Monday, November 8, 2010

ನಗು ನಗುತಾ ನಲೀ ನಲೀ.....

ನಗು ..ಯಾರಿಗೆ ಬೇಡ..? ಎಲ್ಲರಿಗೂ ಇಷ್ಟವೇ....ಇಲ್ಲ ಎಂದಿರಾ,,,,?? ಓಹ್ ನೀವು ತಮಾಶೆ ಮಾಡ್ತಿದ್ದೀರಾ..ಇಲ್ಲ ಅಲ್ವಾ?? ...ಏನೋ ತುಂಬಾ ಗಂಭೀರ ವಿಷಯ ತಲೆ ತಿನ್ತಾ ಇದೆ...!!!???

ಹೌದು ನಗು ಮುಖದಲ್ಲಿ ಒಂದು ರೀತಿಯ ಕಾಂತಿಯನ್ನು ತರುತ್ತದೆ. ಸ್ನೇಹಿತರನ್ನು ತರುತ್ತದೆ, ಮನೋಲ್ಲಾಸ ತರುತ್ತದೆ. ವ್ಯಕ್ತಿತ್ವ ಆಕರ್ಷಣೆಯಲ್ಲಿ ಹಾಸ್ಯ ಸ್ವಭಾವ ಅಥವಾ ನಗುಮುಖದ ವ್ಯಕ್ತಿತ್ವ ಎಲ್ಲಾ ಗುಣಗಳನ್ನೂ ಹಿಂದೆ ಹಾಕುತ್ತದೆಂದು ಸಮೀಕ್ಷೆಗಳು ತಿಳಿಸುತ್ತವೆ. ನಗು ಬಾಲ್ಯಾವಸ್ಥೆಯ ಬೌದ್ಧಿಕ ಮತ್ತು ತಾರ್ಕಿಕ ಬೆಳವಣಿಗೆಯಲ್ಲಿ ಮಹತ್ತರ ಪಾತ್ರವಹಿಸುತ್ತದೆಂದು ವೈದ್ಯಶಾಸ್ತ್ರ ಹೇಳುತ್ತದೆ. ಮನೆಯಲ್ಲಿ ಹಿರಿಯರು ಗಂಭೀರ ಸ್ವಭಾದವರು ಸ್ವಲ್ಪ ಹೆಚ್ಚು ಗಂಭೀರರಾದಾಗ ಮನೆಯ ಮಗುವೊಂದನ್ನು ಅವರ ಬಳಿ ಬಿಡುವುದು ಬಹು ಚಾಣಾಕ್ಷ ಉಪಾಯ. ವಾತಾವರಣ ತಿಳಿಯಾಗುವುದಲ್ಲದೇ ಆ ವ್ಯಕ್ತಿಯ ಸ್ವಭಾವದಲ್ಲೂ ಬೇಗನೆ ಬದಲಾವಣೆಯಾಗುವುದರಲ್ಲಿ ಸಂದೇಹವಿಲ್ಲ.

ಹಾಗಾದರೆ ಏನಿದು..? ನಗು,,? ಹಾಸ್ಯ?

ಸುಮಾರು ಹತ್ತು ಸಾವಿರಕ್ಕೂ ಹೆಚ್ಚಿನ ಉದಾಹರಣೆಗಳ ಮೂಲಕ ಅಧ್ಯಯನ ಮಾಡಿ ಕೆಲವು ಮಹತ್ತರ ಅಂಶಗಳನ್ನು ಕಂಡುಕೊಳ್ಳಲಾಗಿದೆ. ಈ ಎಲ್ಲ ನಿದರ್ಶನಗಳು ಒಂದು ವಿಷಯವನ್ನು ಹೊರಗೆಡಹಿವೆ. ಮಾನವ ಮಿದುಳು ತರ್ಕಗಳಲ್ಲಿ ವಿನ್ಯಾಸಗಳನ್ನು ಗುರುತಿಸಬಲ್ಲುದು. ಈ ತರ್ಕಗಳು ಒಂದು ಗೊತ್ತಾದ ವಿನ್ಯಾಸಕ್ಕೊಳಪಟ್ಟಿರುತ್ತವೆ. ಬಹುಪಾಲು ಈ ತರ್ಕ ವಿನ್ಯಾಸಗಳು ಪರಿಚಿತವಾಗಿರುತ್ತವೆ. ಇದನ್ನು ಅರ್ಥೈಸಿಕೊಳ್ಳುವ ಶಕ್ತಿ ಅಥವಾ ಬುದ್ಧಿ ಮಿದುಳಿಗೆ ಇರುತ್ತದೆ ಆದರೆ ನಾವು ಊಹಿಸದ ತರ್ಕ ವಿನ್ಯಾಸ ಮಿದುಳಿಗೆ ಪರಿಚಯವಾದಾಗ ಮಿದುಳು ಉಲ್ಲಸಿತಗೊಳ್ಳುತ್ತದೆ. ಇದರ ಪುನರಾವರ್ತನೆ ಈ ಅಲೆಗಳು ಮತ್ತೆ ಮತ್ತೆ ಏಳುವಂತೆ ಮಾಡುತ್ತವೆ...ಇದರ ಬಹು ಸರಳ ಉದಾಹರಣೆ ಮಗುವಿಗೆ ..ಗಿಲಿ ಗಿಲಿ ಗಿಲಿ ಮಾಡಿದಾಗ ಮಗು ಕೇಕೆಹಾಕಿ ನಗುತ್ತದೆ. ಆದರೆ ತರ್ಕವಿನ್ಯಾಸಗಳು ಮಿದುಳಿಗೆ ಪರಿಚಿತವಾಗುವ ಕ್ರಿಯೆ ಬಹುಪಾಲು ಅನಿಯಂತ್ರಿತ ಕ್ರಿಯೆ. ಮಿದುಳಿನ ಪ್ರಿ-ಫ್ರಾಂಟಲ್ ಕಾರ್ಟೆಕ್ಸ್ ಭಾಗದಿಂದ ಸ್ರವಿತ ಎಂಡಾರ್ಫಿನ್ ಎಂಬ ಜೀವರಾಸಾಯನಿಕ ಸಂಯುಕ್ತ ಮನೋಲ್ಲಾಸಕ್ಕೆ ಕಾರಣವಾಗಿದೆ ಎಂದು ತಿಳಿದು ಬಂದಿದೆ. ಇದು ಪ್ರಾಣಿ ವಿಕಸನ ಸರಣಿಯ ಬಹು ಮುಖ್ಯ ಬೆಳವಣಿಗೆ. ಇದೇ ಕಾರಣಕ್ಕೆ ಕೇವಲ ಮಾನವ ಜಾತಿ (ಮಂಗ, ಚಿಂಪಾಂಜಿ ಇತ್ಯಾದಿ ಸಹಾ) ನಗುವನ್ನು ಗುರುತಿಸಬಲ್ಲುದು. ಇದೇ ಕಾರಣಕ್ಕೆ ಮಾನವನ ಬುದ್ಧಿ ಶಕ್ತಿ ಎಲ್ಲ ಪ್ರಾಣಿಗಳಿಗಿಂತ ಬಹುಪಾಲು ಹೆಚ್ಚು. ಮಗುವಿನಲ್ಲಿ ಮಾತಿಗೂ ಮುಂಚೆ ನಗು-ತರುವ ವಿಷಯವನ್ನು ಗುರುತಿಸುವ ಶಕ್ತಿ ಬರುತ್ತದೆ. ಅನಿರೀಕ್ಷಿತ ವಿನ್ಯಾಸವನ್ನು ಮಗು ಗಮನಿಸಿದರೆ ಉಲ್ಲಸಿತಗೊಳ್ಳುತ್ತೆ. ಬಹು ಸ್ವಾಭಾವಿಕ ಪ್ರತಿಕ್ರಿಯೆ ಎಂದರೆ ಮಗು ಚಪ್ಪಾಳೆ ಹೊಡೆಯುವುದು...ಅಥವಾ ಮುಖ ಅರಳಿಸುವುದು....ನಿರೀಕ್ಷಿತ ವಿನ್ಯಾಸಕ್ಕೆ ಮಗು ನಗುವುದಿಲ್ಲ ಎನ್ನುವುದನ್ನು ನೀವೂ ಗಮನಿಸಿರಬಹುದು.

