(ಚಿತ್ರ ಕೃಪೆ: ಅಂತರ್ಜಾಲ)
ಅಮ್ಮ
ಅಮ್ಮನಾಗೋ ಆಸೆ ಹೆಣ್ಣಾದ ಎಲ್ಲರಿಗಿರುತ್ತೆ
ಕರುಳ ಬಳ್ಳಿ ಬೆಳಸೋ ಬಯಕೆ ಎಲ್ಲರಿಗಿರುತ್ತೆ
ಅದಕೆ ಚಿಗುರೊಡೆಸೋ, ಆಧರಿಸೋ, ಅದಮ್ಯ
ವಾಂಛೆ, ಮುದ್ದು ಮಳೆಗರೆಯೋ ಮನಸು,
ಬಿದ್ದರೆತ್ತೋ ಕಾಳಜಿ, ಎತ್ತಿ ಮುದ್ದಾಡೋ ಸೊಗಸು,
ನೊಂದರೆ ತಾನಳುವ, ನಕ್ಕರೆ ತಾನಗುವ
ಸಲಹುವಳಲ್ಲ ಸದಾ ತಾಯಿ ತನ್ಮಗುವ?
ನಿರೀಕ್ಷೆ
ನಿರಾಸೆ ಬರಡು ಬಿತ್ತು..ಬೆಳೆಯಲಾಗಲಿಲ್ಲ ತುತ್ತು
ಉಸಿರಾಡುತಿವೆ ಜೀವ ಇದ್ದಂತೆ ಬಿದ್ದಲ್ಲೇ ಸತ್ತು
ಧರೆಗೂ ಬೇಕಿದೆ, ಒಣಗುವ ಬೆಳೆಗೂ ಬೇಕು, ಹನಿ
ಅವಳ ಬಾಳಲೂ ಏಕೋ ಬರಡು, ಇಲ್ಲ ಶಿಶುದನಿ
ಹರಕೆಗಳೆಷ್ಟೋ, ಧಾಮ-ಪುನಸ್ಕಾರಕ್ಕೆ ಕೊನೆಯಿಲ್ಲ
ಎನಿಸತೊಡಗಿದಾಗ ಜೀವನದಿ, ಭರವಸೆ ಇನ್ನಿಲ್ಲ
ಮೋಡ ಕಪ್ಪಿಟ್ಟಿತು, ಭಾರವಾಯಿತು ತಡೆಯಲಾರದೆ
ಹನಿಯಿತು, ಸುರಿಸಿತು, ಧರೆಗಿಳಿಯಿತು ಇನ್ನಿರಲಾಗದೆ.
ಎರಡು ಕವನಗಳು ಚನ್ನಾಗಿವೆ "ತಾಯಿಗೆ ಮೀಗಿಲಾದ ಮತ್ತೊದು ದೈವ ಎಲ್ಲೂ ಇಲ್ಲಾ" ಮೊದಲನೇ ಕಾವನು ತುಂಬಾ ಇಷ್ಟ ಆಯ್ತು ಸರ್
ReplyDeleteಧನ್ಯವಾದ ಮಂಜು.....
ReplyDeleteಆಜಾದ್ ,
ReplyDeleteಚೆಂದದ ಕವನಗಳು . ಚೆಂದದ ಕವನಗಳು . " ತಾಯಿ " ಅಂತ ಇಟ್ಟರೂ ಹೊಂದುತ್ತಿತ್ತೋ ಏನೋ ಮೊದಲ ಕವನಕ್ಕೆ . ಯಾಕೋ " ಗಾಂಧಾರ ಕನ್ಯೆ " ಹೊಂದುತ್ತಿಲ್ಲ ಎನಿಸುತ್ತಿದೆ
ತಾಯ್ತನದ ಬಯಕೆ ಹಾಗು ತಾಯ್ತನದ ಸುಖ ಇವು ದೇವರು ಹೆಣ್ಣಿಗೆ ಮಾತ್ರ ನೀಡಿದ
ReplyDeleteಭಾಗ್ಯ!ಸುಂದರವಾದ ಕವನಗಳನ್ನು ರಚಿಸಿರುವಿರಿ.
