Wednesday, January 20, 2010

ಎಚ್ಚರ- ಎದ್ದೇಳಿ



ಮನದಾಳದ
ಬೂದಿ
ನಿಟ್ಟುಸಿರಿಗೆ
ಊದಿ
ಮುಚ್ಚಿಟ್ಟ ಕೆಂಡವ
ಕೆಣಕದಿರು
ಕಿಡಿಸಾಕು
ಒಣಹುಲ್ಲ ಹಿಡಿದು
ಕಾದಿರುವ ಶತೃವಿಗೆ
ನಿನ್ನ ಮನ
ನನ್ನ ತನು
ಎಲ್ಲ ಜನ
ಕ್ಷಣಮಾತ್ರದಿ
ಮರೆವರು ನಿನ್ನೆ
ನನಗೆ ನೀನು ರಕ್ತನೀಡಿದ್ದು
ನನ್ನ ತಂಗಿ
ನಿನ್ನ ಮುಂಗೈಗೆ
ರಾಖಿ ಕಟ್ಟಿದ್ದು
ನನ್ನಲ್ಲಿ ಈದ್ ನ
ಶಾವಿಗೆ ಪಾಯಸ
ನಿನ್ನವರುಂಡದ್ದು
ಗಣೇಶನಿಗೆ ನಮಿಸಿ
ಕಡುಬ ನಾವೆಲ್ಲ ಮೆದ್ದದ್ದು
ಅಕ್ಕನ ಕಾಯಲು
ನನ್ನಕ್ಕ ಬುರಖಾ
ಹೊದಿಸಿದ್ದು, ನಿನ್ನಮ್ಮ
ನನ್ನ ತಾಯ ಹಣೆಗೆ
ವಿಭೂತಿ ಹಚ್ಚಿದ್ದು
ಅಬ್ಬೂ-ನಿನ್ನಪ್ಪ
ಜೊತೆಯಾಗಿ ನಮ್ಮನ್ನೆಲ್ಲಾ
ಕಾಪಾಡಿದ್ದು...!!!
ಯಾರದೋ ತೀಟೆ..
ಯಾರಾಗುತ್ತಿರುವುದು ಬೇಟೆ?
ಕುತ್ತಿಗೆಗೆ ಬಂದರೆ ಪ್ರಾಣ
ಮುಳುಗುವವ ಕೇಳುವುದುಂಟೇ?
ಹಗ್ಗ ಎಸೆದದ್ದು ಯಾರೆಂದು..?
ಇಟ್ಟಿಗೆ-ಸಿಮೆಂಟಿನ ರಚನೆ
ನಮಗಲ್ಲ ಹಿರಿದು
ಮನದಲ್ಲಿ - ಮನೆಯಲ್ಲಿ
ಸುಖ-ಸಹಬಾಳ್ವೆ ತೊರೆದು
ಅವರ ಉಳಿವಿಕೆಗೆ
ಪದವಿ, ಅಧಿಕಾರಗಳಿಕೆಗೆ
ತಮ್ಮವರ ಬಲಿನೀಡುವುದ
ನೋಡಿರುವಿರೇನು?
ನನ್ನ-ನಿಮ್ಮ ಏರಿಸಿ ಚಟ್ಟಕೆ
ತನ್ನವರ ಬಲಿಕೊಟ್ಟೆನೆನುವ
ಗೋಸುಂಬೆಗಳ ಮಾತಿಗೆ
ಮರುಳಾಗದಿರಿ, ನಮಗೆ -ನೀವು
ನಿಮಗೆ-ನಾವು, ನಮ್ಮೆಲ್ಲರಿಗೆ ಬೇಕು
ಜನ್ಮ-ಅನ್ನ ನೀಡಿದನಾಡು
ಸೊಪ್ಪು ಹಾಕದಿರಿ,
ತಿರುಗಿಯೂ ನೋಡದಿರಿ
ಇದು ಬಣ್ಣಬದಲಿಸುವವರ ಜಾಡು.

