Monday, January 11, 2010

ಕಥೆ ದಾಸರದು...ಕಂಬಳಿ ಯಾರದ್ದೋ??!!




ಬೇಸಿಗೆಯ ಬೇಗೆ ಮತ್ತು ಮೇವಿನ ಕೊರತೆಯಿಂದ ಎಲುಬು ಬಿಟ್ಟುಕೊಂಡು ಸೊರಗುವ ರೈತನ ರಾಸುಗಳಂತೆ ಸೊರಗಿದ್ದರೂ ಚುಚ್ಚುವವುದನು ಬಿಡೆವು ಎನ್ನುವ ರಾಜಕಾರಣಿಯಂತೆ ಮುಳ್ಳುಗಳಿಂದ ಕೂಡಿದ ಜಾಲಿ ಮರದ ಕೊಂಬೆಗೆ ನೇತುಬಿದ್ದಿದ್ದ ಭೇತಾಳನನ್ನು ಹೆಗಲಿಗೇರಿಸಿ, ಪ್ರತಿ ಬಾರಿಯೂ ದಾಳಿ ಮಾಡಿ ಲಂಚಕೋರ ಅಧಿಕಾರಿ ಕುಳಗಳ ಅಕ್ರಮ ಆಸ್ತಿಯ ಪತ್ತೆ ಮಾಡಿ, ಅವರ ಬಣ್ಣ ಬಯಲುಮಾಡಿ, ಸರಕಾರಕ್ಕೆ ಅವರನ್ನು ಶಿಕ್ಷಿಸಲು ಬಿಟ್ಟು, ಮತ್ತೊಂದು ದಾಳಿಗೆ ಅಣಿಯಾಗುವ ಲೋಕಾಯುಕ್ತರಂತೆ ಈ ಬಾರಿಯೂ ಶತವಿಕ್ರಮ ಕ್ರಿಮೆಟೋರಿಯಂ ವಾಹನದ ಕಡೆ ಹೆಜ್ಜೆ ಹಾಕಿದನು.
ಐದು ವರ್ಷ ಸಂಸತ್ತಿನಲ್ಲಿ ನಿದ್ದೆಮಾಡಿ ಚುನಾವಣೆ ಸಮಯದಲ್ಲಿ ಬಾಯಿಗೆ ಬಂದದ್ದೆ ಪ್ರಶ್ನೆ ಎನ್ನುವಂತೆ ಅಧಿವೇಶನದಲ್ಲಿ ಪ್ರಶ್ನೆ ಮಾಡಿ ಗುಲ್ಲೆಬ್ಬಿಸುವ ಸಂಸದನಂತೆ ಈ ವರೆಗೂ ಸುಮ್ಮನಿದ್ದ ಶವದೊಳಗಿನ ಭೇತಾಳ ಮಾತನಾಡತೊಡಗಿತು "ಅಲ್ಲಯ್ಯ ಶತವಿಕ್ರಮ.. ಮುಗಿಯದ ಫಲವನ್ನೀಯದ ಆಶ್ವಾಸನೆಗಳನ್ನೇ ನಂಬಿ ಪ್ರತಿ ಬಾರಿಯೂ ಅದೇ ಸಂಸದನನ್ನು ಆರಿಸಿ ಕಳುಹಿಸುವ ಸಂಸತ್ ಚುನಾವಣಾ ಕ್ಷೇತ್ರದ ಮದಾರನಂತೆ ನಿನ್ನ ಈ ಪ್ರಯತ್ನದ ಹಾದಿಯ ಶ್ರಮ ಅರಿವಾಗದಂತೆ ತುತ್ತೂರಿ ನಗರದ ಹರಿಕಥೆ ಹೇಳುತ್ತೇನೆ ಕೇಳು..." ಎಂದು ತನ್ನ ತುತ್ತೂರಿಯನ್ನು ಊದಲು ಪ್ರಾರಂಬಿಸಿತು.
"ಬಹಳ ಶ್ರಮ ಪಟ್ಟು ಸ್ವಯಂವರದಲ್ಲಿ ಹುಡುಗಿಯನ್ನ ಗೆದ್ದು ಬಂದ್ರೂ ತನಗೇ ಪೂರ್ಣವಾಗಿ ಹೆಂಡತಿಯಾಗದವಳನ್ನು ಪೂರ್ಣ ಪಡೆಯಲು ಪರದಾಡುವ ಪಡ್ಡೆ ಯುವರಾಜನಂತೆ, ನಮ್ಮ ಎಡಬಿಡಂಗಿ ಗೌಡ, ..ಅದೇನಯ್ಯ.. ತುತ್ತುರಿನಗರದ ಮಾಜಿ ಉಪ-ಮೇಯೋ-ರ, ಗುಡದಹಳ್ಳಿ-ಎಂಕಣ್ಣ, ಮೇಯೋ-ರ ವರದನಿಗೆ ಕೊಟ್ಟಿದ್ದ ತನ್ನ ಬೆಂಬಲಾನ ವಾಪಾಸ್ ತಗಂಡ..., ಅವನು ವಾಪಸ ತಗಂಡ ಅನ್ನೋದಕ್ಕಿಂತಾ... ಅ ತರಹದ ವಾತಾವರಣದ ಸೃಷ್ಟಿ ಆಯ್ತು. ಸರಿ, ಚುನಾವಣೇನೂ ಆಯಿತು.., ಗೌಡನ ಕರ್ಜುರದ ಗುರ್ತಿಗೆ ಪೂರ್ಣ ಬಹುಮತ ಸಿಗಲಿಲ್ಲ. ಇನ್ನೊಂದು ಕಡೆ ಪ್ರತಿ ಬಾರಿಯಂತೆ ಈ ಬಾರಿಯೂ ಗೆದ್ದ ..