ನಗು- ಈ ಕ್ಲಿಷ್ಟ ಸಂಬಂಧಗಳ ಕಾರಣ ವ್ಯಕ್ತಿಯ ಸ್ವಭಾವವನ್ನು ಅವಲಂಬಿಸಿರುತ್ತದೆ. ಒಬ್ಬರಿಗೆ ನಗು ತರಿಸುವುದು ಮತ್ತೊಬ್ಬರಿಗೆ ಗಂಭೀರವಾಗಬಹುದು...ಅದರೆ ಇದು ವಯಸ್ಸು ಮತ್ತು ಅನುಭವ ಹೆಚ್ಚಿದಂತೆ ಬದಲಾಗುತ್ತದೆ. ಹೆಂಗಸರ ನಗು ಸ್ವಾಭಾವಿಕವಾಗಿ ಹಾಡು-ಹಾಡಿದಂತಿದ್ದರೆ ಗಂಡಸರ ನಗು ವಿವಿಧ ಶಬ್ದದೊಂದಿಗೆ ಹೊರಹೊಮ್ಮಬಹುದು. ಹಾಸ್ಯಕ್ಕೆ ಹೆಣ್ಣು ಹೆಚ್ಚು ಪ್ರತಿಕ್ರಿಯಿಸುತ್ತಾಳಂತೆ ಗಂಡಿಗಿಂತ!!. ತಾನು ಮಾತನಾಡುವಾಗ ತನ್ನ ಮುಂದಿನವರು ನಗುವುದಕ್ಕಿಂತ ಹೆಚ್ಚು ಗಂಡು ತಾನೇ ನಗುತ್ತಾನಂತೆ...ಹಹಹ. ಹೆಣ್ಣು ಹೆಚ್ಚು ಪ್ರತಿಕ್ರಿಯಿಸುವ ನಗುವ ಕ್ರಿಯೆಗಳು ಎಂದರೆ ಚೇಷ್ಟೆ ಮತ್ತು ಪ್ರಾಣಿಗಳ ಅಥವಾ ಮಕ್ಕಳ ಹರಕತ್ತುಗಳು. ನಗು ಸರ್ವ ರೋಗ ನಿವಾರಕ ಎಂಬುದು ಅತಿಶಯೋಕ್ತಿ ಅಲ್ಲ. ಹದಿಹರೆಯದ ವರೆಗೆ ಸರಾಸರಿ ದಿನಕ್ಕೆ ೩೦೦ ಬಾರಿ ನಕ್ಕರೆ ವಯಸ್ಕರ ನಗುವ ಸಾಧ್ಯತೆ ಕೇವಲ ಇದರ ಹತ್ತರಷ್ಟು...!!! ನಮ್ಮನ್ನು ನಾವು ಯಾವ ಅತಿ ಪ್ರಯೋಜನಕಾರಿ ಕ್ರಿಯೆಯಿಂದ ದೂರವಿಡುತ್ತಿದ್ದೇವೆ ಗೊತ್ತೆ....??