53 comments:

 1. "ಗೋಸುಂಬೆಗಳ ಮಾತಿಗೆ
  ಮರುಳಾಗದಿರಿ, ನಮಗೆ -ನೀವು
  ನಿಮಗೆ-ನಾವು, ನಮ್ಮೆಲ್ಲರಿಗೆ ಬೇಕು
  ಜನ್ಮ-ಅನ್ನ ನೀಡಿದನಾಡು
  ಸೊಪ್ಪು ಹಾಕದಿರಿ,
  ತಿರುಗಿಯೂ ನೋಡದಿರಿ
  ಇದು ಬಣ್ಣಬದಲಿಸುವವರ ಜಾಡು"
  ಚಂದದ ಸಾಲುಗಳು ತುಂಬಾ ಇಷ್ಟ ಆಯ್ತು ಭೈಯ್ಯ :)

  ReplyDelete
 2. ಸಮಾಜದ ಸ್ವಾಸ್ಥ್ಯ ಕೆಡಿಸುವ ದುಷ್ಟ ಶಕ್ತಿಗಳ ಬಗ್ಗೆ ನಾವು ಜಾಗ್ರತೆವಹಿಸಲೇಬೇಕಾಗಿದೆ. ಒಳ್ಳೆಯ ಕವನ ಕೊಟ್ಟಿದ್ದೀರಿ.

  ReplyDelete
 3. nimma kavite chennagide.uttama vichaara hondide. nanna manthana blogina chitragalige nimma kavitegalu moodibarali.

  ReplyDelete
 4. ಅಜಾದ್ ಸರ್,
  ಸಮಾಜದ ಬಗ್ಗೆ ತುಂಬಾ ಕಾಳಜಿಯಿಂದ ಬರೆದ ಸಾಲುಗಳು ತುಂಬಾ ಇಷ್ಟವಾಯ್ತು ಸರ್..... ನಮ್ಮ ನಾಯಕರಿಗೆ, ಸಮಾಜದ ನೆಮ್ಮದಿ ಬಗ್ಗೆ ಗಮನ ಇದ್ದರೆ ನಮ್ಮ ದೇಶ ಹೀಗೆ ಇರುತ್ತಿರಲಿಲ್ಲ ..... ಪ್ರತಿ ಹಬ್ಬಕ್ಕೆ ಪೋಲೀಸರ ಬಂದೋಬಸ್ತ್ ಹೆಚ್ಚಳ....... ಹಬ್ಬ ಬಿಟ್ಟು ಬೇರೇನೋ ಮಾಡುತ್ತಿದ್ದೇವೆ ಅನಿಸುತ್ತದೆ....... ಜನರನ್ನ ತಮಗೆ ಬೇಕಾದ ಹಾಗೆ ಬಳಸಿಕೊಳ್ಳುವ ರಾಜಕಾರಣಿಗಳನ್ನು ಚಪ್ಪಲಿ ಸೇವೆ ಮಾಡಬೇಕು.... ಮುಗ್ಧ ಜನರ ಬುದ್ದಿ ಕೆಡಿಸಿ..... ಅವರಬುದ್ದಿಗೆ ಮಂಕುಬೂದಿ ಎರಚಿ , ಅವರಿಂದಲೇ ತಮಗೆ ಬೇಕಾದ ಕೆಲಸ ಮಾಡಿಕೊಳ್ಳುತ್ತಾರೆ.....

  ReplyDelete
 5. ಸಹಮತದ ಬಾಳ್ವೆನಡೆಸುವಂತಾಗಲು ಇನ್ನೆಷ್ಟು ಮುಗ್ಧ ಮಂದಿಯ ನರವಲಿಯಾಗಬೇಕಿದೋ ಕಾಣೆ!!! :(

  ತುಂಬಾ ಚೆನ್ನಾಗಿದೆ ಕವನ.

  ReplyDelete
 6. ಮನಮುಟ್ಟುವ ಸ೦ದೇಶ. ಅಧ್ಬುತ ರಚನೆ. ಇದನ್ನರಿತು ಎಲ್ಲಾ ನಡೆದರೇ ನಮ್ಮ ದೇಶವನ್ನು ಪ್ರಗತಿಯಿ೦ದ ನಿಲ್ಲಿಸಲಾದೀತೇ.
  ಚೆ೦ದ ಆಶಯದ ಕವನ ಅಜ಼ಾದರೇ.

  ReplyDelete
 7. ರಂಜು, ಧನ್ಯವಾದ ನಿನ್ನ ಮೊದಲ ಪ್ರತಿಕ್ರಿಯೆಗೆ. ಇದು ನನಗೆ ಬಹಳ ದಿನಗಳಿಂದ ಕಾಡುತ್ತಿರುವ ಚಿಂತೆ...ಕಿಡಿಗೇಡಿಗಳ ಬಮ್ಧು ಬಾಂಧವನ್ನು ಸುಟ್ತರೆ..ಕೊಂದರೆ..ಅವರಿಗೆ ಏನೂ ಅನ್ನಿಸುವುದಿಲ್ಲವೇ ???

