ಗೆಳೆಯರೇ, ತುಂಬು ಹೃದಯದ ಆಭಾರಗಳನ್ನು ಈ ದಿನ ನನ್ನ ಬ್ಲಾಗ್ ಜಗತ್ತಿನ ಒಂದು ವರ್ಷ ತುಂಬಿದ ಸಮಯದಲ್ಲಿ ಈ ಮೂಲಕ ಅರ್ಪಿಸುವುದು ನನ್ನ ಆದ್ಯ ಕರ್ತವ್ಯ....ಹುಡುಗಿಯಾಗಿ..ಕೆಲವರು ನನ್ನಲ್ಲಿ love ಕಂಡರೆ..ಸ್ನೇಹಿತೆಯಾಗಿ ಕೆಲವರು...ಮಿತ್ರನನ್ನು ಕೆಲವರು ಗುತಿಸಿದರೆ..ಸಹಬ್ಲಾಗಿಯನ್ನು ಮತ್ತೆ ಹಲವರು..ಎಲ್ಲರದೂ ಆಪ್ಯಾಯತೆ, ಅಭಿಮಾನ, ತುಂಬು ಮನಸ್ಸಿನ ಹಾರೈಕೆ, ಆಶೀರ್ವಾದ, ಪ್ರೋತ್ಸಾಹ...ಪದಗಳ ಅಭಾವ ಕಾಡುತ್ತೆ ನಿಮ್ಮ ಆತ್ಮೀಯತೆಯ ಮುಂದೆ.
ನನ್ನನ್ನು ಈ ಲೋಕಕ್ಕೆ ಪರಿಚಯಿಸಿದವರು ನನ್ನ ಸ್ನೇಹಿತೆ-ಸ್ನೇಹಿತ ದಂಪತಿಗಳು, (ಮೃದುಮನಸು-ಸವಿಗನಸು). ಅವರಿಗೆ ಮೊದಲ ನಮನ...ಸವಿಗನಸನ್ನು ಕಾಣಲು ಪುಸಲಾಯಿಸಿದ್ದು ಮೊದಲಿಗೆ ನಾನೇ ಎನ್ನುವುದು ಬೇರೆ ವಿಷಯ...ಹಹಹ...
ಕೆಲವರು ಪ್ರತಿಕ್ರಿಯೆಯಲ್ಲಿ ಮೇಡಮ್ ಜಲನಯನವ್ರೇ ತುಂಬಾ ಚನ್ನಾಗಿ ಬರೀತೀರಿ..ಎಂದಾಗ ...ನಾನು ಮೊದಲಿಗೆ ನಾಟಕದಲ್ಲಿ ಹೆಣ್ಣಿನ ಪಾತ್ರ ಮಾಡಿದ್ದು ನೆನಪಾಗಿ ನಾಚಿಕೊಂಡೆ ಬೆಪ್ಪಾಗಿ...ಹಹಹ...ಆಮೇಲೆ..ನಡೆದದ್ದನ್ನು ಒಂದು ನನ್ನ ಬ್ಲಾಗಿನಲ್ಲಿ ನಿಮಗೆ ತಿಳಿಸಿದ್ದೇನೆ...
ನನ್ನನ್ನು ಈ ಲೋಕಕ್ಕೆ ಪರಿಚಯಿಸಿದವರು ನನ್ನ ಸ್ನೇಹಿತೆ-ಸ್ನೇಹಿತ ದಂಪತಿಗಳು, (ಮೃದುಮನಸು-ಸವಿಗನಸು). ಅವರಿಗೆ ಮೊದಲ ನಮನ...ಸವಿಗನಸನ್ನು ಕಾಣಲು ಪುಸಲಾಯಿಸಿದ್ದು ಮೊದಲಿಗೆ ನಾನೇ ಎನ್ನುವುದು ಬೇರೆ ವಿಷಯ...ಹಹಹ...
ಕೆಲವರು ಪ್ರತಿಕ್ರಿಯೆಯಲ್ಲಿ ಮೇಡಮ್ ಜಲನಯನವ್ರೇ ತುಂಬಾ ಚನ್ನಾಗಿ ಬರೀತೀರಿ..ಎಂದಾಗ ...ನಾನು ಮೊದಲಿಗೆ ನಾಟಕದಲ್ಲಿ ಹೆಣ್ಣಿನ ಪಾತ್ರ ಮಾಡಿದ್ದು ನೆನಪಾಗಿ ನಾಚಿಕೊಂಡೆ ಬೆಪ್ಪಾಗಿ...ಹಹಹ...ಆಮೇಲೆ..ನಡೆದದ್ದನ್ನು ಒಂದು ನನ್ನ ಬ್ಲಾಗಿನಲ್ಲಿ ನಿಮಗೆ ತಿಳಿಸಿದ್ದೇನೆ...
ಶಿವು, ಪ್ರಕಾಶ, ಡಾ. ಗುರು, ಸುನಾಥ್ ಸರ್, ಸೀತಾರಾಂ, ದಿನಕರ್ ಮೊಗೇರ್, ಶಿವಪ್ರಕಾಶ್, ಶಿವಶಂಕರ್ ಎಳವತ್ತಿ, ಮಹೇಶ್, ಹೀಗೆ ಇನ್ನೂ ಅತ್ಮೀಯ ಹಲವರು ಆ ಮೊದಲ ದಿನಗಳಿಂದಲೇ ನನ್ನೊಂದಿಗಿದ್ದರೆ..ನನ್ನನ್ನು ಅಣ್ಣನೆಂದು ಕರೆಯುವ ಮಮತೆಯ ತಂಗಿಯರು ಚಿತ್ರಾ, ರಂಜಿತಾ, ವಿದ್ಯಾ(ಇಬ್ಬರಿದ್ದಾರೆ), ರಂಜನಾ, ರೂಪಶ್ರೀ, ಚೇತನ, ...ಹೀಗೇ... ಇನ್ನು ಪ್ರಬುದ್ಧ ಸಲಹೆ-ವಿನಿಮಯಗಳಿಗೆ...ಯಾವಾಗಲೂ ನನ್ನ ಬ್ಲಾಗಿನೊಂದಿಗೆ ಒಂದಾದವರು - ತೇಜಸ್ವಿನಿ, ಚಿತ್ರಾ, ಸುಮ, ಸುಮನ, ಚುಕ್ಕಿಚಿತ್ತಾರ, ರೂಪ, ರೂಪश्री, ಮನಸಾರೆ, ಮಾಲತಿ, ಆಕಾಶ ಬುಟ್ಟಿ, ...ಎಲ್ಲರನ್ನೂ ಹೆಸರಿಸಲು ಆಗ್ತಿಲ್ಲ...ಎಲ್ಲರೂ ಸಮಭಾಗಿಗಳು...
ನನ್ನ ಬ್ಲಾಗ್ ಜೀವನದ ತಿರುವು..ಬಹಳ ಭಾವುಕ ಎನ್ನಬಹುದ್ದಾದ್ದು..ಈಗಾಗಲೇ ಲೇಖನವಾಗಿ ನಿಮಗೆ ತಿಳಿದಿದೆ..ನನ್ನ ಮಂಗಳೂರಿನ ಮತ್ತು ಬೆಂಗಳೂರಿನ ಡಿಸೆಂಬರ್ ಪ್ರವಾಸದ ಸಮಯದಲ್ಲಿ, ದಿನಕರ್ ದಂಪತಿಗಳನ್ನು, ಶಿವು ದಂಪತಿಗಳನ್ನು ಮತ್ತು ಪ್ರಕಾಶ್ (ಅವನ ಮನೆಗೆ ಹೋಗಲಿಲ್ಲವೆಂದು ಅವನ ಕೋಪ ನನ್ನನ್ನು ಬೀಳ್ಕೊಡುವವರೆಗೂ ಇತ್ತು ಅನ್ನಿ..) ಎಲ್ಲರನ್ನೂ ಭೇಟಿ ಮಾಡಿದ್ದು.....
ಈಗ ನಿಮ್ಮೊಂದಿಗೆ ಮಹತ್ತರ ವಿಷಯವನ್ನು ಪ್ರಸ್ತಾಪಿಸುತ್ತಿದ್ದೇನೆ....
ಹಲವು ಬ್ಲಾಗ್ ಮಿತ್ರರು ಬ್ಲಾಗ್-ಬಳಗದ ಒಂದು ಸಮ್ಮಿಲನ ಏಕೆ ಮಾಡಬಾರದು ಎನ್ನುವುದನ್ನು ಪ್ರಸ್ತಾಪಿಸಿರುವುದು... ನನ್ನ ಎಲ್ಲ ಮಿತ್ರರು ಅವರ ಬ್ಲಾಗ್ ಫಾಲೋಯರ್ಸ್ ಗಳು (ಹಿಂಬಾಲಕರು ಅನ್ನೋದು ಯಾಕೋ ಸರಿ ಕಾಣ್ಲಿಲ್ಲ ಅದಕ್ಕೆ ಅಂಗ್ಲಕ್ಕೆ ಮೊರೆ..ಹಹಹ..ಮೂರ್ಖ ಅನ್ನೋದಕ್ಕಿಂತ fool ಅಂದ್ರೆ ,ಅಷ್ಟಾಗಿ ಮನಸ್ಸಿಗೆ ಹಚ್ಕೊಳ್ಳಲ್ಲ ಅಂತ).
ಜೂನ್ ಅಂತ್ಯದ ಅಥವಾ ಜುಲೈ ಮೊದಲ ವಾರದಲ್ಲಿ ಇದನ್ನು ಆಯೋಜಿಸುವುದರಿಂದ ವಿದೇಶದಲ್ಲಿರುವ ಮಿತ್ರರು ಬರಲೂ ಅನುವಾಗಬಹುದೆಂದು ನನ್ನ ಯೋಚನೆ..ನಿಮ್ಮ ಅನಿಸಿಕೆಗಳನ್ನು ಖಂಡಿತಾ ನನಗೆ ಅಥವಾ ಪ್ರಕಾಶ್ (ಇಟ್ಟಿಗೆ ಸಿಮೆಂಟು) ಗೆ ಮೈಲ್ ಮೂಲಕ ತಿಳಿಸಿ.. ಒಂದು ದಿನದ (ಬೆಳಿಗ್ಗೆ 9 ರಿಂದ ಮದ್ಯಾನ್ಹ 2 ರ ವರೆಗೆ ಮಾಡಿ..ಮದ್ಯಾನ್ಹದ ಊಟದ ನಂತರ ಮುಕ್ತಾಯ) ಕಾರ್ಯಕ್ರಮ ಹೇಗಿರುತ್ತೆ...ನಮ್ಮ ಪರಿಚಯ, ಕೆಲವು ಚರ್ಚೆ, ಒಂದಷ್ಟು ಕವನ-ಕಥೆ ವಿಚಾರ ಹೀಗೆ.
ನಿಮ್ಮೆಲ್ಲರ ಅಭಿಮಾನಕ್ಕೆ ಮತ್ತೊಮ್ಮೆ ವಂದಿಸಿ...ನಮ್ಮ ಬ್ಲಾಗ್-ಸಮೇಳನದ ಬಗ್ಗೆ ಪ್ರತಿಕ್ರಿಯೆಯನ್ನು ನಿರೀಕ್ಷಿಸುತ್ತೇನೆ.
ನಿಮ್ಮವ......
ಡಾ. ಆಜಾದ್
(ಜಲನಯನ, ಭಾವ-ಮಂಥನ ಮತ್ತು science & share ಬ್ಲಾಗ್ ಗಳ ಒಡೆಯ)
Mails: azadis@hotmail.com; suruaz@gmail.com
ನನ್ನ ಬ್ಲಾಗ್ ಜೀವನದ ತಿರುವು..ಬಹಳ ಭಾವುಕ ಎನ್ನಬಹುದ್ದಾದ್ದು..ಈಗಾಗಲೇ ಲೇಖನವಾಗಿ ನಿಮಗೆ ತಿಳಿದಿದೆ..ನನ್ನ ಮಂಗಳೂರಿನ ಮತ್ತು ಬೆಂಗಳೂರಿನ ಡಿಸೆಂಬರ್ ಪ್ರವಾಸದ ಸಮಯದಲ್ಲಿ, ದಿನಕರ್ ದಂಪತಿಗಳನ್ನು, ಶಿವು ದಂಪತಿಗಳನ್ನು ಮತ್ತು ಪ್ರಕಾಶ್ (ಅವನ ಮನೆಗೆ ಹೋಗಲಿಲ್ಲವೆಂದು ಅವನ ಕೋಪ ನನ್ನನ್ನು ಬೀಳ್ಕೊಡುವವರೆಗೂ ಇತ್ತು ಅನ್ನಿ..) ಎಲ್ಲರನ್ನೂ ಭೇಟಿ ಮಾಡಿದ್ದು.....
ಈಗ ನಿಮ್ಮೊಂದಿಗೆ ಮಹತ್ತರ ವಿಷಯವನ್ನು ಪ್ರಸ್ತಾಪಿಸುತ್ತಿದ್ದೇನೆ....
