(Picture Source: http://forum.xcitefun.net/heart-wallpaper-loving-heart-creative-collection-t61590.html)
ಸ್ನೇಹಿತರೇ, ಈ ದೇವಾನಂದ್ ಹಾಡು ಬಹಳ ಹಿಡಿಸಿದ ಇನ್ನೊಂದು ಗೀತೆ...ಇದರ ಭಾವಾನುವಾದದ ಕರವೋಕೆ..ನಿಮಗಾಗಿ...ನಿಮ್ಮ ಅಭಿಪ್ರಾಯಕ್ಕೆ ಕಾಯ್ತೇನೆ....ಓಕೆ...??!!
ಈ ನನ ಹೃದಯ
ಈ ನನ ಹೃದಯಾ
ತಪ್ಪಿದೆ ಹಳಿಯಾ
ಹಿಡಿತಕೆ ತರಲು, ತಗಲುತ್ತೆ ಸಮಯಾ //ಪ//
ತಪ್ಪಿದೆ ಹಳಿಯಾ
ಹಿಡಿತಕೆ ತರಲು, ತಗಲುತ್ತೆ ಸಮಯಾ //ಪ//
ಚೆಲುವೆಯ ಕಂಡು ಗೆಳೆಯಾ
ನೀಡದೇ ಒಂದೂ ಸುಳಿಯಾ
ತಪ್ಪಿಸಿತದು ಬಡಿತಾ ಎದೆಯಲಿ ತುಡಿತಾ//೨//
ಬಲು ಮುಗ್ಧಾ ಈ ನನ ಹೃದಯಾ
ಹಿಡಿತಕೆ ತರಲು, ತಗಲುತ್ತೆ ಸಮಯಾ //ಪ//
ನೀಡದೇ ಒಂದೂ ಸುಳಿಯಾ
ತಪ್ಪಿಸಿತದು ಬಡಿತಾ ಎದೆಯಲಿ ತುಡಿತಾ//೨//
ಬಲು ಮುಗ್ಧಾ ಈ ನನ ಹೃದಯಾ
ಹಿಡಿತಕೆ ತರಲು, ತಗಲುತ್ತೆ ಸಮಯಾ //ಪ//
ಇದೊಂದು ಹುಚ್ಚು ಕುದುರೆ
ಕುಣಿಯುತ್ತೆ ಆಗಿ ಚಿಗುರೆ
ತಾನೇ ಮರೆಯುತಾ ನನ್ನನ್ನೇ ಮರೆಸುತ್ತೆ//೨//
ಈ ಹುಚ್ಚಿಗೆ ಔಷಧಿ ಏನಯ್ಯಾ
ಹಿಡಿತಕೆ ತರಲು, ತಗಲುತ್ತೆ ಸಮಯಾ //ಪ//
ಕುಣಿಯುತ್ತೆ ಆಗಿ ಚಿಗುರೆ
ತಾನೇ ಮರೆಯುತಾ ನನ್ನನ್ನೇ ಮರೆಸುತ್ತೆ//೨//
ಈ ಹುಚ್ಚಿಗೆ ಔಷಧಿ ಏನಯ್ಯಾ
ಹಿಡಿತಕೆ ತರಲು, ತಗಲುತ್ತೆ ಸಮಯಾ //ಪ//
ಮನಸೆಲ್ಲಿ ಕೇಳುತ್ತೆ
ನೋಡಿದ್ದು ಬೇಡುತ್ತೆ
ಕಂಡದ್ದೆಲ್ಲಾ ತನಗೇ ಬೇಕೆಂದು ಬಯಸುತ್ತೆ //೨//
ಮನಸಿನ ಮಾತಾ, ನೀ ಕೇಳಬೇಡಯ್ಯಾ
ಹಿಡಿತಕೆ ತರಲು, ತಗಲುತ್ತೆ ಸಮಯಾ //ಪ//
ಸೇರಿದ್ರೆ ಎರಡು ಹೃದಯ
ಆಗುತ್ತೆ ಅಲ್ಲೇ ಪ್ರಳಯ
ಇನ್ನೆಲ್ಲಿ ನನ ಹೃದಯ ಹಾಳಾದೆ ಗೆಳೆಯಾ //೨//
ಮನಸಿನ ಮನಸು ಮನಸಿಗೆ ಗೊತ್ತು
ಹಿಡಿತಕೆ ತರಲು, ತಗಲುತ್ತೆ ಸಮಯಾ //ಪ//
ನೋಡಿದ್ದು ಬೇಡುತ್ತೆ
ಕಂಡದ್ದೆಲ್ಲಾ ತನಗೇ ಬೇಕೆಂದು ಬಯಸುತ್ತೆ //೨//
ಮನಸಿನ ಮಾತಾ, ನೀ ಕೇಳಬೇಡಯ್ಯಾ
ಹಿಡಿತಕೆ ತರಲು, ತಗಲುತ್ತೆ ಸಮಯಾ //ಪ//
ಸೇರಿದ್ರೆ ಎರಡು ಹೃದಯ
ಆಗುತ್ತೆ ಅಲ್ಲೇ ಪ್ರಳಯ
ಇನ್ನೆಲ್ಲಿ ನನ ಹೃದಯ ಹಾಳಾದೆ ಗೆಳೆಯಾ //೨//
ಮನಸಿನ ಮನಸು ಮನಸಿಗೆ ಗೊತ್ತು
ಹಿಡಿತಕೆ ತರಲು, ತಗಲುತ್ತೆ ಸಮಯಾ //ಪ//
ಚೆನ್ನಾಗಿದೆ.