ನಗು ಮತ್ತು ಹಾಸ್ಯ ಎರಡು ವಿಭಿನ್ನ ಅಂಶಗಳು. ನಗು ಕೇವಲ ಭೌತಿಕ ಕ್ರಿಯೆ..ಶ್ವಾಸಕೋಶದಿಂದ ಜೋರಾಗಿ ಗಾಳಿಯನ್ನು ಹೊರದೂಡುವುದು...ಹ..ಹ..ಹಹಹ್ಹಹ್ಹಹ್ಹ ..ಹಾಹಹ್ಹಾಹಹಾ...ಹೀಗೆ...ಇದನ್ನು ನಾವು ವ್ಯಾಯಾಮದ ಮೂಲಕವು ಮಾಡಬಹುದು. ಆದರೆ ನಗುವೆಂಬ ಸ್ವಾಭಾವಿಕ ಕ್ರಿಯೆಯ ಮೂಲಕ ಮಾಡುವ ಈ ಬೌತಿಕ ಕ್ರಿಯೆ ಹಲವಾರು ಪ್ರಯೋಜನಕಾರಿ ಲಾಭಗಳನ್ನು ನಮ್ಮ ದೇಹಕ್ಕೆ ಮತ್ತು ಮನಸ್ಸಿಗೆ ನೀಡುತ್ತದೆ. ನಗು ಒಂದು ಸಾಂಕ್ರಾಮಿಕ ಅಂದರೆ ಒಬ್ಬರಿಂದ ಒಬ್ಬರಿಗೆ ಹರಡುವ ಉಪಯುಕ್ತ ಗುಣ. ಒಂದು ಹಾಸ್ಯ ಚಟಾಕಿ, ಲೇಖನ ಅಥವಾ ಸನ್ನಿವೇಶದ ವೀಡಿಯೋ ನಾವು ಒಬ್ಬರೇ ಓದುವಾಗ ಅಥವಾ ವೀಕ್ಷಿಸುವಾಗ ಹೆಚ್ಚೆಂದರೆ ಸುಮ್ಮನೆ ಮುಗುಳ್ನಗಬಹುದು ಅಥವಾ ಸ್ವಲ್ಪ ನಗಬಹುದು..ಅದೇ ನಮ್ಮ ಬಂಧು ಬಾಂಧವರ ಜೊತೆಗಿದ್ದಾಗ ಹೆಚ್ಚು ಅನುಭವಿಸಿ ನಗುತ್ತೇವೆ ಕಾರಣ ಇದು ನಿಯಂತ್ರಿತ ಸಾಂಕ್ರಾಮಿಕ ಕ್ರಿಯೆ. ಇನ್ನೊಂದು ಬಹು ಆಶ್ಚರ್ಯಕರ ಅಂಶ ನಾವು ಗಮನಿಸಿರುತ್ತೇವೆ...ಏನು ಗೊತ್ತೆ..?? ನಾವು ನಮ್ಮ ಸ್ನೇಹಿತ/ಸ್ನೇಹಿತೆಯರ ಜೊತೆ ಇದ್ದಾಗ ಅನುಭವಿಸಿ ನಗುವಷ್ಟು ಕೇಕೆ ಹಾಕಿ ನಗುವಷ್ಟು ಬೇರೆ ಸಾಂಗತ್ಯದಲ್ಲಿ ಇರಲ್ಲಿಕ್ಕಿಲ್ಲ ಅಲ್ಲವೇ...??

ನಿರೀಕ್ಷಿತ ಹಾಸ್ಯ ನಗು ತರಲು ವಿಫಲವಾಗುತ್ತೆ ಎನ್ನುವುದಕ್ಕೆ ಪದೇ ಪದೇ ಕೇಳಿದ ಜೋಕ್ ಗಳಿಗೆ ನಮ್ಮ ಪ್ರತಿಕ್ರಿಯೆಯನ್ನು ಉದಹರಿಸಬಹುದು. ಕೆಲವರು ಕಚಗುಳಿ ಇಡುವುದರಿಂದ ಹಾಸ್ಯ ಅಥವಾ ನಗು ಬರುತ್ತೆ ಎನ್ನಬಹುದು...ಆದ್ರೆ ಇದೂ ಪೂರ್ತಿ ನಿಜವಲ್ಲ..ಏಕೆ..?? ನಮಗೆ ನಾವೇ ಕಚಗುಳಿಯಿಟ್ಟುಕೊಂಡರೆ ನಗು ಬರುವುದಿಲ್ಲ,,,,!!! ಬೇರೆಯವರು ಇಟ್ಟಾಗ ಅದು ಅನಿರೀಕ್ಷಿತವಾಗುತ್ತೆ ಹಾಗಾಗಿ ನಗು ಬರುತ್ತೆ. ನಗು ತರುವ ಕಾರಣ ಯಾವ ಪ್ರಕಾರದ್ದೇ ಆದರೂ ನಗುತರುವ ಅಥವಾ ಉಂಟುಮಾಡುವ ಪರಿಣಾಮ ಒಂದೇ ಆಗಿರುತ್ತೆ. ನಾವು ನಕ್ಕಾಗ ಶರೀರಕ್ರಿಯಾ ಸ್ರಾವಕಗಳು ರಕ್ತದೊಳಕ್ಕೆ ಹರಿದುಬರುತ್ತವೆ. ರಕ್ತಪರಿಚಲನೆ ಹೆಚ್ಚಾಗುತ್ತೆ ..ಅದೇ ಕಾರಣಕ್ಕೆ ಕೇಕೆ ಹಾಕಿ ನಕ್ಕಾಗ ಮುಖ ಕೆಂಪಾಗುವುದು...ಮೂಗು, ಕಿವಿ ಕೆಂಪು ಮತ್ತು ಬಿಸಿಯಾಗುತ್ತವೆ. ಶ್ವಾಸ ದೀರ್ಘವಾಗುತ್ತದೆ, ಶ್ವಾಸಕೋಶದ ಆಳದಿಂದ ಗಾಳಿ ಹೊರಬರುತ್ತದೆ ಅಲ್ಲಿನ ಜೀವಕೋಶಗಳಿಗೆ ಪರಿಶುದ್ಧ ಆಮ್ಲಜನಕ ಸಿಗುತ್ತದೆ, ಮಿದುಳಿಗೆ ರಕ್ತ ಮತ್ತು ಆಮ್ಲಜನಕದ ಪೂರೈಕೆಯಾಗುತ್ತದೆ. ಮನೋಲ್ಲಾಸ ಮತ್ತು ಆಹ್ಲಾದಕರ ಸ್ಥಿತಿಗೆ ಕಾರಣವಾದ ಶರೀರಸ್ರಾವಕ “ಎಂಡಾರ್ಫಿನ್” ಪ್ರಮಾಣ ಹೆಚ್ಚಾಗುತ್ತದೆ, ಮ್ಲಾನತೆ (ಸ್ಯಾಡ್ ನೆಸ್) ನಿವಾರಕ ಶರೀರಕಿಯಾಸ್ರಾವಕ “ಸೆರಟೋನಿನ” ಹೆಚ್ಚು ಕ್ರಿಯಾಶೀಲವಾಗುತ್ತದೆ. ಈ ಮೂಲಕ ನೂರಾರು ಶರೀರ ಕ್ರಿಯೆಗಳು ನವಚೈತನ್ಯಕ್ಕೆ ಒಳಗಾಗುತ್ತವೆ. ಇದು ದೇಹದ ರೋಗನಿರೋಧಕ ಶಕ್ತಿಯನ್ನೂ ವೃದ್ಧಿಸುತ್ತದೆ.

