Wednesday, February 1, 2012

ಸಹಾಯ ಮಾಡೋದು ಕೆಲವೊಮ್ಮೆ..???!! ಆದ್ರೂ ಪರ್ವಾಗಿಲ್ಲ.. ಲೇಖನದ ಮುಂದುವರೆದ ಭಾಗ........................(ಈ ಹಿಂದೆ)....

http://bhava-manthana.blogspot.com/



ಲೇಖನದ ಮುಂದುವರೆದ ಭಾಗ........................(ಈ ಹಿಂದೆ)......
ಮತ್ತೆ ಆತ ಪರ್ಸ್ ಚೆಕ್ ಮಾಡಿದ... “no no U only have taken….U gave me back the empty purse… return my tickets…” (ಇಲ್ಲ ಇಲ್ಲ ನೀನೇ ತೆಗೆದುಕೊಂಡಿದ್ದೀಯಾ!! ಕೊಡು ನನ್ನ ಟಿಕೆಟ್, ನನಗೆ ಖಾಲಿ ಪರ್ಸ್ ಕೊಟ್ಟಿದ್ದೀಯಾ).ನನಗೆ ಏನು ಹೇಳಬೇಕೋ ತೋಚದಾಯಿತು... ಅವನು, ಅವನ ಹೆಂಡತಿ ..ನಾನೇ ಟಿಕೆಟ್ ಕದ್ದಿದ್ದೀನಿ ಅನ್ನೋ ತರಹ ವರ್ತಿಸೋಕೆ ಪ್ರಾರಂಭಿಸಿ.. ನೀನು ಇಲ್ಲೇ ಕೂತ್ಕೋ ಅಂತ ಅಲ್ಲೇ ಕೂರುಸ್ಕೊಂಡ್ರು.. ಅವರ ಮಕ್ಕಳಿಬ್ಬರೂ ಅಮ್ಮನ ಹತ್ತಿರ ಪಿಸುಗುಡ್ತಾ ಇದ್ರು... “ಅಮ್ಮಾ ಪಾಪ ಅವರು ನಮ್ಮ ಪರ್ಸ್ ತಗೊಂಡ್ ಬಂದು ಕೊಟ್ಟಿದ್ದಾರೆ..ಅಂತಹುದರಲ್ಲಿ ಅವರು ಏಕೆ ಕದಿಯುತ್ತಾರೆ..?” ಎನ್ನುವಂತೆ ಹೇಳಿರಬೇಕು...ಅವರಮ್ಮ ’ನೀವು ಸುಮ್ಮನಿರಿ ಯಾರು ಎಂಥವರು ಹೇಳೋಕೆ ಆಗೊಲ್ಲ...’ ಎಂದವಳು ಗಂಡನ ಕಿವಿಯಲ್ಲಿ ಏನೋ ಕಿವಿಯಲ್ಲಿ ಪಿಸುಗುಟ್ಟಿದಳು...
............................................................................................

ಮುಂದುವರೆದ ಭಾಗ ...........

ಬಂಗಾಲಿ ಮಹಾಶಯ ನನ್ನ ಬಳಿ ಬಂದು ಕೂತ...” mister, If U want I will give you 50 rupess, please give my tickets back…” (ನಿನಗೆ ಬೇಕಾದ್ರೆ ಐವತ್ತು ರೂಪಾಯಿ ಕೊಡ್ತೇನೆ..ನನ್ನ ಟಿಕೆಟ್ ಕೊಟ್ಟುಬಿಡು) ನನಗೆ ಪಿತ್ತ ನೆತ್ತಿಗೇರಿತ್ತು.. “ what..? !! see, I gave you the purse, I didn’t open even, what was there, and what was not there, I don’t know…, do what ever U want.. one should not help any body these days” (ಏನು? ನೋಡ್ರಿ, ನಿಮ್ಮ ಪರ್ಸಲ್ಲಿ ಏನಿತ್ತೋ ಏನಿಲ್ವೋ ನಾನು ನೋಡಿಲ್ಲ ನಿಮಗೆ ತಂದು ಕೊಟ್ಟಿದ್ದೇನೆ, ನಿಮಗೆ ಬೇಕಾದ್ದು ಮಾಡಿಕೊಳ್ಳಿ... ಈ ಕಾಲದಲ್ಲಿ ಒಬ್ಬರಿಗೆ ಸಹಾಯ ಮಾಡೋದೂ ತಪ್ಪೇ..??!!) ಎಂದು ಹೊರಡಲು ಹೋದರೆ... ಆತ ಮತ್ತು ಆಕೆ ನನ್ನ ಕೈ ಹಿಡಿದು ಅಲ್ಲೇ ಕುಳ್ಳಿರಿಸಿದರು... ಆತ.. ಕೋಪ, ಬೆವರು.. ಉದ್ವಿಗ್ನತೆಯಿಂದ... “No, U cant go,,, let the TTE come, I report to the next station police…, yes..yes…”  ಎಂದವನೇ ನನ್ನ ಕೈ ಹಿಡಿದುಕೊಂಡ... ಅಷ್ಟರಲ್ಲಿ ಅಕ್ಕ ಪಕ್ಕದವರು...

