Monday, November 30, 2009
ಏನ್ಮಾಡೋಕೆ ಹೋದೆ ...ಏನಾಯ್ತು...?
(ನನ್ನ ಫೋಟೋ ನೋಡ್ದೆ ಇರೋರಿಗೆ....ಮಧ್ಯೆ ಇರೋದೇ...ನಾನು..ಅಂದರೆ ಜಲನಯನ...)
ನನ್ನ ಬ್ಲಾಗಾಯಣದ ಮೂಲ ಕಾರಣ ಸುಗುಣ (ಮನಸು)...ನಮ್ಮ ಕನ್ನಡ ಕೂಟದ ಯಾವುದೋ ಒಂದು ಮೀಟಿಂಗ್ ನಲ್ಲಿ ತಾನು ಬ್ಲಾಗ್ ಮಾಡ್ತಿದ್ದೇನೆ..ನೋಡಿ ನಿಮ್ಮ ಅನಿಸಿಕೆ ತಿಳಿಸಿ ಸಾರ್..(ಗಮನಿಸಿ ಈ ಸಂಬೋಧನೆಯನ್ನ..!!!), ಅವರ ಪತಿ ಪರಮೇಶ್ವರ (ಮಹೇಶ್..ಉರ್ಫ್..ಸವಿಗನಸು..ಒಂದು ರೀತೀಲಿ ಅವರು ಬ್ಲಾಗ್ ಪ್ರಾರಂಭಿಸೋಕೆ ಅವರ ಅರ್ಧಾಂಗಿ ಇನ್ನೊಂದು ಕಡೆಯಿಂದ ನಾನು ಕಾರಣ...ಇಲ್ಲ ಅಂತ ಹೇಳ್ಲಿ..ಕೇಳಿ ನೀವೇ...ಹಾಂ ಮತ್ತೆ...) ಹೌದು ಸರ್ (ಇವರ ಸಂಬೋಧನೇನೂ...ಹೇಗೆ ಛೇಂಜ್ ಆಗುತ್ತೆ ನೀವೇ ನೋಡಿ...) ನೀವು ನೋಡಿ ನಿಮ್ಮ ಅನಿಸಿಕೆಯನ್ನ ತಿಳಿಸಿ ಅಂತ ದನಿಗೂಡಿಸೋದೇ?? ....
ಸರಿ ಒoದು ಶುಭ ದಿನ ಪ್ರಾರಂಭಿಸಿಯೇ ಬಿಟ್ಟೆ ನನ್ನ ಬ್ಲಾಗುಬಂಡಿ ಪಯಣ....ಮೊದ ಮೊದಲಿಗೆ ಮನಸು...ಪ್ರತಿಕ್ರಿಯೆ, ನಂತರ ಅವರಿಗೆ ತಿಳಿದ ಒಂದಿಬ್ಬರು ಬ್ಲಾಗು ಮಿತ್ರರು...ಹೀಗೆ..ನನ್ನ ಹಿಂಬಾಲಕರು, ..sorry...ಇಂಗ್ಲೀಷಿನಲ್ಲಿ ಹೇಳಿದ್ರೆ..ಸರಿ..blog followers...!! , ಈಗ ಸರಿಯಾಯ್ತು..
ನನ್ನ ಬ್ಲಾಗನ್ನು ಓದಿ ಪ್ರತಿಕ್ರಿಯೆ ನೀಡೊಕೆ ಶುರು ಹಚ್ಚಿದರು...ನೋಡ್ ನೋಡ್ತಾ ಇದ್ದಂತೆ ನನ್ನ followers ಲಿಸ್ಟ್ ದೊಡ್ದದಾಯ್ತು... ’ಮನಸು’ ನ overtake ಮಾದ್ಬಿಟ್ಟೆ...ನನ್ನ ಎದೆ ಉಬ್ಬಿ...Arnold ಥರ ಆಗೋಯ್ತು....ಇನ್ನೇನು..ನಾನು...ಕನ್ನಡ ಬ್ಲಾಗಿಗರ Numero Uno ಅಗ್ಬಿಟ್ಟೆ ಅಂತ ಊದಿಕೊಳ್ಳುವಾಗ ನನ್ನ ಉತ್ಸಾಹದ ಬಲೂನಿಗೆ ಸೂಜಿ...??.!! ಅಲ್ಲಲ್ಲ....ದಬ್ಬಣ....!!!ಚುಚ್ಚಿದ್ರು ನಮ್ಮ ಗಂಡು ಬ್ಲಾಗು ಮಿತ್ರರು (ಅವರ ಪ್ರತಿಕ್ರಿಯೆಗಳು ಈಗ ಬಹುಶಃ ತಪ್ಪೋದೇ ಇಲ್ಲ)...
ನನ್ನ ಒಂದು ಬ್ಲಾಗ್ ಪೋಸ್ಟಿಗೆ..ಅವರ ಪ್ರತಿಕ್ರಿಯೆ...."ಜಲನಯನ ಮೇಡಂ...ನೀವು ತುಂಬಾ..ತುಂಬಾ..ಚನ್ನಾಗಿ ಬರೀತೀರಿ...ನಿಮ್ಮ ಟಾಪಿಕ್ ಬಹಳ ಸಮಯೋಚಿತ ವಾಗಿರುತ್ತೆ...ನಿಮ್ಮ ಬಗ್ಗೆ ತಿಳಿಸಿ...ನಾನು ನಿಮ್ಮೊಂದಿಗೆ ಚರ್ಚಿಸಬೇಕೆಂದಿದ್ದೇನೆ...ನನ್ನ...ಮೈಲ್ ಐಡಿ.........@.......com." ಅಂತ ಬರೆಯೋದೇ...?? ಇದ್ಯಾಕೋ ಎದವಟ್ಟಾಗ್ತಾ ಇದೆ...ನನ್ನ ಅಪ್ಪ-ಅಮ್ಮ ನಿಗೆ ಮೊದಲ ಮಗು ಹೆಣ್ಣು ಆಗ್ಬೇಕು ಅನ್ನೋ ಉತ್ಕಟ ಅಭಿಲಾಷೆ ಇದ್ದದ್ದು ನಿಜ...ಆದ್ರೆ ಬೆಳೆದು ಮದುವೆ ಆಗಿ ಮೊಮ್ಮಗಳನ್ನು ಕೊಟ್ಟಿರೋ ಮಗ ಹೀಗೇ ರಾತ್ರೋ ರಾತ್ರಿ ಲಿಂಗ ಪರಿವರ್ತನೆಯಾದ ಅಂದ್ರೆ...?? ಅದೂ ಕುವೈತ್ ನಲ್ಲಿದ್ದುಕೊಂಡು ದೀನಾರ ದವಲತ್ತು ಮಾಡೋನಿಗೆ..!!! ??? ಛೆ..ಛೆ...ಸರಿಯಿಲ್ಲ,,, ಎನಿಸಿ ತಲೆ ಕೊಡವಿಕೊಂಡೆ...
ನಾನು ಬರೆದೆ... “ಧನ್ಯವಾದ ನನ್ನ ಬ್ಲಾಗ್ ಗೆ ಪ್ರತಿಕ್ರಿಯೆ ನೀಡಿದಿರಿ..ಆದ್ರೆ..ನಿಮಗೆ ನನ್ನ ಬಗ್ಗೆ confusion ..!!! ಇರೋ ಹಾಗಿದೆ....ದಯವಿಟ್ಟು ನನ್ನ ಪ್ರೊಫೈಲ್ ಒಮ್ಮೆ ನೋಡಿ..ನಿಮ್ಮ confusion ನ್ನೂ..ದೂರ ಆಗುತ್ತೆ...ಮತ್ತು ನಿಮಗೆ ನನ್ನ ಈ ಮೈಲ್ ಗೆ ಲಿಂಕೂ ಸಿಗುತ್ತೆ..." ಅಂತ ಬೆವರು ಒರೆಸಿಕೊಳ್ಳುತ್ತಾ ...ಟೈಪಿಸಿದೆ...
ನಂತರ..ಸ್ವಲ್ಪ ಥಂಡ--ಥಂಡ,,ಕೂಲ್..ಕೂಲ್,,,ಅಂತ ಒಂದು ಪೆಪ್ಸಿ ಕ್ಯಾನ್ ಕೊಡಮ್ಮ ಅಂತ ಮಗಳಿಗೆ ಹೇಳಿ cool ಕುಡಿದು..ಯೋಚಿಸ್ದಾಗ...ಎಡವಟ್ಟು ಎಲ್ಲಿ ಆಗಿದೆ ಅಂತ ಅರ್ಥ ಆಯ್ತು...
ನನ್ನ ಬ್ಲಾಗ್ ಹೆಸರು..."ಜಲನಯನ" .....ಆದ್ರೂ ನಾನು ಪ್ರತಿಕ್ರಿಯೆ ಕೊಡುವಾಗಲೆಲ್ಲಾ ಎಲ್ಲೂ ಪ್ರತಿಕ್ರಿಯಿಸುತ್ತಿರುವುದು ಹೆಣ್ಣು ಅನ್ನೋ..ಕ್ಲೂ ಕೊಡೋ ತರಹ ಬರ್ದಿಲ್ಲವಲ್ಲಾ...??!! ..ಛೇ..ಹೋಗ್ಲಿ..ಬಿಡು...ಈಗ confusion ದೂರ ಆಯ್ತಲ್ಲ..ಅಂತ ನಿಟ್ಟುಸಿರು ಬಿಟ್ಟೆ...
…ಹಾಂ...ಹಿಂದೇನೇ..ಆತಂಕ ಶುರು ಆಯ್ತು..ನಾನು ಅಂದರೆ ಜಲನಯನ ಹೆಣ್ಣು ಅಂತ..ಎಲ್ಲಾ ಗಂಡು ಬ್ಲಾಗಿಗಳು ಪ್ರತಿಕ್ರಿಯೆ ನೀಡ್ತಾ ಇದ್ರ...ಮತ್ತೆ ಪರ್ವಾಯಿಲ್ಲ ಇದು ಹೆಣ್ಣು ಬ್ಲಾಗಿ ...ಅಂತ ಹೆಣ್ಣು ಬ್ಲಾಗಿಗಳು...ಓ..my God..!!! ಅನ್ನಿಸಿ ಕ್ಷಣ ವಿಚಲಿತನಾದೆ...ನಂತರ...ಛೇ...ನನ್ನ profile ನಲ್ಲಿ ಕ್ಲಿಯರ್ ಆಗಿ ಬರೆದಿದ್ದೇನಲ್ಲಾ..??!! ಯಾರೇ ಆದ್ರೂ ಪ್ರೊಫೈಲ್ ನೋಡಿ ಪ್ರತಿಕ್ರಿಯಿಸೋದು...ಹೀಗೆ ಇರಲಿಕ್ಕಿಲ್ಲ...ಅಂತ ಸಮಾಧಾನ ಮಾಡಿಕೊಂಡೆ...
