Thursday, March 4, 2010

ನಿಜವಾಗ್ಲೂ ಗೊತ್ತಿಲ್ಲ ಮಗು
ಅಪ್ಪಾ...
ಏನ್ ಮಗಾ?

ನಿತ್ಯಾನಂದ ಅಂದರೆ ಏನಪ್ಪಾ?

ಯಾವಾಗಲೂ ಆನಂದವಾಗಿರೋದು

ಸ್ವಾಮಿ ನಿತ್ಯಾನಂದವಾಗಿರೋದು ಅಂದ್ರೆ

ರಾಸಲೀಲೆಯಲ್ಲಿರೋದು ಅಂತಾರಲ್ಲಪ್ಪಾ?

ನಂಗೊತ್ತಿಲ್ಲ ಮಗು.ಅಪ್ಪಾ...

ಏನೋ ಮಗಾ?

ನನ್ನನ್ನ ಸ್ಕೂಲಿನಲ್ಲಿ ಬಿ.ಟಿ. ಅಂತಾರಲ್ಲಪ್ಪ..

ಯಾಕೋ..? ನೀನೇನ್ಮಾಡ್ದೆ..??

ಕ್ಲಾಸ್ನಲ್ಲೂ ಹೀಗೇ ಪ್ರಶ್ನೆ ಕೇಳ್ತೀನಿ ಅಂತ ಹಾಗಂತಾರೆ..

ಅಂದ್ರೆ ಬಲು ತರಲೆ...ಅಂತ ಕಣೋ...

ಅದಕ್ಕೇನಾ ರೈತರು ಬಿ.ಟಿ. ಬದನೆ ಬೇಡ ಅಂತ ಪ್ರತಿಭಟಿಸಿದ್ದು

ನಂಗೊತ್ತಿಲ್ಲ ಮಗು.ಅಪ್ಪಾ ...

ಇನ್ನೂ ಏನೋ ತರಲೆ ನಿಂದು...?

ನೋಡಿದ್ಯಾ ನೀನೂ ನನ್ನ ಬಿ.ಟಿ. ಅನ್ತೀಯ..!

ಸಾರಿ ಕಣೋ..ಪುಟ್ಟ..ಹೇಳು ಏನು ಪ್ರಶ್ನೆ ನಿಂದು..?

ಒಬ್ಬ ಮಿನಿಸ್ಟ್ರು ಬಿ.ಟಿ. ಬದನೆ ಬೇಕು ಅಂತಾರೆ ಇನ್ನೊಬ್ರು ಬೇಡ ಅಂತಾರೆ

ಹೌದು ಕಣೋ ರೈತರಿಗೆ ಬೇಡ ಆದ್ರೆ ವ್ಯಾಪಾರಿಗೆ ಬೇಕು..

ಹಾಗದ್ರೆ ಈರುಳ್ಳಿ ಒಂದು ರಾಜ್ಯ ಸರ್ಕಾರಾನ ಬೀಳಿಸ್ತು
ಹಾಗೇನೆ..ಈ ಬದನೆಕಾಯಿ ಕೇಂದ್ರ ಸರ್ಕಾರಾನ ಬೀಳ್ಸುತ್ತಾ..?
ನಂಗೊತ್ತಿಲ್ಲ ಮಗು.

66 comments:

 1. ಅಜಾದ್,

  ಪ್ರಸ್ತುತ ಪರಿಸ್ಥಿತಿಯನ್ನು ಚೆನ್ನಾಗಿ ಬಳಸಿಕೊಂಡು ಪ್ರಶ್ನೋತ್ತರ ಮೂಡಿಸಿದ್ದೀರಿ...

  ReplyDelete
 2. ಮನದಮಾತಿಗೆ...ಮನದಾಳದ ಧನ್ಯವಾದ...ಏನ್ ತಂಗ್ಯಮ್ಮ...ನಿಂಗೂ ನಿನ್ ಮಗ ಕೇಳ್ತಾನೆ ಹುಶಾರಾಗಿರು.....ಓಕೆ...

  ReplyDelete
 3. ಶಿವು, ಈ ರಾಸಲೀಲೆಯ ಸ್ವಾಮೀದೇ ಸಮಾಚಾರ ಟೀವೀಲಿ..ಅದಕ್ಕೆ ಹಾಗೇ ಒಂದು ಎಸಿಯೋಣ ಮಗೂ ಪ್ರಶ್ನೆ ಅನ್ನಿಸ್ತು...ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ

  ReplyDelete
 4. This comment has been removed by the author.

  ReplyDelete
 5. ಆಜಾದ್ ಸರ್,
  t v ಯಲ್ಲಿ ಈ ಸುದ್ದಿ ನೋಡಿ ನೋಡಿ ಬೇಜಾರಾಗಿತ್ತು.... ಇದನ್ನು ಓದಿ ನಗು ಬಂತು........ ಧನ್ಯವಾದ........

  ReplyDelete
 6. ಭೈಯ್ಯ ,
  ಹ್ಹ ಹ್ಹ ಹ್ಹ ಪ್ರಶ್ನೋತ್ತರ ಸೂಪರ್ ..

  ReplyDelete
 7. ಮಗುವಿನ ಮುಗ್ದ ಪ್ರಶ್ನೆ, ನಿಮಗೆ ಕಿರಿರಿ ಆದಂತೆ ಇತ್ತಲ್ಲ! ಇರ್ಲಿ ಬಿಡಿ ಮಗು ಅಲ್ವಾ? ಸ್ವಲ್ಪ ತಲೆಹರಟೆ ಮಾಡುತ್ತೆ.

