Thursday, March 25, 2010

ಒಂದ್ಗುಟ್ಕು ಆಕ್ಕೊಂಡ್ರೆ ಬ್ಲಾಗು

ನನ್ಪಾಡಿಗ್ ನಾನಿದ್ದೆ


ಸಂಸೋದ್ನೆ ಮಾಡ್ತಿದ್ದೆ


ಅದೂ ಇದೂ ಬರೀತಿದ್ದೆ


ಕವ್ನಾಂತ ಒಂದಿಷ್ಟು ಗೀಚ್ತಿದ್ದೆ


ನಾಟ್ಕದ್ದೂ ಗೀಳು ಇದ್ದದ್ದೇ


ಬಾಳ್ವೇಗೆ ಸಂಸೋದ್ನೆ


ಉಲ್ಲಾಸ್ಕೇ ಗೀಚೋದ್ನೆ


ಮಾಡ್ಕಂಡ್ ನನ್ಲೋಕ್ದಾಗೆ


ಅಕ್ಕಿಯಂಗೆ ಇರ್ತಿದ್ದೆ


ಗೀಚಿದ್ದು ಪೇಪರ್ನ್ನಾಗಿಡ್ತಿದ್ದೆ


ಆವಾಗಾವಾಗ ಬರ್ದಿದ್ದು ನಾನೇ ಓದ್ತಿದ್ದೆ


ನನ್ನ್ ಬೆನ್ನ ನಾನೇ ತಟ್ತಿದ್ದೆ.




ಒಂದ್ಸರ್ತಿ ‘ಮನ್ಸು' ಅಚ್ಬುಡ್ತು


ಬ್ಲಾಗ್ಲೋಕಕ್ಕೆ ನನ್ನ ತಂದ್ಬುಡ್ತು


ಮೊದ್ಮೊದ್ಲು ಒಂದೊಂದು


ಆಮೇಲಾಮ್ಯಾಕೆ ಹತ್ತೊಂದು


ಸ್ನೇಯಿತ್ರು ಅತ್ಸ್ ಬುಟ್ರು ಅಟ್ಟ..


ಬಲ್ ಬರೀತೀ ಅಂದ್ಬುಟ್ರು


ನಾನೂ ಅತ್ತೇ ಬುಟ್ಟೆ..ಅಟ್ಟ


ಮುಟ್ತಾ ಓದೆ ಒಂದೊಂದೇ ಘಟ್ಟ


ಈಗ ಬ್ಲಾಗ್ ಅಂದ್ರೆ ಒಂದ್ರೀತಿ


ಕುಡ್ಕಂಡoಗೆ ಕಂಠ್ಮಟ್ಟ


ಇಂಗೇ ಬಂದ್ಬುಟ್ರೆ ಮೂಡು


ಮೂಡ್ತಾದೆ ಬರಹ್ದಾಗೆ ಕೋಡು


ಪದ್ಗೋಳ್ ಹಿಡೀತಾವೆ ಜಾಡು


ಸೇರೇ ಬಿಡ್ತಾವೆ ಬ್ಲಾಗನ್ನೋ ಬೀಡು.


ಎಂಡ ಎಂಡ್ತಿ ಆಗೋಯ್ತು ಅಳ್ತು


ಬ್ಲಾಗ್ ಅನ್ನೋ ಚಟಕ್ಕೆ


ಜಲನಯನ ಬೀಳ್ತು.

65 comments:

  1. ಹ ಹ ಹ....ತುಂಬಾ ಚೆನ್ನಾಗಿ ಬರ್ದೀದೀರಿ ಭಯ್ಯಾ...ನೀವು ಹೇಳಿದಂಗೆ ಇದೂ ಒಂದು ರೀತಿಯ ಚಟಾನೇ. ಅದರ ಗುಂಗಿನಲ್ಲೇ ಇರುವಂತೆ ಮಾಡುತ್ತೆ ಈ ಬ್ಲಾಗಾಯಣ ಅಲ್ವಾ...:))

    ReplyDelete
  2. ಆಜಾದ್ ಸರ್,
    ಸೂಪರ್..... ಮೂರು ಮೂರು ಸಾರಿ ಓದಿದೆ ....ಅರ್ಥ ಆಗದೆ ಅಲ್ಲ..... ಖುಷಿ ಆಗಿ....... ನೀವು ಅಟ್ಟದ ಮೇಲೆ ಇದೀರಿ ಸರ್..... ಇರುತ್ತೀರಿ ಕೂಡ..... you deserve ....

