Friday, December 4, 2009

ಹೊಸ ಪ್ರಯೋಗ



(Pic: Shivu images)

ಸ್ನೇಹಿತರೇ ಒಂದು ಹೊಸ ಪ್ರಯತ್ನಕ್ಕೆ ಕೈಹಾಕಿದ್ದೇನೆ...ನಿಮ್ಮ ವಿಮರ್ಶೆಗೆ ಸ್ವಾಗತ

Probelms
ಜನನ ಮನನ
ಜಂಜಾಟ -traffic problem
ತನನ ಮದನ
ಗುಂಜಾಟ- Romance problems
ಹನನ ಸದನ
ಗುದ್ದಾಟ- Property problem
ಹವನ ಕದನ
ಜಿದ್ದಾಟ - Province problems

Feelings
ಕಲೆತು ಬೆರೆತು
ಕುಣಿದಾಟ - feel of playing
ಕಲಿತು ಅರಿತು
ಕಲಿವಾಟ - feel of learning
ಬಲಿತು ಜಾರಿತು
ಬೆಳೆವಾಟ - feel of growing
ಅರಿತು ಸಾರಿತು
ತಿಳಿಸುವಾಟ - feel of informing
ತೋರಿತು ಮಾರಿತು
ಮಾರಾಟದಾಟ -feel of selling


My views
ಅಕ್ಕ ಭಾವ
ಪಕ್ಕ ಪಕ್ಕ- my favourites
ನೀನು ನಾನು
ಹಳ್ಳಿ ಮುಕ್ಕ -my mistakes
ಜೇನು ಬೋನು
ಸಿಕ್ಕ ಠಕ್ಕ - my confusions
ಸರ ಬೇಸರ
ಅಲ್ಲೇ ಸಿಕ್ಕ - my foolishness
ಕುರ್ಚಿ ಮರ್ಜಿ
ಅಲ್ಲಿದೆ ರೊಕ್ಕ - my passions
ಗಣಿ ಧಣಿ
ಇಲ್ಲ ಮಣ್ಮುಕ್ಕ - my miss mess

42 comments:

  1. ಜಲನಯನ,
    ಹಲಸಿನ ಹಣ್ಣಿನಿಂದ ತೊಳೆಯನ್ನು ಬಿಡಿಸಿ ಅಸ್ವಾದಿಸುವಂತೆ, ಈ ನಿಮ್ಮ ಕವನಗಳಿವೆ.
    ಅರ್ಥವಾಗುತ್ತ ಹೋದಂತೆ ರುಚಿ ಹಚ್ಚಾಗುತ್ತಿದೆ.

    ReplyDelete
  2. ಸುನಾಥ್ ಸರ್, ಧನ್ಯವಾದ ನಿಮ್ಮ ಆಶೀರ್ವಚನಕ್ಕೆ...
    ಅಂದಹಾಗೆ..ನಾನು ಪ್ರಾರಂಭಿಸಿದ್ದು ..ಒಂದು ಪದದ ಪುನರ್ಪ್ರಯೋಗ ಒಂದೇ ಅಕ್ಷರವನ್ನು ಬದಲಾಯಿಸಿ ಮಾಡಿ ಅದ್ರಿಂದ ಕವನ ಸಾಧ್ಯವೋ ನೋಡಿದೆ...ಆದರೆ...ಭಾಷೆಯಮೇಲೆ ಅಥವಾ ಪದಗಳಮೇಲೆ ಅಂತಹ ಪಾಂಡಿತ್ಯ ಇಲ್ಲ ಭಾವನೆ ಬರುತ್ತೆ..ಶಬ್ದ ಕೈಕೊಡುತ್ತೆ......
    ಉದಾಹರಣೆಗೆ
    ಸವಿ-ಸತಿ
    ಇತಿ-ಮಿತಿ
    ಇಲ್ಲಿ ಸವಿ ಅಥ್ವಾ ಸ್ವೀಟ್ ಇತಿ ಮಿತಿಯಲ್ಲಿದ್ದರೇ ಚೆನ್ನ..ಹಾಹೇ ಸತಿ-ಇತಿಮಿತಿಯಲ್ಲಿದ್ದರೇ ಹಿತ ...ಇದೇ ತರಹ....ಬಹುಶಃ ನಿಮ್ಮಂತಹ ಭಾಷಾ ಪಂಡಿತರು ಇದನ್ನು ಸಾಧ್ಯಮಾಡಬಹುದು.

