Monday, February 8, 2010

ಬೇರೆ ನೀತಿ

ಕೇಳ್ಬ್ಯಾಡಿ ನನ್ಹತ್ರ ನನ್ ಕತಿ

ತಿಂಗ್ಳಿಗ್ ಬರೋದ್ಸಂಬ್ಳ ಒಂದೇ ಸತಿ

ಎಲ್ಲಾದಕೂ ಕಾಯ್ಬೇಕ್ರೀ ಅದ್ಕೇನೇ

ಪರಿಹಾರಕ್ಕೆ ಪಾಲಿಸ್ತಾಯಿವ್ನಿ ಬೇರೆ ನೀತಿ.

ಹೆಡ್ಗುಮಾಸ್ತೆ ದೊಡ್ ಕೆಲ್ಸ ಏನಲ್ಲ

ದುಡ್ಗೂನೂ ಒಂದ್ರಸ್ತೆ ಕಂಡೌವ್ನೇ ಬಲ್ಲ

ಸ್ನೇಯಿತ್ರು ಕೇಳಿದ್ರು, ಲೋಕಾಯುಕ್ತ್ರು ಬಂದ್ರಂತೆ

ನಿಮ್ ಸಾಹೇಬ್ರನ್ನ ತಿನ್ನೋವಾಗ್ ಹಿಡ್ದ್ರಂತೆ

ಹೆಂಗಲಾ ಬಚಾವಾದೆ ನೀನು?

ನಿನ್ ಮನೆ, ತ್ವಾಟ ಸೋದ್ನ ಮಾಡಿದ್ರಂತೆ

ನಾನಂದೆ, ಅದ್ಕೇ ಯೋಳೋದು ಅಡ್ಕಸ್ಬೀಗ್ಳೂಂತ

ತಿಂದ್ರೆ ಸಾಲ್ದು ಬಚಾವಾಗೋಕೂ ಕಲೀಬೇಕು ತಂತ್ರ

ಲೋಕಾಯುಕ್ತ್ರಿಗೆ ಇಲ್ವಾ ಹೆಡ್ಗುಮಾಸ್ತ್ರು?

ಅವ್ರಿಗೇ ತಿನ್ನಿಸ್ದೇ ಅವ್ರ್ ಮನೇಲೇ ಅಡಗ್ಸಿಟ್ಟೆ

ಪ್ರಾಣಿ ಪಕ್ಷಿಗ್ಳ ತಂತ್ರ ನಮ್ಮಂತೋರಮುಂದೆ ನಡೆಯೊಲ್ಲ

ಒಬ್ಬನ್ನ ಹಿಡ್ದ್ ಬುಟ್ರೆ ಮಿಕ್ಕೋರು ಮಂಕಾಗೊಲ್ಲ

ಯಾಕಂದ್ರೆ ನಮ್ಮತ್ರ ತಿನ್ನೋರು ಮ್ಯಾಲ್ಕುಂತವ್ರೆ

ಅವರತ್ರ ತಿನ್ನೋಕೆ ಅವ್ರಮ್ಯಾಲ್ನವ್ರು ಕಾದವ್ರೆ

ಲೋಕಾಯುಕ್ತ್ರು ಒಬ್ಬ್ರು, ಕಳ್ಳ ಖದೀಮ್ರು ಕೋಟ್ಯಾಂತ್ರ

ಒಬ್ಬನ್ನ ಹಿಡಿದ್ರೆ ಸಾಕು ಸಾವ್ರ ಹುಟ್ಕಳ್ತಾರೆ

ಲೋಕಾಯುಕ್ತರೂ ಅಸಹಾಯಕ್ರು ಪಾಪ ಏನುಮಾಡ್ತಾರೆ?

ದಿನಾ ಸಾಯೋರ ಸಂತೆ ಇದು ಅಂತ ಸುಮ್ನಾಗ್ತಾರೆ.