“ಅಲ್ಲ ಸ್ವಾಮಿ ಅವರು ಪರ್ಸ್ ತಂದುಕೊಟ್ಟಿದ್ದಾರೆ ಅಂದರೆ ಅದ್ರಲ್ಲಿಂದ ಬರೀ ಟಿಕೆಟ್ ತಗೊಂಡು ಏನು ಮಾಡ್ತಾರೆ? ಅಲ್ಲದೇ ಅವರೂ ನಮ್ಮ ತರಹ ಕಲ್ಕತ್ತಾಗೆ ಬರ್ತಿರೋರು..., ಹಾಗೆ ಮಾಡ್ಬೇಕಾಗಿದ್ರೆ ನಿಮ್ಮ ಪರ್ಸ್ ಯಾಕೆ ವಾಪಸ್ ಕೊಡ್ತಿದ್ರು...??” ಎಂದರು ಹಿಂದಿಯಲ್ಲಿ.

ಅದಕ್ಕೆ ಆ ಬಂಗಾಲಿ ತನ್ನ ಅರ್ಧಂಬರ್ಧ ಹಿಂದಿಯಲ್ಲಿ “ ಇಲ್ಲ ಭೈ ಸಾಬ್ ಇವ್ರದ್ದೆಲ್ಲಾ ಒಂದು ರಾಕೆಟ್ ಇರುತ್ತೆ... ಟಿಕೆಟ್ ಎತ್ತಿ ತನ್ನ ಗುಂಪಿನವರಿಗೆ ಕೊಟ್ಟಿರ್ತಾನೆ... ಆಮೇಲೆ ಹಣ ಹಂಚ್ಕೋತಾರೆ ಕ್ಯಾನ್ಸಲ್ ಮಾಡ್ಸಿ...” ಅಂತೆಲ್ಲಾ ಅರ್ಥವಿಲ್ಲದೇ ಬಡಬಡಾಯಿಸುತ್ತ ಕುಳಿತ. ನಾನು ಕೇಳಿದೆ...”ಅಲ್ಲಾರೀ ನಿಮ್ಮ ಹಣ ಸರಿಯಿದೆ ತಾನೇ..?? ಮುಟ್ಟಿದ್ದೀನಾ..? ಟಿಕೆಟ್ ತಗೊಂಡು ನಾನೇನ್ಮಾಡ್ಲಿ??” ಎಂದೆ. ಕೋಪದಿಂದ..ಅವ.. “ಇದ್ರಲ್ಲಿ ಕೇವಲ ೧೦೦ ರೂಪಾಯಿ ಇದ್ದಿದ್ದು..ಅದು ಇದೆ... ಆದ್ರೆ ನಾಲ್ಕು ಟಿಕೆಟ್ ನೀನು ಬ್ಲಾಕಲ್ಲಿ ಮಾರಿದ್ರೆ ೨೫೦-೩೦೦ ಆದ್ರೂ ಸಿಗುತ್ತೆ...” ಎಂದ....
ಜಿಗುಪ್ಸೆ..ಎನಿಸಿತು..“ಸರಿ TTE ಬರ್ಲಿ...,  ಅಲ್ಲಾರೀ ನಿಮ್ಮ ರಿಸರ್ವೇಶನ್ ಟಿಕೆಟ್ ನಾನು ಹೇಗೆ ಮಾರೋಕಾಗುತ್ತೆ...?” ಎಂದೆ ಅಸಹನೆಯಿಂದ. 
ಅದಕ್ಕವನು.. "ನನ್ನದು ಲೋಕಲ್ ಸ್ಟೇಶನ್ ಟಿಕೆಟ್..(Quota) ಕೋಟಾದು.. ಅದನ್ನ ಮಾರೋದು ಸುಲಭ ನಿಮಗೆ.... ನನಗೆ ಗೊತ್ತಾಗೊಲ್ವಾ..?? ಎಂದ ಕೋಪದಿಂದ...
ಆ ವೇಳೆಗಾಗಲೇ ಸುಮಾರು ಒಂದು ಘಂಟೆ ಸಮಯ ಕಳೆದಿತ್ತು..., ನನ್ನ ಆರ್ ಎ.ಸಿ ಕನ್ನಡಿಗ ದೋಸ್ತಿಂದು ಆ ವೇಳೆಗೆ ಬರ್ತ್ ಕಂಫರ್ಮ್ ಆಗಿತ್ತು.. ನನ್ನ ಸೂಟ್ ಕೇಸ್ ಜೊತೆ ತನ್ನದನ್ನೂ ಎತ್ತಿಕೊಂಡು ಬಂದವರೇ..
"ಏನ್ಸಾರ್ ನೀವು ಇಲ್ಲಿ ಆರಾಮಗಿ ಕೂತಿದ್ದೀರಿ... ಇಲ್ಲೇನಾ ಸೀಟು ನಿಮ್ಮದು..?" ಎನ್ನುತ್ತಾ.. ನನ್ನ ಬಳಿ ಜಾಗ ಮಾಡಿಕೊಂಡು ಕುಳಿತುಕೊಳ್ಳುವ ವೇಳೆಗೆ ಪರಿಸ್ಥಿತಿ ಟೆನ್ಸ್ ಅನ್ನಿಸಿರಬೇಕು..
“ಏನ್ಸಾರ್..? ಏನಾಯ್ತು...??” ಎಂದರು... ನಾನು ಎಲ್ಲಾ ವಿವರಿಸಿದೆ.... ಅವರ ಪಿತ್ತ ನೆತ್ತಿಗೇರಿತು..