    ReplyDelete
  3. ಸರ್,
    ಇದೇನು ಹೊಸ ಪ್ರಯೋಗ ತುಂಬಾ ಮುದವಾಗಿದೆ
    ಹಾಸ್ಯ ಕವಿ ಆಗಿಬಿಟ್ರಿ
    ತುಂಬಾ ನಗು ಬಂತು ಓದಿ

    ಚೆನ್ನಾಗಿದೆ ಪ್ರಯೋಗ

    ReplyDelete
  4. ನಿಮ್ಮ ಹೊಸ ಪ್ರಯತ್ನ ಚನ್ನಾಗಿದೆ. :)

    ReplyDelete
  5. ಗುರು, ಇದು ನನ್ನ ಮನಸ್ಸಿನ ಗೂಡಿನಲ್ಲಿ ಬಹಳ ದಿನಗಳಿಂದ ಕಾವುಪಡೆಯುತ್ತಿದ್ದ ವಿಷಯ...ಹಾಸ್ಯ ಮತ್ತು ಲಾಸ್ಯ ನನ್ನ ಇಷ್ಟದ ವಿಷಯಗಳು ಅದಕ್ಕೀ ಮೊದಲ ಪ್ರಯತ್ನ ಆ ದಿಕ್ಕಿನಲ್ಲಿ, ಧನ್ಯವಾದ.

    ReplyDelete
  6. ಶಿವಪ್ರಕಾಶ್...ನನ್ನಿ ನಿಮ್ಮ ಪ್ರತಿಕ್ರಿಯೆಗೆ...ಏಕತಾನತೆ ಏಕೆ ಎಂದೇ ಈ ಪ್ರಯೋಗ...ನಿಮಗೆ ಇಷ್ಟವಾದುದ್ದಕ್ಕೆ ಧನ್ಯವಾದ

    ReplyDelete
  7. ನಿಮ್ಮ ಹೊಸ ಪ್ರಯೋಗಕ್ಕೆ ಜಯವಾಗಲಿ ಜಲನಯನ ಸರ್..

    ReplyDelete
  8. ಅಜಾದ್ ಸರ್,
    ಹೊಸ ಪ್ರಯತ್ನ..... ಉತ್ತಮವಾಗಿದೆ... ಪದಗಳ ಜೊತೆಗೆ ಆಟ.....

    ReplyDelete
  9. ವಿಜಯಶ್ರೀ, ಹೊಸ ಪ್ರಯೋಗಕ್ಕೆ ಪ್ರತಿಕ್ರಿಯೆಗೆ ನಮನ

    ReplyDelete
  10. ದಿಲೀಪ್ ಹೆಗಡೆಯ ಐವತ್ತೈದು ಪದಗಳ ಕಥೆ ಥರ...
    ದಿನಕರ್ ಏನಾದರೂ ನಿಮ್ಮ ಸಲಹೆ ಇದ್ದರೆ ಖಂಡಿತಾ ತಿಳಿಸಿ...

    ReplyDelete
  11. ಅಜಾದ್ ಸರ್,

    ಕನ್ನಡ ಇಂಗ್ಲೀಷ್ ಪದಗಳ ಪ್ರಯೋಗ ಚೆನ್ನಾಗಿದೆ..ಕವನದಲ್ಲಿ ಬಳಸಿರುವ ಪದಗಳು ಹೊಸತರವೆನಿಸುತ್ತೆ...

    ReplyDelete
  12. ಜಲನಯನ ಸರ್, ಮೊದಲ ಓದುವಿಕೆಯಲ್ಲಿ ಏನು ಅರ್ಥನೇ ಆಗ್ಲಿಲ್ಲ :( ಮತ್ತೆ ಮತ್ತೆ ಓದಬೇಕೇನೋ!! ಓಟ್ನಲ್ಲಿ ಪದಗಳ ಜೊತೆಗಿನ ಆಟ ಚೆನ್ನಾಗಿದೆ!
    best wishes for the initiation to write in a 'new style'!

    ReplyDelete
  13. ಜಲನಯನ,
    ಹೊಸ ಪ್ರಯತ್ನ ತುಂಬಾ ಚೆನ್ನಾಗಿದೆ.. ಮೊದಲೆರಡು ಪದ ಸೇರಿಸಿ ಮೂರನೇ ಪದ ಬರ್ದಿದ್ದಿರಲ್ಲ ಅದು ಸೂಪರ್...!
    ನಿಮ್ಮವ,
    ರಾಘು.

    ReplyDelete
  14. ಶಿವು, ಬಹಳಷ್ಟು ಕಡಿಮೆ ಪದ ಅಂದರೆ..ಓದುಗನ ಬುದ್ಧಿಗೆ ಕಸರತ್ತು...ಇದು ನನ್ನ ಮನದಾಳದಲ್ಲಿತ್ತು ಬಹಳ ಕಾಲದಿಂದ...ಸ್ವಲ್ಪ ಪದಗಳ ಜೂಜಾಟ ಸರಿಯಾದರೆ ..ಬೊಂಬಾಟ...

