇಕಾದರೂ ಆಗಬಹುದು...ಮತ್ತು ಇದು ಕ್ರಮೇಣ ಆಗುವುದಾದ್ದರಿಂದ ಮತ್ತು ಇದು ಪೂರ್ಣವಾಗಲು ಸುಮಾರು ೫೦೦೦ ವರ್ಷಗಳೇ ತಗಲಬಹುದು ಎನ್ನುವುದರಿಂದ....ನಮ್ಮ ಇಡೀ ನಾಗರೀಕತೆಯೂ ಇಷ್ಟು ಸಮಯವನ್ನು ನೋಡಿಲ್ಲ ಇನ್ನು ಆ ಸಮಯದ ಅವಧಿಯ ತೃಣಸಮಾನವೂ ಇಲ್ಲ ನಮ್ಮ ಜೀವಿತಾವಧಿ...ಇದರ ಬಗ್ಗೆ ಯೋಚಿಸುವ ಅಗತ್ಯವಾದರೂ ಏನು...?? ಹಾಗೆಯೇ ನಮ್ಮ ಭೂಮಿಯ ಕಾಂತೀಯ ಗುಣ ಶೂನ್ಯವಾಗುವುದು ಎನ್ನುವ ಮಾತೂ ಅಸಾಧ್ಯವಾದದ್ದು...ಕಾಂತ ಕ್ಷೇತ್ರ..ಏರುಪೇರಾದರೂ ಅದರ ಒಟ್ಟಾರೆ ರಕ್ಷಕಗುಣ ಹಾಗೆಯೇ ಇರುತ್ತೆ..ಹೀಗಾಗಿ..ಸೂರ್ಯ ಅಥವಾ ಇನ್ನಿತರ ಆಕಾಶಕಾಯದ ಕ್ಷಕಿರಣ ಬೆಂಕಿ ನಮ್ಮನ್ನು ತಟ್ಟುತ್ತೆ ಎನ್ನುವುದೂ ಬರೀ ಬುರುಡೆ...ಇದಕ್ಕೆ ಅಮೇರಿಕೆಯ ನಾಸಾ ಸ್ಸಿನೆತಿಸ್ತ್ಸ್ ಸಹಾ ಪೂರಕ ತರ್ಕ ಒದಗಿಸಿ ಭೂಕಾಂತತೆ ಹೇಗೆ ಸೂರ್ಯನ ಕಿರಣಗಳಿಂದ ನಮ್ಮನ್ನು ರಕ್ಷಿಸುತ್ತದೆ ಎಂದು ತಿಳಿಸಿದ್ದಾರೆ.
ಇನ್ನು ಮೂರನೇ ಸಾಧ್ಯತೆ...ಇದು ಎಲ್ಲದಕ್ಕಿಂತ ಅತಿ ಬಾಲಿಶ ಮತ್ತು ಮೂರ್ಖ ತರ್ಕದ ಸಾಧ್ಯತೆ... ಯಾವುದೋ ಎಕ್ಸ್ ಎನ್ನುವ ಆಕಾಶಕಾಯ ಭೂಮಿಯತ್ತ ಬರುತ್ತಿದ್ದು ೨೦೧೨ ಡಿ.೨೧ಕ್ಕೆ ಭೂಮಿಯನ್ನು ಬಲವಾಗಿ ಹೊಡೆಯುತ್ತೆ,....!! ಅದೂ ..ಡಿ.೨೧ಕ್ಕೇ ಏಕೆ? ಅದರ ಗಾತ್ರ ಏನು? ಮೂರುದಿನ ಭೂಮಿಯ ಚಲನೆಯನ್ನೇ ನಿಲ್ಲಿಸುವಷ್ಟು ಶಕ್ತಿಯುತವಾಗಿದ್ದರೆ ಅದರ ಗಾತ್ರ ಬೃಹದಾಕಾರದ್ದಾಗಿ‌ಅರಬೇಕು...ನಮ್ಮಲ್ಲಿ ಲಕ್ಷಾಂತರ ಖಗೋಳ ಶಾಸ್ತ್ರಿಗಳು ಅಕಾಶ ವೀಕ್ಷಕರು ಇದ್ದು ಇಷ್ಟು ದೊಡ್ದ ಆಕಾಶಕಾಯವನ್ನು ಗಮನಿಸಿಲ್ಲವೇ..?? ಅದರ ಗಾತ್ರದ ಬಗ್ಗೆ ಗೊತ್ತಿಲ್ಲ ಎಂದರೆ...ಅದರ ವೇಗ ಹೇಗೆ ತಿಳಿಯಿತು? ವೇಗ ಗೊತ್ತಿಲ್ಲ ಎಂದರೆ ಅದು ಡಿ,೨೧ಕ್ಕೇ ಢೀ ಹೊಡೆಯುತ್ತೆ ಎನ್ನುವುದು ಯಾವ ತರ್ಕ..??!! ಇದರ ಸುತ್ತ ಸಂಶಯಗಳೇ ಹೆಚ್ಚು...ಅಸಲು ಹೀಗೊಂದು ಆಕಾಶ ಕಾಯ ಇರುವುದೇ ಯಾವ ದೇಶದ ಖಗೋಳಜ್ನ ನಿಗೂ ಗೊತ್ತಾಗಿಲ್ಲ..!!! ಇದಕ್ಕೆ ಇನ್ನೊಂದು ಹಾಗಲಕ್ಕೆ ಬೇವು ಸಾಕ್ಷಿ ತರಹ...ಸರ್ಕಾರಗಳು ವಿಷಯವನ್ನು ತಿಳಿದಿದ್ದೂ ಬಯಲು ಮಾಡುತ್ತಿಲ್ಲ...!!! ಇದು ಸಣ್ಣ ಪುಟ್ಟದ್ದಲ್ಲ...ಇಡೀ ಭೂಮಿಯೇ ಇಲ್ಲವಾಗುತ್ತೆ ಎನ್ನುವುದಾದರೆ...ಯಾವುದೇ ಕುರುಹೇ ಇರುವುದಿಲ್ಲವೇ..??!! ಭೂಮಿ, ಸೂರ್ಯ, ಆಕಾಶಕಾಯ ಎಲ್ಲ ಚಾಲನೆಯ ನಿಯಮಕ್ಕೆ ಬದ್ಧ ಎನ್ನುವುದಾದರೆ ...ಅತಿಘೋರ ಒಮ್ಮೆಗೇ ಆಗುತ್ತೆ ಎನ್ನುವುದನ್ನು ನಂಬುವುದಾದರೂ ಹೇಗೆ..??
ಇದಕ್ಕೆಲ್ಲ ಒಂದೇ ಉತ್ತರ ಸಾಧ್ಯ...ಇದು ಮೂಲತಃ ಮಾಯನ್ ಹುಟ್ಟುಹಾಕಿದ ಜನಗೊಂದಲ್ಕ್ಕೀಡುಮಾಡುವುದು...ತಮ್ಮ ಸ್ಪೀಡಾ ಮೀಟರ್ ಕೊನೆಯಾದ್ದರಿಂದ ಜಗತ್ತೂ ಕೊನೆಯೆನ್ನುವುದು...ಹೇಗೆಂದರೆ...ಅಜ್ಜಿ ಹುಂಜ ಕೂಗದಿದ್ದರೆ ಸೂರ್ಯ ಮೂಡುವುದಿಲ್ಲ ಬೆಳಕಾಗುವುದಿಲ್ಲ ಎನ್ನುವಂತೆ...
ಏನಂತೀಯ ಗೋಪಾಲ???
ಏಯ್ ಬಿಡು ಮಾರಾಯಾ..ಒಳ್ಳೆ ಮಾಹಿತಿ ಕೊಟ್ಟೆ ನೀನು..., ಬರ್ಲಿ ಆ ನಿಂಗಣ್ಣ ನನ್ನ ಹತ್ರ ಹೇಳ್ತೀನಿ ಅವನಿಗೆ ಸರಿಯಾಗಿ...ಬರ್ಲಾ...ಅಂದಹಾಗೆ ...ನನ್ನ ಕಾರಿನ ಸ್ಪೀಡಾ ಮೀಟರು ನಿಜಕ್ಕೂ ಕೆಟ್ಟೈತೆ ೫೦೦೦ ಕಿ.ಮೀ ಓಡಿದೆ ಕಾರು..೦೦೦೦೦ ತೋರಿಸ್ತಾ ಇದೆ....ಬರ್ಲಾ...


ಸ್ನೇಹಿತರೇ ಇಲ್ಲಿ ನಿಮಗೆ ಮಾಯನ್ ಕ್ಯಾಲೆಂಡರ್ ಲಿಂಕ್ ಕಳುಹಿಸುತ್ತಿದ್ದೇನೆ...ಇದರಲ್ಲಿ ನಮ್ಮ ಕ್ಯಾಲಂಡರ್ ನಲ್ಲಿ ಡಿಸೆಂಬರ್ ೨೧, ೨೦೧೨ ಟೈಪ್ ಮಾಡಿ.....ನೀವೇ ನೋಡಿ ಇದು...ಮ್ಯಾಯನ್ ಕ್ಯಾಲಂಡರ್ ನ ಮೂಲ ಸೊನ್ನೆಯ ಗರಿಷ್ಟ್ ಸಂಖ್ಯೆ ೧೩ ಕ್ಕೆ ನಿಲ್ಲುತ್ತೆ ಮತ್ತು ..ಕ್ಯಾಲಂಡರ್....೧೩.೦.೦.೦.೦ ಗೆ ನಿಲ್ಲಿತ್ತೆ..!!!!
http://www.diagnosis2012.co.uk/mlink.htm

47 comments:

 1. ನಮಸ್ಕಾರ ಜಲನಯನ ಸರ್...
  ಅತ್ಯಂತ ಕುತೂಹಲ ಭರಿತ, ಜಗತ್ತಿನೆಲ್ಲೆಡೆ ಚರ್ಚೆ ಆಗ್ತಿರೋ ವಿಷಯವನ್ನೇ ಎತ್ತುಕೊಂಡಿದ್ದೀರಿ...ಸುಂದರವಾದ ನಿರೂಪಣೆ...