ಹಲವು ಬ್ಲಾಗ್ ಮಿತ್ರರು ಬ್ಲಾಗ್-ಬಳಗದ ಒಂದು ಸಮ್ಮಿಲನ ಏಕೆ ಮಾಡಬಾರದು ಎನ್ನುವುದನ್ನು ಪ್ರಸ್ತಾಪಿಸಿರುವುದು... ನನ್ನ ಎಲ್ಲ ಮಿತ್ರರು ಅವರ ಬ್ಲಾಗ್ ಫಾಲೋಯರ್ಸ್ ಗಳು (ಹಿಂಬಾಲಕರು ಅನ್ನೋದು ಯಾಕೋ ಸರಿ ಕಾಣ್ಲಿಲ್ಲ ಅದಕ್ಕೆ ಅಂಗ್ಲಕ್ಕೆ ಮೊರೆ..ಹಹಹ..ಮೂರ್ಖ ಅನ್ನೋದಕ್ಕಿಂತ fool ಅಂದ್ರೆ ,ಅಷ್ಟಾಗಿ ಮನಸ್ಸಿಗೆ ಹಚ್ಕೊಳ್ಳಲ್ಲ ಅಂತ).
ಜೂನ್ ಅಂತ್ಯದ ಅಥವಾ ಜುಲೈ ಮೊದಲ ವಾರದಲ್ಲಿ ಇದನ್ನು ಆಯೋಜಿಸುವುದರಿಂದ ವಿದೇಶದಲ್ಲಿರುವ ಮಿತ್ರರು ಬರಲೂ ಅನುವಾಗಬಹುದೆಂದು ನನ್ನ ಯೋಚನೆ..ನಿಮ್ಮ ಅನಿಸಿಕೆಗಳನ್ನು ಖಂಡಿತಾ ನನಗೆ ಅಥವಾ ಪ್ರಕಾಶ್ (ಇಟ್ಟಿಗೆ ಸಿಮೆಂಟು) ಗೆ ಮೈಲ್ ಮೂಲಕ ತಿಳಿಸಿ.. ಒಂದು ದಿನದ (ಬೆಳಿಗ್ಗೆ 9 ರಿಂದ ಮದ್ಯಾನ್ಹ 2 ರ ವರೆಗೆ ಮಾಡಿ..ಮದ್ಯಾನ್ಹದ ಊಟದ ನಂತರ ಮುಕ್ತಾಯ) ಕಾರ್ಯಕ್ರಮ ಹೇಗಿರುತ್ತೆ...ನಮ್ಮ ಪರಿಚಯ, ಕೆಲವು ಚರ್ಚೆ, ಒಂದಷ್ಟು ಕವನ-ಕಥೆ ವಿಚಾರ ಹೀಗೆ.
ನಿಮ್ಮೆಲ್ಲರ ಅಭಿಮಾನಕ್ಕೆ ಮತ್ತೊಮ್ಮೆ ವಂದಿಸಿ...ನಮ್ಮ ಬ್ಲಾಗ್-ಸಮೇಳನದ ಬಗ್ಗೆ ಪ್ರತಿಕ್ರಿಯೆಯನ್ನು ನಿರೀಕ್ಷಿಸುತ್ತೇನೆ.
ನಿಮ್ಮವ......
ಡಾ. ಆಜಾದ್
(ಜಲನಯನ, ಭಾವ-ಮಂಥನ ಮತ್ತು science & share ಬ್ಲಾಗ್ ಗಳ ಒಡೆಯ)
Mails: azadis@hotmail.com; suruaz@gmail.com
Modalige nimma blog huttu habbada shubhashayagalu. Blog balagada sammilanakke naanu anumodisuthene. Kandithavagiyu mada bekada karyakrama.
ReplyDeleteಭೈಯ್ಯ ,
ReplyDeleteನಿಮ್ಮ ಬ್ಲಾಗ್ ನ ಮೊದಲ ವರ್ಷದ ಹುಟ್ಟು ಹಬ್ಬಕ್ಕೆ ಶುಭಾಶಯಗಳು ..
ಹೀಗೆ ನಿಮ್ಮ ಬ್ಲಾಗಾಯಣ ಮುಂದುವರೆಯಲಿ ಅಂತ ಎಲ್ಲ ಮಿತ್ರರು ಆಶಿಸುತ್ತೇವೆ ...
ನೀವು ಹೇಳಿದ ಹಾಗೆ ಎಲ್ಲ ಬ್ಲಾಗ್ ಮಿತ್ರರು ಒಂದೆಡೆ ಸೇರಿ ಸಂತಸವನ್ನ ಹಂಚಿಕೊಳ್ಳೋದೇ ಒಂದು ಸಂತಸದ ವಿಷಯ
ಪ್ರತಿಯೊಬ್ಬ ಬ್ಲಾಗಿಗರೂ ಈ ಸಮ್ಮೇಳನದಲ್ಲಿ ಭಾಗವಹಿಸುವಂತಾದರೆ ತುಂಬಾ ಚೆನ್ನ :)
ಈ ಕೂಟ ಏರ್ಪಡಿಸಲು ಯೋಜಿಸಿದ ನಿಮಗೆ ಹ್ರದಯಪೂರ್ವಕ ಧನ್ಯವಾದಗಳು :) ..
ನಿಶಾ, ನನ್ನ ಮನಸಾರೆ ಧನ್ಯವಾದಗಳು..ಪ್ರಥಮರಾದುದಕ್ಕೆ..ಮತ್ತು ನಿಮ್ಮ ಆತ್ಮೀಯ ಅನುಮೋದನೆಗೆ..ಬ್ಲಾಗಿಗಳ ಸಮ್ಮಿಲನದ ಯೋಚನೆಗೆ..ಇದನ್ನು ಸಫಲ ಯೋಜನೆ ಮಾಡಲು ನೀವೆಲ್ಲ ಸಹಕರಿಸುತ್ತೀರೆಂದು ನಂಬಿದ್ದೇನೆ..ನಿಮಗೆ ತಿಳಿದ ಎಲ್ಲ ಬ್ಲಾಗ್ ಮಿತ್ರರಿಗೂ ತಿಳಿಸಿ...ಇದರ ರೂಪುರೇಷೆ ತಯಾರಾದ ತಕ್ಷಣ ತಿಳಿಸುತ್ತೇವೆ..ನಿಮ್ಮ ಅನುಮೋದನೆ ಸಹಕಾರಕ್ಕೆ.
ReplyDeleteರಂಜು, ಧನ್ಯವಾದ..ನೀವೂ ನಮ್ಮೊಂದಿಗೆ ಇರುವುದಾದರೆ ಅದರ ಕಳೆ ಇನ್ನೂ ಹೆಚ್ಚುತ್ತೆ...ಅದಕ್ಕೇ ನಿಮಗೆ ಮೊದಲೇ ಪ್ಲಾನ್ ಮಾದಲು ತಿಳಿಸಿದ್ದು...ಧನ್ಯವಾದ ನಿನ್ನ ಪ್ರತಿಕ್ರಿಯೆಗೆ.
ReplyDeleteಆಜಾದ್ ಸರ್,
ReplyDeleteಮೊದಲಿಗೆ ಶುಭಾಶಯಗಳು. ಅನಂತ ಶಕ್ತಿ ನಿಮಗೆ ಇನ್ನಷ್ಟು ಚೈತನ್ಯವನ್ನು ತುಂಬಲಿ. ನನ್ನಂತಹ ಹೊಸಬನನ್ನೂ ಪ್ರೋತ್ಸಾಹಿಸಿ ಮೇಲೆತ್ತಿದ್ದೀರಿ ನೀವು. ಧನ್ಯವಾದ ನಿಮಗೆ. ಬ್ಲಾಗಿಗರೆಲ್ಲಾ ಒಂದೆಡೆ ಸೇರುವ ವಿಚಾರ ಅರ್ಥಪೂರ್ಣವಾದದ್ದು. ಆದಷ್ಟು ಬೇಗ ನೆರವೇರಲೆಂದು ಆಶಿಸುತ್ತೇನೆ. ಮುಂದೇನಾಗಬೇಕೆಂದು ತಿಳಿಸಿದರೆ ನಾನೂ ಕೈ ಜೋಡಿಸಲು ಸಿದ್ಧ. ....ಮತ್ತೊಮ್ಮೆ ಶುಭಾಷಯಗಳು
ಶುಭಾಶಯಗಳು ಸರ್ . ನಿಮ್ಮ ಬರಹಯಾತ್ರೆ ನಿರಂತರವಾಗಿರಲಿ. ಅಂದಹಾಗೆ ಬ್ಲಾಗಿಗರೆಲ್ಲರ ಸಮ್ಮಿಲನ ಒಳ್ಳೆಯ ವಿಚಾರ . ಆದಷ್ಟು ಬೇಗ ಇದು ನೆರವೇರಲಿ . ನನ್ನ ಮತ್ತು ಪತಿ ಸುಧಾಕಿರಣರಿಂದ ಸಂಪೂರ್ಣ ಸಹಕಾರವಿದೆ.
ReplyDeleteHappy birthday to your blog
ReplyDeleteMany many happy returns of the day
Keep writing....
For me ok any time
ಶುಭಾಶಯ ಕಣ್ರೀ.. ಬರೀತಿರಿ.
ReplyDeleteಆಜಾದ್ ಸರ್ ,
ReplyDeleteಮೊದಲು ,
ನಿಮಗೆ ಅಭಿನಂದನೆಗಳು ,
ನಿಮ್ಮ ಬ್ಲೋಗ್ ನಲ್ಲಿ ಒಳ್ಳೊಳ್ಳೆಯ ಪ್ರಯೋಗಳು ಬರಲಿ .. (ವಿಜ್ಞಾನಿಗಳು ಅಲ್ವಾ ನೀವು ಆದಿ ಕ್ಕೆ:):))
ಬ್ಲೋಗಿಗರ ಮೀಟ್ ಒಳ್ಳೆಯ ಐಡಿಯಾ ...
ನಾನು ಕೈಎತ್ತಿದೀನಿ ,ಬೇಗ ಕೌಂಟ್ ಮಾಡಿಕೊಳ್ಳಿ ....
ಒಂದು ತುಂಬಿತು ನಮ್ಮ ಜಲನಯನಕ್ಕೆ
ReplyDeleteಅಗಾಧ ಹೊಸ ವಿಚಾರಗಳ ಭಂಡಾರಕ್ಕೆ
ನಾ ಬಂದೆ ಶುಭಕಾಮನೆಗಳ ತಿಳಿಸುವುದಕ್ಕೆ
ಹೀಗೆ ವರ್ಷ ವರ್ಷಗಳು ತುಂಬಲಿ ಜಲನಯನಕ್ಕೆ
ಜಲವಾಯ್ತು ನನ್ನೊಳಗೆ ಜೀವ....
ತುಂಬಿ ತನ್ನೊಳಗೆ ಭಾವ....
ಇದೋ ಜಲನಯನ ನಿನಗೆ ಶುಭನಮನ
ಶುಭಾಶಯಗಳು ಅಜಾದ್ ಅಣ್ಣ !
ನಿಮ್ಮ ವಿಚಾರ ತುಂಬಾ ಉತ್ತಮವಾದದ್ದದ್ದು
"ಕನ್ನಡಿಗರ ಬ್ಲಾಗ್ ಸಮ್ಮೇಳನಕ್ಕೆ" ಶುಭವಾಗಲಿ
ಎಂದು ನಿಮ್ಮೊಂದಿಗೆ ಇರಲು ಬಯಸುವ
ನಿಮ್ಮ
ಮಂಜು.ದೊಡ್ಡಮನಿ.
ಮುಕ್ತ ಮನಸ್ಸಿನಿಂದ , ಬದುಕಿಗೆ ಹತ್ತಿರವಾದ ವಿಷಯಗಳನ್ನ ತುಂಬಾ impressive ಆಗಿ ಇಲ್ಲೇ ನಮ್ಮ ಮುಂದೆ ಕೂತು ಹೇಳುವ ಹಾಗೆ ಹೇಳುವ ನಮ್ಮ ನಿಮ್ಮೆಲ್ಲರ ಜಲನಯಕ್ಕೆ ಮೊದಲ ವರ್ಷದ ಹುಟ್ಟು ಹಬ್ಬದ ಹಾರ್ದಿಕ್ ಶುಭಾಶಯಗಳು .
ReplyDeleteಆಜಾದ್ ಸರ್ , ಜಲನಯನಕ್ಕೆ ಏನು ಗಿಫ್ಟ್ ಕೊಡ್ತಾ ಇದ್ದೀರಾ? ಏನು ಗಿಫ್ಟ್ ಕೊಡಬೇಕು ಅಂತ ಕನ್ಫ್ಯೂಸ್ ಆಗಿದ್ರೆ , ನಾನು ಒಂದು ಸಲಹೆ ಕೊಡ್ಲಾ? ಸರ್ , ನಮ್ಮ ಜಲನಯನ ಯಾವದೇ ಕಾರಣಕ್ಕೂ silent ಇರದೇ ಹಾಗೆ ನೋಡಿಕೊಳ್ಳಿ .