ಸಹಿದಯಿ ಸದಭಿರುಚಿಯ ನಡವಳಿಕೆ ಹೇಗಿರಬೇಕು ಎನ್ನುವುದಕ್ಕೆ ಕೆಲವು ಸೂತ್ರಗಳನ್ನು ಗುರುತಿಸಲಾಗಿದೆ.

 ಇನ್ನೊಬ್ಬರನ್ನು ಅಭಿನಂದಿಸುವುದು ಮೊದಲಾಗಬೇಕು...ನಂತರ ಸಕ್ಕರೆಯಲ್ಲಿ ಬೆರೆತ ಔಷಧಿಯಂತೆ ಸಲಹೆಯನ್ನು ನೀಡಬಹುದು (ಹಾಗೊಂದು ವೇಳೆ ಆ ವ್ಯಕ್ತಿಯ ಒಳಿತಿಗೆ ಬೇಕೆನಿಸಿದರೆ). ಯಾರನ್ನೇ ಆಗಲಿ ಮೊದಲಿಗೇ ಟೀಕೆ ಮಾಡುವುದು ಸಹಿದಯಿಯ ಲಕ್ಷಣವಲ್ಲ.

 ನಮ್ಮ ನಿಲುವಿನಲ್ಲಿ ಮೃದು ಧೋರಣೆ ತೋರುವುದು, ಅಥವಾ ಕಠಿಣತೆಯ ಅವಶ್ಯಕತೆಯಿದ್ದಾಗ ಅದಕ್ಕೆ ಮೃದು ಪೀಠಿಕೆ ಹಾಕುವುದು...ಇದು ಮುಂದಿನ ಕ್ರಮ ಕಠಿಣವಾದರೂ ಪ್ರತಿರೋಧ ಹೆಚ್ಚಿರುವುದಿಲ್ಲ

 ಆಭಾರ ವ್ಯಕ್ತಪಡಿಸುವಲ್ಲಿ ಜಿಪುಣತೆ ತೋರಬಾರದು ಏಕೆಂದರೆ ಎದ್ದು ತೋರುವ ಇಂತಹ ಘಟನೆಗಳು ಪರಸ್ಪರ ಸಂಬಂಧಗಳನ್ನು ಹೆಚ್ಚು ಸಧೃಡಗೊಳಿಸುತ್ತವೆ.

 ಉದಾರತೆ ಸಾಧ್ಯವಾದಲ್ಲಿ ವ್ಯಕ್ತಪಡಿಸುವುದು ಒಂದು ಐಛ್ಚಿಕ ಗುಣ

 ಕ್ಷಮೆ ಒಂದು ಗುಣವಾಗಲಿ ಏಕೆಂದರೆ ಕ್ಷಮಿಸುವ ಮೂಲಕ ನಿಮ್ಮ ವೈರತ್ವದ ಅಂತ್ಯವಾಗುತ್ತದೆ ಮನ ಶಾಂತವಿರುತ್ತದೆ.

 ಈ ಎಲ್ಲಾ ಗುಣಗಳನ್ನು ಬೆಳೆಸಿಕೊಳ್ಲಬೇಕೆಂದರೆ ಮನೋಲ್ಲಾಸಿತಗೊಂಡಿರಬೇಕು...ಅಂದರೆ ’ಎಂಡಾರ್ಫಿನ್’ ರಕ್ತದಲ್ಲಿ ತುಂಬಿರಬೇಕು,,,ಅಂದರೆ ಮನಸು ನಗುತಿರಬೇಕು....ಬಹುಸುಲಭದ ದೇಹಾರೋಗ್ಯದ ಈ ಮಾರ್ಗ ಅನುಸರಿಸೋಣ....ನಗೋಣ ನಗುತಾ ಬಾಳೋಣ....
ಇಲ್ಲಿ ಡಿ.ವಿ.ಜಿ.ಯವರ ಒಂದು ಕವಿತೆಯ ಸಾಲುಗಳು (ಮನಮುಕ್ತಾ ರ ಸಹಾಯದಿಂದ) ನಿಮ್ಮೆಲ್ಲರಿಗೆ....ನಗುವಿನ ಮಹತ್ವ ಸಾರೋದಕ್ಕೆ..
ನಗುವನ್ನು ಕುರಿತು ಡಿ. ವಿ. ಜಿ.ಯವರ ಕವನ.
ನಗುವು ಸಹಜದ ಧರ್ಮ, ನಗಿಸುವುದು ಪರಧರ್ಮ,
ನಗುವ ಕೇಳುತ ನಗುವುದತಿಶಯದ ಧರ್ಮ,
ನಗುವ ನಗಿಸುವ ನಗಿಸಿ ನಗುತ ಬಾಳುವ ವರವ
ಮಿಗೆ ನೀನು ಬೇಡಿಕೊಳ್ಳೊ- ಮ೦ಕುತಿಮ್ಮ

http://www.youtube.com/watch?v=Fv7CVQ5077Q


35 comments:

  1. ಆಜಾದು...