  ReplyDelete
 8. ನಾರಾಯಣ್ ಭಟ್ ಸರ್, ನಮ್ಮಲ್ಲಿ ಸಾಮಾಜಿಕ ಜಾಗೃತಿಯಿಂದಲೇ ಇದು ಸಾಧ್ಯ...ಇಂತಹ ಕಿಡಿಗೇಡಿಗಳನ್ನ..ಅವರಿಗೆ ಕುಮ್ಮಕ್ಕು ನೀಡುವವರನ್ನ ಜೀವಂತ ಸುಡಬೇಕು..ಆ ಎದೆಗಾರಿಕೆ ಸಮಾಜಕ್ಕೆ ಬರಬೇಕು..

  ReplyDelete
 9. ಬಾಲು ನಿಮ್ಮ ಬ್ಲಾಗ್ ನೋಡಿದೆ ಕಾಮೆಂಟ್ ಸಹಾ ಹಾಕಿದ್ದೇನೆ. ನಾನು ನಿಮ್ಮ ಅನುಮತಿ ಕೇಳಿದ್ದೆ..ಅದಕ್ಕೆ ಮುಂಚೆಯೇ ಇಲ್ಲಿ ನಿಮ್ಮ ನುಮತಿ ಸಿಕ್ಕಿದೆ..ಧನ್ಯವಾದ..ಶಿವು, ಮಲ್ಲಿ, ನೀವು ನಿಮ್ಮೆಲ್ಲ ಚಿತ್ರಗಳಿಗೆ ಭಾವನೆಯ ಪದಚೌಕಟ್ಟು ಆ ಚಿತ್ರಗಳಿಗೆ ಇನ್ನಷ್ಟು ಮೆರಗು ತರಿಸಬಹುದೇನೋ ನೋಡೋಣ.

  ReplyDelete
 10. ದಿನಕರ್, ಧನ್ಯವಾದ. ನಾಯ-ಕರು, ಎಂತಹ ಅಸಂಬದ್ಧ ಪದಜೋಡಣೆ ಆಗುತ್ತದಲ್ಲವೇ ನಮ್ಮ ರಾಜಕಾರಣಿಗಳಿಗೆ ಹೇಳಿ ಮಾಡಿಸಿದ ಜೋಡಣೆ...ಚೆನ್ನಾಗಿದೆ ನಿಮ್ಮ ಅನಿಸಿಕೆ...ಹೆಸರು ದೇವರದು..ಕೆಲ್ಸ..ದೆವ್ವದ್ದು....

  ReplyDelete
 11. ತೇಜಸ್ವಿನಿ, ಸಹಬಾಳ್ವೆಯ ಕನಸು ಕನಸಾಗಿಯೇ ಹೋಗದಂತೆ ತಡೆಯಬೇಕಾದ್ದು ನಮ್ಮೆಲ್ಲರ ಹೊಣೆಗಾರಿಕೆ..ಜನ ಅರಿತರೆ ಇದು ಅಸಾಧ್ಯವೇನಲ್ಲ, ಅಲ್ಲವೇ?

  ReplyDelete
 12. ಸೀತಾರಾಂ ಸರ್, ನಮ್ಮ ದೇಶ ಬಡವರಿಂದ ಕೂಡಿದ ಶ್ರೀಮಂತ ದೇಶ ಎಂದು ಹಿಂದೆಯೇ ದಾರ್ಶನೀಕರು ಹೇಳಿದ್ದಾರೆ..ನಮ್ಮನ್ನು ನಾವೇ ಅರಿತುಕೊಳ್ಳಲಾರದಂಥ ಬಡವರು ನಾವು... ಬುದ್ಧಿ, ಶಕ್ತಿ, ನಿಸರ್ಗ, ಸಂಪತ್ತು, ಯಾವುದರಲ್ಲಿ ಕಡಿಮೆ ನಾವು..ಇದಕ್ಕೆ ಸಾಕ್ಷಿ ಜೀವಂತ ಸ್ವಿಸ್ ಬ್ಯಾಂಕಿನಲ್ಲಿ ಕೊಳೆಯುತ್ತಾ ಬಿದ್ದಿದೆ...ನಮ್ಮನ್ನು ನಾವು ಅರಿಯದ ಹೊರತು ನಾಡನ್ನರಿಯಲು ಅಸಾಧ್ಯ..