ಚಿತ್ರಾ...ಧನ್ಯವಾದ ಅಮ್ಮ ಅಂತ ಬದಲಾಯಿಸುತ್ತಿದ್ದೇನೆ..ಹೌದು ಮುಂಚಿಯೇ ಬರೆದ ಸಾಲುಗಳಲ್ಲಿ ಅರ್ಧ ಭಾಗ ತೆಗೆದುಬಿಟ್ಟೆ ಆ ಕಾರಣ ಗಾಂಧಾರಕನ್ಯೆ ಒಪ್ಪುತ್ತಿಲ್ಲ ನಿಜ...ಸಲಹೆಗೆ ನನ್ನಿ...
ReplyDeleteಸುನಾಥಣ್ಣ ..ಮದರ್ಸ್ ಡೇ ಅಂತೆಲ್ಲಾ ಮಾಡೋ ಹಿನ್ನೆಲೆಗೆ ಅಂತ ಮನಸ್ಸಿಲ್ಲದಿದ್ದರೂ ಬರೆದ ಕವನಗಳು...ಯಾಕಂದ್ರೆ ತಾಯಿಯ ದಿನ ಒಮ್ದು ದಿನಕ್ಕೆ ಸೀಮಿತಮಾಡೋ ಸಂಸ್ಕೃತಿ ನಮ್ಮದಲ್ಲ ಎನ್ನುವ ಭಾವನೆ ನನ್ನದು ..ಆದ್ರೂ ತಾಯಿಗೆ ನಮನ ದಿನವೂ ಮಾಡಿ ಈ ದಿನ ವಿಶೇಷ ನಮನ ಎನ್ನಲೇ,..? ಧನ್ಯವಾದ ನಿಮ್ಮ ನಿತ್ಯ ಬೆನ್ನುತಟ್ಟುವಿಕೆಗೆ...
ReplyDeleteeraDU kavanakke tannadE aada tUka ide..
ReplyDeletechennaagide sir....
ದಿನಕರ್ ಧನ್ಯವಾದ...ವಾಸ್ತವದಲ್ಲಿ ಒಂದೇ ಕವನ ಮಾಡಿದ್ದೆ ಆದರೆ ಎರಡೂ ಚರಣಗಳು ಯಾಕೋ ಮಿಳಿತವಾದಂತೆ ಕಾಣಲಿಲ್ಲ ಹಾಗಾಗಿ ಬೇರೆಬೇರೆ ಮಾಡಿದೆ...ತೂಕ ಬಂದಿದ್ದು ಹಾಗಾಗಿ...ಹಹಹ
ReplyDeleteAajad sir,
ReplyDeleteeradu kavangalu super...taayi yemba devara bagge eshtu baredaru kadime alva sir....
double sooper.....
ReplyDeleteಚೆಂದದ ಕವನಗಳು... ಎರಡು ಚನ್ನಾಗಿವೆ..
ReplyDeleteದೋಸ್ತಾ...
ReplyDeleteನೀನು ಇತ್ತೀಚೆಗೆ ಬರೆದ ಬೆಸ್ಟುಗಳಲ್ಲಿ ಇದು ಬೆಸ್ಟು...
ತುಂಬಾ ಇಷ್ಟವಾಯಿತು...
ಈ ದಿನಗಳಲ್ಲಿ ಅಮ್ಮ ನನ್ನ ಜೊತೆ ಇದ್ದಾಳೆ.. ಅಮ್ಮನಿಗೆ ಅಮ್ಮನೆ ಸಾಟಿ...
ತುಂಬಾ ಸುಂದರವಾದ ಭಾವಪೂರ್ಣ ಕವನ ಬಯ್ಯ. ಮೊದಲನೇ ಕವನ ತುಂಬಾ ಇಷ್ಟವಾಯ್ತು. ಮಗುವತ್ತರೆ ತಾನಳುವ, ಮಗುನಕ್ಕರೆ ತಾನಗುವ ತಾಯಿಯ ಹೃದಯವನ್ನು ಸೃಷ್ಟಿಸಿದ ಆ ದೇವರಿಗೆ ನಮೋ ನಮಃ ...ಅಲ್ವಾ.
ReplyDeletesir
ReplyDeletechennagide eradu kavana
Uttama saalugalu..
ReplyDeleteಅಜಾದ್,
ReplyDeleteತಾಯಿ ಮತ್ತು ನಿರೀಕ್ಷೆಯ ಮಳೆಹನಿಗಳ ಬಗ್ಗೆ ಭಾವಪೂರ್ಣ ಕವನ. ಹೀಗೆ ಬರೆಯುತ್ತಿರಿ..