Oh!! mister… leave his hand…,  he gave you the purse…that is his mistake!!… but now I am telling you l… he did not give you the purse…  infact he doesn’t know who you are…, got it..!!” ಎಂದವರೇ ನನ್ನ ಕೈ ಬಿಡಿಸಿಕೊಂಡು 
"ಬನ್ನಿ ಸರ್ ನೀವು ಏನ್ಮಾಡ್ತಾನೋ ಮಾಡ್ಕೊಳ್ಳಲಿ.." ಎನ್ನುತ್ತ ನನ್ನ ಎಬ್ಬಿಸಿದರು. ನೋಡಲು ಕಟ್ಟುಮಸ್ತಾಗಿದ್ದರು ನನ್ನ ಮಿತ್ರ.. ಅವರ ಜೋರಿಗೆ ಬಂಗಾಲಿ ಥಂಡಾ..!!! ನಾವಿಬ್ಬರೂ ಹೋಗುವಾಗ  ಬಂಗಾಲಿ ಅವನ ಹೆಂಡತಿ ಬೈಯ್ಯೋಕೆ ಶುರು ಹಚ್ಕೊಂಡಿದ್ರು...  ಟ್ರೈನ್ ಮಿತ್ರನಿಗೂ ನನ್ನ ಕೂಪೆಯಲ್ಲಿಯೇ ಬರ್ತ್ ಸಿಕ್ಕುತ್ತು. ಅಲ್ಲಿಂದ ಎರಡನೇ ಕೂಪೆ ನಮ್ಮದಾಗಿದ್ದರಿಂದ ಅವರ ಬೈಗುಳ ಕೇಳಿಸುತ್ತಿತ್ತು.
“ಬಿಡಿ ಸರ್ ನೀವು ತಲೆ ಕೆಡಿಸ್ಕೋಬೇಡಿ..ಎಲ್ಲೋ ಮಿಸ್ ಪ್ಲೇಸ್ ಮಾಡಿರ್ತಾನೆ...ಬಡ್ಡಿ ಮಗ.. ಈಗ ನೀವು ಸಿಕ್ರಿ ತಪ್ಪು ಹೊರಸ್ತಾ ಇದ್ದಾನೆ... ಏನಿದೆ ಪ್ರೂಫು ನೀವು ಪರ್ಸು ಕೊಟ್ರಿ ಅವನಿಗೆ ಅಂತ...ಹೇಳ್ಲಿ...” ಅಲ್ಲಿದ್ದ ಸುಮಾರು ಸಹ ಪ್ರಯಾಣಿಕರೂ ನಮ್ಮ ಬೆಂಬಲಕ್ಕೆ ನಿಂತರು...  "ಹೌದು ಸರ್ ಬಿಡಿ, ನೀವೇ ಕೊಟ್ರಿ ಅಂತ ಯಾರೂ ಹೇಳೊಲ್ಲ..ಅವ್ರೇ ಹೇಳ್ಕೊಳ್ಲಲಿ.." ಎಂದರು.. ಆಗ್ಲೇ ಗೊತ್ತಾಗಿದ್ದು ಸುಮಾರು ಐದಾರು ಕನ್ನಡಿಗರು ಕಲ್ಕತ್ತಾಗೆ ಹೊರಟಿದ್ದ ಸಹಪ್ರಯಾಣಿಕರು ಅಂತ. ನನಗೆ ಧೈರ್ಯ ಬಂದಿತ್ತು. ....
ನಾವೂ ಮರೆತಂತೆ..ಇದ್ವಿ.. ಮಾತು ಕತೆಗೆ ಶುರುಮಾಡ್ಕೊಂಡು ಉಭಯ ಪರಿಚಯಕ್ಕೆ ಪ್ರಾರಂಭಿಸಿದೆವು. ಒಂದರ್ಧ ಘಂಟೆ ಅಲ್ಲಿಂದ ಬಡಬಡಿಕೆ ಕೇಳಿ ಬರ್ತಿತ್ತು... ನಂತರ ಶಾಂತವಾಯ್ತು...
“ಸುಸ್ತಾಯ್ತು ಅಂತ ಕಾಣುತ್ತೆ ಬಯ್ಕೊಂಡು... ಬಿಡಿ... ಸರ್” ಎಂದರು ನನ್ನ ಸ್ನೇಹಿತ..ನನ್ನ ಗಮನ ಇನ್ನೂ ಆ ಕಡೆಯಿಂದ ಹೊರಬಂದಿಲ್ಲವೆಂದು ತಿಳಿದು.
೧೦-೧೫ ನಿಮಿಷದ ನಂತರ TTE ಬಂದರು. ನಮ್ಮ ಟಿಕೆಟ್ ನೋಡಿ ಬರ್ತ್ ಕಂಫರ್ಮ್ ಸ್ಲಿಪ್ ಗೆ ಸೈನ್ ಹಾಕಿದ್ರು. ನನಗೆ ಕುತೂಹಲ...  ’ಸರ್.. ಅಲ್ಲಿ ಎರಡು ಮೂರು ಕೂಪೆ ಆಚೆ ಬಂಗಾಲಿ ಫ್ಯಾಮಿಲಿ ಇದೆಯಲ್ಲಾ.. ಅವರದ್ದು ಟಿಕೆಟ್ ಕಳೆದು ಹೋಗಿದೆ ಅಂತಿದ್ರು... !!??’ ಎಂದು ಇಂಗ್ಲೀಷಲ್ಲಿ ನಾನು ಕೇಳುವಾಗ ನನ್ನ ಆ ಮಿತ್ರ ಮೆತ್ತಗೆ 