  ReplyDelete
 13. tumba chennagide sir, samajada mElina kaaLaji tumba chennagide. badalaguva neeriksheyalli..

  ellara manasu.
  vandanegaLu

  ReplyDelete
 14. ನನ್ನಲ್ಲಿ ಈದ್ ನ ಪಾಯಸ ನೀನುಂಡದ್ದು....... ಸಾಲುಗಳು ಇಷ್ಟವಾಯ್ತು ಸರ್. ಸಾವಿರಾರು ವರ್ಷಗಳಿಂದ ಸಹಬಾಳ್ವೆ ಮಾಡುತ್ತಿರುವವರ ನಡುವೆ ಹಬ್ಬುತ್ತಿರುವ ದ್ವೇಷದ ಕಿಡಿಗಳನ್ನು ನಂದಿಸಬೇಕಿದೆ. ಜನಸಾಮಾನ್ಯರಿಗೆ ಬೇಡವಾದ ಈ ದ್ವೇಷವನ್ನು ಪೋಷಿಸುವ ಸ್ವಾರ್ಥಿಗಳಿಗೆ ಸೊಪ್ಪುಹಾಕದೆ ಜನಸಾಮಾನ್ಯರೆ ಬುದ್ಧಿಕಲಿಸಬೇಕಿದೆ.

  ReplyDelete
 15. ವಾಹ್.. ಎಂತಹ ಸಾಲುಗಳು..
  "ನನ್ನಲ್ಲಿ ಈದ್ ನ
  ಶಾವಿಗೆ ಪಾಯಸ
  ನಿನ್ನವರುಂಡದ್ದು
  ಗಣೇಶನಿಗೆ ನಮಿಸಿ
  ಕಡುಬ ನಾವೆಲ್ಲ ಮೆದ್ದದ್ದು
  ಅಕ್ಕನ ಕಾಯಲು
  ನನ್ನಕ್ಕ ಬುರಖಾ
  ಹೊದಿಸಿದ್ದು, ನಿನ್ನಮ್ಮ
  ನನ್ನ ತಾಯ ಹಣೆಗೆ
  ವಿಭೂತಿ ಹಚ್ಚಿದ್ದು"...

  ಇಲ್ಲಾ ಸಾರ್, ಈ ಬೇವಾ* ರಾಜಕಾರಣಿಗಳಿಗೆ ಇದೆಲ್ಲ ಅರ್ಥವಾಗದು..
  "ನನ್ನ ಪಕ್ಷ ಬಿದ್ದಾಗ ನಿನ್ನ ದೊಂಬಿ ಕಾಪಾಡಿದ್ದು
  ನಿನ್ನ ಪಕ್ಷ ಬಿದ್ದಾಗ ನಾನು ಮಂದಿರ ,ಮಸೀದಿ ಲೂಟಿದ್ದು
  ನನ್ನ ಹಗರಣ ನೀನು ಮುಚ್ಚಿಟ್ಟದ್ದು,
  ನಿನ್ನ ಹಗರಣದಲ್ಲಿ ನನಗೆ ಪಾಲು ದಕ್ಕಿದ್ದು "... ಹೀಗಂತ ಹೇಳುತ್ತಾರೆ ಆ ನಾಲಾಯಕ್ಕು ರಾಜಕಾರಣಿಗಳು...

  ಮೇರಾ ಭಾರತ ಮಹಾನ್...ಆಲ್ವಾ...

  ReplyDelete
 16. ನಿಮ್ಮ ಕವನದಲ್ಲಿ ತುಂಬಾನೆ ಅರ್ಥಗಳು ಅಡಗಿವೆ :)
  ನಮ್ಮ ಸಮಾಜದ ಉತ್ತಮ ಪ್ರಗತಿಗೆ ಮೊದಲು ನಮ್ಮಂತ ಯುವ ಶಕ್ತಿ ಎಚ್ಚರ ವಹಿಸಬೇಕು ಕೆಟ್ಟದ್ಯಾದು ಒಳ್ಳೆದ್ಯಾದು ಅನ್ನೋದನ್ನ ತಿಳಿದುಕೊಳ್ಳಬೇಕು ಆಗಲೇ ಒಂದು ಉತ್ತಮ ಸಮಾಜ ಸೃಷ್ಟಿ ಮಾಡೋಕೆ ಸಾದ್ಯ ಅನಿಸುತ್ತೆ :)

  ReplyDelete
 17. ಒಳ್ಳೆ ವಿಚಾರದ ಕವನ...

  ಚೆನ್ನಾಗಿದೆ ಸರ್ ಪದಜೋಡಣೆ....

  ReplyDelete
 18. ಆಜಾದ್ ಸರ್,

  ಸಮಾಜದ ಕಳಕಳಿಯ ಬಗ್ಗೆ ನಿಮ್ಮ ಕವನ ವಿಶೇಷ ಅರ್ಥ ಕೊಡುತ್ತದೆ.

