Tuesday, December 29, 2009

ಗಾಯನ ಗಾರುಡಿಗ ಅಶ್ವಥ್ - ಹೃದಯಪೂರ್ವಕ ಶ್ರದ್ಧಾಂಜಲಿನೇಗಿಲಯೋಗಿ - ಕುವೆಂಪು - ಸಿ. ಅಶ್ವಥ್
ನೆಡೆದರೇ ಒಂದು ಚಂದ ಸಾಥ್ -ಸಾಥ್
ಗಾಯನ ಗಾರುಡಿ ಹೊರಡಲು ಕಂಠದಿ
ಸಿ. ಅಶ್ವಥ್ ಬರುವರು ಮನಃ ಪಟಲದಿ
ಕೆ.ಎಸ್.ನ. ಜೀ.ಎಸ್ಸೆಸ್,ಶಿಶುನಾಳ ರಚನೆಗೆ
ಕೋಡಗನ ಕೋಳಿ, ಮೈಸೂರು ಮಲ್ಲಿಗೆ
ಮುಕ್ತ ಕಂಠದಿ ಮನ್ವಂತರಕ್ಕೂ ಹೆಜ್ಜೆ
ಗಾಯನ ಮನದಾಳದಿ ಮಿಡಿವ ಗೆಜ್ಜೆ
ತಪ್ಪು ಮಾಡದವ್ರು ಯಾರವ್ರೇ ? ಹಾಡು
ಬೆಪ್ಪುಗೊಳಿಸಿದ್ದು ತೆರೆದು ನವ ಅಲೆಯ ಜಾಡು
ಅಣ್ಣನಾಗಿ ರೈತ, ಉಳುವಾ ಜೋಗಿಯ ತೋರಿ
ಕಣ್ಣ ತೆರೆಸಿದಾತ ಹಾಡುಗಾರಿಕೆ ಕನ್ನಡಿಗನ ಸಿರಿ
ಸಂಗೀತ ರಚನೆ ಗಾಯನಕೆ ಕೊಟ್ಟರೊಂದು ದಿಶೆ
ಕಲಿಸಿ ನಮ್ಮವರಿಗೇ ಗಾನ ಗಾರುಡಿಯ ನಶೆ
ಹುಟ್ಟುದಿನದಂದೇ ಇಲ್ಲವಾದರು ಅಶ್ವಥ್ ಹೀಗೆ
ಹಾಡಿ ಹೋದರು ಒಂದೇ ಹಾಡು ಹುಟ್ಟುಹಬ್ಬ ಪುಣ್ಯ ತಿಥಿಗೆ

22 comments:

 1. ಅಜಾದ್ ಸರ್,
  ಸಮಯೋಚಿತವಾಗಿ ಅದ್ಭುತವಾಗಿ ಬರೆದಿದ್ದೀರಾ..... ಅಶ್ವಥ್ ಅವರ ಗಾಯನ ಕೇಳೋದು ಅಂದ್ರೆ ಅದೊಂದು ಹಬ್ಬ..... ಅವರ ಹಾಡು, ಕುಣಿತ, ಅಭಿನಯ ಎಲ್ಲಾ ನೋಡೋದು ಕೇಳೋದು ಒಂದು ಸಂಬ್ರಮ....
  ಈಗಸ್ತೆ ಅವರ ದೇಹಾಂತದ ಸುದ್ದಿ ಕೇಳಿ, ಅಂತರ್ಜಾಲ ತೆರೆದರೆ ನಿಮ್ಮ ಈ ಪೋಸ್ಟ್...... ಇಷ್ಟು ಬೇಗ , ಇಷ್ಟು ಸುಂದರವಾಗಿ ಬರೆದಿದ್ದೀರಾ ಸರ್...... hats off ...

