Saturday, December 18, 2010

ಇತಿಹಾಸದ ಪುಟದಿಂದ ಮಾನವತೆಗೆ ಒಂದು ಪಾಠ

ಮೊಹರಂ ಬಗ್ಗೆ ಓದುವಾಗ ಒಂದು ಸೈಧ್ದಾಂತಿಕ ವಿಷಯ ತಿಳಿಯಿತು...
(ಇಲ್ಲಿ ಧರ್ಮದ ಬಗ್ಗೆ ಯೋಚಿಸುವುದು ಬೇಡ..).



ಆಗ ಪೈಗಂಬರ್ ಮೊಹಮ್ಮದರ ನಂತರದ ಮುಂದಾಳತ್ವದ ಪ್ರಶ್ನೆ ಬಂತು, ಸ್ವತಃ ಮೊಹಮ್ಮದರ ಪ್ರಕಾರ ಆಗಿನ ಧರ್ಮ ಮತ್ತು ಸರ್ವಮಾನ್ಯರಲ್ಲಿ ಇಮಾಮ್ಅಬೂಬಕ್ರ್ (ಧರ್ಮ ಮುಂದಾಳತ್ವಕ್ಕೆ ಖಲೀಫಾ ಅನ್ನೋ ಪದವಿ ಸಿಕ್ಕಿದ್ದು ಬೇರೆ ವಿಷಯ), ನಂತರ ಇಮಾಮ್ ಉಮರ್, ಆ ನಂತರ ಇಮಾಮ್ ಉತ್ಮಾನ್ ಮತ್ತೆ ನಾಲ್ಕನೆಯವರು ಸ್ವತಃ ಪೈಗಂಬರರ ಅಳಿಯ ಹಜ್ರತ್ ಇಮಾಮ್ ಆಲಿ. ಹಾಗಾಗಿ ಉಮರ್ (ಆ ವೇಳೆಗೆ ಖಲಿಫಾ ಎಂಬ ಪ್ರಭಾವಿ ಒಡೆತನ ಸಿಕ್ಕಿತ್ತು) ನಂತರದ ಖಲೀಫಾ ಪಟ್ಟ ಹಜ್ರತ್ ಆಲಿ ಗೆ ಸಿಕ್ಕಬೇಕಿತ್ತು ಆದ್ರೆ ಅಧಿಕಾರ, ಧನ ಮತ್ತು ಸ್ವಾಭಾವಿಕವಾಗಿ ಧನದ ಹಿಂದೆ ಹೋಗುವ ಜನ ಬೆಂಬಲವಿದ್ದ ಉತ್ಮಾನರ ದಾಯಾದಿ “ಮುಹಾವಿಯಾ” ಖಲಿಫತ್ವ ಕಿತ್ತುಕೊಂಡ.....ಆಗಲೇ ಜಗಳಗಳು ಪ್ರಾರಂಭವಾಗುವ ಲಕ್ಷಣಗಳು ಕಂಡದ್ದು!! ಶಿಯಾ ಮತ್ತು ಸುನ್ನಿ ನಂಬಿಕೆಯ ಶಾಖೆಗಳು ಒಡೆಯಲು ಪ್ರಾರಂಭವಾಗಿದ್ದು ಎನ್ನಬಹುದು. ಹಜ್ರತ್ ಆಲಿಯವರ ಬೆಂಬಲಿಗರು ಅವರ ಬೆಂಬಲಕ್ಕೆ ನಿಂತರು. ಆದರೆ ಎಲ್ಲ ಪ್ರವಾದಿಗಳ ನಂತರ ಆ ಧರ್ಮದ ಮೂಲ ಸಿದ್ಧಾಂತ ಮತ್ತು ವಿಧೇಯತೆ ಕ್ರಮೇಣ ಮಾಯವಾಗಿ ..ಮೋಹ ಮಾಯೆಗಳು ಧರ್ಮದ ತೊಡಕುಗಳಾಗುತ್ತವಂತೆ ಹಾಗೆಯೇ ಅಂದಿನ ಖಲೀಫನ ಧನ, ಜನ ಬಲದ ಮಧ್ಯೆ ಹಜ್ರತ್ ಆಲಿಯರ ಬೆಂಬಲಿಗರು ಮತ್ತು ನಿಜ ಅನುಯಾಯಿಗಳು ಪ್ರಾಣ ಕಳೆದುಕೊಳ್ಳಲಾರಂಭಿಸಿದರು. ಇಂತಹ ಘಳಿಗೆಯೇ ನಿಜ ಮಾನವತೆ ಧರ್ಮ ಸಾರುವ ಪ್ರವಾದಿಗಳ ಸತ್ವ ಪರೀಕ್ಷೆಯ ಸಮಯ. ತನ್ನ ಅನುಯಾಯಿಗಳ ಮತ್ತು ಅಮಾಯಕರ ಮಾರಣಹೋಮ ತಡೆಯಲು ಹಜ್ರತ್ ಆಲಿಯವರು ಮುಹಾವಿಯಾ ಜೊತೆ ಒಪ್ಪಂದಕ್ಕೆ ಬರುತ್ತಾರೆ. ತಾನು ಅವರ ಖಲೀಫತ್ವಕ್ಕೆ ಸವಾಲನ್ನು ಒಡ್ಡದೇ ಇರಬೇಕಾದರೆ ಮುಹಾವಿಯಾ ತನ್ನವರಿಗೆ ಕಿರುಕುಳ ಕೊಡಬಾರದು ಮತ್ತು ರಕ್ತ ಪಾತ ಮಾಡಬಾರದು, ಹಾಗೂ ತನಗೆ ಧರ್ಮರಕ್ಷಣೆಯ ಹೊಣೆಗಾರಿಕೆ ಕೊಡಬೇಕು ಎಂಬ ಶರತ್ತು ವಿಧಿಸುತ್ತಾರೆ. ಮುಹಾವಿಯಾ ಪೈಗಂಬರರ ಮೇಲಿನ ಗೌರವ ಮತ್ತು ಹಜ್ರತ್ ಆಲಿ ಪೈಗಂಬರರ ಅಳಿಯ ಎನ್ನುವ ಕಾರಣದ ಜೊತೆಗೆ ಅವರ ಬೆಳೆಯುತ್ತಿದ್ದ ಬೆಂಬಲದ ಶಕ್ತಿ ಕುಗ್ಗಿಸಲು ಈ ಶರತ್ತಿಗೆ ಒಪ್ಪುತ್ತಾನೆ. ಇದು ಒಂದು ನಿಜ ಮಾನವತೆ ಮೆರೆದ ಪ್ರವಾದಿಯ ಅಳಿಯ ಹಜ್ರತ್ ಆಲಿಯವರ ವಿವೇಚನೆಯ ನಿದರ್ಶನ.



