Wednesday, January 13, 2010

ಸಂಕ್ರಾಂತಿ - ತ್ರಿವರ್ಣಕ್ರಾಂತಿ


(ಶುಭಾಷಯಗಳು)
ಹಸಿರುಸಿರಾಡುವ ಹೊಲ ಗದ್ದೆ
ಉಸಿರಾಗಿದ್ದವು, ರೈತನೆಂದ ಗೆದ್ದೆ
ಕೊಳ್ಳುವುದು ಭಾರ, ಮಾರು ಅಗ್ಗ
ಸಾಲಹೊರೆ, ರೈತನ ಕೊರಳಿಗೆ ಹಗ್ಗ
ಬರಲಿ ಅನ್ನದಾತನ ಅನುಕೂಲದ ದಿನ
ತೀರಲಿ ಸಾಲ,ಹಸಿರಾಗಿ ಹೊಲ ಅನುದಿನ
ಬರಲಿ ಸಂಕ್ರಾಂತಿ ಮನೆಗೆ, ಗದ್ದೆಗೆ
ಊರಿಗೆ, ನಾಡಿಗೆ, ರೈತನಿಗೆ ಗದ್ದುಗೆ
ಆಗಲಿ ತ್ರಿವರ್ಣ ಕ್ರಾಂತಿ, ಹಸಿರು ಶಾಂತಿ
ಶ್ವೇತ ಹೈನಿಗೆ, ಮೀನಿಗೆ ನೀಲಕ್ರಾಂತಿ
ಬಾನಲಿ ಹಾರಾಡಿ ತ್ರಿವರ್ಣ ಪಟಪಟ
ತ್ಯಾಗ, ಶೌರ್ಯಕ್ಕಾಗಲಿ ಕೇಸರಿ ದಿಟ
ಸಮೃದ್ಧಿ, ಸಸ್ಯಸಿರಿ ಆಗಲಿ ಹಸಿರು
ಶಾಂತಿಗೆ ಬಿಳಿ, ಮುನ್ನಡೆಗೆ ಚಕ್ರವೇ ಉಸಿರು
ಸಂಭ್ರಮವಾಗಲಿ ಒಂದೆಡೆ ಅನ್ನದಾತನಿಗೆ
ತರಲಿ ಎಳ್ಳು-ಬೆಲ್ಲದ ಸಂಕ್ರಾಂತಿ
ಯೋಧನ ಶೌರ್ಯ, ಮೇಧಾವಿಗಳ ನಾಡಿಗೆ
ನಮಿಸಿ ವಿಶ್ವ ಆಗಲಿ ತ್ರಿವರ್ಣ ಕ್ರಾಂತಿ

39 comments:

  1. ನಿಮ್ಮ ಹಾರೈಕೆ ಫಲಿಸಲಿ, ಈ ಸಂಕ್ರಮಣಕ್ಕಾದರೂ‌ ರೈತ ಸಂಕಟದಿಂದ ಹೊರಬರಲಿ.

    ಸಂಕ್ರಾಂತಿಯ ಶುಭಾಶಯಗಳು.

    ReplyDelete
  2. ಸ೦ಕ್ರಮಣದ ಹಾರ್ಧಿಕ ಶುಭಾಶಯಗಳು.
    ನಿಮ್ಮ ಆಸೆ, ಬಯಕೆಗಳು ಕೈಗೂಡಲಿ.
    ಹೊಸ ಕ್ರಾ೦ತಿಯೊ೦ದಿಗೆ ಸಹಬಾಳ್ವೆ ಶಾ೦ತಿ ತರಲಿ.