  ReplyDelete
 2. ದಿನಕರ್, ನಿಜ- ಅಶ್ವಥ್ ಒಂದು ಸಂಸ್ಥೆಯಾಗಿ ಮಾರ್ಪಾಡಾಗೋಕಾಲಕ್ಕೆ ಅವರ ಅಕಾಲಿಕ ಮರಣ ಕನ್ನಡಕ್ಕೆ, ಗಾಯನದಲ್ಲಿ ಕನ್ನಡತನಕ್ಕೆ ಪೆಟ್ಟು. ಪರಭಾಷಿಗರು ಧಾಳಿಯಿಡುತ್ತಿರುವ ಈ ಸಮಯದಲ್ಲಿ ಅವರ ಗಾನಯೋಗ, ಗಾನ ಪ್ರಸರಣ ಬಹಳ ಅನಿವಾರ್ಯವಾಗಿತ್ತು.
  ಇವರ ನಿಧನ ಒಂದು ಶೂನ್ಯವನ್ನು ನಿರ್ಮಿಸಿದೆ. ದೇವರು ಅವರ ಆತ್ಮಕ್ಕೆ ಚಿರಶಾಂತಿ ಮತ್ತು ಅವರ ಕುಟುಂಬಕ್ಕೆ ನೆಮ್ಮದಿ ಮತ್ತು ಸಾಂತ್ವನ ಕೊಡಲಿ ಎಂದು ಪ್ರಾರ್ಥಿಸೋಣ.

  ReplyDelete
 3. ಸಂಗೀತ ಲೋಕದ ದಿಗ್ಗಜ ಸಿ.ಅಶ್ವಥ್ ರವರಿಗೆ ಭಾವ ಪೂರ್ಣ ಶ್ರದ್ಧಾಂಜಲಿ.........

  ReplyDelete
 4. ಸಿ. ಅಶ್ವಥ್ ರವರ ಆತ್ಮಕ್ಕೆ ಶಾ೦ತಿ ಸಿಗಲಿ ಎ೦ದು ಭಗವ೦ತನಲ್ಲಿ ಬೇಡಿಕೊಳ್ಳುತ್ತೇನೆ.
  ಅಶ್ವಥ್ ರವರ ಮರಣದಿ೦ದ ಕನ್ನಡನಾಡು ಒ೦ದು ಅಮುಲ್ಯರತ್ನವನ್ನು ಕಳೆದುಕೊ೦ಡ೦ತಾಗಿದೆ.
  ಜಲನಯನ ಅವರೆ,
  ನಿಮ್ಮ ಅಶುಕವಿತೆ ಎನ್ನಬಹುದೊ... ಏನೋ.. ನನಗೆ ಶಬ್ದ ಸಿಗುತ್ತಿಲ್ಲ.
  ಅಶ್ವಥ್ ರವರನ್ನು ಕುರಿತ ಕವನ ಮೆಚ್ಚುವ೦ಥದ್ದಾಗಿದೆ.

  ReplyDelete
 5. ಬೇಗನೆ ಚೆನ್ನಾಗಿ ಬರೆದಿದ್ದೀರ ಸರ್.....
  ಅಶ್ವಥ್ ರವರ ಆತ್ಮಕ್ಕೆ ಶಾ೦ತಿ ಸಿಗಲಿ ಎ೦ದು ದೇವರಲ್ಲಿ ಕೇಳಿಕೊಳ್ಳುತ್ತೇನೆ....

  ReplyDelete
 6. ಸರ್,

  ಅಶ್ವಥ್ ಇಲ್ಲವಾದ ಸುದ್ಧಿ ಕೇಳಿ ಇವತ್ತು ಯಾಕೋ ಮನಸ್ಸಿಗೆ ಒಂಥರ ಬೇಸರ. ನಿನ್ನೆಯವರೆಗೆ "ರೇರೇರೇ...ರಾ....ಅನ್ನುತ್ತಿದ ಕಂಚಿನ ಕಂಠ ಇವತ್ತು ಇಲ್ಲವಲ್ಲ.
  ಅವರ ಆತ್ಮಕ್ಕೆ ಶಾಂತಿ ಸಿಗಲಿ...