ಆ ಗೌರವಯುತ ಕುಟುಂಬದ ಮೊಮ್ಮಗ ಹಜ್ರತ್ ಆಲಿಯವರ ಮಗ ಹಜ್ರತ್ ಇಮಾಮ್ ಹಸನ್ ಸಮಯದಲ್ಲೂ ಇಂತಹುದೇ ವಿಷಘಳಿಗೆ ಎದುರಾಗುತ್ತದೆ. ’ಮುಹಾವಿಯಾ’ ತೀರಿಕೊಂಡ ಮೇಲೆ ಇಸ್ಲಾಂ ಅನುಯಾಯಿಗಳು ಇಮಾಮ್ ಹುಸೇನರನ್ನು ಖಲೀಫಾ ಮಾಡಲು ಯೋಚಿಸುತ್ತಾರೆ. ಆದರೆ ಆ ವೇಳೆಗಾಗಲೇ ಮದೋನ್ಮತ್ತ, ಸ್ತ್ರೀ ಲೋಲ, ಐಷರಾಮಿ ಮತ್ತು ಮದಿರಾಪ್ರಿಯ ’ಯಜಿದ್’ ಮುಹಾವಿಯಾ ಗದ್ದುಗೆಯನ್ನು ಕಬಳಿಸಿ ಮುಹಾವಿಯಾ ಸತ್ತ ಸುದ್ದಿ ತಿಳಿಯುವುದಕ್ಕೆ ಮುಂಚೆಯೇ ಎಲ್ಲರನ್ನೂ ಧನ-ಜನ ಬಲದಿಂದ ತನ್ನೆಡೆಗೆ ಸೆಳೆದು ಕೊಳ್ಳುತ್ತಾನೆ. ಆದರೆ ಹಿಂದೊಮ್ಮೆ ವಂಚಿತರಾದ ಧರ್ಮ ಸಹಿಷ್ಣು ಮತ್ತು ಹಜ್ರತ್ ಆಲಿಯವರ ಅನುಯಾಯಿಗಳು ಇದನ್ನು ಒಪ್ಪದೇ ಹಜ್ರತ್ ಇಮಾಮ್ ಹಸನ್ ರನ್ನು ಖಲೀಫತ್ವದ ದಾವೇದಾರನೆಂದು ಬಿಂಬಿಸುತ್ತಾರೆ.. ಮೊದಲೇ ಕ್ರೂರಿಯಾದ ಯಜಿದ್ ಎಲ್ಲ ನಂಬಿಕಸ್ಥರ ಮತ್ತು ಆಲಿ-ಹಸನ್ ಪರ ಸಮುದಾಯದ ಮಾರಣ ಹೋಮಕ್ಕೆ ಕೈಹಾಕುತ್ತಾನೆ. ಆಗ ಮತ್ತೊಮ್ಮೆ ಹಜ್ರತ್ ಹಸನ್ ತನ್ನ ತಂದೆಯವರ ಮಾರ್ಗ ಅನುಸರಿಸಿ ತನ್ನವರ ತಂಟೆಗೆ ಬರದೇ ತನ್ನ ಪಾಡಿಗೆ ತನ್ನನ್ನು ಬಿಟ್ಟು ಧರ್ಮದ ಪ್ರಚಾರಕ್ಕೆ ಅಡ್ಡಿಮಾಡದಿದ್ದರೆ ಖಲೀಫತ್ವದ ದಾವೆಯನ್ನು ಹಿಂಪಡೆಯುತ್ತೇನೆ ಎಂದು ರಕ್ತ ಪಾತಕ್ಕೆ ಇತಿಶ್ರೀ ಹಾಡುತ್ತಾರೆ. ಹಜ್ರತ್ ಹಸನ್ ರ ನಂತರ ಅವರ ತಮ್ಮ ಹಜ್ರತ್ ಹುಸೇನರ ಮತ್ತು ಅವರ ಕುಟುಂಬ ಸಹವರ್ತಿಗಳ ಮೇಲೆ ಯಜಿದ್ ನಡೆಸಿದ್ದು ಅತಿ ಕ್ರೂರ ಅಮಾನವೀಯ ನಡವಳಿಕೆ.. ಅದೇ ಕಾರಣಕ್ಕೆ ತೀವ್ರವಾದ ರೂಪದಂತೆ ಶಿಯಾ ಪಂಗಡ ಪ್ರಭಲವಾಗಿದ್ದು,