    ReplyDelete
  3. ಅಜಾದ್ ಸರ್,
    ಸಂಕ್ರಾಂತಿಯಂದು ಸುಂದರ ಕವಿತೆ ನೀಡಿದ್ದಕ್ಕೆ ಧನ್ಯವಾದ ಸರ್.... ಸಂಕ್ರಾಂತಿ ಎಂದರೆ ನನಗೆ ಖುಷಿ ಯಾಕಂದ್ರೆ, ದುಡಿಯೋ ರೈತನಿಗೆ ಕೈತುಂಬಾ ಪ್ರತಿಫಲ ಸಿಕ್ಕು ಆತ ಆಚರಿಸೋ ಹಬ್ಬ ಎಂದು.... ಆದರೆ ಈಗಿನ ನೆರೆ, ಅಕಾಲಿಕ ಮಳೆ ನೆನೆದರೆ ರೈತನ ಬಗ್ಗೆ ಮರುಕ ಬರುತ್ತದೆ..... ಅದರ ಮೇಲೆ ಈ ಬ್ರಷ್ಟ ರಾಜಕಾರಣಿಗಳು ಗಾಯದ ಮೇಲೆ ಬರೆ ಹಾಕಿದ್ದಾರೆ..... ಮತ್ತೆ ಗದ್ದೆ ಹಸಿರಾಗಲಿ, ರೈತನ ನಗೆ ವಾಪಸ್ ಬರಲಿ...... ಎಲ್ಲರಿಗೂ ಸಂಕ್ರಮಣದಶುಭಾಶಯಗಳು.....

    ReplyDelete
  4. dhanyavadagaLu, nimma harakeyante aagali nimgu sankranti shubhashayagaLu...

    kavana chennagide

    ReplyDelete
  5. ಜಲನಯನ ಅವರೆ,

    ಎಳ್ಳು ಬೆಲ್ಲದ ಸ೦ಕ್ರಾ೦ತಿ,
    ತರಲಿ ಎಲ್ಲೆಡೆ ಸುಖ ಶಾ೦ತಿ.

    ನಿಮಗೂ, ನಿಮ್ಮ ಪರಿವಾರಕ್ಕೂ ಸ೦ಕ್ರಾ೦ತಿಯ ಶುಭ ಹಾರೈಕೆಗಳು.

    ReplyDelete
  6. ಆಜಾದ್ ಸರ್,

    ಸಂಕ್ರಾಂತಿಗೆ ಉತ್ತಮ ಕವನ ಬರೆದಿದ್ದೀರಿ...
    ನಿಮಗೂ ಮತ್ತು ನಿಮ್ಮ ಕುಟುಂಬಕ್ಕೂ ಸಂಕ್ರಾಂತಿಯ ಶುಭ ಹಾರೈಕೆಗಳು.

    ReplyDelete
  7. ಅಜಾದ್ ಸರ್,
    ಸಂಕ್ರಾಂತಿಯ ದಿನ ಒಂದು ಸುಂದರ ಕವಿತೆಯ ಮೂಲಕ ಶುಭಾಶಯ ಹಂಚಿಕೊಂದಿದ್ದಿರ್...ನೀವ್ ಹೇಳಿದ ಹಾಗೆ,,, ಅನ್ನ ಧಾತರ ಬದುಕು,, ಚೆನ್ನಾಗಿ ಇರಲಿ....
    ಸಂಕ್ರಾಂತಿ ಹಬ್ಬದ ಶುಭಾಶಯಗಳು...

    ReplyDelete
  8. ಆಝಾದ್ ಭಾಯ್...

    ಸಂಕ್ರಾಂತಿಯ ಶುಭಾಶಯಗಳು..

    ಇದಕ್ಕಿಂತ ಸೊಗಸಾಗಿ ಶುಭಾಶಯ ಹೇಳಲು ಸಾಧ್ಯವೇ ಇಲ್ಲ..

    ನಮಗೆ ಅನ್ನ ಕೊಡುವ ರೈತರು ಸಂಕಷ್ಟದಲ್ಲಿದ್ದಾರೆ...
    ಕೆಟ್ಟ ರಾಜಕಾರಣದವರಲ್ಲದೇ..
    ಪ್ರಕೃತಿಯೂ ಸಹ ಮುನಿಸಿಕೊಂಡಿದೆ...