ಸಾರಾಯಿ ಕಂಟ್ರಾಕ್ಟರ್ ದಾರಾಕಡ್ಡಿ (ಅವನು ಮೊದಲು ಮೊಹಲ್ಲ ಮೊಹಲ್ಲ ಸುತ್ತಿ ದಾರ, ಕಡ್ಡಿ ,ಗಾಳಿಪಟ ಮಾರ್ತ ಇದ್ನಂತೆ ಅದಕ್ಕೇ ಅವನ ನಿಜ ಹೆಸರೇ ಯಾರಿಗೂ ಗೊತ್ತಿಲ್ಲ) ಮೊರೆಹೋದ ಎಂಕಣ್ಣ, ಲಕ್ಷಾಂತರ ಪಾಕೆಟ್ ಮಾರಿ ಕೊಟ್ಯಂತರ ಮಾಡಿದ್ದ ದಾರಾಕಡ್ಡಿಗೆ ಐದಾರು ಕರ್ಪೋರೇಟರುಗಳನ್ನ ಕೊಳ್ಳೋದು ಕಷ್ಟ ಆಗಲಿಲ್ಲ. ಸರಿ ಗದ್ದುಗೆ ಮೇಲೆ ಕುಂತೇ ಬಿಟ್ಟ ಗೌಡ, ಎಂಕಣ್ಣ ಅಂದ್ರೆ ಬಿಂಕಣ್ಣ ಅನ್ನೋತರಹ ರಾಜ್ಯ-ಭಾರ ನೆಡೀತು. ಅವನ ಅದೃಷ್ಟ ನೆಟ್ಟಗಿರಲಿಲ್ಲ, ಎಂಡ ಕುಡ್ದು ಸಾಯೋ ಬಡಪಾಯಿಗಳು ಜಾಸ್ತಿ ಆದರು. ಹೆಣ್ಣುಮಕ್ಕಳು ಬೀದಿಗಿಳಿದರು. ತನ್ನ ನೆಚ್ಚಿನ ಕಾರ್ಪೊರೇಟರ್ ಮೇರಿ ಬಡವರ ಪರ ವಹಿಸಿದಳು. ಕಳ್ಳಭಟ್ಟಿಗೆ ಕತ್ರಿ ಬಿತ್ತು. ಪುರಸಭೆ ಕಾನೂನು ಜಾರಿ ಮಾಡ್ತು. ಸಣ್ಣಗೆ ಅಧಿಕಾರ ವಲಯದಲ್ಲಿ ಹೊಗೆ ಶುರುವಾಯ್ತು..ಎಂಕಣ್ಣನ ನಿಜವಾದ ದುರ್ದೆಸೆ ಪ್ರಾರಂಭವೋ ಎನ್ನುವ ಹಾಗೆ ಯಾವತ್ತೂ ಇಲ್ಲದ ಮಳೆ ಬಂತು...ಜನ ದಿಕ್ಕಾಪಾಲು..!!?? ಅದೇನೋ ಯಾಕೋ ಎಂಕಣ್ಣನ ಬಿಂಕನೂ ಕೆಡ್ತು, ಇತ್ತ ಕೆಂಡಾಮಂಡಲ ಆಗಿದ್ದ ದಾರಾಕಡ್ಡಿ. ಎಂಕಣ್ಣನ್ನ ಎತ್ತದೆ ಹೋದ್ರೆ ನಾನು ಬಿಡ್ತೀನಿ ಅಂತ ಕಡ್ಡಿ ಎರಡು ತುಂಡು ಮಾಡಿದ, ಹಂಗೆ ಕುಂತುಬಿಟ್ಟ ದಾರಾಕಡ್ಡಿ!!. ಇಬ್ಬರ ಜಗಳದಲ್ಲಿ ಬಡವಾಗಿದ್ದು- ತುತ್ತೂರಿ ನಗರದ ಜನ!! ಸೂರಿಲ್ಲ-ಊರಿಲ್ಲ ಅನ್ನೋಹಾಗಾಗಿತ್ತು ಅವರ ಕಥೆ. ದೊಡ್ಡೋರು ಬಂದರು ಎಂಕಣ್ಣಂಗೆ ಸುಂಕ ಕಟ್ಟಬೇಕಾಯ್ತು.. ಹೆಂಗೋ ತೇಪೆ ಬಿತ್ತು. ಇವಾಗ ರಾಜ್ಯ- ಇನ್ನೂ ಭಾರವಾಗೇ ನಡೆದಿದೆ..."
ಅಲ್ಲಿಗೆ ಸುಮ್ಮನಾಯಿತು ಭೇತಾಳ..
"ಏನಯ್ಯಾ ಭೇತಾಳ ಅಷ್ಟೇನಾ ಪುಂಗಿ ನಿನ್ನದು ?"
ಎಂದ ಶತವಿಕ್ರಮ..
"ನನ್ನ ಪ್ರಶ್ನೇನ ಕೇಳು.."
ಹೇಳ್ತು ಭೇತಾಳ.
"ಮುಂದೆ ಮಳೆ ಆಗೋಲ್ಲ ಅನ್ನೋದು ಏನು ಗ್ಯಾರಂಟಿ? ತುತ್ತೂರಿ ನಗರದ ಮಾನವಂತ ಹೆಣ್ಣು ಮಕ್ಕಳ ಗಂಡಂದಿರು ಸಾರಾಯಿ ಕುಡ್ದು ಹಾಳಾಗ್ತಾರೆ ಅಂತ ಎಂಕಣ್ಣಂಗೆ ಹೇಳಿ ..ಸಾರಾಯಿ ಧಂಧೆ ನಿಲ್ಸೋಲ್ಲ ಅಂತ ಏನು ಗ್ಯಾರಂಟಿ? ಒಂದುವೇಳೆ ಹಂಗಾದ್ರೆ .....ಎಂಕಣ್ಣ ಕು0ತಿರೋ ಕಂಬಳಿ ನಂದು ಅಂತ ದಾರಾಕಡ್ಡಿ ಕೆಂಪು ಬಾವುಟ ಹಾರ್ಸೊಲ್ಲ ಅಂತ ಏನು ಗ್ಯಾರಂಟಿ? ಅವನು ಕುಂತಿರೋ ಕಂಬಳಿನಾ ಎಳಿಯೋಲ್ಲ ಅನ್ನೋದು ಏನು ಗ್ಯಾರಂಟಿ"