  ನನ್ನಲ್ಲಿ ಈದ್ ನ
  ಶಾವಿಗೆ ಪಾಯಸ
  ನಿನ್ನವರುಂಡದ್ದು
  ಗಣೇಶನಿಗೆ ನಮಿಸಿ
  ಕಡುಬ ನಾವೆಲ್ಲ ಮೆದ್ದದ್ದು
  ಅಕ್ಕನ ಕಾಯಲು
  ನನ್ನಕ್ಕ ಬುರಖಾ
  ಹೊದಿಸಿದ್ದು, ನಿನ್ನಮ್ಮ
  ನನ್ನ ತಾಯ ಹಣೆಗೆ
  ವಿಭೂತಿ ಹಚ್ಚಿದ್ದು....ಹೀಗೆ ನಿಮ್ಮ ಬಳಕೆಯಲ್ಲಿ ಅರ್ಥಗಳು ತುಂಬಾ ಚೆನ್ನಾಗಿದೆ...
  ಮುಂದುವರಿಸಿ ಸರ್.

  ReplyDelete
 19. High class sir.. ಮನುಷ್ಯ ತಾನು ಮಾನವ ಮಾತ್ರನೆಂಬ ವಾಸ್ತವ ಅರಿಯುವವರೆಗೂ ಬಣ್ಣ ಬದಲಾಗುತ್ತಲೇ ಇರುತ್ತದೆ...ಸದಾಶಯ ಹೊತ್ತ ನಿಮ್ಮ ಕವನ ಒಳ್ಳೆಯದನ್ನೇ ಉಂಟುಮಾಡಲಿ.

  ReplyDelete
 20. ಆಝಾದ್ ಭಾಯ್...

  ಬಹಳ ಬಹಳ ಚಂದದ ಕವನ...

  ಹೃದಯಾಳದಿಂದ ಬರೆದಿದ್ದೀರಿ..
  ನಿಮ್ಮ ಧ್ವನಿಗೆ ನಮ್ಮ ಧ್ವನಿಯಿದೆ.....

  ಹೆಚ್ಚಿಗೆ ಹೇಳಲಾರೆ.
  ನೀವು ನನ್ನನ್ನು ಭೇಟಿಯಾದಾಗ ಕೊಟ್ಟ ಗಣೇಶನನ್ನು ನಮ್ಮನೆ ದೇವರ ಪೀಠದಲ್ಲಿಟ್ಟಿದ್ದೇನೆ...

  ಜನಸಾಮಾನ್ಯರಿಗೆ ಜಾತಿ, ಮತಗಳ ಗೊಡವೆ ಬೇಕಿಲ್ಲ ಗೆಳೆಯಾ...

  ReplyDelete
 21. ಮನಸು ಮೇಡಂ, ನನಗೆ ನನ್ನ ಹಳ್ಳಿಯ ಜೀವನದ ಬಾಲ್ಯ ನೆನಪಾಗುತ್ತೆ...ಗಣೇಶ ಚತುರ್ಥಿ, ದೀಪಾವಳಿಗಂತೂ ...ನನ್ನ ಸ್ನೇಹಿತರಮನೆಗಳಲ್ಲಿ ಮಾಡುವ ತಿಂಡಿಗಿಂತ ಹೆಚ್ಚು ಮತ್ತು ವಿಭಿನ್ನ ನಮ್ಮ ಮನೆಯಲ್ಲಿರುತ್ತಿದ್ದವು...ನಾವೆಲ್ಲ ಸ್ನೇಹಿತರಜೊತೆ ಅವರ ಮನೆಯಲ್ಲೆ ಉಂಡರೆ, ಮನೆಗೆ ತಟ್ಟೆ ತುಂಬಿ ಬರುತ್ತಿತ್ತು ಸಿಹಿ-ತಿಂಡಿ...ಹೀಗೆ ಹತ್ತಾರು ಮನೆಗಳಿಂದ.....ಕಣ್ಣು ತುಂಬಿ ಬರುತ್ತೆ ಆ ದಿನಗಳನ್ನು ನೆನೆದರೆ....

  ReplyDelete
 22. ಸುಮ, ನಮ್ಮೀರ್ವರಲ್ಲಿ ಇರುವ ಬಾಂಧವ್ಯ ಬಹುಷಃ ಒಂದೇ ಧರ್ಮದವರಲ್ಲಿ ಕಾಣಸಿಗದು...ನನ್ನ ಅತಿ ಘನಿಷ್ಟ ಮಿತ್ರರೆಲ್ಲ ಮುಸಲ್ಮಾನರಲ್ಲ...ಹಾಗೆ ನೋಡಿದರೆ..ಕೇವಲ ಬೆರಳೆಣಿಕೆಯಲ್ಲಿ...
  ಇದನ್ನು ಸಹಿಸಲಾರವು ಸ್ಂಕುಚಿತ ಕ್ಷುದ್ರ ಮನದ ಪುಢಾರಿಗಳು..ಒಡೆದು ಆಳುವ ಬುದ್ಧಿ...ಛೇ...