  ReplyDelete
 7. ಮಹೇಶ್ ನನಗೆ ಅವರ ಕಂಚಿನ ಕಂಠ ಮತ್ತು ಮುಕ್ತ ಹಾಡುಗಾರಿಕೆ ಇಷ್ಟ....ನಿಜಕ್ಕೂ ಲಾಸ್ ನಮಗೆ ....ನನ್ನ ಭಾವ ಮಂಥನ ನೋಡಿ ಇನ್ನೂ ಕೆಲವು ಹಾಕಿದ್ದೇನೆ ಅಲ್ಲಿ

  ReplyDelete
 8. ಮನಮುಕ್ತ ರವರೇ ನಿಮ್ಮ ಮಾತು ಒಪ್ಪಿದೆ, ಅವರು ಕನ್ನಡಿಗರ torch bearer ಆಗಿದ್ರು...ಬಹಳ ಆಪ್ಯಾಯ ವ್ಯಕ್ತಿತ್ವ... ....ನನ್ನ ಭಾವ ಮಂಥನ ನೋಡಿ ಇನ್ನೂ ಕೆಲವು ಕವನ ಹಾಕಿದ್ದೇನೆ ಅಲ್ಲಿ

  ReplyDelete
 9. ಶಿವು ಬೇಸರ ಆಯ್ತು ನನಗೂ ....ನನ್ನ ಭಾವ ಮಂಥನ ನೋಡಿ ಇನ್ನೂ ಕೆಲವು ಕವನ ಹಾಕಿದ್ದೇನೆ ಅಲ್ಲಿ

  ReplyDelete
 10. ಸುಬ್ರಮಣ್ಯರವರೇ, ಕನ್ನಡ ಭಾವ ಗೀತೆ ಮತ್ತು ಕವಿಗಳ ಕವನಗಳ ಪ್ರಚಾರಕ್ಕೆ ಅಶ್ವಥ್ ಕಾರಣ ಪುರುಷರು. ಈ ಕ್ಷೇತ್ರಕ್ಕೆ ತುಂಬಲಾರದ ನಷ್ಟ.

  ReplyDelete
 11. This comment has been removed by the author.

  ReplyDelete
 12. ನಿಜ ಮನಸು ಅವರೇ, ಅವರ ಗಾಯನ ಏಕೋ ಮನಸಿಗೆ ಹತ್ತಿರ ಅನ್ನಿಸುತ್ತೆ, ಬಹಳ HiFi ಅನ್ನಿಸದೇ ಹತ್ತಿರದವರ ಹಾಡು ಅನಿಸುತ್ತೆ....ಮುಕ್ತ ಕಂಠದ ಹಾಡುಗಾರಿಕೆ ಅವರದು.

  ReplyDelete
 13. ಬೆಳ್ಳಿಗ್ಗೆ ನನಗೆ ಮೊದಲು ಇವರ ಸಾವಿನ ಸುದ್ದಿ ತಿಳಿದಿತ್ತು , ನನ್ನ ಸ್ನೇಹಿತರು ಬೆಂಗಳೂರಿಂದ ಕೇಳುತ್ತಲಿದ್ದರು ನನಗೇ ಗೊತ್ತಿಲ್ಲ ನಿನಗೆ ಹೇಗೆ ಗೊತ್ತಾಯಿತೆಂದು. ಯಾವುದೋ ಪ್ಲಾಷ್ ನ್ಯೂಸ್ ನೋಡಿ ನನಗೆ ಗಾಬರಿಯಾಯಿತು... ಗಾನಗಾರುಡಿಗನ ಮರಣ ಸಂಗೀತ ಜಗತ್ತಿಗೆ ಅಪಾರ ನಷ್ಟವನ್ನುಂಟುಮಾಡಿದೆ. ಬೆಳ್ಳಿಗ್ಗೆಯಿಂದ ಏನಾದರು ಎರಡು ಸಾಲು ಬರೆಯಬೇಕು ಎಂದುಕೊಂಡೆ ಆದರೆ ಆಫೀಸ್ ನಲ್ಲಿ ಕೆಲಸದ ಒತ್ತಡದಲ್ಲಿ ಬರೆಯಲಾಗಲಿಲ್ಲ. ಸಂಜೆ ಮನೆಗೆ ಬಂದರೆ ಚಿಂಟು ಬರಿ ಏನಾದರು ಇವರಮೇಲೆ ಎಂದಾಗ ಬರೆದೆ ಆನಂತರ ಪೋಸ್ಟ್ ಮಾಡಲು ಬಂದಾಗ ನೀವು ಆಗಲೇ ಕವನ ಬಿತ್ತರಿಸಿದ್ದಿರಿ. ಮನುಕೂಡ ನೋಡಿದ ನಿಮ್ಮ ಕವನವನ್ನು ನಾ ಓದಿ ಹೇಳಿದೆ. ಅವನಿಗೆ ತುಂಬಾ ಬೇಸರವಾಗಿದೆ ಸಿ.ಅಶ್ವಥ್ ಎಂದರೆ ತುಂಬಾ ಇಷ್ಟ ಅವರಿಲ್ಲವೆಂದು ಏನೋ ಮನಸಿಗೆ ಬೇಸರ ಅವನಿಗೆ ಅವನಿಗಾಗಿ ಒಂದು ಪುಟ್ಟ ಕವನ ಬರೆದಿರುವೆ ನನ್ನ ಬ್ಲಾಗಿನಲ್ಲಿ.