“ಬಿಡಿ ಸರ್ ನೀವು, ಅವರ ಪಾಡು ಅವ್ರದ್ದು.. ಸೌಜನ್ಯ ಇಲ್ಲದವರ ಬಗ್ಗೆ ನಮಗ್ಯಾಕೆ ಕಾಳಜಿ?” ಎಂದರು.
“ಅಯ್ಯೋ ಅವರಾ... ?? “ ಎಂದರು TTE… “ಅರೆ.. ನೀವು ಕನ್ನಡದವರಾ?”
ನನಗೆ ಆಶ್ಚರ್ಯ ಮತ್ತು ಸಂತೋಷ ಎರಡೂ....ಸದ್ಯ ನನಗೆ ಗಂಡಾಂತರ ಬರೊಲ್ಲ ...ಅಂತ ಸಮಾಧಾನ ..!! ನನ್ನ ಸ್ನೇಹಿತನ ಮುಖ ನೋಡಿದ..ಅವರೂ ಮುಗುಳ್ನಕ್ಕರು...
TTE ಹೇಳಿದರು “ಹೌದು ಸರ್ ನಾನು ಮೈಸೂರಿನವನು..ನೀವು ಕಲ್ಕತ್ತಾಗಾ...?? ಹಾಂ..ಅದಹಾಗೆ..ಅವರ ಬಗ್ಗೆ ಕೇಳಿದ್ರಲ್ಲಾ...ಅವರೊಂದು ಗಡಿಬಿಡಿ ಮನುಷ್ಯ..... ಇಲ್ಲೇ ವಿಜಯವಾಡದ ಹತ್ತಿರದ ಲೋಕಲ್ ಸ್ಟೇಶನ್ ಬುಕ್ಕಿಂಗ್ ಅವ್ರದ್ದು... ಕೊರಮಂಡಲ್ ಅಲ್ಲಿ ಸ್ಟಾಪಿಲ್ಲ...ಅದಕ್ಕೆ ಕೋಟಾ ಮೇಲೆ ಟಿಕೆಟ್ ಅಲ್ಲೇ ಮಾಡ್ಸಿ ವಿಜವಾಡದಲ್ಲಿ ಬೋರ್ಡ್ ಮಾಡಿದ್ದಾರೆ... ಅವರ ಜೊತೆ ಬಂದಿದ್ದ ಸ್ನೇಹಿತರಿಗೆ ಪ್ಲಾಟ್ ಫಾರ್ಮ್ ಟಿಕೆಟ್ ಕೊಡೋ ಬದ್ಲು...ಇವರ ಟಿಕೆಟ್ ಕೊಟ್ಟಿದ್ದಾರೆ... ಆಮೇಲೆ.. ಗೇಟ್ ಕೀಪರ್ ನನ್ನ ಕರೆದು ಅವರ ಟಿಕೆಟ್ ಕೊಟ್ಟ...ಕೇಳಿದ್ದಕ್ಕೆ... ಮಂಕಾಗಿ ಕೂತ..ನಾನೇ ವಿಷಯ ತಿಳ್ಸಿ ಚಕ್ ಮಾಡಿ ಬಂದೆ...” ಎಂದರು... ನನಗೆ ತಲೆಮೇಲಿನ ಭಾರ ಇಳಿದಷ್ಟೇ ನಿರಾಳ ಆಯ್ತು.. ಅಷ್ಟರಲ್ಲಿ ಅಲ್ಲಿಗೆ ಬಂದ ಬಂಗಾಲಿ ಮಹಾಶಯ ಬಂದವನೇ ನನ್ನ ಕೈ ಹಿಡಿದು... ಭೈ ಸಾಬ್... “I am very very sorry… the mistake was mine… I troubled U…” (ನನ್ನ ಕ್ಷಮಿಸಿ..ತಪ್ಪು ನನ್ನದೇ..ನಿಮಗೆ ತೊಂದರೆ ಕೊಟ್ಟೆ) ಎನ್ನುತ್ತಾ ಸಾರಿ ಸಾರಿ ಅಂತ ಸಾರಿ ಸಾರಿ ಹೇಳುವಾಗ ನನಗೆ ಮುಜುಗರ ಅನ್ನಿಸ್ತು...  “Its Ok…its OK “ ಎಂದೆ.
ಆನಂತರ ಸರದಿಯ ಮೇಲೆ ಬಂಗಾಲಿಯ ಹೆಂಡತಿ, ಮಕ್ಕಳು ಬಂದು ಕ್ಷಮೆ ಕೇಳಿದ್ದು... ವಿಶಾಖಪಟ್ನಂ ನಲ್ಲಿ ’ರೊಸೊಗೊಲಾ’ ತಂದುಕೊಟ್ಟಿದ್ದು ಅಗ್ಗಾಗೆ ಚಹಾ ಕಳುಹಿಸಿದ್ದು ಬೇರೆ ವಿಷಯ...!!!