ReplyDeleteತೋಟೇ ಗೌಡರೇ ನಮಸ್ಕಾರ ಮತ್ತು ಶುಭಸ್ವಾಗತ ಜಲನಯನಕ್ಕೆ...ನಿಮ್ಮ ಆಗಮನ ನಮ್ಮ ತೋಟದ ಹೂ ಬನಕ್ಕೆ ಋತುವಿನಂತೆ...ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ...
ReplyDeleteನಿಜ ಹೇಳಬೇಕಂದ್ರೆ, ತುಂಬಾ ದಿನದಿಂದಲೂ ನಿಮ್ಮ ಬ್ಲಾಗ್ ಹಿಂಬಾಲಿಸುತಿದ್ದೆ, ಆದರೆ ಅನಿಸಿಕೆ ಬರೆಯಲು ಸೋಂಬೇರಿತನ ಅಷ್ಟೆ.
ReplyDeleteಮನಸು ಚಂಚಲ... ಎಷ್ಟು ಚಂಚಲವೋ
ReplyDeleteಅಷ್ಟೇ ಮುಗ್ಧಾ ....
ತಪ್ಪಿದ ಹಳಿ ಸರಿಯಾಗಲು
ಬೇಕಾಗುವುದು ಸಮಯ
ಕಾಲವೇ ಎಲ್ಲಕ್ಕೂ ಉತ್ತರ....
ಓ ನಿನ್ನ ಹೃದಯಾ
ReplyDeleteತಪ್ಪಿದೆ ಹಳಿಯಾ
ಹಿಧಿತಕೆ ತರಲು ಬಂದಿಹಳು ಗೆಳತಿ..
ಚೆಲುವೆಯ ಕಂಡು
ನೀನಾದೆ ತುಂಡು
ಜೋಡಿಸಲು ಬೇಕು
ಮನಸಿನ ಬೆಳಕು
ಹಿಡಿತಕೆ ತರಲು ಬಂದಿಹಳು ಗೆಳತಿ..
ನೀನಾದೆ ಹುಚ್ಚ
ಕುಂಟ ಕುದುರೆ
ಕುಣಿಯಲು ಸಾಕು
ಅವಳ ಒಂದು ತೋಳು
ಹಿಡಿತಕೆ ತರಲು ಬಂದಿಹಳು ಗೆಳತಿ..
ಮನಸಿನ ಮಾಯೆ
ತಿಳಿಯದ ಬಾಲೆ
ಜೀವಿಸಲು ಬೇಕು
ಸತ್ಯ ಮನದ ಪ್ರೀತಿ
ಹಿಡಿತಕೆ ತರಲು ಬಂದಿಹಳು ಗೆಳತಿ..
ಸೇರಿದಳು ಅವನಲ್ಲಿ
ತಿಳಿಯದೆ ನೆನಪಿನಲ್ಲಿ
ಹಾಳಾದ ಹೃದಯ
ಮರೆಯಿತು ಚೆಲುವೆಯನ್ನ
ಹಿಡಿತಕೆ ತರಲು ಬಂದಿರುವೆ
ನಾ ನಿನ್ನ ಜೀವದ ಗೆಳತಿ..
ತಪ್ಪಾಗಿದ್ದರೆ ತಿಳಿಸಿ..