    ಕಷ್ಟು ಪಟ್ಟು ಬೆಳೆದ ಬೆಳೆಗೆ ತಕ್ಕದಾದ ಬೆಲೆ ಸಿಕ್ಕರೆ ಸಾಕಿತ್ತು...
    ಬೆಳೆದವನಿಗೂ ಕಷ್ಟ..
    ಕೊಳ್ಳುವವನಿಗೂ ಕಷ್ಟ...

    ಸ್ವಾತಂತ್ರ್ಯ ಸಿಕ್ಕು ಇಷ್ಟು ವರ್ಷಗಳಾದರೂ..
    ಪ್ರತಿ ಚುನಾವಣೆಯಲ್ಲಿ ರೈತನ ಹೆಸರು ಹೇಳಿ ಗೆಲ್ಲುವ
    ರಾಜಕೀಯದವರಿಗೆ ರೈತ ಬೆಳೆದ ಬೆಳೆಗೆ ಬೆಲೆ ಕೊಡಿಸಲಾಗುತ್ತಿಲ್ಲ...

    ಸ್ವಿಸ್ ಬ್ಯಾಂಕಿನಲ್ಲಿ ಗಂಟು ಇಡಲಾಗುತ್ತದೆ...

    ಇಂಥವರಿಗೆ..

    ನಡುಬೀದಿಯಲ್ಲಿ ನಿಲ್ಲಿಸಿ...
    .................

    ಕ್ಷಮಿಸಿ..
    ಸಂಕ್ರಾಂತಿಹಬ್ಬ...
    ಎಳ್ಳು ಬೆಲ್ಲ ತಿಂದು..
    ಒಳ್ಳೊಳ್ಳೆ ಮಾತನಾಡಿ ಅಂತ ಹಾರೈಸಬೇಕು ಅಲ್ಲವಾ...?

    ನಿಮಗೂ..
    ನಿಮ್ಮ ಮನೆಯವರಿಗೂ...
    ನಿಮ್ಮ ಬ್ಲಾಗ್ ಓದುಗರಿಗೆಲ್ಲರಿಗೂ... ಸಂಕ್ರಾಂತಿ ಹಬ್ಬದ ಶುಭಾಶಯಗಳು...

    ReplyDelete
  9. ಸಂಕ್ರಾಂತಿಯ ನಿಮ್ಮ ಹಾರೈಕೆ ಫಲಿಸಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ.
    ನಿಮಗೂ ಸಂಕ್ರಾಂತಿಯ ಶುಭಾಶಯಗಳು.

    ReplyDelete
  10. "ಸಂಕ್ರಾಂತಿಯ ಹಾರ್ಧಿಕ ಶುಭಾಷಯಗಳು."

    chennagide kavana

    ReplyDelete
  11. ಶುಭ್ರ ಮಾನಸವನ್ನು ಹೊಂದಿ,
    ಉತ್ತಮ ಆಲೋಚನೆಗಳನ್ನು ಮಾಡುತ್ತಾ,
    ಸವಿ ಮಾತುಗಳ ಮೂಲಕ,
    ಸಿಹಿ ಬೆಲ್ಲದಚ್ಚು ಹಾಗೂ ಎಳ್ಳು ಬೀರಿ,
    ಸಂಕ್ರಮಣವನ್ನು ಸ್ವಾಗತಿಸುವ.

    ನಿಮ್ಮ ಹಾರೈಕೆಯೇ ನನ್ನ ಹಾರೈಕೆಯೂ ಆಗಿದೆ.

    ನಿಮಗೆ ಹಾಗೂ ನಿಮ್ಮ ಮನೆಯವರೆಲ್ಲರಿಗೂ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು.

