ಮಾ ತುಝೆ ಸಲಾಂ
(ಪ್ರಕಾಶ್ ನ ಇಟ್ಟಿಗೆ ಸಿಮೆಂಟಿಗೂ ಸಲಾಂ)
ಅಣುವಾಗಿ, ಕಣವಾಗಿ ಬೆಳೆವೆ ಜೀವವಾಗಿ
ಅವಳೊಡಲಲಿ ಅವಳ ಕರುಳ ಕುಡಿಯಾಗಿ
ಮಮ್ಮಲತೆಯ ಮರುಗುಡಿಯ ಮರಿಯಾಗಿ
ತಾಯಋಣಕೆಣೆಯಿಲ್ಲ ತೀರಿಸಲಾದೀತೇ
ಪಡೆದು ಬಂದರೂ ಎಷ್ಟೇ ಮರುಜನ್ಮ?
ಅಲ್ಲಿ ಅವಳ ರಕ್ತವೇ ಜೀವ - ನನಗೆ ಜನ್ಮ
ನೋವಿನಲೂ ನಲಿವಳು ಪಡೆದು ಮರುಜನ್ಮ
ಬಸಿರಲಿ ರಕ್ತ ಉಸಿರಲಿ ಮೊಲೆಯೂಡುವಳು
ತಾಯಋಣಕೆಣೆಯಿಲ್ಲ ತೀರಿಸಲಾದೀತೇ
ಪಡೆದು ಬಂದರೂ ಎಷ್ಟೇ ಮರುಜನ್ಮ?
ನೀಡಿ ಸೆರಗಾಸರೆ ತಾ ನೆನೆದರೂ ಮಳೆಯಲಿ
ಮಡಿಲ ಬಿಸಿ ತಾ ಸೊರಗಿದರೂ ಛಳಿಯಲಿ
ಮೊಲೆಯುಣಿಕೆಗೆ ದಣಿವಿಲ್ಲ ಹಸಿವಿದ್ದರೂ ಒಡಲಲಿ
ತಾಯಋಣಕೆಣೆಯಿಲ್ಲ ತೀರಿಸಲಾದೀತೇ
ಪಡೆದು ಬಂದರೂ ಎಷ್ಟೇ ಮರುಜನ್ಮ?
ಕೇಳುವಳು ಕಂದಾ ಹಸಿವೆಯೇ ಹೇಳು?
ಬಿದ್ದೆಯಾ ಪುಟ್ಟಾ ಆಯಿತೇ ಗಾಯ ಹೇಳು?
ಅಲ್ಲಿ ಗಾಜಿನ ಚೂರಿದೆ ನಾ ಬರುವೆ ತಾಳು
ತಾಯಋಣಕೆಣೆಯಿಲ್ಲ ತೀರಿಸಲಾದೀತೇ
ಪಡೆದು ಬಂದರೂ ಎಷ್ಟೇ ಮರುಜನ್ಮ?
ನೋಯಿಸಿದರೂ ಅವಳ ಮನ ಹಲವೊಮ್ಮೆ
ಅಮ್ಮ ಎಂದೊಡನೆ ನಕ್ಕು ಬಿಡುವಳು ಎಲ್ಲಮರೆತು
ಮುತ್ತಿಗಾಗಿ ಹೆತ್ತವಳ ರಕ್ತ ಕಣ್ಣೀರಿಗೆ ಕಾರಣವಾದರೂ
ಅಮ್ಮಾ ತಪ್ಪಾಯ್ತು ಎಂದೊಡನೆ ಅಪ್ಪಿಕೊಂಡುಬಿಡುವಳು
ಅಮ್ಮಾ ತಪ್ಪಾಯ್ತು ಎಂದೊಡನೆ ಅಪ್ಪಿಕೊಂಡುಬಿಡುವಳು
ತಾಯಋಣಕೆಣೆಯಿಲ್ಲ ತೀರಿಸಲಾದೀತೇ
ಪಡೆದು ಬಂದರೂ ಎಷ್ಟೇ ಮರುಜನ್ಮ?
ಮಹಿಳಾ ದಿನಾಚರಣೆಯ ದಿನ ಮಹಿಳೆಯನ್ನು ತಾಯಿಯಾಗಿ ಕಂಡು, ಅವಳಿಗೆ ‘ಮಾ ತುಝೆ ಸಲಾಮ್’ ಎಂದು ನೀವು ಹಾಡಿದ್ದು ಅರ್ಥಪೂರ್ಣವಾಗಿದೆ. ಭಾವಪೂರ್ಣ ಕವನ.
ReplyDeleteಅಭಿನಂದನೆಗಳು.
ಸುನಾಥ್ ಸರ್ ಧನ್ಯವಾದ....ಅವಳ ಮಮತೆಗೆ, ಪ್ರೇಮಕ್ಕೆ, ಕಕ್ಕುಲತೆಗೆ, ದಯೆಗೆ, ಕ್ಷಮಾಗುಣಕ್ಕೆ .....ಸಲಾಂ ....ಕೋಟಿ ಸಲಾಂ....ಅಲ್ಲವೇ...