    ReplyDelete
  3. ಸರ್
    ಚನ್ನಾಗಿದೆ ನಿಮ್ಮ ಬ್ಲಾಗ್ ಚಟ....
    ಬ್ಲಾಗ್ ಪರ್ಪ೦ಚದಾಗೆ ಜಲನಯನ ಅವರ ಕವನಧಾರೆ ಅನ್ನಬಹುದಾ...?

    ReplyDelete
  4. ಓ ಮನಸಿನ ತಂಗಿ...ನಿನ್ನ ಭಯ್ಯಾನ ಭಂಗಿಗೆ ನಿನ್ನ ನವಾಜಿಶ್ ಪಸಂದ್ ಆಯ್ತು...
    ಶುಕ್ರಿಯಾ..ಮೆಹರ್ಬಾನಿ ಎನ್ನಲೇ..ಜೀತೀ ರಹೋ ಬೆಹನಾ ಎನ್ನಲೇ...

    ReplyDelete
  5. ದಿನಕರ್...ನಿಮ್ಮ ಪ್ರತಿಕ್ರಿಯೆ ಇಲ್ಲದೆ ಜಲನಯನ ಬ್ಲಾಗೇ ಇಲ್ಲ ಎನಿಸ್ಲಾರಂಭಿಸಿದೆ ಈ ಮಧ್ಯೆ...ಪ್ಯಾಂಪರ್ ನನ್ನ ಮಾಡೋದ್ರಲ್ಲಿ ನೀವೂ ಭಾಗಿ ಅನ್ನಲೇ...ಆದ್ರೆ..ನಿಮ್ಮ ಪ್ರೋತ್ಸಾಹಕ್ಕೆ ಎಷ್ಟು ಧನ್ಯವಾದ ಹೇಳಿದರೂ ಸಾಲದು...ಧನ್ಯವಾದ

    ReplyDelete
  6. ವಿಜಯಶ್ರೀಯವರೇ, ಬ್ಲಾಗ್ ಚಟ..ಆದ್ರೂ ನನಗೆ ಕಿಕ್ ಕೊಡುತ್ತಲ್ಲಾ....
    ಹಹಹ...ನಿಮ್ಮಂಥ ಸ್ನೇಹಿತರು ಈ ಮಟ್ಟಕ್ಕೆ ಜಲನಯನ ಬರಲು ಸಾಧ್ಯವಾಯಿತು...ಧನ್ಯವಾದ

    ReplyDelete
  7. ಪದಗಳ ಆಯ್ಕೆ ತುಂಬಾ ಚೆನ್ನಾಗಿತ್ತು..ಬ್ಲಾಗುರ ಬಾವಿಗೆ 'ಜಲ'ನಯನವು ಬಿತ್ತು.. :)
    ನಿಮ್ಮವ,
    ರಾಘು.

    ReplyDelete
  8. ಭೈಯ್ಯ ಕವನ ಸುಪರ್ರೋ ಸೂಪರ್ರು .... "ಹೇಳ್ಕೊಲ್ಲಕ್ಕ್ ಒಂದೂರು ತಲೆ ಮ್ಯಾಲೆ ಒಂದ್ ಸೂರು " ಹಾಡ್ ಕೆಳ್ದಂಗೆ ಆಯ್ತು :)
    ನಿಜ ಬ್ಲಾಗು ಒಂತರಾ ಚಟಾನೆ ಆಗಿ ಬಿಡತ್ತೆ ಅಲ್ವ :)

    ReplyDelete
  9. ಆಜಾದ್ ಸರ್/ Modern ರನ್ನ,
    ವರ್ಣಿಸಲಸದಳ!!!!!!!!!!!!!! ನಾನು ಕೂಡ ೩-೪ ಸಾರಿ ಓದಿದೆ..ತುಂಬಾ ಇಷ್ಟ ಆಯಿತು:)..ಹೀಗೆ ಬರೀತಾ ಇರಿ:)
    ನಿಜವಾಗಲು ಈ ಬ್ಲಾಗ್ ಕೂಡ ಒಂದು addiction!!!

    ReplyDelete
  10. ಸೂಪರ್ ಧಣಿ.....
    ಬರೀತಾ ಇರಿ....
    ಅಟ್ಟದ ಮೇಲಿಂದ ಇಳಿಯಬೇಡಿ....