    ReplyDelete
  12. ಆನಂದ್ ನಿಮಗೆ ನಿಮ್ಮ ಎಲ್ಲ ಪರಿವಾರಕ್ಕೆ ಎಳ್ಳು-ಬೆಲ್ಲ-ಕಬ್ಬಿನ ಹಬ್ಬದ ಶುಭಕಾಮನೆಗಳು

    ReplyDelete
  13. ವಿಜಯಶ್ರೀ ಪರಿಶ್ರಮದ ಫಲ ನೀಡೋ ಈ ಹಬ್ಬ ನಿಮಗೆಲ್ಲಾ ಶುಭ ತರಲಿ

    ReplyDelete
  14. ದಿನಕರ್, ಹಳ್ಳಿಯ ನನ್ನ ಬಾಲ್ಯದ ದಿನಗಳನ್ನು ನೆನಪಿಸಿದಿರಿ...ಅದೊಂದು ರೀತಿಯ ಸಹಬಾಳ್ವೆಯ ಸಹಜ ದರ್ಶನವಾಗಿತ್ತು

    ReplyDelete
  15. ಮನಸುಮ್ ಮೇಡಂ ಹೇಗೆ ಆಚರಿಸಿದಿರಿ ಕುವೈತಿನಲ್ಲಿ ಸಂಕ್ರಮಣ,,,?? ನಿಮ್ಮೆಲ್ಲರಿಗೆ ಶುಭ ಸಂಕ್ರಾಂತಿ

    ReplyDelete
  16. ಮನಮುಕ್ತಾ, ನಿಮಗೂ ನಿಮ್ಮೆಲ್ಲ ಮನೆಮಂದಿಗೆ ಶುಭಸಂಕ್ರಾಂತಿ

    ReplyDelete
  17. ಶಿವು, ನಿಮಗೂ ನಿಮ್ಮ ಕುಟುಂಬದ ಸಕಲ ಸದಸ್ಯರಿಗೂ ಸಂಕ್ರಾಂತಿಯ ಶುಭಕಾಮನೆಗಳು

    ReplyDelete
  18. ಗುರು, ಧನ್ಯವಾದ ಮತ್ತು ನಿಮಗೂ ಶುಭಕಾಮನೆಗಳು

    ReplyDelete
  19. ಪ್ರಕಾಶ್, ನನಗೆ ಹಳ್ಳಿಯಲ್ಲಿ ದಿನವಿಡೀ ನಾವೆಲ್ಲ ಉತ್ಸಾಹದಿಂದ ಪಾಲ್ಗೊಳ್ತಿದ್ದ ದಿನಗಳು ನೆನಪಾಗುತ್ತವೆ, ಎಲ್ಲ ರಾಸುಗಳಿಗೆ ಚೆನ್ನಾಗಿ ಮೈತೊಳೆದು ಸೃಂಗರಿಸಿ, ಮೈಮೇಲೆ ಮಕಮಲ್ ಹೊದಿಕೆ ಹಾಕಿ, ಹೂವಿನ ಹಾರ, ಕೊಂಬಿಗೆ ಬಣ್ಣ ಬಳಿದು ಕೊಂಬಿಗೆ ಹಿತ್ತಳೆಯ ಕವಚ ತೊಡಿಸಿ ಅದರ ಮೊನೆಗೆ ಬಣ್ನದ ಟೇಪು, ಬಲೂನುಗಳು...ಚಮಕ್ ಪೇಪರ್ ಹೀಗೆ ..ನವ ವಧುವನ್ನು ಸಿಂಗರಿಸುವಂತೆ ಸಿಂಗರಿಸಿ ಊರಲ್ಲಿ ಮೆರವಣಿಗೆ ಕೊಂಡು ಹೋಗಿ ಸಂಜೆ ಬೆಂಕಿಯ ಸಾಲನ್ನು ದಾಟಿಸುವ ಕೆಲಸ ನಡೆಯುತ್ತೆ...ಕೆಲವು ವೇಳೆ ಸ್ಪರ್ಧೆಗಳೂ ಇರುತ್ತವೆ...
    ನಿಜಕ್ಕೂ ನನಗೆ ಆ ದಿನಗಳು ಎಲ್ಲಿ ಹೋದವು ಎನಿಸುತ್ತೆ..??!! ....ನಿಮಗೆಲ್ಲಾ ಸಂಕ್ರಾಂತಿಯ ಹಾರ್ದಿಕ ಶುಭಾಷಯಗಳು.