ಇಲ್ಲಿ ಧರ್ಮ ಸಂಸ್ಥಾಪಕರ ಮತ್ತು ನಿಜ ಮಾನವತೆ ಮೆರವವರ ಆದರ್ಶಗಳು ಇಂದಿನ ಸಮಾಜಕ್ಕೆ ಒಂದು ಪಾಠ. ಅಂದು ನಡೆದದ್ದು ಎದುರು-ಬದುರು ಯುದ್ಧ (ಅತೀವ ಸಂಖ್ಯೆಯ ಯಜಿದ್ ಸೈನ್ಯ ಮಾಡಿದ್ದು ಮಾರಣ ಹೋಮ..) ಆದರೆ ಈಗ ಧರ್ಮದ ಹೆಸರಲ್ಲಿ ನಿರಾಯುಧ, ಅಸಹಾಯಕ, ಅಮಾಯಕ ಮತ್ತು ಮುಗ್ಧರನ್ನು ನಿದ್ದೆಯಲ್ಲಿ ಕೊಲ್ಲುವಂತಹ ಹೇಯ ಕಾರ್ಯ. ಮಾನವತೆ ಮತ್ತು ಮಾನವ ಧರ್ಮದ ಮುಂದೆ ನಾವು ಮಾಡಿಕೊಳ್ಳುವ ಧರ್ಮದ ಕಟ್ಟಳೆಗಳು ಗೌಣ ಅಲ್ಲವೇ...?

36 comments:

  1. ಮಾಹಿತಿ ಪೂರ್ಣ ಬರಹ ಭಯ್ಯಾ....ಚೆನ್ನಾಗಿದೆ. ನೀವು ಹೇಳಿದ್ದು ನಿಜ..ಜಾತಿ ಧರ್ಮಕ್ಕಿಂತಲೂ ಮಾನವೀಯತೆ ಮೆರೆದ ವ್ಯಕ್ತಿಗಳೆ ಮಹಾನ್ ಎನಿಸಿಕೊಳ್ಳುವರು.

    ReplyDelete
  2. ಹೌದು ಚೇತು, ಮತೀಯ ಗಲಭೆಗಳಲ್ಲಿ ಸದಾ ಕಾಯುವವರು ಬೇರೆ ಮತದವರೇ..ಹಲವಾರು ಕಡೆ ಆಗಿದೆ ನನಗೂ ಹೀಗೆ ಆಗಿದೆ ನನ್ನನ್ನು ಎಚ್ಚರಿಸಿದ್ದು ನನಗೆ ಅಪಾಯದೆಡೆಗೆ ಹೋಗದಂತೆ ತಡೆದದ್ದು ನನ್ನ ಮಿತ್ರ ...ಮಾನವೀಯತೆ ಇವರಲ್ಲೇ ಕಾಣುತ್ತೇವೆ ಇವರನ್ನು ಹುಚ್ಚೆಬ್ಬಿಸುವ ನಾಯಕರಲಲ್ಲ.

    ReplyDelete
  3. Sir, Meaningful article
    Humanity is the Religion and thats it.

    ReplyDelete
  4. ಆಜಾದು...

    ನಮಗೆ ಈ ಹಬ್ಬಗಳ ಮಹತ್ವವೆಲ್ಲ ಗೊತ್ತೇ ಇರಲಿಲ್ಲ..

    ನಿಜ ಎಲ್ಲ ಮತಧರ್ಮಗಳು ಒಳ್ಳೆಯದನ್ನೇ ಹೇಳಿವೆ..

    ಅದರೂ ...
    ಜಾತಿ, ಮತ , ಧರ್ಮಗಳ ನಡುವೆ ಅಪಾರ್ಥ.. ಅಪನಂಬುಗೆ ಯಾಕೆ?
    ಯಾಕೆ ಈ ಬಡಿದಾಟ?

    ಇದೆಲ್ಲ ಅನಗತ್ಯ ಅಲ್ಲವಾ?

    ReplyDelete
  5. ನಾಗ್ ಧನ್ಯವಾದ ನಿನ್ನ ಪ್ರತಿಕ್ರಿಯೆಗೆ, ಇದನ್ನು ಎಲ್ಲರೂ ಪಾಠವಾಗಿಸಿಕೊಳ್ಳಬ್ಬೇಕು,,,ಆಗಲೇ ನಿಜ ಮಾನವತೆ ಮೆರೆಯುತ್ತೆ ಇಲ್ಲ ಮರೆಯಾಗುತ್ತೆ..

    ReplyDelete
  6. ಪ್ರಕಾಶ್, ನಿನ್ನ ಮಾತು ನಿಜ..ರಕ್ತ ಹರಿಸೋ, ತಮ್ಮನ್ನೇ ದಂಡಿಸಿಕೊಳ್ಳೋ ಅತಿರೇಕ ಮಾಡುವವರು ಅವರು ನಂಬಿದ ಪ್ರವಾದಿಗಳ ಅಭಿಮತಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ವಾಸ್ತವ ಅಂದ್ರೆ ಹಜ್ರತ್ ಹುಸೇನರನ್ನು ಹೊಡೆಯಲು ಬಂದವವರ ಮೇಲೆ ಅವರು ಹರಿಹಾಯಲಿಲ್ಲ ..ನಾನು ನಮಾಜಿಗೆ ಹೋಗುತ್ತಿದ್ದೇನೆ..ನನ್ನ ತಲೆ ತೆಗೆದರೆ ನಿನ್ನ ಉನ್ನತಿ ಆಗುತ್ತದೆಂದರೆ ಹಾಗೇ ಮಾಡು..ಆದರೆ ಹಾಗೆ ಮಾಡಿದರೆ ನಿನ್ನ ನಂಬಿಕೆ ನಿನ್ನ ನಂಬಿಕೆ ಏನೇ ಇದ್ದರೂ ನಿನ್ನ ಹೆತ್ತವರ ನಂಬಿಕೆ ಅಲ್ಲಾನ ನಂಬಿಕೆ ಎಲ್ಲಾ ಹುಸಿ ಮಾಡುವೆ...ಎಂದರಂತೆ...ಅವರ ಜಾಡು ಎನ್ನುವ ನಾವು ಅವರು ಮಾಡಿದ್ದನ್ನೇಕೆ ಮಾಡದೇ ವಿರೋಧಾಭಾಸದ ಜಾಡ್ಯಕ್ಕೆ ಬಿದ್ದಿದ್ದೇವೋ ತಿಳಿಯದು...ಧನ್ಯವಾದ ನಿನ್ನ ಕಾಳಜಿಪೂರ್ಣ ಮಾತಿಗೆ.