ಈ ನೆನಪು ಹಸಿಯಾಗಿರುವಾಗಲೇ ಬಂತು..ತೇಜಸ್ವಿನಿಯವರ shocking ಬ್ಲಾಗ್ ಪೋಸ್ಟ್...ಅವರನ್ನ ಯಾರೋ ಒಬ್ಬ (ತನ್ನ ನಿಜ ಪರಿಚಯವನ್ನು ಗುಪ್ತವಾಗಿಟ್ಟು) ಹುಡುಗಿಯ ಹೆಸರಿಟ್ಟ ಬ್ಲಾಗಿನ ಮೂಲಕ ..ಕೀಟಲೆಗೆ ಪ್ರಯತ್ನಿಸಿದ್ದು..ಅವನ ಬಣ್ಣ ಬಯಲಾಗಿದ್ದು ...ಇತ್ಯಾದಿ...
ಆಗಲೇ... ನಾನು.. ಬ್ಲಾಗ್ ಎಡವಟ್ಟು ಬಗ್ಗೆ ಕವನ ಬರೆದದ್ದು...
ಇಷ್ಟೇ ಆದ್ರೆ ತಾಪತ್ರಯ ನನ್ನದು ಪರವಾಗಿಲ್ಲ...ಮಹೇಶ್..ನನ್ನ ಮಿತ್ರ...ಆಗ..., ಈಗ...ತಮ್ಮ (ನನ್ನನ್ನ ಆಝಾದಣ್ಣ ಅಂತಾನೆ...)..ಮಹೇಶನ ಅರ್ಧಾಂಗಿ...ಮನಸು...ಸಹಾ ..ಆಜಾದಣ್ಣ ಅನ್ನೋದೇ...??!! ಈಗ..ಹೇಳೇಬಿಡ್ತೀನಿ.. ಅವರಿಗೆ, “ನೋಡಿ ಯಾರಾದ್ರೂ ಒಬ್ರು...ಅಣ್ಣ ಅನ್ನಿ...ಇಬ್ರೂ ಅಂದ್ರೆ ಸಂದಾಕಿರಕಿಲ್ಲಾ...ಅಂತ....” ಹಹಹಹ..
ನಮ್ಮ ಜಯಲಕ್ಷ್ಮಿಯವರು ಏನು ಕಮ್ಮೀನಾ...?? ಅವರ ಮುಕ್ತ ಮುಕ್ತದ ಮಂಗಳತ್ತೆ ಪಾತ್ರ ನೋಡಿ...ಅವರು ಹಾಕಿದ ಕಾಮೆಂಟಿಗೆ ನಾನು ಪ್ರತಿಕ್ರಿಯಿಸುತ್ತಾ...."ಜಯಕ್ಕಾ ನೀವು ತುಂಬಾ ಚನ್ನಾಗಿ ಅಭಿನಯಿಸಿದ್ದೀರಿ..ಕೆಟ್ಟ ಅತ್ತೆ ಪಾತ್ರ..ಬೇರೇದು ಸಿಗಲಿಲ್ಲವೇ..?"...ಅದಕ್ಕೆ ಅವರು...
ಆಜಾದ್..ನೀವು ವಯಸ್ಸಲ್ಲಿ ನನ್ಗಿಂತ ಹಿರಿಯರು (ಇವರು ಎಲ್ಲರಿಗಿಂತ ಬುದ್ಧಿವಂತರು..ನನ್ನ ಕರ್ಮಕ್ಕೆ..!!! ನನ್ನ ಪ್ರೊಫೈಲ್ ನಲ್ಲಿ age ಗಮನಿಸಿದ್ದಾರೆ..!!!) ನನ್ನನ್ನ ಅಕ್ಕ ಅಂತ ಕರೆಯೋದೇ...??(ಯಾವ್ ಹೆಣ್ಣು ಮಗಳಿಗೆ ತಾನೇ ತಾನು ಅಜ್ಜಿಯಾಗಿದ್ದರೂ ..aunty ಅನ್ನಿಸಿಕೊಳ್ಳೊದಕ್ಕಿಂತಾ sister ಅನ್ನಿಸಿಕೊಳ್ಳೊದು ಇಷ್ಟ ಇರೊಲ್ಲ, ಜಯಲಕ್ಷ್ಮಿಯವರು ತಪ್ಪು ತಿಳಿಬಾರ್ದು..ಓಕೆ..). ಸದ್ಯಕ್ಕೆ ಅವರು ನನ್ನನ್ನ "ಅಣ್ಣ" ಅಂದಿಲ್ಲ ಈ ವರೆಗೂ...(ಆರ್ಕುಟ್..ಅಥವಾ ನನ್ನ ಬ್ಲಾಗ್ ನ title bar ಮೇಲಿರೋ 47,48,49,50 ನೋಡ್ದೇ ಇದ್ರೆ ಸಾಕು..).
ಈಗ ಗಾಯಕ್ಕೆ ಇನ್ನೊಂದು ಬರೆ ಅನ್ನೋಹಾಗೆ..ಸೀತಾರಾಂ ಸೇರ್ಕೊಂಡ್ರು...ನನ್ನ ಇತ್ತೀಚಿನ ಪೋಸ್ಟ್ಗೆ ಪರಿತಿಕ್ರಿಯೆ ಹಾಕ್ತಾ..ಕೊನೆಗೆ ಬಾಂಬ್ ಸಿಡಿಸಿಯೇ ಬಿಟ್ರು..."ಚಮಕಾಯಿಸಿಬಿಟ್ರಿ..ಆಜಾದಣ್ಣ...!!!!"
ಅಲ್ಲ...ನಾಲ್ಕು ಜನ ನಾವು..ನಾನು ಜೇಷ್ಟ..ನಮ್ಮ ಪಕ್ಕದ ಮನೆ ..ಶಾರದಕ್ಕ ನ ಮಗಳನ್ನ (ನನ್ನ ಮೂರನೇ ತಮ್ಮನ ವಯಸ್ಸು) ನಾನು ಎತ್ತಿ ಕೊಂಡು ಮುದ್ದು ಮಾಡೋದನ್ನ ನೋಡಿ..ಶಾರದಕ್ಕ ನಮ್ಮಪ್ಪನಿಗೆ.."ಅಜಾದನಿಗೆ ಹೆಣ್ಣುಮಕ್ಳು ಅಮ್ದ್ರೆ ಪ್ರಾಣ ..ಕಾಸೀಮಣ್ಣ...ಅವನಿಗೆ ಒಬ್ಬಳು ತಂಗಿ ಬಂದ್ರೆ ಚನ್ನ" ಅಂತ ನಮ್ಮಪ್ಪನ್ನ ಗೋಳುಹುಯ್ಕೊಳ್ತಿದ್ದಳು ಅಂತ ನಮ್ಮಮ್ಮ ನನ್ನ ತಂಗಿ ಹುಟ್ಟಿದಾಗ ಹೇಳಿದ್ದು ನೆನಪು...ಹಂಗಂತ,,,ಈಗ ಸಾಲು..ಸಾಲು ತಂಗೀಯರನ್ನ ಕೊಟ್ಟುಬಿಡ್ತು ನನ್ನ ಬ್ಲಾಗ್...ಜಲನಯನ...
ಹೋಗ್ಲೀ ಅಂದ್ರೆ...ಈ ಪಾಟಿ ತಮ್ಮಂದಿರೇ...???
ಈಗ ನಾನು ಬ್ಲಾಗ್ ಲೋಕಾನ ಜಾಲಾಡ್ಸಿತಿದೀನಿ...ನನಗಿಂತ ವಯಸ್ಸಿನಲ್ಲಿ ಹಿರಿಯರು ಸಿಗ್ತಾರಾಂತ..ಅಮಿತಾಭ್ ಸಿಕ್ಕರು....ಆದ್ರೆ..ನನ್ನ ವಯಸ್ಸಿಗೂ ಅತಿ ಕಡಿಮೆ ವಯಸ್ಸಿನ ಹೀರೋಯಿನ್ ಜೊತೆ ಹೀರೋ ಆಗಿ ನಟಿಸಿದ್ದು ನೋಡಿ..ಅವರೂ ನನ್ನ "ಅಣ್ಣ"..ಅಂದ್ಬಿಟ್ರೆ…..???!!! ಅಂತ ಹೆದರಿ ಅವರಿಗೆ ಮೈಲ್ ಕಳಿಸ್ಲಿಲ್ಲ...ಈಗ ಧೈರ್ಯವಾಗಿ ಸಂಪರ್ಕ ಮಾಡ್ಬೇಕು ಅಂತ ಇರೋದು..ನಮ್ಮ ಹೋಂ ಮಿನಿಸ್ಟರ್..ವಿ.ಎಸ್.ಆಚಾರ್ಯ, ನಮ್ಮ ಫ್ರೆಸಿಡೆಂಟ್...ಪ್ರತಿಭಾ ಪಾಟೀಲ್, ನಮ್ಮ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್......
ನೀವೆಲ್ಲಾ...ನಿಮ್ಮಣ್ಣನಿಗೆ,,,,,ಶುಭಕೋರಿ...ಇವ್ರಾದ್ರೂ ನನ್ನ ತಮ್ಮ ಅಂತ ಒಪ್ಪಿಕೊಳ್ಳಲಿ....
(ಇದೊಂದು ಕೇವಲ ಮನರಂಜನೆಯ ಪ್ರಹಸನ ಎಂದುಕೊಳ್ಳಿ...ಯಾರದಾದರೂ ಭಾವನೆಗಳಿಗೆ ನೋವಾಗಿದ್ದರೆ.....ಕ್ಷಮೆಯಿರಲಿ)
Subscribe to:
Post Comments (Atom)
ಆಜಾದ್ ಸರ್,
ReplyDeleteಸಕತ್ತಾಗಿದೆ ನಿಮ್ಮ ಬ್ಲಾಗಾಯಣ.ನಾನೂ ಮೊದಲು ಬ್ಲಾಗ್ ಪ್ರಾರ೦ಬಿಸಿದಾಗ ಅಹರ್ನಿಶಿ ಅ೦ತ ಹಾಕ್ಕೊ೦ಡಿದ್ದೆ,ಕೆಲವರಿಗೆ ಅದು ಹುಡುಗಿಯ ಹೆಸರಿರಬಹುದು ಅ೦ದು ಕೊ೦ಡಿದ್ದರು.ಅಹರ್ನಿಶಿ ಕನ್ನಡದಲ್ಲಿ ನನಗೆ ಅತಿ ಮೆಚ್ಚಿನ ಪದ,ನನ್ನ ಹೆ೦ಡತಿ ಹೆಸರನ್ನು ಮದುವೆಯಲ್ಲಿ ಬದಲಾಯಿಸಿ ಅಹರ್ನಿಶಿ ಎ೦ದಿಡೋಣ ಅ೦ದ್ಕೊಡಿದ್ದೆ,ಸಾಧ್ಯವಾಗಲಿಲ್ಲ.ನ೦ತರ ಮಗು ಹುಟ್ಟಿದಾಗ ಅದಕ್ಕೆ ಅಹರ್ನಿಶಿ ಎ೦ದಿಡೋಣ ಅ೦ದ್ಕೊ೦ಡೆ,ಗ೦ಡು ಮಗುವಾದ್ದರಿ೦ದ ಸಮ್ರುಧ್ ಎ೦ದಿಟ್ಟೆ.ಈಗ ಎರಡನೆಯದು ಗ೦ಡೋ ಹೆಣ್ಣೋ ಗೊತ್ತಿಲ್ಲ,ಹೆಣ್ಣಾದ್ರೆ ಅಹರ್ನಿಶಿ ಅ೦ತ ಇಡೋಣ ಅ೦ತ,ನೀವೇನ೦ತೀರಾ??.ಅ೦ದ ಹಾಗೆ ನನ್ನ ಮನೆಯ ಹೆಸರು " ಅಹರ್ನಿಶಿ".
