Tuesday, December 8, 2009

ಫಾರ್ a ಚೇಂಜ್


ಆಗೊಮ್ಮೆ
ಈಗೊಮ್ಮೆ
ಬರ್ತಾನೆ
ಎಲ್ಲರೆದುರಿಗೆ
ಬಲವಾಗಿ ಒಂದು
ಕಿಸ್ ಕೊಡ್ತಾನೆ..
ಛೀ...

(ಕಿಸಿಂಗ್-ಗೌರಾಮಿ)

ಕಪ್ಪುಕರಿಯ
ಹೊನ್ನ ಬೆಡಗಿಯ
ಬೆನ್ನಟ್ತಾನೆ
ಮೀಟ್ ಮಾಡ್ತಾನೆ
ಮೇಟ್ ಮಾಡ್ತಾನೆ
ಛೀ.....
(ಬ್ಲಾಕ್-ಸಿಲ್ವರ್ ಮೋಲಿ)



ಹುಡ್ಗೀಂತ ನೋಡೊಲ್ಲ
ಬೆನ್ನಹತ್ತಾನೆ
ಕಾಟಕೊಡ್ತಾನೆ
ಅಕ್ಕ-ಪಕ್ಕ ಕಚ್ತಾನೆ
ಮದುವೆನೂ ಮಾಡ್ಕೋತಾನೆ
ಛೀ....
(ಫೈಟರ್ ಫಿಶ್)




ಹುಡ್ಗಿ ಆದ್ರೂ ನಾಚಿಕೆ ಇಲ್ಲ
ಯಾವಾಗ್ಲೂ ಹುಡುಗ್ರ ಹಿಂದೇನೇ
ಒಬ್ಬನ್ನೂ ಬಿಡೊಲ್ಲಾ ಅಂತಾಳೆ
ಇವತ್ತು ಒಬ್ಬ
ನಾಳೆ ಇನ್ನೊಬ್ಬ
ಛೀ.....

(ಪ್ಲಾಟಿ ಮೀನು)

37 comments:

  1. ಹಹಹ. ಮೀನುಗಳಲ್ಲೂ ಈ ತರದವೆಲ್ಲಾ ಇರ್ತಾವಾ..??
    ತುಂಬಾ ಚೆನ್ನಾಗಿದೆ.. :)

    ReplyDelete
  2. ಪಾಪ, ಅವುಗಳ ಪಾಡಿಗೆ ಅವು ಇರ್ತಾವೆ, ನೀವು ಒಂದ್ಸಲ ಅವನ್ನ ಕಿಡ್ನ್ಯಾಪ್ ಮಾಡಿಸ್ತೀರ, ಇನ್ನೊಂದ್ಸಲ ಅವುಗಳ ಪ್ರೇಮ ಸಲ್ಲಾಪನs ಅಪಹಾಸ್ಯ ಮಾಡ್ತೀರ... (not acceptable, ಈ ಸಲ ಅವು ಕೋರ್ಟಿಗೆ ಹೋಗ್ಬೇಕು ಅಂತ ಮಾತಾಡೋದನ್ನ ಕದ್ದು ಕೇಳಿಸ್ಕೊಂಡೆ !)

    ಅದ್ಸರಿ, ಈ ಪ್ಲಾಟಿ ಮೀನೆಲ್ಲಿ ಸಿಗುತ್ತೆ ಸರ್... :)

    ReplyDelete
  3. ಮೀನುಗಳು ತಮ್ಮ ಬಗ್ಗೆ ಏನೇನೋ ಬರೆಯುವ ನಿಮ್ಮಿಂದ ರಾಯಲ್ಟಿ ಕೇಳಬೇಕೆಂದು ತೀರ್ಮಾನಿಸಿವೆ.