    ReplyDelete
  15. ಸುಮನ ಮೇಡಂ..ಹೌದು..ಒಂದೆರಡು ಬಾರಿ ಓದಿದರೆ..ಆ ಸರ್ಣಿ ಮನಸ್ಸಿಗೆ ಬರುತ್ತೆ ಅಂತ ಅಂದ್ಕೊಂಡು ಬರೆದೆ..
    ಉದಾಹರಣೆಗೆ: ಜನನ ಮನನ -ಜಂಜಾಟ (traffic problem) ಜನನ- ಹುಟ್ಟಿಗೆ..ಹುಟ್ಟು.ಎಷ್ಟಾಯಿತೆಂದು ಮನನ ವಾಗುವ ಹೊತ್ತಿಗೆ ಮಾನವನಿಗೆ ಅರಿವಾದದ್ದು ಜನನ ಪ್ರಕ್ರಿಯೆ ಅತಿಯಾಗಿ ಜನಸಂಖ್ಯೆ ಹೆಚ್ಚಾಗಿ..ಜನ-ಜನದಾಟ..ಜಂಜಾಟ,,,ಅಂದರೆ...ಎಲ್ಲ ರೀತಿಯ ಘರ್ಷಣೆಗಳು..ಮತ ಕಲಹಗಳು...ಅದನ್ನ್ನು ಟ್ರಾಫಿಕ್ ಎಂದಿದ್ದೇನೆ.....ನಿಮ್ಮ ಪ್ರತಿಕ್ರಿಯೆ ಹೀಗೇ ಬರಲಿ..ಧನ್ಯವಾದ

    ReplyDelete
  16. ರಾಘು, ಧನ್ಯವಾದ...ಒಮ್ಮೆಗೆ ಒಂದೇ ಅಕ್ಷರವನ್ನು ಬದಲಾಯಿಸಿ ಕವನ ರಚಿಸಲು ಪ್ರಯತ್ನ ಮಾಡಬೇಕೆಂದಿದ್ದೇನೆ...ಅದರ ಮೊದಲ ಪಾಠವೇ ಇದು...ಆದರೆ ಇದಕ್ಕೆ ಪದಗಳ ಅರಿವು ತುಂಬಾ ಬೇಕು..ಪ್ರಯತ್ನಿಸುತ್ತೇನೆ ಮುಂದೆ ಒಮ್ಮೆ...

    ReplyDelete
  17. ತಾತಾ......*?*!

    ಎಲ್ಲಿ ನೋಡ್ತಾ ಇದ್ದೀರಾ ಆಜಾದ್ ಸರ್, ನಿಮ್ಮನ್ನೇ ನಾನು ತಾತ ಅಂತ ಕರೆದದ್ದು!
    ನಿಮ್ಮ ಹಿಂದಿನ ಲೇಖನ ಮತ್ತು ನಿಮ್ಮ ಫೋಟೋ ನೋಡಿ ನಿಮ್ಮನ್ನ ಹಾಗೆ ಚುಡಾಯಿಸಬೇಕು ಅನ್ನಿಸಿತು ಅಷ್ಟೇ!
    ತಪ್ಪು ತಿಳಿಯಬೇಡಿ, ನಿಮ್ಮನ್ನು ತಾತ ಎಂದು ಕರೆಯುವಷ್ಟು ಚಿಕ್ಕವಳಲ್ಲ ನಾನು. (ನಾನು ಸಹ ಪ್ರೊಫೈಲ್ ನಲ್ಲಿ ನಿಮ್ಮ ಏಜ್ ಅನ್ನು ಗಮನಿಸಿದ್ದೆ :) )

    ಬ್ಲಾಗ್ ಬಳಗಕ್ಕೆ ಭೇಟಿ ನೀಡಿ ಒಂದು ತಿಂಗಳಾಯಿತು! ಹೀಗೆ ಏನೋ ಬಿಜಿ, ಲೈಫಿನಲ್ಲಿ ಗಜಿಬಿಜಿ (ಸುಮ್ಮನೆ ಪ್ರಾಸಕ್ಕೆ ಹಾಗೆ ಬರೆದೆ).
    ನಿಮ್ಮನ್ನೆಲ್ಲಾ ಮಿಸ್ ಮಾಡಿಕೊಂಡೆ. ನೀವೆಲ್ಲಾ ನನ್ನ ಮರೆತಿಲ್ಲಾ ತಾನೇ?
    ತುಂಬಾ ದಿನ ಆದ್ಮೇಲೆ, ಈಗ ಬಂದು ತಾತ ಗೀತ ಅಂತೆಲ್ಲಾ ಅಂತಿದೀನಿ ಅಂತ ಬೈಕೋಬೇಡಿ ಮತ್ತೆ.
    ಸುಮ್ನೆ ತಮಾಷೆಗೆ, ತಪ್ಪಾಗಿದ್ರೆ ಕ್ಷಮಿಸ್ಬಿಡಿ ಆಯಿತಾ? ಆದ್ರೆ ನಂಜೊತೆ ಟೂ ಮಾತ್ರ ಬಿಡಬೇಡಿ ಸರಿನಾ.....!