ಶ್ರೀಧರ್ ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದ...ಹೌದು ಅಹರ್ನಿಶಿ ಮುದ್ದಾದ ಹೆಸರು ಮತ್ತು ಅರ್ಥಪೂರ್ಣ ಸಹಾ..ನಿಮ್ಮ ಪ್ರಯತ್ನದ ಫಲ ನಿಮ್ಮ ಅನಿಸಿಕೆಯಂತೆ ಆಗಲಿ ಅಂತ ಹಾರಿಕೆ ನನ್ನದು. good luck
ReplyDeleteಹ್ಹಾ ಹ್ಹಾ ಹ್ಹಾ...
ReplyDeleteನಾನು ಕೂಡ ಮೊದಲು ಹೀಗೆ Confuse ಆಗಿದ್ದೆ... :)
ಶಿವಪ್ರಕಾಶ್, ಮೊದಲಿಗೆ ನೀವು ಕ್ಷಮಿಸಬೇಕು, ನೀವು ನನ್ನ ಬ್ಲಾಗ್ (ಇತ್ತೀಚಿಂದು) ಪೋಸ್ಟ್ ಗೆ ಪ್ರತಿಕ್ರಿಯೆ ಹಾಕಿದ್ದಿರಿ...ಆ ಬ್ಲಾಗ್ ನನ್ನ computer ನ ಒಳತೊಂದರೆಗಳ ಕಾರಣ..ಹಳೆಯ ಬ್ಲಾಗ್ ನಂತೆ ಪೋಸ್ಟ್ ಆಗಿತ್ತು..ಅದನ್ನ ತೆಗೆಯಬೇಕಾಯಿತು...ಮತ್ತೆ ಪೋಸ್ಟ್ ಮಾಡಿದೆ..ಈಗ ಸರಿಯಿದೆ.ಕೆಲವರು ತಿಳಿದಿದ್ದರು ...ಮತ್ತೆ ಪ್ರೊಫೈಲ್ ನೋಡಿ ಮೈಲ್ ಮಾಡಿ ತಿಳಿಸಿದ್ರು...ನಾನು ನನ್ನ ಪ್ರೊಫೆಶನ್ ಗೆ ಲಿನ್ಕ್ ಮಾಡಿ ಈ ಹೆಸರಿಟ್ಟೆ...ಹೀಗೆ ಬ್ಯಾಕ್ ಫೈರ್ ಆಗುತ್ತೆ ಅಂತ ತಿಳಿದಿರಲಿಲ್ಲ....
ReplyDeleteಜಲನಯನ ಸಾರ್
ReplyDeleteನಾನುನಿಮ್ಮನ್ನು ಮೊದಲೆಲ್ಲಾ ಮೇಡ್ಂ ಎಂದೇ ತಿಳಿದಿದ್ದೆ
ಆನಂತರವೇ ಗೊತ್ತಾದುದು ನೀವು ಆಝಾದ್ ಸಾರ್ ಎಂದು
ಜಲನಯನ ಸಾರ್
ReplyDeleteನಾನುನಿಮ್ಮನ್ನು ಮೊದಲೆಲ್ಲಾ ಮೇಡ್ಂ ಎಂದೇ ತಿಳಿದಿದ್ದೆ
ಆನಂತರವೇ ಗೊತ್ತಾದುದು ನೀವು ಆಝಾದ್ ಸಾರ್ ಎಂದು
ರೂಪಾ....ಹಹಹಹ...ಅಂದಹಾಗೆ ನೀವು ಫೋಟೊ ಬಗ್ಗೆ ಕಾಮೆಂಟ್ ಮಾಡ್ಲಿಲ್ಲ....
ReplyDeleteಅದು ಸರಿ ಹಾಗಂತ ನನ್ನ ಒಬ್ಬ follower/ commenter ಕಡಿಮೆ ಆಗೊಲ್ಲಾ ತಾನೇ?
ಧನ್ಯವಾದ..ಈಗ ಕಾಮೆಂಟ್ ಮಾಡಿದ್ರಲ್ಲಾ....
ಅಜ್ಹಾದ್ ಸರ್
ReplyDeleteಚೆನ್ನಾಗಿದೆ ನಿಮ್ಮ ಬ್ಲಾಗಾಯಣದ ಕಥೆ
ಎಂಥ ಪುಣ್ಯವಂತರು ನೀವು ನೋಡಿ
ಎಲ್ಲರೂ ಅಣ್ಣ ಅಣ್ಣ ಅಂತಾರೆ
ಸಾಕ್ಷಾತ ದೇವರಂತೆ ನೀವು :)
ಸುಂದರ ಬರಹ
ಡಾ. ಗುರು....ಏನಪ್ಪಾ ನೀವು....??!! ದೇವರ ಪಟ್ಟ ಕೊಟ್ಟು....ಸ್ವರ್ಗವಾಸಿ ಮಾಡ್ತಿದ್ದೀರ...??!!
ReplyDeleteನನ್ನನ್ನ ಮಿತ್ರನನ್ನಾಗಿಸೋ ದೇವ
ಬೇಡ ಶತೃವಿಗೂ ಈ ಅಣ್ಣನಾಗುವ ಯೋಗ
ಹಹಹ.....ಧನ್ಯವಾದ ನಿಮ್ಮ ಆತ್ಮೀಯತೆಗೆ
ಅಲ್ಲಾ ಅಷ್ಟು ಇಷ್ಟ ಪಟ್ಟು ಕಾಮೆಂಟ್ ಹಾಕಿದ್ರೆ, ಹುಡುಗ್ರು ದಬ್ಬಣ ಚುಚ್ಚದಂಗಾಗುತ್ತಾ ಆಜಾದಣ್ಣ :)
ReplyDelete- ಮುಯ್ಯಿಗೆ ಮುಯ್ಯಿ
ಕಾಮೆಂಟೂ ಹಾಕ್ದೆ, ಅಣ್ಣ ಅಂತನೂ ಕರೆದೆ :)
ha ha..:)
ReplyDeleteನೀವು ಬೇಡ ಅಂದ್ರೂ ಬಿಡ್ತೀವಾ ಆಜಾದಣ್ಣ.. ಅಣ್ಣ ಅಂತ್ಲೇ ಕರ್ಯೋದು ನಾವು..
ReplyDeleteಮತ್ತೆ ನಾನು ಗಮನಿಸಿದ ಒಂದ್ ವಿಷ್ಯಾ ಏನಂದ್ರೆ ನಿಮ್ಮ ಹೆಸ್ರನ್ನ ತುಂಬಾ ಜನ ಜಲಾನಯನ ಅಂತ ಕರೀತಿದ್ದದ್ದು.. ಮತ್ತೆ ನೀವು ನಾನು ಜಲಾನಯನ ಅಲ್ರೀ ಮಹಾಶಯರೆ.. ನಾನು ಜಲನಯನ ಅಂತ ಸರಿಪಡಿಸ್ತಾ ಇದ್ದದ್ದು.. ನಿಮ್ಮ ಲಿಂಗ ಬದಲಾವಣೆ ಮಾಡಿದ್ದಂತೂ ಅತಿಯಾಯ್ತು ಬಿಡಿ.. ಓಟ್‌ನಲ್ಲಿ ಬ್ಲಾಗಾಯಣ ಮಸ್ತ್ ಮಜವಾಗಿದೆ.. (ಮಜಾ ನಮ್ಗೆ... ನಿಮ್ಗೆ ಸಜಾ ಅಂತ ಗೊತ್ತು.. )
ಮತ್ತೆ ನಮ್ಮನ್ನ ಜಾಸ್ತಿ ಯಾಮಾರ್ಸೋಕೆ ಹೋಗ್ಬೇಡಿ.. ಆ ಫೋಟೋದಲ್ಲಿ ಇರೋದು ನೀವಲ್ಲ ಅಂತ ಗೊತ್ತು.. :) ಹಾಗೇನಾದ್ರೂ ಅದು ನಿಜವಾಗಿದ್ದಲ್ಲಿ ನಿಮ್ಮನ್ನ ಆಜಾದ್ ತಾತಾ ಅಂತ ಕರೀತೇವೆ.. ಅಣ್ಣ ಅಂತ ಅಲ್ಲ..
ReplyDeleteನನ್ನ ಸ್ನೇಹಿತನೊಬ್ಬನನ್ನು ಆತನ ತಂಗಿಯ ಗೆಳತಿಯರೆಲ್ಲಾ 'ಅಣ್ಣ ಅಣ್ಣ' ಅಂತ ಕರೆದರೆ, ಆತ ಉರುದುರಿದು ಬೀಳುತ್ತಿದ್ದುದು ನೆನಪಾಯಿತು! ತಮಾಷೆಯಾಗಿ ಬರೆದಿದ್ದೀರಿ!
ReplyDeleteಅಂದಂಗೆ, ಫೋಟೋದ ಮಧ್ಯದಲ್ಲಿರುವವರು ಯಾಕೋ ನೀವು ಅನ್ನಿಸ್ತಿಲ್ಲ ಸ್ವಾಮಿ! ಹೆಚ್ಚೆಂದರೆ ಎಡದಿಂದ ಮೊದಲನೇಯವರು ನೀವಾಗಿರಬಹುದು!
ReplyDeleteಜಲನಯನ ಅವರಿಗೆ ನಮಸ್ತೆ..
ReplyDeleteನಿಮ್ಮ ಬ್ಲಾಗಾಯಣ ಚೆನ್ನಾಗಿದೆ.. ನನ್ನ ಬ್ಲಾಗಾಯಣ ಏನಪ್ಪಾ ಅಂದ್ರೆ ನನ್ನ ಬರಹಗಳಿಗೆ ಪ್ರತಿಕ್ರಿಯೆ ಬರಲಿಲ್ಲ ಅಂದ್ರೆ ನಂಗೆ ಬೇಸರ ಆಗುತ್ತೆ.. ನನ್ನ ಬರಹ ಓದೋರು ಜಾಸ್ತಿ ಜನ ಇರ್ಬೇಕು ಎಂದು ನಂಗಾಸೆ..
