Saturday, April 2, 2011

ಭಾರತಕ್ಕೆ ವಿಶ್ವಕಪ್ ಕ್ರಿಕೆಟ್ ಕಿರೀಟ

ಭಾರತಕ್ಕೆ ವಿಶ್ವಕಪ್ ಕ್ರಿಕೆಟ್ ಕಿರೀಟ

ಕಪಿಲವಾಹಿನಿಯ ರಭಸ ಅಂದು
ವಿಶ್ವ ಕ್ರಿಕೆಟ್ ಮಕುಟವ ತಂದು
ಇಪ್ಪತ್ತೆಂಟು ವರ್ಷದ ನಂತರ
ದೋಣಿಯ ನಾಯಕ ನಾವಿಕನಾಗಿ
ಭರತದ ಹರುಷ ಮರುಮಕುಟವು ಇಂದು

ಜ಼ಹೀರ ಮುನಾಫರ ಪ್ರಾರಂಭಿಕ ಬಿಗಿತ
ಕರಾರುವಾಕ್ ಭಜ್ಜಿ ಯುವಿ ಎಸೆತ
ಮಾಡಲು ಅಧಿಕ ಲಂಕನ್ನರ ತುಡಿತ
ತಡೆದರು ಫೀಲ್ಡರುಗಳು ಪ್ರತಿ ಹೊಡೆತ
ಏಕಮಾತ್ರ ಜಯವರ್ಧನೆ ಸೆಂಚುರಿ ಜಿಗಿತ

ಇನ್ನೂರ ಎಪ್ಪತ್ತೈದರ ಗುರಿ ಸವಾಲು
ಸೆಹ್ವಾಗ್ ಸಚಿನ್ ಆಗದೆ ರನ್ ಮಾಡಲು
ವಿರಾಟ ತನ್ನಾಟ ಗಂಭೀರನ ಕಮಾಲು
ಸಾಗತೊಡಗಿತು ದೋಣಿ ತೀರ ಸೇರಲು
ಮೆಲ್ಲ ಮೆಲ್ಲನೆ ತನ್ನಂತಿಮ ಗುರಿ ತಲುಪಲು

ವಿರಾಟನಾಟದ ನಂತರ ನಾಯಕನಾಗಮನ
ಶತಕದ ಬಳಿ ಎಡವಿತು ಗಂಭೀರನ ತನನ
ತನ್ನೆಲ್ಲ ಶಕ್ತಿಯ ಮೆರೆದಿದ್ದ ಯುವಿಯಾಗಮನ
ಹೆಜ್ಜೆ ಹೆಜ್ಜೆಗೂ ಪ್ರತಿ ರನ್ನಿಗೂ ಎಂಥ ಸಂಚಲನ
ಸಂಗಕಾರ ತನ್ನವರೊಂದಿಗೆ ನಡೆಸಲು ಚಿಂತನ

೪೬ ರಲ್ಲಿ ಮಾಲಿಂಗ ಕೊಟ್ಟದ್ದು ಕೇವಲ ೩ ರನ್ನು
ಮುರಳಿಗಲ್ಲ ೪೭ ಸಿಕ್ತು ನಮ್ಮವರಿಗೆ ಕುಲಶೇಖರ ಬನ್ನು
ಯುವಿ ಧೋನಿ ಜಡಿದರು ಒಟ್ಟು ೧೧ ಅಮೂಲ್ಯ ರನ್ನು
ಮಾಲಿಂಗನನ್ನೂ ಬಿಡಲಿಲ್ಲ ೪೮ ರಲ್ಲಿ ಮತ್ತೆ ೧೧ ರನ್ನು
ಬೇಕಿತ್ತು ೫ ಧೋನಿ ಬಾರಿಸಿದ ಸಿಕ್ಸು ಗಳಿಸಿತು ವಿಶ್ವಕಪ್ಪನ್ನು

26 comments:

  1. ಅಜಾದ್ ಸರ್;ವಿಶ್ವ ಕಪ್ ಗೀತೆ ಚೆನ್ನಾಗಿದೆ.ಜೈ ಹೋ.ಚಕ್ ದೇ ಇಂಡಿಯಾ!ನನ್ನ ಬ್ಲಾಗಿನಲ್ಲಿ ನನ್ನ ಅನುಭವವನ್ನೂ ಓದಿ.ನಮಸ್ಕಾರ.