ReplyDeleteಅದ್ಭುತ ಸರ್
ReplyDeleteಆ ಶಬ್ದಗಳ ಮೇಲಿನ ಹಿಡಿತ,
ತಾಯಿಯ ಮೇಲಿನ ಮಮತೆ
ದೇಶದ ಮೇಲಿನ ಪ್ರೀತಿ, ಕಂದನ ಮೇಲಿನ ಒಲವು
ಎಲ್ಲವೋಒ ಸುಂದರವಾಗಿ ವ್ಯಕ್ತವಾಗಿವೆ
ನಿಜಕ್ಕೂ ಮಾ ತುಜೆ ಸಲಾಂ
ಧನ್ಯವಾದ ಗುರು, ತಾಯಿದೇವರು ಎಂದಿರುವುದು ಇದೇ ಕಾರಣಕ್ಕೆ...ಎಲ್ಲ ಧರ್ಮಗಳಲ್ಲೂ ತಾಯಿತೇ ಮಾನ್ಯತೆ.....
ReplyDeleteಮಾ ತುಝೆ ಸಲಾಂ....
"ಮುತ್ತಿಗಾಗಿ ಹೆತ್ತವಳ ರಕ್ತ ಕಣ್ಣೀರಿಗೆ ಕಾರಣವಾದರೂ
ReplyDeleteಅಮ್ಮಾ ತಪ್ಪಾಯ್ತು ಎಂದೊಡನೆ ಅಪ್ಪಿಕೊಂಡುಬಿದುವಳು"
wondeful sentences
ಸುಂದರ ಕವನ
ಅಮ್ಮನಿಗೆ ಸಲಾಂ ಚೆನ್ನಾಗಿದೆ.
ತಾಯಿಯೇ ದೇವರು ಎಂದು ಪೂಜಿಸುವ ನಮ್ಮ ದೇಶದಲ್ಲಿ ನಿಜವಾಗಿಯೂ ಆ ಅರ್ಥ ಉಳಿದಿದೆಯೇ?
ಯೋಚಿಸಬೇಕಾದ ಸತ್ಯ.
thats a nice way of remembering and respecting women as mother. Dr. Azad!! Nice kavana.
ReplyDeletethis was the pic i liked the most in Prakash Hegde blog
:-)
malathi S
.." ಮಾ ತುಝೆ ಸಲಾಮ್". ಸಕಾಲಿಕ ಮತ್ತು ಅರ್ಥಪೂರ್ಣ ಕವನ.
ReplyDeletenice :)
ReplyDeleteಸರ್, ಕಣ್ಣು ತುಂಬಿ ಅಕ್ಷರಗಳೇ ಕಾಣಿಸುತ್ತಿಲ್ಲ . ಗಂಟಲುಬ್ಬಿ ಮಾತುಗಳೇ ಬರುತ್ತಿಲ್ಲ .ವರ್ಣಿಸಲು ಶಬ್ದಗಳೇ ಇಲ್ಲ ಅನ್ನಿಸುತ್ತಿದೆ . ಇದಕ್ಕಿಂತ ಹೆಚ್ಚಿಗೆ ನಾ ಏನು ಹೇಳಲಾರೆ .
ReplyDeleteನೋಯಿಸಿದರೂ ಅವಳ ಮನ ಹಲವೊಮ್ಮೆ
ಅಮ್ಮ ಎಂದೊಡನೆ ನಕ್ಕು ಬಿಡುವಳು ಎಲ್ಲಮರೆತು
ತಾಯಋಣಕೆಣೆಯಿಲ್ಲ ತೀರಿಸಲಾದೀತೇ
,ಪಡೆದು ಬಂದರೂ ಎಷ್ಟೇ ಮರುಜನ್ಮ?
ಮನಸಾರೆ
ಅಜಾದ್ ಸರ್,
ReplyDeleteತುಂಬಾ ಚೆನ್ನಾಗಿದೆ ಕವನ, ಬಹಳನೇ ಅರ್ಥ ಹಾಗೂ ಭಾವನಾಲಹರಿ ತುಂಬಿದೆ.
ತು೦ಬಾ ಚೆನ್ನಾಗಿದೆ.
ReplyDelete"ಮಾ ತುಝೆ ಸಲಾಮ್"....ಹೆಸರಿಗೆ ತಕ್ಕ ಕವನ....
ReplyDeleteತು೦ಬಾ ಚೆನ್ನಾಗಿದೆ....
ಆಜಾದ್ ಸರ್,
ReplyDeleteಕವನ ತುಂಬಾನೇ ಸುಂದರವಾಗಿದೆ, ಬಹಳ ಚೆನ್ನಾಗಿ ಶಬ್ದಗಳನ್ನ ದುಡಿಸಿಕೊಂಡಿದ್ದೀರಿ.
ಪ್ರವೀಣ್ ಧನ್ಯವಾದಗಳು..ಅಮ್ಮನಿಗೆ ನಮನ..ಮನನ ಎಲ್ಲಾ ...
ReplyDeleteಮಾಲ್ತಿ ಮೇಡಂ...ತಾಯ ಋಣ ತೀರದು ಕಡೆತನಕ...ನಿನ್ನುಸಿರು ಇರೋತನಕ...ಅಂತ ಹಿರೀರು ಹೇಳ್ತಾರೆ...ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು..
ReplyDeleteಸುಭ ಸರ್..ಧನ್ಯವಾದ..
ReplyDeleteಸುಮಾವ್ರೆ..ನನ್ನಿ..ನಿಮ್ಮ ಪ್ರತಿಕ್ರಿಯೆಗೆ..