ದಿಲೀಪ್ ಹೆಗ್ಡೆ ಅವರು ಹೇಳಿರೋ ಹಾಗೆ ಚಿತ್ರದಲ್ಲಿ ಇರೋದು ನೀವಲ್ಲ ಅನಿಸುತ್ತೆ..
ವಂದನೆಗಳು..
ಹಹಹ ಚೆನ್ನಾಗಿದೆ ನಿಮ್ಮ ವರಸೆ..ಫೋಟೋದಲ್ಲಿ ಇರೋರು ಯಾರೂ ನಿಮ್ಮನ್ನು ಅಣ್ಣ ಎಂದು ಕರೆಯುವುದಿಲ್ಲ ಬಿಡಿ ಹಹಹ...
ReplyDeleteನಾವು ಸಾಕ್ಷಿ ಆ ಪೋಟೋದಲ್ಲಿ ಇರುವವರಲ್ಲಿ ಯಾರು ಅಝಾದ್ ಸಾಹೇಬರಲ್ಲ....!!!!!!ದಯವಿಟ್ಟು ಯಾರು ಮೋಸ ಹೋಗಬೇಡಿ ಹಹಹ
hahahaha chennaagide Azad Bhaiyya
ReplyDeleteall the best. keep blogging
:-)
ms
ಜಲನಯನ ಅಣ್ಣ,
ReplyDeleteನಾನು ನಿಮ್ಮ ಲಿಂಗ ಹಾಗು ವಯಸ್ಸಿನ ಬಗೆಗೆ ಯಾವತ್ತೂ confusion ಮಾಡಿಕೊಂಡಿಲ್ಲ. By the way, ನಾನು ನಿಮಗಿಂತ ವಯಸ್ಸಿನಲ್ಲಿ ದೊಡ್ಡವನು. ನನ್ನ ಬ್ಲಾ^ಗ್ ಬಳಗದವರು ನನಗೆ ಕಾಕಾ ಅಂತಲೇ ಕರೆಯುತ್ತಾರೆ. ನೀವೂ ಹಾಗೇ ಕರೆಯಬಹುದು!
-ಸುನಾಥ ಕಾಕಾ
ನನ್ನ ಒಂದು ತರಲೆ ಬ್ಲಾಗಿಗೆ ನೀವು ಗಂಬೀರ ಪ್ರತಿಕ್ರಿಯೆ ಕೊಟ್ಟಾಗಿನಿಂದ ನಿಮ್ಮ ಬಗ್ಗೆ ನನಗೆ ಸ್ವಲ್ಪ ಭಯ ಶುರುವಾಯಿತು ಮತ್ತೆ ಆಝಾದಣ್ಣ ಅಂತ ಬರೆದು ಬೇಸರ ಮಾಡುವುದಿಲ್ಲ.
ReplyDeleteಸರಿನಾ ಆಝಾದ್ ಅಂಕಲ್?
ಆಝಾದ್ ಅವರೆ,
ReplyDeleteನಾನಂತೂ ಈಗ ತುಂಬಾ "ಎಚ್ಚರ"ವಹಿಸುತ್ತಿದ್ದೇನೆ. ಯಾರ ಹೊಸ ಬ್ಲಾಗ್‌ಗೆ ಹೋದರೂ ಮೊದಲು ಪ್ರೊಫೈಲ್ ನೋಡಿ.. ಸರಿಯಾಗಿದ್ದರೆ ಮಾತ್ರ ಕಮೆಂಟಿಸುತ್ತೇನೆ :) ನಿಮ್ಮ ಬ್ಲಾಗ್‌ನಲ್ಲಿ ನನಗೇನೂ ಸಂಶಯ ಬರುವಂಥದ್ದು ಕಾಣಲಿಲ್ಲ! :) ಆದರೂ ನಿಮ್ಮ ಅನುಭವಗಳನ್ನು ಕೇಳುವಾಗ ನಗು ಬಂತು. ನಿಮ್ಮೊಂದಿಗಾದ ಅನುಭವ ಅವರವರ ತಪ್ಪು ಅನಿಸಿಕೆಗಳಿಂದಾಗಿರುವುದು. ಆದರೆ ನನ್ನ ಜೊತೆ ಆದ ಅನುಭವ ಗೊತ್ತಿದ್ದೂ ಕೀಟಲೆ ಕೊಟ್ಟದ್ದು.
ಮತ್ತೆ ಫೋಟೋದಲ್ಲಿ ಇರುವವರು ಖಂಡಿತ ನೀವಲ್ಲ ಎನ್ನುವುದು ನನ್ನ ಅನಿಸಿಕೆ. ಒಂದೊಮ್ಮೆ ಹೌದಾದಲ್ಲಿ ನಿಮ್ಮನ್ನು ತಾತಾ ಎಂದು ಕರೆಯುವವರೊಂದಿಗೆ ನಾನೂ ಸೇರುವೆ :)
ಅಜ್ಹಾದ್ ಮಾಮ,
ReplyDeleteಹಹಾಹ್ಹಹಹ....ಓದಿ ನಗು ಬಂತು.....ಸರಿನಪ್ಪ ಇನ್ನು ಮೇಲೆ ನಾವಿಬ್ಬರಲ್ಲಿ ಒಬ್ಬರೆ ಅಣ್ಣ ಅಂತ ಕರೆಯೋದು...ಇನ್ನೊಬ್ಬರು ಮಾಮ ಅಂತ ಕರೆಯಬಹುದೆ(ಹಹ್ಹಹಹ......)
ಯಾಕೊ ಸರ್ ಅನೋಕೆ ಆಗ್ತಾ ಇಲ್ಲ ಈಗ ಅದಕ್ಕೆ ಸಂಬೋಧನೆಯು ಬದಲಾದದ್ದು......
ಗುರು ಹೇಳಿದ ಹಾಗೆ ನೀವು ಪುಣ್ಯವಂತರು.....ಪಾಪ ಗುರುವಿಗೆ ಯಾರು ಅಣ್ಣ ಅಂತ ಹೇಳುವವರಿಲ್ಲ ಅಂತ ಬೇಜಾರೊ ಖುಷಿನೊ ಗೊತ್ತಿಲ್ಲ.......?
ಅಣ್ಣ ಅಂತ ಕರೆಯುವುದು ಆತ್ಮಿಯತೆಯಿಂದ...ನೀವು ಸಹ ಆ ಅಣ್ಣಾವ್ರ ಹಾಗೆ ಆಗಲಿ ಅಂತ.....ನಮ್ಮ ರಾಜ್ ಕುಮಾರ್ ನ ಎಲ್ಲರೂ ಅಣ್ಣವ್ರು ಅಂತಾಲೆ ಕರೆಯೋದು ಇಬ್ಬರನ್ನು ಬಿಟ್ಟು....
ಫೋಟೋ ಸೂಪರ್...ಎಲ್ಲಿ ತಗೆಸಿದ್ದು......ಎಷ್ಟು ವರ್ಷ ಹಳೆಯ ಫೋಟೋ ಇದು....
ಚೆನ್ನಾಗಿ ಬರೆದಿದ್ದೀರ......
ನಿಮ್ಮ ಬ್ಲಾಗಾಯಣ ತುಂಬಾ ಚೆನಾಗಿದೆ ಆಜ್ಹಾದ್ ಅಣ್ಣ / ಮಾಮಾ/ ಅಂಕಲ್ / ತಾತಾ ( ಇದು ಫೋಟೋ ನೋಡಿದಮೇಲೆ ! )
ReplyDeleteಇವುಗಳಲ್ಲಿ ಸರಿಯಾದ ಪದ ನೀವೇ ಆರಿಸಿಕೊಳ್ಳಿ !
ಸದ್ಯ , ನನ್ನ ಬ್ಲಾಗ್ ನಲ್ಲಿ ಹೆಸರು ಹಾಕಿಕೊಂಡು ಒಳ್ಳೇದು ಮಾಡಿದೆ ನಾನು ಅನಿಸ್ತು ನಿಮ್ಮ ತಲೆಬಿಸಿ ನೋಡಿ ! ಪುಣ್ಯಕ್ಕೆ, ನಿಮ್ಮ ಮೊದಲ ಪ್ರತಿಕ್ರಿಯೆ ನನ್ನ ಬ್ಲಾಗಿಗೆ ಬಂದಾಗ , ನಿಮ್ಮನ್ನು ಹೆಸರು ಹೇಳಿ ಸ್ವಾಮೀ ಅಂತ ಕೇಳಿ ಕೊಂಡು ಮುಜುಗರದಿಂದ ಬಚಾವಾದೆ ಬಿಡಿ . ಇಲ್ಲದಿದ್ದರೆ ಇವತ್ತು ನನ್ನ ಹೆಸರೂ ನಿಮ್ಮ ಲೇಖನದಲ್ಲಿ ಬಂದು ಬಿಡ್ತಾ ಇತ್ತು ! ಹಾ ಹಾ ಹಾ ..
ನೀವು ' ಅಣ್ಣ' ಎಂದು ಕರೆಯಬಹುದಾದ ವ್ಯಕ್ತಿ ಯಾರಿದ್ದಾರೆ ಈ ಬ್ಲಾಗ್ ಲೋಕದಲ್ಲಿ ಅಂತ ನಾವೂ ಹುಡುಕುತ್ತೇವೆ ಇನ್ನು. ಸಿಕ್ಕ ತಕ್ಷಣ ಖಂಡಿತಾ ತಿಳಿಸುತ್ತೇನೆ .
ಅಂದಹಾಗೆ, ನಿಮಗೊಂದು ತಮಾಷೆ ಹೇಳಲಾ? ನಮ್ಮ ಬಿಲ್ಡಿಂಗ್ ನಲ್ಲಿ ಮೇಲಿನ ಮನೆಯಲ್ಲಿ ಒಬ್ಬರು ಮಹಿಳೆಯಿದ್ದಾರೆ. ಅವರ ವಯಸ್ಸು ೬೫ ರ ಆಸು ಪಾಸು ! ಆಕೆ ನನ್ನ ಯಜಮಾನರಿಗೆ ' ಕಾಕಾ' ಎಂದು ಕರೆಯುತ್ತಾರೆ ! ಅಷ್ಟೇ ಅಲ್ಲ , ಪಕ್ಕದ ಮನೆಯಲ್ಲಿರುವ ಅವರದೇ ವಯಸ್ಸಿನ ಮಹಿಳೆಯನ್ನು ' ಅಜ್ಜಿ ' ಎಂದೇ ಸಂಬೋಧಿಸುತ್ತಾರೆ !! ಇದಕ್ಕೇನಂತೀರಾ? ನೀವೇ
ಬೆಟರ್ ಕಣ್ರೀ ಇನ್ನೂ ಬರೀ ' ಅಣ್ಣಾ' ಅಂತ ಕರೆಸ್ಕೋತಾ ಇದ್ದೀರಾ !