  ಚೆನ್ನಾಗಿದೆ ನಿಮ್ಮ ಪ್ರಶ್ನೋತ್ತರ ಪ್ರಹಸನ. ವಾಸ್ತವದ ಮೇಲೊಂದು ಬೆಳಕು ಚೆಲ್ಲಿದ್ದೀರ. good. keep it up!

  ReplyDelete
 8. ನಿಶಾ, ಧನ್ಯವಾದಗಳು....ಹೋಳಿ ಹಬ್ಬದ ಕಾಮಣ್ಣ ಎಲ್ಲಣ್ಣ ಅಂದ್ರೆ
  ಸ್ವಾಮೀಜಿ ಇರ್ಲಾರ್ದೆ ಎದ್ದುನಿಂತು ನಾನು ಇಲ್ಲೇ ಇದ್ದೀನಿ ಅನ್ನೋದಾ...ಹಹಹ

  ReplyDelete
 9. ದಿನಕರ್ ಯುವ ವಯಸ್ಸಿನಲ್ಲಿ ಸ್ವಾಮೀಜಿ ದೀಕ್ಷೆ ತಗೊಂಡ್ರೆ ಇಷ್ಟೇ...ಒಳಗಡೆ ರಸಿಕತೆ ಹೊರಗಡೆ ......ಅಯ್ಯೋ ಹೊರಗಡೇನೂ...ಹಹಹ

  ReplyDelete
 10. ರಂಜು, ನಿನಗೆ ಒಳ್ಳೆ ಎಂಟರ್ಟೈನ್ಮೆಂಟ್ ಅನ್ಸುತ್ತೆ ಅಲ್ವಾ...ಇಂಥವರೇ ನಮ್ಮ ಸಂಸ್ಕೃತಿಗೆ ಆಚಾರಗಳಿಗೆ ಮಸಿ ಬಳಿಯೋದು ಅಲ್ವಾ..? ನ್ಯೂಸ್ ನೋಡ್ದ್ಯಾ..? ಎಮ್.ಎಸ್.ಎನ್ ನಲ್ಲೂ ಇದೇ ಸುದ್ದಿ..

  ReplyDelete
 11. ಪ್ರವೀನ್, ಮಗು ಪ್ರಶ್ನೆ ಕೆಲವೊಮ್ಮೆ ನಮಗೆ ಕಿರಿಕಿರಿಮಾಡಿದ್ರೂ ಕೆಲವೊಮ್ಮೆ ತಬ್ಬಿಬ್ಬು ಮಾಡುತ್ತೆ...ಅಲ್ವಾ?

  ReplyDelete
 12. ಸಕತ್ ಪ್ರಶ್ನೆಗಳು. ಉತ್ತರಿಸೋದು ಸಾಧ್ಯವೇ ಇಲ್ಲ!

  ReplyDelete
 13. ಪ್ರಶ್ನೆಗಳು ಪ್ರಶ್ನೆಗಳೇ.....ಸದ್ಯಕ್ಕೆ ದೇಶದ ಪರಿಸ್ಥಿತಿ ಹೀಗೆ ಇದೆ. ನೀವದನ್ನು ಈ ರೀತಿ ಹೇಳಿದ್ದು ಸಕತ್ತಾಗಿದೆ

  ReplyDelete
 14. ಸುನಾಥ್ ಸರ್, ನನ್ನ ಪ್ರಶ್ನೆಗೆ ಉತ್ತರಿಸಲಾಗದ ಸ್ಥಿತಿಗೆ ನನ್ನ ಬಗ್ಗೆ ನನಗೇ ಜಿಗುಪ್ಸೆ ಅನ್ನಿಸುತ್ತೆ...ಯಾಕಂದ್ರೆ ಆ ಸ್ಥಿತಿಗೆ ನಮ್ಮನ್ನು ನಾವು ದೂಡಿಕೊಂಡಿದ್ದೀವಿ...ನಿಮ್ಮ ಮಾತು ನಿಜ ಕೆಲವು ಮಕ್ಕಳ ಪ್ರಶ್ನೆಗಳಿಗೆ ಉತ್ತರಿಸೋದು ಕಷ್ಟವೇ ಸರಿ..

  ReplyDelete
 15. ಸುಬ್ರಮಣ್ಯ ಸರ್, ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ... ಮಕ್ಕಳಿಗೆ...ಲೋ..ತಲೇನೋವು ಅಂಕಲ್ ಬರ್ತಿದ್ದಾರೆ..ಕೇಳಿದ್ರೆ ಅಪ್ಪ ಮನೇಲಿಲ್ಲ ಅಂತ ಹೇಳ್ಬಿಡು ಅಂತೀವಲ್ಲಾ...ಹಾಗೇ..ಟಿವಿಗಳಲ್ಲಿ ಏನನ್ನು ತೋರಿಸ ಹೊರಟಿದ್ದೀವಿ...?
  ನಿಜಕ್ಕೂ ಅವರ ಮುಂದೆ ದೊಡ್ಡ ಪ್ರಶ್ನೇನೇ ಇಟ್ಟಿರೋದು ನಾವು.

  ReplyDelete
 16. Azad sir,
  Seed company, Brinjal, scientist ಕಾರ್ಟೂನ್ ತುಂಬಾ ಇಷ್ಟವಾಯಿತು..!!!

  ReplyDelete
 17. Azad sir,

  innu esto jana iddare,intaha swaami veshadavaru.
  'saadhu'ennuva shabdhada spelling kooda gottirade soguhaakuttiruvavaru..