    ಮತ್ತೆ ಇನ್ನೊಂದು ವಿಷ್ಯ! ಅದೇನೆಂದರೆ, ನೀವು ನಮ್ಮೆಲ್ಲರ ಪಾಲಿಗೆ ಸಿಕ್ಕಿರುವ ಮತ್ತೊಬ್ಬ ಕವಿ "ನಿಸಾರ್ ಅಹಮದ್ " ಅಂತ ಹೇಳೋಕೆ ಇಷ್ಟಪಡ್ತೀನಿ.
    ನಿಮ್ಮ ಕವನಗಳು ಚಿಕ್ಕವಾದ್ರು ಚೊಕ್ಕವಾಗಿ ಚೆನ್ನಾಗಿರ್ತಾವೆ ಅದಕ್ಕೆ. ಓಕೆ ನಾ......!?!

    ReplyDelete
  18. ಭೈಯ್ಯಾ ಹೊಸ ಪ್ರಯೋಗ ಸೂಪರ್ .. ಹೀಗೆ ನಿಮ್ಮ ಪ್ರಯೋಗದಲ್ಲಿ ಬದಲಿಸೋದು ಒಂದೇ ಪದವಾದರು .. ಅರ್ಥಗಳು ಹಲವಾರು ತುಂಬಾ ಚೆನ್ನಾಗಿದೆ :) ಹೀಗೆ ಬರ್ತಾ ಇರಲಿ ಪ್ರಯೋಗಗಳು :)

    ReplyDelete
  19. ಪದಗಳ ಜೊತೆ ಆಟವಾಡುತ್ತ ಹೊಸ ಅರ್ಥ ಹೊಮ್ಮಿಸುವುದರಲ್ಲಿ ಯಶಸ್ವಿಯಾಗಿದ್ದಿರಿ. ಚೆನ್ನಾಗಿವೆ.

    ReplyDelete
  20. swalpa klishtavaagide.
    nammanthaa pamarara talege swalp gojalu enisuttide.

    ReplyDelete
  21. ಅಲ್ಲಾ ಎಸ್ಸೆಸ್ಕೇ ಮೊಮ್ಮಗಳೇ .....ಹಹಹಹ....(ನೀವು promotion ಕೊಟ್ರೆ ಖುಷೀನೇ ಅಲ್ವಾ...ನನ್ನ ಮಗಳಿಗೂ ಪ್ರೊಮೋಷನ್ ನನ್ನವಳಿಗೂ..ಒಂದೇ ಸಂಬೋಧನೆಯಲ್ಲಿ ಮೂರು ಮೂರು promotions) ...!!!! ನನೂ ತಮಾಶೆ ಮಾಡ್ದೆ...
    ನಿಮ್ಮ ಬ್ಲಾಗಲ್ಲೂ ನಿಮ್ಮ ಅಕ್ಕ ತಂಗಿಯರ ಮಿಲನದ ಮೊದಲ ಕಂತಿಗೆ ಈಗಲೇ ನಾನೂ ನನ್ನ ಕಾಮೆಂಟ್ ಹಾಕಿದ್ದು.
    ನಿಮ್ಮನ್ನ ಮರೆಯೋದೇ...ಪ್ರತಿಕ್ರಿಯೆ ಮತ್ತು ನನ್ನ ಬ್ಲಾಗ್ ಲಿಸ್ಟ್ ನೋಡುವಾಗಲೆಲ್ಲಾ.. ನೆನಪಾಗ್ತೀರ.
    ನಿಸಾರ್ ಕನ್ನಡದ ಮೀರ್ - ಎಂದೇ ನನ್ನ ಎಣಿಕೆ.....ಉರ್ದು ಸಾಹಿತ್ಯದಲ್ಲಿ ಮೀರ್, ಘಾಲಿಬ್ ಹೆಸರಾಂತರು...
    ಅವರ ಕವನ - ವನ ಸಂಪತ್ತಿನಲ್ಲಿ ಒಂದು ಎಲೆಗೆ ಸಮನಾದರೂ ನಾನು ಧನ್ಯ...ನಿಮ್ಮ ಅತ್ಮೀಯತೆಗೆ ಧನ್ಯವಾದ.

    ReplyDelete
  22. ರಂಜು, ನಿನ್ನನ್ನು ನನ್ನ ಹೊಸ ಪ್ರಯೋಗ ರಂಜಿಸ್ತು ಅಂದ್ರೆ ಅದಕ್ಕಿಂತಾ ಸಂತೋಷ ಬೇರೆ ಏನು..?? ನಿನ್ನ ಪುಟ್ಟ ಅದ್ರೂ ಮಹತ್ತರ ಪ್ರತಿಕ್ರಿಯೆಗೆ ಧನ್ಯವಾದ...

