(ಶುಭಾಷಯಗಳು)
ಹಸಿರುಸಿರಾಡುವ ಹೊಲ ಗದ್ದೆ
ಉಸಿರಾಗಿದ್ದವು, ರೈತನೆಂದ ಗೆದ್ದೆ
ಕೊಳ್ಳುವುದು ಭಾರ, ಮಾರು ಅಗ್ಗ
ಸಾಲಹೊರೆ, ರೈತನ ಕೊರಳಿಗೆ ಹಗ್ಗ
ಬರಲಿ ಅನ್ನದಾತನ ಅನುಕೂಲದ ದಿನ
ತೀರಲಿ ಸಾಲ,ಹಸಿರಾಗಿ ಹೊಲ ಅನುದಿನ
ಬರಲಿ ಸಂಕ್ರಾಂತಿ ಮನೆಗೆ, ಗದ್ದೆಗೆ
ಊರಿಗೆ, ನಾಡಿಗೆ, ರೈತನಿಗೆ ಗದ್ದುಗೆ
ಆಗಲಿ ತ್ರಿವರ್ಣ ಕ್ರಾಂತಿ, ಹಸಿರು ಶಾಂತಿ
ಶ್ವೇತ ಹೈನಿಗೆ, ಮೀನಿಗೆ ನೀಲಕ್ರಾಂತಿ
ಬಾನಲಿ ಹಾರಾಡಿ ತ್ರಿವರ್ಣ ಪಟಪಟ
ತ್ಯಾಗ, ಶೌರ್ಯಕ್ಕಾಗಲಿ ಕೇಸರಿ ದಿಟ
ಸಮೃದ್ಧಿ, ಸಸ್ಯಸಿರಿ ಆಗಲಿ ಹಸಿರು
ಶಾಂತಿಗೆ ಬಿಳಿ, ಮುನ್ನಡೆಗೆ ಚಕ್ರವೇ ಉಸಿರು
ಸಂಭ್ರಮವಾಗಲಿ ಒಂದೆಡೆ ಅನ್ನದಾತನಿಗೆ
ತರಲಿ ಎಳ್ಳು-ಬೆಲ್ಲದ ಸಂಕ್ರಾಂತಿ
ಯೋಧನ ಶೌರ್ಯ, ಮೇಧಾವಿಗಳ ನಾಡಿಗೆ
ನಮಿಸಿ ವಿಶ್ವ ಆಗಲಿ ತ್ರಿವರ್ಣ ಕ್ರಾಂತಿ
ಹಸಿರುಸಿರಾಡುವ ಹೊಲ ಗದ್ದೆ
ಉಸಿರಾಗಿದ್ದವು, ರೈತನೆಂದ ಗೆದ್ದೆ
ಕೊಳ್ಳುವುದು ಭಾರ, ಮಾರು ಅಗ್ಗ
ಸಾಲಹೊರೆ, ರೈತನ ಕೊರಳಿಗೆ ಹಗ್ಗ
ಬರಲಿ ಅನ್ನದಾತನ ಅನುಕೂಲದ ದಿನ
ತೀರಲಿ ಸಾಲ,ಹಸಿರಾಗಿ ಹೊಲ ಅನುದಿನ
ಬರಲಿ ಸಂಕ್ರಾಂತಿ ಮನೆಗೆ, ಗದ್ದೆಗೆ
ಊರಿಗೆ, ನಾಡಿಗೆ, ರೈತನಿಗೆ ಗದ್ದುಗೆ
ಆಗಲಿ ತ್ರಿವರ್ಣ ಕ್ರಾಂತಿ, ಹಸಿರು ಶಾಂತಿ
ಶ್ವೇತ ಹೈನಿಗೆ, ಮೀನಿಗೆ ನೀಲಕ್ರಾಂತಿ
ಬಾನಲಿ ಹಾರಾಡಿ ತ್ರಿವರ್ಣ ಪಟಪಟ
ತ್ಯಾಗ, ಶೌರ್ಯಕ್ಕಾಗಲಿ ಕೇಸರಿ ದಿಟ
ಸಮೃದ್ಧಿ, ಸಸ್ಯಸಿರಿ ಆಗಲಿ ಹಸಿರು
ಶಾಂತಿಗೆ ಬಿಳಿ, ಮುನ್ನಡೆಗೆ ಚಕ್ರವೇ ಉಸಿರು
ಸಂಭ್ರಮವಾಗಲಿ ಒಂದೆಡೆ ಅನ್ನದಾತನಿಗೆ
ತರಲಿ ಎಳ್ಳು-ಬೆಲ್ಲದ ಸಂಕ್ರಾಂತಿ
ಯೋಧನ ಶೌರ್ಯ, ಮೇಧಾವಿಗಳ ನಾಡಿಗೆ
ನಮಿಸಿ ವಿಶ್ವ ಆಗಲಿ ತ್ರಿವರ್ಣ ಕ್ರಾಂತಿ
ನಿಮ್ಮ ಹಾರೈಕೆ ಫಲಿಸಲಿ, ಈ ಸಂಕ್ರಮಣಕ್ಕಾದರೂ ರೈತ ಸಂಕಟದಿಂದ ಹೊರಬರಲಿ.
