Wednesday, February 2, 2011

ಬೇಲಿ, ಮಾಲಿ ಮತ್ತು ಹೊಲ
ಶತವಿಕ್ರಮನ ತಲೆ ಗಿರ್ ಎನ್ನುತ್ತಿತ್ತು. ಕಪಿಲಾಪುರದ ರಾಜಕತೆ ಆರಾಜಕತೆಯಾಗುತ್ತಿದೆ... ತಾನು  ತನ್ನ  ತಾತನ  ಚಕ್ರಾಧಿಪತ್ಯದ  ಕಾಲದ ಸುವರ್ಣ ಯುಗದ ಬಗ್ಗೆ ಕೇಳಿದ್ದ, ತಂದೆ ಕಾಲದ ಉನ್ನತ ಪ್ರಜಾಪಾಲನೆಯ ಬಗ್ಗೆ ಓದಿದ್ದ..ತಾನೂ ಎಲ್ಲ ಮೆಚ್ಚುವ ಹಾಗೆ ರಾಜ್ಯಭಾರ ಮಾಡಿದ್ದ. ಈ ರಾಜ ವಂಶಕ್ಕೆ ವರವಾಗಿದ್ದ ದೀರ್ಘಾಯುಷ್ಯ ಶತವಿಕ್ರಮನನ್ನು ಕಾಡತೊಡಗಿತ್ತು. ಭೇತಾಳನ ವಶಪಡಿಸಿಕೊಂಡು ಅವನ ನಾಮಾವಶೇಷ ಅಳಿಸಿದರೆ ಮಾತ್ರ ಆತನ ಕುಲಕ್ಕೆ ಮುಕ್ತಿಯ ಸಾಧ್ಯತೆಯಿತ್ತು ಹಾಗಾಗಿ ಜಹಗೀರು ಮತ್ತು ಸ್ವಾಯತ್ತತೆ ಪಡೆದು ಈ ಆಧಿನಿಕ ಯುಗದಲ್ಲೂ ಭೇತಾಳನನ್ನು ಸೋಲಿಸುವುದರಲ್ಲೇ ಕಾಲ ಕಳೆಯುತ್ತಿದ್ದ. ಇಲ್ಲಿ ಇವರಿಬ್ಬರ ಮಧ್ಯದ ಈ ಕಿತ್ತಾಟ ಕೇವಲ ಅವರಿಬ್ಬರಿಗೆ ಮತ್ತು ಅದರ ರನ್ನಿಂಗ್ ಕಾಮೆಂಟರಿ ಕೊಡುವ ನನಗೆ ಮಾತ್ರ ಸಾಧ್ಯ.
ಏನು...?? ಮಹಾಭಾರತದ ಆಗುಹೋಗುಗಳನ್ನು ದೃತರಾಷ್ಟ್ರನಿಗೆ ಸಂಜಯನು ಹೇಳುತ್ತಿದ್ದ ರೀತಿನೇ..ಎಂದಿರಾ...?? ಹೌದು. ಇದಕ್ಕೆ ಕಾರಣವೂ ಇಲ್ಲದಿಲ್ಲ, ತ್ರಿವಿಕ್ರಮನ ಕಾಲದಿಂದ ಈ ಕಥೆಗಳನ್ನು ಹೇಳುತ್ತಿದ್ದ ಕಾರಣ ನನಗೂ ಒಂದು ರೀತಿಯ ಶಾಪವೇ ತಟ್ಟಿತ್ತು ಅಂದು. ಸಾವಿರಾರು ಬಾರಿ ಜನ್ಮತಾಳಿ ಈ ಶೃಂಖಲೆಯ ಪ್ರತಿಕೊಂಡಿಯ ವಿವರ ಪ್ರಜಾಜನಕ್ಕೆ ತಲುಪಿಸುವ ಹೊಣೆಗಾರಿಕೆ ನನ್ನದಾಗಿದೆ...ಅದಕ್ಕೇ ಇದೆಲ್ಲಾ ಅನಿವಾರ್ಯ,,..