    ReplyDelete
  23. ಪರಾಂಜಪೆಯವರೇ..ಇದೊಂದು ಸಣ್ಣ ತುಂಟಾಟ ಅಷ್ಟೇ....ಕವನ ಸಾಹಿತ್ಯಲೋಕದ ಮಕ್ಕಳು ಇನ್ನೇನು ಮಾಡುತ್ವೆ...ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದ

    ReplyDelete
  24. ಸೀತಾರಾಂ ಸರ್, ನಿಮ್ಮನ್ನ ಕಂಡು ಹಿಡಿಯೋದೂ ಕಷ್ಟ ಆಗ್ತಿದೆ...ಮತ್ತೆ ನಿಮ್ಮ ಐಕಾನ್ ಬದಲಾಗಿದೆ ಅದಕ್ಕೆ.... ಅರ್ಥವಾಗದ ಅಸಂಬದ್ಧ ಅನಿಸುತ್ತದೆಯೇ..?? ದಯಮಾಡಿ ತಿಳಿಸಿ...ನನ್ನ ಇತರ ಮಿತ್ರರು ..ಸೌಜನ್ಯಕ್ಕೆ ತಿಳಿಸುತ್ತಿಲ್ಲವೇ...??

    ReplyDelete
  25. ಸರ್,
    ನೆನ್ನೆ ನಿಮ್ಮ ಬ್ಲಾಗಿಗೆ ಕಾಮೆಂಟ್ ಹಾಕಲು ಪ್ರಯತ್ನಿಸಿ ಹಾಕಲಾಗಲಿಲ್ಲ .. ಸುಮ್ಮನಾದೆ... ತುಂಬಾ ಚೆನ್ನಾಗಿದೆ ಹೊಸಪ್ರಯತ್ನ..ಹೊಸತನದಲ್ಲಿ ವಿವಿಧ ರೂಪಗಳಿವೆ.. ಇಷ್ಟವಾಯಿತು... ಮುಂದುವರಿಸಿ.

    ReplyDelete
  26. ಮನಸು ಮೇಡಂ, ಹಟಬಿಡದ ಶತವಿಕ್ರಮನ ಬ್ಲಾಗ್ ಕಥೆ ನೆನಪಾಯಿತು....ಅಂತೂ ಕಾಮೇಂಟ್ ಹಾಕಿದ್ದೀರಲ್ಲಾ...ಮಹೇಶ್ ಸಹ ಇದೇ ರೀತಿ ಹೇಳ್ತಿದ್ದರು...ಬಹುಶಃ ನೆಟ್ ತೊಂದರೆ ಇದ್ದಿರಬಹುದು...ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ.