    ReplyDelete
  11. ಇಷ್ಟೆಲಾ ಆದ್ಮೇಕೆ ಅಟ್ಟ ಬುಟ್ ಇಳಿಬಾರ್ದು
    ಇನ್ನೂ ಮ್ಯಾಕೇರೋದ್ ನೋಡ್ತಾ ಇರ್ಬೇಕು
    ತಿರುಗೊಮ್ಮೆ ನೋಡಿ ಕಲ್ತ್ಕೋಂಡು ಪಾಠ
    ಮುಂದಕ್ಕೋಗ್ಲಿ ಜಲನಯನದ್ ಆಟ !!

    ReplyDelete
  12. ನೈಸ್ .ನಿಮ್ಮ ಬ್ಲಾಗಿಂಗ್ ಚಟ ಇನ್ನಷ್ಟು ಹೆಚ್ಚಾಗಲಿ!!! :)

    ReplyDelete
  13. ಜಲನಯನ್ ಸರ್,
    ಈ ಹೊಸ ರತ್ನನ್(ಜಲನಯನ್) ಚಟ ಚೆನ್ನಾಗಿದೆ , ಇದನ್ನ ಎಂದು ಬಿಡಬೇಡಿ . ಕೋತಿ ತಾನು ಕೆಡುದಲ್ಲದೆ ವನ ಕೆಡಿಸಿತು ಅಂತ ನಮ್ಮನು ಈ ಚಟಕ್ಕೆ ಹಚ್ಚಿ ಬಿಟ್ಟಿದ್ದಿರ ಹಹ್ಹಹ . ನಿಮ್ಮ ಪ್ರೋತ್ಸಾಹ ಇಲ್ಲದಿದ್ದರೆ ನಾವು ಈ ಚಟ ಯಾವಾಗೋ ಬಿಡ್ತಿದ್ವಿ .

    ಮನಸಾರೆ

    ReplyDelete
  14. ಅದ್ಭುತ ಸಾಲುಗಳು ಅಜ಼ಾದರೇ!!!
    "ರತ್ನ" ಮತ್ತೆ ಹುಟ್ಟಿದ!!!!
    ಜೆಪಿರಾ ಮತ್ತೆ ತಿರುಗಿ ಬ೦ದರಾ....
    ಅನ್ನೊಷ್ಟು ಮಟ್ಟಿಗೆ ಕವನ ಆಪ್ತವಾಗಿದೆ. ಸಣ್ಣ ವಿಷಯವನ್ನ ಹಿಡೀದು ಜಾಡು ಏಳೆವ ತಮ್ಮ ಪದಜಾಲಗಳ ಪರಿ ಅಧ್ಭುತ!! ಅತ್ಯದ್ಭುತ!!!!!
    ಧನ್ಯವಾದಗಳು.

    ReplyDelete
  15. ಚೆನ್ನಾಗಿದೆ... ಹೀಗೆ ಸಾಗಲಿ ನಿಮ್ಮ ಜಲನಯನದ ಪಯಣ..

    ReplyDelete
  16. ಅಜಾದ್,

    ನನ್ದೂ ಇದೇ ಕತಿಯಾಯ್ತಲ್ಲ ಸಾಮಿ?

    ReplyDelete
  17. :-) ಸಕತ್ತಾಗಿದೆ.. ನಿಮ್ನ ಅಟ್ಟ ಹತ್ಸಿರೋದು ಸರೀಗೆ ಇದೆ ಬಿಡಿ.. ಅಟ್ಟದಲ್ಲೇ ನಿಂತ್ಕೊಂಡು ಇನ್ನೂ ಏನೇನ್ ಕಾಣುತ್ತೋ ಬರ್ದೇ ಬಿಡಿ.. ನಾವು ಕಾಯ್ತಿದೀವಿ..!!

    ReplyDelete
  18. 'ಜಲನಯನ ' ಅವ್ರೆ..,
    ತುಂಬಾನೆ ಚೆನ್ನಾಗಿ ಬರೆದಿದ್ದೀರಿ.. ನಿಮ್ಮ ಹಾದಿ/

    ನನ್ನ 'ಮನಸಿನಮನೆ'ಗೊಮ್ಮೆ ಬನ್ನಿ:http://manasinamane.blogspot.com

    ReplyDelete
  19. hahaha,,,sooperb aagide siiiir...

    ratnana padagala nenapu baruttide...

    urdu kavite translationnu yaavaga barutte sir?
    urdu kalioke hode naanu ,but Hindine nettage barolla adikke sumne kutgondidini..