ಏನು.. ?? “ಹರಿಕಥೆ ಬೇಡ ..ನಮ್ಮ ಎಮ್ಮೆಲ್ಲೆ, ಮಂತ್ರಿ, ಮು.ಮಂತ್ರಿಗಳ ತರಹ ಪ್ರಜಾಪಾಲನೆ ಮತ್ತು ಸಮಾಜ ಕಲ್ಯಾಣ ಬಿಟ್ಟು ಮತ್ತೆಲ್ಲ ಕಲ್ಯಾಣಕಾರ್ಯ ಮಾಡೋಹಾಗೆ ..ನೀನು ಮಾಡಬೇಡ”
ಅಂತೀರಾ.... ಸರಿ ಸರಿ...ಸಾರಿ ರೀ.


ಕಥೆಗೆ ಬರ್ತೀನಿ. ಎಂದಿನಂತೆ ಶತ ವಿಕ್ರಮ ತನ್ನ ಕಂಪ್ಯೂಟರ್ ನ ಗೂಗಲ್ ನಲ್ಲಿ ’ಭೇತಾಳ’ ಅಂತ ಹಾಕಿ ಹುಡುಕಿದ್ರೆ.. ಎಲ್ಲಾ ತನ್ನದೇ ಹಳೇ ವಿಫಲ ಕಥೆಯ ಸರ್ಚ್ ರಿಸಲ್ಟ್ ಬರ್ತಿದ್ದನ್ನೇ ನೋಡಿ ಬೇಸರಗೊಂಡು...”ಛೇ” ಎನ್ನುತ್ತಾ ಹಾಗೇ ಕೀಲಿ ಮಣೆಯನ್ನ ತಬಲ ಎಂದುಕೊಂಡು ಬಡಿದ.. ಅರೆ..!! ಏನಿದು??!! ಗೂಗಲ್ ಸ್ಕಾಲರ್ ಓಪನ್ ಆಗಿ...ಭೇತಾಳನ ಹೊಸ ಅಡ್ಡಾ-ದ ವಿವರ ಸಿಕ್ಕೇಬಿಡ್ತು.... ಭೇತಾಳ ಶತವಿಕ್ರಮನ ಕೈಗೆ ಸಿಗಲೇಬಾರದು ಎಂದು ಉಚ್ಛಾಟಿತ ನಿರ್ದಲೀಯ ಎಮ್ಮೆಲ್ಲೆಗಳ ಶಾಶಕಭವನದ ಅಪಾರ್ಟ್ ಮೆಂಟಿನ ಫ್ಯಾನಿಗೆ ನೇತಾಡುತ್ತಾ ಇತ್ತು. ಹೋದೆಯಾ ಪಿಶಾಚಿ ಅಂದ್ರೆ ಬಂದೆ ಗವಾಕ್ಷೀಲಿ ಅನ್ನೋತರಹ ಮತ್ತೆ ತನ್ನನ್ನು ಫ್ಯಾನಿಂದ ಬಿಡಿಸಿ ಕೆಳಗಿಳಿಸಿ ಕ್ರಿಮೆಟೋರಿಯಂ ನತ್ತ ನಡೆದ ಶತ ವಿಕ್ರಮನ ಶ್ರಮಕ್ಕೆ ನಗುತ್ತಾ...ಹೇಳಿತು.