ReplyDeleteಮನಸಾರೆಯವರ ಮನಸ್ಸರೆ ಮಾತಿಗೆ ನನ್ನ ಮನಸಾರೆ ಧನ್ಯವಾದಗಳು....ತಾಯಿಗಿಂತ ದೇವರಿಲ್ಲ ಎಮ್ದು ವೇದಗಳೇ ಸಾರಿವೆ..ಕಣ್ಣಿಗೆ ಕಾಣುವ ಮೊದಲನೇ ದೇವರೇ ಅಮ್ಮ...ಯಾಕೆ ..? ನಮ್ಮ ಜನ್ಮಕಾರಣಳು ಅವಳು..ಅದಕ್ಕೆ...ಥ್ಯಾಂಕ್ಸ್
ReplyDeleteಮನಸು ಮೇಡಂ...ತಾಯಿ ಎಂದಿಗೂ ತಾಯಿ..ಮಗ..ಆಗ್ತಾನೆ ಅಮ್ಮವ್ರ ಗಂಡ...ಹಹಹಹ....!!
ReplyDeleteಮನಮುಕ್ತಾರವರಿಗೆ ಧನ್ಯವಾದಗಳು...ನಿಮ್ಮ ಅನಿಸಿಕೆಯ ನಮೂದನೆಗೆ...
ReplyDeleteಮಹೇಶಣ್ಣ...ಮಾ ತುಝೆ ಸಲಾಂ ..ತೇರಿ ಮಮತಾಕೋ ಸಲಾಂ ತೇರಿ ಪ್ಯಾರ್ ಕೋ ಸಲಾಂ ಹೀಗೆಲ್ಲಾ ಹೇಳಬೇಕಾಗುತ್ತೆ...ಧನ್ಯವಾದ ನಿಮ್ಮ ಬೆನ್ನು ತಟ್ಟುವಿಕೆಗೆ
ReplyDeleteಸಾಗರಿಯವರೇ...ಸ್ವಾಗತ...ತಾಯ ಕೂಗಿಗೆ ಬಂದ್ರಲ್ಲಾ..ಮತ್ತೆ ನಿಮ್ಮ ಪ್ರತಿಕ್ರಿಯೆನೂ ಹಾಕಿದ್ದೀರಿ...ಧನ್ಯವಾದ.
ReplyDeleteThis comment has been removed by the author.
ReplyDeleteಅಬ್ಬಾ.....ನನಗೆ ನಿಜವಾಗ್ಲೂ ಗೂಸ್ ಬಂಪ್ಸ್ ಬಂತು ಆಜಾದ್ ಭಯ್ಯಾ ....ಎಷ್ಟು ಸುಂದರವಾಗಿ ಪದಗಳನ್ನ ಹೆಣೆದು ತಾಯಿಯ ಹಿರಿಮೆಯನ್ನ ಕೊಂಡಾಡಿದ್ದೀರಿ .......ಇಷ್ಟು ಒಳ್ಳೆಯ ಕವಿತೆಯನ್ನು ನಮಗೆ ಕೊಟ್ಟ ನಿಮಗೆ ನನ್ನ ಸಲಾಮ್....
ReplyDeleteಅಜಾದ್,
ReplyDeleteನಾನು ನಿರೀಕ್ಷಿಸಿದ್ದೆ. ನಿಮ್ಮಿಂದ mothers day ಗಾಗಿ ಒಂದು ಕವನ ಬರಬಹುದು ಅಂತ. ನನ್ನ ನಿರೀಕ್ಷೆಯಂತೆ ತುಂಬಾ ಚೆನ್ನಾಗಿ ಬರೆದಿದ್ದೀರಿ. ಅರ್ಥ ಕೊಡುವ ಪದಗಳ ಬಳಕೆಯಿಂದ ತಾಯಿ ಪ್ರೀತಿ, ಮಮತೆ ವಾತ್ಸಲ್ಯ, ತ್ಯಾಗ...ಎಲ್ಲವನ್ನು ಚೆನ್ನಾಗಿ ಪ್ರತಿಬಿಂಬಿಸಿದ್ದೀರಿ...