"ಅದಕ್ಕೇ ಹೇಳೋದು....ಬುರುಡೆ ಒಳಗಡೆ ಏನಾದ್ರೂ ಇರಬೇಕು ಅಂತ....,!! ಅಲ್ಲಯ್ಯ ಭೇತಾಳ ಇಷ್ಟೊಂದು ಕಂಡೀಶನ್ನುಗಳ ಮೇಲೆ ಕಂಬಳಿ ಹಾಸ್ಕೊಂಡು ಕುಂತ್ರೆ ಎಂಕಣ್ಣನ ಬಿಂಕಕ್ಕೆ ನಾನ್ಯಾಕೆ ಗ್ಯಾರಂಟಿ ಕೊಡಲಿ..?? ಇದನ್ನು ತುತ್ತೂರಿ ಜನತೆ ಹೇಳ್ಬೇಕು. ಅವರೇ ನಿರ್ಧರಿಸಬೇಕು...ತಮ್ಮ ನಾಯಕ ಹೇಗಿರಬೇಕು? ಅಂತ...ದೂರದ ಯೋಚನೆಮಾಡಿ, ತರ್ಕಿಸಿ ಚುನಾಯಿಸೋ ಬುದ್ಧಿವಂತಿಕೆ ತೋರಬೇಕು, ಬುದ್ಧಿವಂತರು ಅನಿಸಿಕೊಂಡವರು ದಡ್ಡರಿಗಿಂತಾ ತೀರಾ ದಡ್ಡರಂತೆ ವರ್ತಿಸಿ ಓಟೇ ಹಾಕದೆ ಇರೋದನ್ನು ಬಿಡಬೇಕು.., ಆಗಲೇ ಏನಾದ್ರು ಸಾಧ್ಯ"
ಇನ್ನೂ ಶತವಿಕ್ರಮನ ಮಾತು ಮುಗಿದಿರಲಿಲ್ಲ... ಸಭೇಲಿ ಪ್ರಸ್ತಾಪದ ಮಂಡನೆಗೆ ಮುಂಚೆಯೇ ಸಭೆಯನ್ನ ಬಿಡೋ ಸಭಾಸದರಂತೆ...ಶತವಿಕ್ರಮನ ಹೆಗಲಿಂದ ಮಾಯವಾಗಿ ಕಾರ್ಪೋರೇಶನ್ ಪಕ್ಕದ ಸಣಕಲು ಮರಕ್ಕೆ ಜೋತು ಬೀಳಲು ಹೊರಟಿತು ..ಭೇತಾಳ.