ಅಯ್ಯಾ ಶತವಿಕ್ರಮ ಕಪಿಲಾಪುರದ ಕಥೆಯಲ್ಲಾ ನಿನಗೆ ತಿಳಿದದ್ದೇ... ಇಲ್ಲಿಯ ರಾಜ ಚಿವಿಂಗ್ಗಮ್ ಹಾಕಿ ಮೆತ್ತಿಸಿಕೊಂಡಂತೆ ನೂರಾರು ಆರೋಪಗಳು ಬಂದರೂ ತನ್ನ ಕುರ್ಚಿಗೆ ಅಂಟಿರುವುದು ನೋಡಿದರೆ ಉದಾತ್ತ ವಿಚಾರಗಳ ಅತಿ ಸೌಮ್ಯ ಮತ್ತು ಅತಿ ಚಾಣಾಕ್ಷ ಭರತದೊರೆ ಬದದ್ದೂರ್ ಶಾಸ್ತ್ರಿಯ ನೆನಪಾಗುತ್ತದೆ. ಅಂತಹ ಮೌಲ್ಯಾಧಾರಿತ ರಾಜಕಾರಣದ ಧುರೀಣರನ್ನು ಕೊಟ್ಟ ಭರತ ಭೂಮಿ ಇಂದು ಏಕೆ ಹೀಗೆ ತನ್ನ ಜನತೆಯ ರಕ್ತ ಹೀರುವ ರಕ್ತ ಪೀಪಾಸು ರಾಜಕೀಯ ಅರಾಜಕಾರಣಿಗಳನ್ನು ನೀಡುತ್ತಿದೆ..? ಎನ್ನುವುದು ಅರ್ಥವಾಗುತ್ತಿಲ್ಲ. ನಮ್ಮ ಕಪಿಲಾಪುರವನ್ನೇ ತೆಗೆದುಕೋ ಇಲ್ಲಿನ ನಮ್ಮ ರಾಜ್ಯ ಯಜಮಾನನನ್ನು ನೋಡಿ ಹುಡುಗರೂ ತಮ್ಮ ಹಾಡುಗಳನ್ನು ಬದಲಾಯಿಸಿ... “ಥರ..ಥರ..ಥರ...ಥರ..ನಿಂಥರ ಇಲ್ಲಿ ಯಾರೂ ಇಲ್ಲ ಕಣ್ರೀ ನಿಮ್ ಥರ”
ಅಂತ ಹಾಡ್ತಿದ್ದಾರೆ. ಕೊಲೆ ಸುಲಿಗೆ ದರೋಡೆ ಕಳ್ಳರು ರಾತ್ರಿಹೊತ್ತು ಮತ್ತು ನಮ್ಮ ರಾಜಕಾರಣಿಗಳು ಹಾಡ ಹಗಲೇ ಎಲ್ಲರಿಗೆ ಕಾಣುವಂತೆ ಕೋಟ್ಯಾಂತರ ದೋಚುತ್ತಿದ್ದಾರೆ. ಇನ್ನು ವ್ಯವಸ್ಥೆಯ ವ್ಯವಸ್ಥಾಪಕ ಎಲ್ಲ ನಿಗ್ರಹಿಸುವ ಭರದಲ್ಲಿ ತನ್ನ ಬಾಲದ ಕೆರೆತವನ್ನು ತಾನೇ ಕಚ್ಚಿ ನಿವಾರಿಸಿಕೊಳ್ಳಲು ಗಿರ ಗಿರ ಸುತ್ತುವ ನಾಯಿಯಂತೆ ಸುತ್ತುತ್ತಾ ಬಸವಳಿಯುತ್ತಿದ್ದಾನೆ. ತನ್ನ ಬಾಲಕ್ಕೇ ರಕ್ಷಣೆ ಇಲ್ಲ ರಕ್ಷಣೆ ಕೊಡಿ ಅಂತ ಪೇಚು ಪೇಚಾಗಿ ಪೇಚಾಡುತ್ತಿದ್ದಾನೆ. ಇವುಗಳ ಪರಿವಾರವೇನು...? ಇದನ್ನು ತಿಳಿದೂ ಹೇಳದೇ ಹೋದರೆ ಪ್ರತಿಪಕ್ಷದಿಂದ ಆಡಳಿತಪಕ್ಷಕ್ಕೆ ಬಂದು ಆಳುವವನ ಪಕ್ಕೆ ಸದಾಚುಚ್ಚುವ ಮುಳ್ಳಿನಂತೆ ನಿನ್ನನ್ನು ಪದೇ ಪದೇ ಚುಚ್ಚುತ್ತೇನೆ...ಇಂತಹ ಸಾಮಾನ್ಯ ಸಮಸ್ಯೆಗಳ ಉತ್ತರ ನೀಡದೇ ಇದ್ದರೆ ಸಮಸ್ಯೆಗಳ ಸಾಗರವೇ ಆದ ಈ ಭೇತಾಳನನ್ನು ನಿರ್ನಾಮ ಮಾಡುವ ಕನಸನ್ನು ಬಿಟ್ಟುಬಿಡು.
ಎಂದಿತು.