    ReplyDelete
  7. ಜಲನಯನ,
    ಮೊಹರಮ್ ಆಚರಣೆಯ ಹಿನ್ನೆಲೆ ತಿಳಿಸಿದ್ದಕ್ಕಾಗಿ ಧನ್ಯವಾದಗಳು.
    ವಿಭಿನ್ನ ಮತಗಳ ನಡುವಿನ ಹೊಡೆದಾಟ ಒಂದು ಕಾಲಕ್ಕೆ ಸಾಮಾನ್ಯವಾಗಿತ್ತು. ಈಗಲೂ ಸಹ ವಿಭಿನ್ನ ಪಂಗಡಗಳು ಹೊಡೆದಾಟವನ್ನು ನಿಲ್ಲಿಸಿಲ್ಲ. ಇವು ಧಾರ್ಮಿಕ ಪಂಗಡಗಳೇ ಇರಬೇಕಂತಿಲ್ಲ. ರಾಜಕೀಯ ಪಂಗಡಗಳು,ಭಾಷಿಕ ಪಂಗಗಳು ಹೊಡೆದಾಟಕ್ಕೆ ಪ್ರೋತ್ಸಾಹವನ್ನು ನೀಡುತ್ತಲೇ ಇವೆ.‘ಸಬಕೋ ಸನ್ಮತಿ ದೇ ಭಗವಾನ್!’ ಎನ್ನುವದಷ್ಟೇ ನಮಗಿರುವ ಮಾರ್ಗ!

    ReplyDelete
  8. ಸುನಾಥಣ್ಣ ನಿಮ್ಮ ಮಾತು ನೂರಕ್ಕೆ ನೂರು ಸತ್ಯ. ಹೌದು ಕಾದಾಟ ಧಾರ್ಮಿಕ ಪಂಗಡಗಳಿಗೇ ಸೀಮಿತವಲ್ಲ ಆದರೆ ಧಾರ್ಮಿಕ ಮನೋದೌರ್ಬಲ್ಯವನ್ನು ಬಹಳ ಚನ್ನಾಗಿ ದುರ್ಬಳಕೆ ಮಾಡಲಾಗುತ್ತಿದೆ ಎನ್ನುವುದು ವಿಷಾದ. ಈಶ್ವರ್ ಅಲ್ಲಾ ತೇರೋ ನಾಮ್ ಸಬಕೋ ಸನ್ಮತಿ ದೇ ಭಗವಾನ್ ಎನ್ನೋದು ಹೆಚ್ಚು ಹೆಚ್ಚು ಪ್ರಾಸಂಗಿಕ ಎನಿಸುತ್ತಿದೆ. ಧನ್ಯವಾದ

    ReplyDelete
  9. ಅಜಾದ್ ಸರ್ ಮೊಹರಂ ವಿಶೇಷ ತಿಳಿಸುವ ನಿಮ್ಮ ಲೇಖನ ಕಣ್ ತೆರೆಸುವಂತಿದೆ.ಯಾವುದೇ ಧರ್ಮ ಸ್ಥಾಪನೆಗೆ ರಕ್ತಪಾತ , ಪ್ರಾಣ ಹಾನಿ ಅಗತ್ಯ ವಿಲ್ಲ , ಎಲ್ಲಾ ಧರ್ಮಗಳು ಮಾನವೀಯತೆ ,ಶಾಂತಿ ,ಸತ್ಯ, ದಯೆ, ಕರುಣೆ ಇವುಗಳ ನೆಲೆಗಟ್ಟಿನ ಮೇಲೆ ನಿಂತಿವೆ ,ಪ್ರತೀ ಧರ್ಮವೂ ಒಂದೊಂದು ನದಿ ಇದ್ದಂತೆ, ನದಿ ತನ್ನದೇ ಹಾದಿಯಲ್ಲಿ ಹರಿದು ಸಾಗರವನ್ನು ಸೇರುವಂತೆ , ಧರ್ಮವೂ ಸಹ ತನ್ನದೇ ಆದ ರೀತಿಯಲ್ಲಿ ಜನಗಳ ಮನಸ್ಸಿನಲ್ಲಿ ಹರಿದು ಮಾನವರನ್ನು ಸನ್ಮಾರ್ಗದ ಸಾಗರಕ್ಕೆ ಸೇರಿಸುತ್ತದೆ. ಹೇಗೆ ಎಲ್ಲಾ ನದಿಗಳು ಒಂದೇ ರೀತಿ ಹರಿಯುವುದಿಲ್ಲವೋ ಹಾಗೆ ಎಲ್ಲಾ ಧರ್ಮಗಳು ಒಂದೇ ರೀತಿ ಜನಗಳ ಮನಸಿನಲ್ಲಿ ಪ್ರಸರಿಸುವುದಿಲ್ಲ ,ಆದರೆ ಉದ್ದೇಶ ಮಾತ್ರ ಮಾನವೀಯತೆ ,ಶಾಂತಿ ,ಸತ್ಯ, ದಯೆ, ಕರುಣೆ ಇವುಗಳೇ ಆಗಿವೆ. ಈ ಭೂಮಿ ಎಂಬ ಸುಂದರ ಹೂತೋಟದಲ್ಲಿ ಪ್ರತಿ ಧರ್ಮವೂ ಒಂದೊಂದು ಜಾತಿಯ ಹೂ ಇದ್ದಂತೆ. ಹೇಗೆ ಹೂ ತೋಟದಲ್ಲಿ ಒಂದೇ ಜಾತಿಯ ಹೂ ತೋಟದಲ್ಲಿ ಅಂದ ಕಾಣುವುದಿಲ್ಲವೋ ಹಾಗೆ ಇಡೀ ಭೂಮಿಯಲ್ಲಿ ಒಂದೇ ಧರ್ಮ ನಿಲ್ಲಲು ಆ ದೇವರು ಅವಕಾಶ ನೀಡಲಾರ !! ಈ ಮಾತನ್ನು ಪ್ರತಿಯೊಬ್ಬ ಮಾನವರು ಅರಿತಾಗ ಜೀವನ ಸಂಜೀವನ ಆಗುತ್ತದೆ. ಅದಕ್ಕೆ ಹೇಳುವುದು " ನಾವು ವನ್ಯ ಜೀವಿಗಳಿಗಿಂತ ಕೆಟ್ಟವರೂ ಅಂತ" .