  ಕೆಲ ಖಗೋಳ ವಿಜ್ಞಾನಿಗಳು ಅಂತೆ ಕಂತೆ ಸುದ್ದಿಗಳನ್ನು ಹರಿಬಿಟ್ಟು ಜನರ ತಲೆ ಕೆಡಿಸಿರೋದು ನಿಜ... ಮಾಯನ್ ಕ್ಯಾಲಂಡರ್, ಪ್ಲ್ಯಾನೆಟ್ X, ಧ್ರುವ ಪಲ್ಲಟ ಇವುಗಳ ಜೊತೆಗೆ ಇನ್ನೊಂದಿಷ್ಟು ಕಾರಣಗಳನ್ನೂ ಈ ಮಂದಿ ಪ್ರಿಡಿಕ್ಟ್ ಮಾಡ್ತಿದಾರೆ... ಅಮೇರಿಕಾದಲ್ಲಿನ ಯೆಲ್ಲೊ ಸ್ಟೋನ್ ಜ್ವಾಲಾಮುಖಿ ಮಹಾ ವಿಸ್ಫೋಟ, ಸೌರ ಮಾರುತ, ಯುರೋಪ್ ನಲ್ಲಿ ವಿಜ್ಞಾನಿಗಳು ಮಾಡಹೊರಟಿರೋ ಬಿಗ್ ಬ್ಯಾಂಗ್ ಪ್ರಯೋಗ ಇವೇ ಮೊದಲಾದವು ಇವುಗಳಲ್ಲಿ ಸೇರಿವೆ... ಕೆಲವು ದಿನಗಳ ಹಿಂದೆ ಮಿತ್ರರೊಬ್ಬರ ಜೊತೆಗೂಡಿ ಈ ವಿಷಯದ ಬಗ್ಗೆ ನಾನೊಂದು ಸಣ್ಣ ಬುಕ್ ಬರೆದಿದ್ದೆ.. ಇವೆಲ್ಲ ಕಪೋಲ ಕಲ್ಪಿತ ಕಥೆಗಳು... ಭೂ ಗೃಹದ ಸರ್ವನಾಶ ಅಂತ ಏನಾದ್ರೂ ಆದ್ರೆ ಮನಬಂದಂತೆ ಪರಿಸರ ನಾಶದಲ್ಲಿ ತೊಡಗಿರೋ ನಾವೇ ಅದಕ್ಕೆ ಕಾರಣರಾಗಿರ್ತೀವಿ... ಅಂತ ತಿಳಿಸೋದು ಮುಖ್ಯ ಉದ್ದೇಶ.... ಸಾಧ್ಯವಾದ್ರೆ ಅದನ್ನ ಅಪ್‌ಲೋಡ್ ಮಾಡ್ತೇನೆ... ಓದಿ ಪ್ರತಿಕ್ರಿಯಿಸಿ... :)

  ReplyDelete
 2. ನಮಸ್ಕಾರ ಸರ್ ,
  ಲೇಖನ ತುಂಬಾ interesting ಆಗಿದೆ .. ಪ್ರಳಯ ಅನ್ನೋ ಪದವೇ ಭಯಾನಕ ಅನ್ಸುತ್ತೆ ಇನ್ನು ನೀವು ಲೇಖನ ಹೇಗೆ ಬರೆದರೋ ಏನೋ !
  ನಂಗು ಕೂಡ ಭೂಗೋಳ ಶಾಸ್ತ್ರದಲ್ಲಿ ಸ್ವಲ್ಪ ಇಂಟರೆಸ್ಟ್(ಬರೆದಿರೋದನ್ನ ಓದೋವಸ್ಟು .. ಓದಿ ಬರಿಯೋವಸ್ಟಿಲ್ಲ ) :D
  ಹಾಗೇ ಉಂಡು ತಿಂದು ಚೆನ್ನಾಗಿ ನಿದ್ದೆ ಮಾಡ್ತಾ ಇದೀನಿ ಪ್ರಳಯ ಅಂತಾದ್ರೆ ಇನ್ನು ಎರಡೇ ವರ್ಷ ನೋಡಿ .. :P

  ReplyDelete
 3. ಜಲನಯನ,
  ಭೂಮಿಯ ಅಂತ್ಯದ ಭವಿಷ್ಯದ ಮೂಲವನ್ನು, ಅತ್ಯಂತ ತಿಳಿಯಾಗಿ ತಿಳಿಸಿದ್ದೀರಿ. ನಿಮಗೆ ಧನ್ಯವಾದಗಳು.

  ReplyDelete
 4. ಸರ್,
  ಈ ಪ್ರಳಯ ಎಲ್ಲರ ಮನೆಮಾತಾಗಿದೆ ಅದಕ್ಕೆ ತಕ್ಕಂತೆ ಜನರೆಲ್ಲ ಊಹಾಪೋಹಗಳನ್ನು ಹಬ್ಬಿಸಿದ್ದಾರೆ. ನಿಮ್ಮ ನಿರೂಪಣೆ ಬಹಳ ಚೆನ್ನಾಗಿದೆ ಅಲ್ಲದೆ ಸುಲಲಿತವಾಗಿ ಎಲ್ಲರಿಗೊ ಅರ್ಥವಾಗುವಂತೆ ತಿಳಿಸಿದ್ದೀರಿ.
  ಧನ್ಯವಾದಗಳು

  ReplyDelete
 5. ಸಾರ್ ನಮಸ್ಕಾರ,
  ದಿನಾ ನನ್ನಮಗ ಕೇಳೊ ವಿಷಯ ಇದೆನೆ.....ಅವರು ಗೆಳೆಯರು ಕೂಡಿ ಮಾತಾಡ್ತಾರಂತೆ ನನಗೆ ಬಂದು ಕೇಳಿದ ನಿಜಾನಪ್ಪ ಅಂತ.... ನಾನು ಯಾವುದಾದ್ರೂ ಸೈಂಟಿಸ್ಟ್ ನ ಕೇಳಿ ಹೇಳ್ತೀನಿ ತಾಳು....ಇಲ್ಲ ಅಂದ್ರೆ ನೀನೆ ಕೇಳು ಅಂತ ಹೇಳಿದ್ದೆ......ಮೊನ್ನೆ ನನ್ನಾಕೆ ಸಹ ಹೇಳುತ್ತಿದ್ದಳು ಇರೊ ತನಕ ಮಜಾ ಮಾಡು ೨೦೧೨ಕ್ಕೆ ಪ್ರಳಯ ಆಮೇಲೆ ಆಗೊಲ್ಲ ಅಂತ ಹಹಹ್ಹಹ....
  ಈಗ ನಿಮ್ಮಿಂದ ಪೂರ್ಣ ವಿಷಯ ತಿಳಿಯಿತು....ಕುತೂಹಲ ಭರಿತ, ಭಯಾನಕ ಅನ್ನಿಸುತ್ತಿತ್ತು.....
  ಸೊಗಸಾದ ನಿರೂಪಣೆ.....

  ReplyDelete
 6. ಪ್ರಳಯ ಆಗೋದ್ರೆ ಒಳ್ಳೇದಪ್ಪಾ.. ಯೆಲ್ಲಾರು ಒಟ್ಟಿಗೆ ಸ್ವರ್ಗದಲ್ಲಿ ಬ್ಲಾಗ್ ಬರೀಬಹುದು. ಓದ್ಬಹುದು ....ಲೇಖನ ಬೆಸ್ಟ್ ಇದೆ..

  ReplyDelete
 7. ಅಜ಼ಾದರೇ ಭೂಮಿ ಅ೦ತ್ಯದ ಬಗ್ಗೆ ಜನ ಗೊ೦ದಲ ಸೃಷ್ಠಿಸುವ ಮಾಧ್ಯಮ ಹಾಗೂ ಜ್ಯೋತಿಷಿಗಳ ಮಧ್ಯ ವಿಜ್ಞಾನಿಗಳಿಲ್ಲದಿರುವದು ಜನ ಗಮನಿಸಬೇಕಾಗಿದೆ. ಇ೦ಥಾ ಅ೦ತೆ ಕ೦ತೆ ನಡುವೆ ತಮ್ಮ ಲೇಖನ ತು೦ಬಾ ಸಾ೦ಧರ್ಭಿಕ ಹಾಗೂ ಸೂಕ್ತ. ಚೆನ್ನಾಗಿ ಕತೆ ಮುಖಾ೦ತರ ಹೇಳಿದ್ದೀರಾ!
  ಕಾ೦ತೀಯ ಧೃವ ಬದಲಾವಣೆ ಕ್ಷಣದಲ್ಲಿ ನಡೆಯುವ ಘಟನೆಯಲ್ಲ. ಹಾಗೇ ದೀಡೀರ್ ಬೃಹತ ಉಲ್ಕಾಕಾಯಗಳು (ಭೂಮಿಯನ್ನು ನಾಶ ಮಾಡುವಷ್ಟು ದೊಡ್ಡದು) ಬರಲು ಸಾಧ್ಯವಿಲ್ಲ.
  ಮಾಯಾ ಕೆಲೆ೦ಡರ ಮಾಹಿತಿ ನಿಜಕ್ಕೂ ಸೂಕ್ತ. ಈ ವಿವರವೂ ನನಗೆ ಹೊಸದೇ! ಮಾಹಿತಿಗೆ ಧನ್ಯವಾದಗಳು.