    ReplyDelete
  4. ಅಜಾದ್ ಸರ್,
    ಕೆಲವೊಂದು ಮೀನಿನ ಚಿತ್ರ ನೋಡಿದ್ದೇ.... ಖುಷಿ ಪಟ್ಟಿದ್ದೆ ಕೂಡ.... ಮೀನಿನ ವಿವರಣೆ ನಿಮ್ಮಿಂದಲೇ ತಿಳಿದುಕೊಂಡೆ.... ಅಬ್ಬಾ, ನೀವು ಮೀನಿಗೂ ಸತಾಯಿಸುತ್ತಾ ಇದ್ದೀರಾ ಸರ್..... ಯಾವುದಾದರೂ ಮೀನಿಗೆ ಕೋಪಬಂದರೆ.....

    ReplyDelete
  5. ಮೀನುಗಳ ತು೦ಟಾಟ ವರ್ಣಿಸೋ ಹನಿಗವನಗಳು ಚೆನ್ನಾಗಿವೆ...ಸರ್, ಕೆಲಸಕ್ಕೆ ತಕ್ಕ ಹೆಸರು .....ಹ್ಹ..ಹ್ಹ..ಹ್ಹಾ..

    ReplyDelete
  6. wow, meenina vasanege ondu mile doora odi hogo nannu kooda avugala fan ago hage madbitri.

    ReplyDelete
  7. For a Change, ನಿಮ್ಮ ಯತ್ನ ಚೆನ್ನಾಗಿದೆ

    ReplyDelete
  8. ಮೀನುಗಳನ್ನ ಬೆಳಗೆದ್ದರೆ ನೋಡಿ ನೋಡಿ ನೀವು ಮೀನಿನಂತೆ ಆಗಿಬಿಡುವಿರೇನೋ ಮನೆಯವರಿಗೆ ಹೇಳಬೇಕು ಹುಷಾರು ಎಂದು... ನೀವು ನಿಜವಾಗಿಯೂ ನೀರಿನಲ್ಲಿರೋ ಮೀನನ ಹೆಜ್ಜೆ ಗುರುತನ್ನು ಕಂಡು ಹಿಡಿಯೋಹಾಗಿದೆ. ಹಹಹ ಚೆನ್ನಾಗಿದೆ ಎಂತೆಂತ ಮೀನಿನ ಪರಿ ತಿಳಿಸಿದ್ದೀರಿ

    ReplyDelete
  9. ವಾಹ್.. ಮೀನಿನ ಸು-ವಾಸನೆ ನಿಮ್ಮ ಈ ಸಾಲುಗಳಲ್ಲಿ ಬರುತ್ತಿದೆ :-)...

    ReplyDelete
  10. ದಿಲೀಪ್
    ಒಂಭತ್ತು ವರ್ಷ ಮೀನಿನಬಗ್ಗೆಯೇ ಓದಿ, 22 ವರ್ಷ ಅದರ ಹಲವು ಆಯಾಮಗಳಲ್ಲಿ ಸಂಶೋಧನೆ ಮಾಡಿ ಸಾಗರದಂತಿರುವ ವಿಷಯದ ಕೆಲವು ಬೊಗಸೆ ತುಂಬಿದ ಅರಿವಳಿಕೆ ನನ್ನದು...ಅದರಲ್ಲಿನ ಒಂದೆರಡು ಅಂಶ ಮಾತ್ರ ತಿಳಿಸಿದ್ದೇನೆ. ಇದು ನಿಮಗೆ ಇಷ್ಟವಾದುದು ನನಗೆ ಖುಷಿ.

    ReplyDelete
  11. ನಿಮಗೆ ಇನ್ನೊಂದು ಗೊತ್ತೆ ಆನಂದ್ ಈ ಮೀನುಗಳ ಗಂಡು ಹೆಣ್ಣುಗಳ ಆಕರ್ಷಣೆ ಎಷ್ಟು ತೀವ್ರವಾಗಿರುತ್ತದೆಂದರೆ..ತನ್ನ ಪ್ರೇಯಸಿಗಾಗಿ ಪ್ರಾನವನ್ನೂ ಕೊಡಲು ತಯಾರ್...!!! ನಿಮಗೂ ಗೊತ್ತಾ ...?? ಮತ್ಸ್ಯಭಾಷಾ ಭಾಷಾ ಪಂಡಿತ ಎನ್ನಬಹುದು ಹಾಗಾದರೆ...