  ReplyDelete
 18. ಅಪ್ಪಾ ಈ ಜಲನಯನನ ಮಗನ ತಲೆಲ್ಲಿ ಯಾಕಿ೦ಥಾ ಪ್ರಶ್ನೇ?
  ಗೊತ್ತಿಲ್ಲಾ ಮಗು.
  ಹೊಗ್ಲೀ ನಿನಗೂ ಇ೦ಥಾ ಪ್ರಶ್ನೆಗಳು ಎಳ್ತಾವ ತಲೆಲ್ಲಿ?
  ಗೊತ್ತಿಲ್ಲಾ ಮಗು
  ಹೊಗ್ಲಿ ನಿನಗೆ ತಲೆ ಇದೆಯಾ?
  ಗೊತ್ತಿಲ್ಲ ಮಗು :-(
  (ಎಲ್ಲರಿಗೂ ಬರೊ ಉತ್ತರ ಗೊತ್ತಿಲ್ಲದ ಪ್ರಶ್ನೆಗಳನ್ನ ತಲೆಲ್ಲಿ ಬರ್ತದೆ ಆದರೇ ಉತ್ತರ ಗೊತ್ತಿಲ್ಲ ಅನ್ನೊ ಬದಲಿ ತಲೆನೆ ಇಲ್ಲ ಅ೦ದ್ಕೊಳ್ಳೋದು ವಾಸಿ ಅನ್ಕೊ೦ಡ ತ೦ದೆ ಉತ್ತರ)

  ReplyDelete
 19. As usual ಸೂಪರ್,,,,ಸೂಪರ್,,,, ನಿಮ್ಮ ಅಪ್ಪ ಮಗನ ಮಾತುಕತೆ....

  ReplyDelete
 20. ವನಿತಾ ಥ್ಯಾಂಕ್ಸು...ನನಗೆ ಬೇಡ..ಯಾಕಂದ್ರೆ ಅದು ವೆಬ್ ದುನಿಯಾದ ಕೃಪೆ...ಹಹಹ...ಆದ್ರೆ..ನನ್ನ BT (ಬಲು ತರಲೆ) ಪ್ರಶ್ನಾವಳಿ ಬಗ್ಗೆ ಏನೂ ಹೇಳಲಿಲ್ಲ..ಸಂಶೋಧನೆ ಮಾಡೋ ನೀವು ಒಂದಷ್ಟು ಕಾಮೆಂಟ್ ಮೆತ್ತಿಸ್ತೀರಿ ಅಂದ್ಕೊಂಡೆ...

  ReplyDelete
 21. ಶ್ವೇತಾ...ಚಿಕ್ಕವಯಸ್ಸಲ್ಲಿ ಸಾಧುಗಳಾಗಿದ್ದು ..ಯಾವುದೋ ಕ್ಷಣಿಕ ಆಕರ್ಷಣೆಯಿಂದ ಎನ್ನಬೇಕೇ ಇಂತಹವರನ್ನು ನೋಡಿ...ಎಲ್ಲ ಅನುಭವಿಸಿ ನಡೆಯುವ ಜನಸಾಮಾನ್ಯರೂ ಕೆಲವೊಮ್ಮೆ ಅಂಕೆ ಮೀರುವ ಸಾಧ್ಯತೆ ಇರುವಾಗ..ಎಲ್ಲ ಬಿಟ್ಟವರು ಒಮ್ಮೆಗೇ..ಅಂತಹ ಸಂದರ್ಭದಲ್ಲಿ ....ಹಹಹ..ನಿಜ ಬಣ್ಣ...ನೀಲಿ ನರೀದು...ಪಂಚತಂತ್ರ..ಗೊತ್ತಲ್ಲಾ....ಹಹಹಹ, ಧನ್ಯವಾದ ನಿಮ್ಮ ಕಾಮೆಂಟ್ಸ್ ಗೆ

  ReplyDelete
 22. ಸೀತಾರಾಂ ಸರ್, ನನ್ನ ಈ ಪ್ರಶ್ನಾವಳಿಗೆ ಕೆಲವೊಮ್ಮೆ ನನ್ನ ಮಗಳೂ ಕಾರಣ ಅನ್ನಿಸುತ್ತೆ..ಯಾಕಂದ್ರೆ ಅವಳ ಕೆಲವು ಪ್ರಶ್ನೆಗೆ ನಾನೂ ಉತ್ತರಿಸಲಾಗದೇ ಹೋಗ್ತೇನೆ...ಉದಾ: ಮಾನವ ಮಂಗನಿಂದ ಆದದ್ದು ಅಂತೀಯಲ್ಲಾ ಅಪ್ಪ..ಹೌದು ಮಗಳೇ..ಮತ್ತೆ ಎಲ್ಲಾ ಮಂಗಗಳೂ ಮಾನವ ಯಾಕಾಗಲಿಲ್ಲ..ಈಗ್ಲೂ ಮಂಗಗಳು ತಾತನ ಮನೆಹತ್ರದ ಅಂಗಡಿಗೆ ಬಂದು ಬಾಳೆಹಣ್ಣು ಕದೀತಾವಲ್ಲ...?? ಹಹಹ...ನಾನು ನನ್ನ scientific knowledge use ಮಾಡಿ ಉತ್ತರಿಸಬಹುದು ಆದ್ರೆ... gene junking, superiority among siblings ಇದೆಲ್ಲಾ ಹೇಗೆ ..?? ಅದಕ್ಕೇ..ಹಾರಿಕೆ ಉತ್ತರ ಕೊಟ್ಟುಬಿಡ್ತೇನೆ..