ನಿನ್ನ ಭಾವನೆಗಳ ಪ್ರಕಟಣೆಗೆ ಧನ್ಯವಾದ...ಓ ಮನಸೇ...ಅಮ್ಮ ಎನ್ನುವಪದದಲ್ಲಿನ ಸೆಳೆತ ಯಾವ ಗುರುತ್ವ ತತ್ವಕ್ಕೂ ಇಲ್ಲ....ಮದುವೆಯಾಗಿ ತಾಯಿಯ ಮುದ್ದಿನ ಮಗ ಮುತ್ತುಕೊಡುವಳು ಬಂದಳೆಂದು ಹೆತ್ತವಳನ್ನು ಘಾಸಿಗೊಳಿಸುತ್ತಾನಂತೆ ...ತನ್ನ ಗಂಡ ತನ್ನ ಅತ್ತೆಯತ್ತ ಮತ್ತೆ ಹೊರಳಬಾರದೆಂದು...ತನಗೆ ಬಹು ಘೋರ ಕಾಹಿಲೆಯ ನಟನೆ ಮಾಡುವಳಂತೆ..ಅದಕ್ಕೆ ಔಷಧಿ ಯೆಂದರೆ ತಾಯಹೃದಯವೆನ್ನುತ್ತಾಳಂತೆ...ತಾಯಬಳಿ ತನ್ನ ಗೋಳನ್ನು ಹೇಳಿಕೊಂಡ ಮಗನಿಗೆ ತಾಯಿ ನಗುನಗುತ್ತ ಹೃದಯವನ್ನು ಕಿತ್ತು ಕೊಡುತ್ತಾಳಂತೆ...ಅದನ್ನು ತೆಗೆದುಕೊಂಡು ಹೆಂಡತಿಯನ್ನು ಉಳಿಸಲು ಓಡಿದ ಮಗ ಎಡವಿಬೀಳ್ತಾನಂತೆ....ತಾಯಿ ಹೃದಯ ದೂರ ಹೋಗಿ ಬೀಳುತ್ತಂತೆ...ಸಾವರಿಸಿ ಎದ್ದ ಮಗ ಮತ್ತೆ ಆ ಹೃದಯವನ್ನು ಎತ್ತಿಕೊಳ್ಳಲು ಹೋದಾಗ ....ಮೆಲ್ಲನೆ ಮಿಡಿಯಿತಂತೆ ಆ ತಾಯ ಹೃದಯ..ನಿಧಾನವಾಗಿ ಕೇಳಿತಂತೆ.. ‘ಹಾ..ಕಂದಾ ಬಿದ್ದೆಯಾ..ಪೆಟ್ಟಾಯಿತೇ ತಂದೆ ನಿನಗೆ....?!!!‘
ReplyDelete..............ಓಹ್.....ಮಾ ತುಝೆ ಸಲಾಂ
ಶಿವು, ನಿಮ್ಮ ಅಭಿನಂದನೆಗೆ ಪಾಲುದಾರ...ಪ್ರಕಾಶ..ನಮ್ಮೆಲ್ಲರ ನೆಚ್ಚಿನ ಇಟ್ಟಿಗೆ-ಸಿಮೆಂಟು...
ReplyDeleteಅವನ ಬ್ಲಾಗಿನ ಚಿತ್ರಗಳೇ ನನಗೆ ಸ್ಫೂರ್ತಿ...ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ...
bhaiyya .. tumba chennagide kavana ..
ReplyDeleteheloke padagalilla !
ರಂಜು ಥ್ಯಾಂಕ್ಸ್....ಅಮ್ಮನ ಮಮತೆಗೆ ಮಮತೆಯೇ ಉತ್ತರ...ಆ ಮಗು ಅಮ್ಮನಾದಾಗ...ಗಂಡಿಗೆ ಆ ಭಾಗ್ಯ ಸಿಗದು...
ReplyDeleteಹೆತ್ತತಾಯೊಯ ಋಣವನ್ನು ಎಂದೂ ತೀರಿಸಲಾಗದು. ಅದಕ್ಕೇ ಹೇಳಿದ್ದು ತಾಯಿಗಿಂದ ದೊಡ್ಡ ದೇವರಿಲ್ಲವೆಂದು. ಎಲ್ಲರೂ ತಮ್ಮ ಹೆತ್ತತಾಯಿಯನ್ನು ಎದೆಯಾಳದಿಂದ ಪೂಜಿಸಿದಲ್ಲಿ ಈ ಜಾತಿ, ಧರ್ಮ, ದೇವರುಗಳ ನಡುವಿನ ತಿಕ್ಕಾಟವೇ ಇರುತ್ತಿರಲಿಲ್ಲ ಅಲ್ಲವೇ?
ReplyDeleteಚೆನ್ನಾಗಿದೆ ಕವನ. ಪ್ರಕಾಶಣ್ಣನವರ ಬ್ಲಾಗಿನಲ್ಲೇ ಈ ಫೋಟೋ ನೋಡಿ ತುಂಬಾ ಮೆಚ್ಚಿಕೊಂಡಿದ್ದೆ.
nice poem
ReplyDeleteಅಜಾದ ಸರ್,
ReplyDeleteದೇವರು ತಾನು ಎಲ್ಲಾ ಕಡೆ ಇರಲಾಗದ್ದರಿ೦ದ "ತಾಯಿ" ಯನ್ನು ಕರುಣಿಸಿದನ೦ತೆ...ಅ೦ತೆ ಕ೦ತೆ ಗಳೇನೇ ಆದರೂ...ತಾಯಿಯೇ ದೇವರು ಅನ್ನೊ ಮಾತ೦ತೂ ಸತ್ಯ..ಪ್ರಪ೦ಚದಲ್ಲಿ ಕೆಟ್ಟ ತ೦ದೆಯಿರಬಹುದು,ಕೆಟ್ಟ ಮಗನಿರಬಹುದು,ಕೆಟ್ಟ ಅಣ್ಣ ತಮ್ಮ೦ದಿರಿರಬಹುದು,ಕೆಟ್ಟ ಅಕ್ಕ ತ೦ಗಿಯರಿರಬಹುದು...ಆದರೆ ಕೆಟ್ಟ ತಾಯಿ ಇರಲು ಸಾಧ್ಯನೇ ಇಲ್ವ೦ತೆ.
ನಿಮ್ಮೀ ಕವನ ಎಲ್ಲವನ್ನೂ ಒಟ್ಟಿಗೇ ಸಾರಿ ಹೇಳುತ್ತೆ. ಮಾ ತುಜೇ ಸಲಾ೦.