    ReplyDelete
  12. ಸುಮ ಅವರೇ, ನನ್ನಿಂದ ರಾಯಲ್ಟಿ ಕೇಳಿದ್ರೆ...ಓ..ಖುಷಿಯಾಗಿ ಕೊಡ್ತೀನಿ.....ಆದ್ರೆ ನನಗೆ ಕೆಲವು ಸೂಕ್ಷ್ಮಗಳನ್ನು ಹೇಳಿಬಿಟ್ರೆ ಸಾಕು...!!! ಏನಂತೀರಿ..? ಇದು ಒಳ್ಳೆ ಐಡಿಯಾ ಅಲ್ಲವಾ..???

    ReplyDelete
  13. ದಿನಕರ್, ಸಮಾನ್ಯವಾಗಿ ಮೀನಿನ ಔಷಧೋಪಚಾರಕ್ಕೆ ಮೀನಿಗೆ ಅರಿವಳಿಕೆ ತಪ್ಪಿಸೋ ಮದ್ದು ಕೊಟ್ಟು ಉಪಚಾರಮಾಡಿ ಮತ್ತೆ ನೀರಿಗೆ ಬಿಟ್ಟರೆ ಅದು ಚೇತರಿಸಿಕೊಳ್ಳುತ್ತೆ...ಕೆಲವೊಮ್ಮೆ ಚಿಕ್ಕ ಮೀನು ಅಂತ ಅದನ್ನ ಹಾಗೇ ಉಪಚಾರ ಮಾಡಲು ಹೋಗಿ....ಆಹ್..!! ಕಚ್ಚಿಸಿಕೊಂಡಿದ್ದೇನೆ.....ಹಹಹ....

    ReplyDelete
  14. ವಿಜಯಶ್ರೀ, ತುಂಟಾಟದಲ್ಲಿ ಕೆಲಮೀನುಗಳು ಮಕ್ಕಳನ್ನೂ ಮೀರಿಸುತ್ತವೆ...ಮೀನುಹಿಡಿಯಲು ಹೋಗಿ ನಿಮಗೂ ತಿಳಿಯುತ್ತೆ...ಇನ್ನೇನು ಕೈಗೆ ಸಿಕ್ಕೇಬಿಡ್ತು ಅದನ್ನು ಗಬಕ್ಕನೇ ಹಿಡಿಯಲು ಹೋದರೆ..ಅದು ಸರಕ್ಕನೇ..ತನ್ನ ಬೆನ್ನ ಮೇಲಿನ ರೆಕ್ಕೆಯ ಚೂಪು ಮುಳ್ಳನ್ನು ಕಸಕ್ಕನೆ ನಿಮ್ಮ ಕೈಗೆ ತಿವಿದಿರುತ್ತವೆ....ಹಹಹಹ...

    ReplyDelete
  15. ನಿಶಾವ್ರೇ..ಮೀನು...ಬದುಕಿರುವಾಗ ವಾಸನೆ ಖಂಡಿತಾ ಹೊಡಿಯುವುದಿಲ್ಲ...ಸತ್ತ ನಂತರ ಮೀನಿನ ಕೆಡುವ ಕ್ರಿಯೆ ಇತರ ಪ್ರಾಣಿಗಳಿಗಿಂತ ಬೇಗ ಆಗುವ ಕಾರಣ..ವಾಸನೆ. ಅಂದಹಾಗೆ..ಮನೆಯಲ್ಲಿ ಅಲಂಕಾರದ ಮೀನನ್ನು ಇಟ್ಟರೆ ಮನಸ್ಸಿನ ಆತಂಕಗಳು ಕಡಿಮೆಯಾಗುತ್ತವೆಂದು ಸಂಶೋಧನೆಗಳು ತಿಳಿಸಿವೆ....ಗೊತ್ತಾ??