    ReplyDelete
  20. ಜಲನಯನ ಸರ್,
    ತುಂಬಾ ಚೆನ್ನಾಗಿದೆ. ಪ್ರಾದೇಶಿಕ ಭಾಷೆಯನ್ನು ಎಷ್ಟು ಸುಲಲಿತವಾಗಿ ಬಳಿಸಿ ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸಿದ್ದೀರಿ.

    ReplyDelete
  21. ಜಲನಯನ,
    ಬ್ಲಾ^ಗ್ ಪರ್ಪಂಚ್ ಇರೋವರ್ಗೂ
    ಕನ್ನಡ್ ಪದಗೋಳ್ ನುಗ್ಲಿ!

    ReplyDelete
  22. ರಾಘು...ಜಲನಯನ ಬ್ಲಾಗರ ಬಾವಿಗೆ ಬಿತ್ತು...ತನ್ನ ಈಜಿಗೆ ಬಲಬಂತು..ಧನ್ಯ್ವಾದ ನಿಮ್ಮ ಪರಿತಿಕ್ರಿಯೆಗೆ..

    ReplyDelete
  23. ರಂಜು...ನಿನ್ನ ಸೂಪರ್ ಪ್ರತಿಕ್ರಿಯೆಗೆ...ನನ್ನ ಸೂಪರ್ ಧನ್ಯವಾದ.....ಬ್ಲಾಗು ನೋಡದೇ ಮನಸು..ಚಡಪಡಿಸುತ್ತೆ,,

    ReplyDelete
  24. ವನಿತಾ..ಏನ್ ಹೇಳ್ಲಿ...ನಿಮ್ಮಂತೋರ್ತೋರ್ಸೋ ಅಭಿಮಾನ್ದಾಗ್ ನಾನ್ ಮುಳ್ಗಿವ್ನಿ...
    ಎದ್ದ್ ಬರೋ ದಿರ್ಲಿ...ತೇಲಾಡ್ತಾ ಇರೋದ್ರಲ್ಲೆ ಮಜಾ ಐತೆ....ದನ್ವಾದ...

    ReplyDelete
  25. ಮಯೇಸಣ್ಗೆ ಏನ್ ಯೋಳ್ಲಿ..?
    ನಿಮ್ಮದೂ ಒಂದು ಮೆಟ್ಲು...ನಂದೂ ಒಂದು ಹಂತ...ಅಲ್ಲವಾ?

    ReplyDelete
  26. ವಿನೂತನ ಪ್ರಯೋಗಗಳ ಮೂಲಕ ಹೊಸ ಭಾಷೆಗಳನ್ನು ಬಳಸಿ ಬರೆಯುವ ನಿಮ್ಮ ಶೈಲಿ ತುಂಬಾ ಚೆನ್ನಾಗಿದೆ. ಬಲು ಇಷ್ಟವಾಯಿತು ಸರ್ :)

    ReplyDelete
  27. he he he.. tumbaa chennagi bardiddeeri azad bhai..

    sakkat ishta aagoytu...:)

    ReplyDelete
  28. ಏನ್ ಬುದ್ಧಿ? ಕಂಟ್ಮಟ್ಟ ಕುಡ್ದೊರ್ಗೆ ಕಿಕ್ಕ್ ಹೊಡ್ದಂಗೆ ನಿಮ್ಗೂ ಕಿಕ್ಕ್ ಹೊಡೀತಾ? ನಿಮ್ ತರಾ ನಮ್ಗೂ ಕಿಕ್ಕೇ ಬುಡಿ ಮತ್ತೆ!
    nice one