ಇದು ನನ್ನ ಚಿಕ್ಕ ಪ್ರಯತ್ನ ಸರ್...
ನಿಮ್ಮ ಕವನ ತುಂಬ ಚೆನ್ನಾಗಿದೆ...
ತುಂಬಾ ಚೆನ್ನಾಗಿದೆ... ಯಾವಾಗ ಈ ಅನುಭವವಾಗಿತ್ತೆಂದು ತಿಳಿಸಿ ಹಹಹ
ReplyDeletechannagide.. Nanna fav haduhalu..
ReplyDeleteBhavaanuvada channagi moodi bandide..
ಸೇರಿದ್ರೆ ಎರಡು ಹೃದಯ
ಆಗುತ್ತೆ ಅಲ್ಲೇ ಪ್ರಳಯ ..
e line ista aytu..
ಮೂಲಧಾಟಿಗೆ ನಿಷ್ಠವಾದ ಸುಂದರ ಅನುವಾದ. ನಿಮ್ಮ ಅನುವಾದಕ್ಕೆ ಹಾಗು ವಿಡಿಯೊ ತುಣುಕಿಗೆ ಧನ್ಯವಾದಗಳು.
ReplyDeleteಚೆಂದದ ಸಾಲುಗಾಳು ಸಾರ್ ಹಾಡಿಗೆ ತುಂಬಾ ಚೆನ್ನಾಗಿ ಹೊಂದುತ್ತದೆ. ದೇವಾನಂದರ ಆ ಒಳ್ಳೇ ಗೀತೆ ನೆನಪಿಸಿದಕ್ಕೆ ಧನ್ಯವಾದಗಳು!
ReplyDeleteತೋಟೇಗೌಡರೇ ಮತ್ತೊಮ್ಮೆ ಥ್ಯಾಂಕ್ಸೂ...ಅಂತೂ ಹಾಕಿದ್ರಿ ಪ್ರತಿಕ್ರಿಯೆ ಈ ಸರ್ತಿ...!!
ReplyDeleteಆಶಾ, ಧನ್ಯವಾದ..ಹೃದಯದ ಮಾತಿಗೆ ಹೃದಯವೇ ಸಾಕ್ಷಿ,,ಅಲ್ವಾ,,,??
ReplyDeleteಕೀರ್ತಿ...ನನ್ನ ಕವನಕ್ಕೆ ಪ್ರತಿಕವನದ ರೂಪದಲ್ಲಿ ಪ್ರತಿಕ್ರಿಯೆ,,,?? ವಾವ್... ಧನ್ಯವಾದ...
ReplyDeleteಮನಸು ಕೇಳಬೇಕಲ್ಲಾ..ಸುಗುಣ ಮೇಡಂ ಯಾವಾಗಾಂದ್ರೆ ಆವಾಗ ಹೀಗಾಗೋದು ಸಹಜ...ಅಲ್ಲ ಅನ್ನೋರು ನಿಜ ಹೇಳ್ತಿಲ್ಲ ಅಂತೀನಷ್ಟೆ...ಹಹಹಹ ಏನಂತೀರಿ....?? ಧನ್ಯವಾದ.
ReplyDeleteದೀಪ್ ಸ್ವಾಗತ ಜಲನಯನಕ್ಕೆ....ಧನ್ಯವಾದ ನಿಮ್ಮ ಪ್ರೋತ್ಸಾಹ ಮತ್ತು ಪ್ರತಿಕ್ರಿಯೆಗೆ...
ReplyDeleteಸುನಾಥಣ್ಣ ..ಧನ್ಯವಾದ...ಹಳೆಯ ಲಯಬದ್ಧ ಹಾಡುಗಳು...ಅದರಲ್ಲೂ ಆ ಮೋಹಕ ಗಾಯಕರ ಕಂಠ ನನಗೆ ಬಹಳ ಇಷ್ಟವಾದ ಹಾಡುಗಳಲ್ಲಿ ಒಮ್ದು ಇದು...
ReplyDeleteThis comment has been removed by the author.
ReplyDeleteಪ್ರದೀಪ್ ಧನ್ಯವಾದ...ದೇವಾನಂದರ ಗಿಮಿಕ್ಸ್ ಈಗಲೂ ಬಹಳ ಒಪ್ಪುತ್ವೆ... ಅವರೊಬ್ಬ ಎವರ್ ಗ್ರೀನ್ ಸ್ಟಾರ್...