    ReplyDelete
  16. For a change ಪ್ರತಿಕ್ರಿಯೆ ನಿಮ್ಮದು ಬಹಳ ಚನ್ನಾಗಿದೆ ಪರಾಂಜಪೆಯವರೇ...ಧನ್ಯವಾದ.

    ReplyDelete
  17. ಮನಸು ಮೇಡಂ...
    ಮೀನಾಯ ಮೀನು ತೊಟ್ಯಾಯ ಕಣ್ಣು ತಂಪು ಮಾಡುತ
    ಭಜತಾಂ ಮತ್ಸ್ಯಾವತಾರಾಯ ನಮತಾಂ ಅಲಂಕಾರ ಮೀನುವೇ...
    ಹಹಹಹ....................

    ReplyDelete
  18. ಮೀನು ಏನು ಹೇಳುತ್ತೆ ಗೊತ್ತೇ...??
    ಗೋರೆ ಗೋರೆ..ಓ ಬಾಂಕೆ ಛೋರೆ...
    ಮೇರೆ ಪಾಸ್ ನ ಆಯಾ ಕರೋ...ಹಹಹ
    ರವಿಕಾಂತ ನನ್ನ ಕವನವೇ ನಿಮಗೆ ವಾಸನೆ ಅನಿಸಿದರೆ...ನನ್ನ ಲ್ಯಾಬಿಗೆ ನಿಮ್ಮನ್ನ ಆಹ್ವಾನಿಸಬೇಕು ಅಂತಿದ್ದೆ...???!!!!

    ReplyDelete
  19. ಜಲನಯನ,
    ಹೊಸ ಹೊಸ ಮೀನು... ಹ್ಹ ಹ್ಹ ಹ್ಹ... ಚೆನ್ನಾಗಿದೆ ಸರ್ ನಿಮ್ಮ ಹನಿ ಹನಿ ಕವನ... ಮೀನು ನಿಮ್ಮನ್ನು ನೋಡಿ ಏನು ಹೇಳಿಲ್ಲವಾ...? !!
    ನಿಮ್ಮವ,
    ರಾಘು.

    ReplyDelete
  20. ರಾಘು, ..ಕಿಸ್ಸಿಂಗ್ ಗೋರಾಮಿ ಹೇಳ್ತು...ನಾವು ಒಬ್ಬರಿಗೊಬ್ಬರು ಕಿಸ್ ಕೊಟ್ಕೋತಾಯಿದ್ರೆ..ನೀನೇನು..ಖಬಾಬ್ ಮೆ ಹಡ್ಡಿ...ಅನ್ತು...ಹಹಹ
    thanks ನಿಮ್ಮ ಕಾಮೆಂತಿಗೆ...

    ReplyDelete
  21. ಜಲನಯನ,
    ನಿಮ್ಮ ಹನಿಗವನಗಳನ್ನು ಕೇಳಿದರೆ, ಈ ಮೀನುಗಳೂ ಸಹ ಹುಚ್ಚೆದ್ದು ಕುಣಿದಾವು!

    ReplyDelete
  22. Namaste Sir,
    Minugala Prem Kavya Tumba Channagide,
    Eejaduva Minugalallu Kavya Hommisuva Nimma Kalpane Adbuta, Tuma Channagide, Mechuge Aaitu,
    *MANJUNATH TALLIHAL

    ReplyDelete
  23. ಸುನಾಥ್ ಸರ್....ಕೆಲವು ಮೀನಿನ ವರಸೆ ನೋಡಿ ಎಸ್ಟೋ ಸರ್ತಿ ನಾನೇ......?!!...ಛೇ..ಬಿಡಿ...ಮತ್ತೆ..ಆಮೇಲೆ...ನನ್ನ ಬ್ಲಾಗ್ ಮಿತ್ರರು ಇನ್ನೊಂದು ಹೆಸರಿಂದ ಕರಿಯೋಕೆ ಪ್ರಾರಂಭಿಸಿದರೆ ಕಷ್ಟ...ಹಹಹಹ