ಜಲಾಯನ ಯಾವಾಗಲು ಏನಾದ್ರು ನಮಗೆ ಅಂದ್ರೆ ಓದುಗರಿಗೆ ಹೇಳ್ತಾನೆ, ಕೊಡ್ತಾನೆ ಇರ್ಬೇಕು .
ಸರ್, ಮೊನ್ನೆ ಮೊನ್ನೆ ಪರಿಚಯವಾದ , ಇನ್ನು ಬ್ಲಾಗ್ ಬರಿಯುವದರಲ್ಲಿ ಕೂಸಾದ್ ನನ್ನ ಹೆಸರನ್ನ ನಿಮ್ಮ ಬ್ಲಾಗ್ ಮಿತ್ರರ ಲಿಸ್ಟನಲ್ಲಿ ನೋಡಿ ತುಂಬಾ ಖುಷಿ ಆಯಿತು ರೀ . ನಮ್ಮಹಂತ ಹೊಸ ಬ್ಲಾಗಿಗರನ್ನ ಪ್ರೋತ್ಸಾಹಿಸೋ ನಿಮ್ಮ ಕೆಲಸ ಹೀಗೆ ನಿರಂತರವಾಗಿರಲಿ .
ಬ್ಲಾಗರ್ ಮೀಟಿಂಗ್ ಒಂದು ಒಳ್ಳೆಯ ಪ್ಲಾನ್ . ಅದು ಬೆಂಗಳೂರುನಲ್ಲಿ ಆದ್ರೆ ಖಂಡಿತ ನನ್ನ ಹೆಸರು ಸೇರಿಸಿಕೊಳ್ಳಿ . ಅದನ್ನ ಇನ್ನೊಂದು ಸ್ವಲ್ಪ ಇಂಟರೆಸ್ಟಿಂಗ್ ಆಗಿ ಮಾಡೋಕೆ , ನಮ್ಮ ಎಲ್ಲ ಬ್ಲಾಗರ್ ಗಳ ಒಂದೊಂದು ಬೆಸ್ಟ್ ಪೋಸ್ಟ್ ಹಾಕಿ ನಾವು ಯಾಕೆ ಒಂದು ಚಿಕ್ಕ್ ಬುಕ್ ಅಥವಾ ಪಂಪ್ಲೆಟ್ ಹೊರತರಬಾರದು ? ಇದು ಜಸ್ಟ್ ಇನ್ಸ್ಟಂಟ್ ಐಡಿಯಾ ಅಸ್ಟೆ :).
ಇಂತಿ,
ಮನಸಾರೆ
ಹುಟ್ಟು ಹಬ್ಬದ ಶುಭಾಶಯಗಳು ನಿಮ್ಮ ಬ್ಲಾಗಿಗೆ .
ReplyDeleteಜಲನಯನ ಬ್ಲಾಗ್, ನಿನಗೆ ಹುಟ್ಟು ಹಬ್ಬದ ಶುಭಾಶಯಗಳು.
ReplyDeleteC0ngrats!Keep writing. ಬ್ಲಾಗಿಗರ ಸಮ್ಮೇಳನ ಚನ್ನಾಗಿರುತ್ತದೆ. ಆದರೆ ಅದು ಬರಿ ತಿಂದು, ಉಂಡು, ಭೇಟಿ ಮಾಡಿ ಹೋಗುವದಕ್ಕೆ ಸೀಮಿತವಾಗಿರಬಾರದು. ಅಲ್ಲಿ ಒಂದಿಷ್ಟು ಗೋಷ್ಟಿಗಳು ನಡೆದರೆ ತುಮ್ಬಾ ಚನ್ನಾಗಿರುತ್ತದೆ. ನನಗೆ ಜುಲೈ ಕೊನೆವಾರದಲ್ಲಿ ಅಥವಾ ಅಗಷ್ಟ್ ಮೊದಲವಾರವಾದರೆ ಒಳಿತು. ಏಕೆಂದರೆ ನಾನು ಆವಾಗಲೇ ರಜೆಯ ಮೇಲೆ ಭಾರತಕ್ಕೆ ಬರುವದು.
ReplyDeleteಸುಭರವರೇ, ನಿಮ್ಮ ಹಾರೈಕೆಯಿಂದ ಆನೆಬಲ ಮತ್ತು ಪ್ರೋತ್ಸಾಹದಿಂದ ದ್ವಿಗುಣ...ಧನ್ಯವಾದ ಹಾಗೇ ಬ್ಲಾಗಿಗಗರ ಸಮ್ಮೇಳನಕ್ಕೆ ತಯಾರಾಗಿ...
ReplyDeleteಸುಮ..ಸುಧಾಕಿರಣ್ ಇಬ್ಬರಿಗೂ ಮನಃಪೂರ್ವಕ ಧನ್ಯವಾದಗಳು..ನಿಮ್ಮ ಅಸ್ತಿಗೆ...(consent).. ನೋಡೋಣ ಇದನ್ನು ಆದಷ್ಟೂ ಫಲಪ್ರದಮಾಡಬೇಕೆಂಬ ಆಸೆ ನಮ್ಮೆಲ್ಲರದು.
ReplyDeleteSeetaram sir, thanks..neevu muncheye nimma abhipraaya tilisiddeeri nimma, dinakar, shivu matte halavu mitrara maatu ..satyavaagali ende aashaya...thanks for your wishesssooooo
ReplyDeleteThis comment has been removed by the author.
ReplyDeleteಸುಶ್ರುತ ದೊಡ್ಡೇರಿ ಯವರಿಗೆ ನಮನ ಮತ್ತು ಧನ್ಯವಾದ ನಮ್ಮ ಬ್ಲಾಗಿಗರ ಸಮ್ಮೇಳನದ ಬಗ್ಗೆ ನಿಮ್ಮ ಅನಿಸಿಕೆಯನ್ನು ತಿಳಿಸಿ..ನನಗೆ ಮಿಂಚೆ ಕಳುಹಿಸಿದರೂ ಓಕೆ..
ReplyDeleteazadis@hotmail.com
ಶ್ವೇತ..ನಿಮ್ಮ ಕೈ ಎಣಿಕೆ ಮಾಡಿ ಆಯ್ತು...ಹಹಹ...ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ ಮತ್ತು ಪ್ರೋತ್ಸಾಹಕ್ಕೆ..
ReplyDeleteಮಂಜು..ಏನಪ್ಪಾ ಈ-ಕವಿಯಲ್ಲಿ ನೀನು ಹಾಕೋ ಕವನಗಳು ಮತ್ತು ಅದರ ಶೈಲಿ ಸವಿ ಬ್ಲಾಗಿನ ಮೂಲಕನೂ ಮಾಡು ನಮಗೆಲ್ಲಾ ಸಿಗಲಿ...ಏನಂತೀಯಾ..?
ReplyDeleteಧನ್ಯವಾದ ನಿನ್ನ ಹಾರೈಕೆ, ಶುಭಕಾಮನೆ ಮತ್ತು ತುಂಬ ಭಾವತುಂಬಿದ ಮನದಾಳದ ಹಾರೈಕೆಯ ಕವನ....
ಮನಸಾರೆಗೆ ಮನಸಾರೆ ಧನ್ಯವಾದ...ನೀವು ನಿಮ್ಮ ಹೆಸರು ಹೇಳುವವರೆಗೆ ಹೀಗೇ ಬರೀ ಬೇಕಲ್ಲವಾ..?
ReplyDeleteನಿಮ್ಮ ಹಾರೈಕೆ ಮತ್ತು ಪ್ರತಿಕ್ರಿಯೆಗೆ ಧನ್ಯವಾದ..ಮೀಟ್ ಬಗ್ಗೆ ಯೋಚನೆ ಬಂತು ಎಲ್ಲರಿಗೂ ತಿಳಿಸಿ ಅಭಿಪ್ರಾಯ ಪಡೆಯೋ ಪ್ರಯತ್ನ...
ಉತ್ತಮ ಪ್ರತಿಕ್ರಿಯೆ ಸಿಗ್ತಿದೆ..ನೋಡೋಣ...
ನಿಮ್ಮ ಸಲಹೆ..ಒಂದು ನೆನಪಿನ ಸಂಚಿಕೆದು..ಬಹಳ ಉತ್ತಮ...ಆದ್ರೆ ಒಳ್ಳೆಯದು...ಇದನ್ನೂ ಚರ್ಚಿಸೋಣ ಅಲ್ಲವಾ..? ಧನ್ಯವಾದ
ಶಶಿ ಥ್ಯಾಂಕ್ಸ್ ರೀ...ನಮ್ಮ ಯೋಜನೆ ಸಫಲ ಆದರೆ..ನೀವೂ ಬನ್ನಿ ನಮ್ಮ ಬ್ಲಾಗಿಗಳ ಮೀಟಿಗೆ...
ReplyDeleteನಾರಾಯಣ ಭಟ್ ಸರ್, ಧನ್ಯವಾದ ನಿಮ್ಮ ಪ್ರೋತ್ಸಾಹಕ್ಕೆ ಮತ್ತು ಪ್ರತಿಕ್ರಿಯೆಗೆ.
ReplyDeleteನನಗು ಅದೇ ಯೋಚನೆ ಇದೆ ಸದ್ಯದಲ್ಲೇ ಮಾಡೋಣ ಅಂದು ಕೊಂಡಿದ್ದೇನೆ ! ನಿಮ್ಮ ಸಲಹೆಗೆ ಧನ್ಯವಾದಗಳು
ReplyDeleteಉದಯ್, ನನ್ನ ಬ್ಲಾಗಿನತ್ತ ಬಿಸಿಲ ಹನಿಯ ಸಿಂಚನ..!!! ಧನ್ಯವಾದ...ಹೇಗೆ ನದೆದಿದೆ ನಿಮ್ಮ ವೃತ್ತಿ ಜೀವನ ಹೊಅರದೇಶದಲ್ಲಿ?
ReplyDeleteನಿಮ್ಮ ಪ್ರತಿಕ್ರಿಯೆಯನ್ನು ಸ್ವಾಗತಿಸುತ್ತೇನೆ.. ನಮ್ಮ ವಿದೇಶೀ ಬ್ಲಾಗಿಗರ ಅನುಕೂಲವನ್ನೂ ಪರಿಗಣಿಸಿ ನಿರ್ಧಾರ ಕೈಗೊಳ್ಳೋಣ...
Azad sir... Nimma blog na vaarshikotsava nammellara bhetiyatta oyyuttiruvudu harshada vishaya.. nimma blog heege beleyali.. heege ondu bhavageethe nenapaytu...
ReplyDeleteSneha athi madhura.. sneha adu amara...
nammellara snehada balaga beleyuttirali.. yella blog balagadavarannu bheti maduva ondu sadaavakashavannu huttu haakuva prayatnakke nanna protsaaha mattu utsaaha yendigu iruttade...
ಜಲನಯನ,
ReplyDeleteನಿಮ್ಮ ಬ್ಲಾ^ಗ್ ತೆರೆದ ತಕ್ಷಣ ನಿಮ್ಮ ಸುಂದರವಾದ ಫೋಟೋ ನೋಡಿ ಖುಶಿಯಾಯಿತು. ನಿಮಗೆ ಹುಟ್ಟು ಹಬ್ಬದ ಶುಭಾಶಯಗಳು. ನಿಮ್ಮ ಬೆಂಗಳೂರು ಸಮ್ಮೇಳನದ ಐಡಿಯಾ ಚೆನ್ನಾಗಿದೆ. ಆರೋಗ್ಯದ ಮಿತಿಗಳಿಂದಾಗಿ ನನಗೆ ವೈಯಕ್ತಿಕವಾಗಿ
ಅಲ್ಲಿ ಬರಲು ಆಗುವದಿಲ್ಲ. ಇಲ್ಲಿಂದಲೇ ನಿಮಗೆ ಶುಭಾಶಯಗಳು.
-ಕಾಕಾ
ReplyDeleteನಿಮ್ಮ ಬ್ಲಾಗಿಗೆ,
ಹುಟ್ಟು ಹಬ್ಬದ ಶುಭಾಶಯಗಳು...
ನಿಮ್ಮ ಸಲಹೆ ಚನ್ನಾಗಿದೆ.... ಬ್ಲಾಗ್ ಮಿತ್ರರ ಸಮ್ಮೇಳನಕ್ಕೆ ನಾನ್ ರೆಡಿ...
congratulation sir that u completed one year to came this blog. n u told about conference is very good idea i liked that more.. n keep writing nice things like this n be great in life. I wish you always jalanayan wil full of feelings , knwoldege, relationship n bit naughty things.. n give some time to read my blog n do the improvements.
ReplyDeletehave a longlife to jalanayan..
