Monday, June 20, 2011

ಮತ್ತೆರಡು ಹಾಡುಗಳು



ಮನ-ಮಂದಿರ

(ಪಲ್ ಪಲ್ ದಿಲ್ ಕೆ ಪಾಸ್ ತುಮ್ ರೆಹತೀ ಹೋ..)

ನನ್ನೀ ಮನದಲ್ಲೇ ನೀ ಮನೆಮಾಡಿರುವೆ
ಜೀವನ ಸುಖದಾಹ ನೀನೆಂದಿರುವೆ...ssss //೨//

ಪ್ರತಿ ಸಂಜೆ ಕಣ್ಣಿನಲಿ, ನಿನ್ನ ಸೆರಗಿನ ಹಾರಾಟ
ಪ್ರತಿ ರಾತ್ರಿ ಕನಸುಗಳ, ಸವಿ ನೆನಪಿನ ಚಲ್ಲಾಟ
ನನ ಉಸುರಿನ ಸೆಳೆತದಲಿ, ನಿನ ಮಧುರ ಸುವಾಸನೆಯು
ಮೈನವಿರೇಳಿಸುವಾ ಆವಾಹಕ ಭಾವನೆಯು
ನಿನ್ನೆದೆಯಾ ಬಡಿತದಲಿ ಪ್ರೇಮಾಂಕುರ ಗೀತೆಯಿದೇ..sssss
ನನ್ನೀ ಮನದಲ್ಲೇ ನೀ ಮನೆಮಾಡಿರುವೆ //ಪ//

ನಿನ್ನೆ ನಿನ್ನ ಕಂಡಿದ್ದೆ, ನನ್ನ ಮನಸಿನ ಅಂಗಳದಿ
ಅನಿಸಿತು ನೀನಂದಂತೆ, ನನ ಬಂಧಿಸು ತೋಳಿನಲಿ
ಇವು ಎಂಥಾ ಕನಸುಗಳು, ಇದು ಎಂಥಾ ಬಂಧನವು
ಬಲು ದೂರವೆನಿಸಿದರೂ ಬಹು ಹತ್ತಿರ ಭಾವನೆಯೂ
ನಾ ಯೋಚಿಸುತ್ತಲೆ ಇರುವೆ, ಭಯಭಯದಿ ಹೇಳಿರುವೆ ..ssss
ನನ್ನೀ ಮನದಲ್ಲೇ ನೀ ಮನೆಮಾಡಿರುವೆ //ಪ//

ನಿನಗನಿಸುತಲಿರಬಹುದು, ನನದೇಕೀಪರಿ ಪ್ರೇಮ
ಅಥವಾ ಹುಚ್ಚನೋ ಇವನು, ನನಗಿದು ಸಮ್ಮತವೇ
ಮರುಳಾದವನಾ ಮಾತ, ಮರುಳಾದವನೇ ಬಲ್ಲ
ಜ್ವಾಲೆಯ ದಹಿಸುವ ಸುಖವ ಅರಿತಿದೆ ಈ ಪತಂಗ
ನೀ ಹೀಗೆ ಸುಡುತಿಲಿರು ನನ್ನ ಮತ್ತೆ ಮತ್ತೆ ಕನಸಿನಲಿ..ssss
ನನ್ನೀ ಮನದಲ್ಲೇ ನೀ ಮನೆಮಾಡಿರುವೆ //ಪ//



ಸನಿಹ
(ರಿಮ್ ಝುಮ್ ಗಿರೆ ಸಾವನ್ - ಧಾಟಿ)

ಚುಮುಚುಮುಚುಮು ಛಳಿಯಲಿ
ಬಿಸಿಯುಸಿರಿರೆ ಬಳಿಯಲಿ...
ಹೇಗೆ ನಾನು ಮರೆಯಲೀ...
ಇರುತಿರೆ ನೀ ಸನಿಹದಲಿ...//ಚುಮು ಚುಮುಚುಮು//