    ಸುಮ್ಮನೆ ನಗುತ್ತಿದ್ದೆ...
    ಅದರ ಬಗೆಗೆ ಇಷ್ಟೆಲ್ಲ ಇದೆ ಅಂತ ಗೊತ್ತಿರಲಿಲ್ಲ...

    ನೀನು ಕೊಟ್ಟಿರುವ ಮಾಹಿತಿ ನಿಜಕ್ಕೂ ಉಪಯುಕ್ತವಾಗಿದೆ..

    ನಾನು "ರಾಜು"ನ ದೊಡ್ಡ ಫ್ಯಾನ್ !!

    ಸಹಜವಿಷಯಗಳಿಂದ ಸಿಕ್ಕಾಪಟ್ಟೆ ನಗಿಸುತ್ತಾನೆ ಆಲ್ಲವೆ??

    ಜೈ ಹೋ ಆಜಾದ್ !!

    ReplyDelete
  2. ಜಲನಯನ,
    ನಗುವಿನ ಎಲ್ಲಾ ಮುಖಗಳನ್ನು ಪರಿಚಯಿಸಿದ್ದೀರಿ. ನಗುವಿನ ದೈಹಿಕ, ಮಾನಸಿಕ ಪ್ರಕ್ರಿಯೆಗಳನ್ನು ಗುರಿತಿಸುವದರ ಜೊತೆಗೇ, ಅದರ ಪರಿಣಾಮಗಳನ್ನೂ, ಕಾರಣಗಳನ್ನೂ ಹೇಳಿದ್ದೀರಿ. ಸಹೃದಯರ ಲಕ್ಷಣಗಳನ್ನು ಸೂಚಿಸಿದ್ದೀರಿ. ಇವೆಲ್ಲಕ್ಕಾಗಿ ನಿಮಗೆ ಧನ್ಯವಾದಗಳು.

    ReplyDelete
  3. nagu ellarigu irali endu aashisuttene sir.... oLLeya lekhana neediddeeri dhanyavadagaLu

    ReplyDelete
  4. ನಗುವಿನ ಹಲವು ಮುಖಗಳ ಅಭಿವ್ಯಕ್ತಿ ನಿಮ್ಮಿಂದ ಲೇಖನರೂಪದಲ್ಲಿ ಚೆನ್ನಾಗಿ ಬಂದಿದೆ, ಹಲವು ದೃಷ್ಟಿಕೋನಗಳಲ್ಲಿ ನಗುವನ್ನು ತುಲನೆಮಾಡಿ ಹೇಳಿದ್ದೀರಿ. ರಾಜುವಿನ ಕಾರ್ಯಕ್ರಮ ಬಂದಾಗ ಕೆಲವೊಮ್ಮೆ ಬಿಡುವುಮಾಡಿಕೊಂಡು ನೋಡಿದ್ದಿದೆ, ಹಗಲು ಸಾಧ್ಯವಾಗದಿದ್ದರೆ ರಾತ್ರಿ ರಿಪೀಟ್ ಆದಾಗ ಕೂತು ಆಸ್ವಾದಿಸಿದ್ದಿದೆ. ನಗುವು ಎಲ್ಲರನ್ನೂ ಬೆಸೆಯುತ್ತದೆ. ಎಲ್ಲರ ನಗುವಿನಿಂದ ಜಗತ್ತೇ ಸ್ನೆಹಮಯವಾಗುತ್ತದೆ, ಆದರೆ ಎಲ್ಲರೂ ನಗುವರೇ ? ಅಲ್ಲಲ್ಲಿ ಆಯುಧಪೂಜೆಮಾಡಿದಂತೆ ವರ್ಷಕ್ಕೊಮ್ಮೆಯೂ ನಗದಂತ ’ದೇವೇಗೌಡ’ರಿರುತ್ತಾರೆ. ನಕ್ಕರೆ ಗಂಟೇ ಹೋಗಿಬಿಡುತ್ತದೇನೋ ಎಂಬ ಆತಂಕಹೊಂದಿದವರೂ ಇರುತ್ತಾರೆ ಎನಿಸುತ್ತದೆ! ಹಗೆಯನ್ನು ಮರೆಸುವ ನಗು ಎಲ್ಲರದಾಗಲಿ ಎಂದು ಹಾರೈಸುತ್ತೇನೆ, ಧನ್ಯವಾದಗಳು

    ReplyDelete
  5. ವಿಡಿಯೋ ನೋಡಿ ನಕ್ಕೂ ನಕ್ಕೂ ಸುಸ್ತಾಯ್ತು :)

    ReplyDelete
  6. he he he..

    fantastic bhayya....:D

    ReplyDelete
  7. ಹಹಹ ಈಗ ನನಗೇ ನಗು ಬರ್ತಿದೆ...ಬೆಳಿಗ್ಗೆ ಪ್ರಕಾಶನ್ ಪ್ರತಿಕ್ರಿಯೆ ನೋಡಿ ..
    ನನ್ನ ನಗುವಿನ ಲೇಖಕ್ಕೆ ಪ್ರಕಾಶನ ಮೊದಲ ಪ್ರತಿಕ್ರಿಯೆ...ಥ್ಯಾಂಕ್ಸ್ ಕಣೋ ದೋಸ್ತಾ..ಸಮಂಜಸ ಇದು...ನಿನ್ನ ಪ್ರತಿಕ್ರಿಯೆ ಮೊದಲು...ಅಲ್ಲಾ.. ಚಪಾತಿಯಿಲ್ಲದೆ ಪ್ಯಾಂಟ್ ಹಾಕ್ಕೊಂಡ್ರೆ ಹ್ಯಾಗೆ ಅಂತ..ಅನ್ಸಿ ನಕ್ಕೆ..ಈಗ ನಾನು ಉತ್ತರ ಕೊಟ್ಟ ಪ್ರತ್ಯುತ್ತರವೇ ಗಾಯಬ್...ಹಹಹ...ಇದು ಯಾಕೋ ಗಬ್ಬರ್ ನ ’ತುಸ್’ ಆದ ಗೋಲಿ ತರಹ ಆಯ್ತು...ಧನ್ಯವಾದ ಪ್ರಕಾಶ...