  ReplyDelete
 23. ರವಿಕಾಂತ್ ಬಹಳ ಸೂಕ್ತವಾದ ಜೋಡಣೆ...ಇದು...ಅವರ ನಿಜ ಧರ್ಮ ಏನು? ಎನ್ನುವುದಕ್ಕೆ ಉತ್ತರ...ಧನ್ಯವಾದ.
  "ನನ್ನ ಪಕ್ಷ ಬಿದ್ದಾಗ ನಿನ್ನ ದೊಂಬಿ ಕಾಪಾಡಿದ್ದು
  ನಿನ್ನ ಪಕ್ಷ ಬಿದ್ದಾಗ ನಾನು ಮಂದಿರ ,ಮಸೀದಿ ಲೂಟಿದ್ದು
  ನನ್ನ ಹಗರಣ ನೀನು ಮುಚ್ಚಿಟ್ಟದ್ದು,
  ನಿನ್ನ ಹಗರಣದಲ್ಲಿ ನನಗೆ ಪಾಲು ದಕ್ಕಿದ್ದು "...

  ReplyDelete
 24. ಮಂಜು, ನಮ್ಮ ರಾಜಕಾರಣಿಗಳ ಮುಖವಾಡ ಕಳಚಿದ ಹೊರತು ನಮ್ಮ ನಾಡು, ದೇಶ ಉದ್ಧಾರವಾಗದು....ಇದು ಜನಸಾಮಾನ್ಯನಿಂದ ಪ್ರಾರಂಭವಾಗಬೇಕು.

  ReplyDelete
 25. ಮಹೇಶ್ ಧನ್ಯವಾದ. ದಿನನಿತ್ಯ ನಮ್ಮ ಪುಢಾರಿಗಳು ಮಾಡುವ ಅವಾಂತರಗಳೇ ಪ್ರೇರಣೆ....ಹಹಹ ಅವರಿಗೆ ಥ್ಯಾಂಕ್ಸ್ ಹೇಳಬೇಕು..ನಾವು.

  ReplyDelete
 26. ಶಿವು, ಅಭಿಮಾನ, ಸ್ನೇಹ, ಅತ್ಮೀಯತೆಗಳು ಧರ್ಮದ ಅನುಮತಿ ಪಡೆಯುವುದಿಲ್ಲ ...ಹಾಗೆಯೇ ..ಧರ್ಮಕ್ಕನುಸಾರವಾಗಿ ಆಗುವ ಸ್ನೇಹ..ತೋರಿಕೆಯದು ಎಂದೇ ನನ್ನ ಅಭಿಮತ.

  ReplyDelete
 27. ಸುಬ್ರಮಣ್ಯ ಸರ್, ನಿಜ ನಿಮ್ಮ ಮಾತು...ನನ್ನ ಭಾವಪ್ರಕಟಕ್ಕೆ ನನ್ನ ನಿಜ ಜೀವನದ ಘಟನೆಯ ನೆನಪಿನ ಕಾರಣ. ನಮ್ಮ ನಾವು ಅರಿತು ನಡೆದರೆ ಬಣ್ಣ ಬದಲಾಯಿಸುವ ಗೋಸುಂಬೆಗಳನ್ನು ಕಂಡುಹಿಡಿಯುವುದು ಸುಲಭ

  ReplyDelete
 28. ಪ್ರಕಾಶ್, ನಿಮ್ಮ ಆತ್ಮೀಯತೆಗೆ ಶರಣು. ನಿಮ್ಮ ಮಾತು ನನ್ನ ನಾಲಗೆಯನ್ನು ಕಟ್ಟಿಹಾಕಿದೆ...ನೀವು, ಶಿವು, ದಿನಕರ್ ..ನಿಮ್ಮೆಲ್ಲರ ಆತ್ಮೀಯತೆ (ಎಂದೂ ನೋಡಿರದ ಪರಿಚಯವಾಗಿರದವರು, ಕೇವಲ ಬ್ಲಾಗಿನ ಮೂಲಕ ಮನ ಅಂತರಾಳ ಗುರುತಿಸಿ) ನನ್ನ ಕಣ್ಣಿಗೆ ಕಟ್ಟಿದಂತಿದೆ. ಧನ್ಯವಾದ.

  ReplyDelete
 29. ಸಕತ್ ಆಗಿದೆ... ಕೆಲವು ಸಾಲುಗಳಂತೂ ಎಚ್ಚರಿಕೆಯ ಕರೆಗಂಟೆಯಂತಿದೆ....
  ನಿಮ್ಮವ,
  ರಾಘು.