ReplyDeleteಸಂಕ್ರಾಂತಿಯ ಶುಭಾಶಯಗಳು.
ಸ೦ಕ್ರಮಣದ ಹಾರ್ಧಿಕ ಶುಭಾಶಯಗಳು.
ReplyDeleteನಿಮ್ಮ ಆಸೆ, ಬಯಕೆಗಳು ಕೈಗೂಡಲಿ.
ಹೊಸ ಕ್ರಾ೦ತಿಯೊ೦ದಿಗೆ ಸಹಬಾಳ್ವೆ ಶಾ೦ತಿ ತರಲಿ.
ಅಜಾದ್ ಸರ್,
ReplyDeleteಸಂಕ್ರಾಂತಿಯಂದು ಸುಂದರ ಕವಿತೆ ನೀಡಿದ್ದಕ್ಕೆ ಧನ್ಯವಾದ ಸರ್.... ಸಂಕ್ರಾಂತಿ ಎಂದರೆ ನನಗೆ ಖುಷಿ ಯಾಕಂದ್ರೆ, ದುಡಿಯೋ ರೈತನಿಗೆ ಕೈತುಂಬಾ ಪ್ರತಿಫಲ ಸಿಕ್ಕು ಆತ ಆಚರಿಸೋ ಹಬ್ಬ ಎಂದು.... ಆದರೆ ಈಗಿನ ನೆರೆ, ಅಕಾಲಿಕ ಮಳೆ ನೆನೆದರೆ ರೈತನ ಬಗ್ಗೆ ಮರುಕ ಬರುತ್ತದೆ..... ಅದರ ಮೇಲೆ ಈ ಬ್ರಷ್ಟ ರಾಜಕಾರಣಿಗಳು ಗಾಯದ ಮೇಲೆ ಬರೆ ಹಾಕಿದ್ದಾರೆ..... ಮತ್ತೆ ಗದ್ದೆ ಹಸಿರಾಗಲಿ, ರೈತನ ನಗೆ ವಾಪಸ್ ಬರಲಿ...... ಎಲ್ಲರಿಗೂ ಸಂಕ್ರಮಣದಶುಭಾಶಯಗಳು.....
dhanyavadagaLu, nimma harakeyante aagali nimgu sankranti shubhashayagaLu...
ReplyDeletekavana chennagide
ಜಲನಯನ ಅವರೆ,
ReplyDeleteಎಳ್ಳು ಬೆಲ್ಲದ ಸ೦ಕ್ರಾ೦ತಿ,
ತರಲಿ ಎಲ್ಲೆಡೆ ಸುಖ ಶಾ೦ತಿ.
ನಿಮಗೂ, ನಿಮ್ಮ ಪರಿವಾರಕ್ಕೂ ಸ೦ಕ್ರಾ೦ತಿಯ ಶುಭ ಹಾರೈಕೆಗಳು.
ಆಜಾದ್ ಸರ್,
ReplyDeleteಸಂಕ್ರಾಂತಿಗೆ ಉತ್ತಮ ಕವನ ಬರೆದಿದ್ದೀರಿ...
ನಿಮಗೂ ಮತ್ತು ನಿಮ್ಮ ಕುಟುಂಬಕ್ಕೂ ಸಂಕ್ರಾಂತಿಯ ಶುಭ ಹಾರೈಕೆಗಳು.