ರಮೇಶ್, ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದ...ನಿಮ್ಮ ಹಾರೈಕೆಗೂ ನನ್ನ ನಮನ. ನಿಮ್ಮನ್ನು ನಮ್ಮ ಬಳಗ-ಸಮ್ಮೇಲನಕ್ಕೆ ಬರುವ ಇಚ್ಛುಕರ ಪಟ್ಟಿಗೆ ಸೇರಿಸಿಯಾಯಿತು...ಧನ್ಯವಾದ.
ReplyDeleteಸುನಾಥ್ ಸರ್, ನಿಮ್ಮಂತಹ ಅನುಭವೀ ಬ್ಲಾಗಿಯ ಹಾಜರಿ ಅವಶ್ಯ ಒಂದುವೇಳೆ ನಮ್ಮ ಈ ಪ್ರಯತ್ನ ಫಲಕಾಣುವುದಾದರೆ...ನಿಮ್ಮನ್ನು ನಿರೀಕ್ಷಿಸುತ್ತೇವೆ..
ReplyDeleteನಿಮ್ಮ ಶುಭಹಾರೈಕೆಗೆ ಧನ್ಯವಾದಗಳು.
ಶಿಪ್ರ, ನಿಮ್ಮನ್ನು ಆಗಲೇ ಎಣಿಸಿಯಾಯ್ತು ನಮ್ಮ ಪಟ್ಟಿಯಲ್ಲಿ...ಹಹಹ...ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ.
ReplyDeleteಕೀರ್ತಿ, ನಿಮಗೂ ಧನ್ಯವಾದ ಮತ್ತು ನಿಮ್ಮ ಹಾರೈಕೆಗೂ. ನಿಮ್ಮಂತಹ ಯುವ ಪ್ರತಿಭೆಗಳಿಗೆ ಬ್ಲಾಗ್ ಒಳ್ಳೆಯ ಹಾದಿಯಾಗುತ್ತಿದೆ... ನಿಮ್ಮ ಬರವಣಿಗೆಯನ್ನು ಸುಧಾರಿಸಿಕೊಳ್ಳಲು ಬ್ಲಾಗ್ ಸಹಾಯಕ...ನಿಮ್ಮ ಬ್ಲಾಗಿಂಗೂ ಶುಭ ಕೋರುತ್ತೇನೆ.
ReplyDeleteಆಜಾದ್,
ReplyDeleteನಿಮ್ಮ ಬ್ಲಾಗಿಗೆ ಒಂದು ವರ್ಷವಾಗಿದ್ದಕ್ಕೆ ಅಭಿನಂದನೆಗಳು. ಕೆಲಸದ ಒತ್ತಡ[ಮದುವೆ ಫೋಟೊಗಳು]ದಿಂದಾಗಿ ಇಲ್ಲಿ ತಡವಾಗಿ ಬರುತ್ತಿದ್ದರೂ ಬ್ಲಾಗರ್ಸ್ ಮೀಟ್‍ನಲ್ಲಿ ನಾನು ಮುಂದಿನ ಸಾಲಿನಲ್ಲಿ ಕುಳಿತುಕೊಳ್ಳುವವನೇ ಸರಿ. ಉದಯ್ ಸರ್ ಹೇಳಿದಂತೆ ಅಲ್ಲಿ ಉಂಡು ತಿಂದು ಹೋಗುವುದಕ್ಕಿಂತ ಒಂದಷ್ಟು ವೈವಿಧ್ಯತೆ ಇದ್ದರೆ ಚೆನ್ನ ಅಂತ ಅನ್ನಿಸುತ್ತೆ. ಏನಾದರಾಗಲಿ, ನಾನು ಇಂಥದಕ್ಕೆ ಮೊದಲು ಹಾಜರ್.
"ಜಲನಯನ" ಅವರೇ, ನಿಮ್ಮ ಬ್ಲಾಗ್ ಹುಟ್ಟುಹಬ್ಬದ ಶುಭಾಶಯಗಳು. ಬ್ಲಾಗಿಗರ ಸಮ್ಮೇಳನ ನಿಜಕ್ಕೂ ಅತ್ತ್ಯುತ್ತಮ ಯೋಚನೆ. ಬ್ಲಾಗ್ ಲೋಕದ ಗೆಳೆಯರೆಲ್ಲಾ ಒಡೆದೆ ಸೇರುವುದೆಂದರೆ ಅತ್ಯಂತ ಸಂತೋಷದ ವಿಷಯ. ನಿಮ್ಮ ಪ್ರಯತ್ನ ನಿಜಕ್ಕೂ ಶ್ಲಾಘನೀಯ! ನಿಮ್ಮ ಆಸೆ(ನಮ್ಮೆಲ್ಲರ ಆಸೆ) ಈಡೇರಲಿ. ಆ ದಿನಕ್ಕಾಗಿ ಕಾಯುತ್ತಿರುತ್ತೇನೆ.
ReplyDeleteಅಜಾದ್ ಭಯ್ಯಾ ........ನಿಮ್ಮ ಬ್ಲಾಗ್ ನ ವರ್ಷ ತುಂಬಿದ ಸಂಭ್ರಮಕ್ಕೆ ಶುಭಾಶಯಗಳು....ಈ ಬ್ಲಾಗ್ ನ ಪಯಣ ಹೀಗೆ ಅದೇ ತಡೆಯಿಲ್ಲದೆ ಮುಂದುವರೆಯಲಿ.....:)) ಬ್ಲಾಗಿಗರ ಸಮ್ಮೇಳನದ ವಿಷಯ ಕೇಳಿ ಸಂತೋಷವಾಯಿತು. ನಾವು ಆ ಸಮಯದಲ್ಲಿಯೇ ಇಂಡಿಯಾಕ್ಕೆ ಬರೋ ಪ್ಲಾನ್ ಇದೆ.
ReplyDeleteನಿಮ್ಮ ಈ ಲೇಖನ ತುಂಬಾ ಚೆನ್ನಾಗಿದೆ. ಬ್ಲಾಗ್ ಪ್ರಪಂಚಕ್ಕೆ ಹೊಸಬಳಾದ ನನ್ನ ಹೆಸರನ್ನೂ ನಿಮ್ಮ ಬ್ಲಾಗಿಗರ ಗುಂಪಿನಲ್ಲಿ ಸೇರಿಸಿಕೊಂಡಿದ್ದಕ್ಕೆ ತುಂಬಾ ಧನ್ಯವಾದಗಳು.
ಶಿವು, ಧನ್ಯವಾದ..ನಿಮಗೆ ಬಿಡುವುಸಿಕ್ಕಾಗ ತಪ್ಪದೇ ಜಲನಯದ ಕಡೆ ಒಂದು ಕಿರು ನೋಟ ಬೀರ್ತೀರಲಾ ಅದೇ ಪ್ರಸಾದ... ಇನ್ನು ಬ್ಲಾಗಿಗರ ಮಿಲನ ಮಹೋತ್ಸವಕ್ಕೆ ನೀವೆಲ್ಲ ಸಕ್ರಿಯ ಪಾಲುದಾರರು..ಕುಳಿತುಕೊಳ್ಳುವುದೆಲ್ಲಿ ಬಂತು..ಓಡಾಡಬೇಕು...ಹಹಹ...
ReplyDeleteಪ್ರವೀಣ್ರೇ, ಜಲನಯನ ವರ್ಷದ ಕೂಸಿಗೆ ನಿಮ್ಮ ಆಶೀರ್ವಾದ ಪ್ರೋತ್ಸಾಹ ಅಗತ್ಯ..ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದ..ನೆಮ್ಮೆಲ್ಲರ ಸಹಾಯ ಸಹಕಾರ ಅಗತ್ಯ ಬ್ಲಾಗಿಗಳ ಕೂಟಕ್ಕೆ...
ReplyDeleteಆಜಾದ್ ಅವರೆ,
ReplyDeleteಮೊದಲ ವರ್ಷ ಪೂರೈಸಿದ ಸಂತೋಷವನ್ನು ಬಹು ಭಾವುಕರಾಗಿ ಹಂಚಿಕೊಂಡಿರುವಿರಿ. ನಿಮ್ಮ ಸಂತೋಷದಲ್ಲಿ ನಾನೂ ಭಾಗಿ. ಹಾರ್ದಿಕ ಶುಭಾಶಯಗಳು ನಿಮ್ಮ ಜಲನಯನಕ್ಕೆ :)
ಹರಿವ ಜಲದಂತೇ ನಿಮ್ಮ ಬರಹಗಳೂ ಮುಂದುವರಿಯುತ್ತಿರಲಿ.
ಮನದ ಮಾತಿನ ತಂಗಿಗೆ ಮನಸಾರೆ ಧನ್ಯವಾದ...ಪ್ರತಿಕ್ರಿಯೆ, ಶುಭಾಷಯಕ್ಕೆ...ನಿಮ್ಮ ಭಾರತ ಭೇಟಿಯ ಸಮಯವನ್ನು ನಮ್ಮ ಉದ್ದೇಶಿತ ಬ್ಲಾಗಿಗರ ಸಮ್ಮೇಲನಕ್ಕೆ ಮೀಸಲಾಗಿಸಿ..ಅದರಂತೆ ಯೋಜಿಸಿ ಪ್ರಯಾಣವನ್ನ...
ReplyDeleteತೇಜಸ್ವಿನಿ, ಧನ್ಯವಾದ ನಿಮ್ಮ ಪ್ರೋತ್ಸಾಹಕ್ಕೆ, ಆದ್ರೆ ನಿಮ್ಮ ಪ್ರತಿಕ್ರಿಯೆ ನಮ್ಮ ಉದ್ದೇಶಿತ ಬ್ಲಾಗಿಗರ ಸಮ್ಮೇಳನಕ್ಕೆ ಕೊಟ್ಟರೂ ಚನ್ನಾಗಿರುತ್ತೆ...ನನಗೆ ಮೈಲ್ ಮಾಡಿದರೂ ಸರಿ...ನಿಮ್ಮ ಪ್ರತಿಕ್ರಿಯೆಗೆ ಕಾಯುತ್ತೇನೆ..
ReplyDeleteಸರ್,
ReplyDeleteನಿಮ್ಮ ಬ್ಲಾಗ ನ ವರ್ಷದ ಸಂಭ್ರಮಕ್ಕೆ ಶುಭ ಹಾರೈಕೆಗಳು
ಜೂನ್ ದಲ್ಲಿ ಬ್ಲಾಗ್ ಮಿತ್ರರೆಲ್ಲ ಸೇರಿ ನಡೆಸುವ ಸಮ್ಮೇಳನ ಯೋಚನೆಯೇ ಮನಸ್ಸನ್ನು ಪುಳಕಿತಗೊಳಿಸುತ್ತದೆ
ಆದರೆ ನಾನು ಮೇ ದಲ್ಲೇ ಭಾರತಕ್ಕೆ ಹೋಗುತ್ತಿದ್ದೇನೆ
ಇದೊಂದು ಒಳ್ಳೆಯ ಕಾರ್ಯಕ್ರಮ
ಜಲನಯನ ಅವರೆ,
ReplyDeleteನಿಮ್ಮ ಬ್ಲಾಗ್ ಮೊದಲನೆ ವರ್ಷ ಯಶಸ್ವಿಯಾಗಿ ಎರಡನೆ ವರ್ಷಕ್ಕೆ ಕಾಲಿಟ್ಟಿದೆ.
ಅದಕ್ಕಾಗಿ ನನ್ನ ಹೃತ್ಪೂರ್ವಕ ಅಭಿನ೦ದನೆಗಳು.ಮು೦ದೆಯೂ ನಿಮ್ಮ ಬರಹಗಳು
ನಿರ೦ತರವಾಗಿ ಸಾಗಲಿ ಹಾಗೂ ಎಲ್ಲರನ್ನೂ ಸ೦ತಸಗೊಳಿಸಲಿ.ಎಲ್ಲರ ಆದರ,ವಿಶ್ವಾಸ ಸದಾ ನಿಮಗೆ ಸಿಗುತ್ತಿರಲಿ.
ವ೦ದನೆಗಳು.
COngratulations Azad... COUNT ME IN!!
ReplyDeleteಗುರು, ನಿಮ್ಮ ಭಾರತ ದರ್ಶನ ಜೂನ ಜುಲೈ ಅಥವಾ ಆಗಸ್ಟ್ ಗೆ ಇಟ್ಟುಕೊಳ್ಳಿ ದಯವಿಟ್ಟು...ನೀವು ಇರಲೇ ಬೇಕು ನಮ್ಮ ಮುಖ್ಯ ಅನಿವಾಸಿ ಕನ್ನಡಿಗ ಮತ್ತು ಸಕ್ರಿಯ ಬ್ಲಾಗಿ ನೀವು...ಇದನ್ನು ನನ್ನ ಆಗ್ರಹ ಎಂದುಕೊಳ್ಳಿ...ಪ್ಲೀಸ್..