29 comments:

  1. ಅಂತೂ ಸಮಾಧಾನವಾಯ್ತು .. ತುಂಬಾ ಚೆನ್ನಾಗಿ ನಿರೂಪಿಸಿದ್ದೀರಿ ಸರ್ :))

    ReplyDelete
  2. ಧನ್ಯವಾದ ಈಶ್ವರ್ ಸರ್...

    ReplyDelete
  3. ಆಜಾದ್ ಸರ್,

    ಒಟ್ಟಾರೆ ಸುಖಾಂತ್ಯವಾಯ್ತಲ್ಲ...ಅದೇ ಸಮಾಧಾನ....ಚೆನ್ನಾಗಿತ್ತು ಸರ್ ...

    ReplyDelete
  4. ಪರ್ವಾಗಿಲ್ಲ ಸ್ವಾಮೀ ನೀವು, ಬಂದ ಗಂಡಾಂತರದಿಂದ ತಪ್ಪಿಸಿಕೊಂಡಿದ್ದೂ ಅಲ್ಲದೆ ಅವರಿಂದಲೇ ಸೇವೆ ಬೇರೆ ಮಾಡಿಸ್ಕೊಂಡ್ರಿ!

    ಹ್ಹ ಹ್ಹ ಹ್ಹಾ............