  ReplyDelete
 14. ಸಮಯೋಚಿತ ಶ್ರಂದಾಜಲಿ. ನಾನು ಮೈಸೂರಿನ ಗಂಗೋತ್ರಿ ಗ್ರೌಂಡ್ ನಲ್ಲಿ ನಡೆದ ಅವರ 'ಕನ್ನಡವೇ ಸತ್ಯ'ಕಾರ್ಯಕ್ರಮವನ್ನು ಬಿಟ್ಟ ಕಣ್ಣುಗಳಿಂದ ನೋಡಿದ್ದೇನೆ, ಹಾಗೆಯೇ ಕಿವಿಯಲ್ಲಿ ತುಂಬಿಕೊಂಡಿದ್ದೆ.ಅವರಂತಹ ಹಾಡುಗಾರ ಇನ್ನೊಬ್ಬನಿಲ್ಲ!!

  ReplyDelete
 15. ಅವರ ಅಗಲಿಕೆ,,, ಕನ್ನಡ ಸುಗಮ ಸಂಗೀತ ಲೋಕಕ್ಕೆ, ತುಂಬ ಲರದ ನಸ್ಟ,,,,ಎಂತಹ ಕಂಚಿನ ಸ್ವರ ಅವರದು, ನನಗು ಇವಾಗಲು ಮೈ ರೋಮಂಚನವಾಗುವ ಸಂಗತಿ ಎಂದರೆ,,, "ಕನ್ನಡವೇ ಸತ್ಯ" ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಗಿತ್ತಲ್ವ,, ಅವಾಗ ಸೇರಿದ್ದ ಜನ ಅವರ ಸುಗಮ ಸಂಗೀತ ಕಾರ್ಯಕ್ರಮಕ್ಕೆ ಇಷ್ಟು ಜನ ಸೇರುತ್ತಾರೆ ಅಂತ ನಾನು ಅಂದುಕೊಂಡ ಇರಲಿಲ್ಲ ,,,
  ಎಸ್ಟೋ ದಿನ ಆದಮೇಲೆ,, ಯಾರದೋ ಒಂದು ಇವೆಂಟ್ ಗೆ ಅಲ್ಲಿಗೆ ಹೋಗಿದ್ದೆ...ಪಾರ್ಕಿಂಗ್ ಮಾಡ್ತಾ ಇರಬೇಕಾದರೆ,, ಅಲ್ಲಿನ ಒಬ್ಬ ಹುಡುಗ ಹೇಳಿದ.. " ಕನ್ನಡವೇ ಸತ್ಯ" ಕಾರ್ಯಕ್ರಮಕ್ಕೆ ಸೇರಿದ್ದ ಜನಸಾಗರ ೩ ವರ್ಷ ಅದ್ರು,,, ಇನ್ನು ಯಾವ ದೊಡ್ಡ ದೊಡ್ಡ ಕಾರ್ಯಕ್ರಮ ನಡೆದರೂ ಅಸ್ಟು ಜನ ಸೇರಿಲ್ಲ...ಇನ್ನು ಯಾವಾಗ ಅಂತ ಕಾರ್ಯಕ್ರಮ ನಡೆಯುತ್ತೋ ಅಂತ....
  ನಿಜವಾಗಲು,,, ಸಿ ಅಶ್ವಥ್ ರವರು,, ಮಹಾನ್ ಕಲಾವಿದರು,, ಅವರ ಆತ್ಮಕ್ಕೆ ಶಾಂತಿ ಸಿಗಲಿ.....