    ReplyDelete
  8. ಸುನಾಥಣ್ಣ ಧನ್ಯವಾದ ..ನಗುವಿನ ಲಾಫ್ಟರ್ ಕ್ಲಬ್ ಗಳು ಹುಟ್ಟಿಕೊಂಡಿದ್ದೂ ಇದೇ ಕಾರಣಕ್ಕೆ...ನಗುವನ್ನ ಮನಸಾರೆ ಅನುಭವಿಸುವವರು ಅಳೋದು ಕಡಿಮೆ ಅಂತ..ಸೃಷ್ಠಿ ಅನಂತತೆ ...ಹೊಟ್ಟೆ ಹುಣ್ಣಾಗುವಷ್ಟು ನಕ್ಕರೆ ಕಣ್ಣೀರು ತರುತ್ತೆ ಅಂದರೆ ಅಲ್ಲೂ ಸ್ವಛ್ಚಗೊಳಿಸುವ ಕ್ರಿಯೆ...!! ವಾವ್ ನಗುವೇ..ನಿನ್ನಯ ಗುಣವೇ...ಅಲ್ವಾ ಸುನಾಥಣ್ಣ

    ReplyDelete
  9. ಮನಸು ಮೇಡಂ..ನಗು ಮತ್ತು ಅಳು ಎರಡೂ ಬಹು ಸಂಶೋಧಿತ ಮನೋಭವ ಶಾಸ್ತ್ರದ ಕೆಲ ಅಂಶಗಳಂತೆ...ಬಹುಶಃ ಇವೆರಡೇ ಜೀವನದ ಎರಡು ಮುಖಗಳು ಎನ್ನಬಹುದೇ..? ಧನ್ಯವಾದ ಪ್ರತಿಕ್ರಿಯೆಗೆ

    ReplyDelete
  10. ವಿ.ಆರ್.ಬಿ ಸರ್, ನಗುವಿನ ಮುಖ ಮುದ್ದು ಬರಿಸೋ ಮುಖ ಅಲ್ವಾ...ಅದರಲ್ಲೂ ಮಕ್ಕಳಾದರೆ ಕೇಳಲೇ ಬೇಡಿ..ಕೆಲವರು..ಹಹಹ ಹೌದು ನೀವು ಹೇಳಿದಂತೆ ವರ್ಷವೆಲ್ಲಾ ಅವರು ನಕ್ಕ ಕ್ಷಣ ಲೆಕ್ಕ ಹಾಕಿದರೆ ಒಂದೆರಡು ನಿಮಿಷ ಆದ್ರೆ ಹೆಚ್ಚು..ದಿಟ ನಿಮ್ಮ ಮಾತು ಹಗೆಯನ್ನು ಹೊಗೆಯಾಡಿಸುವ ಶಕ್ತಿ ನಗೆಗಿದೆ...ಧನ್ಯವಾದ ಸರ್ ನಿಮ್ಮ ಅಭಿಪ್ರಾಯಕ್ಕೆ

    ReplyDelete
  11. ತೇಜಸ್ವಿನಿ, ಧನ್ಯವಾದ..ನಿಮ್ಮ ಕಾಮೆಂಟ್ ನೋಡಿ ಮತ್ತೆ ಬಜ್ ನಲ್ಲಿದ್ದ ರಾಜು ಕ್ಲಿಪ್ ನೋಡಿದೆ...ಹಹಹ ಹೌದು ನಗುವು ಸಹಜವಾದರೆ ಅಷ್ಟೇ ಸಾಕು.

    ReplyDelete
  12. This comment has been removed by the author.

    ReplyDelete
  13. ಚೇತನಾ ಧನ್ಯವಾದ ಪ್ರತಿಕ್ರಿಯೆಗೆ...ಹಹಹ,,,,

    ReplyDelete
  14. Laugh as much as you breathe ಅನ್ನೋ ಮಾತಿದೆ! ನಗುವಿನ ಬಗ್ಗೆ ಸುಂದರ ಲೇಖನ:)
    ರೂಪ

    ReplyDelete
  15. ಜಲನಯನ ಸರ್.
    ”ನಗು ತರುವ ಕಾರಣ ಯಾವ ಪ್ರಕಾರದ್ದೇ ಆದರೂ ನಗುತರುವ ಅಥವಾ ಉಂಟುಮಾಡುವ ಪರಿಣಾಮ ಒಂದೇ ಆಗಿರುತ್ತೆ.”ಇದು ಖ೦ಡಿತ. ನಮ್ಮ ತುಟಿಯ೦ಚುಗಳು ಮೇಲ್ಮುಖ ನೋಡುತ್ತಿದ್ದರೂ ಕೂಡಾ ಎ೦ಡೊರ್ಫಿನ್ ಸ್ರಾವ ಹೆಚ್ಚಾಗುತ್ತದೆ ಅನ್ನುವುದು ಸಾಧಿತ ಸಿದ್ಧಾ೦ತ. ನಗು ನಮ್ಮ ಆರೋಗ್ಯ ಭಾಗ್ಯಕ್ಕೆ ಗಣನೀಯ ಕೊಡುಗೆ ನೀಡುವುದರಲ್ಲಿ ಎರಡು ಮಾತಿಲ್ಲ.

    ಮಾನಸಿಕ ಕಾಯಿಲೆಗಳಿಗೆ ನಗು ಥೆರಪಿ ಉತ್ತಮ ಚಿಕಿತ್ಸೆ..