    ReplyDelete
  20. ಮಹೇಸಣ್ಣ...ಸಂಕ್ರಾಂತಿ ಶುಭಾಷಯ ಕಣಣ್ಣೋ...ಹೆಂಗೆ ಮಾಡಿದ್ರಿ ಆಚರಣೆ..? ಸಂಕ್ರಾಂತೀಯಾ??

    ReplyDelete
  21. ಸುನಾಥ ಸರ್, ನಿಮ್ಮಲ್ಲಿ ಸಂಕ್ರಾಂತಿ ವಿಶೇಷ ರೀತಿಯಲ್ಲಿ ಆಚರಿಸಲಾಗುತ್ತದೆಂದು ತಿಳಿದುಬರುತ್ತೆ...ಇದರಬಗ್ಗೆ ಒಂದು ಬ್ಲಾಗ್ ಲೇಖನ ಹಾಕಿ...ನಿಮಗೆ ಮತ್ತು ಸಕಲ ಪರಿವಾರಜನಕ್ಕೆ ಸಂಕ್ರಾಂತಿಯ ಶುಭಕಾಮನೆಗಳು

    ReplyDelete
  22. ತೇಜಸ್ವಿನಿ, ನಿಜ ಅನ್ನದಾತನ ಬವಣೆ ವಾಸ್ತವದಲ್ಲಿ ಶೋಚನೀಯ....ತನ್ನ ಭೂಮಿಯ ಕಬಳಿಕೆಯನ್ನು ತಡೆಯುವ ಪ್ರಯತ್ನದಲ್ಲಿದ್ದಾನೆ ಆತ. ಪ್ರಭಾವ, ಅಧಿಕಾರಗಳಿಗೆ ಕೈಗೊಂಬೆ ರೈತ,....ಅವನ ಸ್ಥಿತಿ ಈ ವರ್ಷವಾದರೂ ಸುಧಾರಿಸಲಿ ಎಂದು ಹಾರೈಕೆ.

    ReplyDelete
  23. ಅಜ್ಹಾದ್ ಸರ್,
    ನಿಮಗೂ ಸಂಕ್ರಾಂತಿ ಹಬ್ಬದ ಶುಭಾಶಯಗಳು
    ಇಂದು ಬೆಳಿಗ್ಗೆ ಹೈತಿಯಲ್ಲಿನ ಭೂಕಂಪ ವಿಷಯ ಕೇಳಿ ಅದ್ಯಾಕೋ ಮನಸ್ಸು
    ಹಬ್ಬದ ಮೂಡನ್ನು ಕಳೆದುಕೊಂಡಿತು
    ನಿಮ್ಮ ನೆಚ್ಚಿನ ಶುಭಾಶಯಕ್ಕೆ ವಂದನೆಗಳು

    ReplyDelete
  24. ನಿಮ್ಮ ಛಾಪಿನಲ್ಲಿ ಬಂದ ಕವನ ಚೆನ್ನಾಗಿದೆ! ಸಂಕ್ರಮಣ ಎಲ್ಲರಿಗೂ ಒಳಿತನ್ನು ತರಲಿ!

    ReplyDelete
  25. ಗುರು, ನಿಮ್ಮ ಹಬ್ಬ ಹೇಗಾಯಿತು..? ಅಲ್ಲಿ ಕನ್ನಡಿಗರು ಇದ್ದರೆಯೇ? ನಿಮಗೂ ನಿಮ್ಮ ಕುಟುಂಬಕ್ಕೂ ಹೃತ್ಪೂರ್ವಕ ಶುಭಾಷಯಗಳು.

    ReplyDelete
  26. ಸುಮನ ಮೇಡಂ ಬ್ಯುಸಿ ಅನ್ನಿಸುತ್ತೆ...ಮದುವೆ ಗಲಾಟೆ...ಇದರ ಮೇಲೆ ಹಬ್ಬ....ಶುಭಾಷಯಗಳು ನಿಮ್ಮೆಲ್ಲರಿಗೆ.