ReplyDeleteನಿಮ್ಮಂತೆ ಮೃದು ಮನಸು, ಸವಿಗನಸು, ನಾನು, ಉದಯ್ ಎಲ್ಲಾ ಆಗಸ್ಟ್ ಆದರೂ ಪರವಾಗಿಲ್ಲ ಭಾಗವಹಿಸುತ್ತೇವೆ.. ನಿಮ್ಮ ಆಸ್ಕ್ತಿಗೆ ಧನ್ಯವಾದ ನಾನು ಹೇಳುವುದಿಲ್ಲ..ನೀವು ಒಪ್ಪುವರೆಗೆ...ಆಗಸ್ಟ್ ಎಂದರೆ ಎಲ್ಲರಿಗೂ ಅನುಕೂಲವೇ...ನನಗೆ ಮೈಲ್ ಕಳುಹಿಸಿ..
ಮನಮುಕ್ತಾರವರೇ, ಧನ್ಯವಾದ..ಆದ್ರೆ ನಿಮ್ಮ ಪ್ರಿತಿಕ್ರಿಯೆ ನಮ್ಮ ಯೋಜಿತ ಬ್ಲಾಗಿಗಳ ಮೀಟ್ ಬಗ್ಗೆ ಕೊಡಲಿಲ್ಲ..ದಯಮಾಡಿ ಮೈಲ್ ಮಾಡಿ...
ReplyDeleteಸುಮನ ಮೇಡಂ, ಮಗನ ಮದುವೆಯ ವ್ಯಸ್ತತೆಯಿಂದ ಈಗ ಸ್ವಲ್ಪ ಬಿಡುವಾಗಿದೆ ಎನಿಸುತ್ತೆ...ಧನ್ಯವಾದ..ನಿಮ್ಮೆಲ್ಲರ ಸಹಕಾರವಿದ್ದರೆ ಬ್ಲಾಗಿಗಳ ಸಂಮೇಳನ ಖಂಡಿತಾ ಯಶಸ್ವಿಯಾಗುತ್ತೆ...ಧನ್ಯವಾದ.
ReplyDeleteಶಿವಶಂಕರ್, ನೀವು ಚಾಟಿನಲ್ಲಿ ಹೇಳಿದ ಮಾತು ಮತ್ತು ನಿಮ್ಮ ಮನದ ಇಂಗಿತಕ್ಕೆ ಒಳ್ಲೆಯ ಪ್ರತಿಕ್ರಿಯೆ ಬರುತ್ತಿದೆ..ಇದು ಕಾರ್ಯಗತವಾದರೆ ಇತರೆ ರಾಜ್ಯಗಳಿಗಿಂತ ಹಿಮ್ದಿಲ್ಲ ಎಂದು ಕನ್ನಡಬ್ಲಾಗಿಗರು ತೋರಿಸಿದಂತಾಗುತ್ತದೆ. ಧನ್ಯವಾದ..ನಿಮ್ಮ ಸಹಕಾರ ಮತ್ತು ಸಹಾಯವನ್ನು ಅಪೇಕ್ಷಿಸುತ್ತೇವೆ..ಧನ್ಯವಾದ
ReplyDeleteಆಜಾದ್ ಸರ್.. ಜಲನಯನಕ್ಕೆ ಹುಟ್ಟು ಹಬ್ಬದ ಶುಭಾಶಯಗಳು:)
ReplyDeleteಜೂನ್- ಜುಲೈ ತಿಂಗಳಿನಲ್ಲಿ ಭಾರತದಲ್ಲಿದ್ದರೆ ಖಂಡಿತಾ ಬರುತ್ತೇನೆ..ಇಲ್ಲದಿದ್ದರೆ ಇಲ್ಲಿಂದಲೇ ಕನ್ನಡ bloggers ಮೀಟ್ ಗೆ ಜೈ ಹೋ!!..
ವನಿತಾ ಧನ್ಯವಾದ...ನಿಮ್ಮ ಆತ್ಮೀಯತೆಗೆ, ಪ್ರೋತ್ಸಾಹಕ್ಕೆ ಮತ್ತು ಪ್ರತಿಕ್ರಿಯೆಗೆ...ಇದು ಆಗಸ್ಟ್ ಗೆ ಹೋಗುವ ಸಾಧ್ಯತೆಯಿದೆ...ತಿಳಿಸುತ್ತೇವೆ..ಮೈಲ್ ಮೂಲಕ...
ReplyDeleteಅಭಿನಂದನೆ ಆಝಾದ್ ಭಾಯ್.:-) ನಿಮ್ಮ ಲವಲವಿಕೆಯುಳ್ಳ ಬರಹಗಳು ಹೀಗೆ ಸದಾ ಹರಿದು ಬರುತ್ತಿರಲಿ. ಬ್ಲಾಗಿಗರ ಸಮ್ಮೇಳನ ಒಳ್ಳೆಯ ಆಲೋಚನೆ.ನೀವೆಲ್ಲ ವಿದೇಶದಲ್ಲಿರುವವರು ನಿಮ್ಮೆಲ್ಲರ ಅನುಕೂಲದ ಸಮಯ ನಿರ್ಧರಿಸಿ date fix ಮಾಡಿ. ಸಮ್ಮೇಳನ ಬರೀ ಭೇಟಿಗೆ ಸೀಮಿತವಾಗದೆ ಅರ್ಥಪೂರ್ಣವಾಗುವಂತೆ ಮಾಡೋಣ.
ReplyDeleteಮೊದಲಿಗೆ ಹುಟ್ಟುಹಬ್ಬದ ಸುಭಾಷಯಗಳು. ಬಹಳ ಬೇಸರವಾಗುತ್ತಿದೆ ಇಷ್ಟು ಒಳ್ಳೆಯ ಬ್ಲಾಗು ಇಷ್ಟು ದಿನ ಓದಲಾರದೆ ಬಿಟ್ಟಿದ್ದಕ್ಕೆ...!
ReplyDeleteಜಯಕ್ಕ, ಧನ್ಯವಾದ ನಿಮ್ಮ ಪ್ರೋತ್ಸಾಹಕ್ಕೆ...ಹಾಗೆಯೇ ಹಿತನುಡಿಗೆ..ನಿಜ ಇದೊಂದು ಅರ್ಥಪೂರ್ಣ ಮಿಲನವಾಗಬೇಕೆಂದೇ ನನ್ನ ಆಶಯವೂ..ನಿಮ್ಮೆಲ್ಲರ ಸಹಕಾರವಿದ್ದರೆ ಖಂಡಿತಾ ಸಾಧ್ಯವಾಗುತ್ತೆ.
ReplyDeleteಉಮೇಶ್ ಸರ್, ನಿಮ್ಮ ಆಗಮನ ಈಗಲಾದರೂ ಆಯ್ತಲ್ಲ ಅದೇ ಸಂತೋಷ ನನಗೆ, ವರ್ಷತುಂಬಿದಂದು ದರ್ಶನವಾದರೆ ವರ್ಷವಿಡೀ ದರ್ಶನವಾದಂತೆಯೇ..ಮುಂದೆ ಆಗಾಗ್ಗೆ ಭೇಟಿ ನೀಡುತ್ತೀರೆಂದು ಆಶಿಸುತ್ತೇನೆ..ಇದಕ್ಕೆ ಮಿಗಿಲಾಗಿ..ಬ್ಲಾಗಿಗರ ಮೀಟ್ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ.
ReplyDelete'ಜಲನಯನ' ಅವ್ರೆ..,
ReplyDeleteಇನ್ನೂ ಹಲವಾರು ವರ್ಷ ನಿಮ್ಮೀ ಪಯಣ ಸಾಗಲಿ..
ಬ್ಲಾಗಿಗರ ಸಮ್ಮಿಲನದ ಬಗ್ಗೆ ನನಗೆ ಯಳವತ್ತಿ ಅವರು ತಿಳಿಸಿದ್ದಾರೆ... ಚೆನ್ನಾಗಿರುತ್ತೆ ನಡೆಸಿ...
Blog is Updated:http://manasinamane.blogspot.com
ಅಭಿನಂದನೆಗಳು ಸರ್,
ReplyDelete"ಜಲನಯನ"ಕ್ಕೆ ಹುಟ್ಟು ಹಬ್ಬದ ಶುಭಾಶಯಗಳು ...
ನಿಮ್ಮ ಬರಹಗಳು ಹೀಗೆ ಮುಂದುವರೆಯಲಿ... :-)
ದಿವ್ಯಾ .. :-)
ಗುರುದೆಸೆಯ ಗುರು, ನಿಮ್ಮ ಪ್ರೋತ್ಸಾಹದ ಮಾತು ನಮಗೆ ಹುರುಪು ಹೆಚ್ಚಿಸುತ್ತವೆ..ಬ್ಲಾಗಿಗರ ಮೊದಲ ಸಮ್ಮೇಳನ ಯಶಸ್ವಿಯಾಗಲು ನಿಮ್ಮ ಸಹಕಾರ ಬಹು ಅಗತ್ಯ...ಧನ್ಯವಾದ
ReplyDeleteದಿವ್ಯಾ...ಪ್ರೋತ್ಸಾಹದ ಎರಡು ಮಾತಿಗೆ ಮತ್ತು ಬ್ಲಾಗಿನ ಬೆಳವಣಿಗೆಗೆ ಧನ್ಯವಾದ...
ReplyDeletehuttuhabbada shubhaashayagalu nimma blogige
ReplyDeletenimma blog heege nooraaru chaitragalannu kaanali
ದಿವ್ಯಾ, ಪ್ರತಿಕ್ರಿಯೆಗೆ ಮತ್ತು ಹಾರೈಕೆಗೆ ಧನ್ಯಾವಾದ ನೀವೆಲ್ಲಾ ಬರುತ್ತಿದ್ದು ಪ್ರೋತ್ಸಾಹ ನೀಡುತ್ತಿದ್ದರೆ ಬ್ಲಾಗ್ ಬೆಳೆಯುವುದಲ್ಲದೇ ಇತರ ಹೊಸ ಬ್ಲಾಗಿಗಳಿಗೂ ಹುಮ್ಮಸ್ಸು..
ReplyDeletecongragulations
ReplyDelete:-)
ಮಾಲತಿ ಎಸ್.
Thanks Mala-T, for the support and comments..
ReplyDeleteಸರ್... ಶುಭಾಶಯಗಳು... ನನ್ನ ಪ್ರೋಸ್ಸಹ ಸದಾ ಇದ್ದೆ ಇರುತ್ತೆ...
ReplyDeleteನಿಮ್ಮವ,
ರಾಘು.
thanks Raaghu, idu namma yuva kannadigara adralloo blogigala hurupu hummassu.
ReplyDeleteಆಜಾದ್ ಸರ್... ಜಲನಯನಕ್ಕೆ ಒಂದನೇ ಹುಟ್ಟುಹಬ್ಬದ ಶುಭಾಶಯಗಳು...
ReplyDeleteಬ್ಲಾಗ್ ಹುಟ್ಟುಹಬ್ಬಕ್ಕೆ ಹಾರ್ಧಿಕ ಶುಭಾಶಯಗಳು.
ReplyDeleteಬ್ಲಾಗ್ ಸಮ್ಮೇಳನದ ವಿಚಾರಕ್ಕೆ ಸಹಮತ ನನ್ನದೂ ಇದೆ.
ಆಲ್ ದಿ ಬೆಸ್ಟ್.