  ReplyDelete
 8. ದಿಲೀಪ್,
  ಈ ರೀತಿಯ ಊಹಾ-ಪೋಹ ಮತ್ತು ಗಾಳಿಗೋಪುರಗಳು ಇದೇ ಮೊದಲಏನಲ್ಲ, ಸ್ಕೈಲ್ಯಾಬ್ ಬೀಳುತ್ತೆ ಅಂತ ಅದು ನಮ್ಮ ಬೆಂಗಳೂರಿನ HAL ನ Target ಮಾಡಿದ್ದಾರಂತ 1986-88 ರಲ್ಲಿ ಒದಂತಿ ಹಬ್ಬಿದ್ದು ಹೆಚ್ಚು ಜನಕ್ಕೆ ಮರೆತುಹೋಗಿರಬೇಕು..
  ಇಲ್ಲಿ ಮೂಲ ಸಿದ್ಧಾಂತವಾದ ಘಟನೆ-ಅದಕ್ಕೆ ತಗಲುವ ಸಮಯ ಇತ್ಯಾದಿಗಳನ್ನು ಪರಿಶೀಲಿಸದೆ ...ಓಡುವುದು ಜನರ ಸ್ವಾಭಾವಿಕ ಗುಣ...ಇನ್ನು ನಮ್ಮ ಈ-ಯುಗದಲ್ಲಿ ಇದಕ್ಕೆ ರೆಕ್ಕೆ-ಪುಕ್ಕ ಎಷ್ಟು ಬೇಗ ಹುಟ್ಟುತ್ತೋ ಅಷ್ಟೇ ಬೇಗ ಅದರ ಶಮನಕ್ಕೂ ಜನ ಪ್ರಯತ್ನಶೀಲರಾಗ್ತಾರೆ..ಅಲ್ಲವೇ..?? ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದ..

  ReplyDelete
 9. ಭೂಮಿಯ ಅಂತ್ಯ..!! 2012 ಡಿಸೆಂಬರ್ 21 ಕ್ಕೆ !!! ..ಕಿವೀಗೆ ಹೂವಾ??!! ಸರ್ ನಿಮ್ಮ ಟೈಟಲ್ ಸೂಪರ್ ಆಗಿದೆ

  ಇಲ್ಲಿ ನನ್ನ ಒಂದು ಬಾಲ್ಯದ ನೆನಪು ನಿಮ್ಮ ಜೊತೆ ಹಂಚಿಕೊಳ್ತಾ ಇದೀನಿ, ನಿಜ ಹೇಳ್ಬೇಕು ಅಂದ್ರೆ ನಾನು ಹೈಸ್ಕೂಲ್ ಹೋಗುವಾಗ ಅಂದ್ರೆ ೧೯೯೯ ರ ಕೊನೆಯಲ್ಲಿ ೨೦೦೦ ಕ್ಕೆ ಈ ಭೂಮಿ ಪ್ರಳಯ ಆಗುತ್ತೆ ಅಂತ ನಮ್ಮ ಸ್ಕೂಲ್ ನಲ್ಲಿ ಹರಡಿತ್ತು ಅದನ್ನ ಕೇಳಿ ನಾವು ೧೯೯೯ ರ ಕೊನೆಯ ಸಂಜೆ ನನ್ನ ಸಹಪಾಠಿಗಳ ಜೊತೆ ಅಳ್ತಾ ಮನೆಗೆ ಬಂದಾಗ ಅಮ್ಮ ಸಮಾಧಾನ ಮಾಡಿದ್ರು ನೆನಪಿಸಿಕೊಂಡರೆ ಈಗ ನಗು ಬರುತ್ತೆ :)
  ಸರ್ ನಿಮ್ಮ ಬ್ಲಾಗ್ ನಂಗೆ ತುಂಬಾ ಇಷ್ಟ ಸರ್ ಒಳ್ಳೆ ಒಳ್ಳೆ ಮಸಾಜ್ ಇರುತ್ತೆ ನಿಮ್ಮ ಬ್ಲಾಗ್ ನಲ್ಲಿ :) ನಿಮ್ಮ ಬ್ಲಾಗ್ ಇಂದ ಮಾಯನ್ ಕ್ಯಾಲಂಡರ್ ಬಗ್ಗೆ ತಿಳಿಕೊಂಡೆ ನಿಮಗೆ ನಿಮ್ಮ ಬ್ಲಾಗ್ ನನ್ನ ಸಲಾಂ :)

  ReplyDelete
 10. ರಂಜಿತಾ, ನಿಜಕ್ಕೂ ನನಗೆ ತಮಾಶೆ ಎನಿಸಿದ್ದು ಗಾಬರಿಯಾದವರಂತೆ ವರ್ತಿಸಿ ಅಂತರ್ಜಾಲವನ್ನೆಲ್ಲ ಜಾಲಾಡುವವರ ಬಗ್ಗೆ..ಅದರಲ್ಲಿ ನಾನೂ ಸೇರಿದ್ದೀನಿ ಅಂದರೆ ನಿಮಗೆ ಅಚ್ಚರಿ ಅನಿಸಬಹುದು. ಆದರೆ ನನ್ನ ಜಾಲಾಟ ಈ ಜನರ ತಪ್ಪು ಕಲ್ಪನೆ (ಆಗ ನನಗನ್ನಿಸಿದ್ದು) ನಿಜಕ್ಕೂ ಏಕಾಯಿತು ಎಂದು ವಿವರಿಸಲು...ನನ್ನ ಬ್ಲಾಗ್ ಹಲವರಿಗೆ ಉತ್ತರ ಕೊಟ್ಟಿದೆ ಎಂದುಕೊಳ್ಳುತ್ತೇನೆ..ಇನ್ನೂ ವಾದಿಸುವವ್ವರು ಅವರು ಏಕೆ ಹಾಗೆ ಎಂದುಕೊಂಡಿದ್ದಾರೆ ಎಂದು ತಿಳಿಸಿದರೆ ಉತ್ತಮ..ಅಲ್ಲವೇ??

  ReplyDelete
 11. ಸುನಾಥ್ ಸರ್, ಹಲವು ವಾದಗಳ ನಡುವೆ ನನಗೆ ಮಾಹಿತಿ ಸಂಗ್ರಹಿಸಿ ಆಧಾರವಿಟ್ಟು ಸಮರ್ಥನೆ ನೀದಬೇಕಾಗಿತ್ತು..ನನ್ನ ಸ್ನೇಹಿತರೊಬ್ಬರು ಸುತರಾಂ ಇದನ್ನು ಒಪ್ಪಲಿಲ್ಲ ..ನಾನು ಬ್ಲೊಗನಲ್ಲಿ ಹಾಕಿ ಅವರಿಗೆ ಓದಲು ಹೇಳಿದಾಗ..convince ಆದರು ಅಂತ ಕಾಣುತ್ತೆ..ಹೌದೋ ನೀನು ಬರೆದಿರೋದು ನಿಜ...ಅಂತ ಮೈಲ್ ಕಳುಹಿಸಿದ್ದಾರೆ.. ಇಲ್ಲಿ ಹಲವಾರು complex throries ಇವೆ ಅದನ್ನು ಹಾಕಲಿಲ್ಲ ಏಕಂದ್ರೆ ಸಾರ ನಾನು ಬರೆದಿದ್ರಲ್ಲೇ ಅಡಗಿದೆ..ಧನ್ಯವಾದ ನಿಮ್ಮ ಅನಿಸಿಕೆಗೆ