    ಬೆಂಗಾಲಿಯಾತ ಮಾಡಿದ ತಪ್ಪಿಗೆ ದಂಡ ಅಂತ ಸಧ್ಯ ಅವನ ಮಗಳನ್ನು ಕೊಡುವ ಮಾತು ಆಡಲಿಲ್ವಲ್ಲಾ, ಅದೇ ಸಮಾಧಾನ!!!!

    ReplyDelete
  5. ಜಲನಯನ,
    ಅಂತೂ ‘ಗೌಡಬಂಗಾಲಿ’ಯಿಂದ ಸುಖರೂಪವಾಗಿ ಹೊರಬಂದ್ರಲ್ಲ,ಸಾಕು!

    ReplyDelete
  6. ಅಶೋಕ್... ನನಗೆ ಅಂದು ಸಾಥ್ ನೀಡಿದ್ದು ಆ ನನ್ನ ಸ್ನೇಹಿತ.. ಕನ್ನಡಿಗ.. ಅವರು ವಿಳಾಸ ಕೊಟ್ಟಿದ್ರು..ಪ್ರಯತ್ನಿಸಿದ್ದೆ ಒಮ್ಮೆ ಆದರೆ ಸಿಗಲಿಲ್ಲ...

    ReplyDelete
  7. ಪ್ರವೀಣಾ ..ಬಹುಶಃ ಇವನಿಗೆ ರಸಗೋಲಾ ಕೊಟ್ಟೇ ಕೈ ತೊಳ್ಕೊಳ್ಳುವಾ ಅನಿಸಿತ್ತೋ ಏನೋ...ಹಹಹ ಧನ್ಯವಾದ

    ReplyDelete
  8. ಸುನಾಥಣ್ಣ... ಅಂತೂ ಹೊರಬಂದೆ ಇನ್ ಒನ್ ಪೀಸ್... ಪುಣ್ಯಕ್ಕೆ ತುಂಬಾ ಕನ್ನಡಿಗರು ಇದ್ರು ಅಲ್ಲಿ. ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ

    ReplyDelete
  9. ಆಜಾದೂ...

    ಎಂಥಹ ಅನುಭವ ಮಾರಾಯಾ.. !
    ಅಪರಿಚಿತ ಜಾಗದಲ್ಲಿ ಇಂಥಹ ಸಂದರ್ಭದಲ್ಲಿ "ಅಸಹಾಯಕತೆ" ಅಂದರೆ ಏನೂ ಅಂತ ಅರ್ಥವಾಗುತ್ತದೆ..

    ಆಗ ಕನ್ನಡದವರು ನಿನಗೆ ಸಿಕ್ಕಿದ್ದು ಸ್ವರ್ಗ ಸಿಕ್ಕಿದಷ್ಟು ಖುಷಿಯಾಗಿರ ಬಹುದಲ್ಲ.

    ಸಹಾಯ ಮಾಡುವಾಗ ಸ್ವಲ್ಪ ಯೋಚಿಸ ಬೇಕಾದ ಕಾಲ ಇದು...

    ಅನುಭವ ಹಂಚಿಕೊಂಡಿದ್ದಕ್ಕೆ ಥ್ಯಾಂಕ್ಸು...

    ReplyDelete
  10. ಅಜಾದ್ ಸರ್;ನಿಮ್ಮ ಅನುಭವ ಸಖತ್ ಆಗಿದೆ!ಸಹಾಯ ಮಾಡೋಕೆ ಹೋಗಿ ಎಂತಹ ಫಜೀತಿ ಅಲ್ವಾ?

    ReplyDelete
  11. ಪ್ರಕಾಶೂ.. ಧನ್ಯವಾದ..ಹೌದು ಕನ್ನಡದವರು ಅಲ್ಲಿದ್ದದ್ದು ನನಗೆ ಆನೆಬಲ ತಂದುಕೊಟ್ಟಿದ್ದು ನಿಜ... ಆದರೆ ನನ್ನ ಎರಡೂ ಪ್ರಸಂಗಗಳಲ್ಲೂ (ಈ ಹಿಂದೆ ಆದ ಎಮಿರೇಟ್ಸ್ ಏರ್ ಪ್ರಸಂಗ) ಒಂದು ಆಸರೆ ಸಹಾಯ ಸಿಕ್ಕಿದ್ದಂತೂ ನಿಜ,,, ಇದು ನನಗೆ ಧನಾತ್ಮಕ ಅನಿಸುತ್ತೆ,, ಅದೇ ಕಾರಣಕ್ಕೆ ಯಾರಿಗಾದರೂ ಸಹಾಯಮಾಡಬೇಕಾದಾಗ ಏನೋ ಒಂದು ಭಂಡ ಧೈರ್ಯ.... ಆದರೂ ನಮ್ಮ ಎಚ್ಚರದಲ್ಲಿ ನಾವಿರುವುದು ಉತ್ತಮ ಅಲ್ಲವಾ...??