  ReplyDelete
 23. ಗುರು, ಧನ್ಯವಾದ..ನಿಮ್ಮ ಪ್ರೋತ್ಸಾಹಕ್ಕೆ...ಪ್ರಶ್ನೆ ಕೇಳೋದು ಸುಲಭಾ ಮರಿ...ಅದಕ್ಕೆ ಉತ್ತರ ಹೇಳೋದು ಕಷ್ಟ ಅಂತ ನಮ್ಮ ಸ್ಕೂಲ್ ಮಾಸ್ತಾರು ಹೇಳೋದು ನೆನಪಾಗುತ್ತೆ ಈ ತರಹದ ಪ್ರಶ್ನೆ ನಮ್ಮ ಮಕ್ಕಳು ಕೇಳಿದಾಗ.

  ReplyDelete
 24. ಅಜಾದ್ ಸರ್ ,

  ಸಕತ್ತಾಗಿದೆ , ಅದರಲ್ಲಂತೂ ನಿತ್ಯಾನಂದ್ ಸ್ವಾಮಿ ಜಿ ಅವರ ಬಗ್ಗೆ ಚೆನ್ನಾಗಿದೆ . ನಾ USA ನಲ್ಲಿದ್ದಾಗ ಈ ದರಿದ್ರ ಸ್ವಾಮಿಯ ಆಶ್ರಮಕ್ಕೆ ಹೋಗಿ ಬರ್ತಿದ್ದೆ , ಅದು ಇವನ ಮೇಲಿನ ಭಯ ಭಕ್ತಿಯಿಂದ ಅಲ್ಲ . ಅವನು ಕಟ್ಟಿಸಿದ ದೇವಸ್ಥಾನ ಚೆನ್ನಾಗಿತ್ತು . ಅದಕ್ಕೆ ಅಲ್ಲಿ ಹೋಗ್ತಿದ್ದೆ . ಇವಗ್ ಅನ್ನಿಸ್ತ ಇದೆ ಇಂಥ ದರಿದ್ರ ಸ್ವಾಮಿ ಕಟ್ಟಿರೋ ದೇವರೇ ಇಲ್ಲದ ದೇವಸ್ಥಾನಕ್ಕೆ ಹೋಗಿ ಸುಮ್ಮನೆ ನನ್ನ ಟೈಮ್ ವೇಸ್ಟ್ ಮಡ್ಕೊತ್ತಿದ್ದೆ.

  ಪ್ರಸ್ತುತ್ ನಮ್ಮ ಸಮಾಜದ ಧೋರಣೆಗಳನ್ನ ಹಾಸ್ಯ ರೂಪಿನಲ್ಲಿ ಚೆನ್ನಾಗಿ ಹೇಳಿದ್ದಿರ .

  ಮಗನ ಮುಂದಿನ ಪ್ರಶ್ನೆಗೆ ಕಾಯ್ತಾ ಇದ್ದೀನಿ ಹೆಹ್ಹೀ ...ಬೇಗ ಇನ್ನೂ ಸ್ವಲ್ಪ ಬರಲಿ

  ReplyDelete
 25. ಮನಸಾರೆಯವರೇ, ನೀವೇ ನೋಡಿ..ನಂಬಿಕೆಗಳಲ್ಲಿ ನಮಗೆ ಎಂತಹ ಬಲವಾದ ನಂಬಿಕೆ ಅಲ್ಲವಾ..ಅಮೇರಿಕಾದಲ್ಲೂ ನಿಮ್ಮ ನಂಬಿಕೆಯನ್ವಯ ನಿಮ್ಮ ಕೆಲ್ಸ ಇತ್ತು....ಅದು ನೀವು ನಂಬಿಕೆಗೆ ಕೊಟ್ಟ ಬೆಲೆ...ಆದ್ರೆ ಈ ಸ್ವಾಮೀಜಿ ನಮ್ಮೆಲ್ಲರ ನಂಬಿಕೆಗೆ ಒಳ್ಳೆ ಬೆಲೆ ಕೊಟ್ರಲ್ಲಾ..?
  ಧನ್ಯವಾದ..ಪ್ರಶ್ನೆ ಮೂಡ್ತಾನೇ ಇರುತ್ವೆ...ಉತ್ತರ ಕೆಲವೊಮ್ಮೆ ಗೊತ್ತಿರುತ್ತವೆ..ಮನಸ್ಸು ಒಪ್ಪೊಲ್ಲ..ಕೆಲವೊಮ್ಮೆ ನಾಲಿಗೆ ಒಪ್ಪೊಲ್ಲ ...ಕೆಲವೊಮ್ಮೆ ನಾಲಿಗೆ ತುದೀಲೇ ಇರ್ತವೆ..ಬಾಯಿ ಬಿಡೋಲ್ಲ ಅನ್ನುತ್ವೆ..ಮತ್ತೆ ಕೆಲವು...ಮೆತ್ತಗೆ ಹೇಳುತ್ತೇವೆ..ಉತ್ತರ..ಮತ್ತೆ ಕೆಲವರಲ್ಲೇ ಹೇಳ್ತೇವೆ..ಹೀಗೆ...ನಿಮ್ಮ ಪ್ರತಿಕ್ರಿಯೆ..ನನ್ನಲ್ಲಿ ಒಂದು ಬ್ಲಾಗ್ ಪೋಸ್ಟ್ ಐಡಿಯಾ ಹುಟ್ಟು ಹಾಕಿದೆ..ಇದನ್ನ ನಿರೀಕ್ಷಿಸಿ...

  ReplyDelete
 26. ಮಗುವಿನ ಮೂಲಕ ದೇಶದ ಕಥೆ ಇಷ್ಟೇ ಕಣಪ್ಪ ಅಂತ ಚೆನ್ನಾಗಿ ಹೇಳಿಸಿದಿರಿ...