    ReplyDelete
  29. ಆಜಾದ್ ಸರ್,

    ನೀವೇನೇ ಮಾಡಿದ್ರೂ ವಿಶೇಷವಾಗಿರುತ್ತೆ ಆನೋದಕ್ಕೆ ನಿಮ್ಮ ಕಾಲೇಜು ಜೀವನದಿ೦ದ ಜಲನಯನದವರೆಗೆ ನಿಮ್ಮ ಪಯಣವೇ ಸಾಕ್ಷಿ.ಬ್ಲಾಗುಡುಕರಲ್ಲಿ ನೀವೇ ಅಗ್ರರು....ಪದಪು೦ಜ ಸರಳ....ಅತಿವಿರಳ......ಹೀಗೇ ಮು೦ದುವರಿಯಲಿ...ನನ್ನ೦ತಹ ಹಲವರಿಗೆ ಸ್ಪೂರ್ತಿಯಾಗಲಿ.....ನ೦ಗೂ ಬ್ಲಾಗ್ ಒ೦ತರಾ ಕಿಕ್ ಕೊಡುತ್ತೆ ..ಅದು ಮದಿರೆ ಕುಡಿದ್ರೂ ಸಿಕ್ಕೋದಿಲ್ಲ.ಇ೦ತಹ ಹೊಸ ಪ್ರಯೋಗಗಳಿ೦ದಾನೇ ಇ೦ದು ಬ್ಲಾಗು ಲೋಕ ಜೀವ೦ತವಾಗಿದೆ....ಹ್ಯಾಟ್ಸ್ ಆಫ್ ಸರ್.

    ReplyDelete
  30. ಸುಬ್ರಮಣ್ಯ ಸರ್..ಬ್ಲಾಗಿನ ಅಟ್ಟ ಹತ್ತಿದ್ರೆ...ಇಳಿಯೋದು ಕಷ್ಟಾನೇ..ನಿಮ್ಮ ಪ್ರೋತ್ಸಾಹ ಇರೋವರ್ಗೂ ಆದ್ರೂ ...

    ReplyDelete
  31. ಸುಮ...ಧನ್ಯವಾದ ನಿಮ್ಮ ಪುಶ್ ಗೆ...ಇಂತಹ ಪುಶ್ ಗಳೇ ನಮಗೂ ವಿಶ್ ಗಳು...ಹಹಹ....

    ReplyDelete
  32. ಮನಸಾರೆ ಮೇಡಂ..ಹತ್ತೋದೈತ್ ಒಂದಟ್ಟ, ಹತ್ಸೊರು ಇರೋಗಂಟ..ಬ್ಲಾಗುಡ್ಕ ಆಗ್ಬುಟ್ಟೆ ಕಂಠ್ಮಟ್ಟ...ಹಹಹ..ಧನ್ಯವಾದ.

    ReplyDelete
  33. ಸೀತಾರಾಂ ಸರ್...ಏನ್ಮಾಡ್ಲಿ ಹೇಳಿ ನಿಮ್ಮಂಥೋರ ಈ ನಿಷ್ಕಲ್ಮಶ ಮನದಾಳದ ಮಾತುಗಳು ಏನಾದ್ರೂ ಮಾಡ್ತಾ ಇರೋಣ ಅಂತ ಪ್ರೇರೇಪಿಸ್ತಿವೆ..ಧನ್ಯವಾದ

    ReplyDelete
  34. ವಿರಾಹಿ ಯವರಿಗೆ..ಬಲು ಅಪ್ರೂಪ ನಿಮ್ಮ ದರ್ಶನ ಜಲನಯನದತ್ತ..ಆದ್ರೂ ಈ ಪ್ರೋತ್ಸಾಹಕ್ಕೆ ಧನ್ಯವಾದ

    ReplyDelete
  35. ರವಿಕಾಂತರಿಗೆ..ಸಾಗುವುದು ಪಯಣ ಒಮ್ಮೆ ಮುನ್ನಡೆದರೆ ಚರಣ...ನಿಮ್ಮ ಪ್ರೋತ್ಸಾಹ ಸಿಗೋ ತನಕ..ಧನ್ಯವಾದ

    ReplyDelete
  36. ಶಿವು..ಅದೇನೋ ಹೇಳ್ತಾರಲ್ಲ...ಬೆಂಕೀಲಿ ಬಿದ್ದವನೊಬ್ಬ..ನೀರಲ್ಲಿ ಮುಳುಗ್ತಿರೋನೊಬ್ಬ ಅವ್ನು ಸಂದಾಕಿರ್ಲಿ ಅಂತ ಇವ್ನು..ಇವ್ನು ಸಂದಾಕಿರ್ಲಿ ಅಂತ ಅವ್ನು...ಹಹಹ ಅಣ್ಣಾವ್ರ ನಾನಿನ್ನ ಮರೆಯಲಾರೆ ಚಿತ್ರದ ಡೈಲಾಗು ನೆಪ್ಪಾಯ್ತು ನಿಮ್ಮಾತ್ಕೇಳಿ...ಹಹಹ...ಧನ್ಯವಾದ

