(ಚಿತ್ರ ಕೃಪೆ: ಇಟ್ಟಿಗೆ ಸಿಮೆಂಟ್)
ಬಾ ಹೂಬನಕೆ ಇನಿಯಾ
ಮುಳ್ಳು ಹರಿತೆಲೆಯ ತಲೆ
ಚುಚ್ಚುವುದು ಬಂದರೆ
ಅನುಮತಿಯಿಲ್ಲದಲೇ
ನಾಜೂಕು ಕಾಂಡ
ಮುಳ್ಳಿದ್ದರೂ ಭ್ರಮರ ಭಂಡ
ನುಸುಳುವುದು ಮಕರಂದಕಾಗಿ
ಹೆದರಿದ ಪತಂಗ ನೋಡುತಿರೆ ಮಂಕಾಗಿ
ಭರ ಭ್ರಮರದ ಸಂಭ್ರಮ,
ನಾಚಿದ ಕೆಂದುಟಿ ತೆರೆದ ಸುಮ
ಇನ್ನೂ ಮುಚ್ಚಿದ ಗರಿ ಬಿಚ್ಚದ ಮೊಗ್ಗು
ನೋಡುತಿದೆ ಅಳೆದಳೆದು
ಕಳೆದುಕೊಂಡರೂ ಗಳಿಸಿದ ತನ್ನಕ್ಕನ
ಗಳಿಸಿದರೂ ಕಳಕೊಂಡ ಭ್ರಮರನ
ನಸುನಕ್ಕು ಅರಿತಂತೆ ಓಲಾಡಿಸಿ ತಲೆ
ಕಾಯುತಿದೆ ಮತ್ತೆ ಬರುವ ರವಿಗಾಗಿ
ರವಿತರುವ ಪುಳಕ ಸುಳಿವ ಋತುಗಾಗಿ
ಆ ಕಿರಣದಾಗಮನ ಭೃಂಗಸಂಗಕಾಗಿ
vaav...vaav...suppar sir... very nice....
ReplyDeletesuper ....
ReplyDeleteವಾಹ್ ವಾಹ್
ReplyDeleteಬರೆದಿರುವರು ಜಲನಯನ
ReplyDeleteಗುಲಾಬಿ ಹೂವಿನ ಕವನ
ಮುಳ್ಳು ಮೊಗ್ಗು ಭ್ರಮರ
ವರಣಿಸಿದ ಕವಿಯ ಸಂಭ್ರಮ
ತೋಟದ ಗುಲಾಬಿ ಖುಷಿಯಿಂದ
ಕರೆಯುತಿದೆ ಈ ಕವಿಮನವೊಂದನ್ನ...
ಚೆನ್ನಾಗಿದೆ ಈ ಕವನ..
ಇಂತಹ ಮಧುರ ಕವನವನ್ನು ಬರೆಯಲು ಪ್ರೇರಣೆಯಿತ್ತ, ಪ್ರಕಾಶ ಹೆಗಡೆಯವರ ಚಿತ್ರಕ್ಕೇ ನಾನು ಋಣಿಯಾಗಬೇಕು!
ReplyDeletefoto kavana hoovu ella sogaso sogasu.....
ReplyDeletegood one, aazad bhi
ReplyDeletenice
ReplyDeleteಅಜಾದ್,
ReplyDeleteಮದುರ ಮದುರವೀ ಈ ಸುಂದರ ಕವನ. ಫೋಟೊಗೆ ತಕ್ಕಂತೆ ಸೊಗಸು.
ದಿನಕರ್ ಧನ್ಯವಾದ...ನಿಮ್ಮ ಪ್ರತಿಕ್ರಿಯೆಗೆ....
ReplyDeleteಮನಸು ಮೇಡಂ ಕವನದ ಬನದಲ್ಲಿ ಅರಳಿನಿಂತ ಹೂವಿನ ಪಾಲು ನಿಮ್ಮ ಪ್ರತಿಕ್ರಿಯೆ. ಧನ್ಯವಾದ
ReplyDeleteಗಿರೀಶ್, ಎರಡೇ ಶಬ್ದದ ಪ್ರತಿಕ್ರಿಯೆ ಸಾವಿರ ಮಾತು ಹೇಳಿತು...
ReplyDeleteವಾರೆವ್ವಾ...ಕವನಕ್ಕೆ ಕವನ
ReplyDeleteಪರಿಯಿದು ಕೀರ್ತಿಯ ನವ ತನನ
ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ
ಸುನಾಥಣ್ಣ...ಧನ್ಯವಾದ..ನಿಮ್ಮ ಅಭಿಪ್ರಾಯಕ್ಕೆ ಮತ್ತು ಕವನದ ಜರ್ರಾ ನವಾಜಿಶ್ ಗೆ...ಪ್ರಕಾಶನ ಚಿತ್ರಗಳ ಪ್ರೇರಣೆ...
ReplyDeleteಮಹೇಶ್ ಮಾಮ ಥ್ಯಾಂಕ್ಸ್....
ReplyDeleteಉಮೇಶ್ ದೇಸಾಯರೇ..ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ ಮತ್ತು ಪ್ರೋತ್ಸಾಹದ ಮಾತಿಗೆ.
ReplyDeleteಸೀತಾರಾಮ್ ಸರ್ ಥ್ಯಾಂಕ್ಸ್ ನಿಮ್ಮ ಪ್ರತಿಕ್ರಿಯೆಗೆ....
ReplyDeleteಶಿವು...
ReplyDeleteಮಧುರ ಸುಮಧುರ ಮಧುಭರಿತ ಸುಮ
ಸುಮ ವನಸುಮ ಮನಗೆಲುವ ಕುಸುಮ
ಮನ ತನುಮನ ಗೆಲುವಾಗಲಿ ನಿರಂತನ
ವನ ಜೀವನ ತುಂಬಲಿ ಭಾವನೆ ಮನನ
ಧನ್ಯವಾದ...ನಿಮ್ಮ ಪ್ರತಿಕ್ರಿಯೆಗೆ
ತುಂಬಾ ಚೆನ್ನಾಗಿದೆ ... ಹೂವು ,ಭ್ರಮರದ ನಂಟು ಎಷ್ಟೊಂದು ಅಂದವಾಗಿ ಬಣ್ಣಿಸಿದ್ದೀರಿ . ನಿಜವಾಗಿಯು ವ್ಹಾ ವ್ಹಾ!!!!
ReplyDeleteಧನ್ಯವಾದ ಆಶಾವ್ರೆ..ಹೂವು ಮತ್ತು ಭ್ರಮರಗಳ ಬಂಧ ನಿಸರ್ಗ ನಿಯಮ ಅಲ್ಲವೇ..??
ReplyDelete