ReplyDeleteಅವರ ಸಿನಿಮಾಗಳಲ್ಲಿ ಹಾಡುಗಳು ಬಹಳ ಮೆಲಡಿಯಸ್ ಆಗಿರ್ತವೆ...ಗೈಡ್...ಅಂತಹುದೇ ಒಮ್ದು ಅದ್ಭುತ ಸಿನಿಮಾ...
ಕವನ ತುಂಬ ಚೆನ್ನಾಗಿದೆ ಸರ್.....
ReplyDeletesakat sir
ReplyDeletelovely poem
ಮಹೇಶ್ ಥ್ಯಾಂಕ್ಸ್...ಈ ಹಾಡಿಗೆ ಕಾರಣ ..ದೇವ+ಆನಂದ ಅಂತ ಹೇಳಿದೆ ಯಾರೋ ಕೇಳಿದ್ದಕ್ಕೆ... not ನಿತ್ಯ+ಆನಂದ....ಹಹಹಹ
ReplyDeleteಡಾ. ಗುರುಜೀ...ಹಾಡಿದ್ರಾ ಇದ್ರನ್ನೂ...ಹಾಡಿ ಕಳ್ಸಿ ಕರವೋಕೆಲಿ...ಧನ್ಯವಾದ..
ReplyDeleteಅಜಾದ್,
ReplyDeleteಈ ಹಾಡು ನನ್ನ ಫೇವರೇಟ್ ಕೂಡ. ಅದರ ಅರ್ಥ ಗೊತ್ತಿರಲಿಲ್ಲ. ನೀವು ಅದನ್ನು ನಿಮ್ಮದೇ ಲಯದಲ್ಲಿ ಬರೆದಿದ್ದನ್ನು ಓದಿ ಅರ್ಥಮಾಡಿಕೊಂಡೆ. ಈಗ ಹಾಡು ಮತ್ತಷ್ಟು ಹೆಚ್ಚು ಇಷ್ಟವಾಗುತ್ತದೆ.
ಧನ್ಯವಾದಗಳು.
ಶಿವು, ಧನ್ಯವಾದಗಳು.. ನನ್ನ ಮೌತ್ ಆರ್ಗನ್ ಮೂಲ್ಕ ಹಾಡಲು ಪ್ರಯತ್ನಿಸಿದ ಮೊದಲ ಹಾಡು..ಹಾಗಾಗಿ ನನಗೆ ಇನ್ನೂ ಹತ್ತಿರ ಮೆಚ್ಚಿದ್ದಾಕ್ಕೆ ಧನ್ಯವಾದಗಳು...
ReplyDeleteಅಜಾದ್ ಸರ್, ಕವನ ಚೆನ್ನಾಗಿದೆ-ಅರ್ಥದಲ್ಲಿ ಹಾಡಿನ ಜೊತೆ ತಾಳಹಾಕುತ್ತದೆ
ReplyDeleteವಿ.ಆರ್ ಬಿ ಸರ್...ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ...
ReplyDeleteದೋಸ್ತಾ....
ReplyDeleteವಾಹ್ ವಾಹ್ ವಾಹ್ !
ನನಗೆ ಇಷ್ಟವಾದ ಹಾಡು ಇದು...
ಕನ್ನಡದಲ್ಲಿ ಗುನುಗುತ್ತಿದ್ದೇನೆ...
ಭಾವಾನುವಾದ ಸೊಗಸಾಗಿ ಮೂಡಿ ಬಂದಿದೆ...
ಜೈ ಹೋ !!
ಜೈ ಹೋ ಅಂತೂ ಬಂದ್ಯಲ್ಲಾ,,,!!! ಥ್ಯಾಂಕ್ಸೂ...
ReplyDeleteಜಲನಯನ ಸರ್,
ReplyDeleteನಿಜ.. ಇದೊಂದು ಸುಂದರ ಹಾಡು.. ಈ ಹಾಡು ನನಗೆ ತುಂಬಾ ಇಷ್ಟ... ಚೆನ್ನಾಗಿ ಭಾವಾನುವಾದಿಸಿದ್ದೀರಿ.
ತೇಜಸ್ವಿನಿ ಧನ್ಯವಾದ...ನಾನು ಪುಟ ಮಗುಚಿದ್ದೆ...ಈಗಷ್ಟೆ ನೋಡಿದೆ...ಥ್ಯಾಂಕ್ಸ್...
ReplyDelete