    ReplyDelete
  37. ಮಂಜುಳಾವ್ರೆ..ಮೊದಲಿಗೆ ಸ್ವಾಗತ ನಿಮಗೆ ಜಲನಯನಕ್ಕೆ..ನಮ್ಮ ಬ್ಲಾಗು ಬಳಗ ಬೆಳೀತಾಯಿದೆ..ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ..ಬರುತ್ತಿರಿ ಇಲ್ಲಿಗೆ ಮತ್ತೆ ನಮ್ಮ ಮಿತ್ರರೆಲ್ಲರ ಬ್ಲಾಗಿಗೆ

    ReplyDelete
  38. ಗುರುದೆಸೆಯ ಪ್ರತಿಕ್ರಿಯೆಗೆ ಧನ್ಯವಾದ...ಖಂಡಿತಾ..ಮುಖ್ಯ ನಿಮ್ಮ ಅನಿಸಿಕೆ..

    ReplyDelete
  39. ಶ್ವೇತಾ...ಜಿ.ಪಿ.ಆರ್...ನನ್ನ ಮೊದಲ ಕವನ ಗುರು...ಏಕಲವ್ಯಂಗೆ ಇದ್ರಲ್ಲ ದ್ರೋಣಾಚಾರ್ಯ ಹಾಗೆ... ಅವ್ರಸಾಗರೋಪಾದಿಯ ಪದಗಳ್ಗೆ ಒಂದು ಬಿಂದು ಆದ್ರೂ ಸಾರ್ಥಕ ಜೀವನ...ಧನ್ಯವಾದ.

    ReplyDelete
  40. ಮನಮುಕ್ತಾ..ನಿಮ್ಮ ಮುಕ್ತ ಪ್ರೋತ್ಸಾಹಕ್ಕೆ ನಮನ..ಮತ್ತು ಧನ್ಯವಾದ

    ReplyDelete
  41. ಸಾಗರಿಯವರೇ ಹಳ್ಳಿಗಾಡಿನವ ನಾನೂ..ಹಳ್ಳಿ ಭಾಷೆ ಕಲ್ಮಶ ಇಲ್ಲದ ಪಾಲಿಶ್ ಮಾಡದ ಮನದಾಲದ ಭಾಷೆ...ಇದು ನನಗೆ ಬಹಳ ಇಷ್ಟವೂ ಸಹಾ..ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದ

    ReplyDelete
  42. ಸುನಾಥ್ ಸರ್...ಹೇಳೋದನ್ನ ಮನಮುಟ್ಸೋದಕ್ಕೆ ಆಡಂಬರ ಇಲ್ದೇ ಇರೋ ಭಾಷೆ ಬಳಕೆ...ಒಳ್ಳೇದು ಅಲ್ವಾ..ಅದಕ್ಕೆ...ಹಹಹ...ಧನ್ಯವಾದ ನಿಮ್ಮ ಅಶೀರ್ವಾದಕ್ಕೆ...

    ReplyDelete
  43. ತೇಜಸ್ವಿನಿಯವರೇ..ಪ್ರಯೋಗಗಳು ಫಲಕಾರಿಯಾದರೆ ಒಲ್ಲೆಯದು..ಇದು ನಿಮಗೆ ಹಿಡಿಸಿದೆ ಅಮ್ದರೆ ಧನ್ಯ...ಪ್ರೋತ್ಸಾಹ ಹೀಗೇ ಇರಲಿ..ಜಲನಯನಕ್ಕೆ...ಧನ್ಯವಾದ

    ReplyDelete
  44. ಆಕಾಶ್ಬುಟ್ಟಿ ಬಹನಾ
    ಬಡಾ ಹೀ ಪಸಂದ್ ಹುವಾ
    ಆಪ್ಕಾ ಕಹನಾ...
    ಮಾಡ್ತಾ ಇರಿ..ಜಲನಯನಕ್ಕೆ
    ಬರಾಬರ್ ಆನಾ-ಜಾನಾ

    ReplyDelete
  45. This comment has been removed by the author.