  ReplyDelete
 27. ಸರ್,
  ಸರಳ ಶಬ್ದದಲ್ಲಿ ಒಳ್ಳೆಯ ಸಂದೇಶ
  ಅಪ್ಪ ಮಗನ ಸಂಭಾಷಣೆ ಚೆನ್ನಾಗಿದೆ

  ReplyDelete
 28. ಅಪ್ಪಾ,

  ಏನು ಮಗು?

  ಆ ಆಶ್ರಮದಲ್ಲಿ ಅರವತ್ತೈದು ಜನ ಯಾಕೆ ಸತ್ರು ಗೊತ್ತಾ?

  ಗೊತ್ತಿಲ್ಲ ಮಗು,

  ಕಾಲ್ತುಳಿತದಿ೦ದ ಅಲ್ವಾ ಮಗು!

  ಇಲ್ಲಾ ಅಪ್ಪಾ,

  ಹಸಿವು-ಸಾವು ಒ೦ದೇ ನಾಣ್ಯದ ಎರೆಡು ಮುಖಗಳಾಗಿರುವುದರಿ೦ದ!

  ..............ಅಜಾದ್ ಸರ್ ನಿಮ್ಮ ಹಾದಿಯಲ್ಲಿ...ಹೆ೦ಗೆ....ಹ ಹ ಹ

  ReplyDelete
 29. ಜಲನಯನ್ ಸರ್ ,
  ನನ್ನ ಕಾಮೆಂಟ್ ಗೆ ಕೊಟ್ಟ ನಿಮ್ಮ ಪ್ರತಿಕ್ರಿಯೆ ಎಷ್ಟು ಅರ್ಥಗರ್ಭಿತ್ ಹಾಗೂ ನಿಜವಾಗಿದೆ . ಹೌದು ಉತ್ತರ ಗೊತ್ತಿದ್ರು ಕೆಲವೊಮ್ಮೆ ಮನಸ್ಸು ಒಪ್ಪೋಲ್ಲ ಯಾಕೆ ಅಂದ್ರೆ ಆ ನಿತ್ಯಾನಂದ ಸ್ವಾಮಿ ವೀಡಿಯೊ ನೋಡಿ ನಂಗೆ ಒಂದು ಕ್ಷಣ ಸುಳ್ಳು ವೀಡಿಯೊ ಅನ್ನಿಸಿದಂತು ನಿಜ ಅದಕ್ಕೆ ಕರೆಕ್ಟ್ ಆಗಿ ಹೇಳಿದಿರಿ ಉತ್ತರ ಗೊತ್ತಿದ್ದರು ಮನಸ್ಸು ಒಪ್ಪೋಲ್ಲ ಅಂತ . ನನ್ನ ಕಾಮೆಂಟ್ ನಿಂದ ನಿಮ್ಮ ಕಡೆ ಹೊಸ ಪೋಸ್ಟ್ ಬರ್ತಾ ಇದೆ ಅಂತ ಕೇಳಿ ತುಂಬಾ ತುಂಬಾ ಕುಶಿ ಆಯಿತು . ಅತಿ ಉತ್ಸುಕತೆಯಿಂದ ಕಾಯ್ತಾ ಇದ್ದೀನಿ . ಬೇಗ ಬರಲಿ .

  ReplyDelete
 30. ಒಂದು ತರಹದ ಚಾಟಿಯೇಟುಗಳು ..ತುಂಬಾ ಚೆನ್ನಾಗಿದೆ..ಮುಂದಿನ ಕಂತುಗಗಳಿಗೆ ಕಾಯುತ್ತೇನೆ.

  ReplyDelete
 31. ಶಶಿ, ನಮಗೆ ಗೊತ್ತಿರುವ ವಿಷಯವನ್ನು ಮಗು ಪ್ರಶ್ನೆಯಲ್ಲಿ ಅದಗಿಸಿಟ್ಟರೆ..ಉತ್ತರಿಸಿಸೋದೂ ಎಲ್ಲ ವೇಲೆ ಸಾಧ್ಯವಿಲ್ಲ....ನೀವೇ ನೋಡಿರ್ತೀರಿ...ಟೀವಿಯಲ್ಲಿ ಬರೋ ಕೆಲವುಜಾಹೀರಾತುಗಳಿಗೆ ಗೊಂದಲಗೊಂಡು ಮಗು ಪ್ರಶ್ನೆ ಕೇಳಿದ್ರೆ ಉತ್ತರಿಸೋಕೆ ಆಗೊಲ್ಲ...ಧನ್ಯವಾದ..ನಿಮ್ಮ ಪ್ರೋತ್ಸಾಹಕ್ಕೆ

  ReplyDelete
 32. ಡಾಕ್ಟರ್, ನಿಮ್ಮ scientific ಬುದ್ಧಿಶಕ್ತಿಗೂ ಕೆಲವೊಮ್ಮೆ ಸವಾಲಾಗಿರಬಹುದು ಮಗುವಿನ ಪ್ರಶ್ನೆಗಳು...ಅಲ್ಲವಾ?

  ReplyDelete
 33. ಶ್ರೀ, ಥ್ಯಾಂಕ್ಸ್...ಹಹಹ ನಿಮ್ಮ ಮಗೂನೂ ಪ್ರಶ್ನೆ ಕೇಳ್ತಿದೆ ಅಂದಂತಾಯಿತು...ಹಹಹ..
  ಇದು ನಮ್ಮ ಮನದಾಳದ ಮಗು.....ಹೌದು ನೋಡಿ...ಎಂಥ ಘೋರ...ಎಷ್ಟು ಜನ ಸತ್ತರು..??!! ನಿಜಕ್ಕೂ ಶೋಚನೀಯ ...