ಆಜಾದ್ ಸರ್,
ReplyDeleteನಾನು, ನಿಮ್ಮ ಈ ಪೋಸ್ಟ್ ಹಾಕಿದ ಮೊದಲ ದಿನದಿಂದಾನೂ ಎಲ್ಲರ ಪ್ರತಿಕ್ರೀಯೆ ಓದಿ ನಂತರ ನನ್ನ ಅನಿಸಿಕೆ ಹೇಳೋಣ ಅಂತ ಕಾದಿದ್ದೆ..... ಎಲ್ಲರ ಅಭಿಪ್ರಾಯ ಬ್ಲಾಗ್ ಗೆಳೆಯರು ಒಂದೆಡೆ ಸೇರೋ ವಿಚಾರವನ್ನ ಇಷ್ಟಪಟ್ಟಿದ್ದಾರೆ..... ಹಾಗೆ ಬರುವ ಇಂಗಿತವನ್ನೂ ವ್ಯಕ್ತಪಡಿಸಿದ್ದಾರೆ..... ಮನಸಾರೆ ಮೇಡಂ ಹೇಳಿದ ಹಾಗೆ ಎಲ್ಲಾ ಬ್ಲಾಗಿಗರ ಒಂದು ಉತ್ತಮ ಪೋಸ್ಟ್ ಹೆಕ್ಕಿ ಒಂದು ಪುಸ್ತಕ ಅಥವಾ ಸಂಚಿಕೆ ಹೊರತರಬಹುದು .... ಇದು ಒಳ್ಳೆಯ ಸಲಹೆ ... ಸರ್ , ಇದರ ಬಗ್ಗೆ ಯೋಚಿಸಿ ನಿರ್ಧರಿಸಿ..... ನನ್ನ ಸಲಹೆ ಇನ್ನೊಂದು..... ಬರುವ ಎಲ್ಲಾ ಬ್ಲಾಗ್ ಮಿತ್ರರು, ಹಿರಿಯರು.. ತಮ್ಮ ಸಂಗಾತಿಯರ ಜೊತೆ ಬಂದರೆ ಇನ್ನೂ ಚೆನ್ನಾಗಿರತ್ತೆ..... ಮದುವೆ ಆದವರು ಮನೆಯಾಕೆ / ಮನೆಯಾತನ ಜೊತೆ...... ಮದುವೆ ಆಗದೆ ಇದ್ದವರು..... ಮುಂದೆ ಮದುವೆ ಆಗುವವವರನ್ನು ಕರೆ ತಂದರೆ ಉತ್ತಮ........ ಹ್ಹ ಹ್ಹಾ......ಯಾಕೆಂದರೆ ನಮ್ಮ ಈ ಬ್ಲಾಗ್ ಪಯಣದಲ್ಲಿ ನಮ್ಮನ್ನು ನಮ್ಮಷ್ಟಕ್ಕೆ ಬಿಟ್ಟು ತುಂಬಾ ಉಪಕಾರ ಮಾಡಿರುತ್ತಾರೆ ಅಲ್ಲವಾ... ಇದಕ್ಕಾಗಿಯಾದರೂ ಅವರನ್ನು ಕರೆತರೋಣ..... ಅನಿವಾಸಿ ಕನ್ನಡಿಗರು, ಖಂಡಿತ ನಿಮಗೆ ಅನುಕೂಲವಾಗುವ ವೇಳೆ ಹೊಂದಿಸಿಕೊಂಡು ಸಮಯ ನಿಗದಿಪಡಿಸಿ...... ಸುನಾಥ್ ಸರ್ ತಮ್ಮ ಅನಾನುಕೂಲ ಹೇಳಿದ್ದಾರೆ, ಆದರೆ ಅವರನ್ನ ಬಿಟ್ಟು ಈ ಬ್ಲಾಗ್ ಸಂಧಿ ಮಾಡೋದು ಸರಿ ಕಾಣಲ್ಲ...... ಅವರು ಬರುವ ಹಾಗೆ ಸ್ತಳ ನಿಗದಿ ಮಾಡಿ..... ನನ್ನ ತನು ( ಕೆಲಸಕ್ಕೆ ) , ಮನ ( ಒಳ್ಳೆಯ ಆಲೋಚನೆಗೆ) , ಧನ( ಇದಕ್ಕೆ ತಗುಲುವ ವೆಚ್ಚ ಹಂಚಿಕೊಳ್ಳಲು..) ಇದಕ್ಕೆ ಸಿದ್ದವಿದೆ....... ಪ್ರಕಾಶಣ್ಣ , ಶಿವೂ ಸರ್ ಸಹ ಇದಕ್ಕೆ ಸಮ್ಮತಿ ಕೊಟ್ಟಿದ್ದಾರೆ... ಈ ಸಾರಿಯ ಸಂಧಿ ಯಾ ಬಗ್ಗೆ ತುಂಬಾ ಕಲ್ಪನೆ ಬೇಡ ಯಾಕಂದ್ರೆ, ಪ್ರಥಮ ಸಂಧಿ ಯಾ ಪ್ರತಿಫಲ ನೋಡಿ ಮುಂದಿನ ಸಂಧಿ ಯನ್ನ ಅದ್ಧೂರಿಯಾಗಿ ಮಾಡೋಣ.... ಕೊನೆಯದಾಗಿ...... ಜಲನಯನ ಬ್ಲಾಗ್ ಹೀಗೆ ನಮ್ಮೆಲ್ಲರ ಮಾರ್ಗದರ್ಶಿ ಯಾಗಿ ಬೆಳೆಯಲಿ... ಬೆಳೆಯಲಿ...ಬೆಳೆಯಲಿ...... ಆಜಾದ್ ಸರ್, ನಮ್ಮೆಲ್ಲರ ಪ್ರೋತ್ಸಾಹ ಮಾಡುತ್ತಿರಲಿ.....
ಆಜಾದ್ ,
ReplyDeleteಒಂದುವರ್ಷದ ಸಂಭ್ರಮಕ್ಕೆ ಹಾರ್ದಿಕ ಅಭಿನಂದನೆಗಳು ! ನಿಮ್ಮ ಬ್ಲಾಗ್ ಗೆ ನಾನು ಕಾಲಿಟ್ಟಿದ್ದು ಸಲ್ಪ ತಡವಾಗಿಯೇ . ಆಮೇಲೆ ನಿಯಮಿತವಾಗಿ ಭೇಟಿ ಕೊಟ್ಟರೂ ಕಾಮೆಂಟ್ ಮಾತ್ರ ಅನಿಯಮಿತವಾಗಿ ಹಾಕುತ್ತೇನೆ ! ಕ್ಷಮೆಯಿರಲಿ . ವೈವಿಧ್ಯಮಯವಾಗಿ ಬರೆಯುತ್ತೀರಿ ನೀವು . ಖುಷಿಕೊಡುತ್ತವೆ ನಿಮ್ಮ ಲೇಖನಗಳು. ಹಾಗೇ, ನಿಮ್ಮ ಬಹಳಷ್ಟು ಬರಹಗಳು ನಮ್ಮ ಜ್ಞಾನವನ್ನೂ ಹೆಚ್ಚಿಸಿವೆ. ಹೀಗೆ ಇನ್ನೂ ಬಹುಕಾಲ ಪ್ರಯಾಣ ಮುಂದುವರೆಯಲಿ. ಶುಭಾಶಯಗಳು , ಮತ್ತೊಮ್ಮೆ !
ದಿಲೀಪ್ರೇ, ಧನ್ಯವಾದ...ಪ್ರತಿಕ್ರಿಯೆಗಳ ಮಹಾಪೂರ..ಹರಿದುಬರುತ್ತಿದೆ...70 ದಾಟಿದೆ ಮೀಟ್ರು...ಹಹಹ...ಇದು ನನ್ನ ಬ್ಲಾಗ್ ಪೋಸ್ಟ್ ಗಳಿಗೂ ಅಧಿಕವಾಗಿದೆ...ಕಾರಣ ನಿಮ್ಮೆಲ್ಲರ ಹಾರೈಕೆ ಮತ್ತು ಬ್ಲಾಗಿಗಳ ಸಮ್ಮೇಳನದ ಯೋಚನೆಗೆ ಯೋಜನೆಯ ರೂಪ ನೀಡಲು ಪ್ರೋತ್ಸಾಹಿಸುವುದಕ್ಕಾಗಿ. ಧನ್ಯವಾದ. ನನ್ನ ಇನ್ನೊಂದು ಅನಿಸಿಕೆಯನ್ನು ನಿಮ್ಮ ಮುಂದೆ ಇಡುತ್ತಿದ್ದೇನೆ..ನಮ್ಮ ಬ್ಲಾಗ್ ಪಯಣದ ಕಳೆದ ವರ್ಷದ ಹಾದಿಯನ್ನು ಬಿಂಬಿಸುವ ನಿಮ್ಮ ವ್ಯಂಗ್ಯ ಚಿತ್ರಗಳು ಕೆಲವು ಮೂಡಿಬಂದರೆ ಅವುಗಳ, ಶಿವುರವರ, ಅಗ್ನಿಯವರ, ಮಲ್ಲಿಕಾರ್ಜುನರ ಮತ್ತೆ ಇನ್ನೂ ಕೆಲ ಚಿತ್ರಗ್ರಾಹಕ ಮಿತ್ರರ ಚಿತ್ರಗಳನ್ನು ಪ್ರದರ್ಶಿಸಬಹುದು...ಏನಂತೀರಿ?
ReplyDeleteಚುಕ್ಕಿಚಿತ್ತಾರ ಮೇಡಂ...ಥ್ಯಾಂಕ್ಸ್ ಎನ್ನಲೇ...ಪ್ರತಿಕ್ರಿಯೆಗೆ...ಧನ್ಯವಾದ ಎನ್ನಲೇ ನಿಮ್ಮ ಪ್ರೋತ್ಸಾಹಕ್ಕೆ...ಬ್ಲಾಗಿಗರ ಉತ್ಸಾಹಕ್ಕೆ ಕಾರಣ ಅದನ್ನು ಓದಿ ಒಂದೆರಡು ನುಡಿಮುತ್ತುಗಳನ್ನು ಬಿಡುವ ಓದುಗರು (ಅವರೂ ಬ್ಲಾಗಿಗರೇ ಆಗಬೇಕೆಂದೇನೂ ಇಲ್ಲ...ಉದಾಹರಣೆಗೆ ಶಶಿ ಸೋಮಯಾಜಿ).
ReplyDeleteದಿನಕರ್, ಬ್ಲಾಗಿಗರ ಮೇಳಅನ್ನಿ ಅಥವಾ ಸಮ್ಮೇಳ ಅನ್ನಿ ಇದಕ್ಕೆ ಮೂಲ..ನಾನು ಯುವ ಕವಿಯಲ್ಲಿ ರಾಘವೇಂದ್ರರಿಗೆ ಸುಮಾರು 8-10 ತಿಂಗಳಿಗೆ ಹಿಂದೆಯೇ ನೀಡಿದ್ದ ಸಲಹೆ...ಯುವಕವಿ ಸಮ್ಮೇಳನಕ್ಕೆ...ಆದರೆ ಕಾರಣಾಂತರಗಳಿಂದ ಅದಕ್ಕೆ ಬಹಲ ನೀರಸ ಪ್ರತಿಕ್ರಿಯೆ ಸಿಕ್ತು...ಮಂಗಳೂರಲ್ಲಿ ನೀವು ಇದರ ಪ್ರಸ್ತಾಪ ಎತ್ತಿದಾಗ...ಅರೆ..!! ಕೈಯಲ್ಲಿ ಬೆಣ್ಣೆಯಿಟ್ಟುಕೊಂಡು ತುಪ್ಪಕ್ಕೆ ಏಕೆ ಅಲಿಯೋದು ಅನ್ನಿಸ್ತು...ಸರಿ..ಆಗ್ಲೇ ಪ್ರಕಾಶನಿಗೆ ಶಿವು ಗೆ ಹೇಳ್ದೆ ಅವರೂ ಸೈ ಅಂದರು...
ReplyDeleteಈಗ ಇದನ್ನು ಸಕಾರಮಾಡಲು ನಾಡಿಗರಾದ ನೀವು ಹೆಚ್ಚು ಸಹಕಾರ ಸಹಾಯ ನೀಡಬೇಕು.
ಕೆಲವು ಅಭಿಪ್ರಾಯಗಳಲ್ಲಿ ನೆನ್ಪಿನ ಸಂಚಿಕೆಯನ್ನು ಹೊರತರುವುದು ಉತ್ತಮ ಸಲಹೆ..ಹಾಗೇ ಚಿತ್ರ (ಛಾಯಾ ಮತ್ತು ರೇಖಾ)...ಪ್ರದರ್ಶನವೂ ಚನ್ನಾಗಿರುತ್ತೆ...ಇದಕ್ಕೆ ಪ್ರಾಯೋಜಕರನ್ನು ಹೊಂದಿಸಿದರೆ ಉತ್ತಮ.
ಈಗ ಇದನ್ನು ಜುಲೈ ಗಿಂತ ಆಗಸ್ಟ್ ಮೊದಲವಾರ ಅನುಕೂಲಕರವೆಂದು ಕೆಲವರ ಅಂಬೋಣ...ನೋಡೋಣ...
ಧನ್ಯಾವದ ನಿಮ್ಮ ಪ್ರತಿಕ್ರಿಯೆಗೆ (ನೀವೇ ಇದರ ಕಿಡಿಗೆ ಗಾಳಿ ಹಾಕಿದವರೆಂದು ಗೊತ್ತು ಅದಕ್ಕೇ ನಿಮ್ಮ ಪ್ರತಿಕ್ರಿಯೆಯನ್ನು ನಾನೂ ಕೊನೆಯಲ್ಲೇ ನಿರೀಕ್ಷಿಸಿದ್ದೆ).
ಚಿತ್ರಾ..ಬಹಳ ಧನ್ಯವಾದಗಳು...ಎಲ್ಲಾ ಬ್ಲಾಗ್ ಓದಿ ಪ್ರತಿಕ್ರಿಯೆಗೆ ಸಾಧ್ಯವಾಗದು ಎನ್ನುವುದು..ನಿಜ..ಸೈಟ್ ಡೌನ್ ಆಗೋದೋ..ಬ್ಲಾಗಿನಿಂದ ಬ್ಲಾಗಿಗೆ ನೆಗೆವಾಗ ಮಿಸ್ ಆಗೋದೋ..ಏನೋ ಆಗಿ ಹೀಗಾಗಿದೆ ನನಗೂ...ಹಹಹ...ಪ್ರವಾಗಿಲ್ಲ...ಆದರೆ ಈ ಪೊಸ್ಟ್ ಗೆ ನಿಮ್ಮ ಅಂಕಿತ ಹಾಕಿದ್ರಲ್ಲ ಅದೇ ಸಮಾಧಾನ. ನಿಮ್ಮ ಸಕ್ರಿಯ ಸಹಕಾರಕ್ಕೆ ಎದುರುನೋಡುತ್ತೇವೆ.