    ReplyDelete
  27. ಪ್ರಯತ್ನ ವಿನೂತನ ಹಾಗೂ ಅಭಿನ೦ದನೀಯ. ಎಕತಾನತೆಯ ಲೋಕದಲ್ಲಿ ಹೊಸತನದ ಅವಶ್ಯಕತೆ ಬೇಕಾಗಿದೆ. ಅದರೆ ಭಾವನೆಗಳನ್ನು ಕೆಲವೇ ಶಬ್ದಗಳಲ್ಲಿ, ಹಿಗ್ಗಾಮುಗ್ಗಿ, ಜಗ್ಗಾಡಿ ಹೇಳಬೇಕಾದ ಸ೦ದರ್ಭದಲ್ಲಿ ಶಬ್ದಗಳು ಸೋಲಬಹುದು ಅಥವಾ ಅಭಿವ್ಯಕ್ತಿ ಸೊರಗಬಹುದು. ಇ೦ತಹ ಪ್ರಯತ್ನವನ್ನು ಹಿ೦ದೆ ಬೇ೦ದ್ರೆಯವರು ಮಾಡಿ "ಶಬ್ದ ಗಾರುಡಿಗ" ಎ೦ಬ ಬಿರುದು ಪಡೆದಿದ್ದರು. ಅವರ ನಾಕುತ೦ತಿ ಕವನ ಅದಕ್ಕೊ೦ದು ಉತ್ತಮ ಉದಾಹರಣೆ ಹಾಗೂ ನಾಕುತ೦ತಿಯಲ್ಲಿನ ಹೆಚ್ಚಿನ ಕವನಗಳು ಇದೇ ಧಾಟಿಯಲ್ಲಿವೆ. ಅದರೆ ಈ ಶಬ್ದಗಳ ಜಗ್ಗಾಟ ಬರಹಗಾರನ ವೈಚಾರಿಕ ಮಟ್ಟದ ಎತ್ತರಕ್ಕೇರದ ಸಾಮಾನ್ಯ ಓದುಗನಿಗೆ "ಶಬ್ದಗಳ ಗೋಜಲು" ಎ೦ಬರ್ಥಕ್ಕೆ ಬರುವ ಅಪಾಯವಿದೆ. ಇನ್ನು ಸಾಮಾನ್ಯ ಓದುಗನನ್ನು ಲಕ್ಷ್ಯದಲ್ಲಿಟ್ಟು ಬರೆದಾಗ ಶಬ್ದಗಳ ತಿಕ್ಕಾಟ ಸಾಧ್ಯವಾಗುವದಿಲ್ಲ.
    ತಮ್ಮ ಶಬ್ದಗಳಲ್ಲಿ ಈ ಜಗ್ಗಾಟವಿರುವದು ಹಾಗೂ ತಮ್ಮ ಆಲೋಚನೆಯ ಮಟ್ಟ ನನಗೆ ತಿಳಿದುದು ಸುನಾಥರವರ ಹಾಗೂ ಸುಮನಾರವರ ಪ್ರತಿಕ್ರಿಯೆಗೆ- ತಾವು ನೀಡಿದ ಉತ್ತರದಲ್ಲಿ. ತಮ್ಮ ಪ್ರಭುಧ್ಧತೆಯ ಮಟ್ಟ ಅಲ್ಲೇ ಗೊತ್ತಾಗಿದ್ದು. ಮೇರು ಅಧ್ಯಯನದ ಹಿರಿಯ ಸುನಾಥರವರಿಗೆ ಅದು ಸುಲಭದಲ್ಲಿ ವೇದ್ಯವಾಗಿದೆ. ಅದಕ್ಕೆ ಅವರು ಹೇಳಿದ್ದು- ಹಲಸಿನ ಹಣ್ಣ ತೊಳೆ ಬಿಡಿಸಿ ತಿ೦ದ೦ತಿದೆ. ತೊಳೆ- ರಸಮಯ. ಅದರೆ ಹಲಸನ್ನು -ಹೆಚ್ಚುವಲ್ಲಿ, ಸೊನೆ ತಾಗದ೦ತೆ, ರಚ್ಹೆಗಳನ್ನು ಕೊಸರಿ, ಸೊಳೆಯನ್ನು ಮದ್ಯಪದರದಿ೦ದ ಬೇರ್ಪಡಿಸಿ, ಅದರ ಹೊಟ್ಟೆ ಸೀಳಿ, ಬೀಜ ಬೇರ್ಪಡಿಸಿ, ಭೀಜದ ಮೆಲ್ಪದರನ್ನು ಸೊಳೆಯಿ೦ದ ಬೇರ್ಪಡಿಸಿ- ಅದರ ರಸಾನುಸ್ವಾದ ಮಾಡುವದು ಸಾಮಾನ್ಯ ಕೆಲಸವಲ್ಲ. ಕವಿ ಬೆಳೆದ೦ತೆ ಜನಸಾಮಾನ್ಯರಿ೦ದ ದೂರವಾಗುವದು ಪ್ರಾಯಶಃ ಅವನ್ನ ಭೌಧ್ಧಿಕ ಪ್ರೌಡಿಮೆಯಿ೦ದ ಹೊರಹೊಮ್ಮುವ ಈ ಕ್ಲೀಷ್ಟತೆಗೆ ಇರಬಹುದು. ಉದಾಹರಣೆಗೆ ಬೇ೦ದ್ರ್‍ಎಯವರ ಸಖಿಗೀತ, ನಾದಲೀಲೆ ಹಾಗೂ ಇನ್ನಿತರ ಅವರ ಮೊದಲಿನ ಕವನ ಸ೦ಕಲನಗಳು ಸಾಮಾನ್ಯ ಓದುಗನಿಗೆ ಆಪ್ತವಾದ೦ತೆ ಅವರ ಮಹತ್ತರ ನ೦ತರದ ಕೃತಿ ನಾಕುತ೦ತಿ ಅಪ್ತವಾಗುವದಿಲ್ಲ.

    ReplyDelete
  28. ನನ್ನ ಮಿತ್ರ ವಾಮನ ಇ೦ತಹ ಶಬ್ದಗಳ ಜಾಲದಲ್ಲಿ ಸಾಮಾನ್ಯರಿಗರ್ಥವಾಗುವ ಒ೦ದು ಸಣ್ಣ ವಿಷಯದ ಸುತ್ತ ಪ್ರೈ೦ತಹ ಪ್ರಯೋಗ ಮಾಡಿದ್ದ. ಅವನಿಗೆ ಅ೦ತರ್ಜಾಲ ಸ೦ಪರ್ಕವಿರದುದರಿ೦ದ ಅವನ ಹೆಸರಲ್ಲಿ ಅವನ ಇ೦ತಹ ಶಬ್ದ ಜಾಲದ ಮಳೆ ಕವನವನ್ನು ಹಾಗೂ ಅವನ ಕವನ ಸ೦ಕಲನದ ಇತರ ಕವನಗಳನ್ನು ನಾನು ಅ೦ತರ್ಜಾಲದಲ್ಲಿ ಹಾಕಿರುವೆ. ಬಿಡುವಾದಾಗ ನೋಡಿಹಾಗೂ ಪ್ರತಿಕ್ರಿಯಿಸಿ.
    ಕೊ೦ಡಿ: http://vamkulkarni.blogspot.com/