ಇದಕ್ಕೆ ಶತ ವಿಕ್ರಮ..
”ಎಲೈ ಭೇತಾಳ..ತಾಳತಪ್ಪಿ ಹಾಡುವುದು ನಿನ್ನ ಜಾಯಮಾನವೇ ಬಿಡು, ಮೌಲ್ಯಗಳು ದಿನೇ ದಿನೇ ಹದಗೆಟ್ಟಿರುವುದು ಕಾಲದ ಮಹಿಮೆ..ಆಗ ಶಾಸ್ತ್ರಿ ಈಗ ಹೆಸರಿಗಾದರೂ ಒಬ್ಬರು ಅಟಲರು ಇಲ್ಲವೇ?? ಅದಿರಲಿ... ಸಮಸ್ಯೆಗಳು ಸ್ವಯಂ ಚುನಾಯಿತ ಎನ್ನುವುದು ನಿನ್ನ ಮಿದುಳಿಲ್ಲದ ಬುರುಡೆಗೆ ಹೇಗೆ ತಿಳಿದೀತು...? ವ್ಯವಸ್ಥೆಯನ್ನು ದೂರುವುದೇ ಸ್ವಭಾವವಾಗಿರುವ ಬುದ್ಧಿಜೀವಿಗಳು, ರಾಜಕಾರಣಿಗಳನ್ನು ಸದಾ ದೂರುವ ಜನ-ಮತದಾರರು ಆರಿಸುವುದು ಯಾರನ್ನು.?? ಅಥವಾ ಬುದ್ಧಿಜೀವಿಗಳು ತಾವೇ ಮಹಾ ಬುದ್ಧಿವಂತರೆಂದು ಮತಹಾಕದೇ ಇರುವುದರಿಂದ ಬೆಳೆಯುವುದು ಇಂಥ ಗೋಸುಂಬೆಗಳೇ..ಅಲ್ಲವೇ..? ? ಐದು ವರ್ಷಕ್ಕೊಮ್ಮೆ ಚುನಾಯಿಸುವ ಹಕ್ಕು ಸಿಕ್ಕಾಗ ಸಮರ್ಥರನ್ನು ಆರಿಸುವ ಮತ್ತು ಮತ ಚಲಾವಣೆ ಮಾತ್ರವಲ್ಲ ಅದಕ್ಕೆ ಲಾಯಕ್ಕಾದ ಪ್ರಜಾ ಪ್ರತಿನಿಧಿಗಳನ್ನು ಮುಂದೆ ತರುವುದೇ ಮತದಾರನ ಕರ್ತವ್ಯ...ಬದಲಾವಣೆ ಅವನಿಂದಲೇ ಸಾಧ್ಯ.... ಅಮೂಲಾಗ್ರ ಬುದ್ಧಿಮಂಥನ ಕ್ರಾಂತಿಯೇ ಆಗಬೇಕು.. ಆಗಲೇ ನಿಜವಾಗಿಯೂ ಸಿರಿವಂತನಾಡು .. ಸುಭಿಕ್ಷ ದೇಶ ಗಾಂಧೀಜಿಯ ರಾಮರಾಜ್ಯದ ಕನಸು ನನಸಾಗುವುದು ನಾಡು ಎಲ್ಲರಿಗೂ ಗೋಚರಿಸುವುದು”
ಎಂದ ಕೂಡಲೇ....


“ಹಹಹಹಹ...ನೀನು ಮೌನ ಮುರಿದೆ...ಇಗೋ ನಾನು ಹೊರಟೆ” ಎಂದು ಹಾರುತ್ತಾ ಭೇತಾಳ ಮತ್ತೊಂದು ನೇತಾಡುವ ಜಾಗವನ್ನು ಅರಸಿ ಮಾಯವಾಯಿತು.