  ReplyDelete
 34. ಆದ್ರೆ ಈ ಸ್ವಾಮೀಜಿ ನಮ್ಮೆಲ್ಲರ ನಂಬಿಕೆಗೆ ಒಳ್ಳೆ ಬೆಲೆ ಕೊಟ್ರಲ್ಲಾ..?
  yes,they play with our emotions alva?
  There is no surprise ,people start worshiping him again after 2-3 months,
  public memory is veryshort alva?

  ReplyDelete
 35. ನಿಮ್ಮ ಮಾತು ನಿಜ ಮನಸಾರೆಯವರೇ...ನಮ್ಮ ಮನದ ಮಾತೇ ನಮಗೆ ಮೋಸ ಮಾಡುತ್ತೆ...ಹಾಗೆ ನಡೆದುಕೊಳ್ತಾರೆ ನಾವು ನಂಬಿದವರು...
  ಹೌದು ನೋಡಿ ಒಬ್ಬರ ಇಂಗಿತ..ಯೋಚನಾ ಲಹರಿ ಇನ್ನೊಬ್ಬರ ಹುಮ್ಮಸ್ಸಿಗೆ ಅಥವಾ ಯೋಚನ್ಗೆ ಪೀಠಿಕೆಯಾಗಬಹುದು..watch out for the post...hahaha

  ReplyDelete
 36. ನಾರಾಯಣ್ ಸರ್, ಬುದ್ಧಿಯ ಬೆಳವಣಿಗೆಗೆ ಅದನ್ನು ಉಪಯೋಗಿಸುವ ಪ್ರಮಾಣದ ಮೇಲೆ ಅವಲಂಬಿಸಿರುತ್ತೆ ಎನ್ನುತ್ತಾರೆ....ಅದಕ್ಕೆ ಹೆಚ್ಚು ತಿಳಿದಂತೆ ನಮ್ಮೊಳಗಿನ ಮಗು ಹೆಚ್ಚು ಹೆಚ್ಚು ಪ್ರಶ್ನಿಸುತ್ತೆ.....ಉತ್ತರ...ಸಿಗಬಹುದು ಇಲ್ಲಾ...ನಂಗೊತ್ತಿಲ್ಲ ಮಗು....ಹಹಹಹ, ಧನ್ಯವಾದ ಸರ್

  ReplyDelete
 37. ಶ್ವೇತಾ, yes,...as long us the belief is there..cheating will continue..ಇದು ಆಗಿದೆಯಲ್ಲಾ ಹಿಂದೆಯೂ ಕಳ್ಳಸನ್ಯಾಸಿಗಳನ್ನ ನೋಡಿಯೂ ಸನ್ಯಾಸಿ ಸಾಧುಗಳನ್ನು ನಾವು ನಂಬುವುದು ಕಡಿಮೆಯಾಗಿಲ್ಲ...community has no memory..unless its something that thretaens their existence...ಅಲ್ಲವಾ..? ಇಂತಹ ಆಧ್ಯಾತ್ಮ ಸಂಬಂಧಿ ವಿಷಯಗಳು ವ್ಯಕ್ತಿಗೆ ಪಾಠಕಳಿಸುತ್ತವೆಯೇ ಹೊರತು ಸಮಾಜಕ್ಕಲ್ಲ...ಆದ್ದರಿಂದ ಇಂಥವರು ಮತ್ತೆ ಪೂಜಿತರಾಗುವುದರಲ್ಲಿ ಅತಿಶ್ಯವೆನಿಸುವುದು ಕಡಿಮೆಯೇ...thanks for your comments.

  ReplyDelete
 38. Really a different trial, Good Work !

  ReplyDelete
 39. VRB sir, Thanks for your support..matte nimmellara support idakke...preraka...allavaa

  ReplyDelete
 40. ಅಮ್ಮಾ,
  ಏನು ಪುಟ್ಟೀ ,
  ಈ ಆಜಾದ್ ಮಾಮಾನ ಮಗ ಯಾವಾಗಲೂ ಪ್ರಶ್ನೆ ಕೇಳ್ತಾನೆ ಇರ್ತಾನಲ್ಲಮ್ಮ?
  ಹಾಂ ಪುಟ್ಟೀ.
  ಅವರಪ್ಪಂಗೆ ಏನೂ ಗೊತ್ತಿಲ್ಲ ಅಂತಾದ ಮೇಲೂ ಯಾಕೆ ಮತ್ತೆ ಮತ್ತೆ ಪ್ರಶ್ನೆ ಕೇಳಬೇಕಮ್ಮ ?
  ಹಾಂ ಪುಟ್ಟೀ
  ಈಗ ನೋಡು, ನಾನು ನಿನ್ನ ಯಾವಾಗ್ಲಾದ್ರೂ ಇಂಥಾ ಪ್ರಶ್ನೆ ಕೇಳ್ತೀನಾ ಅಮ್ಮ?
  ? ? ?

  ReplyDelete
 41. ಅಜಾದಣ್ಣ,
  ಪ್ರಶ್ನೋತ್ತರ ಸೂಪರ್ ....
  ನಿತ್ಯ ಆನಂದವಾಗಿರುವವನು ಎಲ್ಲಿ ಆನಂದವಾಗಿದ್ದಾನೊ...?

  ReplyDelete
 42. 'ಜಲನಯನ'ಅವ್ರೆ..,

  ಬಿ.ಟಿ. ಬಗ್ಗೆ ಒಳ್ಳೆಯ ಪ್ರಶ್ನೆಗಳು..