41 comments:

  1. ಆಜಾದ್ ಸರ್,
    ಚೆನ್ನಾಗಿದೆ ಕವನ..... ಕಳ್ಳ ಕದೀಮರ ವಿಷಯದ ಬಗ್ಗೆ ಬರೆದಿದ್ದೀರಾ.... ತೆರಿಗೆ ಉಳಿಸಿ,ದುಡ್ಡು ದೋಚಿ, ಮನೆ ಕಟ್ಟಿಸಿ , ಏನು ಮಾಡ್ತಾರೆ ಇವರೆಲ್ಲಾ..... ಹೋಗೋವಾಗ ಏನಾದರೂ ತಗೊಂಡು ಹೋಗ್ತಾರಾ.... ನಮ್ಮಲ್ಲಿ, ಲೋಕಾಯುಕ್ತರು ಮಾಡ್ತಾ ಇರುವ ಕೆಲಸ ನಿಜಕ್ಕೂ ಶ್ಲಾಘನೀಯ... ಅವರ ಕಾರಣದಿಂದ ಸ್ವಲ್ಪನಾದರೂ ಜನ ಹೆದರುತ್ತಾರೆ.... ಆದರೂ ನೀವು ಹೇಳಿದ ಹಾಗೆ ರೈಡ್ ಮಾಡಲು ಬಂದಿದ್ದ ಮೇಲಿನವರಿಗೆ ತಿನ್ನಿಸಿ ಬಚಾವಾಗುತ್ತಾರೆ....ನಮ್ಮ ಸರಕಾರವೂ ಷ ಲೋಕಾಯುಕ್ತರಿಗೆ ಸಹಾಯ ಮಾಡಿದರೆ ಉತ್ತಮ... ಅದನ್ನು ಬಿಟ್ಟು ರೈಡ್ ಮಾಡಿಸಿಕೊಂದವರಿಗೆ ಬಡ್ತಿ ಕೊಟ್ಟು ಪಾಪ ಕಳೆದುಕೊಳ್ಳುತ್ತಾರೆ.... ಈವರೆಗೂ ಎಸ್ತೆಲ್ಲಾ ದಾಳಿಗಳು ನಡೆದ ಬಗ್ಗೆ ಕೇಳಿದ್ದೇವೆ ಆದರೆ ಒಬ್ಬರಿಗೂ ಶಿಕ್ಷೆಯಾದ ಸುದ್ದಿ ಇಲ್ಲಾ......

    ReplyDelete
  2. ಚೆನ್ನಾಗಿದೆರೀ, ಬೇಷಾತ್ರೀಯಪ್ಪಾ !

    ReplyDelete
  3. ಜಲಾನಯನ ಸರ್ , ಚೆನ್ನಾಗಿದೆ . ಅದರಲ್ಲೂ ಲೋಕಯುಕ್ತರ್ ಹೆಡ್ಗುಮಾಸ್ತ್ರುಗೆ ಲಂಚ್ ತಿನ್ನಿಸಿ, ಅವರ ಮನೆಲಿಯೇ ಬಚ್ಚಿಟ್ಟು ಲೋಕಾಯುಕ್ತರಿಗೆ ಚಳ್ಳೆ ಹಣ್ಣು ತಿನ್ನಿಸಿದ್ದು ಸಖತ್ತಾಗಿ ಮೂಡಿ ಬಂದಿದೆ. ನಮ್ಮ ಹಳ್ಳಿಯ ಆಡು ಭಾಷೆಯಲ್ಲಿ ನಮ್ಮ ಸಮಾಜದ ಅದರಲ್ಲೂ ಸರ್ಕಾರೀ ಅಧಿಕಾರಿ ಗಳ ಲಂಚ್ಕೊರತನ್ ಚೆನ್ನಾಗಿ ಬಿಂಬಿಸಿದಿರ. ನಮ್ಮ ಸಮಾಜದ ಸಿಸ್ಟಮ್ ಕರಾಬಾಗಿರುವಾಗ್ ಎಲ್ಲಿ ಅಂತ ಯಾರು ಸರಿ ಮಾಡೋಕಾಗುತ್ತೆ ? ಈ ಲಂಚ್ಕೊರತನ್ , ಭ್ರಸ್ಟಾಚಾರ್ ಎಲ್ಲ ನಮ್ಮ ಸಮಾಜದಲ್ಲಿ ಬೇರು ಬಿಟ್ಟು ಹೆಮ್ಮರ್ವಾಗಿ ಬೆಳೆದು ಬಿಟ್ಟಿವೆ . ಅವಗಳು ಟೊಂಗೆ, ಹೂವು, ಎಲೆ ಕಿತ್ತರೆ ಸಾಕಾಗದು ಬೇರು ಗಟ್ಟಿ ಇರೋವರ್ಗೂ ಬೆಳಿತನೇ ಇರುತ್ತವೆ . ಅದಕ್ಕೆ ಒಂದೇ ದಾರಿ ಬೇರು ಸಮೆತ್ ಕಿತ್ತೆಸೆಯುವದು . ಅದು ಅಸಾಧ್ಯವಾದ ಮಾತು ಅಂತ ಎಲ್ಲಿರಿಗೂ ಗೊತ್ತು ಅಲ್ವಾ ?