Super saar
ReplyDeleteತೇಜಸ್ವಿನಿ, ಧನ್ಯವಾದ..ಪ್ರಕಾಶನ ಬ್ಲ್ಲಾಗ್ ನೋಡಿ..ಮತ್ತೆ ಸಂಜೆ ಅವನ ಜೊತೆ ಚಾಟ್ ಮಾಡಿ..ನಿನ್ನ ಫೋಟೊ ಹಾಕ್ತೀನಿ ನನ್ನ ಕವನದ ಫ್ರೇಂ ಅಂದೆ..ಹಾಕೋ ಮಾರಾಯ..ನಂದೇನೂ ಅಭ್ಯಂತ್ರ ಇಲ್ಲ ಅಂದ...ಸರಿ..ತಾಯಿಗೊಂದು ಸಲಾಂ ಮೂಡಿಬಿಡ್ತು..
ReplyDeleteಧನ್ಯವಾದ ನಿಮ್ಮ ಅನಿಸಿಕೆಗೆ.
ಸಿತಾರಾಂ ಸರ್ ಥ್ಯಾಂಕ್ಸ್...ತಾಯಿಯ ನಮನದಲ್ಲಿ ಭಾಗಿಯಾದುದಕ್ಕೆ...
ReplyDeleteಶ್ರೀಧರ್ ತಾಯಿಯ ಬಗ್ಗೆ ನಿಮ್ಮ ನಿಲುವನ್ನು ನಿಮ್ಮ ಬ್ಲಾಗಿನಲ್ಲಿ ನೋಡಿದ ನೆನಪು..ನಿಜ...ಕಣ್ಣಿಗೆ ಕಾಣುವ ದೇವರೇ ತಾಯಿ.
ReplyDeleteರವಿಕಾಂತ್...ನಿಮ್ಮ ಮೆಚ್ಚುಗೆ ಅಮ್ಮ ನೀಡುವ ನೀಡೋ ನಿಷ್ಕಲ್ಮಶ ಪ್ರೀತಿಗೆ ಸೇರಲಿ ಎನ್ನೋಣವೇ...ಧನ್ಯವಾದ.
ReplyDeleteಆಝಾದ್...
ReplyDeleteಬೆಳಿಗ್ಗೆ ಏಳುಗಂಟೆಯಿಂದ.. ಕಾಂಕ್ರೀಟ್ ಶುರುವಾಗಿ..
ಮಧ್ಯಾಹ್ನ.. ಮೂರುಗಂಟೆಗೆ ಕಾಂಕ್ರೀಟ್ ಮುಗಿದಿತ್ತು...
ದೈಹಿಕವಾಗಿ ಆಯಾಸಗೊಂಡ ಆತಾಯಿ ತನ್ನ ಕೈಕಾಲು ತೊಳೆದುಕೊಳ್ಳುತ್ತ...
ಮಗುವಿಗೆ ಸಣ್ಣದಾಗಿ ಸ್ನಾನವನ್ನೂ ಮಾಡಿಸುತ್ತ..
ಆ ಮಗುವಿನ ಬಟ್ಟೆಯನ್ನು
ತೊಳೆಯುತ್ತಿರುವ..
ಆ ತಾಯಿಯ ತಾಳ್ಮೆ..
ಪ್ರೀತಿ..
ಮಮತೆ, ವಾತ್ಸ್ಯಲ್ಯ ನೋಡಿದ ನನ್ನಲ್ಲಿ ಶಬ್ಧಗಳಿಲ್ಲವಾಗಿತ್ತು...
ಆ ಫೋಟೊಕ್ಕಿಂತ ಬಹಳ, ಬಹಳ ಸುಂದರವಾಗಿ..
ಭಾವಪೂರ್ಣವಾಗಿ ಕವನ ಬರೆದಿದ್ದೀಯಾ.. ಗೆಳೆಯಾ...
ಮತ್ತೊಮ್ಮೆ ಆ ತಾಯಿ ಹೃದಯಕ್ಕೆ ಸಲಾಮ್....!!
ನಿನ್ನ ಸುಂದರ..
ಭಾವಪೂರ್ಣ ಕವಿತೆಗೂ ನನ್ನ ನಮನಗಳು...
ಚೆನ್ನಾಗಿದೆ ನಿಮ್ಮ ಕಲ್ಪನೆ , ಧನ್ಯವಾದಗಳು
ReplyDeleteಪ್ರಕಾಶ್, ತಾಯಿಯ ಮಮತೆಗೆ ಅವಳ ಸ್ಥಿತಿ ಪರಿಸ್ಥಿತಿ ಯಾವುದೇ ತಡೆಯೊಡ್ಡುವುದಿಲ್ಲ...ಇದು ನಿನ್ನ ಹಲವು ಚಿತ್ರಗಳ ಮೂಲಕ ವ್ಯಕ್ತವಾಗಿದೆ, ಅದರಲ್ಲೊಂದಕ್ಕೆ ನನ್ನ ಭಾವನೆಯ ಚಿತ್ರ ವರ್ಣನೆ ಕೊಡಲು ಪ್ರಯತ್ನಿಸಿದೆ...ಈ ನಿಟ್ಟಿನಲ್ಲಿ ಸ್ವಲ್ಪವಾದರೂ ನ್ಯಾಯವೊದಗಿಸಿದ್ದರೆ...ಧನ್ಯ ನನ್ನ ಪ್ರಯತ್ನ,....ಧನ್ಯವಾದ ನಿನ್ನ ಅತ್ಮೀಯ ಮಾತಿಗೆ...ದೋಸ್ತ್.
ReplyDeleteವಿ.ಆರ್.ಬಿ. ಯವರಿಗೆ ಧನ್ಯವಾದಗಳು...ನಿಮ್ಮ ಪ್ರೋತ್ಸಾಹ ಪ್ರತಿಕ್ರಿಯೆಗೆ.