ನಿನ ಬಳೆಯ ಕಲಕಲನಾದ
ಮುಂಗುರುಳ ಲಾಸ್ಯವಿನೋದ
ಮನದಾಳದಾಸೆಯನಿಂದು
ಮುದಗೊಳಿಸಿವೆ ಬಳಿ ಬಂದು
ಮರೆಯಾಗಿದೆ ಮುಖ ಸೆರಗಲಿ
ಮಂದಸ್ಮಿತೆ ನಗುವಲಿ
ಹೇಗೆ ನಾನು ಮರೆಯಲಿ...
ಇರುತಿರೆ ನೀ ಸನಿಹದಲಿ...//ಚುಮುಚುಮುಚುಮು//

ಮೀಟಿದೆ ಮನವೀಣೆಯನಂದು
ನವಿರಾದ ನಿನ ಬೆರಳಲ್ಲಿ
ಮರುದನಿಸಿದೆ ಸನಿಹವು ಇಂದು
ಸುಮಧುರ ಇನಿಗಾನವು
ನಿನ ನೆನಪು ಮನದಲಿ
ಒನಪು ಸದಾ ಕಣ್ಣಲಿ
ಹೇಗೆ ನಾನು ಮರೆಯಲಿ...
ಇರುತಿರೆ ನೀ ಸನಿಹದಲಿ...//ಚುಮುಚುಮುಚುಮು//


31 comments:

  1. ಧನ್ಯವಾದ ತೇಜಸ್ವಿನಿ...ಭಾವಾನುವಾದದ ಪ್ರಯತ್ನ..ಕೆಲವೊಮ್ಮೆ ಅನುವಾದದ ಪ್ರಯತ್ನ ಅಂತಹ ಫಲ ನೀಡೊಲ್ಲ,,,

    ReplyDelete
  2. ಆಜಾದ್ ಸರ್, ಹಿಂದೀ ಹಾಡುಗಳ ಭಾವಾನುವಾದ ಒಳ್ಳೆಯ ಪ್ರಯತ್ನ! ಶಬ್ದದ ಕುಸುರೀ ಕೆಲಸವನ್ನು ಆರಂಭಿಸಿದ್ದು ಕಾಣುತ್ತದೆ

    ReplyDelete
  3. ವಿ.ಆರ್.ಬಿ ಸರ್...ಧನ್ಯವಾದ ಸಣ್ಣ ಪ್ರಯತ್ನ ನಿಮಗೆ ಇಷ್ಟವಾಗಿದ್ದರೆ ಅದೇ ಬೋನಸ್ ..ಕೆಲವೆಡೆ ಯಥಾವತ್ ಅನುವಾದ ಅಷ್ಟು ಚನ್ನಾಗಿದೆ ಅನಿಸೊಲ್ಲ ಹಾಗಾಗಿ ಭಾವಾನುವಾದ ಮಾಡಬೇಕಾಗುತ್ತೆ...

    ReplyDelete
  4. ಅಜಾದ್ ಸರ್;ಭಾವಾನುವಾದ ತುಂಬಾ ಚೆನ್ನಾಗಿದೆ.ಆದರೆ ರಾಗ ಹಾಕಿ ಹಾಡಲು ಮಾಡಿದ ಪ್ರಯತ್ನ ಸಫಲವಾಗಲಿಲ್ಲ.ಮುಂದಿನ ಸಲ ಬಂದಾಗ ಇದಕ್ಕೆ ನೀವೇ ರಾಗ ಹಾಕಿ ಹಾಡಿ ತೋರಿಸಬೇಕು.

    ReplyDelete
  5. Beautiful..Song super agide jothe anhuvaada kuda..
    Nimmava,
    Raghu.

    ReplyDelete
  6. ವಾಹ್!!! ಸೂಪರ್ ಸರ್.... ನೀವು ಹೇಳಿದ ಹಾಗೆ ಹಾಡು ಹಾಡುತ್ತಲೇ ಇದ್ದೀನಿ... ಧನ್ಯವಾದಗಳು

    ReplyDelete
  7. ಚೆನ್ನಾಗಿದೆ ಸರ್ ಪ್ರಯತ್ನ...
    ಬೇಗ ಇದೆಲ್ಲಾ ಪುಸ್ತಕವಾಗಲಿ....