    ReplyDelete
  4. ದಿನಕರ್, ಧನ್ಯವಾದ...ಏನೋ ಯೋಚಿಸ್ತಿದ್ದೆ..ಇದು ಬಂತು...ನಿಮಗೆ ಇಷ್ಟವಾದುದಕ್ಕೆ ನನ್ನಿ.

    ReplyDelete
  5. ವಿ ಆರ್ ಭಟ್ರೆ..ಎಂಥದು ಮಾರಾಯ್ರೆ..ಈ ಬುರ್ನಾಸು ಸರ್ಕಾರಿ ಕೆಲ್ಸ ಅಂದ್ರೆ ವಾಕರಿಕೆ...ಕೈ ಬೆಚ್ಚಗೆ ಮಾಡದೇ ಏನೂ ಮುಂದಕ್ಕೆ ಹೋಗೋಲ್ಲ...ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದ.

    ReplyDelete
  6. ಮನಸಾರೆಯವರೇ, ಏನಂತ ಹೇಳಲಿ ಹೇಳಿ..ನಿಮ್ಮ ಮಾತು ಚೊಕ್ಕ..ಅಳೆದು ತೂಗಿ ಹೇಳಿದ್ದೀರಿ. ಲಂಚದ ಬೇರು, ಬುಡ ದಪ್ಪವಾಗಿವೆ..ಬುಡಸಮೇತ ಕಿತ್ತೊಗೆಯಲು ಎಲ್ಲ ಶ್ರಮ ಪಟ್ಟರೆ ಖಂಡಿತಾ ಸಾಧ್ಯ. ನಿಮ್ಮ ಪ್ರತಿಕ್ರಿಯೆಗೆ...ಧನ್ಯವಾದ.

    ReplyDelete
  7. ವಾಹ್! ಖರೇ ಹೇಳಿದಿರಿ. ತಂತ್ರಕ್ಕೊಂದು ತಂತ್ರ, ಮಂತ್ರಕ್ಕೊಂದು ಮಂತ್ರ!

    ReplyDelete
  8. ಸರ್, ರಾಜ ರತ್ನಂ ಅಗಿಬಿಟ್ರಲ್ಲ
    ನಿಮ್ಮ ಕವನ ಓದ್ತಾ ಇದ್ರೆ 'ಹೆಂಡ ಹೆಂಡ್ತಿ ಕನ್ನಡ ಪದಗೊಳ್ '' ನೆನಪಿಗೆ ಬಂತು
    ತುಂಬಾ ಸುಂದರವಾಗಿದೆ

    ReplyDelete
  9. ಚೆನ್ನಾಗಿ ದಬಾಯ್ಸಿ ಬರೆದಿದ್ದೀರಿ..
    ಒಳ್ಳೆಯ ಕವನ..
    ವ೦ದನೆಗಳು.

    ReplyDelete
  10. ಸಕತ್ ಆಗಿ ಬರೆದಿದ್ದೀರ ಆಜಾದ್ ಸರ್... ಸೂಪರ್.... :-)
    ಒಳ್ಳೆಯ ಸೊಗಡಿನ ಕವನ
    Guru