    ಹ್ಹ..ಹ್ಹ..ಹ್ಹಾ ನಿಮ್ಮ ವೀಡಿಯೋಕ್ಕೆ..!!!

    ReplyDelete
  16. ಅಜಾದ್,

    ನಗುವಿನ ಬಗ್ಗೆ ಸಕ್ಕತ್ ಮಾಹಿತಿ. ಓದಿದೆ ತುಂಬಾ ಇಷ್ಟವಾಯ್ತು. ನಗುವಿನಲ್ಲಿ ಇರುವ ಅನುಕೂಲವನ್ನು ಮಾನಸಿಕವಾಗಿ ಮತ್ತು ವೈಜ್ಞಾನಿಕವಾಗಿ ನೀಡಿದ ಮಾಹಿತಿಯನ್ನು ಓದಿ ತುಂಬಾ ಖುಷಿಯಾಯ್ತು...ರಾಜು ಶ್ರೀವಾಸ್ತವ ವಿಡಿಯೋ ಕೂಡ ಚೆನ್ನಾಗಿ ನಗು ತರಿಸುತ್ತದೆ...
    ಧನ್ಯವಾದಗಳು.

    ReplyDelete
  17. ವಸಂತ್ ಧನ್ಯವಾದಗಳು ನಿಮ್ಮ ಕಾಮೆಂಟಿಗೆ...

    ReplyDelete
  18. ಪುಟ್ಟಿಗೆ ನಗಿಸೋ ಮತ್ತು ಸ್ವತಃ ನಗೋ ಮನಸಿನ ಪುಟ್ಟಿಯ ಅಮ್ಮ ರೂಪ ಗೆ ಧನ್ಯವಾದ, ನನ್ನ ಬ್ಲಾಗ್ ಗೆ ಬಂದಿದ್ದಕ್ಕೆ ಮತ್ತೊಂದು ಧನ್ಯವಾದ

    ReplyDelete
  19. ವಿಜಯಶ್ರೀ ನಗುವುದು ಸಹಜಧರ್ಮ ನಗಿಸುವುದು ಪರಧರ್ಮ ನಗುತ-ನಗಿಸಿ ಬಾಳುವುದೇ ......ಮುಂದೆ ಗೊತ್ತಿಲ್ಲ ...ಇದು ಡಿವಿಜಿ ಯವರ ಬಹು ಪ್ರಸಿದ್ಧ ಕವನದ ಸಾಲುಗಳು...ನಿಮ್ಮ ಮಾತು ನಿಜ...
    ನಾನು ದೂರದರ್ಶನದ ಕಾರ್ಯಕ್ರಮಗಳ ನಿಯಂತ್ರಕನಾಗಿ ನೇಮಕ ಆದರೆ..ಪ್ರೈಮ್ ಟೈಮ್ ಅನ್ನು ಹಾಸ್ಯ ಕಾರ್ಯಕ್ರಮ್ಕ್ಕೆ ಕೊಡ್ತೀನಿ...ಯಾಕಂದ್ರೆ..ಅದು ಊಟದ ನಂತರ ಮಲಗುವ ಮೊದಲ ಕಾರ್ಯಕ್ರಮಗಳ ಸಮಯ...ಆಗ ನಕ್ಕರೆ ಪಾಚನಕ್ಕೂ ಅನುಕೂಲ ನಿದ್ದೆಯೂ ಚನ್ನಾಗಿ ಹತ್ತುತ್ತೆ...ಹಹಹ ಅಲ್ವಾ...?

    ReplyDelete
  20. ಶಿವು, ಧನ್ಯವಾದ...ನಗುನಗುತಾ ನಲಿ ನಲಿ ಏನೇ ಆಗಲಿ ಅಂತ ಅಣ್ಣವ್ರ ಸಿನಿಮಾದ ಹಾಡು ಎಷ್ಟು ಸೂಕ್ತ ಅಲ್ಲವೇ ಈಗಿನ ಪರಿಸ್ಥಿತಿಯಲ್ಲಿ...??
    ನನಗೆ ಈ ಕಾಮೆಡಿ ಟೈಮ್ಸ್ ಬಹಳ ಇಷ್ಟ...ಝೀ ಕನ್ನಡದಲ್ಲೂ ಬರ್ತಿದ್ವು ..ಈಗ ನಿಲ್ಲಿಸಿದ್ದಾರೆ ಆದ್ರೂ ಎರಡು ಸೀರಿಯಲ್ ಇವೆ..(ಪಾಪ ಮತ್ತು ಪಾವಿ) ಹಹಹ..ಈ ವಿಷಯದಲ್ಲಿ ನಾನು ಮೈಕೋ ಚಂದ್ರು ಮತ್ತು ಗೀತಾವ್ರನ್ನ ಅಭಿನಂದಿಸ್ತೀನಿ...ಇಂತಹ ಕಾರ್ಯಕ್ರಮಗಳನ್ನ ಕೊಡ್ತಿರೋದಕ್ಕೆ..

    ReplyDelete
  21. ಮಂಜು ಇನ್ನೊಂದು ಹಾಕಿದ್ದೀನಿ ವೀಡಿಯೋ,,,ಇದು ಮದುವೆ ರಿಶೆಪ್ಶನ್ ನಲ್ಲಿ ಸಾಮಾನ್ಯವಾಗಿ ನಡೆಯೋದು ಏನು ಎನ್ನುವುದಕ್ಕೆ.. ಧನ್ಯವಾದ..