    ReplyDelete
  2. ಡಾ. ನಿಮಗೂ ಅಭಿನಂದನೆಗಳು..ದಿಯಾ ಘುಮಾಕೆ ಧೋ ಡಾಲಾ ...ಖಂಡಿತಾ ನಿಮ್ಮ ಬ್ಲಾಗ್ ನೋಡ್ತೇನೆ...ಈಗ್ಲೇ...

    ReplyDelete
  3. ಮಹಾಬಲರೇ...ಭಳರೇ ಇಂಡಿಯಾ.. ಹೌದು ನನಗೂ ರಜೆ ನಿನ್ನೆ ಹಾಗಾಗಿ ಎರಡು ವಿಕೆಟ್ ಬಿದ್ದ ನಂತರ ಸುಮಾರು ೧ ಗಂಟೆ ಸುಧಾರಿಸ್ಕೊಳ್ಳೋಕೆ ಹೊರಕ್ಕೆ ಹೋದೆ...ಮನಸ್ಸು ತಡೀಲಿಲ್ಲ ಮತ್ತೆ ಟಿ.ವಿ. ಮುಂದೆ...ಹಹಹ ೧೯೮೩ ರಲ್ಲಿ ಕಾಮೆಂಟ್ರಿ ಕೇಳಿದ್ವಿ ಹಾಸ್ಟಲ್ ನಲ್ಲಿ...ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ ಮತ್ತು ಅಭಿನಂದನೆಗಳು..ವಿಶ್ವ ಕಪ್ ಕಿರೀಟ ಗೆದ್ದದ್ದಕ್ಕೆ

    ReplyDelete
  4. who;e match commentary is there in this kavana..itz nice sir

    ReplyDelete
  5. ಜಲನಯನ,
    ಧೋನಿಯ ಸಿಕ್ಸರ್ ಜೊತೆಗೇ ನಿಮ್ಮ ವಿಜಯಗೀತೆಯೂ ಬಂದಿದ್ದು ಖುಶಿಯ ವಿಷಯ. ವಿಜಯಗೀತೆಯು summary commentayಯೂ ಆಗಿದೆ. ಅಭಿನಂದನೆಗಳು.

    ReplyDelete
  6. ಅಜಾದ್ ಸಾ,
    ಮ್ಯಾಚ್ ನೋಡದೆ ಇದ್ದವರಿಗೆ ನಿಮ್ಮ ಕವನ ಓದಿದರೆ ಸಾಕು....
    ಚೆನ್ನಾಗಿದೆ ವಿವರಣೆ.....
    ಅಭಿನಂದನೆಗಳು....

    ReplyDelete
  7. ಸೂಪರ್ ಸಾರ್... ಕಾಮೆಂಟ್ರಿಯನ್ನು ಅದ್ಭುತವಾಗಿ ಕವನದ ರೀತಿಯಲ್ಲಿ ಹೇಳಿದ್ದೀರಿ... ನನ್ನ ಬ್ಲಾಗಿಗೊಮ್ಮೆ ಭೇಟಿ ನೀಡಿ ದಯವಿಟ್ಟು ಅಭಿಪ್ರಾಯ ತಿಳಿಸಿ..
    http://poemsofpradeep.blogspot.com

    ReplyDelete
  8. ಆಜಾದೂ....

    ಭಾರತೀಯರು ಭಾವಾರ್ತಿಗಳು ಅಂತ ಮತ್ತೊಮ್ಮೆ ಸಾಬೀತಾಯಿತು...

    ಗೆದ್ದು ಆನಂದ ಬಾಷ್ಪ ಹರಿಸಿದ
    ಯುವರಾಜ, ಹರಭಜನ್, ಧೋನಿ...

    ಉತ್ಸಾಹದಿಂದ ನೋಡುತ್ತಿದ್ದ ನಮ್ಮ ಕಣ್ಣುಗಳೂ ಹನಿಗೂಡಿದವು... ಸಂತೋಷದಿಂದ...