    ReplyDelete
  11. ಸುನಾಥ್ ಸರ್ ನನಗೆ ಭೇತಾಳನ ಕಥೆಗೆ, ಗೊತ್ತಿಲ್ಲ ಮಗು ಗೆ ಮತ್ತೆ ಈಗ ಕವನಕ್ಕೆ inspriration ಆಗಿರೋ ಲೋಕಾಯುಕ್ತರಿಗೆ ನನ್ನ ಮೊದಲ ನಮನ...ಕೋಟಿಗಳು ಸಿಕ್ಕಿದ್ವು..ಆಸ್ತಿ ಪಾಸ್ತಿ ಜಪ್ತಿ ಆಯ್ತು ಅಂತಾರೆ...ಆದ್ರೆ ಎಲ್ಲದರ ಮುಂದಿನ..ಚರ್ಯೆ...ಗೊತ್ತಿಲ್ಲ...ಎಲ್ಲಿ ಮಾಯವಾಗ್ತಾಯಿವೆ ಈ ಕಥೆಗಳು ಅವುಗಳ ಖಳನಾಯಕರು..?..

    ReplyDelete
  12. ಡಾ. ಗುರುಮೂರ್ತಿ, ನಿಮ್ಮ ಆತ್ಮೀಯತೆಗೆ ಧನ್ಯವಾದ...ಅವರು ರಾಜ ಮತ್ತು ರತ್ನ...ನಾನೊಂದು ಧೂಳಿನ ಕಣ ಅವರ ತುಲನೆಯಲ್ಲಿ ಆದ್ರೆ..ಅದೇ ಸಾಧನೆ ಅಂದ್ಕೋತೇನೆ...

    ReplyDelete
  13. ಮನಮುಕ್ತಾ, ನಿಮ್ಮ ಬ್ಲಾಗಿಗೆ ಹೋಗಿ ನನ್ನ ಅನಿಸಿಕೆಯನ್ನು ಹಾಕಿ ಬಂದರೆ ನಿಮ್ಮ ಪ್ರತಿಕ್ರಿಯೆ ನನ್ನ ಬ್ಲಾಗಿಗೆ..ಸಂತೋಷ, ಧನ್ಯವಾದ ನಿಮ್ಮ ಪ್ರೋತ್ಸಾಹಕೆ.

    ReplyDelete
  14. ಗುರು ನಿಮ್ಮ ವಂಡರ್ಲ್ಯಾಂಡ್ ನ ಒಳ್ಳೋಳ್ಳೇ ಚಿತ್ರ ಪರಿಚಯಗಳ ಮತ್ತು ಲೇಖನಗಳ ಸವಿ ನನಗೂ ಇಷ್ಟ...ತಪ್ಪದೇ ಬರ್ತೀರ...ಬೆನ್ನುತಟ್ಟಿ ನಾಲ್ಕು ಒಳ್ಳೆಮಾತು ಬರೀತೀರ...ಏನೆನ್ನಲಿ...ಧನ್ಯವಾದ...

    ReplyDelete
  15. sooper...azad sir!!!..
    nimminda kannada kaleebekru nodi:)..namgishtu kannada barodilla..

    ReplyDelete
  16. ಹೆಡ್ಗುಮಾಸ್ತ್ರನ್ನೇ ಹಿಡ್ದ್ರಲ್ಲಾ ಸಾರ್ ...! ಚೆನ್ನಾಗಿ ಬರೆದಿದ್ದೀರಿ.....:) ಧನ್ಯವಾದಗಳು

    ReplyDelete
  17. sir, super ide ee kavana, ellellu brastacharave tumbiruvaaga badalisuva hottu innu bandilla barutto illavo gottilla

    ReplyDelete
  18. ಆಜಾದ್,

    ಸೂಪರ್...ತಂತ್ರಕ್ಕೆ ಪ್ರತಿತಂತ್ರವೆನ್ನುವುದು ಸರಿಯಾಗಿದೆ. ಪಕ್ಕಾ ಹಳ್ಳೀಭಾಷೆಯಲ್ಲಿ ಬರೆದಿರುವ ಪದ್ಯ ಕುತೂಹಲಕರವಾಗಿದೆ.

    ReplyDelete
  19. This comment has been removed by the author.

    ReplyDelete
  20. ಸಕತ್ ಆಗಿದೆ...
    ಹಳ್ಳಿ ಸೊಗಡಿನ ಭಾಷೆನಲ್ಲಿ....