  ReplyDelete
 12. ಮನಸು ಮೇಡಂ ..ಮನಸ್ಸನ್ನು ಸಂತ್ವನಗೊಳಿಸೊದು ಸುಲಭ ಅಲ್ಲ..ಅದರಲ್ಲೂ ಇಂಥ ಗಾಳಿ ಸುದ್ದಿಗಳು ಹಬ್ಬಿದರೆ...ಹಹಹ..
  ನನಗೆ ಒಮ್ದು ಘಟನೆ ನೆನೆಪಿಗೆ ಬರುತ್ತೆ..ಜನ ಮರುಳೋ ಜಾತ್ರೆ ಮರುಳೋ ಅನ್ನೋದಕ್ಕೆ..
  ಕಪಾಲಿ ಥಿಯೇಟರ್ ನಲ್ಲಿ ಆಣ್ಣಾವರ ಭಕ್ತ ಪ್ರಹ್ಲಾದ ನಡಿತಿತ್ತು..ಎಲ್ಲಿ ನಿನ್ನ ಆಹರಿ..ಕರಿ ಅವನ್ನ..ಇಲ್ಲಿದ್ದಾನೆಯೇ..? ಈ ಕಂಬದಲ್ಲಿ..ಅಂತೆಲ್ಲಾ ಮನಮೋಹಕ ಮತ್ತು ಭಯ ಹುಟ್ಟಿಸುವ ಅಭಿನಯದೊಂದಿಗೆ ಹಿರಣ್ಯಕಶಿಪು ಪ್ರಹ್ಲಾದನ್ನ ಕೇಳಿ ಅವನು ತೋರಿಸೋ ಕಂಬವನ್ನು ಗಧಾಪ್ರಹಾರದಿಂದ ಒಡೆದಾಗ..ಭಂಕರ ರೂಪದ ನರಸಿಂಹ ಕಂಬದಿಂದ ಹೊರಬರುತ್ತಾನೆ..ಕಪಾಲಿಯ ಆ ಸೌಂಡ್ ಎಫೆಕ್ಟ್ ಜೊತೆಗೆ ಆಗಿದ್ದೇನು ಗೊತ್ತಾ...ಪಕ್ಕದ ಗಂಗಾರಾಂ ಕಟ್ಟಡ ದಬ-ದಬನೆ ಮುಗುಚಿಕೊಂಡದ್ದು..
  ಇದು ನೆಡೆದ ಹೊಸದರಲ್ಲಿ.. ಇನ್ಯಾವುದೋ ಥಿಯೇಟರಿನಲ್ಲಿ ಇದೇ ಸಿನಿಮಾದ ಅದೇ ದೃಶ್ಯದ ಸಮಯ ಕಿಡಿಗೇಡಿಯೊಬ್ಬ "ಗೋಡೆ ಬಿದ್ದೋಯ್ತು" ಅಂತ ಕಿರುಚಿಕೊಂಡದ್ದೇ..ಎದ್ದೆವೋ ಬಿದ್ದೆವೋ ಎಂದು ಜನ ಓಡಿದರಂತೆ...

  ReplyDelete
 13. ಮಹೇಶಣ್ಣ..ಮನುಗೆ ಹೇಳು..ಏನೂ ಆಗೊಲ್ಲ ಕಣೋ ..ಹೆದರ್ಬೇಡ..ಹಾಗೇನಾದ್ರೂ ಇದ್ರೆ ನಾವು ಬೆಂಗಳೂರಿಗೆ ಹೋಗ್ಬಿಡೋಣ...ಅದು ಬರ್ಬೇಕು ಅಂದ್ರೆ ಸಮುದ್ರ ದಾಟಿ ಬರ್ಬೇಕಾಗುತ್ತಲ್ಲ...ಹಹಹಹ
  ನಿಜ ನಿಮ್ಮ ಮಾತು..ಮಕ್ಕಳಿಗೆ ಸರಿಯಾಗಿ ಮಾಹಿತಿ ಕೊಡೋದು ನಮ್ಮ ಕರ್ತವ್ಯ..

  ReplyDelete
 14. ಚುಕ್ಕಿ ನಕ್ಷತ್ರಗಳ ಚಿತ್ತಾರ..ಮೂಡುತ್ತಲೇ ಇರುತ್ತೆ...ಅದನ್ನ ನಾವು ಅಸ್ವಾದಿಸುತ್ತಲೇ ಇರ್ತೇವೆ ನಾವು ನಮ್ಮ ಮಕ್ಕಳು..ಮರಿ ಮಕ್ಕಳು..ಅಂತ ನಾನು ಭರವಸೆ ಕೊಡ್ತೀನಿ...ನೀವ್ಯಾಕೆ ಹೋಪ್ಸ್ ಕಳ್ಕೋತೀರ...ಅಲ್ಲಿ ಬ್ಲಾಗ್ ಮಾಡೋಕೆ...ಕಷ್ಟ ಆಗುತ್ತೆ ...ಇಲ್ಲೇ ಮುಂದುವರೆಸಿ

  ReplyDelete
 15. ಸಿತಾರಾಂ ಸರ್, ಬ್ಲಾಕ್ ಹೋಲ್ ಮತ್ತು ಜುಪಿಟರ್ ಎಫೆಕ್ಟ್ ಅಂತ ಹೀಗೇ ಹಿಂದೊಮ್ಮೆ ಬೊಗಳೆ ರಗಳೆ ನೀವೂ ಕೇಳಿದ್ದಿರಬೇಕು..
  ಎಲ್ಲೋ ಆಕಾಶದಿಂದ ಏನೋ ಬರುತ್ತೆ ಅನ್ನೋದಕ್ಕೆ ಯಾವ ಸಾಕ್ಷಿಯೂ ಇಲ್ಲ...ನಮ್ಮ ವಿವೇಚನಾ ರಹಿತ ಮೂರ್ಖತನದಿಂದ ಪ್ರಳಯದ ತರಹದ್ದು ಆದರೆ ಆಗಬೇಕೇ ಹೊರತು...ಈ ಎಲ್ಲ ಸುದ್ದಿ ಬರೀ ಬುರುಡೆ...ಮಾಯನ್ ಪಂಚಾಂಗದ ಪಂಚರಂಗಿ ಕಾರ್ಯಕ್ರಮ ಅಷ್ಟೇ ಇದು..

  ReplyDelete
 16. ಮಂಜು, ನಿಮ್ಮ ಬಾಲ್ಯದ ಮಾತಿನಂತೆ ಈಗಲೂ ಕೆಲ ಮಕ್ಕಳು ಕೇಳಬಹುದು..ಈ ಸುದ್ದಿ ಓದಿದರೆ..ಮಹೇಶ್ (ಸವಿಗನಸು) ಇಂತಹುದೇ ಪ್ರತಿಕ್ರಿಯೆ ನೀಡಿದ್ದಾರೆ ತಮ್ಮ ಮಗನ ಬಗ್ಗೆ ಹೇಳುತ್ತಾ..ಇಲ್ಲಿ..ಹಿರಿಯರಾದ ನಾವು ಅವರಿಗೆ ಸರಿಯಾದ ಮಾಹಿತಿ ನೀಡೋದು ಮುಖ್ಯ....ನಿಮ್ಮ ಅಭಿಮಾನಕ್ಕೆ ಧನ್ಯವಾದಗಳು.. ಬರುತ್ತಿರಿ ನಮ್ಮ ಕಕ್ಷೆಗೆ...ನಮ್ಮದೂ ಒಂದು ಗ್ಯಾಲಕ್ಸಿ ಆಗಲಿ...

  ReplyDelete
 17. ತುಂಬ ಚೆನ್ನಾಗಿ ವಿವರಿಸಿ ಹೇಳಿದ್ದಿರ ಜಲನಯನ,,, ಇದರ ಬಗ್ಗೆ ತಲೆ ಕೆಡಿಸಿಕೊಳ್ಳದೆ ಹಾಯಾಗಿ ಇರುವ ಕೆಲಸವನ್ನು ಮಾಡಿಕೊಂಡು ಹೋಗಬೇಕು.....ಏನ್ ಮಾಡೋದು ನಮ್ಮ ಜನ ಸಮೂಹನೆ ಹೀಗೆ......ಒಂದು ದಿನ ಗಣೇಶ ಹಾಲು ಕುದಿತಾನೆ ಅಂತ ಕುಡಿಸಿದ್ದೆ ಕುಡಿಸಿದ್ದು,, ಆಮೇಲೆ... ೨೦೦೦ ನಲ್ಲಿ ಪ್ರಳಯ ಅಂತ ಹೇಳಿದ್ದೆ ಹೇಳಿದ್ದು....ಇವರ ತಲೆ,, ಸುಮ್ಮನೆ ಮಾಡಕ್ಕೆ ಏನು ಕೆಲಸ ಇಲ್ಲ ಅಂದ್ರೆ ಹೀಗೆಲ್ಲ ಹೇಳ್ತಾ ಸುದ್ದಿನ ಹಬ್ಬಿಸ್ತ ಇರುತ್ತಾರೆ ಅಸ್ಟೆ....
  ಒಟ್ನಲ್ಲಿ ನೀವು ಮಾತ್ರ ತುಂಬ ಚೆನ್ನಾಗಿ ಅರ್ಥ ಅಗೊಥರ ವಿವರಿಸಿದ್ದಿರ...ಥ್ಯಾಂಕ್ಸ್
  Guru

  ReplyDelete
 18. ಎಷ್ಟೋ ವಿಷಯ ಇನ್ನೂ ಸ್ಪಷ್ಠವಾಗಿಲ್ಲ ೨೦೧೨ ರ ಕಥಿತ ಈ ಬುರುಡೆ ಪುರಾಣಕ್ಕೆ...೨೦೧೨ ಡಿ.೨೧ ಮಾಯನ್ ಕ್ಯಾಲಂಡರಿಗೆ ಮಾತ್ರ ಸರಿಯಾಗಿ ಹೊಂದುವ ದಿನ..ಇನ್ನು ಇದರ ಆಧಾರದ ಮೇಲೆ ಪ್ರಳಯದ ಕಥನ ...ನನ್ನ ಅನ್ನಿಸಿಕೆಯಂತೆ ಪ್ರತಿವರ್ಷ ಡಿ.೩೧ ನಮ್ಮ ಕ್ಯಾಲಂಡರ್ ಕೊನೆಗೊಳ್ಳುತ್ತೆ ಹಾಗಂತ ಭೂಮಿ ತನ್ನ ಪಥದಲ್ಲಿಯೇ ತಿರುಗುತ್ತಲಿರುತ್ತೆ ನಿಲ್ಲೋದಿಲ್ಲ ನಮ್ಮ ಪೃಥ್ವಿ ಮೇಲಿನ ಆಧಾರದ ನಮ್ಮ ಕ್ಯಾಲಂಡರ್ ಗೆ ಪರ್ಯಾಯ ಇದೆಯಾದರೆ ೦.೦.೦.೦.೦. ಎಂಬ ಲಂಬ ಅಥವಾ ಉದ್ದ ಎಣಿಕೆಯ ನಂತರ ಯಾಕಿರಬಾರದು...??
  ಗುರು, ಎಲ್ಲಾ ಕೆಲ ಜನಾಂಗದ ಗೊಂದಲ ಮೂಡಿಸುವ ದೊಡ್ಡಾಟ ಅಷ್ಟೇ ಇದು.