ಅಜಾದ್ ಸರ್,
ReplyDeleteಸಂಕ್ರಾಂತಿಯ ದಿನ ಒಂದು ಸುಂದರ ಕವಿತೆಯ ಮೂಲಕ ಶುಭಾಶಯ ಹಂಚಿಕೊಂದಿದ್ದಿರ್...ನೀವ್ ಹೇಳಿದ ಹಾಗೆ,,, ಅನ್ನ ಧಾತರ ಬದುಕು,, ಚೆನ್ನಾಗಿ ಇರಲಿ....
ಸಂಕ್ರಾಂತಿ ಹಬ್ಬದ ಶುಭಾಶಯಗಳು...
ಆಝಾದ್ ಭಾಯ್...
ReplyDeleteಸಂಕ್ರಾಂತಿಯ ಶುಭಾಶಯಗಳು..
ಇದಕ್ಕಿಂತ ಸೊಗಸಾಗಿ ಶುಭಾಶಯ ಹೇಳಲು ಸಾಧ್ಯವೇ ಇಲ್ಲ..
ನಮಗೆ ಅನ್ನ ಕೊಡುವ ರೈತರು ಸಂಕಷ್ಟದಲ್ಲಿದ್ದಾರೆ...
ಕೆಟ್ಟ ರಾಜಕಾರಣದವರಲ್ಲದೇ..
ಪ್ರಕೃತಿಯೂ ಸಹ ಮುನಿಸಿಕೊಂಡಿದೆ...
ಕಷ್ಟು ಪಟ್ಟು ಬೆಳೆದ ಬೆಳೆಗೆ ತಕ್ಕದಾದ ಬೆಲೆ ಸಿಕ್ಕರೆ ಸಾಕಿತ್ತು...
ಬೆಳೆದವನಿಗೂ ಕಷ್ಟ..
ಕೊಳ್ಳುವವನಿಗೂ ಕಷ್ಟ...
ಸ್ವಾತಂತ್ರ್ಯ ಸಿಕ್ಕು ಇಷ್ಟು ವರ್ಷಗಳಾದರೂ..
ಪ್ರತಿ ಚುನಾವಣೆಯಲ್ಲಿ ರೈತನ ಹೆಸರು ಹೇಳಿ ಗೆಲ್ಲುವ
ರಾಜಕೀಯದವರಿಗೆ ರೈತ ಬೆಳೆದ ಬೆಳೆಗೆ ಬೆಲೆ ಕೊಡಿಸಲಾಗುತ್ತಿಲ್ಲ...
ಸ್ವಿಸ್ ಬ್ಯಾಂಕಿನಲ್ಲಿ ಗಂಟು ಇಡಲಾಗುತ್ತದೆ...
ಇಂಥವರಿಗೆ..
ನಡುಬೀದಿಯಲ್ಲಿ ನಿಲ್ಲಿಸಿ...
.................
ಕ್ಷಮಿಸಿ..
ಸಂಕ್ರಾಂತಿಹಬ್ಬ...
ಎಳ್ಳು ಬೆಲ್ಲ ತಿಂದು..
ಒಳ್ಳೊಳ್ಳೆ ಮಾತನಾಡಿ ಅಂತ ಹಾರೈಸಬೇಕು ಅಲ್ಲವಾ...?
ನಿಮಗೂ..
ನಿಮ್ಮ ಮನೆಯವರಿಗೂ...
ನಿಮ್ಮ ಬ್ಲಾಗ್ ಓದುಗರಿಗೆಲ್ಲರಿಗೂ... ಸಂಕ್ರಾಂತಿ ಹಬ್ಬದ ಶುಭಾಶಯಗಳು...
ಸಂಕ್ರಾಂತಿಯ ನಿಮ್ಮ ಹಾರೈಕೆ ಫಲಿಸಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ.
ReplyDeleteನಿಮಗೂ ಸಂಕ್ರಾಂತಿಯ ಶುಭಾಶಯಗಳು.
"ಸಂಕ್ರಾಂತಿಯ ಹಾರ್ಧಿಕ ಶುಭಾಷಯಗಳು."
ReplyDeletechennagide kavana
ಶುಭ್ರ ಮಾನಸವನ್ನು ಹೊಂದಿ,
ReplyDeleteಉತ್ತಮ ಆಲೋಚನೆಗಳನ್ನು ಮಾಡುತ್ತಾ,
ಸವಿ ಮಾತುಗಳ ಮೂಲಕ,
ಸಿಹಿ ಬೆಲ್ಲದಚ್ಚು ಹಾಗೂ ಎಳ್ಳು ಬೀರಿ,
ಸಂಕ್ರಮಣವನ್ನು ಸ್ವಾಗತಿಸುವ.