    ReplyDelete
  21. ಜಲನಯನ ಅವರೆ,
    ನನ್ನ ಪ್ರತಿಕ್ರಿಯೆಗೆ ನಿಮ್ಮ ಮರು ಪ್ರತಿಕ್ರಿಯೆ ಓದಿದೆ.
    ನಿಮಗೆ ಹಾಗನ್ನಿಸಿದ್ದರೆ ದಯವಿಟ್ಟು ಕ್ಷಮಿಸಿ ಬಿಡಿ.ನಿಮ್ಮ ಅನೇಕ ಬರಹಗಳಿಗೆ ನಾನು ಪ್ರತಿಕ್ರಿಯೆಗಳನ್ನು ಕೊಟ್ಟಿದ್ದೇನೆ ನೋಡಿ.ನಿಮ್ಮ ವಿಜ್ನಾನದ ಬ್ಲಾಗಿಗೂ ನನ್ನ ಪ್ರತಿಕ್ರಿಯೆ ಕೊಟ್ಟಿದ್ದೇನೆ. ಒಮ್ಮೊಮ್ಮೆ ತಪ್ಪಿದಲ್ಲಿ,ಅನ್ಯಥಾ ಭಾವಿಸಬಾರದು.ನಿಮ್ಮ ಪ್ರತಿಕ್ರಿಯೆ ನನಗೆ ಅವಶ್ಯವೇನೊ ನಿಜ.. ಆದರೆ ನೀವು ತಿಳಿದು ಕೊ೦ಡ ರೀತಿಯಲ್ಲಲ್ಲ.. ದಯವಿಟ್ಟು ಎ೦ದಿನ೦ತೆ ನಿಮ್ಮ ಪ್ರತಿಕ್ರಿಯೆಗಳು ಬರುತ್ತಿರಲಿ.ನಿಮ್ಮೆಲ್ಲರ ಪ್ರತಿಕ್ರಿಯೆಗಳ ಪ್ರೋತ್ಸಾಹದಿ೦ದ ತಾನೇ ನಾನು ಬರೆಯುತ್ತಿರುವುದು?ಎಲ್ಲರ ಪ್ರತಿಕ್ರಿಯೆಗಳೆ ಬ್ಲಾಗ್ ಬರಹಗಳ ಜೀವಾಳ ಅಲ್ಲವೇ?ಅನ್ಯಥಾ ಭಾವಿಸದೇ ನಿಮ್ಮ ಅಮೂಲ್ಯ ಪ್ರತಿಕ್ರಿಯೆಗಳನ್ನು ನೀಡುತ್ತೀರೆ೦ದು ನ೦ಬಿದ್ದೇನೆ.ವ೦ದನೆಗಳು.

    ReplyDelete
  22. ಮನಮುಕ್ತಾರವರೇ,.....ಅರೆರೆ ಯಾಕೋ ಎಡ್ವಟ್ಟಾಯ್ತು ನನ್ನಿಂದ್ಲೇ ಅನ್ಸುತ್ತೆ...ಅಕಟಕಟಾ...ವಿಧಿಯೇ...ಹಹಹ.
    ನಿಮ್ಮ ಬ್ಲಾಗಿಗೆ ನಾನು ಪ್ರತಿಕ್ರಿಯೆ ಹಾಕಿದ್ರಿಂದ ನೀವು ನನ್ನ ಬ್ಲಾಗಿಗೆ ಪ್ರತಿಕ್ರಿಯೆ ಹಾಕಿದ್ರಿ ಅನ್ನೋ ...ಇಂಪ್ರೆಶನ್ ಕೊಟ್ಬಿಟ್ಟೆ ಅನ್ನಿಸುತ್ತೆ...ನೀವು ಕ್ಷಮಿಸಬೇಕು....ನಾನು ಪ್ರತಿಕ್ರಿಯೆ ಹಾಕಿ ನನ್ನ ಬ್ಲಾಗಿಗೆ ಬಂದಾಗ ನಿಮ್ಮ ಪ್ರತಿಕೆಯೆ ಇತ್ತು..ಎಂಥ ಸಮ್ತೋಷದ ವಿಷಯ ಅಂತ ನನ್ನ ಅಭಿಪ್ರಾಯವಾಗಿತ್ತು....ಸಾರಿ ಸಾರಿ sorry. ನಿಮ್ಮ ಪ್ರತಿಕ್ರಿಯೆ ನನ್ನ ಎಲ್ಲ ಬ್ಲಾಗ್ ಪೋಸ್ಟಿಗೂ ಖಂಡೊತಾ ಸಿಕ್ಕಿದೆ..ಅದಕ್ಕೆ ನನ್ನ ಆಭಾರವನ್ನೂ ವ್ಯಕ್ತಪಡಿಸಿದ್ದೇನೆ..ಹಾಗಿರುವಾಗ ಯಾವ ಬಾಯಿಂದ...ಅಲ್ಲಲ್ಲ..ಕೈಯಿಂದ ಬರೆಯಲಿ..ನಿಮ್ಮ ಬ್ಲಾಗಿಗೆ ಪ್ರತಿಕ್ರಿಯೆ ಹಾಕಿದ್ರಿಂದ..ನನ್ನ ಪೋಸ್ಟ್ ಗೆ ನೀವು ಪ್ರತಿಕ್ರಿಯೆ ಹಾಕಿದ್ರಿ ಅಂತ......ಶಾಂತಂ..ಪಾಪಂ...