ReplyDeleteಆಜಾದ್ ಸರ್..ಮಾ ತುಜ್ಜೆ ಸಲಾಂ, ಹಾಗು ಅಷ್ಟೇ ಚೆನ್ನಾಗಿ ವಿವರಿಸಿದ ನಿಮಗೆ ಇನ್ನೂ ದೊಡ್ಡ ಸಲಾಂ, ಜೊತೆಗೆ ಪ್ರಕಾಶಣ್ಣನ ಫೋಟೋಕ್ಕೆ ಕೂಡ..!!
ReplyDeleteHats off to ur wonderful words:)
Azad sir.. nimma baravanige haagu thaayiya prathi iruva bhaava bahala chennaagi moodi bandide.. nimage haagu Prakash avarige namanagalu...
ReplyDeletehaage nanna blog kade banni sir.. nan mele kopa na :) (just kiddin)...infact nangu nimma blog kade hechu baralikke agirlilla... inmunde barteeni...
ತುಂಬಾ ಚೆನ್ನಾಗಿದೆ ಸರ್, ಮನಮುಟ್ಟುವಂತೆ ಇದೆ ನಿಮ್ಮ ಕವನ, ತಾಯಿಯ ಬಗ್ಗೆ ಎಷ್ಟು ಬರೆದ್ರೂ ಕಡಿಮೆ ಆಲ್ವಾ ಸರ್ , ನಿಮ್ಮ ಕವನ ನೋಡಿ ನಾನು ಹಿಂದೆ ಬರೆದ ಸಣ್ಣ ಕವನ ನೆನಪಾಯಿತು...
ReplyDelete೯ ತಿಂಗಳು ನಮ್ಮನ್ನು ಹೊತ್ತವಳೇ ಅಮ್ಮ
ನೋವನ್ನು ಸಹಿಸಿ ಹೆತ್ತವಳೇ ಅಮ್ಮ
ಮಮತೆಯ ಮುತ್ತನ್ನು ಇಟ್ಟವಳೇ ಅಮ್ಮ
ಮೊದಲನೆಯ ತುತ್ತನ್ನು ಕೊಟ್ಟವಳೇ ಅಮ್ಮ
ಆಡುವ ಭಾಷೆಯ ಕಲಿಸಿದವಳೇ ಅಮ್ಮ
ನಾಡು ನುಡಿ ಪರಿಚಯವ ಕೊಟ್ಟವಳೇ ಅಮ್ಮ
ಅಳತೆ ಮೀರಿದ ವಾತ್ಸಲ್ಯಕ್ಕೆ ಇನ್ನೊಂದು ಹೆಸರೇ .........ಅಮ್ಮ...
ಅಮ್ಮನ ಬಗ್ಗೆ ಎಂಥ ಅರ್ಥಪೂರ್ಣ ಸಾಲುಗಳಿವು !...
ReplyDeleteಅಮ್ಮ ಎನ್ನುವ ಶಬ್ಧಕ್ಕೆ ಬಹುಶಃ ಪರ್ಯಾಯವಿಲ್ಲ ಅನ್ನಿಸುತ್ತೆ..
ಅಮ್ಮ = ಅಮ್ಮ......
ಶಬ್ಧಗಳ ಹಿಡಿತ ತುಂಬಾ ಚೆನ್ನಾಗಿದೆ ಸರ್,..ಉರ್ದುವಿನಲ್ಲೂ ಒಳ್ಳೆಯ ಕವನ ಗಳಿದ್ದವಲ್ಲ.. ಕೆಲವನ್ನು ಅನುವಾದಿಸಬಾರದೇಕೆ?
ವನಿತಾ, ತಾಯಿಯ ಮಮತೆಯ ಮುಂದೆ ಎಲ್ಲವೂ ಶೂನ್ಯವಾಗುತ್ತವೆ ಎನ್ನುವುದು..ಎಲ್ಲ ವೇದಾಂತಿಗಳೂ ಒಪ್ಪುವಮಾತು...ಪ್ರಕಾಶ ತನ್ನ ಚಿತ್ರದಮೂಲಕ ನನ್ನಲ್ಲಿದ್ದ ಈ ಭಾವನೆಯ ಮಂಥನಕ್ಕೆ ಕಾರಣ ನಾದ...ಧನ್ಯವಾದ...ಪ್ರತಿಕ್ರಿಯೆಗೆ.
ReplyDeleteರಮೇಶ್...ಧನ್ಯವಾದ ರೀ ನಿಮ್ಮ ಪ್ರತಿಕ್ರಿಯೆಗೆ....ಹೌದು ನಿಮ್ಮ ಬ್ಲಾಗಿಗೆ ಬಮ್ದಿಲ್ಲವೇ ಈ ಮಧ್ಯೆ...ಈಗ ಖಂಡಿತಾ ಹೋಗಿ ಬರ್ತೇನೆ...ಬ್ಲಾಗ್ ಸಮ್ಮೇಳನಕ್ಕೆ ಒಳ್ಳೆಯ ಪ್ರತಿಕ್ರಿಯೆ ಮತ್ತು ಉತ್ಸುಕತೆ ಕಂಡುಬರುತ್ತಿದೆ...
ReplyDeleteಧನ್ಯವಾದ.
ಅಶೋಕ್ ನಿಮ್ಮ ಮಾತಿಗೆ ಮತ್ತು ಪ್ರತಿಕ್ರಿಯೆಗೆ ಧನ್ಯವಾದ...