ನಿಮ್ಮ ಹಾರೈಕೆಯೇ ನನ್ನ ಹಾರೈಕೆಯೂ ಆಗಿದೆ.
ನಿಮಗೆ ಹಾಗೂ ನಿಮ್ಮ ಮನೆಯವರೆಲ್ಲರಿಗೂ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು.
ಆನಂದ್ ನಿಮಗೆ ನಿಮ್ಮ ಎಲ್ಲ ಪರಿವಾರಕ್ಕೆ ಎಳ್ಳು-ಬೆಲ್ಲ-ಕಬ್ಬಿನ ಹಬ್ಬದ ಶುಭಕಾಮನೆಗಳು
ReplyDeleteವಿಜಯಶ್ರೀ ಪರಿಶ್ರಮದ ಫಲ ನೀಡೋ ಈ ಹಬ್ಬ ನಿಮಗೆಲ್ಲಾ ಶುಭ ತರಲಿ
ReplyDeleteದಿನಕರ್, ಹಳ್ಳಿಯ ನನ್ನ ಬಾಲ್ಯದ ದಿನಗಳನ್ನು ನೆನಪಿಸಿದಿರಿ...ಅದೊಂದು ರೀತಿಯ ಸಹಬಾಳ್ವೆಯ ಸಹಜ ದರ್ಶನವಾಗಿತ್ತು
ReplyDeleteಮನಸುಮ್ ಮೇಡಂ ಹೇಗೆ ಆಚರಿಸಿದಿರಿ ಕುವೈತಿನಲ್ಲಿ ಸಂಕ್ರಮಣ,,,?? ನಿಮ್ಮೆಲ್ಲರಿಗೆ ಶುಭ ಸಂಕ್ರಾಂತಿ
ReplyDeleteಮನಮುಕ್ತಾ, ನಿಮಗೂ ನಿಮ್ಮೆಲ್ಲ ಮನೆಮಂದಿಗೆ ಶುಭಸಂಕ್ರಾಂತಿ
ReplyDeleteಶಿವು, ನಿಮಗೂ ನಿಮ್ಮ ಕುಟುಂಬದ ಸಕಲ ಸದಸ್ಯರಿಗೂ ಸಂಕ್ರಾಂತಿಯ ಶುಭಕಾಮನೆಗಳು
ReplyDeleteಗುರು, ಧನ್ಯವಾದ ಮತ್ತು ನಿಮಗೂ ಶುಭಕಾಮನೆಗಳು
ReplyDeleteಪ್ರಕಾಶ್, ನನಗೆ ಹಳ್ಳಿಯಲ್ಲಿ ದಿನವಿಡೀ ನಾವೆಲ್ಲ ಉತ್ಸಾಹದಿಂದ ಪಾಲ್ಗೊಳ್ತಿದ್ದ ದಿನಗಳು ನೆನಪಾಗುತ್ತವೆ, ಎಲ್ಲ ರಾಸುಗಳಿಗೆ ಚೆನ್ನಾಗಿ ಮೈತೊಳೆದು ಸೃಂಗರಿಸಿ, ಮೈಮೇಲೆ ಮಕಮಲ್ ಹೊದಿಕೆ ಹಾಕಿ, ಹೂವಿನ ಹಾರ, ಕೊಂಬಿಗೆ ಬಣ್ಣ ಬಳಿದು ಕೊಂಬಿಗೆ ಹಿತ್ತಳೆಯ ಕವಚ ತೊಡಿಸಿ ಅದರ ಮೊನೆಗೆ ಬಣ್ನದ ಟೇಪು, ಬಲೂನುಗಳು...ಚಮಕ್ ಪೇಪರ್ ಹೀಗೆ ..ನವ ವಧುವನ್ನು ಸಿಂಗರಿಸುವಂತೆ ಸಿಂಗರಿಸಿ ಊರಲ್ಲಿ ಮೆರವಣಿಗೆ ಕೊಂಡು ಹೋಗಿ ಸಂಜೆ ಬೆಂಕಿಯ ಸಾಲನ್ನು ದಾಟಿಸುವ ಕೆಲಸ ನಡೆಯುತ್ತೆ...ಕೆಲವು ವೇಳೆ ಸ್ಪರ್ಧೆಗಳೂ ಇರುತ್ತವೆ...