    ReplyDelete
  23. ಹುಹ್.. ಎಲ್ಲೆಲ್ಲು ಲಂಚಾವತಾರ..

    ReplyDelete
  24. ವನಿತಾ ಧನ್ಯವಾದ ಪ್ರತಿಕ್ರಿಯೆಗೆ ಮತ್ತು ನನ್ನ ಗೀಚುವಿಕೆಯನ್ನ ಇಷ್ಟಪಟ್ಟದ್ದಕ್ಕೆ...

    ReplyDelete
  25. ಸುಬ್ರಮಣ್ಯ ರವರೇ ನಿಮ್ಮ ಕಾಂಪ್ಲಿಮೆಂಟ್ಸೋ ಅಥವಾ ಕಂಪ್ಲೇಂಟ್ಸೋ...?? ಹಹಹ, ನನ್ನ ಸಣ್ಣ ಪುಟ್ಟ ತಪ್ಪನ್ನ ಮನ್ನಿಸಿ ಹೊಟ್ಟೆಗೆ ಹಾಕ್ಕೊಳ್ಳಿ.....ಈ ರೀತಿ ಹೇಳಿದ್ರೆ ನನಗೆ ಅನುಮಾನ ಶುರು ಆಗುತ್ತೆ...ನನ್ನ ಬರವಣಿಗೆ ಇಷ್ಟಪಟ್ಟಿರಿ ಧನ್ಯವಾದ.

    ReplyDelete
  26. ಮನಸು ಮೇಡಮ್ಮನವರೇ ನಿಮ್ಮ ಮಾತು ಖರೆ...ಮೊನ್ನೆ ತಾನೇ ಬಿ.ಬಿ.ಎಮ್.ಪಿ ಭ್ರಷ್ಠರನ್ನ ಹಿಡಿದರು ಲೋಕಾಯುಕ್ತರು...ನನ್ನ ಒಂದು ಸೈಟಿಗೆ ಖಾತೆ ಮಾಡಿಕೊಡೋಕೆ 15 ಸಾವಿರ ಕೇಳ್ತಿದ್ದಾರಂತೆ...ಯಾಕೆ ಅಂದ್ರೆ ಅದು ಡಿಸ್ಟ್ರಿಬ್ಯೂಶನ್ ಫೀ ಅಂತೆ ಅದಕ್ಕೆ ರಸೀತಿ ಇರೊಲ್ಲ ಅಂದ್ರಂತೆ....ಹಹಹ ಇನ್ನು ಲೋಕಾಯುಕ್ತರು ಎಲ್ಲೆಲ್ಲಿ ಹೋಗೋದಕ್ಕೆ ಸಾಧ್ಯ ಹೇಳಿ,,,,??

    ReplyDelete
  27. ಶಿವು..ಹಳ್ಳಿಜನಕ್ಕೇ ಹೆಚ್ಚುತೊಂದರೆ ಕೊಡೋದು ನಮ್ಮ ಪಟ್ಣದ ಅಧಿಕಾರಿಗಳು...ನೋಡಿದ್ದೀರಲ್ಲಾ...ಕಚೇರಿಗಳಲ್ಲಿ...ನಮ್ಮಲ್ಲಿ ಮನಸ್ಸಾಕ್ಷಿ ಅನ್ನೋದು ಇದ್ರೆ..ನಮ್ಮ ನಮ್ಮ ತಿಳಿದವರಿಗೆ ಹೇಳಿ ತಿದ್ದಿ..ಬಿಡ್ರಪ್ಪಾ ಎಂಜಲು ಕಾಸು ನಿಲ್ಲೋದಲ್ಲ..ಅಂತ...ಯಾವಾಗ ಬರುತ್ತೋ ಆ ದಿನ ಲಂಚ ಇಲ್ಲದೆ ಮಂಚ ಹತ್ತೋದಿನ..