    ReplyDelete
  22. :) :) ಒಳ್ಳೆ ಲೇಖನದ ಜೊತೆಗೆ ವೀಡಿಯೋ..ಈ ಪ್ರೊಗ್ರಾಮ್ ನೋಡಿದ್ದೆ.
    ರಾಜು ಶ್ರೀವಾಸ್ತವ್ ಅವರು ಟೀ.ವಿ.ಯಲ್ಲಿನ ಲಾಫ್ಟರ್ ಚಾಲೆ೦ಜ್ ಕಾರ್ಯಕ್ರಮದಲ್ಲಿ ಪಾಲ್ಗೊ೦ಡಿದ್ದರು.ತು೦ಬಾ ಚೆನ್ನಾಗಿತ್ತು.ಈಗಲೂ ಹಾಸ್ಯದ ಅನೇಕ ಶೋ ಗಳಿವೆ. ಆದರೆ ಆ ಕಾರ್ಯಕ್ರಮ ನನಗೆ ತು೦ಬಾ ಹಿಡಿಸಿತ್ತು.

    ನಗುವನ್ನು ಕುರಿತು ಡಿ. ವಿ. ಜಿ.ಯವರ ಕವನ.
    ನಗುವು ಸಹಜದ ಧರ್ಮ, ನಗಿಸುವುದು ಪರಧರ್ಮ,
    ನಗುವ ಕೇಳುತ ನಗುವುದತಿಶಯದ ಧರ್ಮ,
    ನಗುವ ನಗಿಸುವ ನಗಿಸಿ ನಗುತ ಬಾಳುವ ವರವ
    ಮಿಗೆ ನೀನು ಬೇಡಿಕೊಳ್ಳೊ- ಮ೦ಕುತಿಮ್ಮ.

    ನಗುಮೊಗದಿ೦ದ ನಮ್ಮ ಆರೋಗ್ಯಕ್ಕೆ ಒಳ್ಳೆಯದು..ಜೊತೆಗೆ ಸುತ್ತಲಿನ ಜನರ ಮನಸ್ಸು ಹಾಗೂ ವಾತಾವರಣವನ್ನೂ ಸು೦ದರವಾಗಿಸಬಹುದು.
    ಈವರ್ಷದ ಶುರುವಿನಲ್ಲಿ ನಗುವಿನ ಬಗ್ಗೆ ನಾಲ್ಕಕ್ಷರಗಳನ್ನು ಬರೆದಿದ್ದೆ ನಿಮಗೆ ಸಮಯ ಸಿಕ್ಕಾಗ ಓದಿ.
    ವ೦ದನೆಗಳು.

    ReplyDelete
  23. ಮನಮುಕ್ತಾ ನಿಮ್ಮ ಮುಕ್ತಮನದ ನೀಳ ಟಿಪ್ಪಣಿ ಮತ್ತು ತುಂಬಾ ಥ್ಯಾಂಕ್ಸ್..ಈ ಸಾಲುಗಳು ನನಗೆ ಬಹು ಪ್ರಿಯವಾದ ಸಾಲುಗಳು ಡಿ.ವಿ.ಜಿ. ಅದಕ್ಕೇ ಒಂದು ರೀತಿ ವಿಶೇಷ ಕವಿ...ನಗುವ ಕೇಳುತ ನಗುವುದತಿಶಯದ ಧರ್ಮ ...ನಿಮ್ಮ ಪೋಸ್ಟ್ ನೋಡಿದೆ..ಹೌದು ಇದು ಮಿಸ್ ಆಗಿತ್ತು,,,ಧನ್ಯವಾದ ಮನಮುಕ್ತಾ.

    ReplyDelete
  24. ವೀಡಿಯೊ ದಲ್ಲಿರುವ ಹಾಸ್ಯ ತುಂಬಾ ಚನ್ನಾಗಿದೆ ...

    ReplyDelete
  25. ಸತೀಶ್ ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ

    ReplyDelete
  26. azad sir,
    oLLeya maahiti koTTiri..... dhanyavaada sir...

    ReplyDelete
  27. ಅಜಾದ್ ಸರ್,
    ನಗುವಿನ ಜಾತಕ ಜಾಲಾಡಿದಂತಿದೆ :)
    ಇಷ್ಟವಾಯ್ತು ನಿಮ್ಮ ಆಶಯ ಮತ್ತು ಲೇಖನ

    ReplyDelete
  28. naguvige yeshtu aayaamagaLive :) odhi kushi aayithu... vedio officinalli open aagalla... manege hogiye nodbeku....

    kushiyaayithu baraha odhi...:)

    P.S.: e font color thumba aayaasa tharisuttade kaNNige Ajad Sir. Sadhyavaadhare biLi baNNakke badhalisi... kappu hinnalege biLi honduttade...

    ReplyDelete
  29. ದಿನಕರ್ ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ...

    ReplyDelete
  30. ಆಪ್ಪ-ಅಮ್ಮರಿಗೆ ಧನ್ಯವಾದ...ನಗುವಿನ ಕೆಲವು ಆಯಾಮಗಳ ವೈಜ್ಞಾನಿಕ ಹಿನ್ನೆಲೆ ಇನ್ನೂ ವೈದ್ಯರಿಗೆ ಗೊತ್ತಾಗಿಲ್ಲ....

    ReplyDelete
  31. ಧನ್ಯವಾದ ಸುಧೇಶ್...ನಿಮ್ಮ ಸಲಹೆ ಒಪ್ಪಿದೆ...ಅಕ್ಷರದ ಬಣ್ಣ ಬದಲಾಯಿಸಿದೆ...ವೀಡಿಯೋ ಈ ಸೀರೀಸಿನಲ್ಲಿ ಚನಾಗಿವೆ ನೋಡಿ...

    ReplyDelete
  32. haha super sir...

    naguna bagge bejan visya tilisiddira sir...

    nagodu aste gotittu... yake nagtini annodu gotirlilla... ella vivarvaagi helikotiddira sir...

    ReplyDelete
  33. ತರುಣ್ ಧನ್ಯವಾದ ನಗು ಒಂದು ಸಂಶೋಧನೆಯ ವಿಷಯವಾಗಿದೆ...ಹಾಗಾಗಿ ಇದರ ಬಗ್ಗೆ ನಮಗೆ ತಿಳಿದಿರುವುದು ಬಹಳ ಕಡಿಮೆ,,,

    ReplyDelete