ReplyDeleteನಿಜಕ್ಕೂ ನನಗೆ ಆ ದಿನಗಳು ಎಲ್ಲಿ ಹೋದವು ಎನಿಸುತ್ತೆ..??!! ....ನಿಮಗೆಲ್ಲಾ ಸಂಕ್ರಾಂತಿಯ ಹಾರ್ದಿಕ ಶುಭಾಷಯಗಳು.
ಮಹೇಸಣ್ಣ...ಸಂಕ್ರಾಂತಿ ಶುಭಾಷಯ ಕಣಣ್ಣೋ...ಹೆಂಗೆ ಮಾಡಿದ್ರಿ ಆಚರಣೆ..? ಸಂಕ್ರಾಂತೀಯಾ??
ReplyDeleteಸುನಾಥ ಸರ್, ನಿಮ್ಮಲ್ಲಿ ಸಂಕ್ರಾಂತಿ ವಿಶೇಷ ರೀತಿಯಲ್ಲಿ ಆಚರಿಸಲಾಗುತ್ತದೆಂದು ತಿಳಿದುಬರುತ್ತೆ...ಇದರಬಗ್ಗೆ ಒಂದು ಬ್ಲಾಗ್ ಲೇಖನ ಹಾಕಿ...ನಿಮಗೆ ಮತ್ತು ಸಕಲ ಪರಿವಾರಜನಕ್ಕೆ ಸಂಕ್ರಾಂತಿಯ ಶುಭಕಾಮನೆಗಳು
ReplyDeleteತೇಜಸ್ವಿನಿ, ನಿಜ ಅನ್ನದಾತನ ಬವಣೆ ವಾಸ್ತವದಲ್ಲಿ ಶೋಚನೀಯ....ತನ್ನ ಭೂಮಿಯ ಕಬಳಿಕೆಯನ್ನು ತಡೆಯುವ ಪ್ರಯತ್ನದಲ್ಲಿದ್ದಾನೆ ಆತ. ಪ್ರಭಾವ, ಅಧಿಕಾರಗಳಿಗೆ ಕೈಗೊಂಬೆ ರೈತ,....ಅವನ ಸ್ಥಿತಿ ಈ ವರ್ಷವಾದರೂ ಸುಧಾರಿಸಲಿ ಎಂದು ಹಾರೈಕೆ.
ReplyDeleteಅಜ್ಹಾದ್ ಸರ್,
ReplyDeleteನಿಮಗೂ ಸಂಕ್ರಾಂತಿ ಹಬ್ಬದ ಶುಭಾಶಯಗಳು
ಇಂದು ಬೆಳಿಗ್ಗೆ ಹೈತಿಯಲ್ಲಿನ ಭೂಕಂಪ ವಿಷಯ ಕೇಳಿ ಅದ್ಯಾಕೋ ಮನಸ್ಸು
ಹಬ್ಬದ ಮೂಡನ್ನು ಕಳೆದುಕೊಂಡಿತು
ನಿಮ್ಮ ನೆಚ್ಚಿನ ಶುಭಾಶಯಕ್ಕೆ ವಂದನೆಗಳು
ನಿಮ್ಮ ಛಾಪಿನಲ್ಲಿ ಬಂದ ಕವನ ಚೆನ್ನಾಗಿದೆ! ಸಂಕ್ರಮಣ ಎಲ್ಲರಿಗೂ ಒಳಿತನ್ನು ತರಲಿ!
ReplyDeleteಗುರು, ನಿಮ್ಮ ಹಬ್ಬ ಹೇಗಾಯಿತು..? ಅಲ್ಲಿ ಕನ್ನಡಿಗರು ಇದ್ದರೆಯೇ? ನಿಮಗೂ ನಿಮ್ಮ ಕುಟುಂಬಕ್ಕೂ ಹೃತ್ಪೂರ್ವಕ ಶುಭಾಷಯಗಳು.
ReplyDeleteಸುಮನ ಮೇಡಂ ಬ್ಯುಸಿ ಅನ್ನಿಸುತ್ತೆ...ಮದುವೆ ಗಲಾಟೆ...ಇದರ ಮೇಲೆ ಹಬ್ಬ....ಶುಭಾಷಯಗಳು ನಿಮ್ಮೆಲ್ಲರಿಗೆ.