  ReplyDelete
 19. ಜಲನಯನ,

  ಮಾಯನ್ ಕ್ಯಾಲೆಂಡರ್ ಒಳಗುಟ್ಟನ್ನು ತುಂಬಾ ಚೆನ್ನಾಗಿ ರಟ್ಟು ಮಾಡಿದ್ದೀರಿ. ಇದನ್ನು ತಿಳಿದಾದರೂ ಹಲವರು ಪ್ರಳಯದ ಆತಂಕದಿಂದ ಹೊರಬರಹುದು.

  ಪ್ರಳಯ ಆಗಬಹುದು. ಆದರೆ ಅದು ಒಂದೇ ದಿವಸದಲ್ಲೇ ಮುಗಿಯುವಂಥದ್ದಲ್ಲ. ದಿನೇ ದಿನೇ ಪ್ರಕೃತಿ ವಿಕೋಪ ಹೆಚ್ಚಾಗುತ್ತಿದೆ. ಇದೂ ಒಂದು ರೀತಿಯ ಪ್ರಳಯವಲ್ಲವೇ? ಇದಕ್ಕೆ ಕಾರಣ ನಾವೇ.... ಹೀಗಿರುವಾಗ ಅರಿಯದ, ಕಾಣದ ಯಾವುದೋ ಒಂದು ದೊಡ್ಡ ವಸ್ತು ಭೂಮಿಯ ನಾಶಕ್ಕೆ ಬರಬೇಕಾಗಿಲ್ಲ. ಕಣ್ಣಿಗೆ ಕಾಣುತ್ತಿರುವ ಪ್ರಳಯದ ಕಾರಣವನ್ನು ತಿದ್ದಿಕೊಂಡರೆ ಸಾಕಲ್ಲ?

  ಮಾಹಿತಿಪೂರ್ಣ ಲೇಖನ.

  ReplyDelete
 20. ಗುರುಗಳೇ! as always, ತುಂಬಾ informative ಲೇಖನ..ಈ ಪ್ರಳಯದ ವಿಷಯಗಳು ಕೇಳಿದಾಗ ನನಗೇಕೋ ಏನೂ ಅನ್ನಿಸುವುದೇ ಇಲ್ಲಾ.. "ಯಾರೇ ಕೂಗಾಡಲಿ..." ಥರಾ ಇದ್ದುಬಿಡುವುದು ನನ್ನ ಅಭ್ಯಾಸ! ನಾನು high school ಅಲ್ಲಿ ಖಗೋಳ ಶಾಸ್ತ್ರ ಓದಿದಾಗ ಭೂಮಿ ಸೂರ್ಯ ಚಂದ್ರ ಎಲ್ಲವೂ ಸಾವಿರಾರು ವರ್ಷ ಇರುತ್ತವೆ ಎಂದು ತಿಳಿದ ಪ್ರಭಾವ ಇರಬಹುದು!!! ನಾನು ಸ್ವತಃ ಆಸಕ್ತಿ ಇಂದ ಖಗೋಳ ಶಾಸ್ತ್ರದ ಬಗ್ಗೆ ಓದಿದ್ದು ತೀರಾ ಕಡಿಮೆ.. ಓದಿಸಿದ್ದಕ್ಕೆ thanks.. :)
  calendar ಗಳನ್ನು ರೂಪಿಸಿದ ಬಗ್ಗೆ ಇನ್ನಷ್ಟು ಬರೆಯಿರಿ please.. ನಿಮ್ಮ ನಿರೂಪಣೆಯಲ್ಲಿ ಓದಲು ಚೆನ್ನಾಗಿರುತ್ತದೆ :))

  ReplyDelete
 21. This comment has been removed by the author.

  ReplyDelete
 22. ತೇಜಸ್ವಿನಿ, ನನ್ನ ಬ್ಲಾಗ್ ಪೋಸ್ಟ್ ಸಫಲವೆಂದರೆ ಇದನ್ನು ನಮ್ಮ ಜುಗಲ್ಬಂದಿ ಎನ್ನಲು ಬಯಸುತ್ತೇನೆ...ಯಾಕೆ ಗೊತ್ತೆ..ನಿಮ್ಮ ಬ್ಲಾಗ್ ..ಲೈಕ್ ಬೇಸಿಕ್ ಕೋರ್ಸ್ ಅದರ ಆಧಾರದಲ್ಲಿ ನನ್ನ ಪೊಸ್ಟ್ ಎಲ್ಲರಿಗೂ ಹಿಡಿಸಿತು...ಸೋ...ನಿಮಗೂ ಅಭಿನಂದನೆಗಳು....

  ReplyDelete
 23. ರೂಪಶ್ರೀ ಇದನ್ನು ಕೆಲವರು ಬುದ್ಧಿವಂತರ ಗೊಂದಲಹುಟ್ಟಿಸುವ ಆತಂಕವಾದ ಎನ್ನುತ್ತಾರೆ...ಇದಕ್ಕೆ ನನ್ನ ಕೇಳಿದರೆ ಮಾಯನ್ ಕಾರಣ...ಅವರು ತಮ್ಮ ಕ್ಯಾಲಂಡರ್ ಪ್ರಕಾರ ಹೊಸ ಯುಗ ಪ್ರಾರಂಭವಾಗುತ್ತೆ ಎನ್ನಬಹುದಿತ್ತು ಅದೂ ವಿವರಿಸಿ ಏಕೆಂದರೆ ಅವರ ಕ್ಯಾಲಂಡರ್ ಐದು ಸಾವಿರಕ್ಕೂ ಹೆಚ್ಚು ಸಮಯದ್ದು...ನಮ್ಮದು ಒಂದು ವರ್ಷದ್ದು..ಜನವರಿಯಿಂದ ಡಿಸೆಂಬರ್..ಮತ್ತೆ ಹೊಸ ವರ್ಷ ಬರುತ್ತೆ ನಾವು ಹೊಅಸ ವರ್ಷ ಎನ್ನುತ್ತೇವೆ..ಅವರ ಕ್ಯಾಲಂಡರ್ ಅವಧಿ ತುಂಬಾ ಲಾಂಗ್ (ಇದನ್ನು ಲಾಂಗ್ ಕೌಂಟ್ ಕ್ಯಾಲಂಡರ್ ಎಂದೂ ಕರೆಯುತ್ತಾರೆ)..ಆದ್ದರಿಂದ ಹೊಅಸ ಯುಗ ಪ್ರಾರಂಭ ಎನ್ನಬಹುದು...ಅಂದಮಾತ್ರಕ್ಕೆ...ಲಕ್ಷಾಂತರ ವರ್ಷಗಳ very long count ಇರುವ ಭೂಮಿ, ಅದಕ್ಕೂ ಹೆಚ್ಚಿನ ಕ್ಯಾಲಂಡರ್ ಉದ್ದದ ಸೌರವ್ಯೂಹ...ಪತನವಾಗುತ್ತೆ ಎನ್ನೋದು...ಡೆಸೆಂಬರ್ ಮುಗಿದ ತಕ್ಷಣ ಪ್ರಳಯ ಆಗುತ್ತೆ ಅನ್ನುವಷ್ಟೇ ಮೂರ್ಖತನ.....

  ReplyDelete
 24. ಮಾಯನ್ ಕ್ಯಾಲೆಂಡರ‍್ ಬಗ್ಗೆ ಚೆನ್ನಾಗಿ ವಿವರಿಸಿದ್ದೀರಿ ಸರ‍್.ಧನ್ಯವಾದಗಳು.

  ReplyDelete
 25. ಅಣ್ಣ...
  ನಮಸ್ತೆ...
  ಈ ಪ್ರಳಯ ಅದೆಲ್ಲಾ ಸುಮ್ ಸುಮ್ ನೆ ಜನರನ್ನು ಹೆದರಿಸೋದು. ಕಿವಿಗೆ ಹೂವೇ ಬಿಡಿ.
  ಇದ್ದಷ್ಟು ದಿನ ಖುಷಿಯಾಗಿ ಇದ್ದುಬಿಡೋದು ಅಷ್ಟೇ.
  ಚೆಂದದ ಲೇಖನ
  -ತಂಗಿ
  ಚಿತ್ರಾ

  ReplyDelete
 26. ಸುಮಾ ನಿಮ್ಮ ಗೆಳತಿ ರೂಪಶ್ರೀ ಮಾಯನ್ ಕ್ಯಾಲಂಡರ್ನಲ್ಲಿ ವಿಶೇಷ ಆಸಕ್ತಿ ತೋರಿಸಿ ಪ್ರಶ್ನೆ ಕೇಳಿದ್ದರು..ನನಗೆ ತಿಳಿದಿದ್ದನ್ನು ಮೈಲ್ ಮಾಡಿದ್ದೇನೆ. ನಿಮಗೂ ಇದು ಇಷ್ಟವಾಯ್ತು ಎನ್ನುವುದು ನನಗೆ ಸಮಾಧಾನ ಯಾಕಂದ್ರೆ sciencephilic ನ satisfy ಮಾಡೋದು ಕಷ್ಟ..