    ReplyDelete
  24. ಮಂಜು, ಸ್ನೇಹಕ್ಕಾಗಿ ಬಂದುದು ಅದೂ ಜಲನಯನದ ನಯನಗಳ ನಯನಮನೋಹರ ಜಲಕ್ರೀಡೆ ಮತ್ತು ರಾಸಕ್ರೀಡೆಗಳ ತುಣುಕುಗಳನ್ನು ಓದಿದ್ದು...ನನ್ನ ಬ್ಲಾಗಿಗೆ ಸಿಕ್ಕ ಮನ್ನಣೆ...ಧನ್ಯವಾದ...ಬರುತ್ತಿರಿ,,..ನಾನೂ,,ಬರುತ್ತಿದ್ದೇನೆ..ಸ್ನೇಹಕ್ಕಾಗಿ...

    ReplyDelete
  25. ಸ್ನೇಹಿತರೇ, ಕ್ಷಮಿಸಿ..ತೇಜಸ್ವಿನಿಯವರು ನನ್ನ ಬ್ಲಾಗಿನಲ್ಲಿ ತಮ್ಮ ಪ್ರತಿಕ್ರಿಯೆಯನ್ನು ನಮೂದಿಸಲು ಆಗುತ್ತಿಲ್ಲ...
    ಅದರಿಂದ..ಅವರು ನನಗೆ ಮಿಂಚೆ ಮೂಲಕ ಕಳುಹಿಸಿದ ಅವರ ಪ್ರತಿಕ್ರಿಯೆಯನ್ನು ಲಗತ್ತಿಸುತ್ತಿದ್ದೇನೆ...
    ಹಾಗೇ...ಅವರಿಗೆ ನನ್ನ ಧನ್ಯವಾದಗಳನ್ನೂ ಈ ಮೂಲಕ ತಿಳಿಸುತ್ತಿದ್ದೇನೆ......ಜಲನಯ....

    ಆಝಾದ್ ಅವರೆ,
    ನಿಮ್ಮ ಈ ಹನಿಗವನಗಳ ಮೂಲಕ ಮೀನಿನ ಹೆಸರುಗಳನ್ನು ತಿಳಿದುಕೊಂಡೆ. ತುಳುನಾಡಿನಲ್ಲೇ ಬೆಳೆದಿದ್ದರೂ ನನಗೆ ಈ ಮೀನಿನ ಪರಿಚಯ ಇಲ್ಲ :) ಶುದ್ಧ ಶಾಖಾಹಾರಿಯಾಗಿದ್ದರೂ ಬಿ.ಎಸ್ಸಿ.ಯಲ್ಲಿ ಮೀನುಗಳ ಮಿದುಳು, ಎಲುಬುಗಳನ್ನು ಡಿಸೆಕ್ಟ್ ಮಾಡಿದ್ದೆ (ಅದೂ ಗ್ಲೌಸ್‌ಗಳಿಲ್ಲದೆಯೇ). ಆದರೆ ಮೀನಿನ ವಿವಿಧತೆ ಬಗ್ಗೆ ಹೆಚ್ಚು ಗೊತ್ತಿರಲಿಲ್ಲ. ಬಂಗುಡೆ ಹಾಗೂ ಮರವಾಯಿ ಮೀನಿನ ಹೆಸರು ಮಾತ್ರ ನೆನೆಪಿದೆ ಕಾರಣ ಮಂಗಳೂರು ತುಂಬೆಲ್ಲಾ ಇದರದ್ದೇ ವಾಸನೆ ತುಂಬಿರುತ್ತದೆ. :)
    ಹೊಸ ಹೊಸ ಪ್ರಯೋಗಗಳು ಹೀಗೇ ಮುಂದುವರಿಯಲಿ.