ReplyDeleteನಿಮ್ಮ ಕವನದ ಸಾಲುಗಳು ತುಂಬಾ ಚನ್ನಾಗಿ ಮೂಡಿವೆ...ತಾಯ ವಿವಿಧ ಪಾತ್ರಗಳನ್ನು ಬಹಳ ಚನ್ನಾಗಿ ವಿವರಿಸಿದ್ದೀರಿ...
ಶ್ವೇತಾ...ನಿಮ್ಮ ಅತ್ಮೀಯತೆಗೆ ಪ್ರತಿಕ್ರಿಯೆಗೆ ಧನ್ಯವಾದ...ಅಮ್ಮನ ಮುಂದೆ ಇನ್ನು ದೇವರಿಲ್ಲ ಎಂದಿದ್ದಾರೆ ಬಲ್ಲವರು...
ReplyDeleteನನ್ನ ಪ್ರಯತ್ನಗಳಿಗೆ ನಿಮ್ಮ ಪ್ರೋತ್ಸಾಹವಿದ್ದರೆ ಪ್ರಯತ್ನ ಖಂಡಿತಾ...
ಆಜಾದ್ ಸರ್,
ReplyDeleteಓದಿದಾಗಲೆಲ್ಲಾ ಗಂಟಲುಬ್ಬಿ ಬರುವ ಸಾಲುಗಳು ಇವು....
ಕೇಳುವಳು ಕಂದಾ ಹಸಿವೆಯೇ ಹೇಳು?
ಬಿದ್ದೆಯಾ ಪುಟ್ಟಾ ಆಯಿತೇ ಗಾಯ ಹೇಳು?
ಅಲ್ಲಿ ಗಾಜಿನ ಚೂರಿದೆ ನಾ ಬರುವೆ ತಾಳು
ತಾಯಋಣಕೆಣೆಯಿಲ್ಲ ತೀರಿಸಲಾದೀತೇ
ಪಡೆದು ಬಂದರೂ ಎಷ್ಟೇ ಮರುಜನ್ಮ?
ನಿಮಗೆ , ನಿಮಗೆ ಈ ಕವನ ವನ್ನು ಬರೆಯಲು ಪ್ರೋಚೋದಿಸಿದ ಪ್ರಕಾಶಣ್ಣ ನಿಗೂ ಸಲಾಂ.....
ಚೆನ್ನಾಗಿದೆ ಕವನ..ಅಮ್ಮನಿಗೆ ಶಬ್ಹಗಳ ಶೃಂಗಾರ...!
ReplyDeleteನಿಮ್ಮವ,
ರಾಘು.
ದಿನಕರ್, ಇದು ಒಂದು ಜುಗಲ್ ಬಂದಿಯಾಗಿ ಮೂಡಿತು...ಅಂದು ಪ್ರಕಾಶನ ಬ್ಲಾಗಿನ ಚಿತ್ರಗಳನ್ನು ನೋಡಿದಮೇಲಿನ...ಭಾವಮಂಥನದ ಪರಿಣಾಮವೇ ಈ ಮಾತೃಪ್ರೇಮಮನನ....
ReplyDeleteರಾಘು ಬಹಳ ದಿನವಾಯ್ತು ನಿಮ್ಮ ನೋಡದೇ...ಬ್ಲಾಗ್ಬಾಗಿನಲ್ಲಿ...ಹಹಹ...ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ...
ReplyDelete'ಜಲನಯನ' ಅವ್ರೆ..,
ReplyDeleteಹೌದು..
ತಾಯಿನೆ ಎಲ್ಲಾ.. ಬದಲಾಗೋದಿಲ್ಲ..
ನನ್ನ 'ಮನಸಿನಮನೆ'ಗೊಮ್ಮೆ ಬನ್ನಿ: http://manasinamane.blogspot.com
This comment has been removed by the author.
ReplyDeleteಗುರುದೆಸೆಯವರೇ...ನಿಮ್ಮ ಮಾತು ನಿಜ ಎಲ್ಲವೂ ತಾಯಿ ತಾಯಿಯೇ ಎಲ್ಲಾ...ತಾಯಿಗೆ ತಾಯಿಯೇ ಸಮ...ಅದಕ್ಕೇ ಹೇಳಿದ್ದು ಆ ಭಾಗ್ಯ ಹೆಣ್ಣಿಗೇ ಎಂದು....ಆಕೆಯೇ ತನಗೆ ಸಮನಾಗಬಲ್ಲಳು...ಇಂದು ಮಗಳು ನಾಳೆ ತಾಯಿ....ಅಲ್ಲವೇ..
ReplyDeleteಆಜಾದ್ ಸಾರ್...
ReplyDeleteಕವನ ತುಂಬಾ ಚೆನ್ನಾಗಿದೆ. "ಅಮ್ಮಾ ನಿನ್ನ ಎದೆಯಾಳದಲ್ಲಿ.... ಮತ್ತು ಅಮ್ಮಾ... ಹಚ್ಚಿದೊಂದು ಹಣತೆ ಇನ್ನೂ ಬೆಳಗಿದೆ...ಮನಕೆ ಮಬ್ಬು ಕವಿಯದಂತೆ ಸದಾ ಕಾದಿದೆ.." ಹಾಡುಗಳು ನೆನಪಾದವು. ಅಮ್ಮಾ ಎನ್ನುವ ಪದವೇ ಅದೆಷ್ಟು ಆತ್ಮೀಯ.... ಬೇರೆ ಯಾವುದಕ್ಕೂ ಹೋಲಿಸಲಾಗದ ಒಂದೇ ಒಂದು ಈ ಪ್ರಪಂಚದಲ್ಲಿ "ತಾಯಿ ಮತ್ತು ತಾಯಿ ಪ್ರೀತಿ"...... ಅದರಲ್ಲೂ ಕಳೆದುಕೊಂಡಿರುವ ನನ್ನಂಥವರಿಗೆ ಅದರ ನೋವು ಗೊತ್ತು...