    --
    ಪ್ರೀತಿಯಿಂದ ನಿಮ್ಮವ ಬಾಲು.[ನಿಮ್ಮೊಳಗೊಬ್ಬ ]

    ReplyDelete
  10. ನಿಜ ಸರ್ ನಿಮ್ಮ ಮಾತು, ಎಲ್ಲರಿಗೂ ಪಾಠವಾಗಬೇಕು.... ಹಬ್ಬದ ವಿಶೇಷ, ಅದರ ಹಿನ್ನೆಲೆ ಬಹಳ ಮುಖ್ಯ... ಧನ್ಯವಾದಗಳು ಒಳ್ಳೆಯ ಮಾಹಿತಿಯನ್ನು ನೀಡಿದ್ದೀರಿ

    ReplyDelete
  11. ಅಜಾದ್,

    ಮೊಹರಂ ಹಬ್ಬದ ಬಗ್ಗೆ ಅದರ ಮಹತ್ವದ ಬಗ್ಗೆ ಮತ್ತು ಅದೆಲ್ಲವನ್ನು ಮೀರಿ ಈಗ ನಡೆಯುತ್ತಿರುವ ಬಗ್ಗೆ ಮನತಟ್ಟುವಂತೆ ವಿವರಿಸಿದ್ದೀರಿ..ಅದಕ್ಕಾಗಿ ಧನ್ಯವಾದಗಳು.

    ReplyDelete
  12. ಬಾಲು ನಿಮ್ಮ ವಿವರಣೆ, ವಿಶ್ಲೇಷಣೆ ಮತ್ತು ಚಿಂತನೆ ನನ್ನ ಲೇಖನಕ್ಕೆ ಪೂರಕ ಬಲ ಗೊಟ್ಟಿದೆ ಧನ್ಯವಾದ. ನಿಜ ನದಿಗಳ ರೂಪು ರೇಶೆ ಬೇರೆಯಾದರೂ ಸೇರುವುದೆಲ್ಲಾ ಸಮುದ್ರವನ್ನೇ..ಧನ್ಯವಾದ

    ReplyDelete
  13. ಸುಗುಣಾವ್ರೆ, ನನಗೂ ತೀರಾ ಸೂಕ್ಷ್ಮಗಳು ಗೊತ್ತಾದದ್ದು ಕೆದಕಿ ಓದಿದಾಗಲೇ...ಎಲ್ಲ ಗುಣಕ್ಕೂ ಮಿಗಿಲು ಮಾನವ ಗುಣ ಮಾನವೀತೆಯನ್ನು ತೊರೆದವರು ಧರ್ಮಹೀನರು ಎನ್ನುವುದನ್ನು ಎಲ್ಲ ಪ್ರವಾದಿ ಯುಗಪುರುಷರೂ ಸಾರಿ ಹೇಳಿರುವ ಒಪ್ಪಿರುವ ಪ್ರತಿಪಾದಿಸಿರುವ ಸತ್ಯ-ತತ್ವ. ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ.

    ReplyDelete
  14. ಶಿವು, ಧರ್ಮದ ಬೆಳಕಿನಡಿಯಲ್ಲಿ ಅಧರ್ಮಿಗಳು ಮೆರೆವುದು ..ದೀಪದ ಬೆಳಕಿನಡಿ ಕತ್ತಲಿದ್ದಂತೆ..ನಮ್ಮ ಅತಿ ಸಂಕುಚಿತ ಮನೋಪ್ರವೃತ್ತಿಯ ಧರ್ಮದ ವ್ಯಾಖ್ಯಾನ ಹೋಗಭೇಕು ಆಗಲೇ ನಿಜ ಧರ್ಮ ಬೆಳಗುತ್ತೆ. ನಿಮ್ಮ ಅನಿಸಿಕೆಗೆ ನಮನ.