ಇನ್ನೊಂದು ವಿಷಯ ! ನಿಮ್ಮ ಫೋಟೋ ನೋಡಿದ್ದೇನೆ . ಹೀಗಾಗಿ ಫೂಲ್ ಆಗ್ತಿಲ್ಲ !
ಆನಂದ್ ಕಷ್ಟಪಟ್ಟು ಕಾಮೆಂಟೊಸೋ ನೀವು ನನಗೆ ನಷ್ಟ ಮಾಡಬಹುದೇ...>??? ಹಹಹ
ReplyDeleteನಿಮ್ಮ ಆತ್ಮೀಯತೆಗೆ ಮಾರುಹೋದೆ...ಧನ್ಯವಾದ
ನೀಲಿ ಹೂ..ನೀವು ನಕ್ಕು ಸುಮ್ಮನಾದ್ರಿ...ಬಚಾವಾದೆ...!!!
ReplyDeleteದಿಲೀಪ್ ನೀವು ಅಣ್ಣ ಅಂದ್ರೆ ತಡ್ಕೋತೀನಿ...ಜಲನಯನಕ್ಕ..ಅಂತ ಮಾತ್ರ ಹೇಳ್ಬೇಡಿ....
ಸುಪ್ತವರ್ಣಕ್ಕೆ ...ಇನ್ನೊಂದು ವರ್ಣ ಸೇರಿದಂತಾಯಿತು....ಹಹಹ...ಫೋಟೊ ನೋಡಿ ಎಷ್ಟು ಜನ ತಾತ ಅಂತಾರೋ ಅಂತ ಕಾಯ್ತಿದೀನಿ....
ReplyDeleteರಾದೆಯವರೇ, ನನ್ನ ಪ್ರತಿ ಪೋಸ್ಟಿಗೂ ತಪ್ಪದೆ ಪ್ರತಿಕ್ರಿಯೆ ಕೊಡ್ತಾ ಪ್ರೋತ್ಸಾಹಿಸೋ ನಿಮ್ಮಂಥ ಯುವಕರು..tension ದುನಿಯಾದಲ್ಲಿ ಸ್ವಲ್ಪ ಹೊತ್ತು ಖುಷಿಪಟ್ಟರೆ ಅದಕ್ಕಿಂತಾ ದೊಡ್ಡ ಬಹುಮಾನ ಇರಲಾರದು...ಹಹಹಹ
ReplyDeleteಮನಸು ನಿಮ್ಮ ಪ್ರತಿಕ್ರಿಯೆ ನೋಡ್ತಿದ್ದಾಗ ..ನನ್ನ ಏಳನೇ ಕ್ಲಾಸಿನ ಮಿತ್ರ ...(ನಾವು ಸಂಧಿಸಿದ್ದು..1981 ರಲ್ಲಿ..ಅಂದರೆ ೨೮ ವರ್ಷ ಆಗ್ತಾಇದೆ..) ನಮ್ಮ ಅಲ್ಯುಮಿನಿ ಡೈರೆಕ್ಟರಿಯಿಂದ ನನ್ನ ಮೈಲ್ ಐಡಿ ತೆಗೊಂಡು ನನಗೆ ಮೈಲ್ ಮಾಡಿ ಲೋ..ಆಜಾದು (ಎಲ್ಲಯ್ಯ ಜಾದು,...ಏನಪ್ಪಾ ಜಾದು ಅಂತಿದ್ದ)..ನಿನ್ನ ಫೋಟೋ ಕಳ್ಸೋ ವರ್ಷಗಳೇ ಆಯ್ತು ನಿನ್ನ ನೋಡಿ...ಅಂತ ಮೈಲ್ ಮಾಡ್ದ...ತಮಾಷೆ ಮಾಡ್ಬೇಕು ಅನ್ಸಿ ಈ ಬ್ಲಾಗ್ ನಲ್ಲಿ ಹಾಕಿರೋ ಫೋಟೊ ಕಳಿಸಿ ಮಧ್ಯೆ ಇರೋದು ನಾನು..ಎಂದಿದ್ದಕ್ಕೆ...
ReplyDeleteಏನೋ..ಜಾದು..ಹಿಮಾಲಯಕ್ಕೆ ಹೋಗಿದ್ದಾ ಹೇಗೆ..ಗಡ್ಡ ಎಲ್ಲ ನರ್ತೋಗಿ ತಾತ ಆಗಿದ್ದೀಯಲ್ಲೋ..?? ಹಹಹಹ ಅಂತ ಬರೆದ...!!
ನಿಮ್ಮೆಲ್ಲರ ಪ್ರತಿಕ್ರಿಯೆಗಳನ್ನು ಓದ್ತಾ ಮದ್ಯಾನ್ಹದ ಚಾ ಕುಡೀತಿರ್ಬೇಕಾದರೆ...ನಕ್ಕಿದ್ದೇ ನಕ್ಕಿದ್ದು..ನನ್ನ ಚೇಂಬರ್ ಕಡೆ ಚಾ ತರೋ ಬಂಗಾಲಿ ಹುಡುಗ ಸಂಶಯಾಸ್ಪದಗೊಂಡಂತೆ ಹಿಂತಿರುಗಿ ಐದಾರು ಬಾರಿ ನೋಡ್ತಾ ಹೋದ.....ಹಹಹಹ
ಲೋ ತಮ್ಮಾ ಅಜ಼ಾದ,
ReplyDeleteಬಹಳ ಚೆ೦ದ ಬರದಿಯಪ್ಪಾ ನಿನ್ನ ಗಣಮಗನಿ೦ದ ಹೆಣಮಗ್ಳನ್ನ ಮಾಡಿದ ಬ್ಲೊಗರಗಳ ಬಗ್ಗೆ, ನಿನಕಿ೦ತಾ ದೊಡ್ಡೋರು ನಿನ್ನನ್ನ ಅವ್ರಿಗಿ೦ತಾ ದೊಡ್ಡೋನ ಮಾಡಿದ ಬಗ್ಗೆ. ಅದ್ಕಾ ಸಿಟ್ಟಿಗೆದ್ದು ಬರೆದು ಗೊತ್ತಗಲಾರದಾ೦ಗ ಇವ್ರೆಲ್ಲಾರನ್ನು ಯೆಳೆದು ಬೇಷ ಗುದ್ದು ಕೊಟ್ಟಿಯೆಲ್ಲಪಾ-ತಮಾಷಿ ಅ೦ತೇಳಿ ಬರದ ಬ್ಲೊಗನಾಗ. ಅಡ್ಡಿಯಿಲ್ಲ ಬಿಡು. ಹಿ೦ಗ ಬರಕೊ೦ತ ನಮ್ಮನ ನಗಸ್ಕೊ೦ತ ಇರು.
ಇನ್ನ ನಾ ನಿ೦ಗ ಅಣ್ಣ ಅನ್ನಲ್ಲಪ್ಪೋ ತಮ್ಮಾ!.
ಅದ ಖರ್ರೇ ತಮ್ಮಾ, ಕೆಲವ ಪ್ರಶ್ನೇ ತಲ್ಯಾಗ ಹುಳ ಹೊಗಸ್ಯಾವ,
೧. ಫೋಟೊದಾಗಿರೋ ಬಿಳೆ ಗಡ್ಡದ ಮುದುಕ ನೀನನ?
೨. ಅದು ನಿನ ಇದ್ದರ ಕನ್ನಡ ಬ್ಲೊಗಿಗರ ಕೂಟದಾಗಿರೋ ನಿನ್ನ ಪ್ರೋಫ಼್ಯಲ್-ನಾಗಿರೋ ಮಸ್ತ್ ಹುಡುಗನ ಫೋಟೋ ಯಾರ್ದು?
೩. ಜಲನಯನ ಅ೦ಥ ಹೆಸ್ರು ಇಟ್ಟ್ಕೋ೦ಡ್ರ ಹುಡುಗಿ ಅ೦ತಾ ಡೌಟ್ ಬರತದ ಯಾಕ೦ದ್ರ ನಯನ ಹುಡುಗಿ ಹೆಸ್ರಲ್ಲಾ ಅದ್ಕ!
ಅತ್ ಬಿಡು ಉತ್ತರಾ ಕೊಡದೇನು ಬ್ಯಾಡ.
ಇ೦ತಿ
ನಿಮ್ಮಣ್ಣ (ಚಿಗಪ್ಪರ ಅನ್ಕೊ ನ೦ಗೇನೂ ತೊ೦ದ್ರಿ ಇಲ್ಲ)
ಸೀತಾರಾಮ
(ನಿಮ್ಮ ಹಾಸ್ಯಕೊ೦ದಿಷ್ಟು ನನ್ನ ಉತ್ತರ ಕರ್ನಾಟಕದ ಮಸಾಲೆ)
ಈಗ ನೋಡಿ....!!! ಇತ್ತೀಚಿನ ವರದಿ ಪ್ರಕಾರ ಜಲನಯನರನ್ನು ಅಣ್ಣ ಅನ್ನದಿದ್ದರೂ ಭಯ್ಯ ಎನ್ನೋ ಭಯಹುಟ್ಟೊಸೋ ಇನ್ನೊಬ್ಬ follower ನ ಸೇರ್ಪಡೆಯಿಂದ ಮನ ನೊಂದ ಜಲನಯನರು..ಬ್ಲಾಗ್ ಲೋಕದಿಂದ ಸನ್ಯಾಸ ತೆಗೆದುಕೊಳ್ಳಬೇಕು ಎಂದು ನಿರ್ಧರಿಸಿದ್ದಾರೆ...ಇದಕ್ಕೆ ಕಾರಣರಾದ ನೆನಪಿನ ಸಂಚಿಯಿಂದರನ್ನು..ಪರ್ತಕರ್ತರು ಇದನ್ನು ನೀವು ಸಾಧಿಸಿದ್ದು ಹೇಗೆ ಎಂದು ಪ್ರತಿಕ್ರಿಯೆಗೆ ಆಗ್ರಹಿಸುತ್ತಿದ್ದಾರೆ.
ReplyDeleteಸುನಾಥ್ ಸರ್, ಕೋಟಿ..ಕೋಟಿ..ನಮನಗಳು..ನಿಮಗೆ ನಿಮ್ಮ ಪ್ರಾಮಾಣಿಕ ಮಾತಿಗೆ...ಕಾಕ ಅನ್ನೋದಾ..ಛೇ..ನನಗೆ ಮಾಡಿದ್ದನ್ನ ನಾನು ಬೇರೆಯವರ ಮೇಲೆ...ಅದ್ರಲ್ಲೂ..ಗುರುಪ್ರಾಯರಾದ ನಿಮ್ಮ ಮೇಲೆ ...??ಛೆ.ಛೇ..ಶಾಂತಮ್ಮ ..ಪಾಪಮ್ಮ.....!!! ಹಹಹ
ReplyDeleteನಿಮ್ಮನ್ನ ಸರ್ ಅಂತಲೇ ಮುಂದುವರೆಸ್ತೀನಿ...ಓಕೆ......