31 comments:

  1. ವೌ,,, ಏನ್ ಕತೆ ಸರ್,,ಇದು,,,,,ಸೂಪರ್......ವೆರಿ ನೈಸ್ ಒನ್....

    ReplyDelete
  2. ಹಹಹಹ
    ಸರ್ ಇದೇನಿದು ವಿಕ್ರಂ ಮತ್ತು ಬೇತಾಳ ಆಗಿದಿರಾ
    ತುಂಬಾ ನವಿರಾದ ನಿರೂಪಣೆ
    ಬಹಳ ಚೆನ್ನಾಗಿದೆ ಸಂಭಾಷಣೆ
    ಹೊಸ ಹೊಸ ವಿಚಾರಗಳು ನಿಮಗೆ ಬಹಳಷ್ಟು ಹೊಳೆಯುತ್ತವೆ

    ReplyDelete
  3. hahaha vikram betaLada kathe tumba chennagide haha.. hosatana hudukteeri sir.

    ReplyDelete
  4. ಬೇತಾಳನಿಗೆ ಹಳೇ ಕಥೆಗಳೆಲ್ಲಾ ಮರೆತು ಹೋಗಿ, ರಾಜಕೀಯದ ಪ್ರಸಂಗಗಳನ್ನು ಶುರು ಮಾಡ್ಕೊಂಡ್ನಾ‌ ಹೇಗೆ? ಚೆನ್ನಾಗಿದೆ :)

    ReplyDelete
  5. ಗುರು, ಧನ್ಯವಾದ...ನಾನು ಭೇತಾಳನ್ನ ಬಹಳ ಪೋಸ್ಟಗಳ ನಂತರ ಕರೆತಂದಿದ್ದೀನಿ...ನಿಮ್ಗೆ ಇಷ್ಟ ಆದದ್ದು ನನಗೂ ಸಂತೋಷ...

    ReplyDelete
  6. ಗುರು, ನನಗೆ ಕೆಲವು ವಿದ್ಯಮಾನಗಳನ್ನು ನೇರವಾಗಿ ಉದ್ದೇಶಿಸದೇ ಉಲ್ಲೇಖಿಸುವುದಕ್ಕೆ ಮನಸ್ಸದಾಗ...ಭೇತಾಳನ ಮೊರೆಹೋಗ್ತೇನೆ ಇಲ್ಲ..ಅಂದ್ರೆ..‘ಗೊತ್ತಿಲ್ಲ ಮಗು‘. ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದ

    ReplyDelete
  7. ಮನಸು ಮೇಡಂ, ಹಳೆಯದರಲ್ಲಿ ಹೊಸತನ್ನು ತೂರಿಸೋಕೆ ಪ್ರಯತ್ನ ಮಾಡ್ತೀನಿ ಅನ್ನಿ...ಭೇತಾಳನ್ನ ಮುಂದೆ ಇಟ್ಕೊಂಡು..ನನ್ನ ಅನಿಸಿಕೆಯನ್ನ ಪ್ರಸ್ತಾಪಿಸೋ ಪ್ರಯತ್ನ..ಅಷ್ಟೆ...