  ReplyDelete
 27. ಅದ್ಕೋತಾ ಇದ್ದೆ..ಈ ಮಧ್ಯೆ ಇವಳ್ಯಾಕೆ ಈ ಕಡೆ ತಲೆ ಹಾಕಿಲ್ಲ ಅಂತ...!!
  ಅದನೋ ಹೇಳ್ತಾರಲ್ಲ ಸಿಮ್ನೇ ಇರೋರಿಗೆ ಇರುವೆ ಬಿಟ್ಟು ಮಜಾ ತಗೊಳ್ಳೋ ಜಾತಿ ಜನ ಇರ್ತಾರೆ...ಇಲ್ಲಿ ಮಾಯನ್ ಅನ್ನೋ ಇರುವೆ ಬಿಟ್ಟು ಪ್ರಳಯದ ಕಡಿತ ನಮ್ಮಲ್ಲಿ ಆಗೋದನ್ನು ನೋಡೋರು ಈ ಕೆಲ್ಸ ಮಾಡಿದ್ದಾರೆ... ಮಾಯನ್ ವಾದ ಈ ರೀತಿ ಪ್ರಳಯದ ಭೂತಕ್ಕೆ ಕಾರಣ ಎನ್ನುವುದು ನಮ್ಮಲ್ಲೇ ಅಲ್ಲ ವಿದೇಶೀಯರಲ್ಲೂ ಮನದಟ್ಟಾಗಿದೆ.

  ReplyDelete
 28. ಅಜಾದ ಸರ್,
  ತುಂಬಾ ತುಂಬಾ ತುಂಬಾ ವಿವರಗಳನ್ನೂ, ವಿಶೇಷಗಳನ್ನೂ ಹೊತ್ತ ನಿಮ್ಮ ಲೇಖನ ಓದಿ ಬೇಸರವಾಯಿತು...... ಯಾಕಂದ್ರೆ, ನನ್ನ ಹೆಂಡತಿ, ಚಿನ್ನದ ಬಳೆ, ಸರ, ಮನೆ, ಕಾರು ಎಂದೆಲ್ಲಾ ಕಲೆ ತಿನ್ನುತ್ತಿದ್ದಳು.... ಅವಳಿಗೆ ಪ್ರಳಯದ ಹೆಸರು ಹೇಳಿ ಸುಮ್ಮನಿರಿಸಬಹುದಿತ್ತು ...... ( ಸುಮ್ನೆ ತಮಾಷೆಗೆ ಅಂದೆ )..... ಸಾಮಾನ್ಯರಿಗೂ ಅರ್ಥ ಆಗುವ ಹಾಗೆ ತಿಳಿಸಿದ್ದಿರಿ... ತುಂಬಾ ಧನ್ಯವಾದಗಳು ..... ಮಾಯನ್ ಕ್ಯಾಲಂದರ್ ಬಗ್ಗೆ ನನಗೇನೂ ತಿಳಿದಿರಲಿಲ್ಲ....ತಿಳಿಸಿದ್ದಕ್ಕೆ ಥ್ಯಾಂಕ್ಸ್.....

  ReplyDelete
 29. ದಿನಕರ್...ತುಂಬಾ..ತುಂಬಾ..ತುಂಬಾ..ಧನ್ಯವಾದಗಳು...ಇಲ್ಲಪ್ಪ...ಪ್ರಳಯ ಅಂತ ..ದಿಡ್ಡಿಟ್ಕೊಂಡ್ ಏನ್ಮಾಡ್ತೀರಾ ? ಕೊಡಿಸಿ ಹಾಕ್ಕೊಂಡು ಸಂತೋಷ ಪಡೋಣ ಅನ್ನೋದನ್ನ ಈಗ ನೀವು...ಮುಂದೆ ಭವಿಷ್ಯಕ್ಕೆ ಮಕ್ಕಳಿಗೆ ಕೂಡಿಡೋಣ ಅನ್ನಬಹುದು...ಹಹಹ ಎಲ್ಲದಕ್ಕೂ ಎಸ್ಕೇಪ್ ಇದೆ...including 2012 hahahaha

  ReplyDelete
 30. ಆಝಾದ್ ಸರ್...

  ಪ್ರಳಯದ ಬಗೆಗೆ ಆತಂಕ ಪಡುವವರಿಗೆ ನಿಮ್ಮ ಲೇಖನ ಬೆಳಕು ಚೆಲ್ಲಿದೆ...

  ಭವಿಷ್ಯದ ದಿನಗಳಲ್ಲಿ ಕಷ್ಟವಂತೂ ಇದೆ...

  ಅದೇ ಗ್ಲೋಬಲ್ ವಾರ್ಮಿಂಗ್ ಭೂತ
  ಅದು ನಮ್ಮದೇ ಸೃಷ್ಟಿ...!

  ಸಕಾಲಿಕ ಲೇಖನಕ್ಕೆ ಅಭಿನಂದನೆಗಳು...

  ReplyDelete
 31. ಪ್ರಕಾಶ್ ಬಿಡುವು ಮಾಡಿಕೊಂಡು ನನ್ನ ಭಾವ ಮಂಥನದತ್ತ ಒಮ್ಮೆ ಕಣ್ಣು ಹಾಯಿಸಿ...ಅದರಲ್ಲಿ..ನಮ್ಮ ಹಿಂದೂ ಪುರಾಣಗಳು, ವೇದ ಏನು ಹೇಳುತ್ತೆ..ಪ್ರಳಯ ಯಾವಾಗ ಎನ್ನುವುದನ್ನು ನನಗೆ ತಿಳಿದ ಮಟ್ಟಿಗೆ ಅರ್ಥೈಸಿ ಬರೆದಿದ್ದೇನೆ...ಓ ದಿ ನನ್ನ ತಪ್ಪುಗಳಿದ್ದರೆ ದಯಮಾಡಿ ತಿಳಿಸಿ..(ಅದು ಕೇವಲ ವಿಕಿಯಿಂದ ತರ್ಜುಮೆ ಮಾಡಿದ ಲೇಖನ..) ..ನಮ್ಮ ಕನ್ನಡಿಗರಿಗೆ ಮಾಹಿತಿ ಮತ್ತು ಸಂಶಯ ನಿವಾರಣೆ ಪ್ರಯತ್ನ...ಹೌದು ನಾವು ಮಾಡಿದ ಕರ್ಮಗಳಿಗೆ ನಾವೇ ಬೆಲೆ ತೆರಬೇಕು...ನಿಮ್ಮ ಮಾತು ಅಕ್ಷರಶಃ ನಿಜ..

  ReplyDelete
 32. ಆಜಾದ್,

  ಪ್ರಳಯದ ಬಗೆಗಿನ ಅನಾವಶ್ಯಕ ಭೀತಿಯ ಬಗ್ಗೆ ತುಂಬಾ ಚೆನ್ನಾಗಿ ವಿವರಿಸಿದ್ದೀರಿ. ವೈಜ್ಞಾನಿಕ ಹಿನ್ನೆಲೆಯಲ್ಲಿ ನಿಮ್ಮ ವಿಶ್ಲೇಷಣೆ ಅತ್ಯಂತ ಸುಲಭವಾಗಿ ಸರಳವಾಗಿದೆ.
  ಯಾವುದೇ ಗಟ್ಟಿ ಕಾರಣವಿಲ್ಲದೆ , ಕೇವಲ ಕೆಲ ಊಹೆಗಳನ್ನು ಎದುರಿಗಿಟ್ಟುಕೊಂಡು ಸಾಮಾನ್ಯ ಜನರಲ್ಲಿ ಪ್ರಳಯ ಭೀತಿಯನ್ನುಂಟು ಮಾಡುತ್ತಿರುವ ಮೀಡಿಯಾಗಳನ್ನೂ ನೋಡಿ ವಿಷಾದವಾಗುತ್ತದೆ.