    ReplyDelete
  15. Dr,
    habbagala arthagalu ella dharamdalliyu onde
    yaava dharmavoo kettaddannu bhodhisuvudilla
    sundara baraha

    ReplyDelete
  16. ಆಜಾದ್ ಸರ್, ಕಣ್ತೆರೆಸುವ ಬರಹ. ಧರ್ಮದ ಹೆಸರಿನಲ್ಲಿ ಸ್ವಾರ್ಥವನ್ನು ಬಯಸುವ ಭಂಡುಕೋರರು ಮತ್ತು ಅವರ ಬೆಂಬಲಿಗರು ನಡೆಸುವ ಹೇಯ ಕೃತ್ಯಗಳನ್ನು ಇದರಿಂದ ತಿಳಿಯಬಹುದಾಗಿದೆ, ನಾನೊಬ್ಬ ಎಂಥಾ ಪೆದ್ದ ಎಂದರೆ ಮೊಹರಂ ಎಂದರೆ ಒಂದು ಹಬ್ಬ ಎಂದೇ ತಿಳಿದಿದ್ದೆ, ಅದು ಶೋಕಾಚರಣೆಯ ದಿನ ಎಂಬುದಾಗಿ ನನಗೆ ೧೦ ವರ್ಷಗಳ ಹಿಂದಷ್ಟೇ ತಿಳಿಯಿತು. ಸೀಮಿತ ಮಾಹಿತಿಯುಳ್ಳ ಜನರಿಗೆ ವಿಸ್ತಾರವಾದ ವಿವರಣೆ ನೀಡಿದ್ದೀರಿ,ಇಂದು ಧರ್ಮವೇನಿದ್ದರೂ ಮಾನವ ಧರ್ಮವಾಗಬೇಕು, ಅದು ಜಗತ್ತಿನ ಎಲ್ಲರ ಒಳಿತಿಗೆ ಕಾರಣವಾಗಬೇಕು, ಧರ್ಮದಲ್ಲಿ ಯಾವುದೇ ಕಳಂಕದ ಛಾಯೆಯೂ ಇರಬಾರದು. ಜಗದ ಶಾಂತಿಯನ್ನು ಕಾಪಾಡಿ ಎಲ್ಲರಿಗೂ ಸಂತೃಪ್ತ ಜೀವನ ನಡೆಸಲು ಅವಕಾಶ ಕೊಡುವ ಮಾನವೀಯ ನಡಾವಳಿಯೇ ಧರ್ಮ, ಧನ್ಯವಾದಗಳು

    ReplyDelete
  17. ಡಾ. ಗುರು, ಹಬ್ಬಗಳ ಧರ್ಮಾಚರಣೆಗಳ ಮೂಲ ಹುಡುಕಿದರೆ ಅದರ್ ಮೂಲೋದ್ದೇಶ ಮಾನವ ಧರ್ಮವನ್ನು ಎತ್ತಿಹಿಡಿಯುವುದೇ ಆಗಿರುತ್ತದೆ. ಕ್ರಮೇಣ ಇವು ಕಲ್ಮಶಿತಗೊಂಡು ಉದ್ದೇಶ ದುರುದ್ಧೇಶಕ್ಕೆ ತಿರುಗುತ್ತೆ,,, ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ.

    ReplyDelete
  18. ವಿ,ಆರ್.ಬಿ ಸರ್, ನಿಮ್ಮ ಮಾತು ನಿಜ. ಮತ ಧರ್ಮ ಮೂಲ ಯಾವಾಗ್ಲೂ ಶುದ್ಧವಿರುತ್ತೆ, ನದಿ ತರಹ ಉಗಮ ಪರಿಶುದ್ಧ ಮತ್ತೆ ಎಲ್ಲ ಅದು ಹರಿಯುವ ಹಾದಿಯ ಮೇಲೆ ನಿರ್ಭರವಾಗುತ್ತದೆ. ಮೊಹರಂ ಎಂದರೆ ಬಹಳ ಮಂದಿಯಲ್ಲಿ ತಪ್ಪು ತಿಳುವಳಿಕೆಯಿದೆ, ಇದು ಶೋಕಾಚರಣೆ..ಹೌದು. ನಿಮ್ಮ ಆಸಕ್ತಿ ಮತ್ತು ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  19. ಯಾವುದೇ ಧರ್ಮದ ಪ್ರಾರಂಭವನ್ನು ನವಜಾತ ಶಿಶುವಿಗೆ ಹೋಲಿಸಬಹುದೇನೋ... ಹುಟ್ಟುವಾಗ ನಿರ್ಮಲವಾಗಿ, ನಿಷ್ಕಲ್ಮಶವಾಗಿಯೇ ಇರುತ್ತದೆ. ಆದರೆ ಕ್ರಮೇಣ ಅಂಧಾನುಕರಣೆ, ಸ್ವಾರ್ಥ, ಮೋಹ, ಅಹಂ - ಮುಂತಾದ ಆಕ್ರಮಣಕಾರಿಗಳಿಗೆ ತುತ್ತಾಗಿ ಮಾರಕವಾಗುತ್ತದೆ. ಇದನ್ನು ತಡೆಯುವ ನಿಟ್ಟಿನಲ್ಲಿ ಸರಿಯಾದ ಪೋಷಣೆ, ನಿರ್ವಹಣೆ ಅತ್ಯಗತ್ಯ. ನಂಬಿಕೆ ಇರಬೇಕು. ಆದರೆ ಕುರುಡು ನಂಬಿಕೆ, ಅಂಧಾನುಕರಣೆ ಸಲ್ಲ.

    ReplyDelete
  20. uttama baraha ajad sir.... olleya maahithi needithu...

    ReplyDelete
  21. ಮೊಹರಂ ಆಚರಣೆಯ ಬಗ್ಗೆ ಬಹಳಷ್ಟು ಮಾಹಿತಿ ನೀಡಿದ್ದೀರಿ, ಧನ್ಯವಾದಗಳು.