    ReplyDelete
  12. ಡಾ. ಟಿ.ಡಿ.ಕೆ. ಸರ್... ಅನುಭವ ಪಾಠ ಕಲಿಸುತ್ತದೆ ಎನ್ನೋದಂತೂ ನಿಜ... ಫಜೀತಿ ಹೌದು.. ಇದು ಆಗಿದೆ ಪ್ರತಿಸಲ .... ಹಹಹ ಧನ್ಯವಾದ.

    ReplyDelete
  13. ಹಾದಿಯಲ್ಲಿ ಹೋಗೋ ಮಾರಿನಾ ಮೈ ಮೇಲೆ ಎಳಕೊಂಡ್ರು ಎಂಬ ಗಾದೆಯೊಂದಿದೆ ಸರ್.. ಅದು ನೆನಪಾಯಿತು
    ಕೆಲವೊಮ್ಮೆ ನಮ್ಮ ಒಳ್ಳೆಯತನಕ್ಕೆ ಸಹಾಯ ಮಾಡಲು ಹೋಗಿ ಫಚಿತಿ ಅನುಭವಿಸಬೇಕಾಗುತ್ತದೆ..
    ಆದರೆ ಕತೆ ಸುಖಾಂತ್ಯವಾದದ್ದು ಖುಷಿ ನೀಡಿತು.. ಚೆಂದದ ಲೇಖನ...:)

    ReplyDelete
  14. ಸಂಧ್ಯಾ ಧನ್ಯವಾದ ನಿಮ್ಮ ಪ್ರತಿಕಿಯೆಗೆ..ಮೊದಲಿಗೆ ಸ್ವಾಗತ ಜಲನಯನಕ್ಕೆ...

    ReplyDelete
  15. ಹ್ಹ..ಹ್ಹಾ... ಅ೦ತೂ ಒಳ್ಳೆ ಸುಖಾ೦ತವೇ ಆಯ್ತು...:))

    ReplyDelete
  16. ನಿಮ್ಮ ನಿರೂಪಣಾ ಶೈಲಿ ಬೊಂಬಾಟ್ ಸರ್....
    ಅಂತೂ ಕೊನೆಗೆ ಪಾರಾಗಿ ಬಿಟ್ಟಿರಲ್ಲ ಅದೇ ಸಂತೋಷ....
    :)

    ReplyDelete
  17. ವಿಜಯಶ್ರೀ ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ...

    ReplyDelete
  18. ಧನ್ಯವಾದ ಸುಶ್ಮಾ.. ಪಾರಾಗಿ ಬಂದದ್ದು ಹೌದು ನಮ್ಮವರ ಸಹಾಯ ಮರೆಯೊಲ್ಲ...

    ReplyDelete
  19. ಕಥೆ ಸುಖಾಂತ್ಯದ ಜೊತೆಗೆ ಟೀ,ಕಾಫಿ, ರಸಗುಲ್ಲಾ ಕೊಡ ಸಿಕ್ಕಿತಲ್ಲಾ ಬಿಡಿ... ಸುಮ್ಮನೆ ಇದಿದ್ದರೆ ಸ್ವೀಟ್ ಕೊಡ್ತಾ ಇದ್ದರಾ.. ಈ ರಂಪಾಟದಿಂದ ನಿಮ್ಗೆ ಸ್ವೀಟ್ ಸಿಕ್ಕಿದೆ ಹಹಹಹ....

    ReplyDelete
  20. ಅಂತೂ ಬಂದ್ರಾ ಈ ಕಡೆಗೆ... ಹಹಹ ಧನ್ಯವಾದ ನಿಮ್ಮ ಕಾಮೆಂಟಿಗೆ... ರೊಸೊಗೊಲಾ ..ಸಿಕ್ಕಿದ್ದು ಹೌದು..