    ಜೈ ಹೋ ! ಜೈ ಹೋ !! ಜೈ ಹೋ !!

    ReplyDelete
  9. ಗಿರೀಶ್ ಬಹಳ ಆನಂದಮಯ ಮರೆಯಲಾಗದ ದಿನ ಏಪ್ರಿಲ್ ೨, ೨೦೧೧. ೧೯೮೩ ರ ಫೈನಲ್ ಸಹಾ ಒಂದು ಬಾಲ್ ಬಿಡದೆ ವೀಕ್ಷಕ ವಿವರಣೆ ಕೇಳಿದ್ದೆ...ಅಭಿನಂದನೆಗಳು ...

    ReplyDelete
  10. ಸುನಾಥಣ್ಣ..ಮ್ಯಾಚ್ ಮುಗುದ ತಕ್ಷಣ ಮನಸಿಗೆ ಬಂದಿದ್ದನ್ನು ಹಾಕಿಬಿಟ್ಟೆ ಹಾಳೆಯ ಮೇಲೆ ನಂತರ ರೂಪ ಅಕ್ಷರಗಳದ್ದು ಕಂಪ್ಯೂಟರಲ್ಲಿ....ನಿಮಗೆ ಇಷ್ಟವಾಗಿದ್ದು ನನ್ನ ಭಾವತರಂಗಕ್ಕೆ ಸಾರ್ಥಕತೆ...ಧನ್ಯವಾದ....

    ReplyDelete
  11. ಮಹೇಶ್ ನಾಸ್ಟಾಲ್ಜಿಕ್..ಅನುಭವ...ಹಿಂದಿನ ವಿಶ್ವಕಪ್ ಗೆದ್ದಾಗಲೂ ಪಂದ್ಯದ ಪೂರ್ತಾ ವೀಕ್ಷಕ ವಿವರಣೆ ಕೇಳಿದ್ರೂ ..ವೀಡಿಯೋ ಮಾಧ್ಯಮ ಬೇರೇನೇ ಲೋಕಕ್ಕೆ ಕೊಂಡೋಯ್ಯುತ್ತೆ.... ಧನ್ಯವಾದ ..

    ReplyDelete
  12. ಪ್ರದೀಪ್ ಧನ್ಯವಾದ...ಹೌದು ಇದು ೧೨೧ ಕೋಟಿ ಜನತೆಯ ಆಶಯವಾಗಿತ್ತು...ಸಾಕಾರಮಾಡಿದ್ದು ಟೀಂ ಇಂಡಿಯಾ...

    ReplyDelete
  13. ಮನಸು ಮೇಡಂ ಧನ್ಯವಾದ... ಮೊದಲಿಗೆ ಮನಸು ಸ್ವಲ್ಪ ಡೋಲಾಯಮಾನವಾದರೂ ನಂತರ ಗಂಭೀರ ಗಮನ ವಿರಾಟ ಚಲನ ಧೋನಿ ಧಂ ಎಲ್ಲಾ ನಮಗೆ ಜಯ ಖಚಿತ ಎನಿಸುವಂತೆ ಮಾಡಿತ್ತು...

    ReplyDelete
  14. ಪ್ರಕಾಶೂ...ಅಭಿನಂದನೆಗಳು...ಬಹಳ ಟೆನ್ಶನ್ ಆಗಿತ್ತಪ್ಪ ಬೇಗ ಬೇಗ ಎರಡು ವಿಕೆಟ್ ಬಿದ್ದಾಗ...ಆದ್ರೆ..ಗಾಂಭೀರ್ಯಕ್ಕೆ ಹೆಸರು ಗಂಭೀರ...ಲವಲವಿಕೆಯ ವೀರ ವಿರಾಟ ಮತ್ತು ನಾವಿಕ, ನಾಯಕ ಧೋನಿಯ ಜವಾಬ್ದಾರಿ...ಗೆಲುವಿಗೆ ಕಾರಣವಾಗಿದ್ದು ಈಗ ಇರ್ತಿಹಾಸ,, ಧನ್ಯವಾದ ನಿನ್ನ ಪ್ರತಿಕ್ರಿಯೆಗೆ..