    ReplyDelete
  22. ತೇಜಸ್ವಿನಿ..ನಿಮ್ಮ ಮಾತು ನೂರಕ್ಕೆ ನೂರು ಸತ್ಯ ಮತ್ತು ಹಾಗೇ ನಡೆದಿದೆ. ಧರ್ಮದ ಆದಿಯ ಕೊಂಡಿಗಳ ಕಾಲುಭಾಗ ವಿಧೇಯತೆ ಅದರ ನಿಜಾರ್ಥ ಅರಿತಿದ್ದರೆ ಇಂದು ಟ್ರೇಡ್ ಸೆಂಟರ್ ಘೋರ, ಬೆಂಗಳೂರಿನ ಬಾಂಬ್ ದಾಳಿ, ಹತ್ಯಾಕಾಂಡ ಎಸಗಿದ ಕಸಬ್ ನ ಕಸುಬು, ಗುಜರಾತಿನಲ್ಲಿ ಅಮಾಯಕರಮೇಲೆ ನಡೆದ ಅತ್ಯಾಚಾರ ಎಲ್ಲಾ ಆಗುತ್ತಲೇ ಇರಲಿಲ್ಲ. ಅವರ ಜಹಾದ್ ರಕ್ತಪಾತ ನಿಲ್ಲಿಸಲು ತಮ್ಮನ್ನೇ ಬಲಿಕೊಟ್ಟದ್ದಾಗಿತ್ತು..ಇವರದ್ದು ಎಲ್ಲ ಅಮಾಯಕರ ಬಲಿ ತೆಗೆದುಕೊಂಡು ಮತ್ತೆ ರಕ್ತ ದಾಹದಿಂದ ಏದುಸಿರು ಬಿಡುವ ರಕ್ಕಸ ಪ್ರವೃತ್ತಿ...ಧರ್ಮದ ಇವರ ವ್ಯಾಖ್ಯಾನ...ಇವರಿಗೇ ಪ್ರೀತಿ...ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ

    ReplyDelete
  23. ಸುಧೇಶ್ ಮೊಹರಂ ಬಗ್ಗೆ ಓದುವಾಗ ಇದು ಒಂದು ಕಣ್ತೆರೆಸುವ ವಾಸ್ತವವನ್ನು ಬಿಂಬಿಸಿತ್ತು..ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ

    ReplyDelete
  24. ಪುಟ್ಟಿಯ ಅಮ್ಮನಿಗೆ ಧನ್ಯವಾದ ನಿಮ್ಮ ಆಸಕ್ತಿಗೆ ಮತ್ತು ನನಗೆ ಇಂತಹ ಹಲವು ವಾಸ್ತವಗಳನ್ನು ನಿಮ್ಮ ಮುಂದೆ ಇಡಲು ಪ್ರೋತ್ಸಾಹ ನೀಡಿದ್ದಕ್ಕೆ..

    ReplyDelete
  25. ಧನ್ಯವಾದ..ವಿಜಯಶ್ರೀ.....

    ReplyDelete
  26. ಅಜಾದ್,

    ಮೊಹರಂ ಬಗ್ಗೆ ಮಾಹಿತಿಗೆ ಧನ್ಯವಾದಗಳು.
    ನಾನು ಚಿಕ್ಕವನಿದ್ದಾಗ ಮೊಹರಂ ಸಂದರ್ಭದಲ್ಲಿ ’ಚೊಂಗಿ’ ಎನ್ನುವ ಸಿಹಿ ಮಾಡಿ ನಮ್ಮ ಪಕ್ಕದ ಓಣಿಯ ಸಾಹೇಬರು ಕಳಿಸುತ್ತಿದ್ದರು. ಈಗಲೂ ಅದು ಮಾಡುತ್ತಾರೋ ಎನೋ..ನೆನಪಾಯ್ತು

    ReplyDelete
  27. hmmm.. howdu sir dharma annodu ondu manaviyateya, manushtvada neleya melene bandirodu... adanna swarta jaanagalu tammade upayogakke, swartakke halu madta iddare..

    danyavaadagalu sir uttama mahitige..

    ReplyDelete
  28. ಅಪ್ಪ-ಅಮ್ಮಗೆ ನನ್ನ ಡಬಲ್ ಧನ್ಯವಾದ...ದಯಮಾಡಿ ನೀವು ತಪ್ಪದೇ ನನ್ನ ಬ್ಲಾಗಿಗೆ ಪ್ರತಿಕ್ರಿಯೆ ಹಾಕಿ...ಧನ್ಯವಾದ ಹೇಳ್ತೇನೆ..ನಮಸ್ತೆ ಹೇಳ್ತೇನೆ..ಯಾಕೆ ಗೊತ್ತಾ...
    ನನ್ನ ಮೊದಲ ನಾಲ್ಕು ಪದಗಳು ನೋಡಿ ನಿಮಗೆ ಕೊಟ್ಟ ಉತ್ತರದಲ್ಲಿ....
    ಅಪ್ಪ-ಅಮ್ಮಗೆ ನನ್ನ ನಮಸ್ತೆ....ಹಹಹಹ

    ReplyDelete
  29. ತರುಣ್ ಥ್ಯಾಂಕ್ಸ್ ಕಣಪ್ಪಾ,,, ಊರಿಂದ ಬಂದು ನನ್ನ ಬ್ಲಾಗ್ ನೊಡೀ ಪ್ರತಿಕ್ರಿಯೆ ಹಾಕಿದಿಯಲ್ಲಾ...