ReplyDeleteMabruk!!! sir .
ReplyDeleteShukran Jazeer...Manasu madam
ReplyDeleteಕಂಗ್ರಾಜುಲೇಶನ್ಸ್ ಸರ್...
ReplyDeleteಈ ಸಮಯ್ದಲ್ಲಿ ನೆನಪಿಸಬೇಕಾದದ್ದೆಂದರೆ... ನಿಮ್ಮ ಬೇತಾಳ ಸೀರೀಜ್, ಮತ್ತೆ ಮಗು ಕೇಳೊ ಪ್ರಶ್ನೆಗಳು ಇವು ಬಹಳ ಇಷ್ಟದವು... ಹೀಗೆ ಮುಂದುವರೆಸಿ ಪಯಣ...
ಇನ್ನು ಸಮ್ಮಿಲನ ಒಳ್ಳೆಯ ಐಡಿಯಾ, ನನಗೇನೊ ಇಂಥ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿಕ್ಕೆ ಸಂಕೋಚ, ಮುಜುಗರ, ಯಾಕೊ ಗೊತ್ತಿಲ್ಲ, ಇಲ್ಲಿ ಜಾಸ್ತಿ ಆ ಬಗ್ಗೆ ಬರೆಯಲು ಆಗುವುದಿಲ್ಲ ನನಗೆ... ತಪ್ಪು ತಿಳಿಯಬೇಡಿ... ಸಾಧ್ಯವಾದರೆ ಅಲ್ಲಿ ಬರಲು ಪ್ರಯತ್ನಿಸುತ್ತೇನೆ ಇಲ್ಲವೆಂದರೂ ತೆರೆಮರೆಯಲ್ಲಿ ನಾವೆಲ್ಲ ಇದ್ದೆವಲ್ಲ...
ಪ್ರಭು, ನಿಮ್ಮಿಂದ ಈ ಉತ್ತರ ನಿರೀಕ್ಷಿಸಿರಲಿಲ್ಲ...ನನಗೆ ನಿರಾಸೆ ಮಾಡಬೇಡಿ..ತೆರೆ ಮರೆ ಯಾಕೆ ಸ್ವಾಮಿ? ಇದು ಕೇವಲ ನಮ್ಮ-ನಮ್ಮ ಕಾರ್ಯಕ್ರಮ...ಎಲ್ಲಾ ನಾವೇ...ಮನೆಯ ಕಾರ್ಯಕ್ರಮಕ್ಕೆ ಅಳುಕು, ಮುಜುಗರ, ಸಂಕೋಚ ಸಲ್ಲ...ನಿಮ್ಮಾK ಒಡೆಯಾ...ಹಹಹ....ಖಂಡಿತಾ ನೀವು ನಮ್ಮೊಂದಿಗಿರುತ್ತೀರಿ...ಇದು final....no more ಚೌಕಾಸಿ...
ReplyDeleteಆಜ಼ಾದ್ ಭಾಯ್,, ಅಭಿನಂದನೆಗಳು...
ReplyDeleteಹೀಗೆಯೇ ನಿಮ್ಮ ರಸವತ್ತಾದ,,ಮಾಹಿತಿಪೂರ್ಣವಾದ ಬರಹಗಳು ಇನ್ನು ಮುಂದೆಯೂ ಮೂಡಿ ಬರಲಿ ಎಂದು ಆಶಿಸುತ್ತೇನೆ..
ನಿಮ್ಮ ಅಭಿಮಾನಕ್ಕೆ ಚಿರಋಣಿ..
ಆಕಾಶಬುಟ್ಟಿಯ ಪ್ರೋತ್ಸಾಹದ ಬೆನ್ನು ತಟ್ಟುವಿಕೆಗೆ ಧನ್ಯವಾದ...ಹಾಗೇ ನಮ್ಮ ಬ್ಲಾಗ್ ಮೀಟ್ ಸಮಯಕ್ಕೆ ಬಿಡುವುಮಾಡಿಕೊಂಡು ಬನ್ನಿ..ಬಹುಷಃ ಆ ವೇಳೆಗೆ ನೀವೂ ರಜೆ ಮೇಲೆ ಊರಿಗೆ ಬರುತ್ತೀರೆಂದು ಆಶಿಸುತ್ತೇನೆ.
ReplyDeleteCongratulations Sir,
ReplyDeleteThanks for the invitation... If happens will definately knock the door :)
ಜಲನಯನ ಅವರೆ...
ReplyDeleteಬ್ಲಾಗಿನ ಹುಟ್ಟುಹಬ್ಬಕ್ಕೆ ಶುಭಾಶಯ :-)
ಮಾನಸ, ನಿಮ್ಮ ಪ್ರತಿಕ್ರಿಯೆಗೆ ಮತ್ತು ಹಾರೈಕೆಗೆ ಧನ್ಯವಾದಗಳು. ನಿಮ್ಮ ಭಾಗವಹಿಸುವಿಕೆಗಯಿಂದ ಅನಿವಾಸಿ ಕನ್ನಡಿಗರ ಹುಮ್ಮಸ್ಸು ಹೆಚ್ಚುತ್ತೆ...ನಮ್ಮ ಪ್ರಯತ್ನ ಈ ಸಮ್ಮೇಳನ ನಡೆಸಬೇಕೆಂದು, ನಿಮಗೆ ಇದರ ಸಮಯದ ಬೆಗ್ಗೆ ತಿಳಿಸುತ್ತೇವೆ.
ReplyDeleteಶಾಂತಲಾ...ನಿಮಗೆ ಜಲನಯನಕ್ಕೆ ಸ್ವಾಗತ...ನಿಮ್ಮ ಹಾರೈಕೆಗೆ ಧನ್ಯವಾದಗಳು ಮತ್ತು ಬ್ಲಾಗಿಗಳ ಸಮ್ಮೇಳನಕ್ಕೆ ನಿಮ್ಮ ಅನಿಸಿಕೆ ತಿಳಿಸಿ.
ReplyDeleteಡಾ. ಅಜಾದಣ್ಣ,
ReplyDeleteಶುಭಾಷಯಗಳು....ತಡವಾಗಿದಕ್ಕೆ ಕ್ಷಮೆಯಿರಲಿ....
ನಿಮ್ಮ ಲೇಖನಗಳು ಚಟಾಕಿಗಳು ಹಾಗೆ ನೂರ್ಕಾಲ ಮೊಳಗುತ್ತಿರಲಿ....
ನಿಮ್ಮ ಯೋಜನೆಗೊಂದು ಸಲಾಮ್.....
ಬ್ಲಾಗ್ ಸಮ್ಮೇಳನ ಯಶಸ್ವಿಯಾಗಲಿ.....
ಮಯೇಸಣ್ಣ..ಏನಣ್ಣ ಅಸ್ಸೀರ್ವಾದ ಕಣಣ್ಣ ನಿಮ್ಮಂತ ಇರೀಕರ್ದು...ಅದ್ಕೇಯಾ ..ಬ್ಲಾಗು ಮಾಡ್ಸಿದ್ದು ನಿನ್ ಕೈಲೂ..ತ್ಯಾಂಕು ಕಣಣೋ ಬೋ ತ್ಯಾಂಕು..
ReplyDeleteಆಜಾದ್ ಸಾರ್...
ReplyDeleteತುಂಬಾ ದಿನಗಳಿಂದ ನಿಮ್ಮ ಬ್ಲಾಗ್ ಗೆ ಬರಲಾಗಿರಲಿಲ್ಲ. ಅದಕ್ಕಾಕಿ ಮೊದಲು ಕ್ಷಮೆಯಾಚಿಸುತ್ತಾ.... ನಿಮ್ಮ ’ಜಲನಯನ’ ದ ವರ್ಷದ ಹುಟ್ಟುಹಬ್ಬಕ್ಕೆ ಹಾರ್ದಿಕ ಶುಭಾಶಯಗಳನ್ನು ಹೇಳುತ್ತಾ.....(better late than never)...
ನಿಮ್ಮ ಅಂಚೆ ಕೂಡ ತಲುಪಿತು. ಬ್ಲಾಗಿಗರ ಸಮಾವೇಶ ಮಾಡುವ ಚಿಂತನೆಯೇ ಅತ್ಯಂತ ಆಪ್ತ ಹಾಗೂ ಆಕರ್ಷಕವಾಗಿದೆ. ಎಲ್ಲರನ್ನೂ ಭೇಟಿ ಮಾಡುವ ವಿಚಾರವೇ ನಿಜಕ್ಕೂ ಸಂತಸ ತಂದಿದೆ.... ಖಂಡಿತಾ ಸಾರ್... ನಾವೆಲ್ಲಾ ಸೇರೋಣ.... ಧನ್ಯವಾದಗಳು
ಶ್ಯಾಮಲಾವ್ರೇ ..ನನ್ನದೂ ಅದೇ ತಪ್ಪಾಗಿತ್ತು..ಬಹಲ ದಿನಗಳಿಂದ ನಿಮ್ಮ ಗೂಡಿಗೆ ನಾನೂ ಬಂದಿರಲಿಲ್ಲ, ಅದಕ್ಕೇ ನಿಮ್ಮಲ್ಲಿ ಬಮ್ದು ಕಾಮೆತ್ತಿಸಿ..ನಿಮಗೆ ಧನ್ಯವಾದ ಕೋರುವ ಈ ಪರಿ...ಧನ್ಯವಾದ
ReplyDelete"ಜಲನಯನ"ಕ್ಕೆ ಹುಟ್ಟು ಹಬ್ಬದ ಶುಭಾಶಯಗಳು ...:)
ReplyDeleteಗುಬ್ಬಚ್ಚಿಯನ್ನು ಹಾರಿಸಿ ಬಂದೆ ನಿಮ್ಮ ಪ್ರತಿಕ್ರಿಯೆ ನೋಡಿದೆ..ಧನ್ಯವಾದ ಶ್ರವಣ...ಬರುತ್ತಿರಿ...
ReplyDeleteಶುಭಾಶಯಗಳು...
ReplyDeleteThis comment has been removed by the author.
ReplyDeleteRvikanth ravarige dhanyavaadagalu, nimma shubha haaraike namage munnugguva hurupannu needutte...
ReplyDeleteಸರ್, ಆಗಸ್ಟ್ ನಲ್ಲಿ ಸಮ್ಮೇಳನ ಆಗಬೇಕಾದರೆ ಈವಗಿನಿಂದಲೇ ನಾವು ಅದಕ್ಕೆಲ್ಲ ಕೆಲಸ ಸ್ಟಾರ್ಟ್ ಮಾಡ್ಬೇಕು . ಇದನ್ನೊಂದು ಮಿನಿ ಪ್ರಾಜೆಕ್ಟ್ ಥರ ತೊಗೋಬೇಕು ಅಂತ ನನ್ನ ಅನಿಸಿಕೆ .
ReplyDeleteಅದಕ್ಕೆ ನೀವು ಮೊದಲು ಸ್ಥಳ , ಟೈಮ್ , ಸಮ್ಮೇಳನದಲ್ಲಿ ಏನೇನು ನಡಿಬೇಕು ಅಂದ್ರೆ ಛಾಯಾ ಚಿತ್ರ ಪ್ರದರ್ಶನ , ಕವಿ ಗೋಷ್ಠಿ , ಯಾರಾರ್ ಸಲಹೆ ಏನೇನಿದೆ ? ಅನ್ನೋ ಒಂದು ರೌಗ್ಹ್ ಐಡಿಯಾ ಹಾಕಿ ನಮ್ಮಗೆಲ್ಲ ಒಂದು ಪೋಸ್ಟ್ ಅಥವಾ ಮೇಲ್ ಕಳಿಸಿ . ಆಮೇಲೆ ಸಾವಕಾಶವಾಗಿ ಎಲ್ಲರ ಸಲಹೆ ಮೇರೆಗೆ ಅದಕೊಂದು ರೂಪ ಕೊಡೋಣ. ಏನಂತಿರ ? ಹಾ ಇನ್ನೊಂದು ನನ್ನ ಸಲಹೆ ಇದೆ . ಆದ್ರೆ ಹಣದ ಪ್ರಶ್ನೆ ಇರೋದರಿಂದ ಮೊದಲು ಕೇಳಬೇಕೊ ಬ್ಯಾಡವೋ ಅಂತಾ ಗೊಂದಲದಲ್ಲಿದ್ದೆ . ಸ್ವಲ್ಪ ಮುಜುಗರ ಅಗ್ತಾ ಇದೆ , ಆದ್ರೆ ಒಂದು ಒಳ್ಳೆ ಕೆಲಸಕ್ಕೆ ಕೇಳ್ತಾ ಇದ್ದಿನಿ ಅನ್ನೊ ಧೈರ್ಯದಿಂದ ಕೇಳ್ತಾ ಇದ್ದಿನಿ.