  ReplyDelete
 16. ವನಿತಾ, ನಿಜ ಅಶ್ವಥ್ ಒಂದು ಜೀವಂತ ನಿದರ್ಶನ ಕನ್ನಡ ಭಾವಗೀತೆಯ ಭಾವ ಪ್ರದರ್ಶನಕ್ಕೆ. ಅವರ ಕಂಠ ಬಲು ಮುಕ್ತ...ಪ್ರಯಾಸವಿಲ್ಲ ಎನಿಸುತಿತ್ತು...ಮನಸ್ಸು ತುಂಬಿ ಹಾಡುವ ಧಾಟಿ ಮೆಚ್ಚುಗೆಯಾಗುವ ಅಂಶ.

  ReplyDelete
 17. ಗುರು. ಸಿ. ಅಶ್ವಥ್ ರವರ ಗಾಯನಕ್ಕೆ ಆ ಸೆಳೆತ ಇದೆ...ಕಂಚಿನ ಕಂಠಕ್ಕೆ ತನಾಗೇ ಅನಾಯಾಸವಾಗಿ ಸೇರ್ತಾರೆ ಜನ....ಎನ್ನೋ ಮಾತು ನಿಜವಾಗಿತ್ತು. ಭಾವಗೀತೆ ಮತ್ತು ಶಿಶುನಾಳರ ರಚನೆಗೆ ಒಮ್ದು ಆಯಾಮ ಸಿಕ್ತು ಅವರಿಂದ

  ReplyDelete
 18. ಅಶ್ವಥರು ನಮ್ಮ ನಡುವೆ ತಮ್ಮ ಕ೦ಚಿನ ಕ೦ಠದಲ್ಲಿ ಸದಾ ಇರುತ್ತಾರೆ. ಅ೦ಥಾ ಹಾಡುಗಾರನಿಗೆ ನಮ್ಮ ಭಾವಪೂರ್ಣ
  ಕನ್ನಡ ನಾಡು ಕೇವಲ ಎರಡು ದಿನಗಳಲ್ಲಿ ಎರಡೆರದು ಅನರ್ಘ್ಯರತ್ನಗಳನ್ನು ಕಳೆದುಕೊ೦ಡಿದೆ.ಅದ್ಭುತ ನುಡಿ ನಮನಗಳು ತಮ್ಮಿ೦ದಾ!!!!!

  ReplyDelete
 19. ಸೀತಾರಾಂ ಸರ್, ಹೌದು ಸಹೃದಯೀ ಚೇತನಗಳು ಎರಡೂ, ಎರಡೂ ಮೈಸೂರಿಗೆ ಸಂಬಂಧಿಸಿದ್ದು ಇದು ತುಂಬಲಾಗದ ನಷ್ಟ ಮೈಸೂರಿಗೆ. ಅಶ್ವಥ್ ಭಾವಗೀತೆಗೆ ಹೊಸ ಆಯಾಮವನ್ನೇ ನೀಡಿದವರು, ವಿಷ್ಣು ಸುಮ್ಮನಿದ್ದು ತಮ್ಮ ಸದ್ವರ್ತನೆಯಿಂದ ಹಿಂದೆ ಮಾಡಲಾದ ಟೀಕೆಗೆ ಟಿಕು ಟಾಕಾಗಿ ಉತ್ತರಿಸಿದವರು, ಬೆಳೆದವರು, ಕನ್ನಡಿಗರಿಗಾಗಿ ಮಿಡಿದವರು. ಒಂದು ಗಾಯನ ಜಗತ್ತಿಗೆ ಆಘಾತ ಇನ್ನೊಂದು ಬೆಳ್ಳಿಪರದೆಯ ತುಂಬಲಾರದ ನಷ್ಟ.

  ReplyDelete
 20. Azad Sir,

  Ashwath avaru prayashaha Bhavageethe mattu shareefa ra geethegalige keLuva kivigaLannu srishtisida mahatma annabahudu.. Mysore Ananthaswamy avaru kavanagalige Jeeva thumbidaru. C Ashwath avaru Jeeva thumbuvudara jothege Bhavageethegalannu mane maathagisidaru. Naanu avara Kannadave Satya karyakramakke palace grounds ge hogidde.. Haage avara yella (almost) album galu nanna baLi ive...Anthaha Chiraatmakke saashtaanga namanagalu..

  ReplyDelete