    ReplyDelete
  29. ಸೀತಾರಾಂ ಸರ್, ಈ ಪರಿಯ ವಿಶ್ಲೇಷಣೆಗಾದರೂ ನಾನು ನಿಮ್ಮನ್ನು ಅಣ್ಣ ಎನ್ನಬಹುದೇ ??...ಹಹಹ..ನಿಮ್ಮ ವಿವರಣೆ ನನಗೆ ಅರ್ಥವಾಯಿತು..ಹಿಂದೊಮ್ಮೆ ಸುನಾಥ್ ಸರ್ ರಾಜರತ್ನಂ ಮತ್ತು ಮೇರು ಕವಿಗಳ ಮಧ್ಯದ ಅಂತರವನ್ನು ವಿವರಿಸುತ್ತಾ..ಮೇರು..ಏರುತ್ತಿಂದ್ದಂತೆ..ನೆಲಕ್ಕೆ ದೂರವಾಗುತ್ತೆ ಆದ್ರೆ ಇತರ ಶಿಖರಗಳಿಗಿದು ಅರ್ಥವಾಗುತ್ತೆ ಎನ್ನುವಹಾಗೆ ತಿಳಿಸಿದ್ದರು.... ಸರಳ ಶಬ್ದ ಮತ್ತು ಅಷ್ಟೇ ಸರಲ ಪ್ರಯೋಗ ಎಲ್ಲರಿಗೆ ನಿಲುಕುವಂತಹುದು ಎನ್ನುವ ನಿಮ್ಮ ಮಾತನ್ನು ಅಕ್ಷರಶಃ ಉಪ್ಪುತ್ತೇನೆ.....ಅಂದಹಾಗೆ ಇಷ್ಟೆಲ್ಲಾ ನನಗೆ ವಿವರಿಸಿರುವ ನೀವು....ವಿಜ್ಞಾನ ಲೋಕದಲ್ಲಿ..!! ಸಾಹಿತಿಗಳಾಗಬೇಕಿತ್ತು ಸರ್.
    ನಿಮ್ಮ ಹಿತನುಡಿಗೆ ಅಥವಾ ವಿವರಣೆ ಎನ್ನಲೇ..??ಇದಕ್ಕೆ ಧನ್ಯವಾದ.....ಪ್ರೀತಿ ಮತ್ತು ಆತ್ಮೀಯತೆಗೆ ಋಣಿ.
    ನಿಮ್ಮ ಲಿಂಕನ್ನು ಹಿಂಬಾಲಿಸುತ್ತೇನೆ..ಖಂಡಿತ

    ReplyDelete
  30. ಆಜಾದ್ ಮಾಮಾ,
    ಸಕ್ಕತ್!

    ನಂದೊಂದು ಪ್ರಯೋಗ

    ಗಂಡು - ಹೆಣ್ಣು
    ಸತ್ಯ - ಸುಳ್ಳು
    ಅಜ್ಜ - ಅಣ್ಣ
    ಹೆಸರು ಕೊಸರು
    ಜಂಜಾಟ - confusion ! :)

    ReplyDelete
  31. ಆನಂದ್ ಮೈದುನ...ಏನಪ್ಪಾ...ವರಸೆಗೆ ಪ್ರತಿವರಸೇನಾ? ಚನ್ನಾಗಿದೆ ನಿನ್ನ ಜೋಡಣೆ...ಧನ್ಯವಾದ.

    ReplyDelete
  32. ಹೊಸ ಪ್ರಯೋಗ ತುಂಬ ಚೆನ್ನಾಗಿ ಇದೆ....ವೆರಿ nice... ಮುಂದುವರಿಸಿ.....ಓದುತ್ತ ಇರಬೇಕಾದರೆ ಒಳ್ಳೆ ಮಜಾ ಇರುತ್ತೆ....
    ಗುರು

    ReplyDelete
  33. ಗುರು, ಧನ್ಯವಾದ...ಚುಟುಕಿನ ಗುಟುಕು ಹಿತವಾಗಿತ್ತೇ..?? ನಿಮ್ಮ ಪ್ರೋತ್ಸಾಹದ ಎರಡು ಮಾತು...ನನ್ನಿ

    ReplyDelete
  34. ಚೆನ್ನಾಗಿದೆ ಹೊಸ ಪ್ರಯೋಗ ... ಒಂತರ ರಿ-ಮಿಕ್ಸ್ ತರಾ ಇದೆ... ನಿಮ್ಮ ಪ್ರಯೋಗ ಶಾಲೆಯಿಂದ ಇಂತಹ ಇನ್ನಷ್ಟು ಪ್ರಯೋಗಗಳು ಬರಲಿ ಸರ್....