37 comments:

  1. ನಿಮ್ಮ ಸುಂದರ ವಿಕ್ರಂ ಔರ್ ಬೇತಾಳ್ ಕಥೆ ನಮ್ಮ ಚಂದಮಾಮ ದಿನಗಳನ್ನು ನೆನಪಿಸಿತು.ಇಂದಿನ ಪ್ರಸಕ್ತ ರಾಜಕಾರಣವನ್ನು ಹಳೆಯ ಸ್ಟೈಲಿನಲ್ಲಿ ಬಣ್ಣಿಸಿರುವುದು ಚೆನ್ನಾಗಿದೆ.

    ReplyDelete
  2. ‘ತನ್ನ ಬಾಲಕ್ಕೇ ರಕ್ಷಣೆ ಇಲ್ಲ!’, ಹಹ್ಹಹ್ಹಾ!! ಬಾಲವಿರುವ ಪ್ರಾಣಿಗಳೇ ಕುರ್ಚಿಯ ಮೇಲೆ ಕೂತಿರುವಾಗ, ವಿಕ್ರಮರಾಜ ಮೂಕನಾಗಲೇ ಬೇಕು. ಬೇತಾಳನ ಪ್ರಶ್ನೆಗೆ ವಿಕ್ರಮನ ಉತ್ತರ ಸಮರ್ಪಕವಾಗಿದೆ. ಆ ದಿನಗಳು ಬರಲಿ ಎಂದು ಹಾರೈಸಬೇಕಷ್ಟೆ!

    ReplyDelete
  3. chennagide sir kate... naavu chikkoriruvaga tumba oduta idvi... baalyada dinagaLannu nenapisitu neevu kotta ee kathe

    ReplyDelete
  4. ಬೇತಾಳ ತ್ರಿವಿಕ್ರಮರು ಎಲ್ಲಿ.. ಅನ್ಕೊತಾಇದ್ದೆ..ಬ೦ದೇ ಬಿಟ್ರು...!
    ವಾಹ್!ಚೆನ್ನಾಗ್ ಬರ್ದಿದ್ದಿರಾ...:)

    ReplyDelete
  5. chennagide sir
    vikram betaal kathe use madkondu chennagi vishaya helta idiraa
    munduvareyali

    ReplyDelete
  6. :) ಚೆನ್ನಾಗಿದೆ ಆಧುನಿಕ ತ್ರಿವಿಕ್ರಮ ಬೇತಾಳರ ಕಥೆ.

    ReplyDelete
  7. ಅಜಾದ್,

    ಮತ್ತೆ ಬಂತಲ್ಲ ಬೇತಾಳ ಮತ್ತು ವಿಕ್ರಮ..ಯಡ್ಡಿ ಪರಿಸ್ಥಿತಿಯನ್ನು ಅದಕ್ಕೆ ತಕ್ಕಂತೆ ನಮ್ಮ ಪರಿಸ್ಥಿತಿಯನ್ನು ಇಲ್ಲಿ ಚೆನ್ನಾಗಿ ವಿವರಿಸಿದ್ದೀರಿ...

    ReplyDelete
  8. ಆಜಾದೂ...

    ಸಕಾಲಿಕವಾಗಿದೆ.. ಈ ಲೇಖನವನ್ನು ಮುಖ್ಯ ಮಂತ್ರಿಗಳಿಗೆ ಮೇಲ್ ಮಾಡಿಕಳಿಸಿಬಿಡು..

    ತುಂಬಾ ದಿನಗಳ ನಂತರ ಬೇತಾಳನನ್ನು ನೋಡಿ ಖುಷಿ ಆಯ್ತು..

    ಹಾಗೆಯೇ..

    "ಅಪ್ಪ.. ಮಗನನ್ನೂ" ಕರ್ಕೊಂಡು ಬಾ...
    (ಗೊತ್ತಿಲ್ಲ ಮಗು)...

    ಜೈ ಹೋ.. !