    ReplyDelete
  8. ಜಲನಯನ,
    ಹಿಂದಿ ಹಾಡುಗಳ ಅನುವಾದಕ್ಕಾಗಿ ಹಾಗು ವಿಡಿಯೋಗಳಿಗಾಗಿ ತುಂಬಾ, ತುಂಬಾ ಧನ್ಯವಾದಗಳು. It was nostalgic!

    ReplyDelete
  9. ಡಾ. ಟಿ.ಡಿ.ಕೆ. ಸರ್...ಪದ ಬಳಕೆಯಲ್ಲಿ ಸ್ವಲ್ಪ ವ್ಯತ್ಯಾಸ ಮಾಡ್ಕೋಬೇಕು..ಅಥವಾ ಹಾಡಿನ ಧಾಟಿಗೆ ಹೊಂದಿಸ್ಕೋಬೇಕು..ಒಂದೆರಡು ದಿನದಲ್ಲಿ ನಿಮಗೆ ನನ್ನ ಕೆಟ್ಟ ದನಿಯಲ್ಲೇ ಹಾಡಿ ಮೈಲ್ ಮಾಡುವೆ ಅದರಮೇಲೆ ನಿಮ್ಮ ಮಾರ್ಪಾಡುಗಳಿಗೆ ಸ್ವಾಗತ...ಧನ್ಯವಾದ ನಿಮ್ಮ ಪ್ರತಿಕ್ರಿಯೆ ಮತ್ತು ಪ್ರಾಮಾಣಿಕ ಅನಿಸಿಕೆಗೆ.

    ReplyDelete
  10. ಥ್ಯಾಂಕ್ಸ್ ರಾಘು...ನಮ್ಮ ಹುಡುಗ ಮತ್ತೆ ಕಾಣಿಸ್ಕೋತಾ ಇದ್ದಾನೆ ಅಂತ ಖುಷಿ ನನಗೆ ಒಂದೆಡೆ ಮತ್ತೆ ಕಾಮೆಂಟ್ ಹಾಕಿದ್ದಕ್ಕೆ ಧನ್ಯವಾದ.

    ReplyDelete
  11. ಸುಗುಣಾ-ಮಹೇಶ್ ಇಬ್ರೂ ಒಟ್ಟಿಗೆ ಹಾಕಿದ್ದೀರಿ ನಿಮ್ಮ ಪ್ರತಿಕ್ರಿಯೆ..ಧನ್ಯವಾದ..ಸುಗುಣ ನಿಮ್ಮ ಇಷ್ಟವಾದ ಹಾಡು ಬೇರೆ ಇದ್ರೆ ತಿಳ್ಸಿ..ಪ್ರಯತ್ನ ಮಾಡ್ತೇನೆ...ಯಾಕಂದ್ರೆ ಮಹೇಶ್ ಕೋರಿಕೆಗೆ ಇದು ಸಹಾಯಕ ಆಗುತ್ತೆ ಅಲ್ವಾ...
    ಧನ್ಯವಾದ ಮಿಯಾ-ಬೀವಿ ಇಬ್ರಿಗೂ

    ReplyDelete
  12. ಸುನಾಥಣ್ಣ ನಿಮ್ಮ ಪ್ರತಿಕ್ರಿಯೆ ಮತ್ತು ಪ್ರೋತ್ಸಾಹ ಎರಡಕ್ಕೂ ಧನ್ಯವಾದ... ಇದೇ ರೀತಿಯ ಸಂಕಲನ ಹೊರತರುವ ಇರಾದೆಯಿದೆ ನಿಮ್ಮ ಪ್ರೋತ್ಸಾಹ ಮತ್ತು ಆಶೀರ್ವಾದ ಇದ್ರೆ.

    ReplyDelete
  13. ಆಶಾ ಮೇಡಂ ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ...

    ReplyDelete
  14. super sir :-) ade dhaatiyalli haadalu yatnisidaru tondare illa ;-)

    ReplyDelete
  15. ನೀವು ಆದಷ್ಟು ಬೇಗ ಯಾವುದಾದರು ಚಿತ್ರಕ್ಕೆ ಹಾಡು ಬರೆಯಿರಿ.