  ReplyDelete
 33. Namaskara sir, Myan calender bagge olle mahiti kottiddiri

  ReplyDelete
 34. ಚಿತ್ರಾ, ಮಾಯನ್ ಮಾಯ ನಿಜವಾದ ಮಾಯನ್ ಗಳದ್ದಲ್ಲ...೨೦೧೨ ವಾದವನ್ನು ಮಾಯನ್ expert ಶಾ ಅಲ್ಲಗಳೆದಿದ್ದಾರೆ. ಇಲ್ಲಿ ನನಗೆ ನಮ್ಮ ವೇದ ಪುರಾಣಗಳ ಆಧಾರದ ತರ್ಕವನ್ನೂ ಇಡಬೇಕೆನಿಸ್ತು...ಅದನ್ನ ನನ್ನ ಭಾವಮಂಥನದಲ್ಲಿ ಪೋಸ್ಟ್ ಮಾಡಿದ್ದೇನೆ...ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ

  ReplyDelete
 35. ಜಯಕ್ಕ..ಏನು ನೀವೂನೂ...ಮಕ್ಕಳ ಪಾಠಕೇಳಿ ಸರ್ ಅನ್ನೋಹಾಗೆ ನನ್ನ ಸರ್ ಅಂತೀರಿ...
  ಜನರ ದುಗುಡ ಕಡಿಮೆ ಮಾಡುವಲ್ಲಿ ನನ್ನ ಪೋಸ್ಟ್ ಸಹಾಯಕ ಆಗಿದ್ದರೆ ಧನ್ಯ...ಅಂದಹಾಗೆ ನಮ್ಮ ಪುರಾಣ ವೇದಗಳ ಬಗ್ಗೆ ಈ ಅಲ್ಪನ ನಿಲಿಕಿಗೆ ಬಂದಷ್ಟು ಮಾಹಿತಿ ತರ್ಜುಮೆ ಮಾಡಿ ನನ್ನ ಭಾವ ಮಂಥನ ಬ್ಲಾಗ್ ನಲ್ಲಿ ಪೋಸ್ಟ್ ಮಾಡಿದ್ದೀನಿ..ನೋಡಿ ..ಹೇಳಿ..ನಾನು ಸರಿಯಾಗಿ ಮಾಹಿತಿ ಕೊಟ್ಟಿದ್ದೀನಾ ಇಲ್ಲವಾ ಅಂತ..

  ReplyDelete
 36. ಸುದೀರ್ಘ ವಿವರ ಇರುವ ಲೇಖನಕ್ಕೆ ಧನ್ಯವಾದಗಳು. ಇತ್ತೀಚೆಗೆ ಎಲ್ಲಾ ಕಡೆ ಚರ್ಚಿತವಾಗುತ್ತಿರುವ ವಿಷಯ ಇದು. ಒಂದು ಸಿನೆಮಾ ಕೂಡಾ ತಯಾರಾಗಿದೆ 2012 ಬಗ್ಗೆ. ಎಷ್ಟು ನಿಜವೋ ಗೊತ್ತಿಲ್ಲ. ಹೇಗೂ ಹೆಚ್ಚು ವರ್ಷವಿಲ್ಲವಲ್ಲ, ಅದರ ಸತ್ಯಾಸತ್ಯತೆ ಬಗ್ಗೆ ತಿಳಿಯಲು ತುಂಬಾ ದಿನ ಕಾಯಬೇಕಿಲ್ಲ

  ReplyDelete
 37. ದೀಪಸ್ಮಿತ, ನೀವಿನ್ನೂ ಕೇವಲ ಕೆಲವೇ ವರ್ಷ ಅಂತೀರಲ್ಲಾ..?? ನನ್ನ ಭಾವ ಮಂಥನ ನೋಡಿ (www.bhavamanthana.blogspot.com). ಪುರಾಣ ವೇದಗಳು ಹೇಳುವ ಪ್ರಳಯಕ್ಕೆ ಎಷ್ಟು ದೂರ ಎನ್ನುವುದಕ್ಕೆ ಒಂದು ಲೆಕ್ಕಾಚರ ಕೊಟ್ಟಿದ್ದೇನೆ...ಇದೇನಪ್ಪಾ..ಇಮಾಂಸಾಬಿ ಗೋಕುಲಾಷ್ಟಮಿ ಬಗ್ಗೆ ಹೇಳ್ತಿದ್ದಾನೆ ..???!!! ಅಂದ್ಕೋಬಹುದು..ನೀವು...ಓದಿ..ನಂತರ ನಿಮ್ಮ ಅಭಿಪ್ರಾಯ ತಿಳಿಸಿ....

  ReplyDelete
 38. ಆಜಾದ್ ಅವರೇ,
  ಈ ಲೇಖನವಂತೂ ತುಂಬಾ ಉಪಯುಕ್ತ ಮತ್ತು ಮಾಹಿತಿಯುಕ್ತ ಲೇಖನ. ಇಷ್ಟೆಲ್ಲಾ ವಿವರಗಳನ್ನು ತಿಳಿಸಿಕೊಟ್ಟ ನಿಮಗೆ ಧನ್ಯವಾದಗಳು!

  ಅದೊಂದು ದಿನ ನನ್ನ ದೊಡ್ಡ ಅಕ್ಕ ಫೋನ್ ಮಾಡಿದ್ದಾಗ ಮಾತಿನ ಮಧ್ಯದಲ್ಲಿ ಹೇಳಿದರು. ೨೦೧೨ ಕ್ಕೆ ಪ್ರಳಯ ಆಗಿಬಿಡುತ್ತಂತೆ ಅಂತ! ಅದಕ್ಕೆ ನಾನು ಹೌದಾ ಅಕ್ಕ......, ಸರಿ ಬಿಡು ನಿನಗೆ ಏನೇನು ಆಸೆ ಇದೆಯೋ, ಅಷ್ಟರೊಳಗೆ ಎಲ್ಲಾ ತೀರಿಸಿಕೋ ಆಯಿತಾ! ಅಂತ ಹೇಳಿದ್ದಕ್ಕೆ, ಅಯ್ಯೋ ಸಧ್ಯ ನನಗಂತೂ ಯಾವ ಆಸೇನೂ ಇಲ್ಲ. ಯಾವ ಕ್ಷಣದಲ್ಲಿ ಬೇಕಾದರೂ ಹೋಗೋಕೆ ರೆಡಿ!! ನಿಮ್ಮಭಾವಂಗೆ ಹೇಳ್ತಾ ಇದ್ದೀನಿ ದುಡ್ಡು ದುಡ್ಡು (ಅಂದರೆ ಅವರು ಚಿಕ್ಕಪುಟ್ಟ ಇನ್ವೆಸ್ಟ್ಮೆಂಟ್ ನಲ್ಲಿ ಮುಳುಗಿಹೋಗಿದ್ದರು) ಅಂತ ತಲೆಕೆಡಿಸಿಕೊಳ್ಳದೆ ಸುಮ್ಮನೆ ದೇವರನಾಮ ಜಪಿಸುತ್ತಾಇರಿ ಅಂತ.....! ಹ್ಹ ಹ್ಹ ಹ್ಹಾ ಹ್ಹಾ!

  ಇಲ್ಲಿ ಈ ಲೇಖನದಲ್ಲಿ ಇರುವ ವಿಷಯವನ್ನು ನನಗೆ ತಿಳಿದಿರುವವರಿಗೆಲ್ಲಾ, ಇದರ ಬಗ್ಗೆ ತಿಳಿಸಿ ಹೇಳಲು ಪ್ರಯತ್ನಿಸುತ್ತೀನಿ.

  ನಿಮ್ಮ ಬೃಹತ್ ಪ್ರಯತ್ನಕ್ಕೆ ನಮ್ಮದೂ ಒಂದು ಪುಟ್ಟ ಅಳಿಲು ಸೇವೆ, ಏನಂತೀರಿ......?!

  ReplyDelete
 39. ಎಸ್ಸೆಸ್ಕೆ ಮೇಡಂ
  ಮಾಯನ್ ಕ್ಯಾಲಂಡರ್ ಬಗ್ಗೆ ಮಾಯನ್ ಬಗ್ಗೆ ಅರ್ಧಂಬರ್ಧ ತಿಳಿದವರೋ ಅಥವಾ ಸುಮ್ನೆ ಆತಂಕ ಸೃಷ್ಟಿಸೋಕೋ ಮಾಡಿದಂತಹದ್ದು ಇದು..ಊಹಾಪೋಹದ ಬುರುಡೆ..,..ನಿಮ್ಮಕ್ಕನನ್ನ ಇನ್ನೂ convince ಮಾಡೋಕೆ ನನ್ನ ಜಲನಯನ ಹೋ ಪೇಜ್ ನಲ್ಲೇ ಭಾವಮಂಥನಕ್ಕೆ ಲಿಂಕ್ ಇದೆ ಅದನ್ನ ಕ್ಲಿಕ್ ಮಾಡಿ...ನಮ್ಮ ಪುರಾಣ ವೇದ ಇವು ಪ್ರಳಯದ ಬಗ್ಗೆ ಏನು ಹೇಳುತ್ವೆ ನೋಡಿ...ಈ ಪ್ರಳಯದ ಬಗ್ಗೆ ..ಹೇಳಿದರೆ..ನಿರಾಳವಾಗಿ ನಿದ್ದೆ ಮಾಡ್ತಾರೆ ಎಲ್ಲರೂ.

  ReplyDelete
 40. ತುಂಬ ಚೆನ್ನಾಗಿದೆ.ಇಂಥ ಸುದ್ದಿಗಳನ್ನು ಕೇಳಿದಾಗ ಬರೀ ಬಾಯಿಮಾತಿನ ಪೊಳ್ಳು ಸಾಂತ್ವನಗಳು ಉಪಯೋಗಕ್ಕೆ ಬರುವುದಿಲ್ಲ.Science based ಸಮಾಧಾನ ಮತ್ತು ಆಧಾರದ ಅಗತ್ಯವಿದೆ ಎಂಬುದನ್ನ ನೀವು ಚೆನ್ನಾಗಿ ಅರ್ಥ ಮಾಡಿಕೊಂದಡಿದ್ದೀರ. ಉತ್ತಮ ಲೇಖನಕ್ಕೆ ಧನ್ಯವಾದಗಳು.
  ಆದರೆ ನನ್ನ ಅಭಿಪ್ರಾಯವೇನೆಂದರೆ, ಪ್ರಳಯವಾಗಲಿ ಆಗದಿರಲಿ ಸಾವಂತೂ ಖಚಿತ.ಪ್ರಳಯವಾದರೆ ಒಟ್ಟಿಗೆ ಸಾಯುತ್ತೇವೆ. ಇಲ್ಲದಿದ್ದರೆ ಒಬ್ಬಬ್ಬರಾಗಿ ಸಾಯುತ್ತೇವೆ.
  ನಾಳೆಯ ಬಗ್ಗೆ ಯೋಚಿಸುವ ಬದಲು ಇವತ್ತಿನ ಜೀವನವನ್ನು ಸವಿಯುವುದು ಮುಖ್ಯವಲ್ಲವೇ?