    ReplyDelete
  9. ಡಾಕ್ಟರ್ ಟಿ.ಡಿ.ಕೆ. ನಿಮ್ಮ ಹಾಗೆ ನಾನೂ ಚಂದಮಾಮ ಅಂದ್ರೆ ದಿವಾನಾ ಆಗ್ತಿದ್ದೆ...ನಮ್ಮ ಊರಲ್ಲೊಬ್ಬ ಹೈಸ್ಕೂಲಿಗೆ ಹೋಗುವವ (ಸುಮಾರು ೪ ಕಿ.ಮೀ ದೂರದ ಊರಲ್ಲಿ)ಅಲ್ಲಿಂದ ಚಂದಮಾಮ ತರ್ತಿದ್ದ .. ನನಗೆ ಒಂದು ದಿನ ಓದಲು ಅವನು ಚಾರ್ಜ್ ಮಾಡ್ತಿದ್ದದ್ದು ಒಂದು ಸೊಲಿಗೆ ಹುರಿಗಡಲೆ. ಹಹಹ. ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ

    ReplyDelete
  10. ಸುನಾಥಣ್ಣ..ನಮ್ಮ ರಾಜ್ಯದ ಮುಖ್ಯಮಂತ್ರಿಗಳು ನನಗೆ ಕೊಲೆ ಬೆದರಿಕೆ ಬರ್ತಿದೆ ಅಂದ್ರೆ ..ಏನು ಸಂದೇಶ ಜನತೆಗೆ ರವಾನಿಸಿದ ಹಾಗೆ...ನಿಜ ನಮ್ಮ ವ್ಯವಸ್ಥೆ ನಾರುತ್ತಿದೆ.. ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ

    ReplyDelete
  11. ಮನಸು ಮೇಡಂ ಧನ್ಯವಾದ ನಿಮ್ಮ ಅನಿಸಿಕೆಗೆ...

    ReplyDelete
  12. manamuktaa ನಿಮ್ಮ ಮುಕ್ತ ಅಭಿಪ್ರಾಯಕ್ಕೆ ನನ್ನ ಮುಕ್ತ ಧನ್ಯವಾದ...

    ReplyDelete
  13. ಗುರು, ಥ್ಯಾಂಕ್ಸ್ ರೀ...ನಿಮ್ಮ ಪ್ರತಿಕ್ರಿಯೆಗೆ

    ReplyDelete
  14. ಸುಮ, ಪರಿಸ್ಥಿತಿ ನಮ್ಮ ರಾಜ್ಯದ್ದು ಭೇತಾಳನನ್ನೂ ಎಬ್ಬಿಸುವಂತಿದೆ ಅಲ್ಲವಾ...??
    ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ

    ReplyDelete
  15. ಶಿವು ಎಡ್ಡಿ, ರೆಡ್ಡಿ ಗಳ ಗೋಳು ಹೇಳತೀರದು..ಯಾವ ವಿಕ್ರಮನ ಪರಾಕ್ರಮವೂ ಕೆಲ್ಸ ಮಾಡೊಲ್ಲ ಇವರ ಪೇಚಾಟದ ಮುಂದೆ ..ಧನ್ಯವಾದ

    ReplyDelete
  16. ಪ್ರಕಾಶು, ಕಿವಿಯ ಮಹಿಮೆ ನಿನ್ನದಾದರೆ ಭೇತಾಳ ಚರಿತೆ ನನ್ನದು..ಬ್ಯಾಲಂಸಿಂಗ್ ಆಕ್ಟ್...ಧನ್ಯವಾದ ನಿನ್ನ ಪ್ರತಿಕ್ರಿಯೆಗೆ.

    ReplyDelete
  17. sir uttama lekhana..

    namma raajyada vikrama - betalara kate..

    kate alla idu namam vyate...

    ReplyDelete
  18. ಹಹಹಾ ಹಹಹ ಹ್ ಭಯ್ಯ ಬೇತಾಳ .. ಕತೆ ಹೇಳ್ತೀರಾ...
    ರಾಜಕೀಯ ಅನ್ನೋದು ಬೆನ್ ಹತ್ತಿ ಕೂರೋ ವಿಕ್ರತ ಮನಸಿನ ಬೇತಾಳ ಕ್ಕಿಂತ ಕೆಟ್ಟದು ಅಂತ ಈಗಿನ ರಾಜಕೀಯ ನೋಡಿ ತಿಳ್ಕೋಬಹುದು ... ವಿಷಯವನ್ನ ಚೆನ್ನಾಗಿ ಹೇಳಿದ್ದೀರಿ ಭಯ್ಯ .. ಧನ್ಯವಾದಗಳು