ಮೂರ್ತಿ...ಇದು ಅತಿಯಾಯ್ತು..ಈ ಸಂಬೋದನೆ ಕಮ್ಮಿಯಾಗಿತ್ತು...ಅಂಕಲ್....!!!!
ReplyDeleteಅಲ್ಲಪ್ಪಾ..ನಿನ್ನ ತರಲೆಗೆ ನಾನೂ ತರಲೆಮಾಡೋದು ಬೇಡ ಅಂತ ನಾಜೂಕು ಪ್ರತಿಕ್ರಿಯೆ ಮಾಡಿದ್ದಕ್ಕೆ ಈ ಶಿಕ್ಷೇನಾ...ಅಂಕಲ್...??!!!
ನ೦ಗೆ "ಸೀತಾರಾಮ" ಐಡಿ ಸಿಗದಿದ್ದಕ್ಕೆ ಗೂಗಲ್ ಕೊಟ್ಟ ಬಿಟ್ಟಿ ಸಲಹೆಯ "ಸಿತಾರ೧೨೩", ಮತ್ತು ಯಾಹೂನವರ "ಸಿತಾರಾ_ಅಮ್" ಐಡಿಗಳನ್ನ- ಇಟ್ಟುಕೊ೦ಡಿದ್ದಕ್ಕೆ ಯಾಹೂ ಚಾಟನಲ್ಲಿ ಹುಡುಗ್ರು ತಲೆ ತಿ೦ದದ್ದು ನೆನಪಾಯಿತು ಅಜ಼ಾದರೇ.
ReplyDeleteಅ೦ದ ಹಾಗೆ ನನ್ನ ಹೆಸರಲ್ಲಿ -ಸೀತಾ, ತಾರಾ, ಸಿತಾರಾ, ರಮಾ, ಹೀಗೆ ಹಲವು ಹುಡುಗೀರ ಹೆಸರಗಳೇ ಇವೇ. ಆದ್ರು ಜನಕ್ಕೆ ಕನ್-ಫ಼್ಯುಸ ಅಗೋಲ್ಲಾ. ಅದ್ರೆ ತಾವು ಅಜ಼ಾದ ಅನ್ನೊ ಹೆಸರಿದ್ರು ಜಲನಯನ ಇಟ್ಟು ಎಲ್ಲರನ್ನ ದಾರಿ ತಪ್ಪಿಸಿದ್ದಿರಾ! ನಾನು ಮೊದಲ ದಿನ ತಮ್ಮನ್ನ ಹುಡುಗಿ ಅನ್ಕೊ೦ಡಿದ್ದೆ ! ಅಮೇಲೆ ಯಾರದೋ ಕಾಮೆ೦ಟಲ್ಲಿ ಅಜ಼ಾದಣ್ಣ ಅ೦ಥಾ ನೋಡಿ ಗ೦ಡು ಅನ್ಕೊ೦ಡೆ.
ತೇಜಸ್ವಿನಿ, ರೆಡಿಯಾಗಿ...ನನ್ನ ಮೊಮ್ಮಗಳಾಗೋಕೆ...ಹಹಹಹ....ತಾತ ಅನ್ನೋದು ಸುಲಭ ಅಣ್ಣ ಅನ್ನೋದಕ್ಕಿಂತಾ.. ಹಹಹಹ...
ReplyDeleteಈ ಫೋಟೋ...ಹಹಹ...ಯಾವುದೋ ವಿಷಯಕ್ಕೆ ವೆಬ್ ನೋಡುವಾಗ..ಹಜ್ ಯತ್ರಾರ್ಥಿಗಳ ಈ ಫೋಟೋ ಸಿಕ್ತು..ಹಾಕಿ..ನೋಡುವಾ ಅನ್ನಿಸ್ತು...ಹಹಹ....
ಮಹೇಶ್ ಮೈದ್ನ...ಹಾಂ ಇದು ಚನ್ನಾಗಿದೆ....ಹಹಹಹ...ಏನಪ್ಪಾ...ಲೈಸೆನ್ಸು ಸಿಕ್ಕಾಯ್ತಲ್ಲ...
ReplyDeleteಮಾಮ..ಯಾಕ ಅಂದಿದ್ದು ಗೊತ್ತಾಯ್ತು...??!! ಶಕುನಿನೂ ಮಾಮನೇ...?? ಕಂಸನೂ ಮಾಮನೇ...ಅಲ್ವಾ,,,??!!
ಹಹಹಹ...
ಚಿತ್ರಾ ತಂಗಿ/ ನಾದಿನಿ/ ಮಗಳೇ/ ಮೊಮ್ಮಗಳೇ....ಒಂದೇ ಕಾಲಕ್ಕೆ ಇಷ್ಟೆಲ್ಲಾ ನಾತುಗಳು..ಅಂದ್ರೆ ಸಂಬಂಧಗಳು...ಗ್ರೇಟ್...!!!!
ReplyDeleteನಾನು ಅಣ್ಣಾ ಕರೆಯೋರು ಸಿಕ್ಕಿದ್ದಾರೆ ಅದರೆ ನಾನು ಅವರನ್ನ ಸರ್ ಅಂತಲೇ ಕರೀತೀನಿ..ಅವ್ರೇ ಸುನಾಥ್ ಸರ್...ಮತ್ತೆ ಅಂಟೀಗಳನ್ನ ಆಂಟೀ ಅಂದ್ರೆ..ಕೋಪ ಬರುತ್ತೆ..ಅಕ್ಕ ಅಂದ್ರೂ...ಅದೇ ದೀದಿ ಅಂದ್ರೆ ಬರೊಲ್ಲ..ಇದ್ಯಾವ ತರಹ?
ಧನ್ಯವಾದ..
ಸೀತಾರಾಮಣ್ಣ..ಸಾರಿ..ಸರ್..ಹೀಂಗಂದ್ರೆ...ಹ್ಯಂಗ್ ರೀ ಸಾರ..?? ನೀವು ನಮ್ ರೆಗುಲರ್ ಫಾಲೋವರ್ರು...ಕ್ವಾಪ ಮಾಡ್ಕಂಡ್ ಹೋದ್ರೆ ಹೆಂಗ್ರಿ...ನಿಮ್ಮ ಹುಳ ನಾ ತಗೀತೀನೆ ಬಿಡ್ರಿ,,..ಹೌದ್ರೀ..ಅದು ನನ್ ಫೋಟೋ ಅಲ್ ಬಿಡ್ರಿ, ಖರೆ ಐತ್ರಿ ..ಬಿಳಿ ಗಡ್ಡದವ ಅವನಜೊತೆ ಇರೋದು...ಹಜ್ ಯತ್ರಿಗಳ್ರಿ....
ReplyDeleteಅಜಾದ್ ಸರ್,
ReplyDeleteನೀವು ಮೊದಲು ನನ್ನ ಬ್ಲಾಗ್ ಗೆ ಕಾಮೆಂಟ್ ಮಾಡಲು ಆಗದೆ, ಮೇಲ್ ಕಳಿಸಿದ್ರಿ ...... ಅದರಲ್ಲಿ ನಿಮ್ಮ ಹೆಸರು ಬಂದಿತ್ತು...... ನನಗೆ ನೀವೇ 'ಜಲನಯನ' ಅಂತ ಗೊತ್ತಿರ್ಲಿಲ್ಲ.... ಒಮ್ಮೆ 'ಜಲನಯನ' ಬ್ಲಾಗ್ ಗೆ ಕಾಮೆಂಟ್ ಮಾಡುವಾಗ ಯಾರೋ 'ಅಜಾದ್ ಸರ್' ಅಂತ ಬರೆದಿದ್ದರು...... ಆವಾಗಲೇ ನನಗೆ ಗೊತ್ತಾಗಿದ್ದು , 'ಜಲನಯನ' ಅಂದ್ರೆ 'ಅಜಾದ್ ಸರ್' ಅಂತ... ಅದಕ್ಕೂ ಮೊದಲು 'ಜಲನಯನ ' 'ಮೇಲೋ' , ' ಫಿಮೆಲೋ' ಗಮನಿಸಿರಲಿಲ್ಲ.....
ದಿನಕರ್, ಈ ಬ್ಲಾಗ್ ಪೋಸ್ಟಿನ ತರಹ ನಾನು actually, ಹಜ್ ಯಾತ್ರಿಗಳು, ಪವಿತ್ರ ಭಾವನೆಗಳು ಧರ್ಮಗಳ ಸಂಗಮ ಆಗುತ್ತೇ ಹೊರತು ಒಂದಕ್ಕೊಂದು ವಿರೋಧವಲ್ಲ ಎಂದು ಹೇಳುವ ಒಂದು ಬ್ಲಾಗ್ ಪೋಸ್ಟ್ ಹಾಕೋದಿತ್ತು, ಅದಕ್ಕೆ ಅಂತ ಹಜ್ ಯಾತ್ರೆಯಲ್ಲಿರೋ ಒಂದು ಕುಟುಂಬದ ಮೂವರು ಹಿರಿಯರ ಫೊಟೊ ಹುಡಿಕಿದ್ದೆ...ಕೊನೆಗೆ ಆದದ್ದು ಈ ಪೋಸ್ಟ್...ಹಹಹಹ....
ReplyDeleteಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ.
ಅಜದ್ ಭೈಯ್ಯಾ , ನಿಮ್ಮನ್ನ female ಅನ್ಕೊಂಡವರಲ್ಲಿ ನಾನು ಒಬ್ಬಳು , ಹಾಗೆ ಮೇಡಂ ಅಂತ ಕರೆದಿದ್ದೆ ಕೂಡ .. :)
ReplyDeleteನಂತರ ಎಲ್ಲರ ಪ್ರೊಫೈಲ್ ನೋಡಿಯೇ ಅನಿಸಿಕೆ ಬರಿಯೋದಕ್ಕೆ ಸ್ಟಾರ್ಟ್ ಮಾಡಿದೆ :)
ಹಾಗೆ ಈ ಫೋಟೋ ? !!!!!!!! :(
ರಂಜು, ಇನ್ನೂ confusionನ್ನಾ ನಿನಗೆ, ಮೇಲೆ..ಯಾರ್ದೋ ಇದೇ ಪ್ರಶ್ನೆಗೆ ಉತ್ತರಕೊಡ್ತಾ ಹೇಳಿದ್ದೇನೆ ನೋಡು...ಹಹಹಹ ಎಲ್ಲಾ ಕನ್ ಫ್ಯೂಸ್ ಆಗ್ತಿದ್ದಾರೆೀ ಫೋಟೋ ನೋಡಿ...ಅಲ್ವಾ...? ನಿನ್ನ ಪ್ರತಿಕ್ರಿಯೆ ಹೀಗೇ ಇರುತ್ತೆ ಅಂತ ನನ್ಗೆ ಗೊತ್ತಿತ್ತು...