    ReplyDelete
  15. ಅಜಾದ್,

    ಮ್ಯಾಚ್ ನೋಡಿದ ಮೇಲೆ ನಮ್ಮ ಕವನ ಓದಿದೆ. ಎಲ್ಲಾ ಮೆಲುಕು ಹಾಕಿದಂತಾಯಿತು..ಸೂಪರ್ ಗೇಮಿಗೆ ಸೂಪರ್ ಕವನ...

    ReplyDelete
  16. Aajad Sir,

    chennagide vishwa cup kavana....28 varshada nantara matte cup nnu geddutanda Indian Cricket team ge Abhinandanegalu...

    ReplyDelete
  17. ಸೀತಾರಾಂ ಸರ್... ಧನ್ಯವಾದ..ಮ್ಯಾಚ್ ನೋಡಿದ ಬಿಸಿಯಲ್ಲಿ ಬರೆದದ್ದು ಇಷ್ಟವಾಗಿದ್ದರೆ ಸಂತೋಷ ಧನ್ಯವಾದ...

    ReplyDelete
  18. ಶಿವು ...ಹೇಮಾಶ್ರೀ ...ಹೋಳಿಗೆ ಊಟದ ಜೊತೆಗೆ ವಿಶ್ವ ಕಪ್ ಸವಿ ನೆನಪನ್ನು ತರೋ ಪ್ರಯತ್ನ ಈ ಕವನದ ಮೂಲಕ ಅಷ್ಟೇ...ಧನ್ಯವಾದ

    ReplyDelete
  19. ಅಶೋಕ್... ಹಬ್ಬದ ಸಿಹಿಯ ಸವಿಯನ್ನು ಹೆಚ್ಚಿಸಿದ್ದು ನಮ್ಮವರ ಸಾಧನೆ...ದಿಯಾ ಘುಮಾಕೆ...ಧನ್ಯವಾದ...

    ReplyDelete
  20. ಕಾಮೆ೦ಟರಿ- ಕವನ ರೂಪದಲ್ಲಿ...ಖುಷಿ ಆಯ್ತು ಸರ್ ಓದಿ.. ಧನ್ಯವಾದಗಳು

    ಅನ೦ತ್

    ReplyDelete
  21. ಧನ್ಯವಾದ ಅನಂತ್ ಸರ್..... ನಿಮ್ಮ ಪ್ರೋತ್ಸಾಹದ ಮಾತಿಗೆ...

    ReplyDelete
  22. ವಿಶ್ವ ಕಪ್ ಕವನ ಚೆನ್ನಾಗಿದೆ ಸರ್..ವಂದನೆಗಳು

    ಮನೆಯಲ್ಲಿ ಪುಟ್ಟಿಗೂ ಕ್ರಿಕೆಟ್ ಜ್ವರ ಹಚ್ಚಿದ್ವಿ;) ಅವಳೂ ನಮ್ಮೊಟ್ಟಿಗೆ ’Go India go...ಜೀತೆಗಾ ಭಾಯ್ ಜೀತೆಗಾ ಇಂಡಿಯಾ ವರ್ಲ್ಡ್ ಕಪ್ ಜೀತೆಗಾ" ಅಂತ ಕೂಗಲು ಕಲಿತಳು:)

    ರೂpaश्री

    ReplyDelete
  23. ಪುಟ್ಟಿಯ ಅಮ್ಮ...!!! ?? ನಮ್ಮ ಹಳೆಯ ಸ್ನೇಹಿತೆ ಬ್ಲಾಗಿತ್ತಿ ರೂpaश्री ನಾ???
    ಹ್ಯಾಗಿದ್ದೀರಿ...?? ಹ್ಯಾಗಿದ್ದಾಳೆ ಪುಟ್ಟಿ? ಪುಟ್ಟಿ..ಗೆಲ್ತು ಗೆಲ್ತು ಇಂಡಿಯಾ ಗೆಲ್ತು...
    ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ.

    ReplyDelete