ReplyDeleteಒಂದು ಸಣ್ಣ ಕ್ರಾಂತಿಯಾದರೂ ಆಗಲೇಬೇಕಿದೆ....ಅನ್ನದಾತನ ಬಾಳು ಹಸನಾಗಲಿ..ನಿಮ್ಮ ಆಶೋತ್ತರವೂ ಫಲಿಸಲಿ. ಧನ್ಯವಾದಗಳು
ReplyDeleteUttama kavana...
ReplyDeleteಸುಭ ಗೆ ಮತ್ತೊಮ್ಮೆ ಶುಭಾಷಯಗಳು, ನಿಜ ರೈತನ ಬಾಳು ಹಸನಾಗಲು ರೈತ ಸಹಾ ಹಸನಾಗಬೇಕು. ತಮ್ಮ ಕಾಯಕ ತಮ್ಮ ಏಳಿಗೆ ಕುರಿತು ಚಿಂತಿಸಬೇಕು, ರಾಜಕಾರಣಿಗಳ ಎಂಜಲಿಗೆ ಬಲಿಯಾಗಬಾರದು. ಒಡೆದು ಆಳುವ ಪುಢಾರಿ ನೀತಿಯನ್ನು ಅರಿಯಬೇಕಿದೆ.
ReplyDeleteರವಿಕಾಂತ್ ಸಂಕ್ರಾತಿಯ ಬೆಲ್ಲ-ಎಳ್ಳು -ಕಬ್ಬು ನಿಮಗೆ ಶುಭ ತರಲಿ
ReplyDeleteNice one sir.. :)
ReplyDeleteHappy Sankranti :)
ಕವನ ಚನ್ನಾಗಿದೆ :)
ReplyDeleteತಮಗೂ ಹಾಗು ತಮ್ಮ ಕುಟುಂಬಕ್ಕೂ ಸಂಕ್ರಾಂತಿಯ ಶುಭ ಹಾರೈಕೆಗಳು.
ಶಿಪ್ರ ನಿಮಗೂ ಮತ್ತೊಮ್ಮೆ ಶುಭಸಂಕ್ರಾಂತಿ, ಹೇಗಾಯ್ತು ಹಬ್ಬ? ಹಳ್ಳಿ ಹಬ್ಬದ ಸಂಭ್ರಮ ಪಟ್ಟಣ ನಗರಗಳಲ್ಲಿ ಬರೊಲ್ಲ ಅಲ್ವಾ?
ReplyDeleteಮಂಜು, ಹೇಗಿತ್ತು ಹಬ್ಬ? ಈ-ಕವಿ ಸಭೆಗೆ ನನ್ನ ಕಡೆಯಿಂದ ಸಂಕ್ರಾಂತಿಯ ಶುಭಾಷಯಗಳನ್ನು ತಿಳಿಸು, ಎಲ್ಲ ಮಿತ್ರರಿಗೂ.
ReplyDeleteಕವನ ಸಾಂಧರ್ಬಿಕ- ಚೆನ್ನಾಗಿದೆ. ನಿಮಗೆ ಸಂಕ್ರಾಂತಿಯ ಶುಭಾಶಯಗಳು.
ReplyDeleteನಾರಾಯಣ ಭಟ್ ಸರ್ ನಿಮಗೂ ನಿಮ್ಮ ಪರಿವಾರಕ್ಕೂ ...(ತಡವಾಗಿ) ಸಂಕ್ರಾಂತಿಯ ಶುಭಕಾಮನೆಗಳು.
ReplyDeletehi sir i entered ur blog n seen its diff than me n interesting also.. m fully new poem writter so i told her to suggest me.thanx for reply..
ReplyDeleteಧನ್ಯವಾದ ಕೀರ್ತಿ, ನಿಮ್ಮ ಪ್ರಯತ್ನ ಚನ್ನಾಗಿದೆ...ನನ್ನ ಗೂಡಿಗೆ ಬಂದು ಪ್ರತಿಕ್ರಿಯಿಸಿದ್ದಕ್ಕೆ...ಥ್ಯಾಂಕ್ಸ್.
ReplyDeleteThis is a Special Comment for ITTIGE CEMENT...
ReplyDeleteHAPPY BIRTH DAY - PRAKAASH