    ReplyDelete
  8. ಆನಂದ್ ಭೇತಾಳನಿಗೆ ನೆನಪೆಲ್ಲಿರುತ್ತೆ..ಹೇಳಿ...ಆಗಿಂದಾಗ ಮರ್ತು ಹೋಗ್ತಾನೆ..ಖೋಪಡಿ ಖಾಲಿ ಅಲ್ವಾ ಅದಕ್ಕೆ....ಹಹಹ...ಅದೂ ಅಲ್ಲದೇ ಮಣ್ಣುತಿನ್ನೋ ಕೆಲಸ ಮಾಡೋ ನಮ್ಮ ಜನಪ್ರತಿನಿಧಿಗಳನ್ನ ನೋಡಿ...ತಾನು ಸತ್ತು ಮಣ್ಣು ತಿಂದರೆ ಇವರು ಬಹುಕಿದ್ದಾಗಲೇ ಆ ಕೆಲಸ ಮಾಡ್ತಾರಲ್ಲ ಅಂತ ಖುಷಿ ಅದಕ್ಕೆ...

    ReplyDelete
  9. ಜಲನಯನ ಅವರೇ, ನಿಮ್ಮ ಕಥೆ ಏನೋ ತುಂಬಾ ಚೆನ್ನಾಗಿದೆ.. ಆದರೆ ಕೆಲವು ಕನೆಕ್ಶನ್ಸ್ ಅರ್ಥ ಆಗಲಿಲ್ಲ! ಹೀಗೆ ಇನ್‌ಡೈರೆಕ್ಟ್ ಆಗಿ ಎಲ್ಲದರ ಬಗ್ಗೆನು ಹೇಳುವ ಹಾಗಿದ್ರೆ ಎಷ್ಟು ಚೆನ್ನಾಗಿರ್ತಿತ್ತು ಅಲ್ವಾ??

    ReplyDelete
  10. ಆಜಾದ್ ಅವರೆ,

    ನೋಡಿದ್ರಾ...ಬೇತಾಳ ಕೂಡಾ ಜಾಲಿಮರದಿ೦ದ ಕಾರ್ಪೋರೇಶನ್ ಹತ್ತಿರದ ಸಣಕಲುಮರಕ್ಕೆ ಪಕ್ಷಾ೦ತರ ಮಾಡಿಬಿಟ್ಟಿತು.
    ಚೆನ್ನಾಗಿ ಬರೆದಿದ್ದೀರಿ.

    ReplyDelete
  11. ಆಜಾದಣ್ಣ,
    ರಾಜಕೀಯದ ಪುರಾಣ ಬೇತಾಳ ಕಥೆಯನ್ನಾಗಿಸಿ ಚೆನ್ನಾಗಿ ಬರೆದಿದ್ದೀರಿ......
    ಬೇತಾಳನನ್ನು ಕಾರ್ಪೋರೇಶನ್ ಹತ್ತಿರದ ಸಣಕಲುಮರದಿಂದ ಮುಂದೆ ಯಾವ ಮರಕ್ಕೆ ತಗಲಾಕ್ತೀರ ಅಂತ ಕಾಯುತ್ತಿರುತ್ತೇವೆ.......

    ReplyDelete
  12. ಸುಮನ ಮೇಡಂ, ನಿಮಗೆ ಅರ್ಥವಾಗದ ಕನೆಕ್ಷನ್ ಏನು ಅನ್ನೋದು ತಿಳ್ಸಿ..ನನ್ನ ಕೈಲಾದ ಪ್ರಯತ್ನ ಮಾಡ್ತೇನೆ...ಭೇತಾಳನ ಕಥೆ ನಿಮಗೆ ಮೆಚ್ಚುಗೆಯಾಯ್ತಲ್ಲಾ...ಸಂತೋಷ...ಮೊಗ್ಯಾಂಬೋ ಖುಷ್ ಹುವಾ...ಹಹಹ

    ReplyDelete
  13. ಮನಮುಕ್ತಾರವರೇ, ಧನ್ಯವಾದ...ಏನು ಮಾಡೊದು ..? ಪಕ್ಷಾಂತರ ಉದ್ದೇಶಿತ ಅಲ್ಲ...ಆಕಸ್ಮಿಕ....ನೀವು ಗುರುತಿಸಿದಿರಲ್ಲ..ಆದ್ರೆ ಸಮಯಸಾಧಕ ಪಕ್ಷಾಂತರಿಗಳನ್ನ ನಮ್ಮ ಓಟರ್ ಗಳು ಗುರುತಿಸಿದರೆ ಎಷ್ಟು ಚೆನ್ನ..ಅಲ್ಲವಾ?