ReplyDeleteಆಜಾದ್ ಸರ್,
ReplyDeleteಮೊದಲು ನಾನು ಹೀಗೆ ಕನ್‍ಪ್ಯೂಸ್ ಮಾಡಿಕೊಂಡಿದ್ದೆ ಅಲ್ವಾ...ನಂತರ ನೀವು ಯಾರು ಅಂತ ಗೊತ್ತಾಗಿದ್ದು. ಈಗ ಸದ್ಯ ನಿಮ್ಮ ಚಟುವಟಿಕೆಯನ್ನು ನೋಡಿದರೆ ನೀವು ನಿಮ್ಮ ವಯಸ್ಸಿಗಿಂತ ಹತ್ತು ಹದಿನೈದು ವರ್ಷ ಚಿಕ್ಕವರು ಅಂತ ನನಗೆ ಅನ್ನಿಸ್ತಿದೆ..ಮತ್ತೆ ಈ ಲೇಖನದಲ್ಲಿ ನಿಮ್ಮ ಪೂರ್ತಿ ಇತಿಹಾಸವನ್ನು ಹಾಕಿಬಿಟ್ಟಿದ್ದೀರಿ..
ಪ್ರಹಸನವೂ ಚೆನ್ನಾಗಿದೆ ಅನ್ನಿಸ್ತು...
ಶಿವು, ಬಹಳ ಅಪರೂಪ ಆಗಿಬಿಟ್ರಿ...ಕೆಲಸ ಜಾಸ್ತೀನಾ?
ReplyDeleteಹಹಹಹ...ಈ ದಿನ ನಾನೂ ಮಹೇಶ್ (ಸವಿಗನಸು) ಫೋನಲ್ಲಿ ಈ ಬಗ್ಗೆ ತಮಾಷೆಯಾಗಿ ಮಾತನಾಡಿಕೊಂಡ್ವಿ...ಅವರು ಫೋನ್ ಎತ್ತಿ..ಹಲೋ ತಾತ ಅಮ್ದಿದ್ದಕ್ಕೆ ನಾನು ಏನ್ ಮೊಮ್ಮಗಾ..ಎಂದೆ..ಹಹಹ..ತುಂಬಾ ಖುಷಿಯಾಯ್ತು ಈ ಬ್ಲಾಗ್ ಪೋಷ್ಟ್ ಹಾಕಿ ನನಗೆ...ಇದು ನನ್ನ ಹುಟ್ಟುಹಬ್ಬಕ್ಕೆ ಬ್ಲಾಗ್ ಮಿತ್ರರ ಉಡುಗೊರೆ...
ಹುಹ್..
ReplyDeleteಅಜ್ಜಾ!!!! ನಿಮ್ಮ ಪ್ರಹಸನ ಓದಿ ನಗು ಬಂತು... ನಾನೂ ಮೊದಲು ನೀವು ಆಂಟಿ ( :-)) ಅಂತ ತಿಳ್ಕೊಂಡಿದ್ದೆ... ಈಗ ಗೊತ್ತಾಯಿತು ನೀವು ಅಂಕಲ್ ಅಂತ... :-)
ನಿಮ್ಮ ಸೈನ್ಸ್ ಬ್ಲಾಗ್ ಕೂಡ ಓದಿದೆ.. ತುಂಬಾ ಚೆನ್ನಾಗಿದೆ...
ಗೋರೆ ಹೋ ಕಾಲೆ ಹೋ,ಕ್ಯಾ ನಖ್ರೆ ವಾಲೆ ಹೋ....
ReplyDeleteಹಹಹಹ....ನಮಸ್ತೆ...ಸ್ವಾಗತ ನಿಮಗೆ...
ಅಲ್ಲ ನೀವೊಬ್ಬರೆ ನನ್ನ ಹೆಸರು (ನನ್ನ ಚಿಕ್ಕಂದಿನ ಅಡ್ದ-ಹೆಸರು ಅಂತಾರಲ್ಲಾ...ಅದು...)....ನನ್ನ science ಬ್ಲೊಗ್ ನಲ್ಲಿ ನಾನು constructive comments ಬಯಸ್ತೇನೆ...ದಯಮಾಡಿ ಹಾಕಿ ಹಾಗೂ ನಿಮ್ಮ ಸ್ನೇಹಿತರಿಗೂ ಹೇಳಿ...ನನಗೆ science popularize ಮಾಡ್ಬೇಕು ನಮ್ಮ ನುಡಿ ಮಾಧ್ಯಮದ ಮೂಲಕ ಅಂತ ಆಸೆ.
ಜಲಾನಯನ ಅವರೇ ಇಷ್ಟೆಲ್ಲಾ ಉಪಯೋಗ ಇದೆಯೇ ಬ್ಲಾಗು ಮಾಡೋದರಿಂದ? ಸಾಲು ಸಾಲು ತಂಗಿರು, ತಮ್ಮಂದಿರು... ಬೇಜ್ಜಾನ್ ಆಯಿತು ಬಿಡಿ. ನಿಮ್ಮ ಬುರ್ಜ್ ದುಬೈ ಟವರ್ ಗಿಂತ ದೊಡ್ಡ ಬೇಳಿಲಿ ಅಂತ ಹಾರೈಸುವೆ. :)
ReplyDeleteಬಾಲು ಬಹಳ ಸಮಂಜಸ ಮತ್ತು ಅರ್ಥಪೂರ್ಣ ಪ್ರತಿಕ್ರಿಯೆ ನಿಮ್ಮದು, ಹೌದು ನಿಮ್ಮ ಮಾತು ನಿಜ...ಇಷ್ಟೊಂದು ಭಾವಪೂರ್ಣ ಆತ್ಮೀಯತೆ, ಆಪ್ಯಾಯತೆ, ನಿಮ್ಮೆಲ್ಲರಲ್ಲಿ ಹೆಚ್ಚು ಅಂದರೆ ಇಬ್ಬರನ್ನೇ ನಾನು ಮುಖತಃ ಭೇಟಿ ಆಗಿರುವುದು ಮತ್ತು ನೋಡಿರುವುದು, ವಾಸ್ತವಕ್ಕೆ ಈ ಎಲ್ಲದಕ್ಕೆ ಅವರು ಮುಖ್ಯ ಕಾರಣ, ಅವರೇ ಸವಿಗನಸು ಮತ್ತು ಮನಸು (ಂಅಹೇಶ ಮತ್ತು ಸುಗುಣ)ಬ್ಲಾಗು ಮಿತ್ರರು ನಮ್ಮ ಕುವೈತ್ ಕನ್ನಡ ಕೂಟದ ಆತ್ಮೀಯ ಮಿತ್ರರು. ಅಣ್ಣ, ಭಯ್ಯ, ಕಾಕ, ಅಕ್ಕ, ತಂಗಿ ಹೀಗೆ ನಮ್ಮನಮ್ಮಲ್ಲಿ ಸಂಬೋಧನೆ..ನಿಜಕ್ಕೂ ಒಂದೇ ಕುಟುಂಬ ಎನಿಸುತ್ತದೆ....
ReplyDeleteಆಝಾದ್ ಭಾಯ್...
ReplyDeleteನನ್ನ ಪ್ರೊಫೈಲ್ ಫೋಟೊ ನೋಡಿ
ಒಬ್ಬರು ನನಗೆ "ಮಗು ಬಹ್ಳ ಚೆನ್ನಾಗಿ ಬರಿತೀಯಾ" ಅಂದಿದ್ದರು..!!
ನನ್ನ ಕಾಲೇಜಿನಲ್ಲಿ, ಈ ಬ್ಲಾಗ್ ಲೋಕದಲ್ಲಿ
ಎಲ್ಲರೂ ನನಗೆ "ಪ್ರಕಾಶಣ್ಣ" ಅಂತ ಕರೆದು ಬಿಟ್ಟಿದ್ದಾರೆ..
ಮೊದಲೇ ಸೈಜಿನಲ್ಲಿ ದೊಡ್ಡ ಗಾತ್ರದ ನಾನು ಮತ್ತೂ ಉಬ್ಬಿ ಹೋಗಿದ್ದೇನೆ..
ನೀವು ವಯಸ್ಸಿನಲ್ಲಿ ದೊಡ್ಡವರಾದ್ರೂ..
ಸೈಜಿನಲ್ಲಿ ನಾನು ದೊಡ್ಡವ..
ನೀವೇ ನನಗೆ ಅಣ್ಣ ಅನ್ನಬೇಕಾಗುತ್ತದೆ..
ಚಂದದ ಬರಹ...!!
ಆಝಾದ್ ಸರ್,
ReplyDeleteನಾನು ಮೊದ್ಲಿಂದ್ಲು ನಿಮ್ಮನ್ನ ಸರ್ ಅಂತಾನೇ ಭೋದಿಸುತ್ತಿರುವುದರಿಂದ ನನಗೆ ಸರ್ ಅನ್ನೋದೇ ಸರಿ ಅನ್ಸತ್ತೆ. ಹಾಗೆನೇ ಆ ಭಾವಚಿತ್ರದಲ್ಲಿ ಎಡಗಡೆಯಿಂದ ಮೊದಲನೆಯವರು ನೀವು (ಅಂದ್ರೆ ಗಡ್ಡ ಇಲ್ದೆ ಇರುವವರು)
ಚಿತ್ರ
This comment has been removed by the author.
ReplyDeleteಪ್ರಕಾಶ್, ಕೆಲಸದ ಒತ್ತಡದಲ್ಲೂ ಬ್ಲಾಗಿಗೆ ಭೇಟಿಕೊಟ್ಟು ಪ್ರತಿಕ್ರಿಯೆ ನೀಡಿದ್ದೀರಿ ..ಥ್ಯಾಂಕ್ಸ್..
ReplyDeleteಹೌದು ನನ್ನ ಈ ಬ್ಲಾಗ್ ಲೇಖನದಿಂದ ಹಲವಾರು ಸ್ನೇಹಿತರು ತಮ್ಮ ಅನಿಸಿಕೆಗಳನ್ನ ಹೇಳ್ಕೊಂಡಿದ್ದಾರೆ...ನಿಮ್ಮ ಮಗು ಅಂದಿದ್ದು ನಿಮ್ಮ ಗಾತ್ರನ ಇನ್ನೂ ಹೆಚ್ಚಿಸಿದ ಹಾಗೆ ನನ್ನನ್ನ ಮೇಡಂ ಅಂದೋರು ತಮ್ಮ ಗಾತ್ರಾನ ಹೆಚ್ಚಿಸಿಕೊಂಡ್ರು ಅಂದ್ಕೋತೀನಿ....ಹಹಹಹ
ಅಂದಹಾಗೆ...ಎಲ್ಲಾದರೂ ಉಂಟೇ...?? ನನಗೆ ನನ್ನ ಅನುಭವದ ಬಗ್ಗೆ ಹೆಮ್ಮೆಯಿದೆ...(ವಯಸ್ಸು ಅನುಭವಕ್ಕಿಂತ ಚಿಕ್ಕದು...ಗಾದೇನೇ ಇಲ್ವಾ??), ಮತ್ತೆ ಮಹಾಭಾರತದಲ್ಲಿ ಧರ್ಮಜ ಭೀಮನಿಗಿಂತ ಗಾತ್ರದಲ್ಲಿ ..ಖಂಡಿತ ಕಿರಿಯ...ಹಾಗಂತ ಭೀಮನ್ನ ಅಣ್ಣ ಅಂತ ಕರೆದರೆ ಹೇಗಾಗುತ್ತೆ..??