    ReplyDelete
  46. ಪ್ರವೀಣ್,
    ಕಠ್ಮಟ್ಟ ಕುಡ್ದೋನ್ಗೆ ಕಿಕ್ ಅಲ್ಲ
    ಹಿಕಪ್ ಬರ್ತವೆ...ಆದ್ರೆ ಈ ಬ್ಲಾಗುಡ್ಕಂಗೆ
    ಮತ್ತು ಏರ್ತದೆ...ಧನ್ಯವಾದ

    ReplyDelete
  47. ಶ್ರೀಧರ್, ಧನ್ಯವಾದ..ಕಾಲೇಜಿನ ಏಜಲಿ
    ಮಾಡಿದ್ದೆಲ್ಲ ಹುಡ್ಕಾಟಿಕೆ ಮೋಜಲಿ
    ಆದ್ರೂ ಹಿತ ಆ ದಿನಗಳು..ಶುಭವಾಗಲಿ ನಿಮಗೆ

    ReplyDelete
  48. ಜಲನಯನ ಅವರೇ,
    ಹೇಗಿದ್ದೀರಾ? ತುಂಬಾ ದಿನಾ ಆಗೋಯ್ತು ನಾನು ಬ್ಲಾಗ್ಮನೆಗೆ ಬಂದು. ನನ್ನ ಮರೆತಿಲ್ಲಾ ತಾನೇ?
    ಅಂದಹಾಗೆ ಮನಸ್ನ್ಯಾಗೆ ತೋಚಿದ್ ಪದ ಬ್ಲಾಗ್ನಾಗೆ ಗೀಚಿರೋ (ಬರೆದಿರೋ) ರೀತಿ ಭೋ ಪಸಂದಾಗೈತೆ!!!

    ReplyDelete
  49. ಎಸ್ಸೆಸ್ಸ್ಕೆ ಮೇಡಂ..ಅದೇನೋ ಪದ್ಯ ಇತ್ತಲ್ಲ ನಮಗೆ..."ನೀ ನನಗಿದ್ದರೆ ನಾ ನಿನಗೆ..ನೆನಪಿರಲೀ ನುಡಿ ನಮ್ಮೊಳಗೆ" ಅಂತ...ಹಹಹ..ನಿಮ್ಮ ಬ್ಲಾಗಿಗೂ ನಾನು ಬಂದಿಲ್ಲ...ಆದ್ರೆ ಪ್ರಥಮ ಹೆಜ್ಜೆ ನಿಮ್ಮದಾಯಿತು...ಒಪ್ಪಿದೆ...
    ಏನ್ರೀ ..ಗೀಚಿದ್ದು ಅಂತ ಧೀಟಾಗಿ ಹೇಳಿ..ಮೆತ್ತಗೆ ಬರೆದಿರೋದು ಅಂತ ಕಾಮೆಂಟಿಸಿದ್ದೀರಾ..?...ಹಹಹ ತಮಾಶೆಗೆ ಹೇಳಿದೆ..ಹೌದು..ನನಗಂತೂ ಗ್ರಾಮ್ಯದಲ್ಲಿರೋ ಸಾಮಿಪ್ಯದ ಗಮ್ಮತ್ತು ...ಸಾಹಿತ್ಯದ ಭಾಷೆಲಿ ಕಾಣೊಲ್ಲ...ಅದಕ್ಕೆ ಗೀಚಿದೆ..(ಸಾರಿ ಬರೆದೆ)...ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ.

    ReplyDelete
  50. bo pasandagaithe sa... ingeya osi avagavaga padgul bidta iri... naavu aykota irteevi :).. haage nammane taavanu osi banni sa....

    chennagide Guruve :)

    ReplyDelete
  51. ಹಾ.ಹಾ.ಹಾ, ನಿಮ್ಮ ಕವನ ಓದಿ ದೊಡ್ಡಣ್ಣ(ಆಕ್ಟರ್) ನವರ ಡೈಲಾಗ್ ಕೇಳ್ದಂಗಾತಣ್ಣೋ. ಹಿಂಗೇ ಬರೀತೀರ್ರಪ್ಪೋ.
    ಅಕ್ಷತಾ.

    ReplyDelete
  52. ರಮೇಶಪ್ಪ....ಹಿಂಗ್ಯಾಕೇಳೀಯಾ...ನೀನೂ ವೈನಾಗೇ ಬರೀತೀಯ ಬುಡು...ಬ್ಲಾಗುಡ್ಕ ನನ್ನಂಗೆ ನೀನೂವೆ...ಹಹಹ...ಅಂಗೇ ತೂರಾಡ್ಕಂಡ್ ಬತ್ತೀನಿ,,,,

    ReplyDelete
  53. ಅಕ್ಷತಾ.....ಬಾ ಕಣ್ ತಂಗಿ ...ಇಂಗಾ ಬರೋದು ..? ಮೊದ್ಲ ಸರ್ತಿ ಬಂದಿದಿಯಾ...ಸ್ವಾಗತ ಕನಕ್ಕ ನಿನಗೆ...ನಿನ್ನಂತ ಬೆನ್ತಟ್ಟೋರ್ ಇರೋಮಟ್ಟ...ಬರಿಯೋದು ನಡೆಯುತ್ತೆ...