    ReplyDelete
  26. ಅರೆ! ಹೊಸ ಪರಿಯಲ್ಲಿ ಮೀನಿನ ಬಗ್ಗೆ ತಿಳ್ಸಿದ್ದೀರಿ.ಇಪ್ಪತ್ತೆ೦ಟು ಸಾವಿರ ಬಗೆಯ ಮೀನುಗಳಿವೆ ಎ೦ದು ಓದಿದ್ದೆ. ಮಕ್ಕಳಿಗೆ ಓದಿಸುವಾಗ, ವ್ಹೇಲ್ಸ್ , ಶಾರ್ಕ್, ಜೆಲಿಫಿಶ್, ಸ್ಟಾರ್ ಫಿಶ್ ಹೀಗೆ ನಾಲ್ಕಾರು ಮೀನುಗಳ ಹೆಸರುಗಳನ್ನು ಮಾತ್ರ ತಿಳಿದಿದ್ದೆ. ಹೊಸಹೊಸ ಮೀನಿನ ಹೆಸರು, ಅವುಗಳ ವಿಶಿಷ್ಟ ರೀತಿಯನ್ನು ಚೆನ್ನಾಗಿ ಬರೆದಿದ್ದೀರಿ. ವ೦ದನೆಗಳು.

    ReplyDelete
  27. ಸೂಪರ್ ಸರ್
    ಚೆನ್ನಾಗಿದೆ ಹೇಳುವ ಪರಿ

    ReplyDelete
  28. ಆಝಾದ್ ಭಾಯ್...

    ಮೀನಿನಲ್ಲೂ..
    ಮಿಂಚುಕಾಣುವ...
    ನಿಮ್ಮ ತುಂಟತನ ಇಷ್ಟವಾಗುತ್ತವೆ...

    ಸುಂದರ ಚುಟುಕುಗಳಿಗೆ ಅಭಿನಂದನೆಗಳು....

    ReplyDelete
  29. ಮನಮುಕ್ತ, ಮುಕ್ತ ಪ್ರತಿಕ್ರಿಯೆಗೆ ಧನ್ಯವಾದ..ಮೀನು ಎಂದರೆ ವೈಶಾಲ್ಯದಲ್ಲಿ...ಮೀನು, ಕಪ್ಪೆಚಿಪ್ಪು, ಸಿಗಡಿ ಏಡಿ ಎಲ್ಲ...ಆದರೆ ಬೆನ್ನುಮೂಳೆಯಿರುವ (ಅಂದರೆ ನಮ್ಮಎಲ್ಲ ಬೆನ್ನುಮೂಳೆಯಿರುವ ಪ್ರಾಣಿಗಳ ನಿಜವಾದ ಅಡಿಪಾಯ) ಮೀನಿನಲ್ಲಿ ಎರಡು ವಿಧ ಮೃದ್ವಸ್ಥಿ ಮತ್ತು ಸಹಜಸ್ಥಿ (cartilaginous and tru bone) ಶಾರ್ಕ್ ಮೃಧ್ವಸ್ಥಿ ಗುಂಪಿಗೆ ಸೇರಿದ್ದು...ಡಾಫಿನ್..ಮೀನಲ್ಲ...ನಿಮಗೆ ಆಶ್ಚರ್ಯ ಆಗಿರಬಹುದು.

    ReplyDelete
  30. ಗುರು, ಮೀನಿನ ಸ್ಂಶೋಧನೆಯಲ್ಲಿದ್ದ ನಾನು ಮೀನು ಉತ್ಪಾದನೆಯ ವಿಶೇಷ ಕ್ಷೇತ್ರವನ್ನು ಮೊದಲಿಗೆ ಆರಿಸಿಕೊಂಡೆ ನನ್ನ ಸಂಶೋಧನೆಗೆ..ಆದರೆ ನಂತರ ಮೀನಿನ ವಿವಿಧ ರೋಗಗಳಿಗೆ ಉಪಚಾರ ಮತ್ತು ತಡೆ ಬಗ್ಗೆ ಹೆಚ್ಚು ಆಕರ್ಷಿತನಾದೆ....ಈ ಪಯಣದಲ್ಲಿ ಆದ ಅನುಭವಗಳನ್ನು ಈ ರೀತಿ ಹೊರಹಾಕಿ ಜನಸಾಮಾನ್ಯನಿಗೆ ತಿಳಿಸುವ ಪ್ರಯತ್ನ...ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದ.