    ReplyDelete
  14. ಮಹೇಶ್ ನೀವ್ಯಾಕೆ ಭೇತಾಳನ ಹಿಂದೆ ಬಿದ್ದಿದ್ದೀರಿ..? ಶತವಿಕ್ರಮನ ಹತ್ತಿರ ಒಪ್ಪಂದ ಮಾಡ್ಕೊಂಡ್ರ ಹೇಗೆ...? ಹಹಹ..ನೋಡಿ ಅಲ್ಲಿಂದ ಭೇತಾಳಾನೇ ಬೇರೆಕಡೆ ಹೋಗುತ್ತಾ ಅಂತ..ಕಾದು ನೋಡಿ...!!!

    ReplyDelete
  15. ಕಲಿಯುಗದ ಬೇತಾಳ ತ್ರಿವಿಕ್ರಮನ ಕತೆ ಚನ್ನಾಗಿದೆ ಸರ್

    ReplyDelete
  16. ಧನ್ಯವಾದ ಮಂಜು, ವಿಕ್ರಮ ಸಾಧನೆಗೆ ತ್ರಿವಿಕ್ರಮ ಸ್ಫೂರ್ತಿಯಾದರೆ..ವ್ಯವಸ್ಥೆಗೆ ಕೈಗನ್ನಡಿಯಾಗಿ ಭೇತಾಳನನ್ನು ಉಪಯೋಗಿಸಿ ಪ್ರಸ್ತುತಗಳ ವಿಡಂಬನೆಗಳನ್ನು ಅನಾವರಣಗೊಳಿಸುವ ಅಲ್ಪ ಪ್ರಯತ್ನ ಅಷ್ಟೇ...

    ReplyDelete
  17. ಅಜಾದ್ ಸರ್,
    ನಿಮಗೆ ಈ ರೀತಿನೂ ಬರೆಯಬಹುದು ಎಂದು ಹೇಗೆ ಹೊಳೆಯುತ್ತದೋ ಗೊತ್ತಿಲ್ಲ...... ಸೂಪರ್ ಸರ್...... ಬೇಕಿದ್ದಲ್ಲಿ ವ್ಯಂಗ್ಯ, ಇದ್ದಲ್ಲಿ ಹೊಗಳಿಕೆ ಸೇರಿಸಿ ಬರೆದ ಲೇಖನ ಚಾತಿಯಾಗಿದೆ ರಾಜಕಾರಣಿಗಳಿಗೆ...... ನನ್ನ ಮುಂದಿನ ಪೋಸ್ಟ್ ಗೆ ಈ ನಿಮ್ಮ ಲೇಖನ ದಾರಿ ತೋರಿಸಿದೆ...... ಈ ಕೆಳಗಿನ ಪ್ರಶ್ನೆಗಲಂತೂ ಹೇಗೆ ನಿಮಗೆ ಹೊಳೆಯಿತೋ? ತುತ್ತೂರಿ ನಗರದ ಮಾನವಂತ ಹೆಣ್ಣು ಮಕ್ಕಳ ಗಂಡಂದಿರು ಸಾರಾಯಿ ಕುಡ್ದು ಹಾಳಾಗ್ತಾರೆ ಅಂತ ಎಂಕಣ್ಣಂಗೆ ಹೇಳಿ ..ಸಾರಾಯಿ ಧಂಧೆ ನಿಲ್ಸೋಲ್ಲ ಅಂತ ಏನು ಗ್ಯಾರಂಟಿ? ಒಂದುವೇಳೆ ಹಂಗಾದ್ರೆ .....ಎಂಕಣ್ಣ ಕುಂತಿರೋ ಕಂಬಳಿ ನಂದು ಅಂತ ದಾರಾಕಡ್ಡಿ ಕೆಂಪು ಬಾವುಟ ಹಾರ್ಸೊಲ್ಲ ಅಂತ ಏನು ಗ್ಯಾರಂಟಿ? ಅವನು ಕುಂತಿರೋ ಕಂಬಳಿನಾ ಎಳಿಯೋಲ್ಲ......... ಧನ್ಯವಾದಗಳು ಸರ್....