  ನನ್ನ 'ಮನಸಿನಮನೆ'ಗೊಮ್ಮೆ ಬನ್ನಿ:http:/manasinamane.blogspot.com

  ReplyDelete
 43. ಚಿತ್ರಾ ನಿಮ್ಮ ಪ್ರತಿಕ್ರಿಯೆಯಲ್ಲಿ ಕಡೆಯ ಸಾಲು ಬಿಟ್ಟೋಗಿದೆ ನೋಡಿ.....

  ಅಮ್ಮಾ,
  ಏನು ಪುಟ್ಟೀ ,
  ಈ ಆಜಾದ್ ಮಾಮಾನ ಮಗ ಯಾವಾಗಲೂ ಪ್ರಶ್ನೆ ಕೇಳ್ತಾನೆ ಇರ್ತಾನಲ್ಲಮ್ಮ?
  ಹಾಂ ಪುಟ್ಟೀ.
  ಅವರಪ್ಪಂಗೆ ಏನೂ ಗೊತ್ತಿಲ್ಲ ಅಂತಾದ ಮೇಲೂ ಯಾಕೆ ಮತ್ತೆ ಮತ್ತೆ ಪ್ರಶ್ನೆ ಕೇಳಬೇಕಮ್ಮ ?
  ಹಾಂ ಪುಟ್ಟೀ
  ಈಗ ನೋಡು, ನಾನು ನಿನ್ನ ಯಾವಾಗ್ಲಾದ್ರೂ ಇಂಥಾ ಪ್ರಶ್ನೆ ಕೇಳ್ತೀನಾ ಅಮ್ಮ?
  ? ? ?
  ...........................ನಿನಗೆ ಗೊತ್ತಲ್ಲ ಪುಟ್ಟೀ ನಾನು ನಿನಗೆ ಉತ್ತರಕೊಡೋಕೆ ಆಗೊಲ್ಲಾ ಅಂತ....ಅದಕ್ಕೇ ನೀನು ನನ್ನ ಕೇಳೊಲ್ಲ ಅಲ್ವಾ?

  ReplyDelete
 44. ಮಹೇಶ್, ಆನಂದಣ್ನನ ಆನಂದಹರಣ ಆಗೊಯ್ತಾಲ್ಲ ಅದಕ್ಕೆ ಮತ್ತೆ ತಪಸ್ಸು ಮಾಡೋಕೆ ಹಿಮಾಲಯಕ್ಕೆ ಹೋಗಿದ್ದನೆ ಅಂತ ಸುದ್ದಿ

  ReplyDelete
 45. ಗುರು, ಧನ್ಯವಾದ..ನಿಮ್ಮಲ್ಲಿಗೆ ಬರ್ತೇನೆ..ಖಂಡಿತಾ....

  ReplyDelete
 46. Superrrrrrrrr sir...sarala padagalalle arthapurna sambhashene....nice one....

  ReplyDelete
 47. ಪ್ರಶ್ನಾವಳಿ ಚನ್ನಾಗಿದೆ ಆದ್ರೆ ಇಲ್ಲಿ ಅಪ್ಪ ಯಾರು ಮಗ ಯಾರು ಅಂತ ಗೊತ್ತಾಗ್ಲಿಲ್ಲ ?

  ReplyDelete
 48. kya baat hai !!! concept is very good.

  ReplyDelete
 49. ಮನಮುಕ್ತಾರವರಿಗೆ ಧನ್ಯವಾದಗಳು...ಏನು ಮಾಡೋದು ಮಗು ಬೆಳೆತಿದ್ದನೆ ಆದ್ರೆ ಅಪ್ಪ ಯಾರೋ ಹಿಡ್ಕೊಂಡಿರೋರ್ಥರ..ಆಲ್ಲೇ ನಿಂತವ್ನೆ..ಏನೂ ಗೊತ್ತಗದೇ...

  ReplyDelete
 50. ಅಶೋಕ್ ತುಂಬಾ ಧನ್ಯವಾದ ಸರ್...

  ReplyDelete
 51. ಮಂಜು...ಇದನ್ನು ಬರೆಯುವಾಗ ನನಗೂ ಕನ್ಫ್ಯೂಸ್ ಆಗುತ್ತೆ ನಾನಾ ಅಪ್ಪ ಅಥವಾ ಅವನಾ ಅಂತ...? ನಿಜ ಅವನ್ದು ತಿಳ್ಕೋ ಬೇಕು ಅನ್ನೋ ಉತ್ಸಾಹ...ನಮಗೆ ಪರ್ಚೋಕೋಬೇಕು ಅನ್ನೋ ತುರಿಕೆ ಅಸಹಾಯಕತೆ...

  ReplyDelete
 52. ಬಾಲು ಸರ್, ಧನ್ಯವಾದ...
  ಕ್ಯಾ ಕಹೆಂ ಲೋಗ್ ಕಹೆತೆ ಹೈಂ ಕೆ ಹಮ್ ಜಾನ್ತೆ ಹೈಂ
  ಖುದ್ ಹಮ್ ಜಾನ್ತೆ ಹೈಂ ಭಲಾ ಕ್ಯಾ ಹಂ ಜಾನ್ತೆ ಹೈಂ

  ReplyDelete
 53. ಆಝಾದ್...

  ಮಗುವಿನ ಪ್ರಶ್ನೆ..
  ಅಪ್ಪನ "ಗೊತ್ತಿಲ್ಲದ" ಉತ್ತರ ತುಂಬಾ ಸೊಗಸಾಗಿ ಬರುತ್ತಿದೆ..