    ReplyDelete
  31. ಪ್ರಕಾಶ್...ನಿಜ ಇವುಗಳನ್ನು ಹತ್ತಿರದಿಂದ ನೋಡುವ ಯಾರಾದರೂ ಅವುಗಳಿಂದ ಮೋಹಿತರಾಗುವುದು ಸಹಜ. ನನ್ನ ತುಂಟಾಟಕ್ಕೂ ಇವೇ ಕಾರಣ...ಧನ್ಯವಾದ...ನಿಮ್ಮ ಹುಸಿ ಮುನಿಸಿಗೆ..

    ReplyDelete
  32. ಜಲನಯನ...
    ತುಂಬ ಚೆನ್ನಾಗಿದೆ ,,ಮೀನಿನ ತುಂಟ ಕವನಗಳು....ಇನ್ನು ಎಂತೆಂತ ತುಂಟ ಮೀನುಗಳ ಮಾಹಿತಿ ಇದೆಯೋ ನಿಮ್ಮ ಹತ್ರ.....
    ಮುಂದುವರಿಸಿ...ತುಂಬ ಚೆನ್ನಾಗಿ ಇದೆ...
    ಗುರು

    ReplyDelete
  33. ಮೀನುಗಳ ಜಾತಿ, ಅವುಗಳ ಗುಣ ಹಾಗೂ ಅವುಗಳ ಹೆಸರಿನ ವಿಶೇಷತೆಯನ್ನು -ರಸಮಯ ತು೦ಟಾಟದ ಸವಿನುಡಿಯಲ್ಲಿ ವಿಧ್ಯಾರ್ಥಿಗಳ ಮನಸೆಳೆವ ಮಾತಿನಲ್ಲಿ ಜ್ಞಾನ ತು೦ಬಿದ್ದಿರಾ!!
    ಅ೦ದ ಹಾಗೇ ಪ್ಲಾಟಿ ಮೀನು ಲಕ್ಶಣ ಮನುಷ್ಯರಲ್ಲಿ ಇರುತ್ತಾ, ಇದ್ದರೇ ಅವುಗಳ ಇರಬಹುದಾದ ಸ್ಥಳಲಕ್ಷಣಗಳೇನು ಗುರುವೇ!!!!

    ReplyDelete
  34. ಗುರು, ಧನ್ಯವಾದ...ನನ್ನ ಬಳಿಯಿರೋದನ್ನ ಖಂಡಿತಾ ಹಂಚಿಕೋತೀನಿ...ನಿಮ್ಮ ಪ್ರೋತ್ಸಾಹ ಬೇಕು ಅಷ್ಟೇ...

    ReplyDelete
  35. ಸೀತಾರಾಮ್ ಸರ್...ಹಹಹ..ಪ್ಲಾಟಿಗಳಲ್ಲಿ ಹೆಣ್ಣುಮೀನು..ಸ್ವಲ್ಪ ಗಟಾಣೀನೇ...ಅಂಥವರು..ಮನುಷ್ಯರಲ್ಲಿ..ಹಹಹ..ಯಾಕಿಲ್ಲ...??
    ಮತ್ತೆ...ಗಂಡುಗಳು ಗರ್ಭ ಧರಿಸ್ತಾವೆ ..ಗೊತ್ತಾ?? ಹೆರಿಗೆ ನೋವು...ಯಾರಿಗೆ..?? ಹಹಹ...

    ReplyDelete
  36. Sir,

    Meenugala ee sarasagalannu nimma baravanigeyalli bahaLa sogasaagi moodisiddeeri :) Chennagide :)

    ReplyDelete
  37. ರಮೇಶ್ ಮೀನುಗಳ ಬಗ್ಗೆ ನಿಮ್ಮ್ಮ ಆಸಕ್ತಿಗೆ ಧನ್ಯವಾದಗಳು

    ReplyDelete