    ReplyDelete
  54. ಹ್ಹ್ ಹ್ಹ್ ಹ್ಹ್ ....
    ನಿಮ್ಮ ಚಟ ಚೆನ್ನಗಿದೆ ಭಯ್ಯ ...
    ನಮಗು ಈ ರೀತಿ ಗೀಳು ಒಮ್ಮೊಮ್ಮೆ ಹಿಡಿದ್ಬಿಡುತ್ತೆ.
    ಚೆನ್ನಾಗಿದೆ ಪ್ರಯೋಗ...

    ReplyDelete
  55. ಶ್ರೀಧರ್ ಮೊದಲಿಗೆ ನಿಮಗೆ ಜಲನಯನಕ್ಕೆ ಹೃದಯ ಪೂರ್ವಕ ಸ್ವಾಗತ...
    ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ...

    ReplyDelete
  56. ತುಂಬಾ ಚನ್ನಾಗಿದೆ ಸರ್ !
    ಓದಿದರೆ ಮತ್ತೆ ಮತ್ತೆ ಆದ ಬೇಕು ಅನಿಸುತ್ತೆ

    ReplyDelete
  57. ಸುಧೇಶ್, ಧನ್ಯವಾದ ರೀ..ಹೌದು ನೋಡಿ ಕೆಲಸದ ಒತ್ತದದಲ್ಲೂ ಒಮ್ಮೆ ಇಲ್ಲಿ ಬಂದು ಕಣ್ಣು ಹಾಯಿಸದಿದ್ದರೆ ನಿದ್ದೆ ಬರೋಲ್ಲ ಅನ್ನುತ್ತೆ ಕಣ್ಣಿಗೆ...

    ReplyDelete
  58. ಮಂಜು..ಥ್ಯಾಂಕ್ಸ್ ಕಣೋ ಇದು ಒಂಥರಾ ಪಾರ್ ಎ ಚೇಂಜ್ ಅನ್ನೋ ಹಾಗೆ...ನಮ್ಮ ಆಡುಭಾಷೆಯ ಮಜಾನೇ ಮಜಾ ಅಲ್ವಾ...

    ReplyDelete
  59. ಒಳ್ಳೆಯ ಪ್ರಯತ್ನ ಆಝಾದ್ ಭಾಯ್! ಅದ್ಯಾಕೊ ತಾವೂನೂ ಎಂಡ್ಕುಡ್ಕ ರತ್ನನ್ ತರಾನೇ ಮಾತಾಡಾಕೆ ಸುರು ಅಚ್ಕಂಬುಟ್ರಿ!! ಬೋ ಪಸಂದಾಗೈತೆ ಕವ್ನ!!:-)

    ReplyDelete
  60. ಬಡವ್ನ ಗೆಪ್ತಿ ಈವಾಗ್ಮಾಡ್ಕಂಡ್ಯಾ ಜಯಕ್ಕಾ....ಎಂಗೋ ಬುಡು ಬಂದ್ಯಲ್ಲ..ಸಾಕು ನಂಗ್ ಅಷ್ಟೇಯಾ...
    ಅದೇನೋ ಯೋಳ್ತಾರಲ್ಲಾ...ಸೋನೇ ಪೇ ಸುಹಾಗಾ ಅಂತ ..ಅಂಗೆ..ಎಳ್ಡು ಪದ ಒಗ್ಳಿ ಬರ್ದ್ಯಲ್ಲಾ...ಬೋ ಸಂತೋಸಾಯ್ತು ಬುಡ್ ಕನಕ್ಕ...

    ReplyDelete
  61. ದಿವ್ಯಾ...ಏನಾಯ್ತು..? ನನ್ನಿಂದ ತಪ್ಪೇನಾದ್ರೂ ಆಯ್ತಾ...?? ಈ ಮಧ್ಯೆ...ಗಾಯಬ್...ಜಲನಯನದ ಕಡೆ ಬರ್ಲಿಲ್ಲ....ಹೋಗ್ಲಿ..ಈಗ್ಲಾದ್ರೂ ಒಂದೆರಡು ಪ್ರತಿಕ್ರಿಯೆ ಹಾಕಿದೆಯಲ್ಲಾ ಧನ್ಯವಾದ....

    ReplyDelete