    ReplyDelete
  18. ದಿನಕರ್ ಇದೊಂದು scientist ನ ಹುಚ್ಚು ಕಲ್ಪನೆ ಅದ್ಕೊಂಡ್ರಾ? ಅಥವಾ ಹೀಗೂ ಯೋಚಿಸೋಕೆ ಸಾಧ್ಯ ಅನಿಸಿತಾ? ಒಂದಂತೂ ನಿಜ..ನಮ್ಮ ಎಲ್ಲ ಅಭಾಸಗಳು, ವ್ಯತಿರೇಕಗಳು, ಅಸತ್ಯಗಳು. ಅಮಾನವೀಯತೆಗಳು, ಎಲ್ಲದಕ್ಕೂ ರಾಜಕೀಯ ವ್ಯವಸ್ಥೆಯಲ್ಲಿ ನಿದರ್ಶನಗಳು, ಮಾದರಿಗಳು ಯತೇಛ್ಚವಾಗಿ ಸಿಗುತ್ತವೆ ಎಂಬುದುದು, ಅಲ್ಲವೇ...? ಹಾಗಾಗಿ ಇವನ್ನು ಗಮನಿಸಿದರೆ ಎಲ್ಲ ರೀತಿಯ ಲೇಖನಗಳೂ ಸಾಧ್ಯ...ಹಹಹ.....ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ.

    ReplyDelete
  19. ಇಂದಿನ ರಾಜಕೀಯಕ್ಕೆ ಬೇತಾಳ ಹಿಡಿದ ಕನ್ನಡಿ ಚೆನ್ನಾಗಿದೆ.

    ReplyDelete
  20. ಸುನಾಥ್ ಸರ್, ನಿಮ್ಮ ಮಾತು ನನಗೆ ಟಾನಿಕ್ಕು.. ಧನ್ಯವಾದಗಳು.

    ReplyDelete
  21. ಬಹಳ ಚೆನ್ನಾಗಿದೆ ನಿಮ್ಮ ಬೇತಾಳನ ಕಥೆ :) ಆದರೆ ಸರಿ ಉತ್ತರ ಹೇಳಿದರೆ ಹಾರಿಯೇ ಹೋಗುವುದಲ್ಲ ಈ ಬೇತಾಳ!! ನಮ್ಮ ರಾಜಕಾರಣಿಗಳನ್ನು ನೋಡಿಯಾದರೂ ಕಲಿಯಬೇಕಿತ್ತು. ಏಷ್ಟೇ ಬೈದು ಅವಮಾನಿಸಿದರೂ ತಮ್ಮ ದುರಾಸೆಯನ್ನು ಬಿಡರು, ಗದ್ದುಗೆಯನ್ನು ಬಿಟ್ಟು ಓಡಿಹೋಗರು!!!

    ReplyDelete
  22. ಇ೦ತಾ ಅಧ್ಬುತ ಹಾಸ್ಯಮಯ ಅಣುಕನ್ನು ನಾನು ಇದುವರೆಗೆ ಓದೇ ಇರಲಿಲ್ಲ. ಸರ್ವಶ್ರೇಷ್ಠ ರಚನೆ ಅಜ಼ಾದರೇ. ನಕ್ಕು ನಕ್ಕೂ ಸುಸ್ತಾಯಿತು. ನಮ್ಮ ಎ೦ಕಣ್ಣ ಮತ್ತು ಧಾರಕಡ್ಡಿ ತಪ್ಪದೇ ಓದಬೇಕಾದ ಕೃತಿ. ಮೂದೇವಿಗಳಿಗೆ ನಾಚಿಕೆನೇ ಇಲ್ಲ. ನಮ್ಮ ರಾಜಕೀಯದ ಪ್ರಸ್ತುತ ಸನ್ನಿವೇಶಕ್ಕೆ ಸೂಕ್ತ ಅಣುಕು.

    ReplyDelete
  23. ನಮ್ಮ ರಾಜಕಾರಣಿಗಳು ಛಲ ಬಿಡದ ವಿಕ್ರಮನ೦ತೆ ಗದ್ದುಗೆ ಬಿಡದ ಧೀರರು ಸರ್....
    ಏನೇ ಬರಲಿ... ಪ್ರಳಯ ಆಗಲಿ... ಕುರ್ಚಿಯ ಬಿಡೆವು...ಫೆವಿಕಾಲ್ ಕಾ ಜೋಡ್ನಾ....ಸರ್