ಅದೇನಂದರೆ ನಾವ್ಯಾಕೆ ಈ ಸಮ್ಮೇಳನ ಮುಕಾಂತರ ಒಂದು ಒಳ್ಳೆ ಕೆಲ್ಸಕ್ಕೆ ಕೈ ಹಾಕಬಾರದು ? ಅಂದ್ರೆ ಈ ಸಮ್ಮೇಳನದ ನೆನಪಿಗಾಗಿ ಕನ್ನಡದ ಯಾವದಾದರು ಕಸ್ಟದಲ್ಲಿರೋ ಕಲಾವಿದನಿಗೆ ಒಂದಿಸ್ಟು ಧನ ಸಹಾಯ ಮಾಡಿದ್ರೆ ಹೇಗೆ ಅಂತ ? ಹನಿ ಹನಿ ಗೂಡಿದರೆ ಹಳ್ಳ ನಾವೆಲ್ಲಾ ಸ್ವಲ್ಪ ಸ್ವಲ್ಪ ( 100 Rs/ head ) ಸೇರಿಸಿದರೆ ಸಾಕು ಆ ಬಡ ಕಲಾವಿದನಿಗೆ ತುಂಬಾ ಹೆಲ್ಪ್ ಆಗುತ್ತೆ .
This comment has been removed by the author.
ReplyDeleteManasaareyavare, I appreciate your views and entsiahusm...
ReplyDeleteನಾವು ಈ ಬಗ್ಗೆ ಒಮ್ದು ರೂಪುರೇಶೆಗೆ ತಯಾರಿ ನಡೆಸುತ್ತಿದ್ದೇವೆ..ಪ್ರತಿಕ್ರಿಯೆಗಳ ಮಹಾಪೂರ ಬರುತ್ತಿದೆ ನೀವೇ ನೋಡಿದಿರಲಾ..ಈಗ ಈ ಹಿಂದೆ ಇಂತಹ ಪ್ರಯತ್ನ ಆಗಿತ್ತಂತೆ..ಹಿರಿಯ ಬ್ಲಾಗಿಗಳ ಪಾಲ್ಗೊಳ್ಳುವಿಕೆಯನ್ನೂ ಗಮನದಲ್ಲಿಟ್ಟುಕೊಂಡು ಇದನ್ನು ಹೇಗೆ ಮಾಡಲು ಸಾಧ್ಯ ಎನ್ನುವುದನ್ನು ವಿಶ್ಲೇಷಿಸುತ್ತಿದ್ದೇವೆ...ಒಂದಂತೂ ನಿಜ ನನ್ನ ಕಡೆಯಿಂದ ಒಂದು ಪಾರ್ಟಿ ನಮ್ಮ ಎಲ್ಲ ಬ್ಲಾಗ್ ಮಿತ್ರರಿಗೆ ಆಗಸ್ಟ್ ೮ ಕ್ಕೆ ಅಥವಾ ೧೫ ಕ್ಕೆ ಖಚಿತ.
ನೀವು ಬ್ಲಾಗ್ ನೋಡಲು ಹೇಳಿದಿರಿ. ನಿಮ್ಮ science blog ನಾನು ಬಹಳ ಮೊದಲೇ ಓದಿರುತ್ತೇನೆ. ಈ ಬ್ಲಾಗಿಗೂ ಭೇಟಿ ಕೊಟ್ಟಿದ್ದೇನೆ. :-)
ReplyDeleteಧನ್ಯವಾದ ಚೈತ್ರಿಕಾವ್ರೇ..ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ...
ReplyDeleteಅಜಾದ್ ಸರ್,
ReplyDeleteಜಲನಯನ ದ ಮೊದಲನೇ ಹುಟ್ಟು ಹಬ್ಬಕ್ಕೆ ಹಾರ್ಧಿಕ ಶುಭಾಷಯಗಳು.
ನಾನು ಬರುವುದು ನವ೦ಬರ್ ನಲ್ಲಿ.ಆಗ ಬಹುಶ ಮೀನುಗಾರಿಕಾ ಕಾಲೇಜಿನ ಬ್ಲಾಗರ್ಸ್ ಮೀಟ್ ಮಾಡ್ತೇನೆ.....ಮೀನುಗಾರಿಕಾ ಕಾಲೇಜಿನ ಎಷ್ಟು ಜನ ಬ್ಲಾಗಿಗರಾಗಿರಬಹುದು.ಏನಾದರೂ ಮಾಹಿತಿ!
ಅ೦ದ ಹಾಗೆ ನನ್ನದು ತೊ೦ಬತ್ತೊ೦ಬತ್ತನೇ ಕಾಮೆ೦ಟು ನಿಮ್ಮೀ ಬರಹಕ್ಕೆ...ಅದಕ್ಕೆ ಉತ್ತರ ನಿಮ್ಮಿ೦ದ ಸೆ೦ಚುರಿ...ಬಾರಿಸಿ.....ಕನ್ನದ ಡಿ೦ಡಿಮವ.
ಹಹಹಹ....ಶ್ರೀಧರ್....ಮೆಚ್ಚಿದೆ..ನಿಮ್ಮ ಈ ಕಾಮೆಂಟಿಗೆ...ಕಾಯ್ತಿದ್ದೆ ನನಗೆ ಯಾರಾದ್ರೂ ಒಂದು ಲೆಗ್ಸೈಡ್ ಬಾಲ್ ಹಾಕಿದ್ರೆ ಹಾಗೇ ನಡ್ಜ್ ಮಾಡಿ ಒಂದು ರನ್ ತಗೊಂಡು..ಓಹ್...ಹೌದು...ಅನುಪಮ ದಾಖಲೆ...ಜಲನಯನದ ಮೊದಲ ಹುಟ್ಟುಹಬ್ಬದ ದಿನವೇ...ಕಾಮೆಂಟ್ ಗಳ ಸೆಂಚುರಿ...ಇದರಲ್ಲಿ ಒಂದೆರಡು ನೋಬಾಲೂ ಸೇರಿವೆ.....ಹಹಹಹಹ....ಧನ್ಯವಾದ...
ReplyDeleteಜಲನಯನ ಅವರೆ,
ReplyDeleteಬ್ಲಾಗ್ ಸಮ್ಮೇಳನದ ಬಗ್ಗೆ ನನಗೆ ಖುಶಿ ಎನಿಸುತ್ತಿದೆ.
ಆದರೆ ನಾನು ಕರ್ನಾಟಕದಲ್ಲಿ ಇಲ್ಲವಾದ್ದರಿ೦ದ, ಜುಲೈ ಆಗಸ್ಟ್ ತಿ೦ಗಳುಗಳಲ್ಲಿ ಮಕ್ಕಳ ಶಾಲಾ ಕಾಲೇಜುಗಳು ಪ್ರಾರ೦ಭವಾಗುವುದರಿ೦ದ,ಒ೦ದು ದಿನವೂ ಮನೆ ಬಿಟ್ಟು ಇರುವುದು ಸಾದ್ಯವಾಗದು .ಹಾಗಾಗಿ ನಾನು ಬ್ಲೊಗ್ ಸಮ್ಮೇಳನದಲ್ಲಿ ಹಾಜರಿರಲು ಕಷ್ಟವಾಗುವುದು.ಆದ್ದರಿ೦ದ ಅದರ ಬಗ್ಗೆ ಬರೆಯದೆ ಸುಮ್ಮನಿದ್ದೆ.sorry..
ಕೊಮೆ೦ಟ್ಸ್ ಸೆ೦ಚುರಿ ಬಾರಿಸಿದ್ದು ಜಲನಯನವೆ ಮೊದಲಿರಬಹುದೆ?
congratulationsssss!!!
ಮನಮುಕ್ತಾರವರಿಗೆ ಮನಃಪೂರ್ವಕ ಧನ್ಯವಾದಗಳು ಈ ನಿಮ್ಮ ಪ್ರೋತ್ಸಾಹ ನಮಗೆ ಶಕ್ತಿನೀಡುವಂತಹುದು..ನಿಮ್ಮ ಪ್ರತಿಕ್ರಿಯೆ ನಮ್ಮ ದಾರಿಗೆ ದಿಶಾನಿರ್ದೇಶನ ನೀಡುವುದು....ಸೆಂಚುರಿ ಎಲ್ಲಾ ಏನೂ ಇಲ್ಲಪ್ಪ ನಮ್ಮ ಮಿತ್ರರು ಹಲವು ಬಾರಿಸಿಯಾಗಿರಬೇಕು..ನನಗೆ ಸಂತೋಷವಾಗಿರುವುದು..ಬ್ಲಾಗ್ ಸಮ್ಮೇಳನಕ್ಕೆ ದೊರೆತ ಪ್ರತಿಕ್ರಿಯೆ ನೋಡಿ....ಧನ್ಯವಾದ...
ReplyDeleteಜಲನಯನ ಸರ್,,
ReplyDeleteನಿಮ್ಮ ಬ್ಲಾಗಿನ ಅಭಿಮಾನಿಗಳಲ್ಲಿ ನಾನು ಒಬ್ಬ..... ನಿಮ್ಮ ಬ್ಲಾಗ್ ಗೆ ಒಂದು ವರುಷದ ಸಂಬ್ರಮಕ್ಕೆ ಶುಭಾಶಯಗಳು......
ನಿಮ್ಮ ಬ್ಲಾಗ್ ಮಿತ್ರ ವೃಂದ ದವರನ್ನು ಸೇರಿಸುವ ಕಾರ್ಯಕ್ರಮಕ್ಕೆ ನಾನು ಕೂಡ ಸೈ.... ನನ್ನಿಂದ ಏನಾದರೂ ಸಹಾಯ ಬೇಕಾದರೆ ಕೇಳಿ,,,,, ಖಂಡಿತ ಜೊತೆಯಾಗುವೆ
ಗುರು..ನಿಮ್ಮ ಸ್ವೇಚ್ಛಾ ಸಹಾಯದ ನಿಲುವಿಗೆ ತಲೆಬಾಗುತ್ತೇವೆ....ನಿಜ ನಾವೆಲ್ಲಾ ಸೇರುವ ನನ್ನ ಕನಸು ನನಸಾದರೆ ..ನಮ್ಮೆಲ್ಲರ ಜೊತೆ ನೀವೂ ಸೇರುತ್ತೀರಿ...ಇದು ನಮ್ಮೆಲ್ಲರ ಕುಟುಂಬದ ಕಾರ್ಯಕ್ರಮ....ಧನ್ಯವಾದ ನಿಮ್ಮ ಪ್ರೋತ್ಸಾಹದ ಮಾತಿಗೆ..
ReplyDeleteನೆಚ್ಚಿನ ಹಿರಿಯರಾದ ಡಾ. ಆಜಾದ್ ಸರ್ ರವರಿಗೆ,
ReplyDeleteನಿಮ್ಮ ಜಲನಯನದ ವರ್ಷದ ಸಂಭ್ರಮಕ್ಕೆ ತುಂಬು ಹೃದಯದ ಶುಭಾಶಯಗಳು. ದಯವಿಟ್ಟು ಕ್ಷಮಿಸಬೇಕು್, ನಾನು ಈ ಬ್ಲಾಗ್ ಪ್ರಪಂಚಕ್ಕೆ ಹೊಸಬ. ಜಲನಯನದ ಇದುವರೆಗಿನ ಯಾವುದೇ ಪೋಸ್ಟ್ ಗಳನ್ನು ಓದಿರುವುದಿಲ್ಲ. ಇದರಿಂದ ನಾನು ಏನೋ ಕಳೆದು ಕೊಂಡಿದ್ದೇನೆ ಅನಿಸುತ್ತೆ. ಆದ್ದರಿಂದ ನಿಮ್ಮ ಮತ್ತು ಅರ್ಹನಿಶಿ ಬ್ಲಾಗ್ ಗಳನ್ನು ಇನ್ನು ಮುಂದೆ ಚಾಚೂ ತಪ್ಪದೇ ಓದಲು ಪ್ರಯತ್ನಿಸುತ್ತೇನೆ.
ನಿಮ್ಮ ಮಿತ್ರವೃಂದವನ್ನು ಒಂದು ವೇದಿಕೆಯಡಿ ತರುವ ಯೋಚನೆ ತುಂಬಾ ಶ್ಲಾಘನೀಯವಾದುದು. ಮುಂಬರುವ ದಿನಗಳಲ್ಲಿ ಸದಾ ನಿಮ್ಮೆಲ್ಲರ ಜೊತೆಗೆ ಇರಲು ಬಯಸುವವ...... ಪ್ರಕಾಶ ನಂದಿಬೇವೂರು.