    ReplyDelete
  30. ಮಾನವತೆಯ ಪಾಠಗಳ ಕಲಿಸಿದಕ್ಕೆ ಧನ್ಯವಾದಗಳು.. :)

    ReplyDelete
  31. ಈ ಹಬ್ಬದ ಬಗ್ಗೆ ಅಷ್ಟು ಗೊತ್ತಿರ್ಲಿಲ್ಲ ಈಗ ಗೊತ್ತಾಯ್ತು

    ನಿಮ್ ಬ್ಲಾಗ್ ಗೆ ಸ್ವಲ್ಪ ತಡವಾಗಿ ಬಂದಿದೀನಿ ಸಾರೀ ಸರ್

    ReplyDelete
  32. ಧನ್ಯವಾದ ಪ್ರದೀಪ್..ಇದು ನನ್ನ ಪಾಠವಲ್ಲ...ನಾನೂ ಕಲೀಬೇಕಾದ ಪಾಠ..ಜಲನಯನಕ್ಕೆ ಸ್ವಾಗತ ಪ್ರದೀಪ್..

    ReplyDelete
  33. ಮಂಜು ಥ್ಯಾಂಕ್ಸ್..ಹೌದು ಸುಮಾರು ಜನಕ್ಕೆ ಈ ಹಬ್ಬದ ವಿವರಗಳು ಗೊತ್ತಿಲ್ಲ...ಇದು ಒಂದು ದುಃಖಾಂತ ಚರಿತ್ರೆಯ ಪುಟ...

    ReplyDelete
  34. ಸರ್ ಹಜರತ್ ಇಮಾಮ್ ಹಸೇನ್ ರ ಬಗ್ಗೆ ಇನ್ನಷ್ಟು ತಿಳಿಯಬೇಕು ಯಾಕಂದ್ರೆ ಅವರೆ ನನ್ನಪಾಲಿಗೆ ನಿಜವಾದ ಜಗದ್ಗುರು ಕನಸಲ್ಲು ಮನಸಲ್ಲು ಅವರದೇ ದ್ಯಾನ ಈ ಮಾಹಿತಿ ಓದಿ ನನಗೆ ಎಷ್ಟು ಖುಸಿಯಾಯಿತು ಅಂದ್ರೆ ಓಳಿಗೆ ಊಟ ಮಾಡಿದಷ್ಟು ಸಂತೋಷ ವಾಯಿತು ದಿನಕ್ಕೆ ಟ ಸಲವಾದರು ಅಂತರ್ಜಾಲದಲ್ಲಿ ಅವರ ಹೆಸರನ್ನ ಅವರ ಬಗ್ಗೆ ಇರುವ ಲೇಖನಗಳನ್ನ ಗೆಳೆಯರಿಗೆ ತಿಳಿಯಪಡಿಸುವುದೇ ನನ್ನ ದ್ಯನಂದಿನ ಮುಖ್ಖಾ ಕೆಲಸವಾಗಿದೆ ಸರ್ ಅವರ ಹೆಸರಲ್ಲಿ ಬಕ್ತಿಮಾರ್ಗ ಅನ್ನೋ ವಾಟ್ಸ ಹ್ಯಾಪ್ ಗ್ರೂಪ್ ಮಾಡಿಕೊಂಡಿದ್ದೇನೆ ನಿಮ್ಮ ವಾಟ್ಸ ಹ್ಯಾಫ್ ನಂಬರ್ ಕಳಿಸಿ 9686163045 ಇದು ನಮ್ ನಂಬರ್ ಸರ್ ಮರಿಬೇಡಿ ಸರ್

    ReplyDelete
  35. ಸರ್ ಹಜರತ್ ಇಮಾಮ್ ಹಸೇನ್ ರ ಬಗ್ಗೆ ಇನ್ನಷ್ಟು ತಿಳಿಯಬೇಕು ಯಾಕಂದ್ರೆ ಅವರೆ ನನ್ನಪಾಲಿಗೆ ನಿಜವಾದ ಜಗದ್ಗುರು ಕನಸಲ್ಲು ಮನಸಲ್ಲು ಅವರದೇ ದ್ಯಾನ ಈ ಮಾಹಿತಿ ಓದಿ ನನಗೆ ಎಷ್ಟು ಖುಸಿಯಾಯಿತು ಅಂದ್ರೆ ಓಳಿಗೆ ಊಟ ಮಾಡಿದಷ್ಟು ಸಂತೋಷ ವಾಯಿತು ದಿನಕ್ಕೆ ಟ ಸಲವಾದರು ಅಂತರ್ಜಾಲದಲ್ಲಿ ಅವರ ಹೆಸರನ್ನ ಅವರ ಬಗ್ಗೆ ಇರುವ ಲೇಖನಗಳನ್ನ ಗೆಳೆಯರಿಗೆ ತಿಳಿಯಪಡಿಸುವುದೇ ನನ್ನ ದ್ಯನಂದಿನ ಮುಖ್ಖಾ ಕೆಲಸವಾಗಿದೆ ಸರ್ ಅವರ ಹೆಸರಲ್ಲಿ ಬಕ್ತಿಮಾರ್ಗ ಅನ್ನೋ ವಾಟ್ಸ ಹ್ಯಾಪ್ ಗ್ರೂಪ್ ಮಾಡಿಕೊಂಡಿದ್ದೇನೆ ನಿಮ್ಮ ವಾಟ್ಸ ಹ್ಯಾಫ್ ನಂಬರ್ ಕಳಿಸಿ 9686163045 ಇದು ನಮ್ ನಂಬರ್ ಸರ್ ಮರಿಬೇಡಿ ಸರ್

    ReplyDelete