    ReplyDelete
  27. ಒಂದು ಸಣ್ಣ ಕ್ರಾಂತಿಯಾದರೂ ಆಗಲೇಬೇಕಿದೆ....ಅನ್ನದಾತನ ಬಾಳು ಹಸನಾಗಲಿ..ನಿಮ್ಮ ಆಶೋತ್ತರವೂ ಫಲಿಸಲಿ. ಧನ್ಯವಾದಗಳು

    ReplyDelete
  28. ಸುಭ ಗೆ ಮತ್ತೊಮ್ಮೆ ಶುಭಾಷಯಗಳು, ನಿಜ ರೈತನ ಬಾಳು ಹಸನಾಗಲು ರೈತ ಸಹಾ ಹಸನಾಗಬೇಕು. ತಮ್ಮ ಕಾಯಕ ತಮ್ಮ ಏಳಿಗೆ ಕುರಿತು ಚಿಂತಿಸಬೇಕು, ರಾಜಕಾರಣಿಗಳ ಎಂಜಲಿಗೆ ಬಲಿಯಾಗಬಾರದು. ಒಡೆದು ಆಳುವ ಪುಢಾರಿ ನೀತಿಯನ್ನು ಅರಿಯಬೇಕಿದೆ.

    ReplyDelete
  29. ರವಿಕಾಂತ್ ಸಂಕ್ರಾತಿಯ ಬೆಲ್ಲ-ಎಳ್ಳು -ಕಬ್ಬು ನಿಮಗೆ ಶುಭ ತರಲಿ

    ReplyDelete
  30. ಕವನ ಚನ್ನಾಗಿದೆ :)
    ತಮಗೂ ಹಾಗು ತಮ್ಮ ಕುಟುಂಬಕ್ಕೂ ಸಂಕ್ರಾಂತಿಯ ಶುಭ ಹಾರೈಕೆಗಳು.

    ReplyDelete
  31. ಶಿಪ್ರ ನಿಮಗೂ ಮತ್ತೊಮ್ಮೆ ಶುಭಸಂಕ್ರಾಂತಿ, ಹೇಗಾಯ್ತು ಹಬ್ಬ? ಹಳ್ಳಿ ಹಬ್ಬದ ಸಂಭ್ರಮ ಪಟ್ಟಣ ನಗರಗಳಲ್ಲಿ ಬರೊಲ್ಲ ಅಲ್ವಾ?

    ReplyDelete
  32. ಮಂಜು, ಹೇಗಿತ್ತು ಹಬ್ಬ? ಈ-ಕವಿ ಸಭೆಗೆ ನನ್ನ ಕಡೆಯಿಂದ ಸಂಕ್ರಾಂತಿಯ ಶುಭಾಷಯಗಳನ್ನು ತಿಳಿಸು, ಎಲ್ಲ ಮಿತ್ರರಿಗೂ.

    ReplyDelete
  33. ಕವನ ಸಾಂಧರ್ಬಿಕ- ಚೆನ್ನಾಗಿದೆ. ನಿಮಗೆ ಸಂಕ್ರಾಂತಿಯ ಶುಭಾಶಯಗಳು.

    ReplyDelete
  34. ನಾರಾಯಣ ಭಟ್ ಸರ್ ನಿಮಗೂ ನಿಮ್ಮ ಪರಿವಾರಕ್ಕೂ ...(ತಡವಾಗಿ) ಸಂಕ್ರಾಂತಿಯ ಶುಭಕಾಮನೆಗಳು.

    ReplyDelete
  35. hi sir i entered ur blog n seen its diff than me n interesting also.. m fully new poem writter so i told her to suggest me.thanx for reply..

    ReplyDelete
  36. ಧನ್ಯವಾದ ಕೀರ್ತಿ, ನಿಮ್ಮ ಪ್ರಯತ್ನ ಚನ್ನಾಗಿದೆ...ನನ್ನ ಗೂಡಿಗೆ ಬಂದು ಪ್ರತಿಕ್ರಿಯಿಸಿದ್ದಕ್ಕೆ...ಥ್ಯಾಂಕ್ಸ್.

    ReplyDelete
  37. This is a Special Comment for ITTIGE CEMENT...
    HAPPY BIRTH DAY - PRAKAASH

    ReplyDelete