  ReplyDelete
 30. ರಾಘು ಧನ್ಯವಾದ, ಮಲಗಿರುವವರನ್ನು ಎಚ್ಚರಿಸಬಹುದು, ಆದ್ರೆ ಹಾಗೆ ನಟಿಸುವವರನ್ನು ಎಚ್ಚರಿಸುವುದು ಕಷ್ಟ.

  ReplyDelete
 31. ಬಹಳಾನೇ ಚೆನ್ನಾಗಿದೆ.
  ಹೊಲಸು ರಾಜಕಾರಣಕ್ಕೆ ಮಾತ್ರ ಜಾತಿ ಬೇಕು. ಆದರೆ ಜನಸಾಮಾನ್ಯನಿಗೆ ಪ್ರೀತಿ ತೋರಿಸೋರಿದ್ದರೆ ಸಾಕು.

  ReplyDelete
 32. Mile sur mera thumara, phir Bharath bane Sunahra Sunahra. jathi matha marethu navugalu ondagi ninthare rajakaranigalu enu madoke sadya alva? Thumba chennagide kavana

  ReplyDelete
 33. Excellent gurugale:-)

  "ನಮಗೆ -ನೀವು, ನಿಮಗೆ-ನಾವು"
  ಎಷ್ಟು ಅರ್ಥ ಪೂರ್ಣ ಸಾಲುಗಳು..ಎಲ್ಲರಿಗೂ ಇದು ಅರ್ಥವಾದರೆ ಎಷ್ಟು ಸುಂದರ ನಮ್ಮೆಲ್ಲರ ಜೀವನ..

  ReplyDelete
 34. ಯಾರದ್ದೊ ಸ್ವಾರ್ಥಕ್ಕೆ ಮತ್ಯಾರದ್ದೊ ಬಲಿ..
  ಸ್ವಾರಸ್ಯದ ಮಾತಾಡಿ ಸಾಮರಸ್ಯ ಹಾಳು ಮಾಡುವವರ ಬಾಯಿ ಹೊಲಿ..
  ನಾನಿನಗಾದರೆ..ನೀ ನನಗೆ...ಮೊದಲು ತಿಳಿ...

  ಭಾವ ಚೆನ್ನಾಗಿದೆ....ಜಲನಯನ ಸರ್..
  ವ೦ದನೆಗಳು..

  ReplyDelete
 35. ನಮಗೆ -ನೀವು
  ನಿಮಗೆ-ನಾವು, ನಮ್ಮೆಲ್ಲರಿಗೆ ಬೇಕು
  ಜನ್ಮ-ಅನ್ನ ನೀಡಿದನಾಡು....
  ಎಂತಹ ಸಾಲುಗಳು ಜಲ ನಯನ ಅವರೇ..ಎಲ್ಲಿಯವರೆಗೆ ಮನುಷ್ಯನಿಗೆ ಬೆಲೆ ಕೊಡದೇ ಜಾತಿಯನ್ನ ನೋಡಲಾಗುತ್ತದೆಯೋ, ಅಲ್ಲೀವರೆಗೆ ಹೀಗಿನ ಸ್ವಾರ್ಥಿ ಗಳ ಕೈ ಮೇಲಿರುತ್ತದೆ!! ವಿಚಾರಪೂರ್ಣವಾದ ಬರಹ! ಅದರಲ್ಲಿನ ಆತ್ಮೀಯತೆ ತುಂಬಿದ ನೋವು ಮನ ತಟ್ಟುತ್ತವೆ!

  ReplyDelete
 36. ಸರ್,

  ಸಾಲುಗಳು ಮನುಕುಲಕ್ಕೆ ಎಚ್ಚರಿಕೆಯ ಕರೆಘಂಟೆ ಯಂತಿವೆ
  ಸಮಾಜದ ಬಗೆಗಿನ ನಿಮ್ಮ ಕಾಲಜು ಶ್ಲಾಘನೀಯ

  ReplyDelete
 37. ವಿಚಾರಯುಕ್ತ ಹಾಗೂ ಅರ್ಥಗರ್ಭಿತ ಕವನ.

  ಹಿಡಿದರೆ ಬಣ್ಣ ಬದಲಿಸುವವರ ಜಾಡು,
  ಸಿಗುವುದು ನಿಶ್ಚಿತ ಸುಡುಗಾಡು.
  ಮತ್ತೆ ಮತ್ತೆ ಕವನಗಳು, ವಿಚಾರಗಳು ನಮ್ಮನ್ನು ತಲುಪುತ್ತಿರಲಿ.
  ವ೦ದನೆಗಳು.