    ReplyDelete
  35. ದಿಲೀಪ್ ನಿಮ್ಮ ಫಿಫ್ಟಿಫೈ-ಸ್ಟೋರಿಯ ಮುಂದೆ ಇದೇನೂ ಇಲ್ಲ ಬಿಡಿ...ಹಹಹ
    ಧನ್ಯವಾದ..ನಿಮ್ಮ ಪ್ರತಿಕ್ರಿಯೆಗೆ

    ReplyDelete
  36. Thank you Ravikaanth ....what a comment??
    :-(
    explains every thing.

    ReplyDelete
  37. Dear Dr. Azad
    Like i shared with you i am still learning Kannada. so could not grasp everything. but you have explained how this poem should be understood by explaining it to Sumana.
    Recently i have taken up Jayanth Kaikini's poems. I find that i can understand the meaning after reading it three or more times
    i am really amazed you make time to indulge in your fav task of writing amidst ur other responsibility
    :-)
    thanks and take care
    malathi S

    ReplyDelete
  38. ಇದೇನು ಮಾಲ್ತಿಯವರೇ...ಬಹಳ ಗೌರವ ಪೂರ್ಣವಾಗಿ....ಡಾ.ಆಜಾದ್..ಎನ್ನುವ ಸಂಬೋಧನೆ....??!! ಐವತ್ತಾದಮೇಲೆ ಈ ರೀತಿಯ ಗೌರವ ಸಿಗುತ್ತೆ ಅನ್ನೋದಕ್ಕೆ ನಾನೇ ಜೀವಂತ..ನಿದರ್ಶನ...ಹಹಹ......ಅದು ಹಾಗಿರಲಿ....ನನ್ನ ಕವನಗಳನ್ನು...ಹೊಗಳುತ್ತಿದ್ದೀರೋ..ಅಥವಾ...ಏನ್ ಬರೀತೀಯಯ್ಯಾ...ನಿನ್ ಕವನ ಅರ್ಥ ಮಾಡ್ಕೋಳ್ಳೋಕೆ..ಏನೆಲ್ಲ ಕಸರತ್ ಮಾಡ್ಕಂಡ್ರೂ..ಊಹೂಂ...ಅಂತ ತಲೆ ಕೊಡವ್ತಿದ್ದೀರೋ ಅರ್ಥ ಆಗ್ತಿಲ್ಲ...

    ReplyDelete
  39. ಹಾಹಾಹಾ... ಹೌದು.. ಮೊದಲಿಗೆ ಓದಿದಾಗ ಅರ್ಥವಾಗಲಿಲ್ಲ ಅದಕ್ಕೆ :-( ಅಂತ ಬರ್ದೇ.. ಈಗ ಮತ್ತೆ ನಿಮ್ಮ ಬ್ಲಾಗ್ ಗೆ ಬಂದು ಎರಡೆರಡು ಬಾರಿ ಓದಿದೆ.. ಸ್ವಲ್ಪ ಅರ್ಥವಾಯಿತು... :-)...

    ReplyDelete
  40. ರವಿಕಾಂತ್..ಬಂದ್ರಲ್ಲಾ ಮತ್ತೆ...!! ಖುಷಿ ಆಯ್ತು..ಮತ್ತೆ ಈ ಸರ್ತಿ ಬರ್ದೇ ಬಿಟ್ರಿ ಒಂದೆರಡು ಪ್ರೋತ್ಸಾಹದ ಮಾತು...ಧನ್ಯವಾದ.

    ReplyDelete
  41. ಆಝಾದ್ ಅವರೆ,
    ಮೊದಲ ಬಾರಿ ನಿಮ್ಮೀ ಪ್ರಯೋಗವನ್ನು ಓದಿದಾಗ ಏನೂ ಅರ್ಥವಾಗಲಿಲ್ಲ. ಆದರೆ ಕಾಕಾ ಹಾಗೂ ಕೆಲವರ ಕಮೆಂಟ್‍ಗಳನ್ನು ಅವುಗಳಿಗೆ ನಿಮ್ಮ ಪ್ರತ್ಯುತ್ತರಗಳನ್ನು ಓದಿದಮೇಲೆ ಸರಿಯಾಗಿ ಅರ್ಥವಾಯಿತು. ನಿಜವಾಗಿಯೂ ವಿನೂತನವಾಗಿದೆ ನಿಮ್ಮ ಈ ಪ್ರಯೋಗ. ಮುಂದುವರೆಸಿ

    ಇದು ಮಾನಸ (ತೇಜಸ್ವಿನಿಯವರು) ಬ್ಲಾಗಿಗೆ ಕಾಮೆಂಟ್ ಹಾಕಲು ತೊಂದರೆ ಆದಾಗ ನನಗೆ ಮಿಂಚೆ ಮೂಲಕ ಕಳುಹಿಸಿದ ಪ್ರತಿಕ್ರಿಯೆ.

    ReplyDelete