    ReplyDelete
  16. ಧನ್ಯವಾದ ಸೀತಾರಾಂ ಸರ್

    ReplyDelete
  17. ಆಶು ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ...ಬಹುಶಃ ಪ್ರಥಮ ಭೇಟಿ ನಿಮ್ಮದು ಜಲನಯನಕ್ಕೆ...ಸ್ವಾಗತ..

    ReplyDelete
  18. ಸತೀಶ್...ನಿಮ್ಮ ಹಾರೈಕೆ ನಿಜ ಆಗುತ್ತೋ ಇಲ್ವೋ ನನಗೆ ಗೊತ್ತಿಲ್ಲ ನಿಮ್ಮ ಪ್ರೋತ್ಸಾಹ ಹೀಗೇ ಇರ್ಲಿ...

    ReplyDelete
  19. ಅಜಾದ್,
    ಈ ಹಾಡುಗಳ instrumental music ಅನ್ನು ನನ್ನ ಮೊಬೈಲಿನಲ್ಲಿ ನಿತ್ಯ ಕೇಳುತ್ತಿರುತ್ತೇನೆ. ನೀವು ಅದರ ಅನುವಾದವನ್ನು ಲಯಬದ್ಧವಾಗಿ ಮಾಡಿರುವುದು ಹಾಡಿಕೊಳ್ಳಲು ಸುಲಭವಾಗುವುದು..ನಿಮ್ಮ ಪ್ರಯತ್ನಕ್ಕೆ ಧನ್ಯವಾದಗಳು.

    ReplyDelete
  20. ಧನ್ಯವಾದ ಶಿವು, ಕೆಲ ಸಣ್ಣ ಪುಟ್ಟ ಮಾರ್ಪಾಡುಗಳು ಅನಿವಾರ್ಯ ಅನಿಸಿದರೆ ಲಯಕ್ಕೆ ಒಪ್ಪೋಹಾಗೆ ಮಾಡ್ಕೋಬಹುದು...ಅಭಿಪ್ರಾಯಗಳಿದ್ದರೆ ಸಲಹೆ ಮಾರ್ಮಾಡು ಇತ್ಯಾದಿ ಖಂಡಿತಾ ಯಾರಾದ್ರೂ ತಿಳಿಸಬಹುದು..

    ReplyDelete
  21. ಧನ್ಯವಾದ ರಘು ನನ್ನ ಜಲನಯನಕ್ಕೆ ಸ್ವಾಗತ.........

    ReplyDelete
  22. Really very nice songs & new lyrics...

    ReplyDelete
  23. ಪ್ರದೀಪ್ ಧನ್ಯವಾದ...ನಿಮ್ಮ ಪ್ರತಿಕ್ರಿಯೆಗೆ...

    ReplyDelete
  24. ನನ ಉಸುರಿನ ಸೆಳೆತದಲಿ, ನಿನ ಮಧುರ ಸುವಾಸನೆಯು,
    ನನ ಬಂಧಿಸು ತೋಳಿನಲಿ...............sir spell mistake :-P

    ReplyDelete
  25. ಆಶು..ಇದನ್ನ ಎರಡು ತರಹವೂ ಬರೆಯಬಹುದು ಅದೂ ಕವನಗಳಲ್ಲಿ ಸಾಮಾನ್ಯ.....ಧನ್ಯವಾದ ನಿಮ್ಮ ಕಾಳಜಿಗೆ ಮತ್ತು ಪ್ರತಿಕ್ರಿಯೆಗೆ

    ReplyDelete
  26. ಒಳ್ಳೆಯ ಪ್ರಯತ್ನ.
    ಧನ್ಯವಾದಗಳು.

    ReplyDelete
  27. ಧನ್ಯವಾದ ವಿಜಯಶ್ರೀ....

    ReplyDelete
  28. sir bhaavaanuvaada tumba chennagide,,,,heege munduvareyittirali,,keep writing

    ReplyDelete