  ಮುಗ್ಧ ಜನರ.
  ಭಾವುಕ ಮನಸ್ಸಿನ ದುರುಪಯೋಗ ಮಾಡಿಕೊಳ್ಳುವ "ನಿತ್ಯಾನಂದನಂಥವನನ್ನು" ಖಾಯಮ್ ಆಗಿ ಜೈಲಿನಲ್ಲಿಡಬೇಕು..

  ಎಲ್ಲ ವಿಡಂಬನೆ ಸೊಗಸಾಗಿದೆ

  ReplyDelete
 54. ಪ್ರಕಾಶ್, ನನಗೂ ಕೆಲವು ಪ್ರಶ್ನೆಗಳಿಗೆ ಉತ್ತರ ಸಿಗುತ್ತಿಲ್ಲ...!! ನಿನಗೆ ಗೊತ್ತಾಯ್ತು ಅನಿಸುತ್ತೆ...
  ನಿತ್ಯಾನಂದನಂತಹವರನ್ನು ಆ ಸ್ಥಾನಕ್ಕೆ ಏರಿಸುವುದರಲ್ಲಿ ಪ್ರಮುಖ ಪಾತ್ರ ಯಾರದ್ದು...ನಮ್ಮದೇ ಅಲ್ಲವೇ..?
  ಭಾವುಕರನ್ನು ಉಪಯೋಗಿಸಿಕೊಳ್ಳುವುದು ಭಾವನೆಗಳೊಂದಿಗೆ ಆಟವಾಡುವ ಎಲ್ಲರಿಗೆ ಬಹಳ ಸುಲಭದ ವಿಷಯ...
  ಥ್ಯಾನ್ಕ್ಸ್ ...ನಿನ್ನ ಪ್ರತಿಕ್ರಿಯೆಗೆ...

  ReplyDelete
 55. ಚೆನ್ನಾಗಿದೆ ಪ್ರಶ್ನೆಗಳು..... ಉತ್ತರ ಸಿಗುವುದು ಕಷ್ಟವಾಗಿಯೇ ಇದೆ...

  ReplyDelete
 56. ಸುಧೇಶ್, ಧನ್ಯವಾದಗಳು...ಪ್ರಶ್ನೆಗಳಿಗೆಲ್ಲಾ ಉತ್ತರ ಸಿಗೋದಿಲ್ಲ ಅಲ್ಲವಾ ಅದ್ರಲ್ಲೂ ಮಕ್ಕಳ ಪ್ರಶ್ನೆಗೆ ಉತ್ತರ ಹುಡುಕೋದು ಇನ್ನೂ ಕಷ್ಟ,,,

  ReplyDelete
 57. uttara huduki huduki appa sustagirbeku adakke gottila gottila anta heltane irtare yavaglu alva? haha tumba chennagide uttara sigada prashnegaLu

  ReplyDelete
 58. ಮಗುವಿನ ಈ ಪ್ರಶ್ನೆಗಳಿಗೆ ಉತ್ತರ ಸಿಕ್ಕ ದಿನವೇ...ನಮ್ಮೆಲ್ಲರ ಕಲ್ಯಾಣ ಅಂದ್ಕೊಳ್ಳಿ...ಮನಸು ಮೇಡಂ...ಯಾಕೆ ಗೊತ್ತಾ..ನಿಮ್ಮ ಅನದೊಳಗಿನ ಪ್ರಶ್ನೆಗೇ ನಿಮ್ಮಲ್ಲಿ ಉತ್ತರ ಸಿಕ್ಕಂತೆ...ಧನ್ಯವಾದ..ಕಾಯೋಣ ಉತ್ತರಸಿಗೋವರೆಗೂ..ಆದರೆ ಮಗು ಮತ್ತೊಂದು ಪ್ರಶ್ನೆ ಕೇಳೋಲ್ಲಾ ಅಂತ ಗ್ಯಾರಂಟಿ ಇಲ್ಲ...ಅಲ್ಲವಾ..?

  ReplyDelete
 59. ಜಲನಯನ ಮೇಡಂ..ಅಲ್ಲಲ್ಲ ಸಾರ್ ಈ ಬರಹ ತುಂಬಾ ಮಾರ್ಮಿಕವಾಗಿದೆ.ಹಾಗೆಯೇ ನಿಮ್ಮ ಬ್ಲಾಗ್ ೧ ವರ್ಷ ತುಂಬಿದ್ದಕ್ಕೆ ಅಭಿನಂದನೆ...
  ನಿಮ್ಮ ಬ್ಲಾಗ್ ನೋಡುತ್ತಿದ್ದೆ..ಪ್ರತಿಕ್ರಿಯಿಸಲು ಆಗಿರಲಿಲ್ಲ

  ReplyDelete
 60. ಅಶೋಕ್ರೇ...ಯಾಕ್ರೀ ಇನ್ನೂ ಕನ್ಫ್ಯೂಜನ್ನು..? ಫೋಟೋ ಸಹಾ ಹಾಕಿದ್ದೀನಲ್ಲಪ್ಪಾ....?? ಹಹಹಹ....ತಮಾಷೆಗೆ ಹೇಳಿದೆ..
  ತುಂಬಾ ಧನ್ಯವಾದಗಳು...ನನ್ನ ಬಲಾಗಿಗೆ ಬಂದು ಪ್ರತಿಕ್ರಿಯೆ ನೀಡಿದ್ದಕ್ಕೆ...

  ReplyDelete
 61. tumba chennagide.. nagu vyayam swalp nimminda agtaayide ellatiru..

  ReplyDelete
 62. ಧನ್ಯವಾದ ಕೀರ್ತಿ...ನಿಮ್ಮ ಅನಿಸಿಕೆ..ಪ್ರತಿಕ್ರಿಯೆಗೆ...ಬರುತ್ತಿರಿ,,

  ReplyDelete