ಚಿತ್ರಾ, ಧನ್ಯವಾದ ಅಂತೂ ಬಂದ್ರಲ್ಲಾ...ನಿಮ್ಮಂತಹ ಕನ್ನಡಪರ ಮತ್ತು ಮಾನವತೆಪರ ಕಾಳಜಿಯ ಬ್ಲಾಗಿಗರು ಹೆಚ್ಚು ಬರಿಯಬೇಕು..ನಿಮ್ಮ ಭೋಪಾಲ್ ದುರಂತದ ಮೆಲುಕು ಲೇಖನ ..ಚನ್ನಾಗಿದೆ..ಹೌದು ಮುಂಚಿನಿಂದ ನೀವು ಸರ್ ಎನ್ನುತ್ತಿದ್ದಿರಿ..ಅದು ವಯಸ್ಸಿಗಲ್ಲ ಅನುಭವ ಮತ್ತು ಹುದ್ದೆಗೆ ನೀಡುವ ಗೌರವ ಹಾಗಾಗಿ ನಿಮ್ಗೆ No confusion...ಹಹಹಹ
ReplyDeleteಹಾಯ್
ReplyDeleteಹೇಗಿದ್ದೀರ ಸರ್
ಚೆನ್ನಾಗಿದೆ ನಿಮ್ಮ ಜಲಾನಯನದ ವಿಷಯ ಹಾಗು ಮತ್ತೆ ಆರ್ಕುಟ್ ನಲ್ಲಿ ಎಷ್ಟೂ ಹುಡುಗರು ಹುಡುಗಿಯರ ಹೆಸರನ್ನು ಇಟ್ಟುಕೊಂಡು ಚಾಟ್ ಮಾಡ್ತಾ ಇರುತ್ತಾರೆ . ಹಾಗೆ ನಿಮ್ಮನ್ನು ಮೇಡಂ ಸರಿಯಾಗಿ ಅರ್ಥ ಮಾಡಿಕೊಳ್ಳದೆ ಏನೂ ಹಾಗೆ (ಮೇಡಂ) ಕರೆದಿದ್ದಾರೆ .
ಸರ್ ನಾನು ಬ್ಲಾಗ್ ರಚಿಸಿಲ್ಲ ನನಗೆ ಗೊತ್ತಾಗುತ್ತಿಲ್ಲ ನೀವೇ ಹೇಳಿ ಕೊಡಬೇಕು ಸರ್ , ಮತ್ತೆ ನಾನು ನೆನ್ನೆ ಊರಿನಿದ ಬಂದಿದ್ದೇನೆ .
ನಿನ್ನೆ ನಿಮ್ಮ ಪ್ರೊಫ಼್ಯಲ್ ನೋಡಿದೆ. ತಮ್ಮ ವಯಸ್ಸು ೫೦ ಎ೦ದಿದೆ. ಅದು ಸರಿ ಇದ್ರೆ ನಾನು ನಿ೦ಗೆ ಅಣ್ಣ ಅ೦ದಿದ್ದು ಸರಿ ಏಕೇ೦ದ್ರೆ ನ೦ದು ೪೩ ಹೆ! ಹೆ!
ReplyDeleteಸೀತಾರಾಂ ಸರ್....ನನ್ನ ಅಭ್ಯಂತರ ಏನೂ ಇಲ್ಲ ತಮ್ಮಯ್ಯ...ಇಲ್ಲಿ ಸಂಬಂಧ ಕೊಟ್ಟು ಹತ್ತಿರ ಮಾಡ್ಕೋಳ್ಳು ಇರುವಾಗ ನಾನ್ಯಾಕೆ ಬೇಡಾಅನ್ಲಿ...
ReplyDeleteಶೋಭಾ..ಧನ್ಯವಾದ...ಆಸಕ್ತಿಯಿಂದ ನನ್ನ ಬ್ಲ್ಲಗಿಗೆ ಬಂದಿದ್ದೀರಿ ..ಸಂತೋಷ.
ReplyDeleteAzad sir....tumba chennagide baraha...comment galoo kooda tumba chennagive..nakku nakku kanneeru bantu namge..
ReplyDeleteಆಜಾದ್ ಸರ್, ನನ್ನ ಬ್ಲಾಗ್‍ಅಲ್ಲಿ ನನ್ನ ಹೆಸರು ದೀಪಸ್ಮಿತಾ ಅಂತ ಇರುವುದು ಕೂಡ ಅನೇಕರಿಗ ನಾನು ಗಂಡೋ ಹೆಣ್ಣೋ ಎಂದು ಗೊತ್ತಾಗಿರಲಿಲ್ಲ. ಈಗ ಗೊತ್ತಾಗಿದೆ ಬಿಡಿ. ಚೆನ್ನಾಗಿದೆ ನಿಮ್ಮ ಬ್ಲಾಗ್ ಅನುಭವ
ReplyDeleteha ha ha.... ನಕ್ಕು ನಕ್ಕು ಸುಸ್ತು ಆಯಿತು ಅಜಾದಣ್ಣ...ನಾನು ನಿಮ್ಮ ತಮ್ಮ೦ದಿರ ಪಟ್ಟಿಗೆ ಹೊಸ ಸೇರ್ಪಡೆ :)
ReplyDeleteನಿಮ್ಮ ಧರ್ಮ ಸಂಕಟ ನೋಡಿ ತುಂಬಾ ನಗು ಬರ್ತಿದೆ..ನಾನು ಅಣ್ಣ, ಬಯ್ಯ, ಕಾಕ ಆನ್ನಲ್ಲ..ಗುರುಗಳೇ ಅಂತ ಹೇಳ್ಲ..ಏನಂತೀರ..
ReplyDeleteChetana thanks...ninna blog illadiddaroo neenu nanna blo ge comment haakideyalla...santosha..
ReplyDeleteಎಂಜಿನೀಯರ್ ಸಾಹೇಬ್ರೆ ನಿಮ್ಮ ಮಾತು ನಿಜ...ಆದ್ರೆ ಪ್ರೊಫೈಲ್ ನಲ್ಲಿ ಏನೂ ಸಿಗದಿದ್ರೆ ಕಷ್ಟ ಕಂಡುಕೊಳ್ಳೋದು ಅಲ್ಲ್ವೇ...? ಥ್ಯಾನ್ಕ್ಸ್
ReplyDeleteಸುಧೇಶ್ ನಿನ್ನ ಕೋರಿಕೆ ಮತ್ತು ವನಿತಾ ನಿಮ್ಮ ಕೋರಿಕೆ ಎರಡನ್ನೂ ಅನುಮೋದಿಸುತ್ತೇನೆ,,,,ನಿಮ್ಮ ಸಂತೋಷವೇ ನನ್ನ ಸಂತೋಷ
ReplyDeleteಆಜಾದ್ ಸಾರ್, ಬ್ಲಾಗ್ ಪಾರಂಭದ ಮುನ್ನುಡಿಯಂತಹ ಈ ಬರಹ ನನಗೆ ಖುಷಿ ತಂದಿತು.
ReplyDeleteಈಗಂತೂ ನಿಮ್ಮದು ಆಜಾದ್ ಪಡೆ ಜೊತೆಗೆ ಪದಾರ್ಥ ಚಿಂತಾಮಣಿಯ ಕೈಂಕರ್ಯ.
ಸದಾ ಚಟುವಟಿಕೆಯೇ ನಿಮ್ಮ ಅಡ್ಡ ಹೆಸರು. ಇದಕ್ಕೆಲ್ಲ ಸಮಯ, ಮೂಲ ಶಕ್ತಿ ಮತ್ತು ಚಿಂತನೆ ನೀವು ಹೊಂದಿಸಿಕೊಳ್ಳುತ್ತಿರುವುದು ನಮಗೆಲ್ಲ ಅಚ್ಚರಿ.
ನಿಮ್ಮ ಜೊತೆ ಹಿಂಬಾಲಿಸುತ್ತಿದ್ದೇವೆ ಎನ್ನುವ ಹೆಮ್ಮೆಯೇ ನಮ್ಮನ್ನು ಉಬ್ಬಿಸುತ್ತಿದೆ, ಬರೆಯಲು ಪ್ರೇರೇಪಿಸುತ್ತಿದೆ.
ನೀರಿನಲ್ಲಿ ಈಜುವ ಮೀನನ್ನು ನೋಡಿ ಗುರುತಿಸುವುದು...ಹೇಗೆ ಕಷ್ಟವೋ ಹಾಗೆ ಅಗೋಚರ ಅಂತರ್ಜಾಲದಲ್ಲಿ ಕೂಡ...
ReplyDeleteನಿಮ್ಮ ಸುಲಲಿತ ಬರವಣಿಗೆ..ಚಿಕ್ಕ ಚಿಕ್ಕ ವಿಷಯವನ್ನು ಪ್ರಹಸನ ಮಾಡಿ ನಗಿಸುವ ನಿಮ್ಮ ಬರವಣಿಗೆ..ದಿನದ ಬಾಟಮ್ ಪಂಚ್, ಅಮೂಲ್ಯ ಶ್ಯಮಂತಕ ಮಣಿ..ಅಂದ್ರೆ ಪದಗಳ ಅರ್ಥ ತುಂಬಿರುವ ಚಿಂತಾಮಣಿ..ಎಲ್ಲವು ಸೊಗಸು..ಮಿಗಿಲಾಗಿ ಒಳ್ಳೆಯ ಸ್ನೇಹದ ತುಡಿತ ಇರುವ ನಿಮ್ಮ ಹಿಂಬಾಲಕರಾಗಿರುವುದು ನಮ್ಮ ಭಾಗ್ಯವೇ ಸರಿ...ಇದು ಹೊಗಳಿಕೆಯಲ್ಲ..ಮೀನು ಈಜುವಿಕೆ ಹಾಗು ಹೊಗಳಿಕೆ ಎರಡು ಸಹಜ ಧರ್ಮ...
ಜಲನಯನ ಮೇಡಮ್...
ReplyDeleteಆಜಾದ್ ಅಕ್ಕಯ್ಯ...
ಹ್ಹಾ ಹ್ಹಾ .....
ಬೆಳಿಗ್ಗೆ ಬೆಳಿಗ್ಗೆ ನಗಸ್ತಾ ಇದ್ದಿಯಲ್ಲೋ...
ಹಳೆಯದೆಲ್ಲ ನೆನಪಾಗಿ ತುಂಬಾ ಖುಷಿ ಕೊಡ್ತು... ಜೈ ಹೋ !!