    ReplyDelete
  19. ಚೆನ್ನಾಗಿದೆ.. :)

    ReplyDelete
  20. ಇಂದಿನ ರಾಜಕೀಯ ಪರಿಸ್ಥಿತಿಗೆ ಹಿಡಿದ ಕನ್ನಡಿಯ ಹಾಗಿದೆ ನಿಮ್ಮ ಇ ಲೇಖನ...
    ತುಂಬಾ ಚೆನ್ನಾಗಿದೆ

    ReplyDelete
  21. ಧನ್ಯವಾದ ತರುಣ್...ವಿಕ್ರಮನಿಗೆ ಭೇತಾಳ ಹಿಡಿದ್ರೆ..ನಮ್ಮ ಜನಸಾಮಾನ್ಯನಿಗೆ ರಾಜಕೀಯ.

    ReplyDelete
  22. This comment has been removed by the author.

    ReplyDelete
  23. ರಂಜು, ಕಡೆಗೂ ಎಲ್ಲೋ ಒಂದು ಕಡೆ ನಿನ್ನ ದರ್ಶನ ಆಗುತ್ತಾ ಎಂದಿದ್ದೆ,,,ಇಲ್ಲೇ ಜಲನಯನದಲ್ಲೇ ಆದದ್ದು ನನ್ನ ಭಾಗ್ಯ...ಆದ್ರೆ ನಿನ್ನ ಬ್ಲಾಗ್ ಹನಿ-ಕವನ, ೨೪ ಜುಲೈ ೨೦೧೦ ರಲ್ಲೇ ನಿಂತಿದೆ..ಇದು ನನಗಷ್ಟೇ ಅಲ್ಲ ಎಲ್ಲ ನನ್ನ ಬ್ಲಾಗ್ ಮಿತ್ರರಿಗೂ ನಿರಾಶೆ ತರುವ ವಿಷಯ...ಮತ್ತೆ ಹನಿ-ಹನಿಗೂಡಿ ಹರಿದರೆ ಹನಿ-ಕವನ ತಣ್ಣಗಾಗುವುದು ಕಣ್ಮನ.

    ReplyDelete
  24. ಪ್ರದೀಪ್ ರಾವ್...ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದ,,,

    ReplyDelete
  25. ಮಂಜುನಾಥ್ ನಿಮ್ಮ ಪ್ರತಿಕ್ರಿಯೆಗೆ ಮತ್ತು ಅನಿಸಿಕೆಗೆ ಧನ್ಯವಾದ.

    ReplyDelete
  26. ಆಜಾದ್ ಸರ್,
    ಹ್ಹ ಹ್ಹ... ಬೇತಾಳನ ಸರಣಿ ಮತ್ತೆ ಶುರು ಆಗಿದ್ದು ಖುಶಿ ಆಯಿತು... ಎಂದಿನಂತೆ ಚಾಟಿ ಹರಿತವಾಗಿದೆ.....

    ReplyDelete
  27. ವಿಕ್ರಮ-ಬೇತಾಳ ದ ಮೂಲಕ ಪ್ರಸ್ತುತ ಸನ್ನಿವೇಶವನ್ನು ಚೆನ್ನಾಗಿ ತೆರೆದಿಟ್ಟಿದ್ದೀರಿ. ನನ್ನ ಬ್ಲಾಗ್ ನಲ್ಲಿ ಒ೦ದು ಹಾಸ್ಯ ಬರಹ ಹಾಕಿದ್ದೇನೆ. ಬಿಡುವು ಮಾಡಿಕೊ೦ಡು ಒಮ್ಮೆ ಬನ್ನಿ.

    ReplyDelete
  28. ಹ್ಹ ಹ್ಹ ಹ್ಹ ವಿಕ್ರಮ ಬೇತಾಳದ ಕಥೆ ತುಂಬಾ ಚೆನ್ನಾಗಿದೆ ಬಯ್ಯ...