    ReplyDelete
  24. ತೇಜಸ್ವಿನಿಯವರೇ, ಭೇತಾಳನ ಮನಸ್ಥಿತಿಯೇ ನಮ್ಮ ವ್ಯವಸ್ಥೆಯದು..ನಿಜ ಹೇಳಿ ನಮ್ಮ ಸಂದೇಹ ಅಥವಾ ತೊಂದರೆ ನಿವಾರಿಸ ಹೋದರೆ..ಎದುರಿನವರು ಪಲಾಯನಕ್ಕೆ ಶರಣಾಗುತ್ತಾರೆ, ಅಲ್ಲವೇ? ಹೌದು ನಮ್ಮರಾಜಕಾರಣಿಗಳು ಹೇಗಾದರೂ ಸರಿ ಗದ್ದುಗೆಬಿಡಲು ತಯಾರು ಇರುವುದಿಲ್ಲ...ಅವರಿಗೆ ಬುದ್ಧಿ ಬರೋದೂ ಒಂದೇ ವಿಕ್ರಮ ಭೇತಾಳನ್ನ ವಶಪಡಿಸಿಕೊಳ್ಳೋದೂ ಒಂದೇ..

    ReplyDelete
  25. ಸೀತಾರಾಂ ಸರ್...ಭೇತಾಳ ನನಗೆ ನೆವ ನಮ್ಮ ವ್ಯವಸ್ಥೆಯನ್ನು ಪರಿಚಯಿಸಲು...ವಿಕ್ರಮ ಅದನ್ನು ಮೆಟ್ಟಿ ಬರುವುದು ಸತ್ಯಕ್ಕೆ ತರುವ ಜಯ. ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ.

    ReplyDelete
  26. ವಿಜಯಶ್ರೀ ನಿಮ್ಮ ಪ್ರತಿಕ್ರಿಯೆಗೆ ಶರಣು, ಫೆವಿಕಾಲ್ ಕಾ ಜೋಡ್ ಹೈ ಟೂಟೆಗಾ ನಹೀ

    ReplyDelete
  27. ಒಳ್ಳೆಯ ವಿಡಂಬನೆ, ಓದಿ ಕುಶಿ ಆಗಿ, ನಿಮಗೆ ಒಂದಿಷ್ಟು ಬೇತಾಳಗಳನ್ನು ಉಡುಗೊರೆಯಾಗಿ ಕೊಡಬೇಕು ಅಂತ ಇದ್ದೀನಿ, ಎನಂತಿರಿ? (ಅವಾಗ ಇಲ್ಲಿರೋ ಬ್ರಹ್ಮ ರಾಕ್ಷಸರು, ದೆವ್ವ ಪಿಚಾಚಿಗಳು, ಬೇತಾಳಗಳು ಕಡಿಮೆ ಆಗಬಹುದೇನೋ ಅನ್ನುವ ಆಸೆ :) )

    ReplyDelete
  28. ಹ್ಹ ಹ್ಹ ಹ್ಹ... ಸರ್ ಕಥೆ ಚೆನ್ನಾಗಿದೆ... ಒಳ್ಳೆಯ combination ... ಹಾಸ್ಯನು ಇದೆ ಮೆಸೇಜ್ ಕೂಡ ಇದೆ...
    ನಿಮ್ಮವ,
    ರಾಘು.

    ReplyDelete
  29. ಬಾಲು, ಭೇತಾಳಗಳನ್ನು ಒಟ್ಟಿಗೆ ಬಿಡಬೇಡಿ ಸ್ವಾಮಿ..ಮತ್ತೆ ವಿಕ್ರಮರನ್ನ ಎಲ್ಲಿಂದ ತರಲಿ...? ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ.

    ReplyDelete
  30. ರಾಘು, ಏನು ಈ ಮಧ್ಯೆ ಕಾಣ್ತಿಲ್ಲ ಅಂದುಕೊಳ್ಳುತ್ತಿರುವಾಗಲೇ ನಿಮ್ಮ ಪ್ರತಿಕ್ರಿಯೆ. ಮೂಳೆ ಮಾಂಸದ ಮನುಜ ಬಾಯಿ ತೆಗೆಯೊಲ್ಲ ಅಂದ್ರೆ.. ಕನಿಷ್ಟ ಭೇತಾಳನ ಬಾಯಿಂದಾದ್ರೂ ಸ್ವಲ್ಪ ವಾಸ್ತವ ತಿಳ್ಸೋಣ ಅಂತ...

    ReplyDelete
  31. ವಿಭ್ಭಿನ್ನ ಶೈಲಿ.. ಇಷ್ಟವಾಯಿತು..

    ReplyDelete