    ReplyDelete
  21. ಅಬ್ಬಾ !! ಕೆಲವೊಮ್ಮೆ ಎಂಥ ಪೇಚಾಟಕ್ಕೆ ಸಿಕ್ಕಿ ಬಿಡ್ತೀವಲ್ಲಾ ಬಯ್ಯ.. ಸಧ್ಯ ಕಥೆ ಸುಖಾಂತ್ಯವಾಯ್ತಲ್ಲ..:)

    ReplyDelete
  22. ಯಪ್ಪಾ... ಈಗಿನ ಕಾಲದಲ್ಲಿ ಸಹಾಯ ಮಾಡಿ ಕಷ್ಟದಲ್ಲಿ ಸಿಲುಕೋದು ಸಾಕು... ನಿಮ್ಮ ಅನುಭವ ಓದುತ್ತ ಹೋದಂತೆ ನಿಮ್ಮ ರೈಲಿನ ಭೋಗಿಯಲ್ಲಿ ನಾನು ಇದ್ದು ಘಟನೆಯನ್ನು ನೋಡುತ್ತಿದ್ದಂತೆ ಭಾಸವಾಯ್ತು... ಮುಂದೇನಾಯ್ತಪ್ಪ ಅಂತ ತೀರಾ ಕುತೂಹಲದಲ್ಲಿ ಓದಿದೆ.... ಅಂತೂ ಕೊನೆಯಲ್ಲಿ 'ರಸಗುಲ್ಲ' ಸಿಕ್ಕಿತಲ್ಲ... ಎಲ್ಲಿ 'ರಸ' ಸೋರಿಸಿ 'ನೀರಸ' ಮಾಡುತ್ತಾರೋ ನಿಮ್ಮನ್ನ ಅನ್ಕೊಂಡಿದ್ದೆ...!! ಇಲ್ಲಾ ಅಂದ್ರೆ police station ನಲ್ಲಿ ನಿಮ್ಮ ಹೆಸರು 'ಗುಲ್ಲಾ'ಗುತ್ತಿತ್ತು...! :P

    ReplyDelete
  23. ಸಹಾಯ ಮಾಡಿ ಪೇಚಾಡೋದು ಯಾಕೋ ಈ ಮಧ್ಯೆ ಕಾಮನ್ ಆಗ್ತಿದೆ ನನಗೆ ಹಹಹಹ ...ಥ್ಯಾಂಕ್ಸ್ ತಂಗ್ಯಮ್ಮ.

    ReplyDelete
  24. ಕಾವ್ಯಾ...ಹಹಹ ಬಹಳ ಚಂದದ ಕಾಮೆಂಟ್...ರಸ ಸಿಗ್ದೇ ಇದ್ದಿದ್ರೆ ಪೋಲೀಸ್ ಸ್ಟೇಶನ್ನಲ್ಲಿ ’ಗುಲ್ಲಾ’ಗ್ತಿರ್ಲಿಲ್ಲ.... ಯಾಕಂದ್ರೆ ಟಿ.ಟಿ.ಇ. ನಮ್ಮ ಕನಡಿಗರೇ ಇದ್ದಿದ್ದು...ಜೊತೆಗೆ ಸ್ನೇಹಿತ್ರು ಇದ್ರಲ್ಲಾ..?? ಧನ್ಯವಾದ.

    ReplyDelete
  25. ayyo... Azad sir naanu haakidda comment elli hoyitu??

    ReplyDelete
  26. ಅಯ್ಯೋ ಪ್ರದೀಪ್ ನನಗೆ ಗೊತ್ತಿಲ್ಲಪ್ಪಾ,,, ಈಗ ಇದನ್ನು ನೋಡಿದ್ದೀನಿ...ಧನ್ಯವಾದ

    ReplyDelete
  27. This comment has been removed by the author.

    ReplyDelete
  28. ಇಂತಹ ಅಭಾಸ ಸೃಷ್ಟಿಸುವ ಆತುರಾತುರ ಜನ್ಮಗಳು ನಿಮಗೆ ತಂದಿಟ್ಟ ಪಜೀತಿಯು ಮನೋ ವೇದಕವಾಗಿತ್ತು ಅಜಾದಣ್ಣ.

    ಅಂತೂ ಸುಖಾಂತವಾಯ್ತಲ್ಲ ಅದೇ ನಮಗೆ ನೆಮ್ಮದಿ.

    ReplyDelete
  29. ಧನ್ಯವಾದ ಬದರಿ ಸರ್... ಟೆನ್ಶನ್ ಕೆಲ ನಿಮಿಷಗಳ ಅವಧಿಯಾಗಿತ್ತು.. ಮನೋಧರ್ಮ ಒಳಿತು ಮಾಡೋದಾಗಿತ್ತು ಹಾಗಾಗಿ ಸುಖಾಂತ ಅಂದ್ಕೋಬೇಕು...

    ReplyDelete