  ReplyDelete
 38. ಆನಂದ್, ಓಟು-ಸಿಕ್ಕರೆ...ನ್ನೂ ನೆಕ್ಕುವ ನಾಯಿಗಳು...ಇರುವವರೆಗೆ ಮನು-ಕುಲ, ಮಾನವತೆಗೆ ಬೆಲೆ ಸಿಗುವುದು...ಕನಸಾಗುತ್ತೆ

  ReplyDelete
 39. ನಿಶಾ, ಮಿಲೆ ಸುರ್ ಮೆರಾ ತುಮ್ಹಾರಾ ಎನ್ನುವುದಕ್ಕೆ ಬದಲು.....ಈ ಸಸುರಿಗಳು..ಅಸುರಿ ರಾಗಾಲಾಪನೆ ಮಾಡ್ತಿದ್ದಾರಲ್ಲ??

  ReplyDelete
 40. ವನಿತಾ, ಧನ್ಯವಾದ...ಮನ ಕಲಕುವ ಘಟನೆಗಳಾದರೆ ಇಂತಹ ಸಹಜಮಾನವ ಭಾವ ಪ್ರಕಟಗೊಳ್ಳುತ್ತೆ..ಅಲ್ವೇ..?

  ReplyDelete
 41. ವಿಜಯಶ್ರೀಯವರೇ, ನಮ್ಮಲ್ಲಿ ಸ್ವಾರ್ಥವೇ ಪೂರ್ಣ ತುಂಬಿದೆ...ಅಲ್ಪ ಸ್ವಾರ್ಥ..ಹೆಚ್ಚು ಸೇವೆ ಇದ್ದರೂ ನಮ್ಮ ಸ್ಥಿತಿ ಹೀಗಿರುತ್ತಿರಲಿಲ್ಲ.

  ReplyDelete
 42. ಸುಮನ ಮೇಡಂ, ಹೌದಲ್ಲವೇ? ಅನ್ನ ನೀಡಿದ ನಾಡನ್ನು ಅದರ ಒಳಿತು-ಕೆಡಕುಗಳು ನಮಗೆ ಅಪಥ್ಯ ಯಾಕಾಗ್ತಿವೆ ಗೊತ್ತಿಲ್ಲ,

  ReplyDelete
 43. ಗುರು, ಜನಜಾಗೃತಿ ತರುವ ಚಿಂತನೆಯಾದರೆ, ನಮ್ಮ ತಲೆಯಮೇಲೆ ಕುಳಿತಿರುವವರಿಗೆ..ಉಳಿಗಾಲವಿಲ್ಲ...

  ReplyDelete
 44. ಮಂಜು ಶ್ವೇತೆಗೆ, ನನ್ನ ಕವನ ಇಷ್ಟವಾದುದಕ್ಕೆ ಧನ್ಯವಾದ...

  ReplyDelete
 45. ಮನಮುಕ್ತಾ, ವಿಚಾರಯುಕ್ತ ಅಂದಿರಿ, ಧನ್ಯವಾದ...

  ReplyDelete
 46. ಗೌತಮ್ ನಿಮ್ಮ ಪ್ರೋತ್ಸಾಹಕ ಮಾತು ಮತ್ತು ಪ್ರತಿಕ್ರಿಯೆಗೆ ಧನ್ಯವಾದ.

  ReplyDelete
 47. ಬಹಳ ಚೆನ್ನಾಗಿದೆ ಕವನ.

  ReplyDelete
 48. ನಲ್ಮೆಯ ಉಮಾ, ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದ, ಕದ್ದು ತಿನ್ನುವವರನ್ನು ಕೊಂದು ತಿನ್ನುವವರ ಕಾಲವಿದು. ತಿನ್ನದೇ ಇರುವವವ್ರು ಸ್ವಾಭಾವಿಕವಾಗಿ ಸಾಯುತ್ತಾರೆ..ಪಾಪ..!!

  ReplyDelete
 49. ತು೦ಬಾ ಅರ್ಥವಿದೆ ನಿಮ್ಮ ಕವನದಲ್ಲಿ ಅಜಾದ್ ಸರ್...ಒಳ್ಳೆಯ ಕವನ ಕೊಟ್ಟಿದ್ದಕ್ಕೆ ಥ್ಯಾ೦ಕ್ಸ್ :)

  ReplyDelete
 50. ಸುಧೇಶ್, ನಿಮ್ಮ ಅಭಿಪ್ಪ್ರಾಯಕ್ಕೆ ನಮನ.

  ReplyDelete
 51. This comment has been removed by the author.

  ReplyDelete