    ReplyDelete
  28. ಮಯೇಸಣ್ಣ ಅದ್ಯಾಕೇಳೀಯಣ್ಣಾ..ಬೋ ಸತಾಯಿಸ್ತಾರೆ ನಮ್ಮ ಪೇಟೆ ಅದ್ಕಾರಿಗ್ಳು...ಯಾರಿಗಣ್ಣ ಕಂಪ್ಲೇಟ್ ಕೊಡೋದು..?

    ReplyDelete
  29. ರವಿಕಾಂತ್, ಲಂಚಾವತಾರದ ಮುಂದೆ ಇನ್ನು ಅವತಾರಗಳುಂಟೆ..? ಅಲ್ಲವಾ?

    ReplyDelete
  30. ವಿಜಯಶ್ರೀಯವರೇ, ಮೊನ್ನೆ ಗಿಫ್ಟ್ ಡೀಡ್ ಮಾಡ್ಸೋಕೆ ಅಂತ ವಿಲ್ಸನ್ ಗಾರ್ಡನ್ ಸಬ್-ರೆಜಿಸ್ಟ್ರಾರ್ ಆಫೀಸಿಗೆ ಹೋಗಿದ್ದೆ...ನಮ್ಮ ವಿ.ವಿ.ಯಲ್ಲೇ ಓದಿದ್ದು ಅಫೀಸರ್ರು...ನೀವು ಪರಿಚಯದವರು ಅಂತ...ನಮ್ಮ ಡಿಸ್ತ್ರಿಬ್ಯೂಶನ್ ಫೀಸು 15 ಸಾವಿರ ಅಷ್ಟೇ ನಿಮ್ಮ ಹತ್ರ ಕೇಳೋದು ಅಂತ open ಆಗೇ ಕೇಳಿದ್ರು....!!! ಅದರಲ್ಲೂ ಸೌಜನ್ಯ...ಹಹಹ ಏನಂತೀರಾ..? ಅಮ್ದಹಾಗೆ ಹೇಳೋದು ಮರ್ತೆ...ಸಬ್-ರೆಜಿಸ್ಟ್ರ‍ಾ ಒಬ್ಬ ಹೆಂಗಸು...!!!!

    ReplyDelete
  31. ಆಜಾದ್,
    ಒಂತರಾ ಬ್ಯಾರೆನೇ ಸ್ಟೈಲ್ ನಾಗೆ
    ಬರದೀರಿ ಪದ್ಯಾನ .
    ನಂ ರತ್ನನ್ ಶೈಲಿನೆ ಕಲಿತ್ ಬುಟ್ರಿ ನೀವು !
    ಅಂದ್ರೂ ನಿಮ್ ಕವನಾನ ಮೆಚ್ ತೀವಿ ನಾವು .
    ನೀವ್ ಹೇಳಿದ್ದು ಭಾಳಾ ಸತ್ಯಾನೆ ಐತೆ
    ಕಳ್ರು ಖದೀಮರಿಗೆ ಅಂಕೆ ಎಲ್ಲೈತೆ ?

    ವಿಭಿನ್ನ ಶೈಲಿಯಲ್ಲಿ ಸೊಗಸಾಗಿ ಮೂಡಿದೆ ಕವನ ! ಲೋಕಾಯುಕ್ತರ ಹೆಡ್ಗುಮಾಸ್ತೆಯನ್ನೇ ಬುಟ್ಟಿಗೆ ಹಾಕಿಕೊಂಡಿದ್ದನ್ನಂತೂ ಮೆಚ್ಚಲೇ ಬೇಕು !