    ReplyDelete
  29. nanage vikrama bhethaaLara kathegaLu thumba ishta.... nimma kalpaneya katheyoo ishta aayitu...:)

    P.S.: nimma blogina back ground mattu fonts kaNNige thumba shrama koduttave :( saadyavaadare badalaayisi...

    ReplyDelete
  30. ಧನ್ಯವಾದ ದಿನಕರ್...ವಿಕ್ರಮ ಆಗಾಗ ನಿದ್ದೆಯಿಂದ ಎಚ್ಚೆತ್ತು ಬರ್ತಾನೆ...ತಡೆಯೋಕೆ ಆಗದೆ ಹೊರಗೆಡಹ್ತಾನೆ...ಮನದುಗುಡಾನ.

    ReplyDelete
  31. This comment has been removed by the author.

    ReplyDelete
  32. ಪ್ರಭಾಮಣಿಯವರೇ...ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ....ನಿಮ್ಮ ಬ್ಲಾಗಿನ ಲೇಖನ ಓದಿದೆ...ಚನ್ನಾಗಿದೆ ಜಿರಳೆ ಪುರಾಣ.., ವಿಕ್ರಮ ಆಗಾಗ್ಗೆ ಹೊರಬರ್ತಾನೆ ನಮ್ಮ ವ್ಯವಸ್ಥೆ ನೋಡಿ...ಹಹಹ

    ReplyDelete
  33. ವಿಚಲಿತ..ನಿಮ್ಮ ಪರ್ತಿಕ್ರಿಯೆ ನನ್ನನ್ನು ವಿಚಲಿತ ಮಾಡಿದೆ...ಗೊತ್ತಾಗದೆ..ಏನು ನಿಮ್ಮ ಪ್ರ್ರತಿಕ್ರಿಯೆ ಎಂದು....ಧನ್ಯವಾದ

    ReplyDelete
  34. ಚೇತು ಧನ್ಯವಾದ...ನಿನ್ನ ಪ್ರತಿಕ್ರಿಯೆಗೆ...

    ReplyDelete
  35. ಸುಧೇಶ್,,,ನಿಮ್ಮ ಮಾತಿಗೆ ಧನ್ಯವಾದ...ಹಿಂದೆ ಹಸಿರು ಫ್ಲೋರೆಸೆಂಟ್ ಅಕ್ಷರ ಇದ್ದಾಗಲೂ ಹೀಗೇ ಹೇಳಿದ್ರಿ...ಈಗ ಹಳದಿ ಹಾಕಿದೆ..ಇದೂ ಸರಿಯಿಲ್ಲ ವೆಂದರೆ...ಕಪ್ಪು ಹಿನ್ನೆಲೆಯನ್ನ ಬದಲಾಯಿಸಬೇಕೇ...? ಏನು ನಿಮ್ಮ ಅಭಿಪ್ರಾಯ...ನನಗೆ ಮೈಲ್ ಮಾಡಿ ಪ್ಲೀಸ್...ಖಂಡಿತಾ ಬ್ಲಾಗ್ ಚೆಂದ ಕಾಣಬೇಕು ಅದು ಮುಖ್ಯ...ನಿಮ್ಮ ಕಾಳಜಿಗೆ ಧನ್ಯವಾದ

    ReplyDelete
  36. ಪ್ರಸಕ್ತ ಬೆಳವಣಿಗೆಗೆ ಒಳ್ಳೆ ಚಾಟಿ ಏಟು , ವಿಕ್ರಂ ಹಾಗು ಬೇತಾಳ ಈಗ ಇದ್ದಿದ್ರೆ ಅವರಿಗೂ ರಾಜಕೀಯ ರುಚಿ ಹತ್ತಿ ಮಾತಾ ಮಂತ್ರ ಶುರುಮಾಡಿರ್ತಿದ್ರು.ಪುಣ್ಯ ಈಗ ಇರುವರರೆಲ್ಲರೂ ಭಾರತಕ್ಕೆ ಭಾರವಾದ ಭಾರತೀಯರೇ.

    --
    ಪ್ರೀತಿಯಿಂದ ನಿಮ್ಮವ ಬಾಲು.[ನಿಮ್ಮೊಳಗೊಬ್ಬ ]

    ReplyDelete