Azad Sir,
ReplyDeleteಅಮ್ಮ:ತಾಯಿ ಪ್ರೀತಿ ಮತ್ತು ಜವಾಬ್ದಾರಿ ಬಗ್ಗೆ ಹೇಳಿದ್ದಿರ
ನಿರೀಕ್ಷೆ:ರೈತರಿಗೆ ಆಗುವಂತಹ ಅನುಭವ...
೨ ಕವನಗಳು ಚೆನ್ನಾಗಿವೆ...
ಅಶೋಕ್ ಧನ್ಯವಾದ, ನಿಮ್ಮ ಮಾತು ನಿಜ ತಾಯಿಗಿಂತಾ ದೇವರಿಲ್ಲ....
ReplyDeleteಮಯೇಸ್ ಮಾಮ, ಥ್ಯಾಂಕೂ.....
ReplyDeleteಒಂದಕ್ಕೆ ಇನ್ನೊಂದು ಪೂರಕ ಚಿಂತನೆಗೆ ಕಾರಣವಾದವು ಹಾಗಾಗಿ ವಿಚಾರ ಧಾರೆಯಲ್ಲಿ ಸಾಮ್ಯ...ಧನ್ಯವಾದ ವಿಜಯಶ್ರೀ...
ReplyDeleteಪ್ರಕಾಶು ಅಪ್ಪ ಅಮ್ಮ ಜೊತೆಗಿದ್ದರೆ ಅದಕಿಂತಾ ಭಾಗ್ಯವಿಲ್ಲ...ಅವರಿದ್ದರೆ ತಲೆಯಮೇಲೆ ಸೂರಿದ್ದಂತೆ...ಧನ್ಯನೀನೇ...
ReplyDeleteಚೇತು, ಮಗುವ ನೋವ ತಾಯ ಬಲ್ಲಳು ತಾಯಿನೊಂದರೆ ಎಲ್ಲಾ ಮಕ್ಕಳೂ ಸ್ಪಂದಿಸುವರೇ ಕಡೇ ಪಕ್ಷ ಅನ್ನೋದೇ ಸಂಶಯ....ಧನ್ಯವಾದ ನಿನ್ನ ಪ್ರತಿಕ್ರಿಯೆಗೆ....
ReplyDeleteಡಾಕ್ಟರ್ ಗುರು, ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ....
ReplyDeleteಗುರು, ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ.
ReplyDeleteಶಿವು, ಒಂದಂತೂ ನಿರ್ವಿವಾದ ಮಕ್ಕಳ ನೋವಿಗೆ ಎಲ್ಲಾ ತಾಯಿಯರೂ ಒಂದೇ ರೀತಿ ಸ್ಪಂದಿಸುತ್ತಾರೆ...ಅದೇ ತಾಯಿಯರು ನೊಂದರೆ ಎಲ್ಲಾ ಮಕ್ಕಳೂ ಒಂದೇ ರೀತಿ ಸ್ಪಂದಿಸೊಲ್ಲ,,,,ವಿಪರ್ಯಾಸ ಅಲ್ಲವಾ? ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ.
ReplyDeleteಗಿರೀಶ್, ಹೆಣ್ಣಿಗೆ ತಾಯಾಗುವ ಹಂಬಲ, ಭೂಮಿ ಬಿರಿದರೆ ಹನಿ ಇಂಗಿಸಿಕೊಳ್ಳೋ ಹಂಬಲ..ಎಲ್ಲವೂ ಒಂದೇ ರೀತಿಯ ತುಡಿತಗಳು...ಧನ್ಯವಾದ
ReplyDeletechennagive kavanagalu..
ReplyDeleteಧನ್ಯವಾದ ಕೀರ್ತಿ..ನಿಮ್ಮ ಪ್ರತಿಕ್ರಿಯೆಗೆ...
ReplyDeletechandhadha kavithegaLu sir.. modalaneyadu thumba ishta aayitu :)
ReplyDeleteತಾಯಿಯೇ ಪ್ರತ್ಯಕ್ಷ ದೇವರು... ತಾಯಿತನವನ್ನು ಚೆನ್ನಾಗೆ ಬಣ್ಣಿಸಿದ್ದೀರಿ
ReplyDeletenice
ReplyDeleteಸುಧೇಶ್ ಧನ್ಯವಾದ ನಿಮ್ಮ ಅಭಿಮಾನಕ್ಕೆ...ಪ್ರತಿಕ್ರಿಯೆಗೆ...
ReplyDelete