    ReplyDelete
  32. :D :D ಈ ಕವನವನ್ನ ಲೋಕಾಯುಕ್ತರಿಗೆ ಹಾಗೂ ಯಾವುದಾದರೂ ಸರಕಾರಿ ಕಛೇರಿಗೆ ಮೈಲ್ ಮಾಡಿಬಿಡಿ. ಚೆನ್ನಾಗಿರೊತ್ತೆ.......

    ಹಾಸ್ಯದೊಳಗಿರುವ ವ್ಯಂಗ್ಯ ಕವನಕ್ಕೆ ವಿಶೇಷತೆ ಕೊಟ್ಟಿದೆ.

    ReplyDelete
  33. bEliye eddu hola meytha idheya?

    kavandha sogadu thumba ishta aayithu :)

    ReplyDelete
  34. 'ಜಲನಯನ' ಅವರೇ...

    ಹೌದು..
    ದಿನ ಸಾಯೋರ್ಗೆ ಅಳೋರು ಯಾರು ಅಂತ ಸುಮ್ನಿದ್ದಾರೆ..

    ನನ್ನ 'ಮನಸಿನಮನೆ'ಗೆ...:http//manasinamane.blogspot.com

    ReplyDelete
  35. ಚಿತ್ರಾ, ಒಂಥರಾ ಬರ್ದ್ ಮ್ಯಾಲೂ ನಿಮ್ಮ್ ಥರ ಪಸಂದ್ ಮಾಡಿ ಬರ್ದೋರು ಕಮ್ಮೀನೇ ಬಿಡೀ ಮತ್ತೆ...ಧನ್ಯವಾದರೀ...

    ReplyDelete
  36. ತೇಜಸ್ವಿನಿ...ಯಾಕ್ರೀ ನನ್ ಅಲ್ಪ ಸ್ವಲ್ಪ ಕೆಲ್ಸ ಬೆಂಗಳೂರಿಗೆ ಬಂದಾಗ ಆಗಬಾರ್ದಾ ಹೇಳಿ..? ಮೊನ್ನೆ ಮೊನ್ನೆ ಒಂದು ಅನುಭವ ಆಗೈತೆ...ಬ್ಯಾಡಪ್ಪಾ ..ನೆಟ್ಟಗೆ ಮಾಡೋಕೋದ್ರೆ ಸೊಟ್ಟಗಾಗೋದು ನಮ್ಮ್ ಕೆಲ್ಸಾನೆಯಾ....ಹಹಹ...ಇದಕ್ಕೆ ಜನಜಾಗೃತಿ ಬರಬೇಕ್ರೀ...

    ReplyDelete
  37. ಸುಧೇಶ್, ಎಲ್ಲ ಕಡೆ ತುಂಬಿ ತುಳುಕಿರೋ ಈ ಲಂಚಾಸುರನ ಕೊನೆ ಆಗ್ಬೇಕಂದ್ರೆ ಒಟ್ಟಿಗೇ ಎಲ್ಲಾ ಪ್ರಯತ್ನಿಸಿದರೇ ಸಾಧ್ಯ...ಪಹಲೇ ಆಪ್..ಪಹಲೇ ಅಪ್..ಅನ್ನೋದ್ರಲ್ಲಿ..ಅನ್ನೋದ್ರಲ್ಲಿ...ಎಲ್ಲಾ ಮುಗ್ದಿರುತ್ತೆ...ಧನ್ಯಾವಾದ.

    ReplyDelete
  38. ಗುರು-ದೆಸೆ...ದಿನಾ ಸಾಯೋರ್ಗೆ ಅಳೋರ್ಯಾರು ಎನ್ನೋದು ನಿಜ..ಇದು..ಬಹಳ ಸೂಕ್ತ ನಮ್ಮ ಇಂದಿನ ಪರಿಸ್ಥಿತಿಯಲ್ಲಿ

    ReplyDelete
  39. ಭಾಳ ಚೆ೦ದದ ಪದಗೊಳು. ವಿಷಯಾನು ಅಷ್ಟೇ ಪ್ರಸ್ತುತದ್ದು.

    ReplyDelete
  40. oh enu brother rajarathnam aagibittiddiralla
    kavanada shaily tumba hidistu
    kavanadalli vyangyavaagi ee samaajada ore koregalannu moodalisirodu beautifullo beautifullu

    ReplyDelete