  ReplyDelete
 41. ಜ್ಯೋತಿ ಜಲನಯನಕ್ಕೆ ಬಂದಿರಿ ಧನ್ಯವಾದ, ನಿಮ್ಮ ಅಭಿಪ್ರಾಯ ನೂರಕ್ಕೆ ನೂರು ನಿಜ, ಒಂದೆರಡು ಪ್ರಕೃತಿ ವಿಕೋಪಗಳ ಬಗ್ಗೆ ಈ ಊಹಾಪೋಹಗಳು ಇದ್ದಿದ್ದರೆ ಬಹುಶಃ ನಂಬುತ್ತಿದ್ದರೇನೋ ಉದಾಹರಣೆಗೆ ಸ್ಕೈಲ್ಯಾಬ್ ಬೀಳೋದರ ಬಗ್ಗೆ..ಸುನಾಮಿ ಬಗ್ಗೆ ಇತ್ಯಾದಿ...ಆದ್ರೆ ಇಡೀ ಭೂಮಿಯೇ ಅಲ್ಲೋಲಕಲ್ಲೋಲವಾಗುತ್ತೆ ಇಡೀ ಜೀವರಾಶಿ ಸರ್ವನಾಶವಾಗುತ್ತೆ ಎನ್ನುವುದು ಯೋಚಿಸಬೇಕಾದ ವಿಷಯವೇ.. ಕಡೆಗೆ ನಮ್ಮ ವಾದ ನಿಲ್ಲುವುದು ವೈಯಕ್ತಿಕ ಅಂತ್ಯಕ್ಕೆ..ಅದು ..ನಮಗೆ ಅರಿವಿಲ್ಲದೇ ಬರುವುದು..ಇನ್ನೊಂದು ಘಳಿಗೆಯಲ್ಲಿ ಏನಾಗುವುದೋ ಗೊತ್ತಿಲ್ಲ ಅದು ತಿಳಿದೇ ಇದೆ..ಆದ್ರೆ ನಾವು ಅದನ್ನು ಪರಿಗಣಿಸದೇ..ಎಂದಿನಂತೆ ಯೋಚಿಸುತ್ತೇವೆ ಭವಿಷ್ಯಕ್ಕೆ ಯೋಜಿಸುತ್ತೇವೆ..ಇತ್ಯಾದಿ ಅದೇ ಭಾವ..ನಮ್ಮಲ್ಲಿ ಜೀವ ಸೆಲೆ ತುಂಬುತ್ತದೆ...ಹಿಂದು ಹಿಂದಿಗೆ ನಾಳೆ ನಾಳೆಗೆ ಇಂದು ನಮ್ಮದೇ ಚಿಂತೆ ಏತಕೆ..?? ..ಈ ಹಾಡಿನಂತಿರಬೇಕು ನಮ್ಮ ಯೋಚನೆ...

  ReplyDelete
 42. ssss....ಹಾಗಾದರೆ ಬದುಕೋಣವೇ ವಾಸ್ತವದಲ್ಲಿ?

  ReplyDelete
 43. ನಂಬಿ ಕೆಟ್ಟವರಿಲ್ಲವೋ ಮನುಜ...ಕೇಳಿದ್ದೀರಲ್ಲ... ಜ್ಯೋತಿ
  ನನ್ನ ಕಡೆಯಿಂದ ಎಸ್..ಹೌದು..ನಂಬಿದರೆ ಸುಖ ನಂಬದಿರೆ ೩-ದು (ದುಃಖ, ದುಗುಡ ಮತ್ತು ದುಮ್ಮಾನ)..ಯಾವ್ದುದು ಬೇಕು ನಿಮಗೆ..?? ಹಹಹ

  ReplyDelete
 44. ಅಜಾದ್ ಸರ್,

  ಕೆಲವು ದಿನಗಳಿಂದ ಕೈತುಂಬಾ ಕೆಲಸವಿದ್ದು ಬ್ಲಾಗ್ ಲೋಕಕ್ಕೆ ಕಾಲಿಡಲು ಸಾಧ್ಯವಾಗುತ್ತಿಲ್ಲ. ನಿಮ್ಮ ಈ ಲೇಖನವನ್ನು ಮೊದಲೊಮ್ಮೆ ಓದಿದ್ದೆ. ಕಾಮೆಂಟು ಮಾಡಲಾಗಲಿಲ್ಲ. ಈಗ ಮತ್ತೊಮ್ಮೆ ಓದಿದೆ. ತುಂಬಾ ಖುಷಿಯಾಯಿತು. ಪ್ರಳಯದ ವಿಚಾರವನ್ನು ಎಷ್ಟು ಚೆನ್ನಾಗಿ ವಿಸ್ತಾರವಾಗಿ ಅವಲೋಕಿದ್ದೀರಿ...ಎಂಥವರಿಗೂ ಇದು ಸುಲಭವಾಗಿ ಅರ್ಥವಾಗುವಂತಿದೆ. ಮಾಯನ್ ಕ್ಯಾಲೆಂಡರ್, ನಮ್ಮ ವರ ಯುಗಗಳು ಇತ್ಯಾದಿಗಳ ಬಗ್ಗೆ ನನಗೆ ಗೊತ್ತೇ ಇರಲಿಲ್ಲ. ಎಷ್ಟೋಂದು ವಿಚಾರಗಳನ್ನು ತಿಳಿದುಕೊಂಡಂತೆ ಆಯ್ತು. ’

  ಇಂಥ ವಿಚಾರಗಳನ್ನು ಮಾಹಿತಿಯುಕ್ತವಾಗಿ ಕೊಡುತ್ತಿರುವುದಕ್ಕೆ ಧನ್ಯವಾದಗಳು ಸರ್.

  ReplyDelete
 45. ಶಿವು ಇದು ಬಹಳ ದಿನಗಳಿಂದ ನನ್ನ ತಲೆಯಲ್ಲಿ ಕೊರೀತಿತ್ತು ಆದರೆ ಒಮ್ಮೆ ತೇಜಸ್ವಿನಿಯವರು..ಇದರ ಬಗ್ಗೆ ನೀವೇನಂತೀರಾ ?ಅಂದಾಗ ಆ ಕೊರೆತ ಜಾಸ್ತಿಯಾಗಿ ಬ್ಲಾಗ್ ರೂಪದಲ್ಲಿ ಹೊರಬಂತು..ನನಗಿಂತಾ ಫಾಸ್ಟ್ ತೇಜಸ್ವಿನಿಯಾದರು..ನನಗಿಂತಾ ಮೊದಲೇ ತಮ್ಮ ಬ್ಲಾಗ್ ನಲ್ಲಿ ಇದರ ಬಗ್ಗೆ ಪೊಸ್ಟ್ ಮಾಡಿದರು.....
  ಇವೆಲ್ಲಾ ನನಗಂತೂ ಜೀರ್ಣಮಾಡಿಕೊಳ್ಲಲಾಗದ ಬುರುಡೆಗಳು ಅದಕ್ಕೇ ಬರೆಯಬೇಕಾಯ್ತು..ಹಾಗೇ ಯೋಚಿಸಿದಾಗ..ನಮ್ಮ ಶಾಸ್ತ್ರಗಳು ಏನು ಹೇಳುತ್ವೆ ಅನ್ನೋದನ್ನೂ ತಿಳಿದುಕೊಳ್ಳುವ ಕುತೂಹಲ..ಹಾಗಾಗಿ ನನಗೆ ಅರ್ಥವಾದಮಟ್ಟಿಗೆ ಮಾಹಿತಿಯನ್ನು ಕನ್ನಡೀಕರಿಸಿ "ಭಾವಮಂಥನ" ದಲ್ಲಿ ಪೋಸ್ಟ್ ಮಾಡಿದೆ.
  ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು...

  ReplyDelete
 46. ಪ್ರಳಯದ ಬಗ್ಗೆ ಆಸೆ ಹುಟ್ಟಿಸಿ ಈಗ ಆಗುವುದಿಲ್ಲ ಎಂದರೆ ಹೇಗೆ ಆಝಾದ್ ಸರ್? ಹ್ಮ್.. ಭಾಳ ಬೇಜಾರಾತು..


  ಲೇಖನ ತುಂಬಾ ಚೆನ್ನಾಗಿದೆ. ಸೊಗಸಾಗಿ ನಿರೂಪಿಸಿದ್ದೀರಿ. ಧನ್ಯವಾದಗಳು.

  ReplyDelete
 47. ಮಾಹಿತಿಪೂರ್ಣ ಲೇಖನ. ಮತ್ತು ಅಷ್ಟೇ ಉತ್ತಮ ನಿರೂಪಣೆ!

  ReplyDelete