ಶ್ಯಾಮಲ
ಶ್ಯಾಮಲಾ, ನಿಮ್ಮ ಮಾತು...ಅಕ್ಷರಶಃ ನಿಜ...ಮಾ, ಅಮ್ಮ, ಮಮ್ಮ, ಮಾತಾ, ಮದರ್...ಎಲ್ಲ ಭಾಷೆಯ ಸ್ವಾಮ್ಯ್ ಇದಕೆ ಉದಾಹರಣೆ...ತಾಯ ಮಮತೆಯ ಸಮ...ತಾಯ ಮಮತೆಯೇ...ಅದಕ್ಕೇ ನಾನು ಹೇಳಿದ್ದು..ಹೆಣ್ಣಿಗೆ ಮಾತ್ರ ಸಾಧ್ಯ ಅದನ್ನು ಅನುಭವಿಸೋಕೆ..ಮಗಳಾಗಿ..ತಾಯಿಯಾಗಿ...ಧನ್ಯವಾದ..ನಿಮ್ಮ ಪ್ರತಿಕ್ರಿಯೆಗೆ.
ReplyDeleteನಿಜ ಸರ್. ಬರೀ ಮನುಷ್ಯರಲ್ಲಿ ಮಾತ್ರವಲ್ಲ, ಪ್ರಾಣಿಗಳಲ್ಲೂ ತಾಯಿ ಮಮತಾಮಯಿಯೇ. ಬೆಕ್ಕು, ನಾಯಿ, ದನ, ಹ್ಹುಲಿ, ಆನೆ... ಯಾವ ಪ್ರಾಣಿಯೇ ಆಗಲಿ ತನ್ನ ಕರುಳ ಕುಡಿಗಾಗಿ ಮಾಡುವ ತ್ಯಾಗ ವರ್ಣಿಸಲು ಸಾಧ್ಯವಿಲ್ಲ. ತನ್ನ ಮರಿ ಅಪಾಯದಲ್ಲಿ ಇದೆ ಎಂದು ತಿಳಿದ ತಕ್ಷಣ ತನ್ನ ಜೀವವನ್ನು ಲೆಕ್ಕಿಸದೆ ಮರಿಯನ್ನು ಉಳಿಸಲು ಹೋರಾಡುತ್ತವೆ
ReplyDeleteತುಂಬಾ ಚೆನ್ನಾಗಿದೆ ಸರ್, ಅಮ್ಮ ಬಗ್ಗೆ ಎಷ್ಟು ಹೇಳಿದರೂ ಕಮ್ಮಿಯೇ ಬಿಡಿ... ಹೆಣ್ಣಿನ ಒಂದು ಮುಖ್ಯ ಮಹತ್ತರ ಪಾತ್ರವೇ ತಾಯಿ, ಅಮ್ಮ...
ReplyDeleteಮಗು ಪ್ರಶ್ನೆಗಳೂ ಸೂಪರ್ ಆಗಿದ್ವು...
ದೀಪಸ್ಮಿತಾವ್ರೇ, ಹೌದು ತಾಯಿ ಮಾನವ ಅಥವ ಪ್ರಾಣಿ ಏನೇ ಆದರೂ ತನ್ನ ಮರಿಗಾಗಿ ಮಾಡುವ ತ್ಯಾಗ..ಬಹಳ ಮಹತ್ವದ್ದು...ಕೋಳಿಯ ಪುಟ್ಟ ಪುಟ್ಟ ಮುದ್ದು ಮರಿಯನ್ನು ಹಿಡಿಯಲು ಹೋದ ನನ್ನ ಬಾಲ್ಯದ ನೆನಪು ಈಗಲೂ ಹಸಿರಾಗಿದೆ...ತಾಯಿ ಕೋಳಿ ನನ್ನ ಕೈಯನ್ನು ಕುಟುಕಿತ್ತು,,,,
ReplyDeleteಪ್ರಭು, ನಿಮ್ಮ ಮಾತು ನಿಜ ಅಮ್ಮನಿಗೆ ಅಮ್ಮನೇ ಸಾಟಿ.....ಮಾ ತುಝೆ ಸಲಾಮ್...ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ.
ReplyDeleteತಾಯಋಣಕೆಣೆಯಿಲ್ಲ ತೀರಿಸಲಾದೀತೇ
ReplyDeleteಪಡೆದು ಬಂದರೂ ಎಷ್ಟೇ ಮರುಜನ್ಮ?
wonderful fantastic lines sir.. :) :)
Snow white, ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದ.
ReplyDeleteಮಾ ತುಜೆ ಸಲಾಂ
ReplyDeleteಹೃದಯದ ಅಂತರಾಳದಿಂದ ಹರಿದು ಬಂದ
ಒಂದು ಉತ್ತಮ ಕವನ
ಜೈ ಹೋ ಆಜಾದ್
ಡಾ ||ರಾಜಮುರ್ತಿ